POLICE BHAVAN KALABURAGI

POLICE BHAVAN KALABURAGI

27 January 2016

Kalaburagi District Reported Crimes

ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 25.01.2016 ರಂದು ಮಧ್ಯಾಹ್ನ ೦1:30 ಗಂಟೆಗೆ ನನ್ನ ಗಂಡನು ತನ್ನಮೋಟಾರು ಸೈಕಲ್‌ ನಂ ಕೆ.ಎ32ಆರ್‌5774 ನೇದ್ದನ್ನು ಚಲಾಯಿಸಕೊಂಡು ಜೇವರಗಿಯಿಂದ ಇಟಂಗಿ ಭಟ್ಟಿಯ ಕಡೆಗೆ ಹೋಗುವ ಕುರಿತು ಜೇವರಗಿ ಹೊರವಲಯದ ಗಡ್ಡಿ ಪೂಲ್ ಹತ್ತಿರ ಜೇವರಗಿ ಕಲಬುರಗಿ ರಸ್ತೆ ಮೇಲೆ ಹೋಗುತ್ತಿದ್ದಾಗ ಟಂಟಂ ನಂ ಕೆ.ಎ32ಸಿ1475 ನೇದ್ದರ ಚಾಲಕನು ತನ್ನ ಟಂಟಂ ಅನ್ನು ಅತಿ ವೇಗ  ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನನ್ನ ಗಂಡನ ನಡೆಸುತ್ತಿದ್ದ ಮೋಟಾರು ಸೈಕಲ್‌ ಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿದ್ದರಿಂದ ನನ್ನ ಗಂಡನ ತಲೆಗೆ ಭಾರಿ ಗುಪ್ತ ಗಾಯವಾಗಿದ್ದು ಚಿಕಿತ್ಸೆ ಕುರಿತು ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಉಪಚಾರ ಫಲಕಾರಿಯಾಗದೆ ಇಂದು ದಿನಾಂಕ 26.01.2016 ರಂದು ಮುಂಜಾನೆ 06:35 ಗಂಟೆಗೆ ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ ಗೀತಾ ಗಂಡ ಜೀತೇಂದ್ರ ಹಳಿಮನಿ ಸಾ|| ಲಕ್ಷ್ಮಿ ಚೌಕ್ ಜೇವರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿರ್ಲಕ್ಷತನದಿಂದ ಸಾವು ಪ್ರಕರಣ :
ಚೌಕ ಠಾಣೆ : ಶ್ರೀಮತಿ ಶರಣಮ್ಮಾ ಗಂಡ ರಾಜಶೇಖರ ಬಟಗೇರಿ ಸಾ: ಶಿವಾಜಿ ನಗರ ಕಲಬುರಗಿ ರವರ ಗಂಡ ರಾಜಶೇಖರ ತಂದೆ ಚಂದ್ರಪ್ಪ  ಬಟಗೇರಿ ಉ: ಲಾರಿ ಚಾಲಕನಿದ್ದು  ಇವರು ತಾವೆ ಸ್ವಂತವಾಗಿ ಲಾರಿ ನಂ. ಎಮ್.ಎಚ್.-13 ಜಿ- 1185 ಖರೀಧಿಸಿದ್ದು ಈ ಲಾರಿಯ ಮೇಲೆ ಕಲಬುರಗಿಯಲ್ಲಿಯೆ ಬಾಡಿಗೆ ಹೊಡೆಯುತ್ತಿದ್ದರು ಏಥಾ ಪ್ರಕಾರ ಇಂದು ದಿನಾಂಕ 26/01/2016 ರಂದು ಬೆಳಿಗ್ಗೆ ನನ್ನ ಗಂಡ ರಾಜಶೇಖರ @ ರಾಜು ಇವರು ನಮ್ಮ ಲಾರಿ ನಡೆಸುವ ಕುರಿತು ಮನೆಯಿಂದ ಹೋಗಿರುತ್ತಾರೆ. ನಾನು ಮನೆಯಲ್ಲಿಯೆ ಇದ್ದಾಗ ನಮ್ಮ ಗಂಡನಿಗೆ ಪರಿಚಯದವರಾದ ಸುರೇಶ ತಂದೆ ರಾಯಪ್ಪ ಪೂಜಾರಿ ಇವರು ಮದ್ಹಾಹ್ನ 3-30 ಗಂಟೆ ಸುಮಾರಿಗೆ ನಮ್ಮ ಮನೆಗೆ ಬಂದು ಮಾಹಿತಿ ತಿಳಿಸಿದ್ದೇನೆಂದರೆ ನಿಮ್ಮ ಗಂಡನವರಾದ ರಾಜಶೇಖರ ತಂದೆ ಚಂದ್ರಪ್ಪ ಬಟಗೇರಿ ಇವರು ನಿಮ್ಮ ಲಾರಿ ನಂ. ಎಮ್.ಎಚ್.-13 ಜಿ-1185 ಈ ಗಾಡಿಯ ಮುಕ್ಕಾ ಅಡತಿ ಅಂಗಡಿ ನೆಹರು ಗಂಜ ಎದುರುಗಡೆ ಹತ್ತಿರ ಚಾಲು ಆಗದೇ ಇದ್ದುದ್ದರಿಂಧ ಗಾಡಿಯಿಂದ ಕೆಳಗೆ ಇಳಿದು ಎದುರುಗಡೆ ಇರುವ ಸೇಲ್ಪ ಸ್ಟಾಟರಿಗೆ ಕಲ್ಲಿನಿಂದ ಹೊಡೆದು ಚಾಲು ಮಾಡಲು ಹೋದಾಗ ಲಾರಿಯ ಸ್ಟಾಟರ ಒಮ್ಮೇಲೆ ಲಾರಿ ಚಾಲು ಆಗಿ ಅವರ ಮೈಮೆಲೆ ಹರಿದು ತುಂಬಾ ಗಾಯಹೊಂದಿದ್ದು ಉಪಚಾರಕ್ಕಾಗಿ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತೇವೆ . ನೀವು ಕೋಡಲೇ ಬನ್ನಿರಿ ಅಂತಾ ತಿಳಿಸಿದ್ದರಿಂದ ನಾನು ಗಾಬರಿಯಾಗಿ ನಾನು ನನ್ನ ಮಕ್ಕಳು ಇತರೆ ನೋಡಿದ ಜನರು ಆಸ್ಪತ್ರೆಗೆ 5 ಗಂಟೆ ಸುಮಾರಿಗೆ ಸರಕಾರಿ ಆಸ್ಪತ್ರೆಗೆ ಬಂದು ನನ್ನ ಗಂಡ ರಾಜಶೇಖರ @ ರಾಜು ತಂದೆ ಚಂದ್ರಪ್ಪ ಬಟಗೇರಿ ಇವರಿಗೆ ನೊಡಿದ್ದು ಆಗಲೇ ಅವರು ಮೃತ ಪಟ್ಟಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಹಲ್ಲೆ ಪ್ರಕರಣ :
ಜೇವರ್ಗಿ ಠಾಣೆ : ಶ್ರೀಮತಿ ಲಕ್ಷ್ಮಿ ಗಂಡ ಹಣಮಂತ್ರಾಯ ಇಜೇರಿ ದಿನಾಂಕ 26.01.2016 ರಂದು ಮಧ್ಯಾಹ್ನ ನಾನು ನಮ್ಮ ಹೋಲದ ಸಮೀಪ ರೋಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅದೇ ವೇಳೆಗೆ ಮುತ್ತಪ್ಪ ತಂದೆ ಮರೆಪ್ಪ ಶಾಸ್ತ್ರಿ ಸಾ: ಮಾರಡಗಿ ಎಸ್.ಎ  ಇವನು ನನಗೆ ತಡೆದು ನಿಲ್ಲಿಸಿ ನಾನು ಹೇಳಿದಂತೆ ನೀನು ಮಾಡಬೇಕು ಒಂದು ವೇಳೆಗೆ ಮಾಡದಿದ್ದರೆ ನಿನಗೆ ಬಿಡುವದಿಲ್ಲ ಅಂತ ಅಂದು ನನಗೆ ಅವಾಚ್ಯವಾಗಿ ಬೈದು ಕೈ ಹಿಡಿದು ಜಗ್ಗಾಡಿ ಮತ್ತು ಮೈ ಮೇಲಿನ ಬಟ್ಟೆ ಎಳೆದು ಮಾನಭಂಗ ಮಾಡಿ ನಮಗೆ ಹೊಡೆ-ಬಡೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿನಿಂದನೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ಜೇವರ್ಗಿ ಠಾಣೆ : ಶ್ರೀ ಮುತ್ತಪ್ಪ ತಂದೆ ಮರೆಪ್ಪ ಶಾಸ್ತ್ರಿ ಸಾ: ಮಾರಡಗಿ ಎಸ್.ಎ ಇವರಿಗೆ  ದಿನಾಂಕ 26.01.2016 ರಂದು ಮುಂಜಾನೆ ಮಲ್ಲಣ್ಣ ಇವರ ಹೊಲದಲ್ಲಿ 1 ಮಲ್ಲಣ್ಣಾ ತಂದೆ ಶಿವಪುತ್ರ  ಇಜೇರಿ  2. ಹಣಮಂತ ತಂದೆ ಶಿವುತ್ರಪ್ಪ ಇಜೇರಿ 3. ಸುರೇಶ ತಂದೆ ಶಿವಶರಣಪ್ಪ ಜೈನಾಪೂರ  ಸಾ: ಎಲ್ಲರೂ ಮಾರಡಗಿ ಎಸ್.ಎ  4. ಶರಣಪ್ಪ ತಂದೆ ಸಾಯಿಬಣ್ಣಾ ಸಾ: ಮುಡಬೂಳ  5. ಗೋಪಾಲ ತಂದೆ ಸಾಯಿಬಣ್ಣಾ ಸಾ: ಎಲ್ಲರು ಮುಡಬೂಳ  ಎಲ್ಲರು ಕೂಡಿಕೊಂಡು ನನ್ನೊಂದಿಗೆ ಹತ್ತಿ ಬೀಜದ ಲೆಕ್ಕಪತ್ರದ ವಿಷಯದಲ್ಲಿ ಜಗಳ ತೆಗೆದು ನನಗೆ ಏ ಹೋಲೆ ಸೂಳೆ ಮಗನೆ ಅಂತ ಅವಾಚ್ಯವಾಗಿ ಬೈದು ಕೈಯಿಂದ, ಚಪ್ಪಲಿಯಿಂದ, ಬಡಿಗೆಯಿಂದ ಮತ್ತು ಕಲ್ಲಿನಿಂದ ಹೊಡೆ ಬಡೆ ಮಾಡಿ ಅಲ್ಲದೆ ನನಗೆ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: