POLICE BHAVAN KALABURAGI

POLICE BHAVAN KALABURAGI

20 March 2013

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಫರತಬಾದ ಪೊಲೀಸ್ ಠಾಣೆ:ಶ್ರೀ ಶ್ರೀಶೈಲ ತಂದೆ ಶಂಕರ ಮಡಿವಾಳ ವಯಾ||20 ವರ್ಷ ಉ: ಗೌಂಡಿ ಕೆಲಸ ಜಾ: ಪರೀಟ ಸಾ:ಬೆಳಗುಂಪಾ(ಕೆ) ರವರು ನಾನು ದಿನಾಂಕ:19/03/2013 ರಂದು ದಿನಾಂಕ:19/03/2013 ರಂದು ಮದ್ಯಾಹ್ನ ನಮ್ಮೂರಿಗೆ ಬರುವ ಕುರಿತು ಪಾಣೆಗಾಂವ ಕ್ರಾಸ ಹತ್ತಿರ ಹೊರಟಾಗ ಮಧ್ಯಾಹ್ನ 2:00 ಗಂಟೆಯ ಸುಮಾರಿಗೆ ನೇಚರ್ ಕಾಲ್ ಬಂದ್ದಿದರಿಂದ ಮೋಟರ ಸೈಕಲನ್ನು ರೋಡಿನ ಪಕ್ಕದಲ್ಲಿ ನಿಲ್ಲಿಸಿ ಇಳಿಯುತ್ತಿರುವಾಗ ಜೇವರ್ಗಿ ಕಡೆಯಿಂದ ಒಬ್ಬ ಕಾರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟರ ಸೈಕಲಗೆ ಹೊಡದನು. ನನಗೆ ಬಲಗಾಲಿನ ತೋಡೆಯ ಮೂಳೆ, ಮೋಳಕಾಲ ಕೇಳಗಿನ ಕಾಲು ಮುಳೆ ಮತ್ತು ಹಿಮ್ಮಡಿ ಮೇಲಿನ ಮೂಳೆ ಮುರಿದಂತೆಯಾಗಿ ಭಾರಿ ರಕ್ತಗಾಯವಾಗಿರುತ್ತದೆ. ಕಾರು  ಚಾಲಕನು ತನ್ನ ಕಾರನ್ನು ವೇಗದ ನಿಯಂತ್ರಣ ತಪ್ಪಿ ರಸ್ತೆಯ ಬಲಭಾಗಕ್ಕೆ ಹೋಗಿ ಪಲ್ಟಿ ಮಾಡಿ ಕಾರ ಸ್ಥಳದಲ್ಲಿಯೇ ಬಿಟ್ಟು ಹೋದನು. ಕಾರ ನಂಬರ ನೋಡಲು CKM 1056 ಅಂತಾ ಇದ್ದು ಸದರಿ ಕಾರ ಚಾಲಕನ ಹೆಸರು ಬಸವರಾಜ ರೇಡ್ಡಿ ಸಾ: ಪೂಜಾ ಕಾಲೂನಿ ಗುಲಬರ್ಗಾ ಅಂತಾ ಗೊತ್ತಾಗಿರುತ್ತದೆ.ಕಾರಿನಲ್ಲಿ ಕುಳಿತಿದ್ದ ಅನೀಲ ರೇಡ್ಡಿ ಇತನಿಗೆ ಕೈಗೆ ತರಚಿದ ಗಾಯವಾಗಿರುತ್ತದೆ. ಅಂತಾ ದೂರು ಶ್ರೀಶೈಲ್ ಇವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 36/2013 ಕಲಂ, 279, 337, 338, ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಫರತಬಾದ ಪೊಲೀಸ್ ಠಾಣೆ:ದಿನಾಂಕ:18-3-2013 ರಂದು ರಾತ್ರಿ 10-00 ಗಂಟೆಗೆ ಸುಮಾರಿಗೆ ಸುಬ್ಬಣ್ಣಾ ನಿಂಬರ್ಗಿ ಇವರ ಮನೆಯ ಹತ್ತಿರ ನಾನು ಹೋಗುತ್ತಿರುವಾಗ ನೀನು ನನ್ನ ಸೊಸೆಗೆ  ಯಾಕೆ ನೋಡುತ್ತಿ ಅಂತಾ ಅಚಾಚ್ಯವಾಗಿ ಬೈದು ಹೊಡೆದನು. ನಂತರ ಅವನ ಅಣ್ಣ ತಮ್ಮಂದಿರಾದ ಮಹಾದೇವಪ್ಪಾ ನಿಂಬರ್ಗಿ, ಭೀಮರಾಯ ನಿಂಬರ್ಗಿ ಇವರು ಬಂದು ಹೊಡೆ ಬಡೆ ಗುಪ್ತಗಾಯ ಪಡಿಸಿರುತ್ತಾರೆ.ಭೀಮರಾಯ ಈತನು ನನಗೆ ಕಾಲಿನಿಂದ ಒದ್ದು ನೆಲಕ್ಕೆ ಕೆಡವಿದ್ದರಿಂದ ತಲೆಯ ಹಿಂಭಾಗಕ್ಕೆ ರಕ್ತಗಾಯವಾಗಿರುತ್ತದೆ ಅಂತಾ ಮರೆಪ್ಪಾ ತಂದೆ ಸಾಯಬಣ್ಣಾ ಚೊಬಚ್ಚಿ ವಯ: 21 ವರ್ಷ ಉ: ಕೂಲಿ ಜಾ: ಕಬ್ಬಲಿಗೆರ ಸಾ: ಬಸವಪಟ್ಟಣ ಇತನು ದೂರು ಸಲ್ಲಿಸಿದ್ದರಿಂದ ಠಾಣೆಗೆ ಗುನ್ನೆ ನಂ:37/2013 ಕಲಂ, 341, 323, 324, 504, 506, ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ:ಶ್ರೀ ಅಣ್ಣೆಪ್ಪಾ ತಂದೆ ಹಣಮಂತಪ್ಪ ಜಮಾದಾರ ವ:62 ವರ್ಷ ಸಾ: ಮಾಣಿಕೇಶ್ವರ ಕಾಲನಿ  ಗುಲಬರ್ಗಾ ರವರು ನನ್ನ ಮಗ ಶ್ರೀಕಾಂತ ವ:34 ವರ್ಷ ಉ:ಗುತ್ತಿಗೆ ಆಧಾರದ ಸಹಾಯಕ ಇಂಜನಿಯರಾಗಿ ಚಾಮಂಡೇಶ್ವರಿ  ವಿದ್ಯುತ ಸರಬರಾಜು ನಿಗಮ ನಿಯಮಿತ ಕಾ & ಪಾ ವಿಭಾಗ ಮಡಿಕೇರಿಯಲ್ಲಿ:13-09-2007 ರಂದು ನೇಮಕ ಹೊಂದಿದ್ದು, ಸಧ್ಯ ಮಡಿಕೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ತನ್ನ ಮೈಯಲ್ಲಿ ಆರಾಮ ಇಲ್ಲದ ಕಾರಣ ದಿನಾಂಕ 24-12-2012 ರಿಂದ ರಜೆಯ ಮೇಲೆ ಇರುತ್ತಾನೆ. ನನ್ನ ಮಗ ಶ್ರೀಕಾಂತ ಈ ಮೊದಲು ಬಸವಕಲ್ಯಾಣ ಉಪವಿಭಾಗದ ಹುಲಸೂರ ಶಾಖೆಯಲ್ಲಿ  ಒಂದು ವರ್ಷದ ಅವಧಿಗಾಗಿ ಕೆಲಸ ನಿರ್ವಹಿಸಿದ್ದು, ಅಲ್ಲಿ ತನ್ನ ಫೆಂಡಿಂಗ ಕೆಲಸ ಪೂರ್ಣಗೊಳಿಸಲು ದಿನಾಂಕ:19-03-2013 ರಂದು  ಬೆಳಿಗ್ಗೆ 8-00 ಗಂಟೆ ಸುಮಾರಿಗೆ ಕೆಎ-32 ಆರ್-2901 ನೇದ್ದರ ಮೇಲೆ ಬಸವಕಲ್ಯಾಣ ಮತ್ತು ಹುಲಸೂರಕ್ಕೆ ಹೋಗುತ್ತೇನೆ ಅಂತಾ ಹೇಳಿ ಹೋದನು. ರಾತ್ರಿ 9-50 ಗಂಟೆ ಸುಮಾರಿಗೆ ನನ್ನ ಮಗನ ಮೋಬಾಯಿಲ್ ನಂಬರನಿಂದ  ನನ್ನ ಮೊಬೈಲ್ ಗೆ ಪೋನ ಮಾಡಿ ಆಲಗೂಡ ಕ್ರಾಸ ದಾಟಿ ಅಳ್ಳಿ ಹಳ್ಳಾ ಬ್ರೀಜ ಹತ್ತಿರ ನಿಮ್ಮ ಮಗನಿಗೆ ಎಕ್ಸಿಡೆಂಟ ಆಗಿದೆ ಅವನು ಸ್ಥಳದಲ್ಲಿ ಮೃತಪಟ್ಟಿರುತ್ತಾನೆ ನಿಮ್ಮ ಮಗ ತನ್ನ  ಹಿರೋ ಹೊಂಡಾ ಮೋಟಾರ ಸೈಕಲ ಮೇಲೆ ಹುಮನಾಬಾದ ರೊಡ ಕಡೆಯಿಂದ  ಗುಲಬರ್ಗಾ ಕಡೆಗೆ ಹೊರಟಿದ್ದು, ಎದುರುನಿಂದ ಅಂದರೆ ಗುಲಬರ್ಗಾ ಕಡೆಯಿಂದ ಒಂದು ನೀಲಿ ಬಣ್ಣದ ಟಂಟಂ ಕೆಎ-09 ಎ-5614 ನೇದ್ದರ ಟಂಟಂ ಚಾಲಕನು ಅತಿವೇಗ ಮತ್ತು ನಿಷ್ಕಾಳಿಜಿತನದಿಂದ ನಡೆಸುತ್ತಾ ತನ್ನ ಸೈಡಿಗೆ ಹೋಗದೇ ನಿಮ್ಮ ಮಗನ ಮೋಟಾರ ಸೈಕಲಿಗೆ ಡಿಕ್ಕಿ ಹೊಡೆದಿದ್ದರಿಂದ ನಿಮ್ಮ ಮಗ ಬಲಗಣ್ಣಿನ ಹತ್ತಿರ ಭಾರಿ ರಕ್ತಗಾಯವಾಗಿ ರಕ್ತ ಸ್ರಾವದಿಂದ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ.ಟಂಟಂ ಚಾಲಕ ಟಂಟಂ ನಿಲ್ಲಿಸಿ ಓಡಿ ಹೋಗಿರುತ್ತಾನೆ ಅಂತಾ ತಿಳಿಸಿದರು. ನಾವು ಹೋಗಿ ನೋಡಲು ಬಲಗಣ್ಣಿನ ಹುಬ್ಬಿನ ಮೇಲೆ ಭಾರಿ ರಕ್ತಗಾಯವಾಗಿದ್ದು ಅಲ್ಲದೇ ಬಲಗೈ ಭುಜದ ಹತ್ತಿರ ಭಾರಿ ಗುಪ್ತಗಾಯವಾಗಿ ಸ್ಥಳದಲ್ಲಿ ಮೃತ ಪಟ್ಟಿರುತ್ತಾನೆ ಈ ಘಟನೆಗೆ ಕಾರಣನಾದ ಟಂಟಂ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 144/2013 ಕಲಂ, 279, 304 (ಎ) ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಮೋಟಾರ ಸೈಕಲ್ ಕಳ್ಳತನ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:ಶ್ರೀ ಸಿದ್ರಾಮಯ್ಯ ತಂದೆ ಬಸಲಿಂಗಯ್ಯ ಹೀರೆಮಠ ಸಾ|| ಖೂಬಾ ಪ್ಲಾಟ ಗುಲಬರ್ಗಾ ರವರು ನಾನು ದಿನಾಂಕ: 14-03-2013 ರಂದು ಸಾಯಂಕಾಲ 6-30 ಗಂಟೆ ಸುಮಾರಿಗೆ ಹುಮನಬಾದ ರೋಡಿಗೆ ಇರುವ ವಿಜಯ ಅಟೋಮೊಬಾಯಿಲ್ಸ್ ಅಂಡಿಯ ಮುಂದೆ ಕೆಎ-32 ಇಬಿ-3301 ನೇದ್ದನ್ನು ನಿಲ್ಲಿಸಿ ಒಳಗಡೆ ಹೋಗಿ ಬರುವಷ್ಟರಲ್ಲಿ ಯಾರೋ ನನ್ನ ವಾಹನ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:143/2013 ಕಲಂ, 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.