POLICE BHAVAN KALABURAGI

POLICE BHAVAN KALABURAGI

03 October 2012

GULBARGA DISTRICT REPORTED CRIME


ಅಪಘಾತ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ: ಶ್ರೀ ಶರಣಮ್ಮ ಗಂಡ ಯಲ್ಲಪ್ಪ ಹಲ್ಲಕಟ್ಟಿ ಸಾ: ಚಿತ್ತಾಪೂರ ಹಾ.ವ ಗಂಗಾಬಾಯಿ ಮಠದ ಹತ್ತಿರ ಜೇವರ್ಗಿರವರು ನನ್ನ ಮಗನಾದ ಮಲ್ಲಿಕಾರ್ಜುನ ಇತನು ದಿನಾಂಕ:02-10-12 ರಂದು ಸಾಯಂಕಾಲ 7-45 ಗಂಟೆಯ ಸುಮಾರಿಗೆ ಶಹಾಪೂರ ಜೇವರ್ಗಿ  ಮೇನ್ ರೋಡ ಅವರಾದ ಕ್ರಾಸದ ಸಮೀಪ ಮೋಟಾರ ಸೈಕಲ ನಂ ಕೆ.ಎ-28, ಇ.ಎ-0063 ನೇದ್ದರ ಮೇಲೆ ರಾಮು ತಂದೆ ಭಿಮಯ್ಯ ಇತನಿಗೆ ಕೂಡಿಸಿಕೊಂಡು ಮೋಟಾರ ಸೈಕಲ  ಮೇಲೆ ಶಹಾಪೂರ ಕಡೆಯಿಂದ ಜೇವರ್ಗಿ ಕಡೆಗೆ ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಮುಂದುಗಡೆ ರೋಡಿನ ಮೇಲೆ ರಸ್ತೆ ಸುಗಮ ಸಂಚಾರ ನಿಯಮ ಪಾಲಿಸದೆ ಮತ್ತು ಪಾರ್ಕಿಂಗ್ ಲೈಟ್ ಹಾಕದೇ, ಅಲಕ್ಷತನದಿಂದ ನಿಲ್ಲಿಸಿದ್ದ ಲಾರಿ ನಂ ಕೆಎ-28-ಎ-7323 ನೇದ್ದರ ಹಿಂಭಾಗಕ್ಕೆ ಜೋರಾಗಿ ಡಿಕ್ಕಿ ಹೊಡೆದ ಪರಿಣಾಮ ಮೋಟಾರ ಸೈಕಲ್ ಸಮೇತ ರೋಡಿನ ಮೇಲೆ ಬಿದ್ದು ನನ್ನ ಮಗ  ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ರಾಮು ಇತನಿಗೆ ಭಾರಿ ಗಾಯಗಳಾಗಿರುತ್ತವೆ. ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:150/2012 ಕಲಂ 279, 338,283,  304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.
ಅಪರಿಚಿತ ವ್ಯಕ್ತಿ ಮರಣ ಹೊಂದಿದ್ದ ಬಗ್ಗೆ: 
ಅಶೋಕ ನಗರ ಪೊಲೀಸ್ ಠಾಣೆ: ದಿನಾಂಕ:03-10-2012 ರಂದು ಬೆಳಿಗ್ಗೆ  8-30  ಗಂಟೆ ಸುಮಾರಿಗೆ ಗುಲಬರ್ಗಾ ಕೇಂದ್ರ ಬಸ್ಸ ನಿಲ್ದಾಣದಲ್ಲಿ  ಅಂದಾಜು 40 ರಿಂದ 45 ವಯಸ್ಸಿನ  ಅಪರಿಚಿತ ವ್ಯಕ್ತಿಯ ಯಾವುದೋ ಕಾಯಿಲೆಯಿಂದ ಬಳಲಿ ಮೃತಪಟ್ಟಿದ್ದು.  ಮೃತನ ಮೈಮೇಲೆ ಕ್ರೀಮ ಬಣ್ಣದ ಗೆರೆವುಳ್ಳ ಶರ್ಟ ಇದ್ದು ಬಿಳಿಯ ಬಣ್ಣದ ಪ್ಯಾಂಟ ಹಾಗೂ ಒಂದು ಬಿಳಿ ಬಣ್ಣದ ಟಾವೆಲ್ ಇರುತ್ತದೆ. ಸಾಧಾ ತೆಳ್ಳನೆ ಮೈಕಟ್ಟು ತಿಳಿಗಪ್ಪು ಬಣ್ಣದ ಮೈ ಬಣ್ಣ ದಪ್ಪ ಮೂಗು ಚಪಟೆ ಮುಖ ಕೈಗಳ ಮೇಲೆ ಕಪ್ಪು ಯಾವುದೋ ರೋಗದ ಗಾಯಗಳು ಇದ್ದು ಮೃತನ ಹೆಸರು ವಿಳಾಸ ಗೊತ್ತಾಗಿರುವುದಿಲ್ಲಾ.  ಆದ್ದರಿಂದ ಶವವನ್ನು  ಜಿಲ್ಲಾ ಸರ್ಕಾರಿ ಆಸ್ಪತ್ರೆಯ  ಶವಗಾರ ಕೊಣೆಯಲ್ಲಿ  ಇಡಲಾಗಿದೆ.  ಇತನ  ಹೆಸರು ವಿಳಾಸ ಮತ್ತು ಸಂಬಂಧಿಕರ ಬಗ್ಗೆ  ಮಾಹಿತಿ ಗೊತ್ತಿದ್ದವರು  ಪೊಲೀಸ ಇನ್ಸಪೇಕ್ಟರ ಅಶೋಕ ನಗರ ಪೊಲೀಸ ಠಾಣೆ ಗುಲಬರ್ಗಾ ಮೋಬಾಯಿಲ್  ನಂಬರ    9480803545  ನೇದ್ದಕ್ಕೆ ಅಥವಾ ದೂರವಾಣಿ ಸಂಖ್ಯೆ 08472-263617 ಅಥವಾ ಜಿಲ್ಲಾ ಕಂಟ್ರೋಲ ರೂಮ ಗುಲಬರ್ಗಾ  100 ನೇದ್ದಕ್ಕೆ ಸಂಪರ್ಕಿಸಲು ಕೋರಲಾಗಿದೆ,