POLICE BHAVAN KALABURAGI

POLICE BHAVAN KALABURAGI

19 December 2011

GULBARGA DIST REPORTED CRIMES

ಕಳ್ಳತನ ಪ್ರಕರಣದನದ ಮೂಳೆ ಕೊಬ್ಬಿನಿಂದ ಪಾಮ್ ಆಯಿಲ್ ಮತ್ತು ಡಾಲ್ಡ್ ತಯಾರಿಸುತ್ತಿದ್ದ ಇಬ್ಬರ ಆರೋಪಿಗಳ ಬಂದನ
ಗುಲಬರ್ಗಾ ನಗರದ ಹೊರ ವಲಯದ ಜಮಶೆಟ್ಟಿ ನಗರದ ಬಳಿ ಸುಮಾರು 10,000 ಚದರ ಅಡಿ ಜಮೀನು ಗುತ್ತಿಗೆಗೆ ಪಡೆದು ಆ ಸ್ಥಳದಲ್ಲಿ ದನದ ಮೂಳೆ ಬಳಸಿ ಪಾಮ್ ಯಿಲ್ ಮತ್ತು ಡಾಲ್ಡ ತಯಾರಿಸಲಾಗುತ್ತಿದ್ದು, ಇದರಿಂದ ಸುತ್ತ ಮುತ್ತ ಪ್ರದೇಶದಲ್ಲಿ ದುರ್ವಾಸನೆ ಹರಡಿದ್ದರಿಮದ ಕೇಲವು ಸಂಘಟನೆಗಳು ಪ್ರತಿಭಟನೆ ನಡೆಸಿ ಮಹಾನಗರ ಪಾಲಿಕೆ ಆಯುಕ್ತರವರಿಗೆ ದೂರು ಸಲ್ಲಿಸಿದ್ದವು. ಮಹಾ ನಗರ ಪಾಳಿಕೆ ಆಯುಕ್ತರಾದ ಶ್ರೀ ನಾಗಯ್ಯ ರವರು ವಿಶ್ವ ವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸದರಿ ದೂರಿನ ಅನ್ವಯ ಮಾನ್ಯ ಎಸ.ಪಿ ಸಾಹೆಬರು ಮತ್ತು ಹೆಚ್ಚುವರಿ ಎಸ.ಪಿ ಸಾಹೇಬರ ಮತ್ತು ಗ್ರಾಮೀಣ ಉಪಾದೀಕ್ಷಕರ ಮಾರ್ಗದರ್ಶನದಲ್ಲಿ ಎಂಬಿ.ನಗರ ಸಿಪಿಐ ಬಿ.ಪಿ.ಚಂದ್ರಶೇಖರ ವಿಶ್ವ ವಿದ್ಯಾಲಯ ಠಾಣೆಯ ಪಿ.ಎಸ.ಐ ಪಂಡಿತ ಸಗರ, ಎ.ಎಸ.ಐ ಸಿದ್ರಾಮಗೌಡ, ಮತ್ತು ಸಿಬ್ಬಂದಿಯವರಾದ ಶಿವಪುತ್ರಸ್ವಾಮಿ, ವೇದರತ್ನಂ, ಅಶೋಕ, ಶಂಕರ, ಚಂದ್ರಕಾಂತ, ಬಲರಾಮ, ಪ್ರಭಾಕರ, ಹಾಗು ಅರ್ಜುನರವರು ಪ್ರಮುಖ ಆರೋಪಿಗಳಾದ ಮುಂಬೈಯ ದಾರವಿಯಲ್ಲಿ ನೇಲೆಸಿದ್ದ ಗುಲಬರ್ಗಾದ ರಹಿಮತ ನಗರದ ಇಸ್ಮಾಯಿಲ್ ಮತ್ತು ಮುಂಬೈ ಕುರ್ಲಾದ ನಿವಾಸಿ ಇಮ್ರಾನ್ ಹಾಜಿ ಖುರೆಷಿ ಎಂಬುವವರನ್ನು ಬಂದಿಸಿ ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದ್ದಾರೆ.

ಕಳ್ಳತನ ಪ್ರಕರಣ:
ಎಂ.ಬಿ.ನಗರ ಪೊಲೀಸ್ ಠಾಣೆ :
ಶ್ರೀಮತಿ ನಂದಾ ಗಂಡ ರಮೇಶ ಸಜ್ಜನ ಸಾ ಸೇಡಂ ಹಾವಮನೆ ನಂ. 7-12-ಬಿ ಗಂಜ, ಹುಮನಾಬಾದ ರೋಡ, ಸೆಂಟ್ರಲ್ ವೇರ್ ಹೌಸ್ ಹತ್ತಿರ ಗುಲಬರ್ಗಾ ರವರು ನಾನು ಮತ್ತು ನನ್ನ ಅಕ್ಕ ಕಮಲಾಬಾಯಿ ಗಂಡ ಸಿದ್ರಾಮಪ್ಪ ಸಜ್ಜನ ಇಬ್ಬರೂ ಕೂಡಿಕೊಂಡು ಬಸ್ ನಂ. ಕೆ.ಎ 32 ಎಫ್ 1399 ನೇದ್ದರಲ್ಲಿ ಖರ್ಗೆ ಪೇಟ್ರೋಲ್ ಪಂಪ್ ಹತ್ತಿರ ಹತ್ತಿ ಸೇಡಂಗೆ ಹೊರಟಿದ್ದೇವು. ನಾವು ಯುನಿವರ್ಸಿಟಿ ಗೇಟ್ ಸಮೀಪ ನನ್ನ ಅಕ್ಕನ ಕೊರಳಿನಲ್ಲಿದ್ದ 3 ತೊಲೆ ಘಂಟಾನ (ರಸ್ಸಿ ಲಾಕೆಟ್ ಎರಡು ಪದರು) ಅಃಕಿಃ 75,000/- ರೂಪಾಯಿಗಳದ್ದು ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣಾ ಗನ್ನೆ ನಂ 166/2011 ಕಲಂ. 379 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

Gulbarga Dist Reported Crimes

ಜೂಜಾಟ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ.
ದಿನಾಂಕ 18/12/2011 ರಂದು ದುತ್ತರಗಾಂವ ಗ್ರಾಮದ ಸಾರ್ವಜನಿಕ ನೀರಿನ ಭಾವಿಯ ಹತ್ತಿರ ಅಂದಾರ ಬಹಾರ ಎಂಬ ಇಸ್ಪೀಟ ಜೂಜಾಟ ನಡೆಯುತ್ತಿರುವ ಮಾಹಿತಿ ಬಂದ ಮೇರೆಗೆ ಶ್ರೀ ಎಸ್.ಎಸ್ ದೊಡಮನಿ ಪಿ.ಎಸ್.ಐ ಮತ್ತು ಸಿಬ್ಬಂದಿಯವರಾದ ಭೀಮರಾಯ ಪಾಟೀಲ, ವಿಶ್ವನಾಥ ರೆಡ್ಡಿ, ಶಿವರಾಯ ಸಿಪಿಸಿ ರವರು ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡಿ ರಾಜು ತಂದೆ ಅಮೃತರಾವ, ವೀರಭದ್ರ ತಂದೆ ಮಹಾರುದ್ರಪ್ಪ ಶೀಲವಂತ, ಶಂಭುಲಿಂಗ ತಂದೆ ಗುರಣ್ಣಾ ಮಂಗಾಣೆ ಮತ್ತು ಭೀಮಶ್ಯಾ ತಂದೆ ಕಾಶಿರಾಮ ವಡ್ಡರ ಸಾ ಎಲ್ಲರೂ ದುತ್ತರಗಾಂವ ಇವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ನಗದು ಹಣ ಒಟ್ಟು 1850/- ಮತ್ತು 52 ಇಸ್ಪೀಟ ಎಲೆಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 127/2011 ಕಲಂ 87 ಕೆ.ಪಿ. ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಡಿರುತ್ತಾರೆ.
ಹಲ್ಲೆ ಪ್ರಕರಣ:
ಅಶೋಕ ನಗರ ಠಾಣೆ:
ಶ್ರೀಮತಿ ಗೀತಾ ಗಂಡ ಚೆನ್ನಾರೆಡ್ಡಿ ಪಾಟೀಲ ಗುಲಬರ್ಗಾ ರವರು ಜೇವರ್ಗಿ ರಿಂಗ ರೋಡಿನಲ್ಲಿ ನನ್ನ ಗಂಡ ಸರ್ವಜ್ಞ ಎಂಬ ಪಿ.ಯು.ಸಿ ಕಾಲೇಜ ನಡೆಸುತ್ತಿದ್ದು ಅಲ್ಲದೆ ಚೆನ್ನಾರೆಡ್ಡಿ ಪಾಟೀಲ ವಿದ್ಯಾರ್ಥಿ ಸೇವಾ ಪ್ರತಿಷ್ಠಾನ ಪ್ರೈಮರಿ ಹಾಗೂ ಹೈಸ್ಕೂಲ್ ಸಹ ನಡೆಸುತ್ತಿದ್ದೆವೆ ಸದರಿ ಶಾಲೆಯು ಟ್ರಷ್ಟ ಅಡಿಯಲ್ಲಿ ನಡೆಯುತ್ತಿದ್ದು ನಾನು ಹಾಗೂ ನನ್ನ ತಾಯಿ ಮುಖ್ಯಸ್ಥರು ಇರುತ್ತೆವೆ. ಶಾಲೆಯ ಖರ್ಚು ವೆಚ್ಚ ಆಗು ಹೊಗುಗಳನ್ನು ನಾನೆ ನೊಡಿಕೊಂಡು ಹೋಗುತ್ತೆನೆ. ತಾಯಿಯ ಹೆಸರನ್ನು ದುರುಪಯೊಗಪಡಿಸಿಕೊಂಡು ಶಿವರಾಜ ಪಾಟೀಲ ಇತನು ಆತನ ಹೆಂಡತಿ ಹಾಗೂ ಮಾವನ ಪ್ರಚೊದನೆಯಿಂದ ಪ್ರೈಮರಿ ಹೈಸ್ಕೂಲ ಶಾಲೆಯಲ್ಲಿ ನನ್ನದು ಪಾಲು ಇದೆ ಎಂದು ಸುಮಾರು ವರ್ಷಗಳಿಂದ ನಮ್ಮೊಂದಿಗೆ ವಾದ ಮಾಡುತ್ತಾ ಬಂದಿರುತ್ತಾನೆ ದಿನಾಂಕ 18/12/2011 ರಂದು ನಾನು ಕಾಲೇಜಿನ ಕ್ಯಾಂಪಸದಲ್ಲಿ ಇರುವಾಗ ನನ್ನ ತಮ್ಮ ಶಿವರಾಜ ಪಾಟೀಲ ಆತನ ಹೆಂಡತಿ ಸಪ್ನ ಅವಳ ತಂದೆ ಅಮೃತರಡ್ಡಿ ಅವರ ಸಂಬಂದಿ ಸೋಮನಾಥರೆಡ್ಡಿ ನಮ್ಮ ತಾಯಿ ಶ್ರೀಮತಿ ಶಾಂತದೇವಿ, ಪುಷ್ಪಾ ಹಾಗೂ ಇತರರು 12-15 ಜನರು ಮುಂಜಾನೆ ಕಾಲೇಜ ಕ್ಯಾಂಪಸದಲ್ಲಿ ಅತಿಕ್ರಮ ಪ್ರವೇಶ ಮಾಡಿ ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 143, 147, 448, 354, 307, 109, 506 ಸಂ. 149 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.