POLICE BHAVAN KALABURAGI

POLICE BHAVAN KALABURAGI

16 December 2016

Kalaburgi District Reported Crimes

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಜೇವರಗಿ ಠಾಣೆ : ದಿನಾಂಕ: 15.12.16 ರಂದು ಮುಂಜಾನೆ ಜೇವರಗಿ ಪಟ್ಟಣದ ಧರ್ಮಸಿಂಗ ಫೌಂಡೇಶ ಎದರು ಸಾರ್ವಜನಿಕ ಸ್ಥಳದಲ್ಲಿ ಮೂರು ಜನರು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾರೆ ಅಂತ  ಬಾತ್ಮಿ ಬಂದಿದ್ದು ಶ್ರೀಮತಿ ಜ್ಯೋತಿ. ಮ.ಎ.ಎಸ್. ಜೇವರಗಿ ಪೊಲೀಸ್ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದರ್ಮಸಿಂಗ ಫೌಂಡೇಶನ ಗೊಡೆ ಮರೆಯಾಗಿ ನಿಂತು ನೋಡಲು ಸಾರ್ವಜನಿಕ ರೋಡಿನಲ್ಲಿ ಮೂವರು ಮನುಷ್ಯರು ಹೋಗಿ ಬರುವ ಸಾರ್ವನಿಕರಿಗೆ 1-00 ರೂಪಾಯಿಗೆ 80-00 ರೂಪಾಯಿ ಕೊಡುವದಾಗಿ ಹೇಳಿ ಅವರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದು ಕೊಡುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿಯಲು ಆ ಮೂರು ಜನರು ಮೊಟಾರ ಸೈಕಲದ ಮೇಲೆ ಕುಳಿತು ಹೋಗುತ್ತಿದ್ದಾಗ ಅವರಿಗೆ ಹಿಡಿಯಲು ಒಬ್ಬನು ಓಡಿ ಹೋದನು. ಉಳಿದ ಇಬ್ಬರಿಗೆ ಹಿಡಿದುಕೊಂಡು ಹೆಸರು ವಿಳಾಸ ಕೇಳಲು 1) ಚಂದ್ರಶೇಖರ ತಂದೆ ದೇವಿಂದ್ರಪ್ಪ ಬಳಬಟ್ಟಿ ಸಾ:ಅಂದೋಲಾ ಅಂತ ಹೇಳಿದನು. ಅವನಿಗೆ ಅಂಗ ಶೋದ ಮಾಡಲು ಅವನ ಹತ್ತಿರ ನಗದು ಹಣ 1000/-ರೂ ಒಂದು ಮಟಕಾ ಚೀಟಿ ಒಂದು ಬಾಲ ಪೆನ್ನು ಸಿಕ್ಕವು. 2) ಕರಣಪ್ಪ ತಂದೆ ರಾಚಣ್ಣಾ ಬಂಕೂರ ಸಾ: ಆಂದೋಲಾ  ಅಂತ ಹೇಳಿದನು. ಅವನಿಗೆ ಅಂಗ ಶೋದ ಮಾಡಲು ಅವನ ಹತ್ತಿರ ನಗದು ಹಣ 600/-ರೂ ರೂ ಒಂದು ಮಟಕಾ ಚೀಟಿ ಒಂದು ಬಾಲ ಪೆನ್ನು ಸಿಕ್ಕವು. ಸ್ಥಳದಲ್ಲಿ ಒಂದು ಮೊಟಾರ ಸೈಕಲ ನಂ ಕೆಎ-32ಇಕೆ-5630 ಇತ್ತು ಅದರ ಅ.ಕಿ 30,000/-ರೂ ಆಗಬಹುದು ಓಡಿ ಹೋದವನ ಹೆಸರು ಅವರಿಗೆ ಕೇಳಲು ಮೊನೇಶ ತಂದೆ ಸಂಗಣ್ಣ ಧಮೇತಿ ಸಾ: ಆಂದೋಲಾ ಅಂತ ಹೇಳಿದನು. ಹೀಗಿ ಒಟ್ಟು ನಗದು ಹಣ 1,600=00 ರೂ ಎರಡು ಮಟಕಾ ಚೀಟಿ, ಎರಡು ಬಾಲ ಪೆನ್ನು  ಒಂದು ಮೊಟಾರ ಸೈಕಲ ನೇದ್ದವುಗಳನ್ನು ವಶಪಡಿಸಿಕೊಂಡು ಸದರಿಯವನೊಂದಿಗೆ ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ವರದಕ್ಷಣೆ ಕಿರುಕಳ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀಮತಿ ಉಷಾ ಗಂಡ ಶಿವಾನಂದ ಸಕ್ಕರಗಿ ಸಾ|| ಮಾಶಾಳ ಇವರ ಗಂಡ ಸರಾಯಿ ಮತ್ತು ಇಸ್ಪಟ್ ಆಡುತಿದ್ದು  ಇದಕ್ಕೆ ಫಿರ್ಯಾಧಿದಾರಳು ವಿರೋಧ ವ್ಯಕ್ತ ಪಡಿಸುತ್ತಿದ್ದರಿಂದ ಹಾಗೂ ಸರಿಯಾಗಿ ನೋಡಿಕೋ ಅಂತ ಹೆಳುತ್ತದ್ದರಿಂದ ಫಿರ್ಯಾದಿದಾರಳ ಗಂಡನು ಅವಳೊಂದಿಗೆ ಜಗಳಮಾಡಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನಿಡಿತ್ತಿದ್ದು ಮತ್ತು ಗಂಡ ಹಾಗೂ ಗಂಡನ ಮನೆಯವರು ಇನ್ನು ಹಣ ಬಂಗಾರ ಹಾಗೂ ಮೊಟರ ಸೈಕಲ  ತೆಗೆದುಕೊಂಡು ಬಾ ಅಂತ ವರದಕ್ಷಣೆ ಕಿರುಕುಳ ನಿಡುtftiದ್ದಾರೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಗ್ರಾಮೀಣ ಠಾಣೆ : ಶ್ರೀಮತಿ ಲಕ್ಷ್ಮಿ ಗಂಡ ರಾಣಪ್ಪ ನಾಲ್ಕಮನೆ ಸಾ:ಕೇರಿ ಭೋಸಗಾ ತಾ:ಜಿ:ಕಲಬುರಗಿ ರವರಿಗೆ  ಈಗ 2 ವರ್ಷಗಳು ಹಿಂದೆ ಕೇರಿ ಭೋಸಗಾ ಗ್ರಾಮದ ರಾಣಪ್ಪಾ ನಾಲ್ಕಮನೆ ರವರೊಂದಿಗೆ ಮದುವೆಮಾಡಿಕೊಟ್ಟಿದ್ದು ಅವಳ ಗಂಡ ಮತ್ತು ಅತ್ತೆ ಸರಿಯಾಗಿ ನೋಡಿಕೊಂಡಿದ್ದು ನಂತರ ಫಿರ್ಯಾದಿದಾರಳಿಗೆ ಅಡಿಗೆ ಕೆಲಸ ಸರಿಯಾಗಿ ಮಾಡಲು ಬರುವುದಿಲ್ಲಾ ನೀನು ಹೊರಗೆ ಕೂಲಿಕೆಲಸ ಹಾಗು ಹೋಲದ ಕೆಲಸಕ್ಕೆ ಹೋಗು ಎಂದರೆ ಕೂಲಿಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದು ಎಮ್ಮೆ ತಿನ್ನುವ ಹಾಗೇ ತಿಂದು ಮನೆಯಲ್ಲಿಯೇ ಇರುತ್ತಿ ರಂಡಿ ಭೋಸಡಿ ಅಂತಾ ಬೈಯ್ದು ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡುತ್ತಾ ಬಂದಿದ್ದು ಇರುತ್ತದೆ. ಇಂದು ದಿನಾಂಕ 15/12/16 ರಂದು ಬೆಳಿಗ್ಗೆ ಸಮಯದಲ್ಲಿ ಫಿರ್ಯಾದಿದಾರಳಿಗೆ  ನನಗೆ ಏ ಭೋಸಡೀ ಇವತ್ತು ಕೂಲಿಕೆಲಸಕ್ಕೆ ನನ್ನ ತಾಯಿಯ ಜೊತೆಗೆ ಹೋಗು ಅಂತಾ ಅಂದಾಗ ಆಗ ನಾನು ನನಗೆ ಹೋಲದ ಕೂಲಿ ಕೆಲಸ ಮಾಡಲು ಬರುವುದಿಲ್ಲಾ ನಾನು ಕೆಲಸಕ್ಕೆ ಹೋಗುವುದಿಲ್ಲಾ ಅಂತಾ ಅಂದಾಗ ಆಗ ನನ್ನ ಗಂಡ ಏ ಭೋಸಡಿ ಕೆಲಸಕ್ಕೆ ಹೋಗುವುದಿಲ್ಲಾ ಅಂತಾ ಅನ್ನುತ್ತಿ ರಂಡಿ ಸುಮ್ಮನೇ ಮನೆಯಲ್ಲಿ ಎಮ್ಮೆ ತಿಂದ ಹಾಗೆ ತಿನ್ನಲು ಬರುತ್ತೇ ಕೂಲಿಕೆಲಸಕ್ಕೆ ಹೋಗುವುದಿಲ್ಲಾ ಅಂತಾ ಅನ್ನುತ್ತಿಯಾ ಅಂತಾ ಬೈಯ್ದು ಕೈಯಿಂದ ಕಪಾಳ ಮೇಲೆ, ತಲೆಯ ಮೇಲೆ, ಹೊಡೆಯುತ್ತಿದ್ದಾಗ ಆಗ ನನ್ನ ಅತ್ತೆ ಕೈಯಿಂದ ಬೆನ್ನಿನ ಮೇಲೆ ಹೊಡೆದಳು. ಆಗ ನನ್ನ ಗಂಡ ರಾಣಪ್ಪ ಮತ್ತು ಅತ್ತೆ ಪುತಳಾಬಾಯಿ ಇಬ್ಬರು ಕೂಡಿ ಏ ಬೋಸಡಿ ನೀನು ಕೂಲಿಕೆಲಸಕ್ಕೆ ಹೋಗದೇ ಇದ್ದರೇ ನಮ್ಮ ಮನೆಯಿಂದ ಹೋಗಿ  ಎಲ್ಲಿಯಾದರೂ ಹೋಗಿ ಸಾಯಿ ನನ್ನ ಮನೆಯಲ್ಲಿ ಇರಬೇಡಾ ಮನೆಯಿಂದ ಹೊರಗೆ ನಡೆ ಅಂತಾ ಅವಾಚ್ಯವಾಗಿ ಬೈಯ್ದು ಇಬ್ಬರು ಕೈಯಿಂದ ಮೈಮೇಲೆ ಒಂದೆ ಸವನೇ ಹೊಡೆಯುತ್ತಿದ್ದಾಗ ಆಗ ನಾನು ಒಂದೇ ಸವನೇ ಚೀರಾಡುತ್ತಿದ್ದಾಗ ನಾನು ಚೀರಾಡುವ ಸಪ್ಪಳ ಕೇಳಿ ನಮ್ಮ ಮನೆಯ ಹತ್ತಿರ ಇದ್ದ ನನ್ನ ತಾಯಿ ಕಸ್ತೂರಿಬಾಯಿ ಹಾಗು ಅಣ್ಣ ಶಿವಾನಂದ, ತಮ್ಮ ಶಾಂತಕುಮಾರ ಇವರು ಬಂದು ನನಗೆ ಹೊಡೆವುದನ್ನು ಬೀಡಿಸಿ ಮನೆಗೆ ಹೋದರು. ನಂತರ ಫಿರ್ಯಾದಿದಾರಳು ತನ್ನ ಗಂಡ ಮತ್ತು ಅತ್ತೆ ಇಬ್ಬರು ದಿನಾಲು ಕೊಡುತ್ತಿದ್ದ ತ್ರಾಸ ತಾಳಲಾರದೇ ಮುಂಜಾನೆ ಮನೆಯಲ್ಲಿಟ್ಟಿದ್ದ ಸೀಮೆ ಎಣ್ಣೆ ಮೇಮೈಲೆ ಹಾಕಿಕೊಂಡು ಮೈಗೆ ಬೆಂಕಿ ಹಚ್ಚಿಕೊಂಡಾಗ ನನಗೆ ಮೈಗೆ ಬೆಂಕಿ ಹತ್ತಿದ ತ್ರಾಸ ತಾಳಲಾರಧೇ ಒಂದೆ ಸವನೇ ಚೀರಾಡುತ್ತಿದ್ದಾಗ ಆಗ ನಮ್ಮ ಮಾವ ಶಿವಮೂರ್ತಿ ಇತನು ಬಂದು ನನ್ನ ಮೈಮೇಲೆ ನೀರು ಹಾಕಿ ಮೈಗೆ ಹತ್ತಿದ ಬೆಂಕಿಯನ್ನು ಆರಿಸಿದರು. ಆಗ ನಾನು ನೋಡಿಕೊಳ್ಳಲು ನನಗೆ ಕತ್ತಿಗೆ ಕಳಬಾಗಕ್ಕೆ, ಎರಡು ಎದೆಗೆ, ಹೊಟ್ಟೆಗೆ, ಹೊಟ್ಟೆಯ ಕೆಳಭಾಗಕ್ಕೆ, ಬೆನ್ನಿಗೆ, ಎರಡು ತೊಡೆಯಿಂದ ಮೊಳಕಾಲುವರೆಗೆ, ಎರಡು ಕೈಗಳಿಗೆ ,ಬೆರಳುಗಳಿಗೆ ಸುಟ್ಟಗಾಯಗಳಾಗಿದ್ದವು.ನನ್ನ ಮೈಗೆ ಹತ್ತಿದ ಬೆಂಕಿ ಆರಿಸಿದ ನನ್ನ ಮಾವ ಶಿವಮೂರ್ತಿ ಇತನಿಗೆ ನೋಡಲು ಆತನಿಗೆ ತಲೆಗೆ, ಹಣೆಗೆ ,ಎಡಗೈ ಮೊಳಕೈ ಹತ್ತಿರ, ಬಲಗೈ ಹಸ್ತದ ಹತ್ತಿರ, ಎದೆಗೆ, ಮುಖಕ್ಕೆ ಸುಟ್ಟಗಾಯಗಳಾಗಿರುತ್ತೇವೆ. .ಕಾರಣ ನನ್ನ ಗಂಡ ರಾಣಪ್ಪ ಮತ್ತು ಅತ್ತೆ ಪುತಳಾಬಾಯಿ ಇಬ್ಬರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಶ್ರೀಮತಿ ಲಕ್ಷ್ಮೀ  ಗಂಡ ನಾಕಮನ ಇವಳು ಸುಟ್ಟಗಾಯದ ಉಪಚಾರ ಹೊಂದುತ್ತಾ ಗುಣ ಮುಖ ಹೊಂದದೇ ದಿನಾಂಕ 15-12-2016 ರಂದು ಮೃತಪಟ್ಟಿರುತ್ತಾಳೆ ಅಂತಾ ಮೃತಳ ತಾಯಿ ಶ್ರೀಮತಿ  ಕಸ್ತೂರಿಬಾಯಿ ಗಂಡ ಶಿವಶರಣಪ್ಪ ನಾಗನಳ್ಳಿ ಸಾ: ಕೆರಿಭೋಸಗಾ ಗ್ರಾಮ ಇವಳು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಮಾಡಿ ಅತ್ಯಾಚಾರ ಮಾಡಿದ ಪ್ರಕರಣ :
ಮುಧೋಳ ಠಾಣೆ : ಶ್ರೀಮತಿ ಇವರ ಮಗಳಾದ ಕುಮಾರಿ ಇವಳು ಪಿ.ಯು.ಸಿ 2 ನೇ ವರ್ಷದಲ್ಲಿ ಇಂಪಿರಿಯಲ್ ಕಾಲೇಜ ಗುರಮಿಟಕಲದಲ್ಲಿ ಸಾಯಿನ್ಸ ಓದುತಿದ್ದು ಇವಳು ದಿನಾಲು ಮನೆಯಿಂದ ಕಾಲೇಜಿಗೆ ಹೊಗಿ ಬರುತ್ತಿದ್ದಳು. ನನ್ನ ಮಗಳು ಉಷಾರಾಣಿ ಇವಳು ತಿಳಿಸಿದ್ದೆನಂದರೆ ನಮ್ಮುರ ನವೇಶ ತಂದೆ ಹಣಮಂತ ವೊಳಮ್ ಇತನು ಇಗ ಎರಡು ತಿಂಗಳಿಂದ  ನಾನು ಮನೆಯಿಂದ ಕಾಲೇಜಿಗೆ ಹೊಗುವಾಗ ಬರುವಾಗ ನನ್ನ ಹಿಂದೆ ಹಿಂದೆ ಬಂದು  ನಾನು  ನಿನಗೆ ಪ್ರಿತಿ ಮಾಡುತಿದ್ದೆನೆ ಅಂತಾ ಹೇಳುತಿದ್ದಾನೆ ಅದಕ್ಕೆ ನಾನು ಅತನಿಗೆ ನಿನು ನನ್ನ ಹಿಂದೆ ಬರಬೇಡ ನನ್ನ ಜೊತೆ ಮಾತಾಡಬೇಡ ಅಂತಾ ಹೇಳಿದರು ಸಹ ಕೇಳುತಿಲ್ಲಾ ಇತನು ನನಗೆ ಕಾಲೆಜಿಗೆ ಹೊಗುವಾಗ ಬರುವಾಗ ಹಿಂದೆ ಹಿಂದೆ ಬಂದು ಮಾತಾಡಿಸುತ್ತಾನೆ ಅಲ್ಲದೆ ಸದರಿ  ನವೇಶ ಇತನು ನಿವು ಕೆಲಸಕ್ಕೆ ಹೊದಾಗ ನಾನು ಮನೆಯಲ್ಲಿ ಒಬ್ಬಳು ಇದ್ದಾಗ  ಇತನು ನಮ್ಮ ಮನೆಯ ಸುತ್ತಮುತ್ತಲು ತಿರುಗಾಡುತಿದ್ದಾನೆ  ಅಂತಾ ಹೇಳಿದ್ದು ಸದರಿ ನವೇಶನ  ಮನೆಗೆ ಹೊಗಿ ಅವರ ತಂದೆ ಹಣಮಂತ ಹಾಗು ಅವರ ಅಣ್ಣನಾದ ಭಿಮಶಪ್ಪಾ ಇವರಿಗೆ ನಿಮ್ಮ ಮಗ ನವೇಶ ಇತನು ನಮ್ಮ ಮಗಳಿಗೆ ಕಾಲೇಜಿಗೆ ಹೊಗುವಾಗ ಬರುವಾಗ ಅವಳ ಹಿಂದೆ ಹಿಂದೆ ಹೊಗಿ ಅವಳಿಗೆ ಪ್ರಿತಿಮಾಡುತ್ತಿದ್ದೆನೆ ಅಂತಾ ಅವಳ ಹಿಂದೆ ಬಿದ್ದಿದ್ದಾನೆ  ಅಲ್ಲದೆ ನಾವು ಮನೆಯಲ್ಲಿ ಇಲ್ಲದಿದ್ದಾಗ ಇತನು ನಮ್ಮ ಮನೆಯ ಸೂತ್ತಲು ತಿರುಗಾಡುತಿದ್ದನೆ ಆದ್ದದಿಂದ ನಿಮ್ಮ ಮಗನಿಗೆ ನಮ್ಮ ಮಗಳ  ತಂಟೆಗೆ ಬರದಂತೆ ಬುದ್ದಿ ಹೇಳಿರಿ  ಅಂತಾ ಹೇಳಿದ್ದು ಇದರಿಂದ ಸದರಿಯವರು ಆಯಿತು ನಮ್ಮ ಮಗನಿಗೆ ಬುದ್ದಿ ಹೇಳುತ್ತವೆ ನಿಮ್ಮ ಮಗಳ ತಂಟಗೆ ಹೊಗದಂತೆ ಮಾಡುತ್ತವೆ ಅಂತಾ ಹೇಳಿದ್ದು ದಿನಾಂಕ 02-11-2016 ರಂದು ಮುಂಜಾನೆ 8-00 ಗಂಟೆ ಸುಮಾರಿಗೆ ನನ್ನ ಮಗಳು ಇವಳು ಮನೆಯಿಂದ ತಯ್ಯಾರಾಗಿ ಗುರಮಿಟಕಲಕ್ಕೆ ಕಾಲೇಜಿಗೆ ಹೊಗಿದ್ದು ಇವಳು ಹೊಗುವಾಗ ನನಗೆ ಸಾಯಂಕಾಲ 6-00 ಗಂಟೆಯವರೆಗೆ ಕ್ಲಾಸ ಇರುತ್ತವೆ ನಾನು ಕ್ಲಾಸ ಮುಗಿಸಿಕೊಂಡು ತಡವಾಗಿ  ಮನೆಗೆ ಬರುತ್ತನೆ ಅಂತಾ ಹೇಳಿ ಹೊಗಿದ್ದು ನಾವು ಇವಳಿಗೆ ಯಾನಾಗುಂದಿ ಗೇಟಯವರೆಗೆ ಹೊಗಿ ನಮ್ಮ ಮಗಳಿಗೆ ಬಸ್ಸಿಗೆ ಕೂಡಿಸಿ ಮನೆಗೆ ಬಂದಿದ್ದು  ಅಂದು ರಾತ್ರಿ 8-9 ಗಂಟೆ ಯಾದರು ನನ್ನ ಮಗಳು ತಿರುಗಿ ಮನೆಗೆ ಬಂದಿರುವದಿಲ್ಲಾ ಅಗಾ ನಾನು ಮತ್ತು ನನ್ನ ಗಂಡ ಬಸಪ್ಪಾ ತಂದೆ ವೆಂಕಪ್ಪಾ ನನ್ನ ಮಗ ನವೀನಕುಮಾರ ಎಲ್ಲೊರು ಕೂಡಿ ನಮ್ಮುರ  ಸಿದ್ದಪ್ಪಾ ತಂದೆ ಶರಣಪ್ಪಾ ಇವರ ಜೀಪ ತೆಗೆದುಕೊಂಡು ನನ್ನ ಮಗಳು ಇನ್ನು ಮನೆಗೆ ಯಾಕೆ ಬರಲಿಲ್ಲಾ ಅಂತಾ ನಾವು ನಮ್ಮುರಿಂದ ಯಾನಾಗುಂದಿ ಹಾಗು ಗುರಮಿಟಕಲವರೆಗೆ ಹುಡುಕಾಡಿದ್ದು ರಾತ್ರಿ ನನ್ನ ಮಗಳು ಸಿಕ್ಕಿರುವದಿಲ್ಲಾ ಈ ಬಗ್ಗೆ ಮರು ದಿವಸ ದಿನಾಂಕ 03-11-2016 ರಂದು ಬೇಳಗ್ಗೆ 8-9 ಗಂಟೆ ಸುಮಾರಿಗೆ ನಾವು ನಮ್ಮುರಲ್ಲಿ ನನ್ನ ಮಗಳು ಕಾಲೇಜಿಗೆ ಹೊಗಿದ್ದವಳು ಮನೆಗೆ ಬಂದಿರುವದಿಲ್ಲ ಅಂತಾ ಊರಲ್ಲಿ ಜನರಿಗೆ ಹೇಳುತಿದ್ದಾಗ ನಮ್ಮುರ ಅನಂತಪ್ಪಾ ತಂದೆ ನಾರಾಯಣ ನಾಯಿಕೊಟಿ ಹಾಗು ವೆಂಕಟರೆಡ್ಡಿ ತಂದೆ ನರಸರೆಡ್ಡಿ ಮುನ್ನುರ, ಕಾಶಪ್ಪಾ ತಂದೆ ಆಶಪ್ಪಾ ನಾಯಿಕೊಟಿ ಇವರು ತಿಳಿಸಿದ್ದನಂದರೆ ನಿನ್ನೆ ರಾತ್ರಿ 8-30 ಗಂಟೆ ಸುಮಾರಿಗೆ ನಾವು ಗುರಮಿಟಕಲ ದಿಂದ ಬಸ್ಸಿನಲ್ಲಿ ಬಂದು ಯಾನಾಗುಂದಿ ಗೇಟ ಹತ್ತಿರ ಇಳಿದಾಗ ಅಲ್ಲಿ ಗೇಟ ಹತ್ತಿರ ನಿಮ್ಮ ಮಗಳು ನಿಂತಿದ್ದು ಇವಳ ಜೊತೇಯಲ್ಲಿ ನಮ್ಮುರ ನವೇಶ ತಂದೆ ಹಣಮಂತ ಕುರಬರ ಇತನು ಮಾತಾಡುತಿದ್ದು ಸದರಿ ನವೇಶ ಇತನು ನಿಮ್ಮ ಮಗಳು ಇವಳಿಗೆ ತನ್ನ ಜೊತೇಯಲ್ಲಿ ನಾವು ಕುಳಿತು ಬಂದಿದ್ದ ಬಸ್ಸಿನಲ್ಲಿ ಕೂಡಿಸಿ ಕೊಂಡು ಕೊಡಂಗಲ ಕಡೆಗೆ ಕರೆದುಕೊಂಡು ಹೊಗಿದ್ದು ನಾವು ನೊಡಿರುತ್ತವೆ ಅಂತಾ ತಿಳಿಸಿದರು ನಂತರ ನಾವು ದಿನಾಂಕ 03-11-2016 ರಂದು ಬೇಳಗ್ಗೆ 10-00 ಗಂಟೆ ಸುಮಾರಿಗೆ ಸದರಿ ನವೇಶ ಇವರ ಮನೆಗೆ ಹೋಗಿ ಅವರ ತಂದೆ ಹಣಮಂತ ಇವರಿಗೆ ನಿನ್ನ ಮಗ ನವೇಶ ಇತನು ನಮ್ಮ ಮಗಳಿಗೆ ನಿನ್ನೆ ರಾತ್ರಿ ಅಫಹರಣ ಮಾಡಿಕೊಂಡು ಹೊಗಿರುತ್ತಾನೆ ಅಂತಾ ಗೊತ್ತಾಗಿದ್ದು ನಿನ್ನ ಮಗನಿಗೆ ಹೇಳಿ ನಮ್ಮ ಮಗಳಿಗೆ ನಮ್ಮ ಮನೆಗೆ ಕಳಿಸಿರಿ ಅಂತಾ ಹೇಳಿದಕ್ಕೆ ಅವರು ನಮ್ಮ ಮಗ ಎಲ್ಲಿದ್ದಾನೆ ಎಂಬುವದು ಗೊತ್ತಿಲ್ಲಾ ನಮ್ಮ ಮಗನಿಗೆ ಹುಡುಕಾಡಿ ನಿಮ್ಮ ಮಗಳು ಸಿಕ್ಕರೆ ನಿಮ್ಮ ಮನೆಗೆ ಕಳಿಸುತ್ತವೆ ಅಂತಾ ಹೇಳಿದ್ದು ಆಗಾನಾವು ಸದರಿ ವಿಷಯವನ್ನು ನಮ್ಮುರ ಹಿರಿಯರ ಹತ್ತಿರ ತಿಳಿಸಿದಾಗ ಅವರು ನಮಗೆ ಹಾಗು ಸದರಿ ನವೇಶನ ತಂದೆಯಾದ ಹಣಮಂತ  ಅವರ ಮನೆಯವರಿಗೆ ಕರೆಸಿ ನಿಮ್ಮ ಮಗ ನವೇಶನಿಗೆ ಹುಡುಕಾಡಿ ಅವರ ಮಗಳು ಅವರಿಗೆ ಕರೆದುಕೊಂಡು ತಂದು ಒಪ್ಪಿಸಿ ಅಂತಾ ಹೇಳಿದ್ದು ಅದಕ್ಕೆ ಅವರು ಒಂದು ವಾರಾ ಸಮಯ ಕೇಳಿದ್ದು ಸದರಿಯವರು ಇದುವರೆಗು ನಮ್ಮ ಮಗಳಿಗೆ ಕರೆದುಕೊಂಡು ಬಂದಿರುವದಿಲ್ಲಾ ನಾವು ಸಹ ನಮ್ಮ ಮಗಳಿಗೆ ಎಲ್ಲಾಕಡೆ ಹುಡುಕಾಡಿದ್ದು  ನಮ್ಮ ಮಗಳು ಇದುವರೆಗು ಸಿಕ್ಕಿರುವದಿಲ್ಲಾ ಅದ್ದರಿಂದ ನಾವು ಊರ ಹಿರಯರ ಮಾತು ಕೇಳಿ  ಮತ್ತು ಇಷ್ಟುದಿವಸ  ನಮ್ಮ ಮಗಳಿಗೆ ಹುಡುಕಾಡಿ ತಡವಾಗಿ ಇಂದು ದಿನಾಂಕ 16-11-2016 ರಂದು ಬೆಳಗ್ಗೆ 11-30 ಗಂಟೆಗೆ ನಾನು ಮತ್ತು ನನ್ನ ಗಂಡ ಬಸಪ್ಪಾ ಮತ್ತು ನಮ್ಮ ಸಂಬಂದಿಕರಾದ ಚೆಂದ್ರಶೇಖರ ತಂದೆ ಶರಣಪ್ಪಾ ಮುನ್ನುರ ಸಾ|| ಬಿಲಕಲಗ್ರಾಮ ಇವರೊಂದಿಗೆ ಠಾಣೆಗೆ ಬಂದು ನನ್ನ ಮಗಳು ಹೇಳಿಕೆ  ಸಲ್ಲಿಸಿದ್ದು ದಿನಾಂಕ 02-11-2016 ರಂದು ರಾತ್ರಿ 8-30 ಗಂಟೆ ಸುಮಾರಿಗೆ ಗುರಮಿಟಕಲ ಕಾಲೆಜಗೆ ಹೊಗಿ ಬಸ್ಸಿನಲ್ಲಿ ಬಂದು  ಯಾನಾಗುಂದಿ ಗೇಟ ಹತ್ತಿರ ಇಳಿದು ಮನೆಗೆ ಬರುವಾಗ ಇವಳಿಗೆ ನಮ್ಮುರ ನವೇಶ ತಂದೆ ಹಣಮಂತ ಕುರಬರ ಇತನು ನನ್ನ ಮಗಳಿಗೆ ಮದುವೆ ಮಾಡಿಕೊಳ್ಳುವ ಉದ್ದೆಶದಿಂದ ಬಲವಂತವಾಗಿ ಅಪಹರಣ ಮಾಡಿಕೊಂಡು ಹೊಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದಿನಾಂಕ 14-12-2016 ರಂದು ಅಫಹರಣವಾದ ಕುಮಾರಿ ಉಶಾರಾಣಿ ತಂದೆ ಬಸಪ್ಪಾ ನಾಯಿಕೊಟಿ ವಯಾ; 17 ವರ್ಷ ಸಾ|| ಕಾನಾಗಡ್ಡಾಗ್ರಾಮ ಇವಳಿಗೆ ಹಾಗು  ಆರೋಪಿತನಾದ ನವೇಶ ತಂದೆ ಹಣಮಂತ ಒಳಮ್ ಸಾ|| ಕಾನಾಗಡ್ಡಾಗ್ರಾಮ ಇವರಿಗೆ ಪತ್ತೆ ಮಾಡಿ ಇಂದು ಬೇಳಗ್ಗೆ 10-30 ಗಂಟೇಗೆ ಠಾಣೆಗೆ ಕರೆತಂದು ಸದರಿ ಕು ಉಶಾರಾಣಿ ತಂದೆ ಬಸಪ್ಪಾ ನಾಯಿಕೊಟಿ ಇವಳಿಗೆ ವಿಚಾರಣೆ ಮಾಡಲಾಗಿ ಇವಳು ತನ್ನ ಹೇಳಿಕೆ ನಿಡಿದ್ದೆನಂದರೆ ನಮ್ಮ ತಂದೆ ತಾಯಿಗೆ ನಾನು ಒಬ್ಬಳೆ ಮಗಳಿರುತ್ತನೆ ನಾನು ಇಂಪಿರಿಯಲ್ ಜೂನಿಯರ್ ಕಾಲೇಜ ಗುರಮಿಟಕಲದಲ್ಲಿ ಪಿ.ಯು.ಸಿ 2ನೇ ವರ್ಷದಲ್ಲಿ ಓದುತ್ತಿದ್ದೆನೆ. ನನ್ನ ಜನ್ಮ ದಿನಾಂಕ: 04-12-1999 ಇರುತ್ತದೆ. ನಾನು ದಿನಾಲು ನಮ್ಮೂರದಿಂದ ಗುರುಮಠಕಲ್ ಗೆ ಬಸ್ಸಿನಲ್ಲಿ ಕಾಲೇಜಿಗೆ ಹೋಗಿ ಬರುತ್ತನೆ. ನನ್ನಂತೆ ನಮ್ಮೂರ  ನವೇಶ ತಂದೆ ಹಣಮಂತ ಓಳಮ್ ಜಾತಿ; ಕುರಬರ ಇತನು ಸಹ ಗುರುಮಠಕಲ್ ಕಾಲೇಜಿಗೆ ಬರುತ್ತಿದ್ದು ನಾವಿಬ್ಬರು  ಕಾಲೇಜಿಗೆ ಹೊಗುವಾಗ ಬರುವಾಗ ಒಟ್ಟಿಗೆ ಹೊಗಿ ಬರುತಿದ್ದವು. ಇದರಿಂದ ನಾವು ಇಬ್ಬರು ಈಗ ಸುಮಾರು ಎರಡು ವರ್ಷಗಳಿಂದ ಒಬ್ಬರಿಗೊಬ್ಬರು ಇಷ್ಟಪಟ್ಟು ಪ್ರೀತಿ ಮಾಡುತಿದ್ದು. ಈ ವಿಷಯವು ಮನೆಯಲ್ಲಿ ನಮ್ಮ ತಂದೆ ತಾಯಿಗೆ ಗೊತ್ತಾಗಿ ಇಗ 4-5 ತಿಂಗಳಿಂದ ನಮ್ಮ ತಾಯಿ ಗೌರಮ್ಮಾ ಹಾಗು ನಮ್ಮ ತಂದೆ ಬಸಪ್ಪಾ ಇವರುಗಳು ನನಗೆ ನೀನು ಸದರಿ ನವೇಶನ ಜೋತೆ ಮಾತಾಡಬೇಡ ಅವನ ಜೊತೆ ತಿರುಗಾಡ ಬೇಡಾ ಅವನ ಸಹಾವಾಸ ಬಿಟ್ಟುಬಿಡು ನಿನಗೆ ಬೇರೆ ಗಂಡನಿಗೆ ನೋಡಿ ಮದುವೆ ಮಾಡುತ್ತವೆ ಅಂತಾ ಹೇಳಿ ನನಗೆ ಮದುವೆ ಮಾಡುವುದಕ್ಕೆ ಗಂಡು ನೊಡುತಿದ್ದು ಇದರಿಂದ ನಾನು ಸದರಿ ನವೇಶ ಇತನಿಗೆ ನನಗೆ ಮದುವೆ ಮಾಡಲು ಗಂಡು ನೋಡುತ್ತಿದ್ದಾರೆ ಅಂತಾ ತಿಳಿಸಿದ್ದು, ಅದಕ್ಕೆ ಆತನು ನಾನು ನಿನಗೆ ಮದುವೆಯಾಗಲು ಬಿಡುವದಿಲ್ಲಾ. ನಾನೇ ನೀನಗೆ ಇಲ್ಲಿಂದ ಬೆಂಗಳೂರಿಗೆ ಕರೆದುಕೊಂಡು ಹೋಗಿ ಮದುವೆ ಮಾಡಿಕೊಳ್ಳುತ್ತೇ ನೆ ಅಂತಾ ಹೇಳಿದ್ದು ದಿನಾಂಕ: 02-11-2016 ರಂದು ಬೆಳಗ್ಗೆ 0800 ಗಂಟೆಗೆ ನಾನು ಮನೆಯಿಂದ ಗುರುಮಠಕಲ್ ನ ಕಾಲೇಜಿಗೆ ಹೋಗಿ ಕಾಲೇಜ ಮುಗಿಸಿಕೊಂಡು ಸಾಯಂಕಾಲದ 0630 ಗಂಟೆಯ ಸುಮಾರಿಗೆ ಯಾನಾಗುಂದಿ ಗೇಟ ಹತ್ತಿರ ಬಂದು ಬಸ್ಸನಿಂದ ಕೆಳಗೆ ಇಳಿದಿದ್ದು ಅಲ್ಲಿ ಗೇಟ ಹತ್ತಿರ ಸದರಿ ನವೇಶ ಇತನು ನಿಂತಿದ್ದು ಇತನು ನಾನು ಬಸ್ಸ ನಿಂದ ಇಳಿದಿದ್ದನ್ನು ನೋಡಿ ನನ್ನ ಹತ್ತಿರ ಬಂದು, ನೀನಗೆ ಮಧುವೆ ಮಾಡಲು ಗಂಡು ನೋಡುತ್ತಿದ್ದಾರೆ ಅಂತಾ ಹೇಳಿದ್ದಿ ಅದಕ್ಕೆ ನಾವಿಬ್ಬರು ಇಲ್ಲಿಂದ ಬೆಂಗಳೂರಿಗೆ ಓಡಿ ಹೋಗಿ ಮಧುವೆ ಮಾಡಿಕೊಳ್ಳೋಣಾ ಅಂತಾ ತಿಳಿಸಿದ್ದು ಅದಕ್ಕೆ ನಾನು ನನಗೆ ಇನ್ನು ಮಧುವೆಯ ವಯಸ್ಸು ಆಗಿರುವದಿಲ್ಲಾ ಸ್ವಲ್ಪ ದಿನ ತಾಳು ಅಂತಾ ಹೇಳಿದ್ದು ಅದಕ್ಕೆ ಅವನು ನನ್ನ ಮಾತು ಕೇಳದೆ ಈಗಲೆ ಬೆಂಗಳೂರಿಗೆ ಹೋಗೊಣಾ ನಡೆ ಅಂತಾ ನನಗೆ ಯಾನಾಗುಂದಿ ಗೇಟದಿಂದ ಗುರುಮಠಕಲಗೆ ಕರೆದುಕೊಂಡು ಹೋಗಿ, ಅಲ್ಲಿಂದ ಯಾದಗಿರಿ ರೈಲ್ವೆ ನಿಲ್ದಾಣಕ್ಕೆ ಬಸ್ಸನಲ್ಲಿ ಹೋಗಿ ರಾತ್ರಿ ಯಾದಗಿರಿ ರೈಲ್ವೆ ನಿಲ್ದಾಣದಿಂದ ಬೆಂಗಳೂರಿಗೆ ಹೋಗುವ ರೈಲಿನಲ್ಲಿ ಕುಡಿಸಿಕೊಂಡು ಹೋಗಿದ್ದು ದಿನಾಂಕ: 03-11-2016 ರಂದು ಬೆಳಗ್ಗೆ ನಾವು ಬೆಂಗಳೂರಿನ ರೈಲ್ವೆ ನಿಲ್ಧಾಣದಲ್ಲಿ ಇಳಿದು ಅಲ್ಲಿಂದ ಮ್ಯಾಜೆಸ್ಟಿಕ್ ಗೆ ಹೋಗಿ ಅಲ್ಲಿ ಬೆಂಗಳೂರಿನಲ್ಲಿರುವ ನವೇಶನ ಗೇಳೆಯನಾದ ನಮ್ಮೂರ ವಿಷ್ಣು ತಂದೆ ಭೀಮಪ್ಪ ಕಾವಲಿ ಇವರ ರೂಮಿಗೆ ಕರೆದುಕೊಂಡು ಹೋಗಿದ್ದು, ಸದರಿ ವಿಷ್ಣು ಇತನು ನಮ್ಮಬ್ಬಿರಿಗೆ ರೂಮಿನಲ್ಲಿಟ್ಟು, ಆತನು ಅಲ್ಲೆ ಹತ್ತಿರದಲ್ಲಿರುವ ಅವರ ಚಿಕ್ಕಮ್ಮನ ಮನೆಗೆ ಹೋಗಿದ್ದು. ನನಗೆ ನವೇಶ ಇತನು ಅವರ ಗೇಳೆಯನಾದ ವಿಷ್ಣುವಿನ ಗೇಳೆಯನ ರೂಮಿನಲ್ಲಿ ದಿನಾಂಕ: 03-11-2016 ರಂದು ಮಧ್ಯಾಹ್ನ ನನಗೆ ಮಧುವೆ ಮಾಡಿಕೊಳ್ಳುತ್ತೇನೆ ಅಂತಾ ನಂಬಿಸಿ ಲೈಂಗಿಕ ದೌರ್ಜನ್ಯ ಮಾಡಿದ್ದು ಅಲ್ಲದೆ ಅಂದು ರಾತ್ರಿ ಮತ್ತೇ ನನ್ನ ಮೇಲೆ ದೌರ್ಜನ್ಯ ಮಾಡಿದ್ದು ನಾವು ಅಂದು ರಾತ್ರಿ ಅದೇ ರೂಮಿನಲ್ಲಿ ಉಳಿದುಕೊಂಡು, ದಿನಾಂಕ: 04-11-2016 ರಂದು ಬೆಳಗ್ಗೆ ಅಲ್ಲೆ ಬೆಂಗಳೂರಿನಲ್ಲಿರುವ ಸದರಿ ನವೇಶನ ಗೇಳೆಯನಾದ ನಮ್ಮೂರ ವಾಸು ತಂದೆ ಅಯಲ್ಲರೆಡ್ಡಿ ಇತನು ವಿಷ್ಣುವಿನ ರೂಮಿಗೆ ಬಂದಿದ್ದು ಇತನು ನಮ್ಮಿಬ್ಬರನ್ನು ಕರೆದುಕೊಂಡು ಬೆಂಗಳೂರಿನ ಉತ್ತರಹಳ್ಳಿ ಕಡೆ ಬರುವ ವಸಂತಪೂರ ಏರಿಯಾದಲ್ಲಿರುವ ಹನುಮಾನ ದೇವರ ಗುಡಿಗೆ ಕರೆದುಕೊಂಡು ಹೋಗಿ, ಅಲ್ಲಿ ದೇವರ ಗುಡಿಯಲ್ಲಿ ದಿನಾಂಕ: 04-11-2016 ರಂದು ಬೆಳಗ್ಗೆ 1130 ಗಂಟೆ ಸುಮಾರಿಗೆ ಸದರಿ ನವೇಶ ಇತನು ನನಗೆ ಅರಸೀಣ ಬೋಟಿನ ತಾಳಿಕಟ್ಟಿ ಮಧುವೆ ಮಾಡಿಕೊಂಡಿದ್ದು ಆನಂತರ ಅಲ್ಲೆ ಹನುಮಾನ ದೇವರ ಗುಡಿಯ ಸಮೀಪದಲ್ಲಿ ಹತ್ತಿರ ಒಂದು ಹೊಸದಾಗಿ ಕಟ್ಟುತ್ತಿರುವ ಮನೆಗೆ  ವಾಸು ಇತನು ಕರೆದಕೊಂಡು ಹೋಗಿ ಅಲ್ಲಿ ಕೆಲಸ ಮಾಡುವ ಜನರೊಂದಿಗೆ ಮಾತನಾಡಿ ನಮಗೆ ಇರಲು ಒಂದು ರೂಮ್ ಕೊಡಸಿದ್ದು, ನಾವು ಸದರಿ ರೂಮಿನಲ್ಲಿ ಉಳಿದುಕೊಂಡಿದ್ದು, ಸದರಿ ನವೇಶ ಇತನು  ನನಗೆ ಮಧುವೆ ಮಾಡಿಕೊಂಡ ನಂತರ ಸದರಿ ರೂಮ್ ನಲ್ಲಿಟ್ಟು ಇತನು ಹಗಲು ವೇಳೆಯಲ್ಲಿ ಕೂಲಿ ಕೆಲಸಕ್ಕೆ ಹೋಗಿದ್ದು, ರಾತ್ರಿವೇಳೆಯಲ್ಲಿ ನನಗೆ ದಿನಾಲು ಲೈಂಗಿಕ ದೌರ್ಜನ್ಯ ಮಾಡಿದ್ದು ಇರುತ್ತದೆ. ಸದರಿ ನವೇಶ ಇತನಿಗೆ ನಮ್ಮೂರಿನಿಂದ ಯಾರೋ ಫೋನ ಮಾಡಿ ನಿನ್ನ ಮೇಲೆ ಕೇಸಾಗಿರುತ್ತದೆ. ಪೊಲೀಸರು ನಿನಗೆ ಹುಡುಕಾಡುತ್ತಿದ್ದಾರೆ ಅಂತಾ ತಿಳಿಸಿದ್ದರಿಂದ ನಿನ್ನೆ ದಿನಾಂಕ: 14-12-2016 ರಂದು ಬೆಂಗಳೂರಿನಿಂದ ಸೇಡಂಕ್ಕೆ ಬಂದು ರಾತ್ರಿ ಸೇಡಂನ ತ್ರೀವೇಣಿ ಲಾಡ್ಜನಲ್ಲಿ ಉಳಿದುಕೊಂಡಿದ್ದು ಈ ವಿಷಯವು ಪೊಲೀಸರಿಗೆ ಗೋತ್ತಾಗಿ ಇಂದು ದಿನಾಂಕ: 15-12-2016 ರಂದು ಬೆಳಗ್ಗೆ 0900 ಗಂಟೆ ಸುಮಾರಿಗೆ ಪೊಲೀಸರು ನಮ್ಮೀಬ್ಬರಿಗೆ ಹಿಡಿದುಕೊಂಡು ಗಂಟೆ ಸುಮಾರಿಗೆ ಮುಧೋಳ ಪೊಲೀಸ  ಠಾಣೆಗೆ ಕರೆದುಕೊಂಡು ಬಂದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.