POLICE BHAVAN KALABURAGI

POLICE BHAVAN KALABURAGI

15 November 2011

Gulbarga District Reported Crimes

ಕೊಲೆ ಪ್ರಕರಣ :
ಅಫಜಲಪೂರ ಠಾಣೆ :
ಶ್ರೀಮತಿ ಅಕ್ಕುಬಾಯಿ ಗಂಡ ದತ್ತು ಚತ್ರಿ ಸಾ|| ಚೌಡಾಪೂರ ರವರ ಹಿರಿಯ ಮಗ ಶಿವನಂದನು. ದಿನಾಂಕ 14.11.11 ರಂದು ಬೆಳಿಗ್ಗೆ ನನ್ನ ಮಗ ಹಾಗೂ ನನ್ನ ತಮ್ಮ ಗುಂಡಪ್ಪ ಇಬ್ಬರೂ ಟಾ ಟಾ ಎ ಸಿ ವಾಹನವನ್ನು ಅಫಜಲಪೂರ ಪಟ್ಟಣ ಸಂತೆ ಇದ್ದರಿಂದ ವಾಹನವನ್ನು ನಡೆಸಿಕೊಂಡು ಅಫಜಲಪೂರಕ್ಕೆ ಬಂದು ಮುಂಜಾನೆ 11 ಗಂಟೆ ಸಮಯಕ್ಕೆ ಟಾ ಟಾ ಎ ಸಿ ಯಿಂದ ಬಟ್ಟೆ ಮುಟೆಗಳು ನನ್ನ ಮಗ ಹಾಗೂ ನನ್ನ ತಮ್ಮ ಗುಂಡಪ್ಪ ಇಳಿಸುತ್ತಿದ್ದಾಗ ರಮೇಶನ ಬಟ್ಟೆಯ ಮುಟೆದಾರ ಕಡಿದು ಮೂಟೆ ಬಿಚ್ಚಿದ್ದು ರಮೇಶ ಸಾಸನೇಕರ ಈತನು ಬಂದು ನನ್ನ ಮಗ ಶಿವನಂದನೊಂದಿಗೆ ಏ ಮಗನೆ ನನ್ನ ಬಟ್ಟೆಯ ಮೂಟೆ ಯಾಕೆ ಹರಿದಿದ್ದಿ ಎಂದು ಜಗಳ ತೆಗೆದು ಒಬ್ಬರಿಗೊಬ್ಬರು ಹೊಡೆದಾಡುತ್ತಿದ್ದರು ಅಲ್ಲಿಯೇ ಇದ್ದ ಮಲ್ಲಿಕಾರ್ಜುನ ಘತ್ತರಗಿ ಮತ್ತು ನನ್ನ ತಮ್ಮ ಗುಂಡಪ್ಪ ಇವರುಗಳು ಜಗಳವನ್ನು ಬಿಡಿಸಿರುತ್ತಾರೆ ಇದು ಆದ ಅರ್ಧ ಗಂಟೆ ಮೇಲೆ ನನ್ನ ಅಳಿಯ ರಾಜು ಈತನು ಬಂದಿದ್ದು ನನ್ನ ಮಗ ಶಿವನಂದ ಈತನು ನನ್ನ ಅಳಿಯನಿಗೆ ರಮೇಶ ಜಗಳ ಮಾಡಿದ ಬಗ್ಗೆ ತಿಳಿಸಿದನು. ನನ್ನ ಅಳಿಯ ಬಂದ ನಂತರ ರಮೇಶ ಸಾಸನೇಕರ ಈತನು ತನ್ನ ಅಣ್ಣನ ಮಗ ಗಿರೀಶ ಲೇಖನರ ಹಾಗೂ ಅವನ ಅಳಿಯ ಸಂತೋಷನಿಗೆ ಪೋನ ಮಾಡಿ ಅವರನ್ನು ಕರೆಯಿಸಿ ಮೂರು ಜನರು ಸೇರಿ ಮತ್ತೇ ನನ್ನ ಮಗನ ಜೊತೆಗೆ ಜಗಳ ಮಾಡುತ್ತಿದ್ದರು. ಅಲ್ಲಿಯೇ ಇದ್ದ ನನ್ನ ಅಳಿಯ ರಾಜು ಮತ್ತು ಬಟ್ಟೆ ವ್ಯಾಪಾರ ಮಾಡುವ ಮಲ್ಲಿಕಾರ್ಜುನ ಘತ್ತರಗಿ ಹಾಗೂ ನನ್ನ ತಮ್ಮ ಗುಂಡಪ್ಪ ಮೂರು ಜನರು ಸೇರಿ ಸದರಿಯವರಿಗೆ ಸಮದಾನ ಹೇಳಿ ಜಗಳವನ್ನು ಬಿಡಿಸಿರುತ್ತಾರೆ. ಗಿರೀಶ ಲೇಖನರ ಈತನು ನನ್ನ ಮಗನಿಗೆ ಮಗನೇ ಇಲ್ಲಿ ರಸ್ತೆಗೆ ಭಾ ನಿನ್ನನ್ನು ನೊಡಿಕೊಳ್ಳುತ್ತೇನೆ ಎಂದಾಗ ನನ್ನ ಮಗನು ರಸ್ತೆಗೆ ಹೋದನು ಗಿರೀಶ ಈತನು ನನ್ನ ಮಗನಿಗೆ ಮಗನೇ ನೀನು ಸಾಯಂಕಾಲ ಊರಿಗೆ ಹೇಗೆ ಹೋಗುತ್ತಿ ನಿನ್ನನ್ನು ಮುಗಿಸಿಯೇ ಬಿಡುತ್ತೇನೆ ಅಂತಾ ಹೆದರಿಕೆ ಹಾಕಿ ಎಲ್ಲರೂ ಹೋದರು. ಸಾಯಂಕಾಲ 6.30 ಗಂಟೆ ಸಮಯಕ್ಕೆ ಸಂತೆ ಮುಗಿದ ನಂತರ ನಮ್ಮ ನಮ್ಮ ಊರಿಗೆ ಹೋಗಬೆಕೆಂದು ನನ್ನ ಮಗ ಶಿವಾನಂದ ಈತನು ಮಳೇಂದ್ರ ಮಠದ ಮುಂದೆ ನಿಲ್ಲಿಸಿದ ಟಾಟಾ ಎಸಿಯೆ ಚಾಲು ಮಾಡಿ ತೆಗೆದುಕೊಂಡು ಬರಲು ಹೋಗಿದ್ದು ಆ ಸಮಯಕ್ಕೆ 1] ರಮೇಶ ತಂದೆ ಅರ್ಜುನ ಸಾಸನೇಕರ, 2] ಗಿರೀಶ ತಂದೆ ಶಿವಾನಂದ ಲೇಖನರ 3] ಸಂತೋಷ ತಂದೆ ಪ್ರಕಾಶ ಸಾಸನೇಕರ 4) ಹರೀಶ ತಂದೆ ಶಿವಾನಂದ ಲೇಖನರ 5) ಶಿವಾನಂದ ತಂದೆ ಶಾಂತಪ್ಪ ಲೇಖನರ ಇವರು ಐದು ಜನರು ಅಲ್ಲಿಯೇ ಇದ್ದು ಹರೀಶ ಮತ್ತು ಶಿವಾನಂದ ಇವರು ನನ್ನ ಮಗ ಶಿವಾನಂದನಿಗೆ ಈ ಮಗನಿಗೆ ಬಿಡಬೇಡಿ ಮುಗಿಸಿಬಿಡಿರಿ ಎಂದು ರಮೇಶ, ಗಿರೀಶ, ಸಂತೋಷ ಇವರು ಮೂರು ಜನರು ನನ್ನ ಮಗನ ಹತ್ತಿರ ಹೋಗಿ ನನ್ನ ಮಗ ಟಾ ಟಾ ಎ ಸಿ ಚಾಲು ಮಾಡುತ್ತಿದ್ದು ವಾಹನದಿಂದ ಜಗ್ಗಿ ಹೊರಗಡೆ ಎಳೆದು ಅವನನ್ನು ಮೂರು ಜನರು ಕೈಯಿಂದ ಹೋಡೆದು ನೆಲಕ್ಕೆ ಹಾಕಿ ರಮೇಶ ಈತನು ತನ್ನ ಕೈಯಲ್ಲಿದ್ದ ಕೊಯಿತಾ ದಿಂದ ಬಲಭಾಗದ ಕುತ್ತಿಗೆಗೆ ಮತ್ತು ತಲೆಯ ಹಿಂಭಾಗಕ್ಕೆ ಎರಡು ಎಟು ಬಲವಾಗಿ ಹೊಡೆದನು. ಗಿರೀಶ ಈತನು ತನ್ನ ಕೈಯಲ್ಲಿದ್ದ ಕೊಯಿತಾದಿಂದ ಬಲಬಾಗದ ತಲೆಗೆ ಹೊಡೆದನು ನಾನು ಅಲ್ಲಿಯೇ ಸಮೀಪವಿದ್ದು ಸದರಿಯವರು ಹೊಡೆಯುವದನ್ನು ನೋಡಿ ನಾನು ಚೀರಾಡುತ್ತ ನನ್ನ ಮಗನ ಹತ್ತಿರ ಹೋಗಿದಾಗ ಸದರಿಯವರು ಅಲ್ಲಿಂದ ಮಲ್ಲಿಕಾರ್ಜುನ ಗುಡಿ ರಸ್ತೆಗೆ ಓಡಿ ಹೋದರು. ನನ್ನ ಮಗನನ್ನು ನೋಡಲಾಗಿ ಭಾರಿ ರಕ್ತಗಾಯ ಹೊಂದಿ ಅವನು ಸ್ಥಳದಲ್ಲಿಯೆ ಮೃತ ಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಪೂರ ಠಾಣೆ ಗುನ್ನೆ ನಂ 190/2011 ಕಲಂ 147 109 302 ಸಂ. 149 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದೆ.

ಮಟಕಾ ಜೂಜಾಟದಲ್ಲಿ ನಿರತ ಇಬ್ಬರ ಬಂಧನ :
ನಿಂಬರ್ಗಾ ಠಾಣೆ :ದಿನಾಂಕ 14/11/2011 ರಂದು ಸಾಯಂಕಾಲ ದುತ್ತರಗಾಂವ ಗ್ರಾಮದಲ್ಲಿ ಮಟಕಾ ಜೂಜಾಟ ನಡೆದ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಶ್ರೀ ಬಿ.ಬಿ ಪಟೇಲ ಪಿ.ಐ ಡಿ.ಸಿ.ಐ.ಬಿ ಗುಲಬರ್ಗಾ ಮತ್ತು ಪಿ.ಐ ಡಿ.ಎಸ್.ಬಿ ಶ್ರೀ ಅಸ್ಲಂ ಭಾಷಾ ಮತ್ತು ಡಿ.ಸಿ.ಐ.ಬಿ ಘಟಕದ ಸಿಬ್ಬಂಧಿಯವರೊಂದಿಗೆ ದುತ್ತರಗಾಂವ ಗ್ರಾಮದ ಬಸವೇಶ್ವರ ಕಟ್ಟೆಯ ಹತ್ತಿರ ನೋಡಲು ಇಬ್ಬರೂ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟ ನಡೆಸುತ್ತಿದ್ದು ಖಚಿತಪಡಿಸಿಕೊಂಡು ಪಂಚರು ಮತ್ತು ಪೊಲೀಸ ಸಿಬ್ಬಂಧಿಯವರೊಂದಿಗೆ ದಾಳಿ ಮಾಡಿ ಹಿಡಿದು ವಿಚಾರಿಸಲು ಅವರ ಹೆಸರು 01] ರಾಜಕುಮಾರ ತಂದೆ ಶರಣಪ್ಪ ಜಮಾದಾರ
, 02] ಮಲ್ಲಿನಾಥ ತಂದೆ ಶರಣಪ್ಪ ಜಮಾದಾರ ಇಬ್ಬರೂ ಸಾ|| ದುತ್ತರಗಾಂವ ಅಂತ ತಿಳಿಸಿದ್ದು ಸದರಿಯವರಿಗೆ ಚೆಕ ಮಾಡಲಾಗಿ ಒಂದು ಹೀರೊ ಹೊಂಡಾ ಸ್ಪ್ಲೆಂಡರ ಮೋಟಾರ ಸೈಕಲ ಹಾಗೂ ಮೂರು ಮೋಬೈಲ ಮತ್ತು ನಗದು ಹಣ 9280/- ರೂ. ಹೀಗೆ ಒಟ್ಟು 45780/- ರೂಪಾಯಿ ಜಪ್ತಮಾಡಿಕೊಂಡು ಆರೊಪಿತರೊಂದಿಗೆ ನಿಂಬರ್ಗಾ ಠಾಣೆಗೆ ತಂದು ಸದರಿಯವರ ವಿರುದ್ಧ ನಿಂಬರ್ಗಾ ಠಾಣೆ ಗುನ್ನೆ ನಂ 119/2011 ಕಲಂ. 78(3) ಕೆ.ಪಿ ಆಕ್ಟ. ಪ್ರಕಾರ ಪ್ರಕರಣ ದಾಖಲಿಸಲಾಗಿದೆ.

ಮಾಂಗಲ್ಯ ಸರ ದೋಚಿದ ಪ್ರಕರಣ :
ಸ್ಟೇಷನ ಬಜಾರ ಠಾಣೆ :
ಶ್ರೀ ಗೋವಿಂದ ತಂದೆ ಅಪ್ಪಾಜಿರಾವ ಕುಟುಂಬಕರ್ ಸಾ: ಬ್ರಹ್ಮಪೂರ ಇವರು ದಿನಾಂಕ : 14/ 11/ 2011 ರಂದು ನನ್ನ ಮಗನಾದ ಕೋಟೇಶ್ವರ ಈತನ ಹುಟ್ಟುಹಬ್ಬ ಮತ್ತು ಜವಳ ಕಾರ್ಯಕ್ರಮ ಇದ್ದ ಪ್ರಯುಕ್ತ ಸನ್ ಇಂಟರ್ ನ್ಯಾಶನಲ್ ಮುಂದುಗಡೆ ವಾಸವಾಗಿರುವ ನನ್ನ ಮಾಮ ಮತ್ತು ಮಾಮಿ ಇವರಿಗೆ ತಿಳಿಸುವುದಕ್ಕಾಗಿ ನಾನು ಮತ್ತು ನನ್ನ ಹೆಂಡತಿ ಮೋಟಾರ ಸೈಕಲ್ ನಂ ಕೆ..-32/ಆರ್-5342 ನೇದ್ದರ ಮೇಲೆ ಕೊಠಾರಿ ಭವನದ ಮುಂದಿನ ರಸ್ತೆಯಲ್ಲಿ ಸನ್ ಇಂಟರ್ ನ್ಯಾಶನಲ್ ಕಡೆ ಹೋಗುತ್ತಿದ್ದಾಗ ಯಾರೋ ಅಪರಿಚಿತ ಎರಡು ಜನರು ಮೋಟಾರ ಸೈಕಲ್ ಮೇಲೆ ಹಿಂದೆ ಹಿಂಬಾಲಿಸಿ ಮೋಟಾರ ಸೈಕಲ್ ಸಮೀಪ ಬಂದು ನಮ್ಮ ಮೋಟಾರ ಸೈಕಲ್ ನಂ ಕೆ.-32/ಆರ್-5342 ನೇದ್ದರ ಹಿಂದುಗಡೆ ಕುಳಿತಿದ್ದ ನನ್ನ ಹೆಂಡತಿಯ ಕೊರಳಲ್ಲಿದ್ದ 30 ಗ್ರಾಂ ಘಟಿಸಿದ ಬಂಗಾರದ ಮಂಗಳ ಸೂತ್ರ .ಕಿ. 45,000=00 ರೂ ಮತ್ತು ಮತ್ತೊಂದು ಚಿಕ್ಕದಾದ ಕರಿಮಣಿಸರದಲ್ಲಿ ಪೋಣಿಸಿದ 5 ಗ್ರಾಂ ಮಂಗಳ ಸೂತ್ರ .ಕಿ. 15000=00 ರೂ ಹೀಗೆ ಒಟ್ಟು 60,000=00 ರೂ ಬೆಲೆಬಾಳುವ ಬಂಗಾರದ ಮಂಗಳ ಸೂತ್ರಗಳನ್ನು ಅಪರಿಚಿತ ವ್ಯಕ್ತಿಗಳು ಕೈಯಿಂದ ಕಿತ್ತಿಕೊಂಡಾಗ ವಂದನಾ ಇವರು ಚೀರಿದ್ದು ನೋಡಲಾಗಿ ಅಪರಿಚಿತ ವ್ಯಕ್ತಿಗಳು ಚಲಾಯಿಸುತ್ತಿದ್ದ ಮೋಟಾರ ಸೈಕಲ್ ನಂಬರ ಇದ್ದಿರಲಿಲ್ಲ ಕಪ್ಪು ಬಣ್ಣದಾಗಿದ್ದು ಮತ್ತು ಪಲ್ಸರ ಕಂಪನಿಯದಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆ ಗುನ್ನೆ ನಂ 197/2011 ಕಲಂ 392 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.

ಅಪಘಾತ ಪ್ರಕರಣ :

ಗುಲಬರ್ಗಾ ಗ್ರಾಮೀಣ ಠಾಣೆ :ದಿನಾಂಕ:14/11/2011 ರಂದು ಮದ್ಯ ರಾತ್ರಿ ಮಹಮ್ಮದ ಮಸೂದ ಇತನು ತನ್ನ ಮೋಟಾರ ಸೈಕಲ ನಂ ಕೆ.ಎ 32 ಎಚ್.6328 ನೆದ್ದನ್ನು ಅತೀವೆಗದಿಂದ ಮತ್ತು ಅಲಕ್ಷತನದಿಂದ ನಡೆಸುತ್ತಾ ಹುಮನಾಬಾದ ರಿಂಗ ರೋಡ ಹತ್ತಿರ ಹೋಗುವಾಗ ಆಗ ಒಮ್ಮಲೇ ಒಂದು ನಾಯಿ ಬಂದಿದ್ದು ಅದಕ್ಕೆ ಹಾಯಿಸಬಾರದೆಂದು ಮೋಟಾರ ಸೈಕಲನ್ನು ಒಮ್ಮಲೆ ಬ್ರೇಕ ಹಾಕಿದ್ದರಿಂದ ಮೋಟಾರ ಸೈಕಲ ಸ್ಕೀಡಾಗಿ ಮೋಟಾರ ಸೈಕಲ ಸಮೇತ ಬಿದ್ದಿದ್ದು ಅದರಿಂದ ಆತನಿಗೆ ಸಾದಾ ರಕ್ತ ಗಾಯ ಮತ್ತು ಗುಪ್ತಗಾಯವಾಗಿರುತ್ತದೆ ಅಂತಾ ಶ್ರೀ ಮಹ್ನದ ಖದೀರ ತಂದೆ ಮಹ್ಮದ ರುಕ್ಮುದ್ದೀನ್ ಶೇಖ ಸಾ: ನೂರಾನಿ ಮೊಹೆಲ್ಲಾ ಹಾಗರಗಾ ಕ್ರಾಸ್ ಗುಲಬರ್ಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆ ಗುನ್ನೆ ನಂ 336/11 ಕಲಂ 279,337 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದೆ.

ಕಳವು ಪ್ರಕರಣ :
ಗುಲಬರ್ಗಾ ಗ್ರಾಮೀಣ ಠಾಣೆ :ಶ್ರೀ ಕೇದರನಾಥ ಈತನು ದಿನಾಂಕ 30-10-2011 ರಂದು ಸಾಯಂಕಾಲ ರಿಂಗ ರೋಡ ಸಾಗರ ದಾಬಾದ ಮುಂದುಗಡೆ ತನ್ನ ಹಿರೋ ಹೊಂಡಾ ಸ್ಪೆಂಡರ ಪ್ಲಸ ಕೆಎ 32 ಯು 8763 ಅ:ಕಿ: 30,000/- ರೂ. ಬೆಲೆವುಳ್ಳದ್ದು ನಿಲ್ಲಿಸಿ, ಸೇಡಂ ರಸ್ತೆಯ ಕಡೆಗೆ ನಿಲ್ಲಿಸಿದ ತಮ್ಮ ಕಂಪನಿಯ ಲಾರಿ ಚಾಲಕನ ಹತ್ತಿರ ಹೋಗಿ ಡಿಸೇಲ ಹಾಕಿಸಿಕೊಳ್ಳಲು ಹಣ ಕೊಟ್ಟು ಬರುವಷ್ಟರಲ್ಲಿ ಯಾರೋ ಕಳ್ಳರು ದ್ವಿಚಕ್ರ ವಾಹನ ಕಳುವು ಮಾಡಿಕೊಂಡು ಹೋಗಿದ್ದು ಅಂದಿನಿಂದ ಇಲ್ಲಿಯವರೆಗೆ ಹುಡುಕಾಡಿದರೂ ಮೋಟಾರ ಸೈಕಲ ಸಿಕ್ಕಿರುವುದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆ ಗುನ್ನೆ ನಂ 337/11 ಕಲಂ
379 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದೆ.