POLICE BHAVAN KALABURAGI

POLICE BHAVAN KALABURAGI

29 June 2018

KALABURAGI DISTRICT REPORTED CRIMES

ದರೋಡೆಗೆ ಹೊಂಚು ಹಾಕಿ ಕುಳಿತವರ ಬಂಧನ
ರಾಘವೇಂದ್ರ ನಗರ ಠಾಣೆ : ದಿನಾಂಕ 28.06.2018 ರಂದು 00:30 ಗಂಟೆಯಿಂದ ನಾನು ನಮ್ಮ ಠಾಣೆಯ ಸಿಬ್ಬಂದಿಯವರಾದ ಶ್ರೀ ಶಿವಲಿಂಗಪ್ಪ ಹೆಚ್.ಸಿ 06, ಶ್ರೀ ಶಿವಲಿಂಗ ಪಿಸಿ 1241 ಮತ್ತು ಶ್ರೀ ಗಂಗಾಧರ ಪಿಸಿ 642 ರವರನ್ನು ಸಂಗಡ ಕರೆದುಕೊಂಡು ಠಾಣಾ ವ್ಯಾಪ್ತಿಯಲ್ಲಿ ಸ್ವತ್ತಿನ ಗುನ್ನೆಗಳನ್ನು ತಡೆಗಟ್ಟು ಸಂಬಂದ ರಾತ್ರಿ ವೇಳೆಯಲ್ಲಿ ವಿಶೇಷ ಗಸ್ತು ಚೆಕ್ಕಿಂಗ್ ಕರ್ತವ್ಯ ನಿರ್ವಹಿಸುತ್ತಾ ಬೆಳ್ಳಿಗ್ಗೆ 3:30 ಗಂಟೆಗೆ ಠಾಣಾ ವ್ಯಾಪ್ತಿಯ ಬಾಳೆ ಲೇಔಟದಲ್ಲಿ ಹೋದಾಗ ಖಚಿತ ಬಾತ್ಮಿ ಬಂದಿದ್ದೆನೆಂದರೆ, ಠಾಣಾ ವ್ಯಾಪ್ತಿಯ ಇದಗಾ ಮೈದಾನದ ಹತ್ತಿರ ರಸ್ತೆಯ ಪಕ್ಕದಲ್ಲಿ ಕೆಲವು ಜನರು ದರೋಡೆ ಮಾಡಲು ಹೊಂಚ್ಚು ಹಾಕಿ ಕೂಳಿತಿರುವ ಬಗ್ಗೆ ಖಚಿತ ಬಾತ್ಮಿ ಬಂದಿದ್ದು ಬಾತ್ಮಿಯಂತೆ ಸದರಿಯವರ ಮೇಲೆ ದಾಳಿ ಮಾಡಿ ಕ್ರಮ ಕೈಕೊಳ್ಳುವ ಕುರಿತು ಇಬ್ಬರ ಪಂಚರನ್ನು ಬರಮಾಡಿಕೊಂಡು ಅವರಿಗೆ ದಾಳಿ ಕಾಲಕ್ಕೆ ಹಾಜರಿದ್ದು ಜಪ್ತಿ ಪಂಚನಾಮೆಯನ್ನು ಬರೆಯಿಸಿ ಕೂಡಲು ಕೇಳಿಕೊಂಡಿದ್ದು. ಅದಕ್ಕೆ ಅವರು ಒಪ್ಪಿಕೊಂಡಿದ್ದು ನಂತರ ನಾನು, ಪಂಚರು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ನಿಧಾನವಾಗಿ ನಡೆಯುತ್ತಾ ಇದಗಾ ಮೈದಾನದ ಪಕ್ಕದಲ್ಲಿ ಇರುವ ರಸ್ತೆಯ ಮೇಲೆ ಬೆಳ್ಳಿಗ್ಗೆ 4:30 ಗಂಟೆಗೆ ಹೋಗುತ್ತಿದ್ದಂತೆ ನಮ್ಮಿಂದ ಸ್ವಲ್ಪ ದೂರದ ರಸ್ತೆಯ ಪಕ್ಕದಲ್ಲಿ ಕೆಲವು ಜನರು ಗುಸು ಗುಸು ಮಾತನಾಡುವ ಶಬ್ದ ಕೇಳಿ ಬರುತ್ತಿದ್ದು ಅವರಿಗೆ ಗೊತ್ತಾಗದ ಹಾಗೆ ನಾವು ಅವರ ಹತ್ತಿರ ಹೋಗಿ ನೋಡಲು 5 ಜನರು ಗುಂಪಾಗಿ ಕುಳಿತುಕೊಂಡು ದರೋಡೆ ಮಾಡುವ ಕುರಿತು ತಮ್ಮ ತಮ್ಮಲ್ಲಿ ಮಾತನಾಡುತ್ತಿದ್ದು ಆಗ ನಾನು ಮತ್ತು ಸಿಬ್ಬಂದಿಯವರು ಕೂಡಿಕೊಂಡು ಪಂಚರ ಸಮಕ್ಷಮ ಸದರಿಯವರ ಮೇಲೆ ದಾಳಿ ಮಾಡಿದಾಗ ಸದರಿಯವರು ನಮ್ಮನ್ನು ನೋಡಿ ಓಡಿ ಹೋಗುತ್ತಿದ್ದು ಆಗ ನಾನು ಮತ್ತು ಸಿಬ್ಬಂದಿಯವರು 3 ಜನರಿಗೆ ಹಿಡಿದುಕೊಂಡಿದ್ದು ಇನ್ನೂ ಇಬ್ಬರು ತಪ್ಪಿಸಿಕೊಂಡು ಓಡಿ ಹೋಗಿದ್ದು ನಂತರ ಹಿಡಿದುಕೊಂಡ ಮೂರು ಜನರಿಗೆ ವಿಚಾರಣೆಗೆ ಒಳಪಡಿಸಿದಾಗ ಸದರಿಯವರು ತಮ್ಮ ಹೆಸರು 1. ಶ್ರೀಧರ ತಂದೆ ಸದಾಶಿವ ಉಪಾಧ್ಯಾಯ ಸಾ:ಬಾಪೂನಗರ ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ ಒಂದು ಬತಾಯಿ ನಮೂನೆಯ ಚಾಕು ಮತ್ತು ಮುಖಕ್ಕೆ ಕಟ್ಟಿಕೊಳ್ಳುವ ಒಂದು ಕಪ್ಪು ಬಟ್ಟೆ ದೋರೆತಿದ್ದು 2. ಮೂರ್ತಿ @ ವಿರೇಶ ತಂದೆ ಮಹಾಂತಪ್ಪ ಸಾ: ಸುಂದರ ನಗರ ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಹತ್ತಿರ ಮುಖಕ್ಕೆ ಕಟ್ಟಿಕೊಳ್ಳುವ ಒಂದು ಕಪ್ಪು ಬಟ್ಟೆ ಮತ್ತು ಒಂದು ತಲವಾರ ದೋರೆತಿದ್ದು 3. ರಾಣಿ ತಂದೆ ದೇವದಾಸ ಉಪಾಧ್ಯಾಯ ಸಾ: ಸುಂದರ ನಗರ ಕಲಬುರಗಿ. ಇವಳ ಹತ್ತಿರ ಅಂದಾಜ 100 ಗ್ರಾಂ ಖಾರದ ಪಾಕೇಟ ಮತ್ತು ಹಸಿರು ಬಣ್ಣದ ಮುಖಕ್ಕೆ ಕಟ್ಟಿಕೊಳ್ಳು ಸ್ಕಾರ್ಪ ದೊರೆತಿದ್ದು ಇರುತ್ತದೆ. ನಂತರ ಸದರಿಯವರಿಗೆ ಒಡಿಹೋದವರ ಬಗ್ಗೆ ವಿಚಾರಿಸಲು ಓಡಿ ಹೋದವರ ಹೆಸರು 1. ರಾಹುಲ್ @ ರಾಜಿಲ್ಲೆ ತಂದೆ ಸುಧಾಕರ ಉಪಾಧ್ಯಾಯ ಸಾ: ಬಾಪೂನಗರ ಕಲಬುರಗಿ ಮತು 2. ಗಿಡ್ಡ್ಯಾ ತಂದೆ ಮಹೀಬೂಬ ಸಾ: ಭರತ ನಗರ ತಾಂಡಾ ಕಲಬುರಗಿ ಅಂತ ತಿಳಿಸಿದ್ದು ಇರುತ್ತದೆ. ಸದರಿಯವರಿಗೆ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಸದರಿಯವರು ತಿಳಿಸಿದ್ದೆನೆಂದರೆ, ಬೆಳಗಿನ ಜಾವ ವಾಕಿಂಗ್ ಮತ್ತು ನೈಸರ್ಗಿಕ ಕರೆಗೆ ಮನೆಯಿಂದ ಹೊರಗೆ ಜನರ ಮೇಲೆ ದಾಳಿ ಮಾಡಿ ಅವರಿಗೆ ಹೆದರಿಸಿ ಬೇದರಿಸಿ ಅವರಲ್ಲಿದ್ದ ಹಣ, ಬಂಗಾರ ಮತ್ತು ಬೆಲೆಬಾಳುವ ವಸ್ತುಗಳನ್ನು ಕಿತ್ತಿಕೊಳ್ಳು ಸಂಬಂದ ಹೊಂಚ್ಚುಹಾಕಿ ಕುಳಿತಿರುತ್ತೆವೆ ಅಂತ ತಿಳಿಸಿದ್ದು ಸದರಿಯವರನ್ನು ವಶಕ್ಕೆ ತೆಗೆದುಕೊಂಡು ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಪ್ರಾಪ್ತ ವಯಸ್ಇನ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣ :
ಕಮಲಾಪೂರ ಠಾಣೆ : ಕುಮಾರಿ ಇವಳು  ಬಸವಕಲ್ಯಾಣನ ನಿಲಾಂಬಿಕ ಪದವಿಪೂರ್ವ ಶಾಲೆಯಲ್ಲಿ 10 ನೇ ತರಗತಿಯಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದು. ನಾನು ಪ್ರತಿ ದಿನ ಕಾಳಮಂದರ್ಗಿ ಗ್ರಾಮದಿಂದ ಮುಂಜಾನೆ ಸರಕಾರಿ ಬಸ್ಸನಲ್ಲಿ ಶಾಲೆಗೆ ಹೋಗಿ ಸಾಯಂಕಾಲ ಬಸ್ಸನಲ್ಲಿ ವಾಪಸ್ಸ ನಮ್ಮೂರಿಗೆ ಬರುತ್ತಿದ್ದು. ಈಗ್ಗೆ ಸೂಮಾರು 1 ವರ್ಷಗಳಿಂದ ನಮ್ಮೂರ ಲಿಂಗಾಯತ ಜಾತಿಯ ರೇವಣಸಿದ್ದಪ್ಪ ತಂದೆ ಗುರುಲಿಂಗಪ್ಪ ರಾಜಾಪೂರೆ ಈತನು ನಾನು ಶಾಲೆಗೆ ಹೋಗುವ ಬಸ್ಸನಲ್ಲಿ ಬರುತ್ತಿದ್ದು. ಮತ್ತು ಬಸ್ಸನಲ್ಲಿ ನಾನು ನಿಂತಲ್ಲಿ ಬಂದು ನಿಲ್ಲುವುದು ನನಗೆ ನೋಡಿ ನಗುವುದು ಅಲ್ಲದೆ ನಾನು ಒಬ್ಬಳೆ ಸಿಕ್ಕಾಗ ನನ್ನೊಂದಿಗೆ ಮಾತನಾಡುತ್ತಿದ್ದು. ಅಲ್ಲದೆ ಅವನು ನನಗೆ ನಾನು ನಿನಗೆ ಪ್ರೀತಿ ಮಾಡುತ್ತೇನೆ. ನಾನು ನಿನ್ನೊಂದಿಗೆ ಮದುವೆ ಮಾಡಿಕೋಳ್ಳುತ್ತೇನೆ ಅಂತಾ ನನಗೆ ಹೇಳುತ್ತ ಆಗಾಗ ನನ್ನ ಮೈಮುಟ್ಟಿ ಮಾತನಾಡುತ್ತಿದ್ದು ಅದಕ್ಕೆ ನಾನು ಅವನಿಗೆ ನಾನು ಇನ್ನೂ ಚಿಕ್ಕವಳಿರುತ್ತೇನೆ ನಾನು ನಿನಗೆ ಪ್ರಿತಿ ಮಾಡಲ್ಲ ಈ ರಿತಿ ನೀನು ನನಗೆ ಸುಮ್ಮನೆ ಸತಾಯಿಸಬೇಡ ಅಂತಾ ಹೇಳುತ್ತ ಬಂದರು ಕೂಡಾ ಅವನು ನನ್ನ ಮಾತು ಕೇಳದೆ ನನ್ನ ಹಿಂದೆಮುಂದೆ ತಿರುಗಾಡುತ್ತ ನನ್ನೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದು. ಸದರಿ ವಿಷಯವನ್ನು ನಾನು ನನ್ನ ಮನೆಯವರಿಗೆ ಹೇಳಿದರೆ ನಮ್ಮ ಮನೆಯವರು ಸುಮ್ಮನೆ ಊರಲ್ಲಿ ಜಗಳ ಮಾಡಿಕೋಳ್ಳುತ್ತಾರೆ ಮತ್ತು ನನಗೆ ಶಾಲೆಗೆ ಹೋಗುವುದು ಬಿಡಿಸುತ್ತಾರೆ ಅಂತಾ ತಿಳಿದು ನಾನು ರೇವಣಸಿದ್ದಪ್ಪ ಸತಾಯಿಸುತ್ತಿದ್ದ ವಿಷಯ ನಮ್ಮ ಮನೆಯಲ್ಲಿ ಯಾರಿಗೂ ಹೇಳಿರುವುದಿಲ್ಲ. ಹೀಗಿದ್ದು ದಿನಾಂಕ:15-06-2018 ರಂದು ರಾತ್ರಿ 08.00 ಗಂಟೆಯ ಸೂಮಾರಿಗೆ ನಾನು ಕಾಳಮಂದರಗಿ ಗ್ರಾಮದ ನಮ್ಮ ಮನೆಯಲ್ಲಿ ಊಟ ಮಾಡಿ ಮನೆಯಿಂದ ಹೋರಗಡೆ ಸುತ್ತಾಡುತ್ತ ದೇವತೆಮ್ಮ ಗುಡಿಯ ಹತ್ತಿರದಿಂದ ಮನೆ ಕಡೆಗೆ ಬರುತ್ತಿದ್ದಾಗ ರಾತ್ರಿ 08-30 ಗಟೆೆಯ ಸೂಮಾರಿಗೆ ನಮ್ಮೂರ ರೇವಣಸಿದ್ದಪ್ಪ ರಾಜಾಪೂರೆ ಇವನು ನನ್ನ ಹತ್ತೀರ ಬಂದು ನನ್ನ ಬಾಯಿ ಒತ್ತಿ ಹಿಡಿದು ನನಗೆ ನಿನ್ನ ಬಿಟ್ಟು ಇರಲು ಆಗುವುದಿಲ್ಲ ನಾನು ನಿನ್ನ ಜೋತೆ ಮದುವೆ ಮಾಡಿಕೋಳ್ಳುತ್ತೇನೆ ಅಂತಾ ಅನ್ನುತ್ತಿದ್ದು ನಾನು ಅವನಿಂದ ಬಿಡಿಸಿಕೋಳ್ಳಬೇಕು ಅಂತಾ ಎಷ್ಟು ಪ್ರಯತ್ನ ಮಾಡಿದರು ನನಗೆ ಬಿಡದೆ ಜಬರದಸ್ತಿಯಿಂದ ನನಗೆ ಅಲ್ಲಿಂದ ಎಳೆದುಕೊಂಡು ಕಾಳಮಂದರ್ಗಿ ಗ್ರಾಮದಲ್ಲಿರುವ ತನ್ನ ಹೋಲಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಕೊಂಪಿಯಲ್ಲಿ ಇಟ್ಟು ಜಬರದಸ್ತಿಯಿಂದ ನಾನು ಬೇಡಾ ಅಂತಾ ಎಷ್ಟು ಬೆಡಿಕೊಂಡರು ನನ್ನ ಮಾತು ಕೇಳದೆ ನನಗೆ ರಾತ್ರಿ ಪೂರ್ತಿಯಾಗಿ ಮಲಗಲು ಬಿಡದೆ ನನ್ನೊಂದಿಗೆ ಇಡಿ ರಾತ್ರಿ ಹಠ ಸಂಭೋಗ ಮಾಡಿದ್ದು. ನಂತರ ಮುಂಜಾನೆ ಎದ್ದ ನಂತರ ರೇವಣಸಿದ್ದಪ್ಪ ಈತನು ನನಗೆ ನಿನು ಏನಾದರು ಇಲ್ಲಿಂದ ಓಡಿ ಹೋಗಿ ನಾನು ನಿನ್ನೊಂದಿಗೆ ಸಂಭೋಗ ಮಾಡಿದ ವಿಷಯ ನಿನ್ನ ತಂದೆ ತಾಯಿಗೆ ಹೇಳಿ ನನ್ನ ಮೇಲೆ ಕೇಸ ಮಾಡಿದರೆ ನಿನಗೆ ಹಾಗೂ ನಿನ್ನ ಮನೆಯವರಿಗೆ ಎಲ್ಲರಿಗೂ ಖಲಾಸ ಮಾಡುತ್ತೇನೆ ಅಂತಾ ಜೀವ ಬೆದರಿಕೆ ಹಾಕಿದ್ದು. ನಾನು ಅಂಜಿಕೊಂಡು ಸುಮ್ಮನೆ ಅವನೊಂದಿಗೆ ಇದ್ದಿರುತ್ತನೆ. ಮತ್ತು ರೇವಣಸಿದ್ದಪ್ಪ ಈತನು ನನಗೆ 5 ದಿನಗಳ ಕಾಲ ಅಲ್ಲೆ ತನ್ನ ಹೋಲದಲ್ಲಿನ ಕೊಂಪಿಯಲ್ಲಿ ಇಟ್ಟು ಪ್ರತಿ ದಿನ ಹಗಲು ರಾತ್ರಿ ಅನ್ನದೆ ಮನಸ್ಸಿಗೆ ಬಂದ ಹಾಗೆ ನಾನು ಬೇಡಾ ಅಂದರು ಕೇಳದೆ ನನ್ನೊಂದಿಗೆ ಹಠ ಸಂಭೋಗ ಮಾಡಿದ್ದು. ನಂತರ ದಿನಾಂಕ:20-06-2018 ರಂದು ರಾತ್ರಿ ವೇಳೆಯಲ್ಲಿ ರೇವಣಸಿದ್ದಪ್ಪನು ನನಗೆ ತನ್ನ ಹೋಲದಿಂದ ಯಾರಿಗು ಕಾಣದಂತೆ ಊರ ಹೋರಗಿನ ಹೋಲದಲ್ಲಿಂದ ನಡೆಸಿಕೊಂಡು ಬಂಡನಕೇರಾ ತಾಂಡಾದ ನನ್ನ ಗೆಳತಿ ಪೂಜಾ ತಂದೆ ಮೋತಿರಾಮ ಇವರ ಮನೆಗೆ ಕರೆದುಕೊಂಡು ಹೊಗಿ ನನಗೆ ನನ್ನ ಗೆಳತಿ ಪೂಜಾಳ ಸಂಗಡ ಬಿಟ್ಟು ತಾನು ತನ್ನ ಅಣ್ಣನ ಮದುವೆಗೆ ಹೋಗಿ ಬರುತ್ತೇನೆ ನಾನು ಬರುವವರೆಗೆ ಇಲ್ಲಿಯೆ ಇರು ನೀನು ಒಂದು ವೆಳೆ ಓಡಿಹೋದರೆ ನಿನಗೆ ಮರ್ಡರ್ ಮಾಡುತ್ತೇನೆ ಅಂತಾ ನನಗೆ ಹೆದರಿಸಿ ಹೋಗಿದ್ದು. ನಾನು ಅಂಜಿ ಅಂದು ಬಂಡನಕೇರಾ ತಾಂಡಾದಲ್ಲಿ ಇದ್ದೇನು. ನಂತರ ದಿನಾಂಕ:21-06-2018 ರಂದು ಸಾಯಂಕಾಲದ ವೇಳೆಯಲ್ಲಿ ರೇವಣಸಿದ್ದಪ್ಪನ ತಮ್ಮ ಮಲ್ಲಿಕಾರ್ಜುನ ರಾಜಾಪೂರೆ ಹಾಗೂ ಮಲ್ಲಪ್ಪ ಬಾಪೂರೆ ಇವರು ಬಂಡನಕೇರಾ ತಾಂಡಾಕ್ಕೆ ನಾನು ಇದ್ದಲ್ಲಿಗೆ ಬಂದು ನನಗೆ ಅವರು ನಿನ್ನ ತಂದೆ ನನ್ನ ತಮ್ಮನ ಮೇಲೆ ಕೇಸ ಮಾಡಲು ಪೋಲಿಸ್ ಠಾಣೆಗೆ ಹೋಗುತ್ತಿದ್ದು. ನೀನು ಮನೆಗೆ ಕರೆದುಕೊಂಡು ಹೋಗುತ್ತೇವೆ. ನಿನು ಹೋದ ಬಳಿಕ ನಿನ್ನ ಮನೆಯವರು ಕೇಳಿದರೆ ರೇವಣಸಿದ್ದಪ್ಪನು ನಿನ್ನೊಂದಿಗೆ ಸಂಭೋಗ ಮಾಡಿದ ವಿಷಯ ಹೇಳಬೇಡಾ ಒಂದು ವೇಳೆ ರೇವಣಸಿದ್ದಪ್ಪನ ಮೇಲೆ ಕೇಸ ಮಾಡಿದರೆ ನಿಮಗೆ ಬಿಡುವುದಿಲ್ಲ ಅಂತಾ ಹೇಳು ಅಂತಾ ಈ ಹಿಂದೆ ಪೋಲಿಸ ಆಗಿದ್ದ ನನ್ನ ದೋಡ್ಡಪ್ಪ ಬಸವರಾಜ ರಾಜಾಪುರೆ ಇವರು ಹೇಳಿದ್ದಾರೆ ಅಂತಾ ನನಗೆ ಜೀವ ಬೆದರಿಕೆ ಹಾಕಿ ನನಗೆ ಮೋಟರಸೈಕಲ ಮೇಲೆ ತಂದು ನಮ್ಮೂರ ಸಮಿಪ ಬಿಟ್ಟು ಹೋಗಿದ್ದು ಇರುತ್ತದೆ. ನಂತರ ನಾನು ಸದರಿ ವಿಷಯವನ್ನು ಅಂದು ರಾತ್ರಿ ವರೆಗು ನನ್ನ ತಂದೆತಾಯಿಗೆ ಹೇಳದೆ ಮುಚ್ಚಿಟ್ಟಿದ್ದು ನಂತರ ನನಗೆ ದು:ಖ ತಾಳಲು ಆಗದೆ ರೇವಣಸಿದ್ದಪ್ಪ ನನಗೆ ಅಪಹರಿಸಿಕೊಂಡು ಹೋಗಿ ಹಠ ಸಂಭೋಗ ಮಾಡಿದ ವಿಷಯ ಹೇಳಿದ್ದು. ನಂತರ ನನ್ನ ತಂದೆ ತಾಯಿ ಈ ವಿಷಯದಲ್ಲಿ ನಮ್ಮೂರ ಹಿರಿಯರೊಂದಿಗೆ ವಿಚಾರ ಮಾಡಿಕೊಂಡು ತಡವಾಗಿ ನನಗೆ ಠಾಣೆಗೆ ಕರೆದುಕೊಂಡು ಬಂದಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣಗಳು  :
ಫರತಾಬಾದ ಠಾಣೆ : ಶ್ರೀ ಉಮೇಶ ತಂದೆ ನಾಗಪ್ಪಾ ಮಾಮನಿ ಸಾಃ ಫಿರೋಜಾಬಾದ ಗ್ರಾಮ ಇವರಿಗೆ ವಿಚಾರಿಸಿದ್ದು, ರಾಷ್ಟ್ರೀಯ ಹೇದ್ದಾರಿ 218ರ ರೋಡಿಗೆ ನಮ್ಮೂರಿನ ಕ್ರಾಸ ಹತ್ತಿರ ಕಲ್ಪತ್ ರೆಹಮಾನ ದರ್ಗಾ ಇದ್ದು, ಪ್ರತಿ ವರ್ಷ ಜೂನ ತಿಂಗಳಲ್ಲಿ ಉರಸ್ (ಜಾತ್ರೆ) ನಡೆಯುತ್ತಿರುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದಿನಾಂಕ 25/06/2018 ರಿಂದ ದಗರ್ಾದ ಉರಸ್ ಪ್ರಾರಂಭವಾಗಿದ್ದು, ಅದೇ ದಿವಸ ದರ್ಗಾದಲ್ಲಿ ಕಾರ್ಯಕ್ರಮಗಳು ಇದ್ದ ಪ್ರಯುಕ್ತ ನಾನು ಮತ್ತು ನಮ್ಮೂರಿನ ಇತರರು ಕೂಡಿಕೊಂಡು ದರ್ಗಾಕ್ಕೆ ಬಂದು, ದರ್ಗಾದ ದ್ವೀಪ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಊರಿಗೆ ಹೊಗಬೇಕೆಂದು ದರ್ಗಾದ ಎದುರುಗಡೆ ಇರುವ ರಾಷ್ಟ್ರೀಯ ಹೇದ್ದಾರಿ 218ರ ನಮ್ಮೂರಿನ ಕ್ರಾಸ ಹತ್ತಿರ ಇರುವಾಗ ರಾತ್ರಿ 10.30 ಗಂಟೆಯ ಸುಮಾರಿಗೆ ಜೇವರಗಿ ಕಡೆಯಿಂದ ಒಬ್ಬ ಮೋಟಾರ ಸೈಕಲ ಸವಾರನು ತನ್ನ ಮೋಟಾರ ಸೈಕಲನ್ನು ಅತೀ ವೇಗ ಮತ್ತು ನಿಸ್ಕಾಳಜಿಯಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದವನೇ ದರ್ಗಾದ ಹತ್ತಿರ ರೋಡಿನಿಂದ ಜೇವರಗಿ ಕಡೆಗೆ ರೋಡಿನ ಮಗ್ಗಲಿನಿಂದ ನಡೆದುಕೊಂಡು ಹೊಗುತ್ತಿದ್ದ ನಾಲ್ಕು ಜನರಲ್ಲಿ ಇಬ್ಬರಿಗೆ ಡಿಕ್ಕಿಪಡಿಸಿ ತಾನು ಸಹ ಮೋಟಾರ ಸೈಕಲ ಸಮೇತ ರೋಡಿನ ಮೇಲೆ ಬಿದಿದ್ದು, ಆಗ ನಾನು ಅವರ ಹತ್ತಿರ ಹೊಗಿ ನೋಡಲಾಗಿ ನಡೆದುಕೊಂಡು ಹೊಗುತ್ತಿದ್ದವರಲ್ಲಿ ಒಬ್ಬ ವ್ಯಕ್ತಿ ಅಂದಾಜು 35-38 ವಯಸ್ಸಿನವನಿದ್ದು, ಆತನ ತಲೆಗೆ ಭಾರಿ ಗುಪ್ತಗಾಯವಾಗಿ ಎರಡು ಕಿವಿಯಿಂದ ಮತ್ತು ಮೂಗಿನಿಂದ ರಕ್ತ ಬರುತ್ತಿದ್ದು, ಎಡಗಾಲಿನ ಪಾದದ ಹತ್ತಿರ ಭಾರಿ ಗುಪ್ತಗಾಯವಾಗಿ ಕಾಲು ಮುರಿದಂತೆ ಕಂಡು ಬಂದಿದ್ದು, ಇತರೆ ಕಡೆಗಳಲ್ಲಿ ತರುಚಿದ ರಕ್ತಗಾಯಗಳಾಗಿ ಮಾತಾಡುವ ಸ್ಥಿತಿಯಲ್ಲಿ ಇರಲಿಲ್ಲ. ಇನ್ನೊಬ್ಬನಿಗೆ ನೋಡಲಾಗಿ ಅಂದಾಜು 55-60 ವಯಸ್ಸಿನವನಿದ್ದ ನೋಡಲು ಸಾಧುವಿನಂತೆ ಗಡ್ಡ ಮೀಸೆ ಬಿಟ್ಟಿದ್ದು, ಆತನಿಗೆ ಬಲಗಣ್ಣಿನ ಹತ್ತಿರ ರಕ್ತಗಾಯ, ಬೆನ್ನಿಗೆ ಭಾರಿ ಗುಪ್ತಗಾಯವಾಗಿದ್ದು, ಆತನು ಸಹ ಮಾತಾಡುವ ಸ್ಥಿತಿಯಲ್ಲಿ ಇರಲಿಲ್ಲ. ಅವರ ಜೋತೆಗಿದ್ದ ಇಬ್ಬರು ಅಲ್ಲಿಂದ ಹೊಗಿದ್ದರಿಂದ ಗಾಯಗೊಂಡವರ ಹೆಸರು ಮತ್ತು ವಿಳಾಸ ಗೊತ್ತಾಗಿರುವುದಿಲ್ಲ. ಅಪಘಾತಪಡಿಸಿದ ಸವಾರನಿಗೂ ನೋಡಲಾಗಿ ಆತನಿಗೂ ಸಹ ಅಲ್ಲಲ್ಲಿ ತರಚಿದ ರಕ್ತಗಾಯ ಹಾಗೂ ಗುಪ್ತಗಾಯಗಳಾಗಿದ್ದು, ಆತನಿಗೆ ವಿಚಾರಿಸಲಾಗಿ ತನ್ನ ಹೆಸರು ಚೆನ್ನಬಸಯ್ಯ ತಂದೆ ಚಂದ್ರಶೇಖರ ಷಡಕ್ಷರಿ ಸಾಃ ಫರಹತಾಭಾದ ಅಂತಾ ತಿಳಿಸಿದ್ದು, ಮೊಟಾರ ಸೈಕಲ ನಂಬರ ನೋಡಲಾಗಿ ಎಮ್.ಹೆಚ್-09 ಸಿಬಿ-1341 ನೆದ್ದು ಇದ್ದು, ನಂತರ ಅಲ್ಲೆ ನೆರೆದಿದ್ದ ಜನರು 108 ವಾಹನಕ್ಕೆ ಪೋನ ಮಾಡಿದ್ದರಿಂದ 108 ವಾಹನ ಬಂದಿದ್ದು, ಗಾಯಗೊಂಡ ಮೂರು ಜನರಿಗೂ 108 ವಾಹನದಲ್ಲಿ ಉಪಚಾರ ಕುರಿತು ಜಿಲ್ಲಾ ಸಕರ್ಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಇರುತ್ತದೆ. ನಂತರ ಗಾಯಗೊಂಡವರ ಸಂಬಂಧಿಕರು ಯಾರಾದರೂ ಬಂದು ದೂರು ಸಲ್ಲಿಸಬಹುದು ಅಂತಾ ನಾನು ಸುಮ್ಮನಿದ್ದೇನು. ಇಂದು ದಿನಾಂಕ 27/06/2018 ರಂದು 9.00 ಗಂಟೆಯ ಸುಮಾರಿಗೆ ನನಗೆ ಗೊತ್ತಾಗಿದೆನೆಂದರೆ ದಿನಾಂಕ 25/06/2018 ರಂದು ರಾತ್ರಿ 10.30 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೇದ್ದಾರಿ 218ರ ಫಿರೋಜಾಬಾದ ದರ್ಗಾದ ಎದುರುಗಡೆ ರೋಡಿನ ಮೇಲೆ ರಸ್ತೆ ಅಪಘಾತ ಹೊಂದಿ ಗಾಯಗೊಂಡವರ ಪೈಕಿ ಅಪರಿಚಿತ ವ್ಯಕ್ತಿ ಅಂದಾಜು 35-38 ವಯಸ್ಸಿನವನು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುವ ಕಾಲಕ್ಕೆ ಚಿಕಿತ್ಸೆ ಫಲಕಾರಿಯಾದೆ ದಿನಾಂಕ 26/06/2018 ರಂದು 9.10 ಪಿ.ಎಮದ ಸುಮಾರಿಗೆ ರಂದು ಮೃತಪಟ್ಟ ಬಗ್ಗೆ ಗೊತ್ತಾಗಿದ್ದು  ನಾನು ಆಸ್ಪತ್ರೆಗೆ ಹೊಗಿ ನೋಡಲಾಗಿ ಆತನು ಮೃತಪಟ್ಟಿದ್ದು ನಿಜವಿದ್ದು,  ಆತನ ಹೆಸರು ವಿಳಾದ ಗೊತ್ತಾಗಿರುವುದಿಲ್ಲ. ಮೃತಪಟ್ಟ ವ್ಯಕ್ತಿ ಸಾಧಾರಣ ಮೈಕಟ್ಟು, ಎತ್ತರ 05 ಫೀಟ 6 ಇಂಚು ಇದ್ದು, ಉದ್ದನೆಯ ಮುಖ, ಸಾದಾಗೋದಿ ಮೈಬಣ್ಣ, ಮೈಮೇಲೆ ಒಂದು ಬಿಳಿ ಬಣ್ಣದ ಶರ್ಟ, ಒಂದು ಕಂದು ಬಣ್ಣದ ಪ್ಯಾಂಟ, ಒಂದು ಬಿಳಿ ಬಣ್ಣದ ಶ್ಯಾಂಡು ಬನೀಯನ್, ಒಂದು ನೀಲಿ ಬಣ್ಣದ ಅಂಡರವೇಯರ ಇರುತ್ತವೆ. ಕಾರಣ ಮಾನ್ಯರವರು ಅಪಘಾತಪಡಿಸಿದ ಮೋಟಾರ ಸೈಕಲ ನಂ ಎಮ್.ಹೆಚ್-09 ಸಿಬಿ-1341 ನೆದ್ದರ ಚಾಲಕನಾದ ಚೆನ್ನಬಸಯ್ಯ ತಂದೆ ಚಂದ್ರಶೇಖರ ಷಡಕ್ಷರಿ ಸಾಃ ಫರಹತಾಬಾದ ಈತನ ವಿರುದ್ದ ಸೂಕ್ತ ಕಾನೂನು ರೀತಿ ಕ್ರಮ ಜರೂಗಿಸಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 28-06-2018 ರಂದು ಮದ್ಯಾಹ್ನ 12-30 ಗಂಟೆ ಸುಮಾರಿಗೆ ನನ್ನ ಮಗ ಸಮೀರ ಇತನು ನಮ್ಮ ಮನೆಯಿಂದ ಗಾಜಿಪೂರದಲ್ಲಿರುವ ಆತನ ಅಜ್ಜಿಯ ಮನೆಗೆ ಹೋಗುವ ಕುರಿತು ಮೋಟಾರ ಸೈಕಲ  ನಂ ಕೆಎ-32-ಕ್ಯೂ-8167 ನೆದ್ದನ್ನು ಚಲಾಯಿಸಿಕೊಂಡು ಆನಂದ ಹೊಟೇಲ ಕ್ರಾಸ ಕಡೆಯಿಂದ ಗೋವಾ ಹೊಟೇಲ ಕ್ರಾಸ ಕಡೆಗೆ ಹೋಗುವಾಗ ಎನ.ವ್ಹಿ ಕಾಲೇಜ ಕಾಂಪ್ಲೇಕ್ಸನಲ್ಲಿ ಬರುವ ಭಾರತ ಗ್ಯಾಸ ಏಜೇನ್ಸಿ ಎದುರು ರೋಡ ಮೇಲೆ ಹಿಂದಿನಿಂದ ಒಬ್ಬ ಹೊಂಡಾ ಡಿಓ ಮೊಟಾರ ಸೈಕಲ ಸವಾರ ತನ್ನ ಮೋಟಾರ ಸೈಕಲ ಹಿಂದುಗಡೆ ಒಬ್ಬನನ್ನು ಕುಡಿಸಿಕೊಂಡು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಸಮೀರ ಇತನಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ಸಮೀರ ಇತನು ಕೆಳಗಡೆ ಬಿದ್ದಾಗ ಒಬ್ಬ ಹಿರೋ ಮೋಟಾರ ಸೈಕಲ ಸವಾರನು ತನ್ನ ಮೋಟಾರ ಸೈಕಲ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕೆಳಗಡೆ ಬಿದ್ದಿದ್ದ ಸಮೀರ ಇತನ ಮೇಲೆ ಮೋಟಾರ ಸೈಕಲ ಹಾಯಿಸಿಕೊಂಡು ಹೋಗಿ ಅಪಘಾತ ಮಾಡಿ ಸಮೀರ ಇತನಿಗೆ ಭಾರಿಗಾಯಗೊಳಿಸಿ ಇಬ್ಬರೂ ತಮ್ಮ ಮೋಟಾರ ಸೈಕಲದೊಂದಿಗೆ ಓಡಿ ಹೋಗಿದ್ದು ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀ ಮಹಿಬೂಬ ತಂದೆ ಇಬ್ರಾಹಿಂ ಖಾನ ಸಾ : ಎಮ್.ಎಸ್.ಕೆ. ಮಿಲ್ಲ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.