POLICE BHAVAN KALABURAGI

POLICE BHAVAN KALABURAGI

08 March 2018

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 07.03.2018 ರಂದು ಸಾಯಂಕಾಲ ಚಿಂಚೋಳ್ಳಿ ಲೇಔಟದಲ್ಲಿ ಇರುವ ಎಸ್.ಬಿ.ಹೆಚ್ ಬ್ಯಾಂಕ ಪಕ್ಕದಲ್ಲಿರುವ ರಸ್ತೆಯಲ್ಲಿ  ಒಬ್ಬ ವ್ಯಕ್ತಿ ಕೂಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಚಿಂಚೋಳ್ಳಿ ಲೇಔಟದಲ್ಲಿ ಇರುವ ಎಸ್.ಬಿ.ಹೆಚ್ ಬ್ಯಾಂಕ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಬ್ಯಾಂಕ ಪಕ್ಕದಲ್ಲಿರುವ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿರುವ  ಬಗ್ಗೆ ಖಚಿತಪಡಿಸಿಕೊಂಡು ದಾಳಿ ಮಾಡಲು ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವನನ್ನು ಹಿಡಿದುಕೊಂಡು ಅವರನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಲಕ್ಷ್ಮಿಕಾಂತ ತಂದೆ ರಾಚಣ್ಣ ರಾಯಗೊಂಡ ಸಾ: ಪಟ್ಟಣ ತಾ:ಜಿ: ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ 1) ನಗದು ಹಣ 1620/- ರೂ 2) 4 ಮಟಕಾ ಬರೇದ ಚೀಟಿಗಳು ಅ:ಕಿ: 00 3) ಒಂದು ಬಾಲ ಪೇನ್  ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಮಾಹಾಗಾಂವ ಠಾಣೆ : ದಿನಾಂಕ 06/03/2018 ರಂದು ಸಾಯಂಕಾಲ ನಮ್ಮೂರಿನ ಶ್ರೀನಾಥ ನಾಕಮನ ಇತನು ನನಗೆ ಪೋನ್ ಮಾಡಿ ತಿಳಿಸಿದೆನೆಂದರೆ ನಾನು ಮತ್ತು ಸಿದ್ರಾಮ ಕಗ್ಗನಮಡ್ಡಿ  ಇಬ್ಬರು ಕೂಡಿಕೊಂಡು ನಮ್ಮೂರಿನಿಂದ ಸಿರಗಾಪೂರ ಕ್ರಾಸನ್ ಕಡೆಗೆ ಹೋಗುತ್ತಿದ್ದಾಗ ನಮ್ಮ ಹಿಂದಿನಿಂದ ಒಂದು ಇನೊವಾ ಕಾರ ಚಾಲಕನು ತನ್ನ ಕಾರನ್ನು ಅತೀ ವೇಗದಿಂದ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮಗೆ  ಸೈಡ ಹೊಡೆದು ಮುಂದೆ ಹೋಗಿ ಭೂಸಣಗಿ ಸಿಮಾಂತರ ಚನ್ನಬಸಪ್ಪ ಮಹಾಜನ ಇವರ ಹೊಲದ ಹತ್ತಿರ ರೋಡಿನ ಬದಿಗೆ ತಗ್ಗಿನಲ್ಲಿ ತನ್ನ ಕಾರನ್ನು ಪಲ್ಟಿ ಮಾಡಿ ಅಪಘಾತ ಪಡಿಸಿದ್ದು ಆಗ ಹಿಂದಿನಿಂದ ಬರುತ್ತಿದ ನಾನು ಮತ್ತು ಸಿದ್ರಾಮ ಕಗ್ಗನಮಡಿ ಇಬ್ಬುರು ಸಮೀಪ ಹೋಗಿ ನೊಡಲಾಗಿ ಅಪಘಾತಕಿಡಾದ ಇನೊವಾ ಕಾರನಲ್ಲಿ ನಮ್ಮೂರ ತುಳಜಪ್ಪ ತಂದೆ ಮರಗಪ್ಪ ನಾಕಮನ ಮತ್ತು ಕಲಹಂಗರಗಾ ಗ್ರಾಮದ ಲಕ್ಷ್ಮಣ ತಂದೆ ತಿಮ್ಮಯ್ಯ ಮಂಜಾಳಕರ ಇವರು ಇದ್ದು ತುಳಜಪ್ಪ ಇತನಿಗೆ ತಲೆ ಹಿಂದೆ ಭಾರಿ ಗುಪ್ತಗಾಯ ಮತ್ತು ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಲಕ್ಷ್ಮಣ ತಂದೆ ತಿಮ್ಮಯ್ಯ ಇತನಿಗೆ ಹಣೆಯ ಮೇಲೆ ಕಣ್ಣಿನ ಮೇಲೆ ತಲೆಯ ಹಿಂದೆ ಮತ್ತು ಕುತ್ತಿಗೆ ಸಾದ ಮತ್ತು ಭಾರಿ ರಕ್ತಗಾಯವಾಗಿದ್ದು ನಾವಿಬ್ಬರು ಕೂಡಿಕೊಂಡು ತುಳಜಪ್ಪಾ ಮತ್ತು ಲಕ್ಷ್ಮಣ ಇವರನ್ನು ಕಾರಿನಿಂದ ಹೊರಗೆ ತೆಗೆದೇವು ಕಾರು ಚಾಲಕನಿಗೆ ವಿಚಾರಿಸಲಾಗಿ ತನ್ನ ಹೆಸರು ಸಿದ್ದಬಸವ ತಂದೆ ಶ್ರೀಮಂತ ಕಣ್ಣೂರ ಸಾ|| ಬಬಲಾದ (ಐ.ಕೆ) ಅಂತ ಹೇಳಿರುತ್ತಾನೆ ಅಂತ ನನಗೆ ತಿಳಿಸಿದ್ದು ಆಗ ನಾನು ಮತ್ತು ನಮ್ಮೂರಿನ ಇತರರು ಕೂಡಿಕೊಂಡು ಬಬಲಾದದಿಂದ ಬೂಸಣಗಿ ಸಿಮಾಂತರದ ಚನ್ನಬಸಪ್ಪ ಮಹಾಜನ ಇವರ ಹೊಲದ ಹತ್ತಿರ ಹೋಗಿ ನೊಡಲಾಗಿ ಶ್ರೀನಾಥ ನಾಕಮನ ಇವನು ಹೇಳಿದಂತೆ ಘಟನೆ ಜರುಗಿದ್ದು ನಾವೇಲ್ಲರು ಬಂದಿರುವುದನ್ನು ನೋಡಿ ಕಾರ ಚಾಲಕ ಸಿದ್ದಬಸವನು ತನ್ನ ಕಾರನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೊಗಿರುತ್ತಾನೆ .ಇನೊವಾ ಕಾರ ನಂ ಕೆ.ಎ-32 ಎಂ.ಬಿ-8001 ನೇದರ ಚಾಲಕ ಸಿದ್ದಬಸವ ತಂದೆ ಶ್ರೀಮಂತ ಸಾ|| ಬಬಲಾದ (ಐ.ಕೆ)  ಇತನ ಮೇಲೆ ಕಾನೂನು ಕ್ರಮ ಕೈಗೊಳಬೇಕು ಅಂತಾಶ್ರೀ ಭವಾನಿ ತಂದೆ ಮರಗಪ್ಪ ನಾಕಮನ  ಸಾ :| ಬಬಲಾದ ಐಕೆ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನರೋಣಾ ಠಾಣೆ : ಶ್ರೀ  ಮಲ್ಲಿಕಾರ್ಜುನ ಶಿರಗಾಪೂರ ಸಾ||ಲಿಂಗನವಾಡಿ ಇವರ ತಂದೆ-ತಾಯಿಗೆ ನಾನು ಮತ್ತು ಮಹಾದೇವಪ್ಪಾ ಅಂತಾ ಇಬ್ಬರು ಗಂಡು ಮಕ್ಕಳಿದ್ದು ನಮ್ಮ ತಂದೆ-ತಾಯಿ ಇಬ್ಬರು ಮೃತಪಟ್ಟಿದ್ದು ಪಿತ್ರಾರ್ಜಿತ ಜಮೀನು ಹಂಚಿಕೊಂಡಿರುತ್ತೇವೆ. ಸದರಿ ಜಮೀನು ಸರ್ವೆಗಾಗಿ ಅರ್ಜಿ ಸಲ್ಲಿದ್ದು ಅದಂತೆ ಈಗ 2-3 ದಿವಸಗಳ ಹಿಂದೆ ಸರ್ವೇಮಾಡಿದ್ದು ಸದರಿ ಸರ್ವೆೇ ಕಾಲಕ್ಕೆ ಸರಪಳಿ ಹಿಡಿಯುವ ವಿಷಯವಾಗಿ ನಮ್ಮ ಅಣ್ಣನ ಮಗನಾದ ಗಿರಿಯಪ್ಪ ಈತನು ತನ್ನೊಂದಿಗೆ ತಕರಾರು ಮಾಡಿದ್ದು ಅವಾಗಿನಿಂದ ನಮ್ಮ ಅಣ್ಣ ಹಾಗೂ ಅವರ ಪರಿವಾರದವರು ನಮ್ಮ ಮೇಲೆ ಧ್ವೇಷ ಸಾದಿಸುತ್ತಿದ್ದು ದಿನಾಂಕ:06-03-2018 ರಂದು ಮುಂಜಾನೆ ನಾನು ನನ್ನ ಮಗನಾದ ಸಿದ್ರಾಮಪ್ಪಾ ಹಾಗೂ ನನ್ನ ಹೆಂಡತಿಯಾದ ಸುಮಂಗಲಾಬಾಯಿ ರವರು ಮಾತನಾಡುತ್ತಾ ನಮ್ಮ ಮನೆಯ ಮುಂದೆ ನಿಂತಿರುವಾಗ 1)ಮಹಾದೇವಪ್ಪ ತಂದೆ ಬೀಮಶ್ಯಾ ಶಿರಗಾಪುರ, 2)ಗಿರೇಪ್ಪ ತಂದೆ ಮಹಾದೇವಪ್ಪಾ ಶಿರಗಾಪೂರ 3)ಶಿವಪ್ಪ @ ಶಿವಕುಮಾರ ತಂದೆ ಮಹಾದೇವಪ್ಪಾ ಶಿರಗಾಪೂರ, 4)ವಿಜಯಕುಮಾರ ತಂದೆ ಮಹಾದೇವಪ್ಪ ಶಿರಗಾಪೂರ, 5)ಸವಿತಾಬಾಯಿ ಗಂಡ ಮಹಾದೇವಪ್ಪ ಶಿರಗಾಪೂರ, 6)ಜಗದೇವಿ ಗಂಡ ಗಿರೇಪ್ಪ ಶಿರಗಾಪೂರ ಮತ್ತು 7)ಶರಣಮ್ಮ ಗಂಡ ಶಿವಪ್ಪ ಶಿರಗಾಪೂರ ರವರುಗಳು ಎಲ್ಲರೂ ಗುಂಪು ಕಟ್ಟಿಕೊಂಡು ನಮ್ಮ ಮನೆಯ ಮುಂದೆ ನಿಂತು ನನಗೆ ಏ ಸೋಳೆ ಮಗನಾ ಸರ್ವೇ ಮಾಡುವ ಕಾಲಕ್ಕೆ ನನಗೆ ಬೈದಿದ್ದಿಯ್ಯಾ ಎಂದು ಗಿರೇಪ್ಪ ಇತನು ಅವಾಚ್ಯವಾಗಿ ಬೈಯ್ಯುತ್ತಿರುವಾಗ ನಾನು ಮತ್ತು ನನ್ನ ಮಗ ಸಿದ್ರಾಮಪ್ಪಾ ಹಾಗೂ ನನ್ನ ಹೆಂಡತಿ ಸುಮಂಗಲಾಬಾಯಿ ರವರುಗಳು ಕೂಡಿ ಅವರ ಹತ್ತಿರ ಹೋಗಿ ವಿಚಾರಿಸುತ್ತಿರುವಾಗ ಮಹಾದೇವಪ್ಪ ಮತ್ತು ಗಿರೇಪ್ಪ ಇವರುಗಳು ಬಡೆಗೆಯಿಂದ ನನ್ನ ಎಡಗಡೆ ಕಿವಿಗೆ ಹಾಗೂ ಹಣೆಗೆ ಹೊಡೆದ್ದಿದ್ದರಿಂದ ಕಿವಿಗೆ ಭಾರಿಗಾಯವಾಗಿ ಹರಿದಂತೆ ಕಂಡುಬರುತ್ತಿದೆ. ಅಷ್ಟರಲ್ಲಿಯೇ ನನ್ನ ಮಗನಾದ ಸಿದ್ರಾಮಪ್ಪಾ ಈತನು ಜಗಳ ಬಿಡಿಸಲು ಬಂದಾಗ ಶಿವಪ್ಪ ಮತ್ತು ವಿಜಯಕುಮಾರ ಇವರುಗಳು ಬಡಿಗೆಯಿಂದ ನನ್ನ ಮಗನ ತಲೆಗೆ ಬೆನ್ನಿಗೆ ಎಡಗಾಲ ತೊಡೆಗೆ ಹೊಡೆದ್ದಿದ್ದರಿಂದ ಒಳಪೆಟ್ಟಾಗಿದೆ ಸುಮಿತ್ರಾಬಾಯಿ ಜಗದೇವಿ ಶರಣಮ್ಮ ರವರುಗಳು ಕೂಡಿ ನನಗೆ ನೆಲಕ್ಕೆ ಕೆಡವಿ ಕೈಯಿಂದ ಹೊಡೆಬಡೆ ಮಾಡಿರುತ್ತಾರೆ. ಅಷ್ಟರಲ್ಲಿಯೇ ಅಲ್ಲಿಯೇ ಇದ್ದ ನನ್ನ ಹೆಂಡತಿಯಾದ ಸುಮಂಗಲಾಬಾಯಿ ಹಾಗೂ ನಮ್ಮ ಗ್ರಾಮದ ಮಲ್ಲಣ್ಣ ತಂದೆ ಚನ್ನಬಸಪ್ಪ ಇಂಡಿ ಮತ್ತು ಮಹಾದೇವಪ್ಪ ತಂದೆ ಸಿದ್ರಾಮಪ್ಪ ಇಂಡಿ ರವರುಗಳು ಜಗಳ ನೋಡಿ ಬಿಡಿಸಿರುತ್ತಾರೆ. ನಂತರ ಗಿರೇಪ್ಪ ಹಾಗೂ ಶಿವಪ್ಪ ನನಗೆ ಹಾಗೂ ನನ್ನ ಮಗನಿಗೆ ಇವತ್ತು ನೀವು ಉಳಿದ್ದಿದ್ದಿ ಮಕ್ಕಳ್ಳೆ ಮುಂದೆ ಒಂದ್ದಾಲ್ಲ ಒಂದು ದಿವಸ ನಿಮಗೆ ಖಲಾಸ ಮಾಡುತ್ತೇವೆ ಜೀವ ಬೇದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.