POLICE BHAVAN KALABURAGI

POLICE BHAVAN KALABURAGI

31 January 2016

KALBURAGI DISTRICT REPORTED CRIMES.

ಮುಧೋಳ  ಠಾಣೆ : ದಿನಾಂಕ: 30.01.2016 ರಂದು ಮಧ್ಯಾಹ್ನ 1230 ಗಂಟೆಗೆ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಫೀರ್ಯಾದಿ ಬಸ್ಸಮ್ಮ ಗಂಡ ಬಿಚ್ಚಪ್ಪಾ ವ: 58 ಜಾ: ಮಾದಿಗ ಸಾ: ಪಾಕಲ ಗ್ರಾಮ ಇವಳು ಕನ್ನಡದಲ್ಲಿ ಬರೆದ ಫೀರ್ಯಾದಿ ಅರ್ಜಿ ಸಾರಂಶವೆನೆಂದರೆ, ನನ್ನ ಗಂಡ ಬಿಚ್ಚಪ್ಪ ತಂದೆ ದೇವಪ್ಪ ವ: 60 ಇದ್ದು, ಪಿಕೆಜಿಬಿ ಬ್ಯಾಂಕ ಯಾನಾಗುಂದಿ ಯಲ್ಲಿ 53 ಸಾವಿರ ರೂಪಾಯಿ ಬೆಳೆ ಸಾಲ ತೆಗೆದುಕೊಂಡಿದ್ದು ಮತ್ತು ನಮ್ಮ ಪಾಕಲ ಊರಿನ ಗುರುನಾಥ ರೆಡ್ಡಿ ಪಾಟೀಲ ಇವರ ಹತ್ತಿರ ಸಾಲವನ್ನು ತೆಗೆದುಕೊಂಡಿರುತ್ತಾರೆ. ಗುರುನಾಥ ರೆಡ್ಡಿ ಇವರು ದಿನನಿತ್ಯಾ ನಮ್ಮ ಮನೆಗೆ ಬಂದು ನನ್ನ ಗಂಡನಿಗೆ ಮಾನಸಿಕ ಹಿಂಸೆ ಕೊಡುತ್ತಿದ್ದರು. ಅಲ್ಲದೆ ಗುರುನಾಥ ರೆಡ್ಡಿ ಇವರು ದಿನಾಂಕ: 28.01.2016 ರಂದು ಬೆಳಗ್ಗೆ 0830 ಗಂಟೆಗೆ ನಮ್ಮ ಮನೆಗೆ ಬಂದು ನನ್ನ ಗಂಡನಾದ ಬಿಚ್ಚಪ್ಪ ಇತನಿಗೆ ಮಾದಿಗ ಸೂಳ್ಯಾ ಮಗನೆ ನನ್ನ ಹತ್ತಿರ ತೆಗೆದುಕೊಂಡಿರುವ ಸಾಲವನ್ನು ನೀಡಿದ್ದರೆ, ನಿನಗೆ ಕೊಲೆ ಮಾಡುತ್ತೇನೆ ಎಂದು ಜಾತಿನಿಂದನೆ ಮತ್ತು ಜೀವದ ಬೇದರಿಕೆ ಹಾಕಿರುತ್ತಾನೆ. ದಿನಾಂಕ: 29-01-2016 ರಂದು ನನ್ನ ಗಂಡ ದಿನ ನಿತ್ಯ ಹೊಲಕ್ಕೆ ಹೊಗುವಂತೆ ಈ ಸದರಿ ದಿನಾಂಕದಂದ್ದು, ಬೆಳಗ್ಗೆ ಹೊಲಕ್ಕೆ ಹೊಗಿರುತ್ತಾನೆ. ಹೊಲದಿಂದ ಬರಲು ತಡವಾದ ಕಾರಣ ನನ್ನ ಮಗನಾದ ತಿಪ್ಪಣ್ಣ ತಂದೆ ಬಿಚ್ಚಪ್ಪ ಇತನು ನಿನ್ನೆ ಮುಂಜಾನೆ 1040 ಗಂಟೆ ಸುಮಾರಿಗೆ ಹೊಲಕ್ಕೆ ಹೋಗಿ ನೋಡಿದಾಗ ಹೊಲದಲ್ಲಿ ನನ್ನ ಗಂಡ ವಿಷ ಸೇವಿಸಿ ನೇಲಕ್ಕೆ ಬಿದಿದ್ದು ಕಂಡು ಬಂದು ನನ್ನ ಮಗನು ಓಡಿ ಹೋಗಿ ನನ್ನ ಗಂಡನಿಗೆ ಉಪಚಾರ ಕುರಿತು ಮುಧೋಳ ಆಸ್ಪತ್ರೆಗೆ ತೆಗೆದುಕೊಂಡು ಹೊಗಿ ತೋರಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಕಲಬುರಗಿ ಸರಕಾರಿ ಆಸ್ಪತ್ರೆಗೆ ತರಲಾಯಿತು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ: 29-01-2016 ರಂದು 1030 ಗಂಟೆಗೆ ನನ್ನ ಗಂಡನು ಮೃತ ಪಟ್ಟಿದ್ದು, ಇದ್ದಕ್ಕೆ ಮೂಲ ಕಾರಣ ಗುರುನಾಥ ರೆಡ್ಡಿ ಯವರು ಜಾತಿನಿಂದನೆ ಹಾಗು ಮಾನಸಿಕ ಕಿರುಕುಳ ನೀಡಿದ್ದರಿಂದ ನನ್ನ ಗಂಡ ವಿಷ ಸೇವಿಸಿ ಸಾವನ್ನಪ್ಪಿರುತ್ತಾನೆ. ಆದ ಕಾರಣ ಇವರ ಮೇಲೆ ಕಾನೂನಿನ  ಕ್ರಮ ಕೈಕೊಂಡು ನಮಗೆ ನ್ಯಾಯ ದೋರಕಿಸಿಕೊಡಬೇಕು ಅಂತಾ ಫೀರ್ಯಾದಿ ಅರ್ಜಿ ಕೊಟ್ಟಿದ್ದನ್ನು ಲಕ್ಷ್ಮಿಕಾಂತ ಎ.ಎಸ್.ಐ ಮುದೋಳ ಠಾಣೆ ರವರು ಸರಕಾರಿ ಆಸ್ಪತ್ರೆ ಕಲಬರಗಿ ರವರಲ್ಲಿ ಪಡೆದುಕೊಂಡು ಪಿಸಿ 340 ಅಂಬಾರಾಯ ಇವರ ಮುಖಾಂತರ ಠಾಣೆಗೆ ಕಳುಹಿಸಿದ್ದು, ಸದರಿ ಪಿಸಿ ರವರು ಇಂದು 02:30 ಗಂಟೆಗೆ ಕಲಬುರಗಿ ಆಸ್ಪತ್ರೆಯಿಂದ ಸದರಿ ಫಿರ್ಯಾದಿ ಅರ್ಜಿಯನ್ನು ಠಾಣೆಗೆ ತಂದು ಹಾಜರ ಪಡಿಸಿದ್ದರ ಸಾರಂಶದ ಮೇಲಿಂದ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಮುಧೋಳ  ಠಾಣೆ : ದಿನಾಂಕ: 30.01.2016 ರಂದು ಸಾಯಂಕಾಲ 1600 ಗಂಟೆಗೆ ಫೀರ್ಯಾದಿ ಶ್ರಿಮತಿ ವೆಂಕಟಮ್ಮ ಗಂಡ ವೆಂಕಟಪ್ಪ ಸಿವಾಪ್ಪೋಳ ಸಾ: ಬುರುಗಪಲ್ಲಿ ತಾ: ಸೇಡಂ. ಇವಳು ಠಾಣೆಗೆ ಹಾಜರಾಗಿ ಹೇಳಿಕೆ ಫೀರ್ಯಾದಿ ಕೊಟ್ಟ ಸಾರಂಶವೆನೆಂದರೆ, ನನಗೆ ಇಬ್ಬರು ಗಂಡಸು ಮಕ್ಕಳು ಹಾಗು ಒಬ್ಬಳು ಹೆಣ್ಣು ಮಗಳು ಇರುತ್ತಾಳೆ ನನ್ನ ಗಂಡ ವೆಂಕಟಪ್ಪಾ ತಂದೆ ಕಾಶಪ್ಪಾ ಇವರ ಹೆಸರಿನಿಂದ ಒಂದುವರೆ ಎಕರೆ ಹೊಲವಿದ್ದು ಈ ಹೊಲದ ಮೇಲೆ ಇಗ 5-6 ವರ್ಷಗಳ ಹಿಂದೆ ಪಿ.ಕೆ.ಜೇ.ಬಿ ಬ್ಯಾಂಕ ಯಾನಾಗುಂದಿ ಶಾಖೆಯಲ್ಲಿ 15000/- ರೂ ಸಾಲ ಮಾಡಿದ್ದು ಮಳೆ ಸರಿಯಾಗಿ ಆಗದೆ ಬೇಳೆ ಆಗದಿದ್ದರಿಂದ ಇದುವರೆಗೆ ಬ್ಯಾಂಕಿನ ಸಾಲಾ ತಿರಿಸಿರುವದಿಲ್ಲಾ ಸಾಲಾ ಹಾಗು ಬಡ್ಡಿ ಹಾಗೆ ಇರುತ್ತದೆ  ನನ್ನ ಮಗಳು ಕವೀತಾ 8 ವರ್ಷ ಇವಳಿಗೆ ಇಗ 6 ತಿಂಗಳ ಹಿಂದೆ ಮೈಯಲ್ಲಿ ಆರಾಮ ಇಲ್ಲದ್ದರಿಂದ ಇವಳಿಗೆ ಹೈದ್ರಾಬಾದನಲ್ಲಿ ದವಖಾನೆಗೆ ತೊರಿಸಿದ್ದು ಇವಳ ದವಖಾನೆಖರ್ಚು ಸುಮಾರು 2 ಲಕ್ಷ ರೂ ಆಗಿದ್ದು ಈ 2 ಲಕ್ಷ ರೂ ಯನ್ನು ನಮ್ಮ ಅಣ್ಣನಾದ ಮೊಗಲಪ್ಪಾ ತಂದೆ ಕಾಶಪ್ಪಾ ಗುಂಡನೋಳ ಸಾ|| ಮೊಗಲಮಡಕಾ ಇವರ ಹತ್ತಿರ ತಂದು ದವಖಾನೆಯ ಬಿಲ್ ಕಟ್ಟಿದ್ದು  ಇರುತ್ತದೆ.ನನ್ನ ಗಂಡನು ಒಕ್ಕಲುತನ ಹಾಗು ಕೂಲಿ ಕೆಲಸ ಮಾಡಿಕೊಂಡು ಊರಲ್ಲಿ ಇರುತಿದ್ದು ಇಗ 2-3 ತಿಂಗಳಿಂದ ನನ್ನ ಗಂಡನು ನಮಗೆ ಬಾಕಿ ಜಾಸ್ತಿಯಾಗಿದೆ ನಾವು ಸಾಲ ಹೇಗೆ ತಿರಿಸುವದು ಅಂತಾ ಮಾನಸಿಕ ಮಾಡಿಕೊಂಡು ದಿನಾಲು ಚಿಂತೆ ಮಾಡುತಿದ್ದನು ಇಗ 8 ದಿನಗಳಿಂದ ನನ್ನ ಗಂಡ ಕೆಲಸಕ್ಕೆ ಹೊಗದೆ ಮನೆಯಲ್ಲಿ ಮಲಗಿಕೊಂಡಿದ್ದನು ನಾನು ನನ್ನ ಗಂಡನಿಗೆ ಯಾಕೆ? ಚಿಂತೆ ಮಾಡುತ್ತಾ ಮಲಗಿದ್ದಿ ಎನು ಚಿಂತೆ ಮಾಡಬೇಡ ಕೂಲಿ ನಾಲಿ ಮಾಡಿ ಬಾಕಿ ಕಟ್ಟೋಣ ಅಂತಾ ದೈರ್ಯ ಹೇಳುತಿದ್ದೆನು. ದಿನಾಂಕ 30-01-2016 ರಂದು ಬೇಳಗ್ಗೆ 11-30 ಗಂಟೆ ಸುಮಾರಿಗೆ ನನ್ನ ಗಂಡ ವೆಂಕಟಪ್ಪಾ ತಂದೆ ಕಾಶಪ್ಪಾ ಶಿವಪ್ಪೋಳ ಇವರು ನಮ್ಮ ಅಡುಗೆ ಮನೆಯಲ್ಲಿ ಮಲಗಿಕೊಂಡಿದ್ದರು.ನಮ್ಮುರಲ್ಲಿ ಇಂದು ನಮ್ಮ ಕುಲದವರು ಸತ್ತಿದ್ದರಿಂದ ನಾನು ಸತ್ತವರ ಮನೆಗೆ ಹೊಗಿದ್ದೆನು ಇಂದು ಮದ್ಯಾನ 1-30 ಗಂಟೆ ಸುಮಾರಿಗೆ ನಾನು ತಿರುಗಿ ಮನೆಗೆ ಬಂದಾಗ ನನ್ನ ಗಂಡ ವೆಂಕಟಪ್ಪಾ ತಂದೆ ಕಾಶಪ್ಪಾ ಇವರು ನಮ್ಮ ಅಡುಗೆ ಮನೆಯಲ್ಲಿ ಮೇಲೀನ ತೊಲೆಗೆ ಇದ್ದ ಕಬ್ಬಿಣದ  ಕೊಂಡಿಗೆ ಸೆಲ್ಲಾ[ ಟಾವಲದಿಂದ] ಕುತ್ತಿಗೆಗೆ ಊರುಲು ಹಾಕಿಕೊಂಡು ಜೊತುಬಿದ್ದಿದ್ದು ಇದನ್ನು ನೋಡಿ ನಾನು ಚಿರುತ್ತಾ ಹೊರಗೆ ಬಂದಾಗ ಅಲ್ಲೆ ಇದ್ದು ನಮ್ಮ ಮನೆಯ ಅಕ್ಕಪಕ್ಕದವರಾದ ಪೆಂಟಪ್ಪಾ ತಂದೆ ಮೊಗಲಪ್ಪಾ ದೊಡ್ಡಬುಗ್ಗೋಳ, ಮತ್ತು ಬುಗ್ಗಪ್ಪಾ ತಂದೆ ಸಾಬಣ್ಣಾ ದೊಡ್ಡಬುಗ್ಗೋಳ, ಮೊಗಲಪ್ಪಾ ತಂದೆ ಕಾಶಪ್ಪಾ ಪಿಲ್ಲಿಗುಂಡ್ಲಾ, ಹಾಗು ವೆಂಕಟಪ್ಪಾ ತಂದೆ ರಾಮಪ್ಪಾ ಗಿದ್ದಬಾವಿ ಇವರುಗಳು ಓಡಿ ಬಂದು ನನ್ನ ಗಂಡ ಜೀವಂತ ಇರಬಹುದು ಅಂತಾ ಉರುಲು ಹಾಕಿಕೊಂಡಿದ್ದನ್ನು ಕುಡುಗೊಲುದಿಂದ ಕೊಯ್ದು ಕೇಳಗೆ  ಹಾಕಿ ನೊಡಲಾಗಿ ನನ್ನ ಗಂಡನು ಮೃತ ಪಟ್ಟಿದ್ದನು .ನನ್ನ ಗಂಡ ವೆಂಕಟಪ್ಪಾ ತಂದೆ ಕಾಶಪ್ಪಾ ಇವರು ಬ್ಯಾಂಕಿನಲ್ಲಿ ಹಾಗು ಖಾಸಗಿ ಸಾಲಾ ಜಾಸ್ತಿಯಾಗಿದೆ ಅಂತಾ ಚಿಂತೆ ಮಾಡಿ ಮಾನಸಿಕ ಮಾಡಿಕೊಂಡು ಅದೆ ಕೊರಗಿನಲ್ಲಿ  ಇಂದು ದಿನಾಂಕ 30-01-2016 ರಂದು ಮದ್ಯಾನ 1-30 ಗಂಟೆ ಸುಮಾರಿಗೆ ಮನೆಯಲ್ಲಿ ಊರುಲು ಹಾಕಿಕೊಂಡು ಮೃತಟ್ಟಿದ್ದು ನಾನು ನಮ್ಮೂರ ಹಿರಿಯರಾದ ಸತ್ಯಾನಾರಾಯಣರೆಡ್ಡಿ ಪಾಟೀಲ ಇವರ ಜೊತೆಯಲ್ಲಿ ಇಂದು  ಠಾಣೆಗೆ ಬಂದು ಈ ಬಗ್ಗೆ ಕಾನೂನು ಕ್ರಮ ಜರುಗಿಸಲು ಹೇಳಿಕೆ ಫೀರ್ಯಾದಿ ಕೊಟ್ಟ ಸಾರಂಶದ ಮೇಲಿಂದ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.

27 January 2016

Kalaburagi District Reported Crimes

ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 25.01.2016 ರಂದು ಮಧ್ಯಾಹ್ನ ೦1:30 ಗಂಟೆಗೆ ನನ್ನ ಗಂಡನು ತನ್ನಮೋಟಾರು ಸೈಕಲ್‌ ನಂ ಕೆ.ಎ32ಆರ್‌5774 ನೇದ್ದನ್ನು ಚಲಾಯಿಸಕೊಂಡು ಜೇವರಗಿಯಿಂದ ಇಟಂಗಿ ಭಟ್ಟಿಯ ಕಡೆಗೆ ಹೋಗುವ ಕುರಿತು ಜೇವರಗಿ ಹೊರವಲಯದ ಗಡ್ಡಿ ಪೂಲ್ ಹತ್ತಿರ ಜೇವರಗಿ ಕಲಬುರಗಿ ರಸ್ತೆ ಮೇಲೆ ಹೋಗುತ್ತಿದ್ದಾಗ ಟಂಟಂ ನಂ ಕೆ.ಎ32ಸಿ1475 ನೇದ್ದರ ಚಾಲಕನು ತನ್ನ ಟಂಟಂ ಅನ್ನು ಅತಿ ವೇಗ  ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನನ್ನ ಗಂಡನ ನಡೆಸುತ್ತಿದ್ದ ಮೋಟಾರು ಸೈಕಲ್‌ ಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿದ್ದರಿಂದ ನನ್ನ ಗಂಡನ ತಲೆಗೆ ಭಾರಿ ಗುಪ್ತ ಗಾಯವಾಗಿದ್ದು ಚಿಕಿತ್ಸೆ ಕುರಿತು ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಉಪಚಾರ ಫಲಕಾರಿಯಾಗದೆ ಇಂದು ದಿನಾಂಕ 26.01.2016 ರಂದು ಮುಂಜಾನೆ 06:35 ಗಂಟೆಗೆ ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ ಗೀತಾ ಗಂಡ ಜೀತೇಂದ್ರ ಹಳಿಮನಿ ಸಾ|| ಲಕ್ಷ್ಮಿ ಚೌಕ್ ಜೇವರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿರ್ಲಕ್ಷತನದಿಂದ ಸಾವು ಪ್ರಕರಣ :
ಚೌಕ ಠಾಣೆ : ಶ್ರೀಮತಿ ಶರಣಮ್ಮಾ ಗಂಡ ರಾಜಶೇಖರ ಬಟಗೇರಿ ಸಾ: ಶಿವಾಜಿ ನಗರ ಕಲಬುರಗಿ ರವರ ಗಂಡ ರಾಜಶೇಖರ ತಂದೆ ಚಂದ್ರಪ್ಪ  ಬಟಗೇರಿ ಉ: ಲಾರಿ ಚಾಲಕನಿದ್ದು  ಇವರು ತಾವೆ ಸ್ವಂತವಾಗಿ ಲಾರಿ ನಂ. ಎಮ್.ಎಚ್.-13 ಜಿ- 1185 ಖರೀಧಿಸಿದ್ದು ಈ ಲಾರಿಯ ಮೇಲೆ ಕಲಬುರಗಿಯಲ್ಲಿಯೆ ಬಾಡಿಗೆ ಹೊಡೆಯುತ್ತಿದ್ದರು ಏಥಾ ಪ್ರಕಾರ ಇಂದು ದಿನಾಂಕ 26/01/2016 ರಂದು ಬೆಳಿಗ್ಗೆ ನನ್ನ ಗಂಡ ರಾಜಶೇಖರ @ ರಾಜು ಇವರು ನಮ್ಮ ಲಾರಿ ನಡೆಸುವ ಕುರಿತು ಮನೆಯಿಂದ ಹೋಗಿರುತ್ತಾರೆ. ನಾನು ಮನೆಯಲ್ಲಿಯೆ ಇದ್ದಾಗ ನಮ್ಮ ಗಂಡನಿಗೆ ಪರಿಚಯದವರಾದ ಸುರೇಶ ತಂದೆ ರಾಯಪ್ಪ ಪೂಜಾರಿ ಇವರು ಮದ್ಹಾಹ್ನ 3-30 ಗಂಟೆ ಸುಮಾರಿಗೆ ನಮ್ಮ ಮನೆಗೆ ಬಂದು ಮಾಹಿತಿ ತಿಳಿಸಿದ್ದೇನೆಂದರೆ ನಿಮ್ಮ ಗಂಡನವರಾದ ರಾಜಶೇಖರ ತಂದೆ ಚಂದ್ರಪ್ಪ ಬಟಗೇರಿ ಇವರು ನಿಮ್ಮ ಲಾರಿ ನಂ. ಎಮ್.ಎಚ್.-13 ಜಿ-1185 ಈ ಗಾಡಿಯ ಮುಕ್ಕಾ ಅಡತಿ ಅಂಗಡಿ ನೆಹರು ಗಂಜ ಎದುರುಗಡೆ ಹತ್ತಿರ ಚಾಲು ಆಗದೇ ಇದ್ದುದ್ದರಿಂಧ ಗಾಡಿಯಿಂದ ಕೆಳಗೆ ಇಳಿದು ಎದುರುಗಡೆ ಇರುವ ಸೇಲ್ಪ ಸ್ಟಾಟರಿಗೆ ಕಲ್ಲಿನಿಂದ ಹೊಡೆದು ಚಾಲು ಮಾಡಲು ಹೋದಾಗ ಲಾರಿಯ ಸ್ಟಾಟರ ಒಮ್ಮೇಲೆ ಲಾರಿ ಚಾಲು ಆಗಿ ಅವರ ಮೈಮೆಲೆ ಹರಿದು ತುಂಬಾ ಗಾಯಹೊಂದಿದ್ದು ಉಪಚಾರಕ್ಕಾಗಿ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತೇವೆ . ನೀವು ಕೋಡಲೇ ಬನ್ನಿರಿ ಅಂತಾ ತಿಳಿಸಿದ್ದರಿಂದ ನಾನು ಗಾಬರಿಯಾಗಿ ನಾನು ನನ್ನ ಮಕ್ಕಳು ಇತರೆ ನೋಡಿದ ಜನರು ಆಸ್ಪತ್ರೆಗೆ 5 ಗಂಟೆ ಸುಮಾರಿಗೆ ಸರಕಾರಿ ಆಸ್ಪತ್ರೆಗೆ ಬಂದು ನನ್ನ ಗಂಡ ರಾಜಶೇಖರ @ ರಾಜು ತಂದೆ ಚಂದ್ರಪ್ಪ ಬಟಗೇರಿ ಇವರಿಗೆ ನೊಡಿದ್ದು ಆಗಲೇ ಅವರು ಮೃತ ಪಟ್ಟಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಹಲ್ಲೆ ಪ್ರಕರಣ :
ಜೇವರ್ಗಿ ಠಾಣೆ : ಶ್ರೀಮತಿ ಲಕ್ಷ್ಮಿ ಗಂಡ ಹಣಮಂತ್ರಾಯ ಇಜೇರಿ ದಿನಾಂಕ 26.01.2016 ರಂದು ಮಧ್ಯಾಹ್ನ ನಾನು ನಮ್ಮ ಹೋಲದ ಸಮೀಪ ರೋಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅದೇ ವೇಳೆಗೆ ಮುತ್ತಪ್ಪ ತಂದೆ ಮರೆಪ್ಪ ಶಾಸ್ತ್ರಿ ಸಾ: ಮಾರಡಗಿ ಎಸ್.ಎ  ಇವನು ನನಗೆ ತಡೆದು ನಿಲ್ಲಿಸಿ ನಾನು ಹೇಳಿದಂತೆ ನೀನು ಮಾಡಬೇಕು ಒಂದು ವೇಳೆಗೆ ಮಾಡದಿದ್ದರೆ ನಿನಗೆ ಬಿಡುವದಿಲ್ಲ ಅಂತ ಅಂದು ನನಗೆ ಅವಾಚ್ಯವಾಗಿ ಬೈದು ಕೈ ಹಿಡಿದು ಜಗ್ಗಾಡಿ ಮತ್ತು ಮೈ ಮೇಲಿನ ಬಟ್ಟೆ ಎಳೆದು ಮಾನಭಂಗ ಮಾಡಿ ನಮಗೆ ಹೊಡೆ-ಬಡೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿನಿಂದನೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ಜೇವರ್ಗಿ ಠಾಣೆ : ಶ್ರೀ ಮುತ್ತಪ್ಪ ತಂದೆ ಮರೆಪ್ಪ ಶಾಸ್ತ್ರಿ ಸಾ: ಮಾರಡಗಿ ಎಸ್.ಎ ಇವರಿಗೆ  ದಿನಾಂಕ 26.01.2016 ರಂದು ಮುಂಜಾನೆ ಮಲ್ಲಣ್ಣ ಇವರ ಹೊಲದಲ್ಲಿ 1 ಮಲ್ಲಣ್ಣಾ ತಂದೆ ಶಿವಪುತ್ರ  ಇಜೇರಿ  2. ಹಣಮಂತ ತಂದೆ ಶಿವುತ್ರಪ್ಪ ಇಜೇರಿ 3. ಸುರೇಶ ತಂದೆ ಶಿವಶರಣಪ್ಪ ಜೈನಾಪೂರ  ಸಾ: ಎಲ್ಲರೂ ಮಾರಡಗಿ ಎಸ್.ಎ  4. ಶರಣಪ್ಪ ತಂದೆ ಸಾಯಿಬಣ್ಣಾ ಸಾ: ಮುಡಬೂಳ  5. ಗೋಪಾಲ ತಂದೆ ಸಾಯಿಬಣ್ಣಾ ಸಾ: ಎಲ್ಲರು ಮುಡಬೂಳ  ಎಲ್ಲರು ಕೂಡಿಕೊಂಡು ನನ್ನೊಂದಿಗೆ ಹತ್ತಿ ಬೀಜದ ಲೆಕ್ಕಪತ್ರದ ವಿಷಯದಲ್ಲಿ ಜಗಳ ತೆಗೆದು ನನಗೆ ಏ ಹೋಲೆ ಸೂಳೆ ಮಗನೆ ಅಂತ ಅವಾಚ್ಯವಾಗಿ ಬೈದು ಕೈಯಿಂದ, ಚಪ್ಪಲಿಯಿಂದ, ಬಡಿಗೆಯಿಂದ ಮತ್ತು ಕಲ್ಲಿನಿಂದ ಹೊಡೆ ಬಡೆ ಮಾಡಿ ಅಲ್ಲದೆ ನನಗೆ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

25 January 2016

DRONE CAMERAS.

ಕ್ವಾಡ ಕ್ಯಾಪ್ಟರ್ (ಡ್ರೋನ್)






1) ಡಿ.ಜೆ.ಐ. ಪ್ಯಾಂಟಮ್ 3 ಸೌತ ಕೋರಿಯಾ ದೇಶದ ಕಂಪನಿ. (ಉತ್ಪಾದನೆ )
2) ಹೆಚ್.ಕೆ ಆರ್.ಡಿ.ಬಿ. ಸ್ಮಾರ್ಟ ಪೊಲೀಸಿಂಗ್ ಯೋಜನೆ ಅಡಿಯಲ್ಲಿ ಕಲಬುರಗಿ ಜಿಲ್ಲಾ ಪೊಲೀಸ  
    ಇಲಾಖೆಗೆ 04 ಕ್ವಾಡ ಕ್ಯಾಪ್ಟರ್  ಗಳನ್ನು ಒದಗಿಸಲಾಗಿದೆ.
3) ಒಂದು ಕ್ವಾಡ ಕ್ಯಾಪ್ಟರನ ಬೆಲೆಯು 1,50,000=00 ಇರುತ್ತದೆ.
4) ಇದು 1 . 5 ಕಿಲೋ  ಮೀಟರ ವ್ಯಾಪ್ತಿಯವರೆಗು ಹಾಗೂ 500 ಮೀಟರ್ಸ್ ಎತ್ತರದವರೆಗೆ ಹಾರಾಟ
    ಮಾಡುವ ಸಾಮಾಥ್ರ್ಯ  ಹೊಂದಿದೆ.
5) ಇದರಲ್ಲಿ 12 .2 ಮೇಘಾಫಿಕ್ಸಲ್ ಹೆಚ್.ಡಿ. ಕ್ಯಾಮರಾ ಹೊಂದಿದ್ದು ಹಾಗೂ 1080 ರೆಜಲೂಶನ
    ಫುಲ್ ಹೆಚ್.ಡಿ. ವಿಡಿಯೋ  ಕ್ಯಾಮರಾ ಹೊಂದಿದೆ.
6) ಪ್ರತಿ ಕ್ವಾಡ ಕ್ಯಾಪ್ಟರ್ ಜೋತೆ 01 ಟ್ಯಾಬ್, 01 ಜ್ಯೋಸ್ಟಿಕ್ ಹಾಗೂ 02 ಬ್ಯಾಟರಿ ಹೊಂದಿದ್ದು
     ಇರುತ್ತದೆ.
7) 01 ಬ್ಯಾಟರಿಯನ್ನು 02 ಗಂಟೆಯವರೆಗೆ ಚಾರ್ಜ ಮಾಡಿದರೆ ನಿರಂತರವಾಗಿ 30 ನಿಮಿಷದವರೆಗೆ
   ಕ್ವಾಡ ಕ್ಯಾಪ್ಟರನ್ನು ಹಾರಿಸಬಹುದು.
8) ಸೇಫ್ ಲ್ಯಾಂಡಿಂಗ್ ಸಿಸ್ಟಮ್:-ಹಾರಾಟದ ಸಮಯದಲ್ಲಿ ವೈರಲೇಸ್, ಕನೆಕ್ಟಿವಿಟಿಯಲ್ಲಿ ಹಾಗೂ
    ಬ್ಯಾಟರಿ ಚಾರ್ಜಿಂಗ್  ಮುಗಿದಂತಹ ಸಮಯದಲ್ಲಿ ಲ್ಯಾಂಡಿಂಗ್ ಯಟ್ ಹೋಮ್ ಆಯ್ಕೆ
    ಹೊಂದಿದ್ದು ನಾವು ಯಾವ ಸ್ಥಳದಿಂದ ಹಾರಿಸಿ ಬಿಡಲಾಗಿದಿಯೋ ಮರಳಿ ಅದೇ ಸ್ಥಳಕ್ಕೆ ಬಂದು
    ಲ್ಯಾಂಡಿಗ ಆಗುವ ಸಾಮಾಥ್ರ್ಯ ಹೊಂದಿರುತ್ತದೆ.
9) ಇದು ಒಂದೆ ಸಮಯದಲ್ಲಿ ಫೋಟೊಗ್ರಾಫಿ ಹಾಗೂ ವಿಡಿಯೋಗ್ರಾಫಿ ಮಾಡುವ ಸಾಮಥ್ರ್ಯ
    ಹೊಂದಿದ್ದು ನಿರಂತರವಾಗಿ 01 ಗಂಟೆಯವರೆಗೆ ವಿಡಿಯೋ ರಿಕಾರ್ಡಿಂಗ್  ಮಾಡಬಹುದು.
10) ಇದರಲ್ಲಿ 16 ಜಿ.ಬಿ. ಮೆಮೋರಿ ಕಾರ್ಡ ಇದ್ದು ಇದನ್ನು 128 ಜಿ.ಬಿ.ರವರೆಗು ವಿಸ್ತರಿಸಬಹುದು.
11) ಇದನ್ನು ನಿರಂತರವಾಗಿ ಹಾರಾಡಿಸಬಹುದು ಹಾಗೂ ಒಂದೇ ಸ್ಥಳದಲ್ಲಿ ನಿಲ್ಲಿಸಬಹುದು.
12) ಇದು ಕಾನೂನು ಸುವ್ಯವಸ್ಥೆ ಕಾಪಾಡಲು, ಮೆರವಣಿಗೆ ಹಾಗೂ ಜಾತ್ರೆಯ ಸಮಯದಲ್ಲಿ
     ಮತ್ತು ಗಲಬೆ-ದೊಂಬಿಗಳನ್ನು ನಿಯಂತ್ರಿಸಲು ಹಾಗೂ ಗಸ್ತು ಕಾರ್ಯ ನಿರ್ವಹಿಸಲು ಇದು
     ಅತೀ ಉಪಯುಕ್ತವಾಗಿದೆ.

Kalaburagi District Reported Crimes

ವಿದ್ಯಾರ್ಥಿನಿ ಕಾಣೆಯಾದ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಸುನೀತಾ ಗಂಡ ದಯಾನಂದ ಮೇಲಿನಕೇರಿ ಸಾ:ವಿಜಯನಗರ ಕಾಲೋನಿ ಕಲಬುರಗಿ ಇವರು ಮಗಳಾದ ಲಕ್ಷ್ಮಿ ಇವಳು ಮಹಾದೇವಿ (ಅಪ್ಪಾ) ಶಾಲೆಯಲ್ಲಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿರುತ್ತಾಳೆ. ದಿನಾಲೂ ಶಾಲೆಗೆ ಒಬ್ಬಳೇ ಹೋಗಿ ಬಂದು ಮಾಡುತ್ತಾಳೆ.ದಿನಾಂಕ 20-01-2016 ರಂದು ಬೆಳಿಗ್ಗೆ 07-00 ಗಂಟೆಯ ಸುಮಾರಿಗೆ ನನ್ನ ಮಗಳಾದ ಲಕ್ಷ್ಮೀ ಇವಳು ಟಿವಿಷನಕ್ಕೆ ಹೋಗಿ ಬರುತ್ತೇನೆ ಅಂತಾ ಮನೆಯಿಂದ ಹೋದವಳು ರಾತ್ರಿಯಾದರೂ ಮರಳಿ ಮನೆಗೆ ಬಂದಿರುವುದಿಲ್ಲ ಅಲ್ಲಿಂದ ಇಲ್ಲಿಯವರೆಗೆ ನಾವು ಎಲ್ಲಾ ಕಡೆ ಹುಡುಕಾಡಿದರೂ ಪತ್ತೆ ಆಗಿರುವುದಿಲ್ಲ ಕಾರಣ ಕಾಣೆಯಾದ ನನ್ನ ಮಗಳು ಲಕ್ಷ್ಮೀ ಇವಳಿಗೆ ಪತ್ತೆ ಮಾಡಿಕೊಡಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಶಂಕೆರ ತಂದೆ ನಾಗಣ್ಣ ಗಾಡಿ ಸಾ: ಮಾತೋಳಿ ಮತ್ತು ಅವನ ಗೆಳೆಯನಾದ ಸಚಿನ ತಂದೆ ವಿಶ್ವನಾಥ ಗೋಳಸಾರ ಸಾ: ಅತನೂರ ಇಬ್ಬರು ಕೂಡಿ ಮೋ/ಸೈ ನಂ ಕೆಎ-32 ಇಸಿ- 4263 ನೇದ್ದರ ಮೇಲೆ, ಸಚಿನ ಈತನ ಮೋ.ಸೈ ನಡೆಸಿಕೊಂಡು ಮಾತೋಳಿ ಗ್ರಾಮದಿಂದ ಘತ್ತರಗ ರೋಡಿಗೆ ಹೋಗುತ್ತಿದ್ದಾಗ ಬನ್ನೇಟ್ಟಿ ಕ್ರಾಸ ಹತ್ತಿರ ಎದುರಿನಿಂದ ಒಂದು ಟ್ಯಾಕ್ಟರ ಬರುತ್ತಿದ್ದು, ಸದರಿ ಟ್ಯಾಕ್ಟರ ಚಾಲಕನು ತನ್ನ ಟ್ಯಾಕ್ರನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿಯಿಂದ ನಡೆಸಿಕೊಂಡು ಬಂದು ಡಿಕ್ಕಿ ಪಡಿಸಿದಕ್ಕೆ ಮೋ.ಸೈ ನಡೆಸುತ್ತಿದ್ದ ಸಚಿನ ಮತ್ತು ಶಂಕರ ಇಬ್ಬರು ಮೋ.ಸೈ ದೊಂದಿಗೆ ಬಿದ್ದಾಗ ಸಚೀನ ಈತನ ತಲೆಗೆ ಮತ್ತು ಮೈ ಕೈಗೆ ಬಾರಿ ರಕ್ತಗಾಯ ಮತ್ತು ಗುಪ್ತಗಾಯ ಆಗಿರುತ್ತದೆ. ಘಟನೆ ಆದ ತಕ್ಷಣ ಟ್ಯಾಕ್ಟರ ಚಾಲಕ ಟ್ಯಾಕ್ಟರ ತಗೆದುಕೊಂಡು ಓಡಿ ಹೋಗಿರುತ್ತಾನೆ. ಸದರಿ ಟ್ಯಾಕ್ಟರ ನಂ ಹಾಗೂ ಚಾಲಕನ ಬಗ್ಗೆ ಗೊತ್ತಿರುವುದಿಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

23 January 2016

Kalaburagi District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಸುರೇಖಾ ಗಂಡ ರಮೇಶ ಆಳಂದ ಇವರನ್ನು ಸುಮಾರು 6 ವರ್ಷಗಳ ಹಿಂದೆ ನಮ್ಮ ತಂದೆ ತಾಯಿಯವರು ಕಲಬುರಗಿಯ ಸಂತೋಷ ಕಾಲೋನಿಯ ಹಣಮಂತರಾಯ ಇವರ ಮಗನಾದ ರಮೇಶ ಇತನ್ನೊಂದಿಗೆ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿರುತ್ತಾರೆ. ಮದುವೆಯಲ್ಲಿ ಮಾತನ್ನಾಡಿದ ಪ್ರಕಾರ ವರನಿಗೆ ವರದಕ್ಷಣೆ ಅಂತಾ 1 ಲಕ್ಷ ರೂಪಾಯಿ, 6 ತೊಲೆ ಬಂಗಾರ ಹಾಗೂ ಗೃಹ ಬಳಕೆಯ ಸಾಮಾನುಗಳು ಕೊಟ್ಟಿದ್ದು, ಇರುತ್ತದೆ. ಮದುವೆಯಾದ ನಂತರ ಎರಡು-ಮೂರು ತಿಂಗಳವರೆಗೆ ನನ್ನ ಗಂಡ ಹಾಗೂ ಅವರ ಮನೆಯವರು ನನ್ನೊಂದಿಗೆ ಚೆನ್ನಾಗಿದ್ದು, ತದನಂತರ ಮನೆಯ ಸಣ್ಣ ಪುಟ್ಟ ವಿಷಯಗಳಲ್ಲಿ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡಲು ಪ್ರಾರಂಭಿಸಿ ತವರು ಮನೆಯಿಂದ 2 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ ಅಂತಾ  ಹಿಂಸೆ ಕೊಡಲು ಪ್ರಾರಂಭಿಸಿದರು. ನಾನು ಅವರು ಕೊಡುವ ಹಿಂಸೆಯನ್ನು ತಾಳಲಾರದೇ  ನನ್ನ ತಂದೆ ತಾಯಿಗೆ ವಿಷಯ ತಿಳಿಸಿದಾಗ ಅವರು ಹಿರಿಯರೊಂದಿಗೆ ಬುದ್ದಿವಾದ ಹೇಳಿದ್ದು ಇರುತ್ತದೆ. ನನಗೆ  ಒಂದು ಹೆಣ್ಣು ಮತ್ತು ಒಂದು ಗಂಡು ಮಗು ಇರುತ್ತದೆ. ಇಷ್ಟಾದರೂ ಸಹ ನನ್ನ ಗಂಡ ಹಾಗೂ ಅವರ ಮನೆಯವರು ನನಗೆ ಹಿಂಸೆ ಕೊಡುವುದನ್ನು ಬಿಡಲಿಲ್ಲ. ನನ್ನ ಮೈದುನ ಉಮೇಶ ಇತನು ಇವಳು ನಮ್ಮ ಮನೆಯ ವಿಷಯವೆಲ್ಲಾ ಬೇರೆಯವರ ಮುಂದೆ ಹೇಳುತ್ತಾಳೆ ಇವಳಿಗೆ ಖಲಾಸ ಮಾಡಿ ಬಿಡು ಅಂತಾ ನನ್ನ ಗಂಡನಿಗೆ ಹೇಳುತ್ತಿದ್ದನು. ನನ್ನ ಗಂಡ ರಮೇಶ ಇತನು ನನಗೆ ಸಾಲವಾಗಿದೆ ನಿನ್ನ ತವರು ಮನೆಯಿಂದ ಹಣ ತರಿಸು ಅಂತಾ ಹೇಳಿದಾಗ ನಾನು ನನ್ನ ಗಂಡ ಕೊಡುವ ಕಿರುಕುಳ ತಾಳಲಾರದೇ ನನ್ನ ಸಹೋದರ ಮಾವನಾದ ರೇವಣಸಿದ್ದ ಇವರಿಗೆ ತಿಳಿಸಿದಾಗ  ಅವರು ಆಗಾಗ ಸ್ವಲ್ಪ ಸ್ವಲ್ಪ 2 ಲಕ್ಷ ರೂಪಾಯಿ ಕೊಟ್ಟಿರುತ್ತಾರೆ. ಮತ್ತೆ ನನ್ನ ಗಂಡ ನನ್ನ ಬಂಗಾರ ಎಲ್ಲಾ ಮಾರಿರುತ್ತಾನೆ.  ದಿನಾಂಕ 20-01-2016 ರಂದು 10-00 ಎ.ಎಮ್ ಕ್ಕೆ ನನ್ನ ಭಾವ ಪ್ರಕಾಶ, ನಾದಿನಿ ಸುಮಂಗಲಾ, ಅತ್ತೆ ನಾಗಮ್ಮ , ಮಾವ ಹಣಮಂತ ಇವರೆಲ್ಲರೂ ಸೇರಿ ರಂಡಿ ನಿನಗೆ ತವರು ಮನೆಯಿಂದ ಹಣ ತೆಗೆದುಕೊಂಡು ಬಾ ಅಂದರೆ ನಮ್ಮ ಮಾತಿಗೆ ಬೆಲೆ ಕೊಡುತ್ತಿಲ್ಲ ಹಣ ತರುವವರೆಗೂ ನಮ್ಮ ಮನೆಗೆ ಬರಬೇಡ ಅಂತಾ ಹೊಡೆ ಬಡೆ ಮಾಡಿರುತ್ತಾರೆ. ದಿನಾಂಕ 21-01-2016 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ನನ್ನ ಗಂಡನಾದ ರಮೇಶ ಇತನು ನನಗೆ ನಾನು ವೈನ್ ಶಾಪ್ ವ್ಯಾಪಾರ ಮಾಡುತ್ತೇನೆ ನಿನ್ನ ತವರು ಮನೆಯಿಂದ 2 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ ಅಂತಾ ಕಿರಿಕಿರಿ ಮಾಡಿ ನಾನು ಸಂಜೆ ಮನೆಗೆ ಬರುವಷ್ಟರಲ್ಲಿ ನಿಮ್ಮ ತಂದೆಗೆ ಹೇಳಿ ಹಣ ತರಿಸು ಇಲ್ಲವಾದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಹೇಳಿ ಹೊರಗೆ ಹೋದನು. ಸಂಜೆ 7-30 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿ ಅಡಿಗೆ ಮಾಡುತ್ತಿದ್ದಾಗ ನನ್ನ ಗಂಡ ರಮೇಶ ಇತನು ನಿನ್ನ ತವರು ಮನೆಯವರು ಹಣ ತಂದು ಕೊಟ್ಟಿದ್ದಾರಾ ಅಂತಾ ಕೇಳಿದನು ಆಗ ನಾನು ಅವರ ಹತ್ತಿರ ಹಣ ಇರುವುದಿಲ್ಲ ನಾನು ಅವರಿಂದ ಹಣ ತೆಗೆದುಕೊಂಡು ಬರುವುದಿಲ್ಲ ಅಂತಾ ಹೇಳಿದಾಗ ರಂಡಿ ನೀನು ನನಗೆ ಎದುರುವಾದಿಸುತ್ತಿಯಾ?  ನಿನಗೆ ಬಹಳ ಸೊಕ್ಕು ಬಂದಿದೆ ನಿನಗೆ ಖಲಾಸ ಮಾಡಿಯೇ ಬಿಡುತ್ತೇನೆ ಅಂತಾ ಕಾಯ್ದ ಕಡಚಿಯನ್ನು ನನ್ನ ಎಡಗೈಗೆ ಹಚ್ಚಿ  ಕೈ ಸುಟ್ಟನು. ಮತ್ತೆ  ಕೈಯಿಂದ ಮೈಮೇಲೆ ಹೊಡೆ ಬಡೆ ಮಾಡಿ ನನಗೆ ಕುತ್ತಿಗೆ ಒತ್ತಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ. ನನ್ನ ಗಂಡ ನನಗೆ ಕೊಲೆ ಮಾಡಲು ಪ್ರಯತ್ನ ಪಟ್ಟಿ ಕುತ್ತಿಗೆ ಒತ್ತಿರುವದರಿಂದ ನಾನು ಬೇಹುಷ ಆಗಿ ಬಿದ್ದಿದ್ದು, ಸುಮಾರು ಎರಡು ಮೂರು ಗಂಟೆಗಳು ಕಳೆದ ನಂತರ ನನಗೆ ಪ್ರಜ್ಞೆ ಬಂದಾಗ ನನ್ನ ಅಣ್ಣ ಲಕ್ಷ್ಮೀಕಾಂತ ಇತನಿಗೆ ಫೋನ ಮಾಡಿ ವಿಷಯ ತಿಳಿಸಿದೆನು. ಇಂದು ಬೆಳಿಗ್ಗೆ ನನ್ನ ತಾಯಿ ಸರೋಜನಿ, ನನ್ನ ಅಣ್ಣ ಲಕ್ಷ್ಮೀಕಾಂತ ಇವರು ನಮ್ಮ ಮನೆಗೆ ಬಂದು ನನಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಲಿಗೆ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಮಲ್ಲಿಕಾರ್ಜುನ ತಂದೆ ನಿಂಗಪ್ಪ ಮಾಳೇನಹಳ್ಳಿ ಸಾಃ ಸದಾಶಿವ ನಗರ ಕಲಬುರಗಿ ಇವರು ದಿನಾಂಕ 20/01/2016 ರಂದು 7.10 ಪಿಎಂ ದಿಂದ 7.15 ಪಿಎಂ ಅವಧಿಯಲ್ಲಿ ಮನೆಗೆ ಹೋಗಲು ತಮ್ಮ ಕಾರ್ ನಂ. ಕೆಎ.32 ಎನ್.5968 ನೇದ್ದರಲ್ಲಿ ಕುಳಿತಿದ್ದಾಗ ಒಂದು ಬೈಕ್ ಮೇಲೆ ಇಬ್ಬರು ಅಪರಿಚಿತ ವ್ಯಕ್ತಿಗಳು ಬಂದು ವಿಳಾಸ ಕೇಳುವ ನೆಪದಲ್ಲಿ ಕಣ್ಣಿಗೆ ಖಾರದ ಪುಡಿ ಎರಚಿ ಫಿರ್ಯಾದಿದಾರನು ತನ್ನ ಕಾರಿನಲ್ಲಿಟ್ಟಿದ್ದ ಕಪ್ಪು ಬಣ್ಣದ ಬ್ಯಾಗನ್ನು ದೋಚಿಕೊಳ್ಳುತ್ತಿರುವಾಗ ಫಿರ್ಯಾದಿದಾರನು ಸದರಿ ಬ್ಯಾಗನ್ನು ಹಿಡಿದುಕೊಂಡಾಗ ಅವರು ಅದನ್ನು ಕಿತ್ತುಕೊಂಡು ದೋಚಿಕೊಂಡು ಹೋಗಿರುತ್ತಾರೆ. ಸದರಿ ಬ್ಯಾಗಿನಲ್ಲಿ 1) ನಗದು ಹಣ 1,16,650/- ರೂ.  2) ಕೆನರಾ ಬ್ಯಾಂಕಿನ 04 ಚೆಕಬುಕ್ ಗಳು 3) ಎಚ್.ಡಿ.ಎಫ್.ಸಿ ಬ್ಯಾಂಕಿನ ಒಂದು ಬೆಕ್ ಬುಕ್ 4) ಕೆನರಾ ಬ್ಯಾಂಕಿನ ಕ್ರೆಡಿಟ್ ಕಾರ್ಡ 5) ವಾಹನ ನಂ ಕೆಎ.32 ಬಿ1247 ನೇದ್ದರ ಆರ್.ಸಿ ಬುಕ್ 6) ಡಿಎಲ್ & ಪ್ಯಾನ್ ಕಾರ್ಢ ಇತ್ಯಾದಿ ಕಾಗದ ಪತ್ರಗಳು ಇದ್ದವು ದೋಚಿಕೊಂಡು ಹೋದ ಹಣ ಹಾಗೂ ದಾಖಲಾತಿಗಳನ್ನು ಪತ್ತೆ ಮಾಡಿ, ದೋಚಿಕೊಂಡು ಹೋದ ಅಪರಿಚಿತ ಮೋಟಾರ್ ಸೈಕಲ ಸವರರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ದ್ವೀಚಕ್ರ ವಾಹನ ಕಳವು ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ದಿನಾಂಕಃ 14/01/2016 ರಂದು ಮದ್ಯಾಹ್ನ 1.30 ಗಂಟೆ ಸುಮಾರಿಗೆ ಖರ್ಗೆ ಪೆಟ್ರೋಲ್ ಪಂಪ್ ಹತ್ತಿರ ರಾಯಲ್ ಎನಫೀಲ್ಡ ಮೋಟಾರ ಸೈಕಲ ನಂ. ಕೆಎ.32 ಇಬಿ. 8222 ನೇದ್ದನ್ನು ನಿಲ್ಲಿಸಿ ಕೆಲಸ ಮುಗಿಸಿಕೊಂಡು 2.30 ಪಿಎಂ ಕ್ಕೆ ಬಂದು ನೋಡಲಾಗಿ ಮೊಟಾರ ಸೈಕಲ ಇರಲಿಲ್ಲಾ. ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ. ಕಳುವಾದ ನನ್ನ ರಾಯಲ್ ಎನಫೀಲ್ಡ ಮೋಟಾರ ಸೈಕಲ ನಂ. ಕೆ.32 ಇಬಿ 8222 ಅ.ಕಿ. 1,50,000/- ನೇದ್ದನ್ನು ಪತ್ತೆ ಮಾಡಿ ಕಳ್ಳರ ಮೇಲೆ ಕಾನೂನು ಕ್ರಮ ಜರೂಗಿಸಬೇಕೆಂದು ಅಂತಾ ಶ್ರೀ ಸೈಯದ್ ಗೌಸ್ ಮೋಹಿಯುದ್ದೀನ್ ತಂದೆ ಸೈಯದ್ ಫರೀದ್ ಸಾಃ ಗಣೇಶ ನಗರ ಕಲಬುರಗಿ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

21 January 2016

Kalburagi District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಅಫಜಲಪೂರ ಠಾಣೆ : ದಿನಾಂಕ 20-01-2016 ರಂದು ಅಫಜಲಪೂರ ಪಟ್ಟಣದ ಘತ್ತರಗಾ ರೋಡಿಗೆ ಇರುವ ಲಕ್ಷ್ಮಿ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದೆಗೆ ಮಾನ್ಯ ಸಿ.ಪಿ.ಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಅಫಜಲಪೂರ ಪಟ್ಟಣದ ಘತ್ತರಗಾ ರೋಡಿಗೆ ಇರುವ ಲಕ್ಷ್ಮಿ ಗುಡಿ ಹತ್ತಿರ ಸ್ವಲ್ಪ ದೂರು ಮರೆಯಲ್ಲಿ ನಿಂತು ನೋಡಲು ಲಕ್ಷ್ಮಿ ಗುಡಿ  ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ವಿಠ್ಠಲ ತಂದೆ ಜರನಪ್ಪ ನಾವಿ ಸಾ|| ಘತ್ತರಗಾ ಹಾ||| ಆಶ್ರಯ ಕಾಲೋನಿ ಅಫಜಲಪೂರ  ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 860/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 30-12-15 ರಂದು ರಾತ್ರಿ  ಮೃತ ಪ್ರಶಾಂತ ಇತನು ಮೋಟಾರ ಸೈಕಲ ನಂ ಕೆಎ-32-ಇಇ-5298 ನೇದ್ದನ್ನು ಎಸ ಪಿ ಸಾಹೇಬರ ಕಾರ್ಯಾಲಯ ಕಡೆಯಿಂದ ಸಿದ್ದಿಪಾಶಾ ದರ್ಗಾ ಕ್ರಾಸ ಕಡೆಗೆ ಹೋಗುವ ಕುರಿತು ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಎದುರಿನ ರೋಡ ಮೇಲೆ ಎಡ ಬಲ ಕಟ್ ಹೊಡೆದು ರೋಡ ಪಕ್ಕದಲ್ಲಿರುವ ಬೇವಿನ ಗಿಡಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ತನ್ನಿಂದ ತಾನೆ ಮೋಟಾರ ಸೈಕಲ ಮೇಲಿಂದ ಬಿದ್ದು ತೆಲೆಯ ಎದುರುಗಡೆ ರಕ್ತಗಾಯ ಬಾಯಿಗೆ ಪೆಟ್ಟು ಬಿದ್ದು ತುಟಿಗಳಿಗೆ ಗದ್ದಕ್ಕೆ ಮೂಗಿಗೆ ರಕ್ತಗಾಯ ಹಾಗೂ ಕುತ್ತಿಗೆಗೆ ಗುಪ್ತಪೆಟ್ಟು ಆಗಿ ಉಪಚಾರ ಕುರಿತು ಯುನೈಟೆಡ ಆಸ್ಪತ್ರೆಗೆ ಸೇರಿಕೆಯಗಿ ಹೆಚ್ಚಿನ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಹೋಗಿ ಸೇರಿಕೆಯಾಗಿ ಉಪಚಾರ ಮಾಡಿಕೊಂಡು ಹಣದ ಅಡಚಣೆ ಆದ ಕಾರಣ ದಿನಾಂಕ 18-01-2016 ರಂದು ಬಸವೇಶ್ವರ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮಹಾಗಾಂವ ಗ್ರಾಮದಲ್ಲಿರುವ ಮೃತನ ಸಂಬಂದಿ ಕಾಶಪ್ಪಾ ಇವರ ಮನೆಗೆ ಹೋದಾಗ ಅಪಘಾತದಲ್ಲಿ ಆದ ಗಾಯದ ಉಪಚಾರ ಫಲಕಾರಿಯಾಗದೆ ರಾತ್ರಿ 10-00 ಗಂಟೆಗೆ ಮನೆಯಲ್ಲಿ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಡಬೂಳ ಠಾಣೆ : ಶ್ರೀ ರವಿ ತಂದೆ ನಿಂಗಪ್ಪಾ ತಳಕೇರಿ ಸಾ:ತೊನ್ಸನಳ್ಳಿ(ಟಿ) ಇವರು ದಿನಾಂಕ:20/01/16  ರಂದು 11 ಎಎಂಕ್ಕೆ ಟೆಂಗಳಿ ಗ್ರಾಮಕ್ಕೆ ಖಾಸಗಿ ಕೆಲಸದ ನಿಮಿತ್ಯ ಹೋಗಿ ಬರಲೆಂದು ಟೆಂಗಳಿ ಗ್ರಾಮಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಮರಳಿ ಊರಿಗೆ ಹೋಗಲೆಂದು ಟೆಂಗಳಿ ಬಸ್ಟ್ಯಾಂಡ ಹತ್ತಿರ 1-30 ಪಿಎಂದ ಸುಮಾರಿಗೆ ಬಂದು ನಿಲಲ್ಲು ನಮ್ಮ ಗ್ರಾಮದ ಪರಿಚಯದವನಾದ ಗುಡುಸಾಬ ತಂದೆ ಹುಸೇನಸಾಬ ಮುಲ್ಲಾ ಇವರೂ ಸಹ ಊರಿಗೆ ಹೋಗುವ ಸಲುವಾಗಿ ಬಸ್ ಕಾಯುತ್ತಾ ನಿಂತಿದ್ದು ಅಷ್ಟರಲ್ಲಿ ಕಾಳಗಿ ಕಡೆಯಿಂದ ಒಂದು ಮ್ಯಾಕ್ಸಿಕ್ಯಾಬ ಬಂತು. ನಾನು ಮತ್ತು ನಮ್ಮ ಗ್ರಾಮದ ಗುಡುಸಾಬ ಇಬ್ಬರೂ ಊರಿಗೆ ಹೋಗಲು ಹತ್ತಿದೇವು. ಮ್ಯಾಕ್ಸಿಕ್ಯಾಬ ಟೆಂಗಳಿ ಗ್ರಾಮದಿಂದ ಹೊರಟು 2ಕಿ.ಮೋ ದಾಟಿ ಸ್ವಲ್ಪ ದೂರದಲ್ಲಿ ಮ್ಯಾಕ್ಸಿಕ್ಯಾಬ ಚಾಲಕನು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಒಮ್ಮೇಲೆ ತನ್ನ ವಾಹನವನ್ನು ಬಲ ಭಾಗಕ್ಕೆ ಕಟ್ ಮಾಡಲು ಹೋಗಿ ಧನಂಜಯ ಕುಲಕರ್ಣಿ ಇವರ ಹೋಲದ ಸೀಮಾಂತರದ ರೋಡಿನ ಮೇಲೆ ಪಲ್ಟಿ ಮಾಡಿಸಿದ ಪ್ರಯುಕ್ತ ಒಳಗಡೆ ಕುಳಿತ್ತಿದ್ದ ಪ್ರಯಾಣಿಕರಿಗೆ ಹಾಗೂ ನನಗೆ ಮ್ಯಾಕ್ಸಿಕ್ಯಾಬಿನ ರಾಡ ಹಾಗೂ ಸೀಟಗಳು ಹತ್ತಿ ರಕ್ತಗಾಯ ಹಾಗೂ ಗುಪ್ತಗಾಯಗಳಾಗಿದ್ದು ಗಾಭರಿಗೊಂಡು ಮ್ಯಾಕ್ಸಿಕ್ಯಾಬನ ಗ್ಲಾಸ ಒಡೆದು ಒಬ್ಬೊಬ್ಬರಾಗಿ ಮ್ಯಾಕ್ಸಿಕ್ಯಾಬಿನಿಂದ ಹೊರಗಡೆ ಬಂದೇವು. ನನ್ನ ಜೊತೆ ಹೊರಟ ನಮ್ಮ ಗ್ರಾಮದ ಗುಡುಸಾಬ ಮುಲ್ಲಾ ಇವರಿಗೆ ನೋಡಲು ಮ್ಯಾಕ್ಸಿಕ್ಯಾಬಿನ ಡೋರಿನ ಒಳಗಡೆ ಸಿಕ್ಕಿ ಹಾಕಿಕೊಂಡು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಮ್ಯಾಕ್ಸಿಕ್ಯಾಬಿನಲ್ಲಿದ ನನ್ನಂತೆ ಕೇಲವು ಜನರಿಗೆ ಗುಪ್ತಗಾಯ ಅಲ್ಲಲ್ಲಿ ತೆರಚಿದ ಗಾಯಗಳಾಗಿದ್ದು ಇರುತ್ತದೆ. ನಂತರ ನಾನು ಜಿವಿಆರ ಅಂಬುಲೇನ್ಸಕ್ಕೆ ಫೋನ ಮಾಡಿ ಸ್ಥಳಕ್ಕೆ ಕರೆಯಿಸಿ ಎಲ್ಲರಿಗೂ ಅದರಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಕಳುಹಿಸಿಕೊಟ್ಟೇನು. ರಸ್ತೆ ಅಪಘಾತ ಪಡಿಸಿದ ಮ್ಯಾಕ್ಸಿಕ್ಯಾಬ ನಂಬರ ನೋಡಲು ಕೆಎ-38 945 ಇರುತ್ತದೆ. ಸದರಿ ವಾಹನದ ಚಾಲಕನು ವಾಹನವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೋಸಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀಮತಿ ವಿಜಯಲಕ್ಷ್ಮೀ ಗಂಡ ಭೀಮಶ್ಯಾ ಸಾ : ಕಟ್ಟೋಳ್ಳಿ ಇವರು ನ್ಯಾಯಾಲಯದ ಖಾಸಗಿ ದೂರು ಮಹಾಗಾಂವ ಪೊಲೀಸ್ ಠಾಣೆ ಗುನ್ನೆ ನಂ:94/2014 ನೇದ್ದರಲ್ಲಿ ಫಿರ್ಯಾದಿದಾರರ ಸರ್ವೆ ನಂ:94/1 ನೇದ್ದರಲ್ಲಿ 15 ಎಕರೆ 1 ಗುಂಟೆ ಜಮೀನಿನ ಮಾಲೀಕರಿದ್ದು ಈ ಪ್ರಕರಣದ ಆರೋಪಿ ನಂ:1 ರಿಂದ 4 ರವರು ಜಮೀನು ಪಾಲು ಮಾಡುವಾಗ ಫಿರ್ಯಾದಿಗೆ ಗೊತ್ತಿರದಂತೆ ಹಿಸ್ಸಾ ಬದಲಾವಣೆ ಮಾಡಲು ಅರ್ಜಿ ಸಲ್ಲಿಸಿದ್ದು ಇದೇ ಪ್ರಕರಣದಲ್ಲಿ 5 ರಿಂದ 7 ಆರೋಪಿಗಳು ಕಂದಾಯ ಅಧಿಕಾರಿಗಳಿದ್ದು ಆರೋಪಿ 1 ರಿಂದ 4 ರ ಇವರ ಯಾವುದೋ ಶಕ್ತಿಗೆ ಬಲಿಯಾಗಿ ಜಮೀನಿನ ಸರ್ವೆ ನಂಬರನ ಹಿಸ್ಸಾಗಳು ಅದಲು ಬದಲು ಮಾಡಿರುತ್ತಾರೆ. ಫಿರ್ಯಾದಿದಾರರಿಗೆ ಸರಕಾರಿ ಅಧಿಕಾರಿಗಳು ಹಾಗು ತನಿಖಾಧಿಕಾರಿಗಳು ಮೋಸ, ವಂಚನೆ ಮಾಡುವ ಉದ್ದೇಶದಿಂದ ಸುಳ್ಳು ಮಾಹಿತಿ ಹಾಗು ಸುಳ್ಳು ದಸ್ತಾವೇಜು ಬರೆದು ಕಾನೂನು ಬಾಹಿರವಾಗಿ ನಡೆದುಕೊಂಡಿದ್ದರಿಂದ ಇವರ ಮೇಲೆ ಖಾಸಗಿ ಫಿರ್ಯಾದಿ ಮಹಾಗಾಂವ ಪೊಲೀಸ್ ಠಾಣೆ ಗುನ್ನೆ ನಂ:98/2015 ನೇದ್ದರಲ್ಲಿ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ. ಗುನ್ನೆ ನಂ:99/2014 ಮತ್ತು 98/2015 ರಲ್ಲಿನ ತನಿಖಾಧಿಕಾರಿಗಳಾಗಿದ್ದ ಶ್ರೀ ವಿಜಯ ಪಿ. ಅಂಚಿ ಪೊಲೀಸ್ ಉಪಾಧೀಕ್ಷಕರು ಗ್ರಾಮೀಣ ಉಪವಿಭಾಗ ಕಲಬುರಗಿ ಇವರು ಈ ಎರಡು ಗುನ್ನೆಯಲ್ಲಿ ಆರೋಪಿಗಳು ಫೀದಿದಾರರ ಜಮೀನನ್ನು ಅಕ್ರಮವಾಗಿ ಪ್ರವೇಶ ಮಾಡಿಲ್ಲ. ಹಾಗು ಯಾವುದೇ ಕಂದಾಯ ಅಧಿಕಾರಿಗಳು ಹಾಗು ಇತರೆ ಅಧಿಕಾರಿಗಳು ಯಾವುದೇ ನಕಲಿ ಮತ್ತು ಸುಳ್ಳು ದಆಖಲೆಗಳು ಬರೆದಿಲ್ಲ, ಸೃಷ್ಟಿ ಮಾಡಿಲ್ಲ, ಅನುಸೂಚಿ ಜಾತಿ ಸದಸ್ಯರ ಮೇಲೆ ದೌರ್ಜನ್ಯವೆಸಗಿಲ್ಲವೆಂದು ಸುಳ್ಳು ವರದಿ ಸಲ್ಲಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ಚೌಕ ಠಾಣೆ : ಶ್ರೀ ಅಂಬಾರಾಯ ತಂದೆ ಸಿದ್ದಪ್ಪ ಗೊಂಗಡೆ ಸಾ: ಪ್ಲಾಟ ನಂ. 27 ಮಾಹಾದೇವ ನಗರ ಶೇಖ ರೋಜಾ  ಕಲಬುರಗಿ ಇವರ ಅಣ್ಣನಾದ ಶ್ರೀ ಅಣ್ಣಪ್ಪ ತಂದೆ ಸಿದ್ದಪ್ಪ ಗೊಂಗಡೆ ವ: 63 ಉ: ನಿವೃತ್ತ ನೌಕರ ಇವರು ಮನೆಯಿಂದ ಕಟ್ಟಿಂಗ ಮಾಡಿಸಲು ಹೋಗಿ ಬರುತ್ತೇನೆ ಅಂತಾ ಮನೆಯಿಂದ ದಿನಾಂಕ 18/01/2016 ರಂದು ಮುಂಜಾನೆ 8 ಗಂಟೆಗೆ ಹೋದವರು ಇನ್ನೂ ಬಂದಿಲ್ಲಾ ಆದ ಕಾರಣ ದಯಾಳುಗಳಾದ ತಾವು ನನ್ನ ಅಣ್ಣನ್ನು ಹುಡುಕಿ ಕೊಡಬೇಕಾಗಿ ವಿನಂತಿ. ನನ್ನ ಅಣ್ಣ ಮಾನಸಿಕವಾಗಿ ಅಸ್ವಸ್ಥನಾಗಿರುತ್ತಾನೆ. ಮೈಮೇಲೆ ಬಿಳಿಯ ಚಕ್ಸ ಶರ್ಟ, ಕರಿಯ ಪ್ಯಾಂಟ, ಕರಿಯ ಕ್ಯಾನವಸ್ ಬೂಟ ಧರಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

19 January 2016

Kalaburagi District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಜೇವರಗಿ ಠಾಣೆ : ದಿನಾಂಕ 18.01.2016 ರಂದು ಜೇವರಗಿ ಪಟ್ಟಣದ ಬಿ.ಸಿ.ಮ್ ವಸತಿ ಗೃಹದ ಹತ್ತಿರ ಬಿಲಾಲ ಕಾಲೋನಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪಿಟ್‌ ಎಲೆಗಳ ಸಹಾಯದಿಂದ ಅಂದರ್-ಭಾಹರ್ ಜುಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಮೇರೆಗೆ ವಿಧ್ಯಾಸಾಗರ ಎ.ಸ್.ಐ ಜೇವರಗಿ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ಜೂಜಾಟದ ಬಗ್ಗೆ ಖಚಿತಪಡಿಸಿಕೊಂಡು ದಾಳಿ ಮಾಡಿ 5 ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲು 1. ಮಲ್ಲು @ ಮಲ್ಲಿಕಾರ್ಜುನ ತಂದೆ ಈರಣ್ಣ ತಳವಾರ ಸಾ : ಬುಟ್ನಾಳ   2. ಮಹ್ಮದ್ ಪಟೇಲ್ ತಂದೆ ಖಾಸೀಂ ಪಟೇಲ್ ಸಾ : ಜೇವರಗಿ  3. ಸಿದ್ದಣ್ಣಗೌಡ ತಂದೆ ಬಸಣ್ಣಗೌಡ ಬುಟ್ನಾಳ ಸಾ : ಬುಟ್ನಾಳ  4. ಸುಲ್ತಾನ ತಂದೆ ಅಮೀನಸಾಬ್ ಇಜೇರಿ ಸಾ : ಕಟ್ಟಿ ಸಂಗಾವಿ  5. ಭೀಮರಾಯಗೌಡ ತಂದೆ ಸಂಗಣ್ಣಗೌಡ ಪೊಲೀಸ್ ಪಾಟೀಲ ಸಾ : ಬುಟ್ನಾಳ ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ  ನಗದು ಹಣ 4.010/- ರೂ ಗಳು ಮತ್ತು 52 ಇಸ್ಪೀಟ್‌ ಎಲೆಗಳನ್ನು ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಜೇವರ್ಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಮಾಡಬೂಳ ಠಾಣೆ : ನನ್ನ ಗಂಡ ಗಾಲಿಬಸಾಬ ಈತನು ಈಗ ಸುಮಾರು 7 ತಿಂಗಳಿಂದ ನಮಗೆ ಪರಿಚಯದವರಾದ ನಮ್ಮೋರಿನ ಮರೆಪ್ಪಾ ತಂದೆ ಶಿವಶರಣಪ್ಪಾ ಬರಾಟಿ ಇವರು ತಮ್ಮ ಒಕ್ಕಲತನ ಕೆಲಸಕ್ಕೆ ಮಲ್ಲಿಕಾರ್ಜುನ ಸ್ವಾಮಿ ಮಳಖೇಡ ಇವರ ಕಡೆಯಿಂದ ಫರ್ಗೊಶನ್ ಕಂಪನಿಯ ಟ್ರಾಕ್ಟರ್ ನಂಬರ ಕೆಎ-32 ಟಿಎ-0761 ನೇದ್ದನ್ನು ಖರೀದಿಸಿಕೊಂಡು ಸದರಿ ಟ್ರಾಕ್ಟರ ಮೇಲೆ ನನ್ನ ಗಂಡ ಚಾಲಕ ಅಂತಾ ಕೆಲಸ ನಿರ್ವಹಿಸಿಕೊಂಡಿರುತ್ತಾನೆ. ಹೀಗಿದ್ದು ಇಂದು ದಿನಾಂಕ-18/01/2016 ರಂದು ಬೆಳ್ಳಿಗೆ 11 ಗಂಟೆ ಸುಮಾರಿಗೆ ನನ್ನ ಗಂಡ ಚಲಾಯಿಸುತ್ತಿದ್ದ ಟ್ರಾಕ್ಟರ ಮಾಲಿಕರಾದ ನಮ್ಮೋರಿನ ಮರೆಪ್ಪಾ ತಂದೆ ಶಿವಶರಣಪ್ಪಾ ಇವರು ನಮ್ಮ ಮನೆಗೆ ಬಂದು ನನ್ನ ಗಂಡನಿಗೆ ಹೇಳಿದ್ದೇನೆಂದರೆ ಟ್ರಾಕ್ಟರ ತೆಗೆದುಕೊಂಡು ನಡಿ ನಮ್ಮ ಹೊಲದಲ್ಲಿ ಟ್ರಾಕ್ಟರ ನೆಗಿಲು ಹೊಡೆಯುವುದಿದೆ ಅಂತಾ ಹೇಳಿ ನನ್ನ ಗಂಡ ಮತ್ತು ಟ್ರಾಕ್ಟರ ಮಾಲಿಕರು ತಮ್ಮ ಟ್ರಾಕ್ಟರ ತೆಗೆದುಕೊಂಡು ಹೊಲಕ್ಕೆ ಹೋದರು. ನಂತರ ನಾನು ಮತ್ತು ನನ್ನ ಮಕ್ಕಳು ಮದ್ಯಹ್ನ 2-30 ಪಿ.ಎಮ್ ಕ್ಕೆ ಮನೆಯಲ್ಲಿದ್ದಾಗ ಟ್ರಾಕ್ಟರ ಮಾಲಿಕರಾದ ಮರೆಪ್ಪಾ ಇವರು ನಮ್ಮ ಮನೆಗೆ ಬಂದು ವಿಷಯ ತಿಳಿಸಿದೆನೆಂದರೆ ನಿನ್ನ ಗಂಡನಿಗೆ ನಮ್ಮ ದಂಡೋತಿ ಗ್ರಾಮದ ಸಿಮಾಂತರದಲ್ಲಿದ ನಮ್ಮ ಹೊಲದಲ್ಲಿ ಮದ್ಯಹ್ನ ವೇಳೆಗೆ ಟ್ರಾಕ್ಟರ ನೆಗಿಲು ಹೊಡೆದುಕೊಂಡು ನಂತರ ನಮ್ಮ ಹೊಲದ 2-3 ಹೊಲ ಬಿಟ್ಟು ರಶೀದ ಯಾದಗಿರ ಇವರ ಹೊಲದ ಸಿಮಾಂತರದಲ್ಲಿರುವ ಕಾಗಿಣಾ ಹಳ್ಳಕ್ಕೆ ಹೋಗಿ ನೀರು ತೆಗೆದುಕೊಂಡು ಬರುತ್ತೇನೆ ಅಂತಾ ಟ್ರಾಕ್ಟರ ಚಲಾಯಿಸಿಕೊಂಡು ಹೋದನು. ನಂತರ ಅಲ್ಲೆ ಹಳ್ಳದ ಪಕ್ಕದಲ್ಲಿ ಕೆಲಸ ಮಾಡುತ್ತಿರುವ ಜಗನಾಥ ತಂದೆ ನಾಗಣ್ಣಾ ಇವರು ನನಗೆ ಓಡಿ ಬಂದು ತಿಳಿಸಿದೆನೆಂದರೆ. ಗಾಲಿಬಸಾಬ ಈತನು ಟ್ರಾಕ್ಟರ ಸಮೇತ ಹಳ್ಳದ ದಡೆಯ ಮೇಲಿಂದ ಕೆಳಗೆ ಬಿದ್ದು ಇಂಜನಲ್ಲಿ ಸಿಕ್ಕಾಕ್ಕಿಕೊಂಡು ಒದ್ದಾಡುತ್ತಿದ್ದಾನೆ ಆತನಿಗೆ ಹೊರಗಡೆ ತಗೆಯುವುದಿದೆ ಬೇಗನೆ ನಡಿ ಅಂತಾ ತಿಳಿಸಿದ ಮೇರಗೆ ನಾವುಬ್ಬರೂ ಸೇರಿ ಹಳ್ಳಕ್ಕೆ ಹೋಗಿ  ನೋಡಿ ಗಾಲಿಬಸಾಬ ಈತನಿಗೆ ಇಂಜನ ಒಳಗಡೆಯಿಂದ ಹೊರಗೆ ತೆಗೆಯಲು ಸದರಿಯವನಿಗೆ ಬಾಯಿ ಹಾಗೂ ಮುಗಿಗೆ ಭಾರಿರಕ್ತಗಾಯವಾಗಿದ್ದು ದೇಹದ ಇತರ ಕಡೆ ತರಚಿದ ಗಾಯಗಳಾಗಿದ್ದು ಚಿಕಿತ್ಸೆ ಕುರಿತು ನಾನು ಮತ್ತು ಜಗನಾಥ ಇಬ್ಬರೂ ಕೂಡಿ ಒಂದು ಮೋಟಾರ ಸೈಕಲ ಮೇಲೆ ಹಾಕಿಕೊಂಡು ದಂಡೋತಿ ಸರಕಾರಿ ಆಸ್ಪತ್ರೆಗೆ ಉಪಚಾರ ಕುರಿತು ತೆಗೆದುಕೊಂಡು ಬರುತ್ತಿರುವಾಗ ಮಾರ್ಗಮದ್ಯದಲ್ಲಿ ಗಾಲಿಬಸಾಬ ಈತನು ಮೃತ ಪಟ್ಟಿದ್ದು ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ ಅಂತಾ ತಿಳಿಸಿದ ಮೇರೆಗೆ ನಾನು ಗಾಬರಿಗೊಂಡು ನನ್ನ ಮಕ್ಕಳಾದ ಶಮಶೇರ ಮತ್ತು  ಆಶಪಾಕ್ ಹಾಗೂ ನನ್ನ್ ಮಾವ ಮಹೆಬೂಬ ಅಲಿ , ಭಾವ ಮಹ್ಮದ ಹನೀಫ್ ಇವರಿಗೆ ತಿಳಿಸಿ ನಾವೆಲ್ಲರೊ ಆಸ್ಪತ್ರೆಗೆ ಹೋಗಿ ನನ್ನ ಗಂಡನಿಗೆ ನೋಡಲು ಬಾಯಿ ಹಾಗೂ ಮೂಗಿಗೆ ಭಾರಿರಕ್ತಗಾಯವಾಗಿ ಇತರ ಕಡೆ ತರಚಿದ ಗಾಯವಾಗಿ ಮೃತ ಪಟ್ಟಿದ್ದು ನಿಜವಿರುತ್ತದೆ ಅಂತಾ ಶ್ರೀಮತಿ ಜರಿನಾಬೇಗಂ ಗಂಡ ಗಾಲಿಬಸಾಬ ಸಾ: ದಂಡೋತಿ ತಾಃ ಚಿತ್ತಾಪುರ. ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕಸ್ಮಿಕವಾಗಿ ಬೆಂಕಿ ತಗುಲಿ ಮಹಿಳೆ ಸಾವು ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ :- 17-01-2016 ರಂದು ಸಾಯಂಕಾಲ ನಮ್ಮ ಅಕ್ಕನ ಮಗನಾದ ನಾಗರಾಜ ಈತನು ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ ನಮ್ಮ ತಾಯಿ ಮನೆಯಲ್ಲಿ ಅಡುಗೆ ಮಾಡುವಾಗ ಆಕಸ್ಮಿಕವಾಗಿ ಸೀರಿಯ ಸೇರಗಿಗೆ ಬೆಂಕಿ ತಗುಲಿ ಮೈ ಸುಟ್ಟಿರುತ್ತದೆ ಈಗ ಚಿಕಿತ್ಸೆಗಾಗಿ ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ಬಂದು ಚಿಕಿತ್ಸೆ ಕುರಿತು ದಾಖಲು ಮಾಡಿರುತ್ತೇವೆ ಅಂತ ತಿಳಿಸಿದರ ಮೇರೆಗೆ ನಾನು ಮತ್ತು ನನ್ನ ತಮ್ಮನಾದ ಶಿವರಾಜ ಇಬ್ಬರು ಆಸ್ಪತ್ರೆಗೆ ಹೋಗಿ ನಮ್ಮ ಅಕ್ಕಳಿಗೆ ನೋಡಲಾಗಿ ನಮ್ಮ ಅಕ್ಕಳ ಮೈ ಸಂಪೂರ್ಣ ಸುಟ್ಟಿದ್ದು ಸದರಿ ಘಟನೆ ಬಗ್ಗೆ ನಮ್ಮ ಅಕ್ಕಳಿಗೆ ವಿಚಾರಿಸಿದಾಗ ತಿಳಿಸಿದ್ದೇನೆಂದರೆ ನಾನು ಇಂದು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಮನೆಯಲ್ಲಿ ಯಾರು ಇಲ್ಲದಿರುವಾಗ ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದಾಗ ನನ್ನ ಸಿರೆಯ ಸೇರಗಿಗೆ ಆತಸ್ಮಿಕವಾಗಿ ಬೆಂಕಿ ಹತ್ತಿ ಸದರಿ ಬೆಂಕಿ ಒಮ್ಮೆಲೆ ನನ್ನ ಮೈಗೆ ಹತ್ತಿದಾಗ ನಾನು ಚಿರಾಡುತ್ತಾ ಮನೆಯಿಂದ ಬಂದಾಗ ಚನ್ನಣಗೌಡ ಪಾಟೀಲ, ಚನ್ನಬಸಪ್ಪ ಶೇಖದಾರ ಇವರು ಬಂದು ಬೆಂಕಿ ನಂದಿಸಿದರು ನಂತರ ವಿಷಯ ತಿಳಿದು ನಾಗರಾಜ ಬಸವರಾಜ ಬಂದು ಎಲ್ಲರು ಕೂಡಿ ನನಗೆ ಚಿಕಿತ್ಸೆಗಾಗಿ ಕರೆದುಕೊಂಡು ಬಂದಿರುತ್ತಾರೆ ಅಂತ ತಿಳಿಸಿದ್ದು ನಂತರ ಚಿಕಿತ್ಸೆ ಫಲಕಾರಿಯಾಗದೆ ಇಂದು ದಿನಾಂಕ  18-01-2016 ರಂದು ಬೆಳಗಿನ ಜಾವ 05:00 ಗಂಟೆಗೆ ಮೃತಪಟ್ಟಿರುತ್ತಾರೆ. ಅಂತಾ ಶ್ರೀ ವಿಜಯಕುಮಾರ ತಂದೆ ಮಾಣಿಕರಾವ ಪಾಟೀಲ ಸಾ : ದೇಸಾಯಿ ಕಲ್ಲುರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.