POLICE BHAVAN KALABURAGI

POLICE BHAVAN KALABURAGI

07 January 2012

Gulbarga Dist Reported Crimes

ಮೋಟಾರ ಸೈಕಲ್ ಕಳ್ಳತನ ಪ್ರಕರಣ:
ಬ್ರಹ್ಮಪೂರ ಠಾಣೆ:
ಶ್ರೀ.ಬಸಲಿಂಗಪ್ಪ ತಂದೆ ಹನುಮಂತಪ್ಪ ಬೂಪುರ, ಸಾ ಗಾಜೀಪೂರ ಗುಲಬರ್ಗಾ ರವರು ನಾನು ದಿನಾಂಕ: 03/12/2011 ರಂದು ಮನೆಯ ಮುಂದೆ ಹೀರೊ ಹೊಂಡಾ ಸಿ.ಡಿ 100 ನಂ: ಕೆಎ 32 ಹೆಚ್ 3069 ನೇದ್ದನ್ನು ನಿಲ್ಲಿಸಿದ್ದು ಯಾರೋ ಕಳ್ಳರು ನನ್ನ ಮೋಟರ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಆವಾಗಿನಿಂದ ಇಲ್ಲಿಯವರೆಗೆ ಹುಡುಕಾಡಿದರು ಪತ್ತೆ ಆಗಿರುವದಿಲ್ಲ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 04/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆ ಪ್ರಯತ್ನ ಪ್ರಕರಣ:
ಚೌಕ ಪೊಲೀಸ್ ಠಾಣೆ :
ಶ್ರೀ ಕಿರಣಕುಮಾರ ತಂದೆ ಮೊಹನದಾಸ ಕಾಳೆ ಸಾ: ಬಾಪುನಗರ ಗುಲಬರ್ಗಾರವರು ನಾನು ಸುಮಾರು 15 ದಿವಸಗಳ ಹಿಂದೆ ನಾನು ಯುನಿವರಿಸಿಯಲ್ ಜಿಮ್ ದಲ್ಲಿ ವ್ಯಾಯಾಮ ಮಾಡುತ್ತಿದ್ದಾಗ ವ್ಯಾಯಾಮ ಮಾಡುವ ವಿಷಯದಲ್ಲಿ ಗಂಗಾನಗರದ ಹುಡುಗನ ಸಂಗಡ ತಕರಾರು ಆಗಿದ್ದು ಆಗ ಬಸವನಗರದ ಚನ್ನು ಇತನು ನಮ್ಮಿಬ್ಬರಿಗೆ ತಿಳಿಹೇಳಿ ರಾಜಿ ಮಾಡಿಸಿದ್ದನು. ದಿನಾಂಕ: 06.01.2012 ರಂದು ಸಾಯಂಕಾಲ ನಾನು ಮತ್ತು ಸುನೀಲ ಪಾಟೀಲ ಇಬ್ಬರು ಕೂಡಿ ವ್ಯಾಯಾಮ ಮಾಡಲು ಜಿಮ್ಮಿಗೆ ಹೋಗಿ ವ್ಯಾಯಾಮ ಮಾಡುತ್ತಿದ್ದಾಗ ಬಸವನಗರದ ಅಮರ, ಚನ್ನು, ಬಸವರಾಜ, ಪ್ರದೀಪ ಎಲ್ಲರೂ ಕೂಡಿ ಬಂದವರೆ ಎಲ್ಲರೂ ಸೇರಿ ಕೈಯಲ್ಲಿದ್ದ ತಲವಾರದಿಂದ ಹೊಡೆದು ಭಾರಿ ರಕ್ತಗಾಯಪಡಿಸಿ ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾರೆ ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 05/2012 ಕಲಂ 307 ಸಂ. 34 L¦¹ ಮತ್ತು 3(1)(10) ಎಸ್ಸಿ/ಎಸ್ಟಿ ಕಾಯ್ದೆ 1989 ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIME

ಹಲ್ಲೆ ಪ್ರರಕರಣ:
ಬ್ರಹ್ಮಪೂರ ಠಾಣೆ :
ಶ್ರೀ ಲೋಕೇಶ ತಂದೆ ಹುಚ್ಚಪ್ಪ ಹೊಸಮನಿ, ಸಾ ಅಫಜಲಪೂರ ಹಾವ ಶಕೀಲ ಅನ್ಸಾರಿ ಇವರ ಮನೆಯ ಹತ್ತಿರ ವಿದ್ಯಾನಗರ ಗುಲಬರ್ಗಾ ರವರು ನಾನು ದಿನಾಂಕ: 06/01/2012 ರಂದು ಮಧ್ಯಾಹ್ನ ಕಾಲೇಜ ಮುಗಿಸಿಕೊಂಡು ಬರುತ್ತಿರುವಾಗ ಯಮಹಾ ಶೋರೂಮ ಎದುರುಗಡೆ ಗಿನೇಶ @ ಗಿನಿಕ @ ಚಿಂಟು ಪೊಲೀಸ ಕ್ವಾಟರ್ಸ, ಭೀಮಾಶಂಕರ ಸಂಗಡ 10 ಜನರು ಸೇರಿಕೊಂಡು ನನಗೆ ಗಾಡಿ ಹಾಯಿಸುವ ಸಂಬಂಧ ಜಗಳ ಮಾಡಿದಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು, ಎಲ್ಲರೂ ಸೇರಿ ಪರಸಿ ತುಕಡಿಯಿಂದ ಮತ್ತು ಬಡಿಗೆಯಿಂದ ತಲೆಗೆ ಕಾಲಿಗೆ ಕೈಗೆ ಟೊಂಕಕ್ಕೆ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 03/2012 ಕಲಂ: 143, 147, 148, 341, 323, 324, 504, 506 ಸಂಗಡ 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.