POLICE BHAVAN KALABURAGI

POLICE BHAVAN KALABURAGI

19 December 2011

Gulbarga Dist Reported Crimes

ಜೂಜಾಟ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ.
ದಿನಾಂಕ 18/12/2011 ರಂದು ದುತ್ತರಗಾಂವ ಗ್ರಾಮದ ಸಾರ್ವಜನಿಕ ನೀರಿನ ಭಾವಿಯ ಹತ್ತಿರ ಅಂದಾರ ಬಹಾರ ಎಂಬ ಇಸ್ಪೀಟ ಜೂಜಾಟ ನಡೆಯುತ್ತಿರುವ ಮಾಹಿತಿ ಬಂದ ಮೇರೆಗೆ ಶ್ರೀ ಎಸ್.ಎಸ್ ದೊಡಮನಿ ಪಿ.ಎಸ್.ಐ ಮತ್ತು ಸಿಬ್ಬಂದಿಯವರಾದ ಭೀಮರಾಯ ಪಾಟೀಲ, ವಿಶ್ವನಾಥ ರೆಡ್ಡಿ, ಶಿವರಾಯ ಸಿಪಿಸಿ ರವರು ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡಿ ರಾಜು ತಂದೆ ಅಮೃತರಾವ, ವೀರಭದ್ರ ತಂದೆ ಮಹಾರುದ್ರಪ್ಪ ಶೀಲವಂತ, ಶಂಭುಲಿಂಗ ತಂದೆ ಗುರಣ್ಣಾ ಮಂಗಾಣೆ ಮತ್ತು ಭೀಮಶ್ಯಾ ತಂದೆ ಕಾಶಿರಾಮ ವಡ್ಡರ ಸಾ ಎಲ್ಲರೂ ದುತ್ತರಗಾಂವ ಇವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ನಗದು ಹಣ ಒಟ್ಟು 1850/- ಮತ್ತು 52 ಇಸ್ಪೀಟ ಎಲೆಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 127/2011 ಕಲಂ 87 ಕೆ.ಪಿ. ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಡಿರುತ್ತಾರೆ.
ಹಲ್ಲೆ ಪ್ರಕರಣ:
ಅಶೋಕ ನಗರ ಠಾಣೆ:
ಶ್ರೀಮತಿ ಗೀತಾ ಗಂಡ ಚೆನ್ನಾರೆಡ್ಡಿ ಪಾಟೀಲ ಗುಲಬರ್ಗಾ ರವರು ಜೇವರ್ಗಿ ರಿಂಗ ರೋಡಿನಲ್ಲಿ ನನ್ನ ಗಂಡ ಸರ್ವಜ್ಞ ಎಂಬ ಪಿ.ಯು.ಸಿ ಕಾಲೇಜ ನಡೆಸುತ್ತಿದ್ದು ಅಲ್ಲದೆ ಚೆನ್ನಾರೆಡ್ಡಿ ಪಾಟೀಲ ವಿದ್ಯಾರ್ಥಿ ಸೇವಾ ಪ್ರತಿಷ್ಠಾನ ಪ್ರೈಮರಿ ಹಾಗೂ ಹೈಸ್ಕೂಲ್ ಸಹ ನಡೆಸುತ್ತಿದ್ದೆವೆ ಸದರಿ ಶಾಲೆಯು ಟ್ರಷ್ಟ ಅಡಿಯಲ್ಲಿ ನಡೆಯುತ್ತಿದ್ದು ನಾನು ಹಾಗೂ ನನ್ನ ತಾಯಿ ಮುಖ್ಯಸ್ಥರು ಇರುತ್ತೆವೆ. ಶಾಲೆಯ ಖರ್ಚು ವೆಚ್ಚ ಆಗು ಹೊಗುಗಳನ್ನು ನಾನೆ ನೊಡಿಕೊಂಡು ಹೋಗುತ್ತೆನೆ. ತಾಯಿಯ ಹೆಸರನ್ನು ದುರುಪಯೊಗಪಡಿಸಿಕೊಂಡು ಶಿವರಾಜ ಪಾಟೀಲ ಇತನು ಆತನ ಹೆಂಡತಿ ಹಾಗೂ ಮಾವನ ಪ್ರಚೊದನೆಯಿಂದ ಪ್ರೈಮರಿ ಹೈಸ್ಕೂಲ ಶಾಲೆಯಲ್ಲಿ ನನ್ನದು ಪಾಲು ಇದೆ ಎಂದು ಸುಮಾರು ವರ್ಷಗಳಿಂದ ನಮ್ಮೊಂದಿಗೆ ವಾದ ಮಾಡುತ್ತಾ ಬಂದಿರುತ್ತಾನೆ ದಿನಾಂಕ 18/12/2011 ರಂದು ನಾನು ಕಾಲೇಜಿನ ಕ್ಯಾಂಪಸದಲ್ಲಿ ಇರುವಾಗ ನನ್ನ ತಮ್ಮ ಶಿವರಾಜ ಪಾಟೀಲ ಆತನ ಹೆಂಡತಿ ಸಪ್ನ ಅವಳ ತಂದೆ ಅಮೃತರಡ್ಡಿ ಅವರ ಸಂಬಂದಿ ಸೋಮನಾಥರೆಡ್ಡಿ ನಮ್ಮ ತಾಯಿ ಶ್ರೀಮತಿ ಶಾಂತದೇವಿ, ಪುಷ್ಪಾ ಹಾಗೂ ಇತರರು 12-15 ಜನರು ಮುಂಜಾನೆ ಕಾಲೇಜ ಕ್ಯಾಂಪಸದಲ್ಲಿ ಅತಿಕ್ರಮ ಪ್ರವೇಶ ಮಾಡಿ ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 143, 147, 448, 354, 307, 109, 506 ಸಂ. 149 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: