POLICE BHAVAN KALABURAGI

POLICE BHAVAN KALABURAGI

22 May 2015

Kalaburagi District Reported Crimes.

ನಿಂಬರ್ಗಾ ಪೊಲೀಸ ಠಾಣೆ : ಇಂದು ದಿನಾಂಕ 21/05/2015 ರಂದು 2130 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಬಸವರಾಜ ತಂದೆ ಕಲ್ಯಾಣಪ್ಪ ಶರಣ ವ|| 51 ವರ್ಷ, ಜಾ|| ಲಿಂಗಾಯತ,|| ನೀರಾವರಿ ಇಲಾಖೆ ನೌಕರ, ಸಾ|| ನಿಂಬರ್ಗಾ ಗ್ರಾಮ ಇವರು ಠಾಣೆಗೆ ಬಂದು ಒಂದು ಲಿಖಿತ ಫಿರ್ಯಾದಿ ನೀಡಿದ್ದು ಅದರ ಸಂಕ್ಷಿಪ್ತ ಸಾರಾಂಶವೇನೆಂದರೆ ನನ್ನ ಮಗಳು  ಇತ್ತಿಚ್ಚೆಗೆ ಡಿ.ಎಡ ಶಿಕ್ಷಣ ಮುಗಿಸಿ ಮನೆಯಲ್ಲಿ ವಾಸವಾಗಿದ್ದಳು. ಹೀಗಿದ್ದು ಇಂದು ದಿನಾಂಕ 21/05/2015 ರಂದು 1200 ಗಂಟೆಗೆ ನನ್ನ ಮನೆಯಲ್ಲಿ ನನ್ನ ಹೆಂಡತಿಯಾದ ಕಸ್ತೂರಿ ಇವರು ಅಡುಗೆ ಮಾಡುತ್ತಿದ್ದಾಗ ನನ್ನ ಮಗಳು ನನ್ನ ಮನೆಯ ಮುಂದೆ ಬಟ್ಟೆ ತೊಳೆಯುತ್ತಿದ್ದಾಗ ನಾನು ನಮ್ಮ ಮನೆಯ ಹತ್ತಿರ ಇರುವ ಕಿರಾಣಿ ಅಂಗಡಿಯೊಂದಕ್ಕೆ ಹೋಗಿ ಮರಳಿ ಮನೆಗೆ ಬರುತ್ತಿರುವಾಗ ನನ್ನ ಮಗಳಿಗೆ ರವಿ ತಂದೆ ಭೀಮಶಾ ನವರಂಗ ಇತನು ಕೆಂಪು ಬಣ್ಣದ ಮೋಟಾರ ಸೈಕಲ ಮೇಲೆ ಬಂದು ಕೈ ಹಿಡಿದು ಜಗ್ಗಾಡಿ ಒತ್ತಾಯಪೂರ್ವಕವಾಗಿ ತನ್ನ ಮೋಟಾರ ಸೈಕಲ ಮೇಲೆ ಕೂಡಿಸುತ್ತಿದ್ದು ಇದಕ್ಕೆ ಆತನ ಅಣ್ಣನಾದ ಶಿವಾನಂದನು ಕೂಡ ಆತನಿಗೆ ನೆರವು ನೀಡುತ್ತಿದ್ದು ಅಲ್ಲದೆ ನೀನು ನನ್ನ ತಮ್ಮನೊಡನೆ ಹೋಗದೆ ಹೋದರೆ ನಿನಗೆ ಜೀವ ಸಹಿತ ಬಿಡುವದಿಲ್ಲ ಅಂತ ಜೀವ ಭಯಪಡಿಸುತ್ತಿದ್ದು ಅಲ್ಲಿಯೇ ಸಮೀಪದಲ್ಲಿಯೇ ರವಿ ಇತನ ತಂದೆಯಾದ ಭೀಮಶಾ ನವರಂಗ ತಾಯಿಯಾದ ಅಂಬವ್ವ ನವರಂಗ ಇಬ್ಬರೂ ಓಡಿ ಬಂದು ಜಬರದಸ್ತಿಯಿಂದ ನನ್ನ ಮಗಳಿಗೆ ಮುಖಕ್ಕೆ ಬಟ್ಟೆ ಕಟ್ಟಿ ರವಿ ಇತನ ಮೋಟಾರ ಸೈಕಲ ಮೇಲೆ ಕೂಡಿಸುತ್ತಿದ್ದಾಗ ನಾನು ಚೀರಾಡುತ್ತಾ ಓಡಿ ಅಲ್ಲಿಗೆ ಹೋದಾಗ ಭೀಮಶಾ, ಶಿವಾನಂದ, ಅಂಬವ್ವ ಎಲ್ಲರೂ ನನಗೆ ಹೊಡೆ ಬಡೆ ಮಾಡಿ ನೂಕಿದರು ನಾನು ಅಲ್ಲಿಯೇ ಬಿದ್ದಾಗ  ನನ್ನ ಹೆಂಡತಿಯಾದ ಕಸ್ತೂರಿಬಾಯಿ ಇವಳು ಬಿಡಿಸಲು ಬಂದಾಗ ಅವಳಿಗೆ ಅಂಬವ್ವಳು ಕಾಲಿನಿಂದ ಬೆನ್ನ ಮೇಲೆ ಒದ್ದಳು, ರವಿ ಹಾಗೂ ಶಿವಾನಂದ ಇಬ್ಬರೂ ಸೇರಿ ತಮ್ಮ ಮೋಟಾರ ಸೈಕಲ ಮೇಲೆ ಅಪಹರಿಸಿಕೊಂಡು ಹೋಗಿರುತ್ತಾರೆ ಈ ಘಟನೆಯನ್ನು ನಮ್ಮ ಕೇರಿಯವರಾದ ನಾಗಪ್ಪ ತಂದೆ ವಿಶ್ವನಾಥ ಟೇಕರಿ, ರಮೇಶ ತಂದೆ ಸಾತಲಿಂಗಪ್ಪ ಸುತಾರ ಇವರು ಪತ್ಯಕ್ಷವಾಗಿ ನೋಡಿರುತ್ತಾರೆ, ನನ್ನ ಮಗಳನ್ನು ಅಪಹರಣ ಮಾಡಿಕೊಂಡು ಹೋಗಲು ರವಿ ಇತನ ಅಕ್ಕಳಾದ ಸಾವಿತ್ರಿ ಗಂಡ ಶಿವಲಿಂಗಪ್ಪ, ಅವಳ ಗಂಡನಾದ ಶಿವಲಿಂಗಪ್ಪ ಸಾ|| ಇಬ್ಬರೂ ಸವಳಗಿ ಇವರ ಕುಮ್ಮಕ್ಕು ಮತ್ತು ನೆರವು ಇರುತ್ತದೆ. ಕಾರಣ ನನ್ನ ಮಗಳನ್ನು ಅಪಹರಿಸಿಕೊಂಡು ಹೋದ 01] ರವಿ ತಂದೆ ಭೀಮಶಾ ನವರಂಗ, 02] ಶಿವಾನಂದ ತಂದೆ ಭೀಮಶಾ ನವರಂಗ, 03] ಭೀಮಶಾ ತಂದೆ ಕಳಸಪ್ಪ ನವರಂಗ, 04] ಅಂಬವ್ವ ಗಂಡ ಭೀಮಶಾ ನವರಂಗ ಸಾ|| ನಿಂಬರ್ಗಾ ಮತ್ತು ಅಪಹರಿಸಿಕೊಂಡು ಹೋಗಲು ಕುಮ್ಮಕ್ಕು ಕೊಟ್ಟವರಾದ 05] ಸಾವಿತ್ರಿ ಗಂಡ ಶಿವಲಿಂಗಪ್ಪ, 06] ಶಿವಲಿಂಗಪ್ಪ ಸಾ|| ಸಾವಳಗಿ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ನನ್ನ ಮಗಳನ್ನು ನನ್ನ ವಶಕ್ಕೆ ನೀಡಲು ವಿನಂತಿ.  ಸದರಿ ಫಿರ್ಯಾದಿ ಸಾರಾಂಶದ ಮೇಲಿಂದ ನಿಂಬರ್ಗಾ ಪೊಲೀಸ ಠಾಣೆ ಗುನ್ನೆ ನಂ. 68/2015 ಕಲಂ 341, 323, 504, 506, 363, 109 ಸಂ. 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಗಿರುತ್ತದೆ.
ಅಫಜಪೂರ ಪೊಲೀಸ್ ಠಾಣೆ  : ಇಂದು ದಿನಾಂಕ: 21-05-2015 ರಂದು 6:45 ಪಿ.ಎಮ್ ಕ್ಕೆ ಮಾನ್ಯ ಪಿ.ಎಸ್.ಐ  ಸಾಹೇಬರು ವರದಿ ಹಾಜರ ಪಡಿಸಿದ್ದು ವರದಿಯ ಸಾರಾಂಶವೆನೆಂದರೆ ದಿನಾಂಕ: 21-05-2015 ರಂದು ಮದ್ಯಾಹ್ನ 2:00 ಗಂಟೆ ಸುಮಾರಿಗೆ ಅಫಜಲಪೂರ ಪಟ್ಟಣದಲ್ಲಿ ಬಸವೇಶ್ವರ ಸರ್ಕಲ ಹತ್ತಿರ ಇದ್ದಾಗ ಬಾತ್ಮಿ ತಿಳಿದು ಬಂದಿದ್ದೇನೆಂದರೆ, ಮಣೂರ ಗ್ರಾಮದ ಭೀಮಾನದಿಯಲ್ಲಿ ಬ್ರಾಹ್ಮಣ ಪೀಠದ ಹತ್ತಿರ ಟ್ರ್ಯಾಕ್ಟರಗಳಲ್ಲಿ ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬುತ್ತಿದ್ದಾರೆ ಅಂತಾ ಮಾಹಿತಿ ತಿಳಿದು ಬಂದ ಮೇರೆಗೆ ದಾಳಿ ಕುರಿತು ಪಂಚರನ್ನಾಗಿ 1] ರಾಜಕುಮಾರ ತಂದೆ ರಮೇಶ ಸಂಗೋಳಗಿ 2) ಗುರು ತಂದೆ ಲಚ್ಚಪ್ಪ ಜಮಾದಾರ ಸಾ: ಇಬ್ಬರು ಅಫಜಲಪೂರ ರವರನ್ನು ಹಾಗೂ ನಮ್ಮ ಠಾಣೆಯ ಸಿಬ್ಬಂದಿ ಜನರಾದ ಪಿಸಿ-816 ನಾಗರಾಜ, ಪಿಸಿ-820 ವಿಠ್ಠಲ, ಪಿಸಿ-596 ರಮೇಶ, ಪಿಸಿ-1071 ಪಾಂಡುರಂಗ, ಪಿಸಿ-1207 ಸಿದ್ರಾಮ, ಪಿಸಿ-1234 ಇನಿಯುಸ, ಪಿಸಿ-801 ಸುರೇಶ ಇವರನ್ನು ಪಟ್ಟಣದ ಅಂಬೆಡ್ಕರ ಸರ್ಕಲ ಹತ್ತಿರ ಬರಮಾಡಿಕೊಂಡು, ಅವರಿಗೆ ವಿಷಯ ತಿಳಿಸಿ. ಪಂಚರು ಪಂಚರಾಗಲು ಒಪ್ಪಿಕೊಂಡ ನಂತರ, ಪಂಚರು ಮತ್ತು ಸದರಿ ಸಿಬ್ಬಂದಿ ಜನರೊಂದಿಗೆ 2;20 ಪಿ.ಎಮ್ ಕ್ಕೆ ಇಲಾಖಾ ವಾಹನದಲ್ಲಿ ಹೊರಟು, 3:40 ಪಿ ಎಮ್ ಕ್ಕೆ ಮಣೂರ ಗ್ರಾಮದಲ್ಲಿ ಬ್ರಾಹ್ಮಣ ವಿದ್ಯಾಪೀಠದ ಹತ್ತಿರ ಇರುವ ಭೀಮಾ ನದಿಯ ಹತ್ತಿರ ಹೋಗಿ ನಿಂತು ನೋಡಲು, ಭಿಮಾನದಿಯಲ್ಲಿ ಕೆಲವು ಜನರು ಕಳ್ಳತನದಿಂದ ಅಕ್ರಮವಾಗಿ ಎಲ್ಲಾ ಟ್ಯಾಕ್ಟರಗಳಲ್ಲಿ ಮರಳು ತುಂಬುತ್ತಿದ್ದರು, ಸದರಿಯವರು ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡುವಷ್ಟರಲ್ಲಿ ಟ್ರ್ಯಾಕ್ಟರ ಚಾಲಕರೆಲ್ಲರೂ ನಮ್ಮ ಪೊಲೀಸ್ ವಾಹನವನ್ನು ನೋಡಿ ತಮ್ಮ ತಮ್ಮ ಟ್ರ್ಯಾಕ್ಟರಗಳನ್ನು ಅಲ್ಲೇ ಬಿಟ್ಟು ಓಡಿ ಹೋದರು. ನಾವು ಮತ್ತು ಪಂಚರು ಹೋಗಿ ಟ್ರಾಕ್ಟರಗಳನ್ನು ನೋಡಿ ಪರಿಶೀಲಿಸಲಾಗಿ, ಸದರಿ ಎಲ್ಲ ಟ್ರ್ಯಾಕ್ಟರಗಳಲ್ಲಿ ಅಕ್ರಮವಾಗಿ ಕಳ್ಳತನದಿಂದ ಯಾವುದೇ ಪರವಾನಿಗೆ ಇಲ್ಲದೆ ಬೀಮಾ ನದಿಯಿಂದ ಮರಳು ತುಂಬಿ ಸಾಗಾಣೆ ಮಾಡುತ್ತಿದ್ದ ಟ್ರ್ಯಾಕ್ಟರಗಳಲ್ಲಿನ ಮರಳಿನ .ಕಿ 36000 ರೂಪಾಯಿ ಆಗಬಹುದು, ಸದರಿ ಟ್ರ್ಯಾಕ್ಟರಗಳನ್ನು ಮರಳು ಸಮೇತ ಪಂಚರ ಸಮಕ್ಷಮ ಇಂದು ದಿನಾಂಕ 21-05-2015 ರಂದು 3:50 ಪಿ ಎಮ್ ದಿಂದ 4:50 ಪಿ ಎಮ್ ವರೆಗೆ ಜಪ್ತಿ ಪಂಚನಾಮೆ ಮೂಲಕ ವಶಪಡಿಸಿಕೊಂಡೆನು, ಸದರಿ ಓಡಿ ಹೊದ ಟ್ಯಾಕ್ಟರ ಚಾಲಕರ ಹೆಸರು ವಿಳಾಸ ನಮ್ಮ ಬಾತ್ಮಿದಾರರಿಂದ ತಿಳಿದು ಬಂದಿದ್ದು, 1) ರಾಜು ಕೋಳಿ ಸಾ: ಮಣೂರ 2) ಮೈಹಿಬೂಬ ತಂದೆ ಮೈನುದ್ದಿನ ಶಿರವಾಳ ಸಾ: ಮಾಶಾಳ 3) ಮಾಹಾದೇವ ತಂದೆ ಚಂದಪ್ಪ ಮಾಳಿ ಸಾ: ಅಥಣಿ 4) ಸುರೇಶ ತಂದೆ ಗುರುಬಾಳಪ್ಪ ಪ್ಯಾಟಿ ಸಾ: ಮಣೂರ 5) ಅಂಕುಶ ತಂದೆ ಸಿದ್ದಪ್ಪ ಮಾಂಗ ಸಾ: ಮಣೂರ 6) ಪ್ರಕಾಶ ತಂದೆ ಮಾಹಾದೇವ ಕರೂಟಿ ಸಾ: ಮಣುರ 7) ಯಲ್ಲಪ್ಪ ವಾಹಿ ಸಾ: ಮಣೂರ 8) ಲಕ್ಷ್ಮಣ ತಂದೆ ಮಲ್ಕಪ್ಪ ಕೋನಳ್ಳಿ ಸಾ: ಮಣೂರ 9) ರಾಮ ತಂದೆ ಹಣಮಂತ ಮಾಂಗ ಸಾ: ಮಣೂರ 10) ರತ್ನು ತಂದೆ ಸಂಗಪ್ಪ ಹರನಾಳ (ವರನಾಳಸಾ: ಮಣೂರ 11) ಸಂಜಯ ತಂದೆ ಲಕ್ಷ್ಮಣ ಸಿಂಧೆ ಸಾ: ಅಥಣಿ 12) ತಿಪ್ಪಣ್ಣ ತಂದೆ ಗುರುಬಾಳಪ್ಪ ಕರೂಟಿ ಸಾ: ಶಿವಬಾಳ ನಗರ 13) ಅಮೀನಸಾಬ ತಂದೆ ಮಕ್ತುಮಸಾಬ ಚಿಕ್ಕಮಣೂರ ಸಾ: ಮಣೂರ ಇದ್ದಿರುತ್ತಾರೆ ಅಂತಾ ತಿಳಿದುಬಂದಿರುತ್ತದೆ. ಸದರಿ ಎಲ್ಲಾ ಟ್ಯಾಕ್ಟರಳನ್ನು ಮಾಶಾಳ ಉಕ್ಕಡ ಠಾಣೆಯಲ್ಲಿ ನಿಲ್ಲಿಸಿ, 6:45 ಪಿ ಎಮ್ ಕ್ಕೆ ಠಾಣೆಗೆ ಬಂದು ಸದರಿ ಭೀಮಾನದಿಯಲ್ಲಿ ಯಾವುದೆ ಪರವಾನಿಗೆ ಇಲ್ಲದೆ ಅಕ್ರಮವಾಗಿ ಕಳ್ಳತನದಿಂದ ಟ್ಯಾಕ್ಟರಳಲ್ಲಿ ಮರಳು ತುಂಬುತ್ತಿದ್ದ ಮೇಲೆ ತಿಳಿಸಿದ ಟ್ಯಾಕ್ಟರ ಚಾಲಕರ ಮೇಲೆ ಹಾಗೂ ಸದರಿ ಟ್ಯಾಕ್ಟರ ಮಾಲಿಕರ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ಸೂಚಿಸಿ ವರದಿ ನೀಡಿದ್ದು ಇರುತ್ತದೆ. ಅಂತ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 139/2015  ಕಲಂ 379  ಐಪಿಸಿ ಮತ್ತು ಕಲಂ: 21 (1) Mines and Minaral Development and Regulation Act 1957 ಅಡಿಯಲ್ಲಿ ಪ್ರಕರಣ ದಾಖಗಿರುತ್ತದೆ.
ಚೌಕ ಪೊಲೀಸ್ ಠಾಣೆ : ಅಪರಿಚಿತ ಹೆಣ್ಣು ಮಗಳು ಅಂದಾಜು 60-65 ವಯಸ್ಸಿನ ಇಂದು ದಿನಾಂಕ 21.05.2015 ರಂದು 5-30 ಪಿ.ಎಂ.ಕ್ಕೆ ಪಿರ್ಯಾಧಿ ಶ್ರೀ ಬಸೀರ ಅಹ್ಮದ ತಂದೆ ಸಲಾಮ ಅಹ್ಮದ ಜೆಲ್ಲಿ ವ: 33 ಉ: ವೆಲ್ಡಿಂಗ ಕೆಲಸ ಜಾತಿ: ಮುಸ್ಲಿಂ ಸಾ: ಮೋಮಿನಪುರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದೆನೆಂದರೆ ದಿನಾಂಕ 21.05.2015 ರಂದು ಬೆಳ್ಳಿಗ್ಗೆ 10 ಗಂಟೆಗೆ ನಮ್ಮ ವೆಲ್ಡಿಂಗ ಅಂಗಡಿಗೆ ಬಂದು ಕೆಲಸ ಮಾಡುತ್ತಿರುವಾಗ ಒಬ್ಬ ವಯಸ್ಸಾದ ಹೆಣ್ಣು ಮಗಳು ಅಂದಾಜು 60-65 ವಯಸ್ಸು ಅವಳು ದಿನಾಲು ಒಕ್ಕಲುಗೇರಾ ಬಡಾವಣೆಯಲ್ಲಿ ಭಿಕ್ಷೆ ಬೇಡಿ ಉಟ ಮಾಡುವುದು ಅಲ್ಲದೆ ನಮ್ಮ ಅಂಗಡಿಯ ಎದುರುಗಡೆಯಿಂದ  ಹೋಗಿ ಬರುವ ಜನರಿಗೆ ಭಿಕ್ಷೆ ಬೇಡುತ್ತಾ ಇರುತ್ತಿದ್ದಳು. ಬಿಸಿಲಿನ ತಾಪಕ್ಕೆ ತಾಳಲಾರದೇ ಬಡಾವಣೆಯಲ್ಲಿರುವ ಅಲ್ಲಿ ಇಲ್ಲಿ ನೆರಳಿಗೆ ಮಲಗುತ್ತಿದ್ದಳು ಅದರಂತೆ ಇವತ್ತು ಕೂಡಾ ಭಿಕ್ಷೆ ಬೇಡಿ ಕೊಂಡು ಊಟ ಮಾಡಿ ತಿರುಗಾಡುತ್ತಾ  ಹನುಮಾನ ಗುಡಿಯ ಕಟ್ಟೆಯ ಮೇಲೆ  ಮಲಗಿಕೊಂಡಿದ್ದು ಅವಳು ಪ್ರತಿ ದಿವಸ ಹಾಗೇ ಮಲಗಿಕೊಳ್ಳುವುದ್ದರಿಂದ ನಾವು ಸುಮ್ಮನಾಗಿದ್ದು ನಂತರ ಸಾಯಂಕಾಲ 4:30 ಗಂಟೆಯ ಸುಮಾರಿಗೆ ನೋಡಿದ್ದಾಗ ಆ ವಯಸ್ಸಾದ ಹೆಣ್ಣು ಮಗಳ ಮುಖದ ಮೇಲೆ ನೋಣಗಳು ಇರುವುದರಿಂದ ನಾವು ಸದರಿಯವಳಿಗೆ ಹೊರಳಾಡಿಸಿ ನೋಡಲು ಸದರಿಯವಳು ಮೃತ ಪಟ್ಟಿದ್ದು ಕಂಡು ಬರುತ್ತದೆ. ಸದರಿಯವಳು ಯಾವುದೂ ಒಂದು ಕಾಯಿಲೆಯಿಂದ ನರಳುತ್ತಾ ಮತ್ತು ಬಿಸಿಲಿನ ತಾಪತಾಳದೇ ಮೃತ ಪಟ್ಟಿರಬಹುದು ಸದರಿಯವಳ ಹತ್ತಿರ ಯಾವುದೆ ಕುರಹುಗಳು ಪತ್ತೆಯಾಗಿರುವದಿಲ್ಲ. ಸದರಿಯವಳ ವಯಸ್ಸು 60-65 ಇರುಬಹುದು ಕೆಂಪ್ಪು ಬಣ್ಣದ ಸೀರೆ, ಕೆಂಪ್ಪು ಬಣ್ಣದು ಕುಪ್ಪುಸ, ಕಪ್ಪನೆಯ ಕೂದಲು, ಸಾದಾಕಪ್ಪು ಬಣ್ಣ, ಮುಖದ ಮೇಲೆ ಹಚ್ಚೆ ಹಾಕಿದ್ದು  ಇರುತ್ತವೆ, ಎತ್ತರ 5 1’’ ಅಡಿ ಇರಬಹುದು.  ಕಾರಣ ಅಪರಿಚಿತ 60-65 ವಯಸ್ಸಿನವಳು ಹೆಣ್ಣು ಮಗಳು ಯಾವುದೂ ಕಾಯಿಲೆಯಿಂದ ನರಳುತ್ತಾ ಹಾಗು ಬಿಸಿಲಿನ ತಾಪತಾಳದೇ ಮೃತ ಪಟ್ಟಿರಬಹುದು ಈ ಬಗ್ಗೆ ಮುಂದಿನ ಕ್ರಮ ಕೈಕೊಳ್ಳಲು ವಿನಂತಿ. ಅಂತಾ ವಗೈರೆ ಪಿರ್ಯಾಧಿಯ ಸಾರಾಂಶದ ಮೇಲಿಂದ ಯು.ಡಿ.ಆರ್ ನಂ. 8/2015 ಕಲಂ. 174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಗಿರುತ್ತದೆ.