POLICE BHAVAN KALABURAGI

POLICE BHAVAN KALABURAGI

08 February 2016

Kalaburagi District Reported Crimes

ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ವಿಠಲ ತಂದೆ ಹಣಮಂತ ವಾಲಿಕಾರ ಸಾ: ಬೊರಾಬಾಯಿನಗರ ಕಲಬುರಗಿ ಇವರು ಸುಮಾರು 5 ವರ್ಷದಿಂದ  ಎ ನಾರಾಯಣ  ಹೆಬ್ಬಾಳ  ಕರ್ನಾಟಕ ದಲೀತ ಸರ್ವೊದಯ ಸಮೀತಿ  (ರಿ) ರಾಜ್ಯ ಅದ್ಯಕ್ಷಕರು ಬೆಂಗಳೂರ ಇವರು ನನಗೆ ಉತ್ತರ ಕರ್ನಾಟಕದ ಅಧ್ಯಕ್ಷರೆಂದು ಮಾಡಿದ್ದರಿಂದ ದಿನಾಂಕ 6/2/16 ರಂದು ಬೆಂಗಳೂರದಿಂದ ಕಲಬುರಗಿಗೆ ಬಂದು ಮದ್ಯಾನ 2.00 ಗಂಟೆಗೆ ನನಗೆ ಜಗತ ಸರ್ಕಲಿಗೆ ಬರಲು ತಿಳಿಸಿದ್ದರಿಂದ ನನಗೆ ಉತ್ತರ ಕರ್ನಟಕದ ಮತ್ತೆ ಅಧ್ಯಕ್ಷರಾಗಲು ಒಂದು ಲೇಟರ ಪ್ಯಾಡಿನ ಮೇಲೆ ಬರೆದುಕೊಟ್ಟರು ನಾನು ತೆಗೆದುಕೊಂಡು ಮನೆಗೆ ಬಂದಿರುತ್ತೇನೆ ರಾತ್ರಿ 10.00 ಗಂಟೆ ಸೂಮಾರಿಗೆ ನನ್ನ ಮನೆಗೆ ರಾಜ್ಯ ಅಧ್ಯಕ್ಷರಾದ ಎ ಲಕ್ಷ್ಮಿನಾರಾಯಣ ಹೆಬ್ಬಾಳ ಮತ್ತು ಅವರ ಸಂಗಡ ತಾಹೇರಹುಶೇನ, ನಾರಾಯಣ ಇವರು ಬಂದು ಮಾತಾಡುವುದು ಇದೆ ಬನ್ನಿರಿ ಎಂದು ಹೇಳಿ ಒಂದು ಆಟೋ ರೀಕ್ಷಾದಲ್ಲಿ ಕೂಳಿಸಿ ಸ್ಠೇಶನ ಬಜಾರದಲ್ಲಿದ್ದ ಕಳಿಂಗ ಲಾಡ್ಜಗೆ ಕರೆದುಕೊಂಡು ರೂಮ ನಂ 1 ರಲ್ಲಿ ಏ ನಾರಾಯಣ ಇವರು ಕೂಡಿಯಲಿಕ್ಕೆ ಡ್ರಿಂಕ ತರಸಿರಿ ಅಂತಾ ಹೇಳಿದಾಗ ನಾನು ಕುಡಿಯುವುದಿಲ್ಲಾ ಅಂತಾ ಹೇಳಿದ್ದಕ್ಕೆ ರಾಜ್ಯ ಅಧ್ಯಕ್ಷರು ನಿನಗೆ ಕರ್ನಾಟಕ ಅಧ್ಯಕ್ಷರು ಮಾಡಿದ್ದೇವೆ ನೀನು ಆಮೇಲೆ ನನಗೆ 50,000 ರೂ ಕೊಡಬೇಕು ಇಲ್ಲದಿದ್ದರೆ ಮುಂಜಾನೆ 10 ಗಂಟೆಯ ತನಕ ತಂದು ಕೋಡು ಅಂತಾ ಹೇಳಿದ್ದಾಗ ನಾನು ಈಗಾಗಲೆ 1500000 ರೂ ಕೊಟ್ಟಿರುತ್ತೇನ ನನ್ನ ಹತ್ತಿರ ಹಣ ಇರುವುದಿಲ್ಲಾ ಅಂತಾ ಹೆಳಿದ್ದಾಗ ಏ ಲಕ್ಷ್ಮಿನಾರಾಯಣ ಇವನು ಕೈಮುಷ್ಠಿಮಾಡಿ ನನ್ನ ಎಡಗಣ್ಣಿನ ಮೇಲೆ ಜೋರಾಗಿ ಹೋಡೆದನು  ನನ್ನ ಎಡಗಣ್ಣಿನ ಪಕ್ಕದಲ್ಲಿ ಗಾಯವಾಗಿರತ್ತದೆ ತಾಹೇರ ಹುಶೇನ ಮತ್ತು ನಾರಾಣ ಇವರಿಗೆ ಕೈಕಾಲು ಕಟ್ಟಲು ಹೇಳಿದಾಗ ನಾರಾಯಣ ತನ್ನ ಕೈಯಲ್ಲಿದ್ದ  ಟಾವೇಲ್ಲದಿಂದ ನನ್ನ ಕೈಗಳನ್ನು ಕಟ್ಟಿದ್ದನು ತಾಹೇರ ಇವನು ಕೂಡಾ ಟಾವೇಲದಿಂದ ಕೈಕಾಲು ಕಟ್ಟಿದ್ದನು  ಎ ನಾರಾಯಣ ಇವನು ತನ್ನ ಕೈಯಲ್ಲಿದ್ದ ಬೇಲ್ಟದಿಂದ ನನ್ನ ಬೆನ್ನಮೇಲೆ ಹಾಗೂ ಕಾಲುಗಳ ಮೇಲೆ ಹೊಡೆದನು ಆ ನಂತರ ಬಲಹೊಟ್ಟೆಯ ಮೇಲೆ ಸುಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮ ಹತ್ಯ ಪ್ರಕರಣ :
ಯಡ್ರಾಮಿ ಠಾಣೆ : ನಮ್ಮೂರ ಸಿಮೆಯಲ್ಲಿ ನನ್ನ ಗಂಡನ ಹೆಸರಿಗೆ 6 ಎಕರೆ ಜಮೀನು ಇರುತ್ತದೆ ನನ್ನ ಗಂಡ ಬೀಳವಾರ ಗ್ರಾಮದಲ್ಲಿರುವ ಕೆಜಿಬಿ ಬ್ಯಾಂಕ್‌ ನಲ್ಲಿ 80.000/- ರೂ ಗಳ ಸಾಲ ಮಾಡಿಕೊಂಡಿದ್ದು ಮತ್ತು ಇತರೆ ಖಾಸಗಿ ಸಾಲ 1 ಲಕ್ಷ ರೂ ಮಾಡಿಕೊಂಡಿದ್ದು ಇರುತ್ತದೆ. ಈ  ವರ್ಷ ಮಳೆಯಾಗದೆ ಇದ್ದಿದ್ದರಿಂದ ಹೊಲದಲ್ಲಿ ಯಾವುದೆ ಬೆಳೆ ಹಾಕಿರುವದಿಲ್ಲ. ನನ್ನ ಗಂಡ ಆಗಾಗ ಸಾಲ ಹೆಚ್ಚಾಗುತ್ತಿದ್ದು ಅದನ್ನು ಹೇಗೆ ತಿರಿಸಬೇಕು ಅಂತಾ ಚಿಂತೆ ಮಾಡುತ್ತಿದ್ದರು ಅದಕ್ಕೆ ನಾನು ಅವರಿಗೆ ಸಮಾದಾನ ಹೇಳುತ್ತಾ ಬಂದಿದ್ದು  ದಿನಾಂಕ 06.02.2016 ರಂದು ರಾತ್ರಿ 09:00 ಗಂಟೆಗೆ ನಾನು ಮತ್ತು ನನ್ನ ಗಂಡ ಹಾಗು ಮಕ್ಕಳು ಕೂಡಿ ಊಟ ಮಾಡಿಕೊಂಡು ಮಲಗಿಕೊಂಡಿದ್ದು ಬೆಳಗ್ಗೆ 05:00 ಗಂಟೆಗೆ ನಾನು ಎದ್ದಾಗ ಕ್ರೀಮಿನಾಷಕ ಔಷದ ತರಹ ವಾಸನೆ ಬರುತ್ತಿದ್ದು ನಂತರ ನನ್ನ ಗಂಡನಿಗೆ ಎಬ್ಬಿಸಲು ಹೋದಾಗ ನನ್ನ ಗಂಡ ಮೃತಪಟ್ಟಿದ್ದನು ಆಗ ನಾನು ಗಾಭರಿಗೊಂಡು ನಮ್ಮ ಅಣ್ಣ ತಮ್ಮಂದಿರಾದ ಅರ್ಜುನ ಕುಂಬಾರ, ಭೀಮಣ್ಣ ಕುಂಬಾರ ರವರಿಗೆ ಮನೆಗೆ ಕರೆಯಿಸಿದೆನು. ನನ್ನ ಗಂಡ ಸಾಲ ಹೇಗೆ ತಿರಿಸಬೇಕು ಅಂತಾ ಚಿಂತೆ ಮಾಡುತ್ತ ಜಿಗುಪ್ಸೆಗೊಂಡು ರಾತ್ರಿ 10:00 ಗಂಟೆಯಿಂದ ಬೇಳಗ್ಗೆ 04:00 ಗಂಟೆಯ ಮಧ್ಯದ ಅವಧಿಯಲ್ಲಿ ನಾವೇಲ್ಲರು ಮಲಗಿಕೊಂಡಾಗ ಯಾವುದೋ ಕ್ರೀಮಿನಾಷಕ ಔಷಧಿ ಸೇವನೆ ಮಾಡಿ ಮೃತಪಟ್ಟಿರುತ್ತಾನೆ. ಅಂತಾ ಶ್ರೀಮತಿ ಮಲ್ಲಮ್ಮ ಗಂಡ ಮಲ್ಲಪ್ಪ ಕುಂಬಾರ್ ಸಾ : ಹಂಗರಗಾ ಬಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಆಳಂದ ಠಾಣೆ : ಶ್ರೀ ಶ್ರೀಮಂತ ತಂದೆ ಸಿತಾರಾಮ ರಾಠೋಡ ಮು|| ಗುಲಹಳ್ಳಿ ತಾಂಡಾ ರವರ  ಮಗ ರಮೇಶ ಇತನು ದಿನಾಂಕ: 06/02/2016 ರಂದು ಬೆಳಗ್ಗೆ ಎಂದಿನಂತೆ ಪಡಸಾವಳಿ ಗ್ರಾಮಕ್ಕೆ ಕೆಲಸಕ್ಕೆ ಹೊದನು ನಮ್ಮ ಮೋಟರ್ ಸೈಕಲ ನಂ: MH:04 T-7931 ಹಿರೋ ಹೊಂಡಾದ ಮೇಲೆ ಹೂದನು ನಂತರ ಕೆಲಸ ಮುಗಿಸಿಕೊಂಡು ಸಾಯಂಕಾಲ 07:55 ಗಂಟೆ ಸುಮಾರಿಗೆ ಮನೆಗೆ ಬರುವಾಗ ಕನ್ನಿರಾಮ ಶಕಾಪೂರ ಇತನು ಮೋಬೈಲನಿಂದ ಪೋನ್ ಮಾಡಿ ತಿಳಿಸಿದೆನೆಂದರೆ ನಿಮ್ಮ ಮಗ ರಮೇಶ ಇತನು ಮೋಟರ ಸೈಕಲ ಮೇಲೆ ಆಳಂದ ಕಡೆಗೆ ಹೋಗುವಾಗ ಶಕಾಪೂರ ಕ್ರಾಸ್ ಬ್ರಿಜ್ ಹತ್ತಿರ ಮೋಟರ ಸೈಕಲ ಪಕ್ಕಕ್ಕೆ ನಿಲ್ಲಿಸಿದಾಗ ಹಿಂದಿನಿಂದ ವಾಗದರಿ ಕಡೆಯಿಂದ ಯಾವದೋ ಒಂದು ಟ್ಯಾಂಕರ ಚಾಲಕನು ಅತಿವೇಗದಿಂದ ಅಲಕ್ಷತನದಿಂದ ನಡೆಸಿಕೊಂಡು ಬಂದು ನಿಮ್ಮ ಮಗನ ಮೋಟರ ಸೈಕಲ್ ಗೆ ಡಿಕ್ಕಿ ಹೊಡೆದು ವಾಹನದೊಂದಿಗೆ ಓಡಿ ಹೋಗಿರುತ್ತಾನೆ ಇವರಿಗೆ ಬಹಳ ರಕ್ತ ಗಾಯವಾಗಿದೆ ಎಂದು ಬರಲು ತಿಳಿಸಿದ ಮೇರೆಗೆ ನಾನು ಹಾಗೂ ವಿಜಯಕುಮಾರ ಕೂಡಿಕೊಂಡು ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಮಗ ರಮೇಶ ಕೆಳಗಡೆ ಬಿದ್ದಿದ್ದು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ ನಂತರ ನಾವು 108 ಅಂಬುಲೆನ್ಸ್ ನಲ್ಲಿ ಹಾಕಿಕೊಂಡು ಸರಕಾರಿ ಆಸ್ಪತ್ರೆ ಆಳಂದಕ್ಕೆ ಬಂದು  ಚಿಕಿತ್ಸೆ ಮಾಡಿಸಿ ಹೆಚ್ಚಿನ ಚಿಕಿತ್ಸೆಗೆ ಬಸವೇಶ್ವರ ಆಸ್ಪತ್ರೆ ಕಲಬುರಗಿಗೆ ತಗೆದುಕೊಂಡು ಹೋಗಿ ಅಲ್ಲಿ ಚಿಕಿತ್ಸೆ ಪಡೆದು ನಂತರ ಗಂಗಾ ಆಸ್ಪತ್ರೆಗೆ ತಗೆದುಕೊಂಡು ಹೋಗಿ ಚಿಕಿತ್ಸೆ ಮಾಡಿಸಿದ್ದು ವೈದ್ಯರು ಕಂಡಿಸನ್ ಸಿರಿಯಸ್ ಇದೆ ಅಂತಾ ತಿಳಿಸಿದ್ದರಿಂದ ಹೆಚ್ಚಿನ ಚಿಕಿತ್ಸೆ ಕುರಿತು ಹೈದರಬಾದಗೆ ಕರೆದುಕೊಂಡು ಹೋಗುತಿದ್ದಾಗ ಮಾರ್ಗ ಮದ್ಯದಲ್ಲಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಸೇಡಂ ಠಾಣೆ : ಶ್ರೀ ಶರಣಪ್ಪ ತಂದೆ ಸೊಮಣ್ಣ ಮಡಿವಾಳ ಸಾ : ಇವಣಿ ಹುಡಾ ತಾ : ಚಿತ್ತಾಪೂರ ಹಾ.ವ: ಬಟಗೇರಾ (ಬಿ) ತಾ : ಸೇಡಂ ಇವರು ದಿನಾಂಕ: 04-02-2016 ರಂದು 10:00 ಪಿ.ಎಮ್ ಕ್ಕೆ ಮನೆಯಲ್ಲಿ ನಾನು ಮತ್ತು ನಮ್ಮ ಮನೆಯವರೆಲ್ಲರೂ ಸೇರಿ ಊಟ ಮಾಡಿ ಮನೆಯ ಮುಂದುಗಡೆ ದ್ವಿಚಕ್ರವಾಹನವನ್ನು ನಿಲ್ಲಿಸಿ ಮನೆಯಲ್ಲಿ ಮಲಗಿಕೊಂಡಿದ್ದೆವು. ನಂತರ ದಿನಾಂಕ: 05-02-2016 ರಂದು 06:00 .ಎಮ್ ಕ್ಕೆ ಎದ್ದು ಮನೆಯ ಮುಂದೆ ನಿಲ್ಲಿಸಿದ ನನ್ನ ದ್ವೀಚಕ್ರ ವಾಹನ ನಂ. KA32EJ6784 ನೆದ್ದನ್ನು ನೋಡಲಾಗಿ ಇರಲಿಲ್ಲ. ನಂತರ ನಾನು ಎಲ್ಲಾ ಕಡೆ ಗ್ರಾಮದಲ್ಲಿ ಹಾಗು ಸೇಡಂದಲ್ಲಿ ಹುಡುಕಾಡಲಾಗಿ ಎಲ್ಲಿಯೂ ನನ್ನ ದ್ವಿಚಕ್ರ ವಾಹನದ ಬಗ್ಗೆ ಮಾಹಿತಿ ಸಿಕ್ಕಿರುವುದಿಲ್ಲ. ಕಾರಣ ದಿನಾಂಕ: 04-02-2016 ರಂದು 10:00 ಪಿ.ಎಮ್ ದಿಂದ 05-02-2016 ರಂದು 06:00 .ಎಮ್ ದ ಅವಧಿಯಲ್ಲಿ ಯಾರೋ ಕಳ್ಳರು ನನ್ನ ಮನೆಯ ಮುಂದೆ ನಿಲ್ಲಿಸಿದ ದ್ವಿಚಕ್ರ ವಾಹನ  ನಂ. KA32EJ6784 ನೆದ್ದರ ಇಂಜೀನ್ ನಂ. HA10EWFHE18692, ಚೆಸ್ಸಿ ನಂ. MBLHA10BWFHE67520 ನೆದ್ದರ ಅ.ಕಿ|| 44,935=00 ರೂ.ಗಳ ನೆದ್ದರ ದ್ವಿಚಕ್ರ ವಾಹನ ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.