POLICE BHAVAN KALABURAGI

POLICE BHAVAN KALABURAGI

19 June 2015

Kalaburagi District Reported Crimes

ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 16.06.2015 ರಂದು ಸಾಯಂಕಾಲ ನಾನು ಮತ್ತು ನಮ್ಮೂರ ಸಂಗೀತಾ ಗಂಡ ನೀಲು ರಾಠೋಡ, ಬಾಬು ತಂದೆ ಬೋಜು ನಾಯಕ ರಾಠೋಡ ,ರೇಣುಕಾ ಗಂಡ ಭೀಮು ರಾಠೋಡ ಎಲ್ಲರು ಕುಳಿತುಕೊಂಡು ಆರೋಪಿತನು ನಡೆಸುತ್ತಿದ್ದ ಟಂಟಂ ನಂ ಕೆ.ಎ33-9983 ನೇದ್ದರಲ್ಲಿ ಕೂಳಿತುಕೊಂಡು ಹೋಗುತ್ತಿದ್ದಾಗ ಸಂಗಮೇಶ ಬಿರಾದಾರ ಸಾ|| ಅವರಾದ್ ಇವರ ಹೊಲದ ಹತ್ತಿರ ಜೇವರಗಿ ಶಹಾಪುರ ಮೇನ್‌ ರೋಡ್‌ ಮೇಲೆ ಹೋಗುತ್ತಿದ್ದಾಗ ನಾವು ಕುಳಿತ ಟಂಟಂ ಚಾಲಕನು ಮುಂದೆ ಹೋಗುತ್ತಿದ್ದ ಬಸ್‌ಗೆ ಕಟ್ ಹೋಡೆಯಲು ಹೋಗಿ ಟಂಟಂ ಅನ್ನು ಒಮ್ಮೇಲೆ ಕಟ್ ಹೊಡೆದಿದ್ದರಿಂದ ಟಂಟಂ ಪಲ್ಟಿ ಮಾಡಿ ನಮಗೆಲ್ಲರಿಗೆ ಗಾಯಗಳಾಗಿರುತ್ತವೆ ಅಂತಾ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದಿನಾಂಕ 17.06.2015 ರಂದು ರಸ್ತೆ ಅಪಘಾತದಲ್ಲಿ ಭಾರಿ ಗಾಯಪೆಟ್ಟು ಹೊಂದಿದ ನಮ್ಮ ತಂದೆ ಬಾಬು ನಾಯಕ್ ರಾಠೋಡ ಈತನಿಗೆ ಹೆಚ್ಚಿನ ಉಪಚಾರ ಕುರಿತು ಅಂಬ್ಯೂಲೇನ್ಸ ಮೂಲಕ ಕಲಬುರಗಿ ಯುನೈಟೇಡ್ ಆಸ್ಪತ್ರೆಯಿಂದ ಸೋಲಾಪುರಕ್ಕೆ ಜೇವರಗಿ ಮಾರ್ಗವಾಗಿ ಹೋಗುತ್ತಿದ್ದಾಗ ಫರತಾಹಾಬಾದ್ ಸಮೀಪ ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಅ ಸ್ವಾಭಾವಿಕ ಸಾವು ಪ್ರಕರಣ :
ಅಫಜಲಪೂರ ಠಾಣೆ : ಕುಮಾರಿ ಫಿರಮ್ಮಾ ತಂದೆ ರಾಮಣ್ಣ ನಗದಿ ಇವಳು ದಿನಾಂಕ 15/06/2015 ರಂದು 6.00 ಎಎಮ್ ಕ್ಕೆ ಶಿವಪೂರ ಗ್ರಾಮದ ತನ್ನ ಮನೆಯಲ್ಲಿ ಅಡುಗೆ ಮಾಡಲು ಸ್ಟೋ ಹಚ್ಚಿದಾಗ ಸ್ಟೋ ಬ್ಲಾಸ್ಟಾಗಿ ಬೆಂಕಿ ಫಿರಮ್ಮಾ ಇವಳಿಗೆ ತಾಗಿ ಫಿರಮ್ಮಾಳ ಮೈಗೆ ಬೆಂಕಿ ಹತ್ತಿ ಸುಟ್ಟು ಗಂಭೀರವಾಗಿ ಗಾಯಗೊಂಡು ಕಲಬುರಗಿಯ ಬಸವೇಶ್ವರ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ಉಪಚಾರ ಫಲಕಾರಿಯಾಗದೇ  ಇಂದು ದಿನಾಂಕ 18/06/2015 ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾಳೆ ಸದರಿ ಘಟನೆ ಆಕಸ್ಮಿಕವಾಗಿ ಜರೂಗಿದ್ದು ಇರುತ್ತದೆ ಅಂತಾ ಶ್ರೀ ರಾಮಣ್ಣಾ ತಂದೆ ಶರಣಪ್ಪಾ ನಗದಿ ಸಾ: ಶಿವಪೂರ ತಾ : ಅಫಜಲಪೂರ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಮುಧೋಳ ಠಾಣೆ : ಶ್ರೀಮತಿ ವಿಜಯಲಕ್ಷ್ಮಿ ಗಂಡ ವೆಂಕಟಯ್ಯ ಅಲ್ಲಾಪೂರೆ ಸಾ|| ಮುಧೋಳ ಗ್ರಾಮ ಇವರ ಗಂಡ ಸುಮಾರು 04 ವರ್ಷಗಳ  ಹಿಂದೆ ತೀರಿಕೊಂಡಿರುತ್ತಾರೆ ನನ್ನ ಇಬ್ಬರು ಗಂಡು ಮಕ್ಕಳಾಧ ಶ್ರಿನಿವಾಸ ಮತ್ತು ಶ್ರಿಕಾಂತ ಇವರು ಬೀದರ ಜಿಲ್ಲೆಯಲ್ಲಿ ನೌಕರಿ ಮಾಡುತ್ತಾರೆ ಮುಧೋಳಗ್ರಾಮದಲ್ಲಿ ನಾನು ಒಬ್ಬಳೆ ಇರುತ್ತೆನೆ ನಮ್ಮ ಮನೆ ದೊಡ್ಡ ವಟ್ಟಾರದ ಮನೆ ಇದ್ದು ನಾನು ಎರಡು  ಕೊಣೆಯಲ್ಲಿದ್ದು ಉಳಿದ ಮನೆಗಳ ಬಾಡಿಗೆಗೆ ಕೊಟ್ಟಿರುತ್ತೆನೆ, ನಿನ್ನೆ ದಿನಾಂಕ 17-06-2015 ರಂದು ರಾತ್ರಿ 10-30 ಗಂಟೆಯ ಸುಮಾರಿಗೆ ನಾನು ಒಂದು ಕೊಣೆಯ ಹೊರಗಿನಿಂದ ಬಾಗಿಲು ಕೀಲಿ ಹಾಕಿ ಇನ್ನೊಂದು ಕೊಣೆಗೆ ಹೋಗಿ ಮಲಗಿ ಕೊಂಡಿರುತ್ತೆನೆ ಇಂದು ದಿನಾಂಕ 18-06-2015 ರಂದು ಮುಂಜಾನೆ 06 ಗಂಟೆಯ ಸುಮಾರಿಗೆ ನಾನು  ಮನೆ ಕಸ ಗೂಡಿಸುವ  ಸಲುವಾಗಿ ನಾನು ಮಲಗಿರುವ ಕೊಣೆಯಿಂದ ಎದ್ದು ಇನ್ನೊಂದು ಕೊಣೆಯ ಹತ್ತಿರ ಬಂದು ನೋಡಲಾಗಿ ಅದಕ್ಕೆ ಹೊರಗಿನಿಂದ ಬಾಗಿಲು ತೆರೆದಿತ್ತು ಮತ್ತು ಅದಕ್ಕೆ ಹಾಕಿರುವ  ಕೀಲಿ  ಮುರಿದು ಅಲ್ಲಿಯೇ ಬಿದ್ದತ್ತು ನಾನು ಗಾಬರಿಯಾಗಿ ಮನೆಯ ಒಳಗಡೆ ಹೋಗಿ ನೋಡಲಾಗಿ  ಆ ಮನೆಯಲ್ಲಿದ ಆಲಮರಿ ತೆರೆದಿತ್ತು  ಅದರಲ್ಲಿದ್ದ ಬಟ್ಟೆಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು, ದೇವರ ಕೊಣೆಯಲ್ಲಿ ನೋಡಲಾಗಿ ಒಂದು ಡಬ್ಬಿಯಲ್ಲಿ ಇಟ್ಟಿದ 1] ಎರಡು ಬಂಗಾರ ಚೈನು ಒಂದೊಂದು ಎರಡುವರೆ ತೊಲ ಒಟ್ಟು  05 ತೊಲ ಅ,ಕಿ 1,25,000=00 ಸಾವಿರ ರೂಪಾಯಿಗಳು  2] ಒಂದು ಬೆಳ್ಳಿಯ ತಂಬಿಗೆ ಅಂದಾಜು 500 ಗ್ರಾಮ ಅದರ  ಅ.ಕಿ  18,000 = ಸಾವಿರ ರೂಪಾಯಿಗಳು  3] ದೇವರ ಗಲ್ಲಾ ದಲ್ಲಿದ್ದ ಅಂದಾಜ 300= 00 ಮುನ್ನೂರು  ರೂಪಾಯಿಗಳು ಇರಲ್ಲಿಲ್ಲಾ  ಹೀಗೆ ಒಟ್ಟು 1,43,300.= 00 ರೂಪಾಯಿ ಮೌಲ್ಯದ  ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.