POLICE BHAVAN KALABURAGI

POLICE BHAVAN KALABURAGI

19 June 2013

GULBARGA DISTRICT REPORTED CRIMES

ಎರಡನೆ ಮದುವೆ ಮಾಡಿಕೊಂಡ ಬಗ್ಗೆ:
ಕಮಲಾಪೂರ ಪೊಲೀಸ್ ಠಾಣೆ:ದಿನಾಂಕ:18/06/2013 ರಂದು ಸಾಯಂಕಾಲ 6-00 ಗಂಟೆಗೆ ನಮ್ಮ ಠಾಣೆಯ ಕೋರ್ಟ ಸಿಬ್ಬಂದಿಯಾದ ಶ್ರೀ ಮಾಣಿಕ ಪಿಸಿ ರವರು ಮಾನ್ಯ 1ನೇ ಅಪರ ಜೆ.ಎಂ.ಎಫ್.ಸಿ ನ್ಯಾಯಾಲಯ ಆದೇಶ ಸಂ.2469 ದಿನಾಂಕ: 14/06/2013 ನೇದ್ದರ ಅರ್ಜಿದಾರಳಾದ ಶ್ರೀಮತಿ ಉಷಾದೇವಿ ಗಂಡ ಸಂಗಣ್ಣಾ ಕಲ್ಲೂರ ವಯ:55ವರ್ಷ ಉಃಮನೆಕೆಲಸ ಸಾಃಹೊಳಕುಂದಾ ತಾಃಗುಲಬರ್ಗಾ ಇವರು 1975 ರಲ್ಲಿ ಸಂಗಣ್ಣಾ ತಂದೆ ಬಸವಣ್ಣಪ್ಪಾ ಕಲ್ಲೂರ ವಯ:60 ವರ್ಷ ಉಃನಿವೃತ್ತ ಫಾರೆಸ್ಟ ಅಧಿಕಾರಿಯೊಂದಿಗೆ ಮದುವೆಯಾಗಿದ್ದು. ನಮಗೆ ಮಹಾನಂದ ಎಂಬ ಮಗಳು ಜನಿಸಿದ್ದು ಅವಳು 3 ವರ್ಷದ ನಂತರ ಅನಾರೋಗ್ಯದಿಂದ ಮೃತಪಟ್ಟಿದ್ದು. ಮದುವೆಯಾದ 4-5 ವರ್ಷಗಳ ನಂತರ ಕರ್ನಾಟಕ ಅರಣ್ಯ ಇಲಾಖೆಯಲ್ಲಿ ತಾತ್ಕಾಲಿಕವಾಗಿ ನೌಕರಿಗೆ ಸೇರಿ, ಅವರಾದ ತಾಲ್ಲೂಕಿನ ಸಂಗಮ ಫಾರೆಸ್ಟಗೆ ವರ್ಗಾವಣೆಯಾಗಿ ನಂತರ ಹುಮನಾಬಾದಕ್ಕೆ  ವರ್ಗಾವಣೆಯಾಯಿತು. ಆವಾಗಿನಿಂದ ದಿನಾಲು ಕುಡಿಯುವುದು ತಿನ್ನುವುದು ಮಜಾ ಮಾಡಿ  ಹೊಡೆಬಡೆ ಮಾಡುತ್ತಿದ್ದನು. ನಾನು ಬೇಸತ್ತು ನಾನು ನನ್ನ ತವರು ಮನೆಯಲ್ಲಿ ಬಂದು ಉಳಿದೇನು. ನಂತರ ನನಗೆ ಗೊತ್ತಾಗದಂತೆ 2000ನೇ ಸಾಲಿನಲ್ಲಿ ಕಮಲಾಪೂರ ಗ್ರಾಮದ ರಾಮತೀರ್ಥ ಗುಡಿಯಲ್ಲಿ ರೇಣುಕಾ @ ಆಶಾದೇವಿ ತಾಯಿ ನಾಗಮ್ಮಾ ಸಾಃಹೊಳಕುಂದಾ ಹಾಃವಃ ಹುಮನಾಬಾದ  (ಗಂಡ ಸಂಗಣ್ಣಾ ಕಲ್ಲೂರ ) ಇವಳೊಂದಿಗೆ 2ನೇ ಮದುವೆ ಮಾಡಿಕೊಂಡು ಮತದಾನ ಪತ್ರದಲ್ಲಿ ಹೆಸರು ಸೇರಿದ್ದು ಅಲ್ಲದೇ ತನ್ನ ಸೇವಾ ಪುಸ್ತಕದಲ್ಲಿ ನನ್ನ ಹೆಸರು ತೆಗೆದು ಹಾಕಿ 2ನೇ ಹೆಂಡತಿಯಾದ ರೇಣುಕಾ @ಆಶಾದೇವಿ ಇವಳ ಹೆಸರು ನಮೂದಿಸಿದ್ದಾರೆ.ನನ್ನ ಗಂಡ ಸಂಗಣ್ಣಾ ಈತನು 2ನೇ ಮದುವೆ ಮಾಡಿಕೊಂಡು ತನ್ನ ಸೇವಾ ಪುಸ್ತಕ ದಲ್ಲಿ 2ನೇ ಹೆಂಡತಿ ಹೆಸರು ನಮೂದಿಸಿ ನನಗೆ  ಮೋಸ ಮಾಡಿದ್ದರಿಂದ ಅವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ನ್ಯಾಯಾಲಯದ ಆದೇಶ ಪ್ರಕಾರ ದೂರು ವಸೂಲಾಗಿದ್ದರಿಂದ ಠಾಣೆ ಗುನ್ನೆ ನಂ:58/2013 ಕಲಂ. 494, 420, 465, 468, 419 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಮಳಖೇಡ ಪೊಲೀಸ್ ಠಾಣೆ:ದಿನಾಂಕ:18-06-2013 ರಂದು ಸಂಬಂಧಿಯೊಬ್ಬರು ಹುಡಾ (ಬಿ) ಗ್ರಾಮದಲ್ಲಿ ಮೃತಪಟ್ಟಿದ್ದರಿಂದ ಮೃತನ ಅಂತಿಮ ಕಾರ್ಯಕ್ಕೆ ಹೋದಾಗ ಸೂರ್ಯಕಾಂತ ಸಿಬರ್ ಈತನು ವಿನಾಃಕಾರಣ ಜಗಳ ತೆಗೆದಿದ್ದನು. ರಾತ್ರಿ 9-00 ಗಂಟೆಗೆ ಮಳಖೇಡಕ್ಕೆ ಬಂದು ಮನೆಯ ಮುಂದೆ ನಿಂತಾಗ ಸೂರ್ಯಕಾಂತ ಮತ್ತು ಅವನ ಸಂಗಡ ಅಣ್ಣ ತಮ್ಮಂದಿರು ಕೂಡಿಕೊಂಡು ಹೊಡೆ ಬಡೆ ಮಾಡಿರುತ್ತಾರೆ ಅಂತಾ ಶ್ರೀ ರವಿಚಂದ್ರ ತಂದೆ ಶರಣಪ್ಪ ಸಿಬರ್ ವಯಾ|| 21 ವರ್ಷ ಜಾ|| ಕಬ್ಬಲಿಗ ಉ||  ಆರ್.ಸಿ.ಎಫ್ ಕಂಪನಿಯಲ್ಲಿ ಕೆಲಸ ಸಾ|| ಮಳಖೇಡ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:59/2013 ಕಲಂ 323. 324. 504 ಸಂ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಮಳಖೇಡ ಪೊಲೀಸ್ ಠಾಣೆ:ದಿನಾಂಕ:18-06-2013 ರಂದು ಸಂಬಂಧಿಯೊಬ್ಬರು ಹುಡಾ (ಬಿ) ಗ್ರಾಮದಲ್ಲಿ ಮೃತಪಟ್ಟಿದ್ದರಿಂದ ಮೃತನ ಅಂತಿಮ ಕಾರ್ಯಕ್ಕೆ ನಾವು ಮತ್ತು ರವಿಚಂದ್ರ ತಂದೆ ಶರಣಪ್ಪ ಸಿಬರ್  2) ಸಾಬಣ್ಣ 3ನಾಗಪ್ಪ ಸಾ|| ಎಲ್ಲರು ಮಳಖೇಡ ರವರು ಜಗಳ ತೆಗೆದಿದ್ದು ಮರಳಿ ಮಳಖೇಡಕ್ಕೆ ಬಂದಾಗ ನಿಮ್ಮ ತಮ್ಮ ನಮ್ಮ ಜೋತೆ ಜಗಳ ತೆಗೆದಿದ್ದಾನೆ ನಿಮ್ಮ ಸೊಕ್ಕು ಬಹಳ ಬಂದಿದೆ ಅಂತ ಅವಾಚ್ಯವಾಗಿ ಬೈದು ಹೋಡೆ ಬಡೆ ಮಾಡಿರುತ್ತಾರೆ ಅಂತಾ ಲಕ್ಷ್ಮಿಕಾಂತ ತಂದೆ ಚಂದ್ರಪ್ಪ ಸಿಬಾನೋ ವಯಾ||23 ವರ್ಷ ಜಾ|| ಕಬ್ಬಲಿಗ ಉ|| ಆರ್.ಸಿ.ಎಫ್ ಕೇಲಸ ಸಾ|| ಮಳಖೇಡ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:60/2013 ಕಲಂ 341. 323. 504 ಸಂ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.