POLICE BHAVAN KALABURAGI

POLICE BHAVAN KALABURAGI

26 October 2015

KALABURAGI DISTRICT REPORTED CRIMES.

ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 25.10.2015 ರಂದು ರಾತ್ರಿ ಜೇವಗಿ ಪಟ್ಟಣದ ಹೊರವಲಯದಲ್ಲಿರುವ ಗಡ್ಡಿ ಫೂಲ್ ಹತ್ತಿರ ಜೇವರಗಿ ಕಲಬುರಗಿ ಮುಖ್ಯ ರಸ್ತೆಯ ಮೇಲೆ ನನ್ನ ಮಗನಾದ ಭಾಗಣ್ಣ ಮತ್ತು ಸಂತೋಷ ಇಬ್ಬರು ಕೂಡಿಕೊಂಡು ಮರೆಪ್ಪ ಜೇಡಿ ಸಾ|| ಕೋಳಕೂರ ಈತನು ಚಲಾಯಿಸುತ್ತಿದ್ದ ಟ್ರ್ಯಾಕ್ಟರ್ ನಂ ಕೆ-32 ಟಿ-ಎ1355 ನೇದ್ದರಲ್ಲಿ ಕುಳಿತುಕೊಂಡು ಕೋಳಕೂರ ಕಡೆಗೆ ಹೋಗುತ್ತಿದ್ದಾಗ ಸದರಿ  ಟ್ರ್ಯಾಕ್ಟರ್ ಚಾಲಕನು ಟ್ರ್ಯಾಕ್ಟರ್‌ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ಒಮ್ಮೆಲೆ ಟ್ರ್ಯಾಕ್ಟರ್‌ ಅನ್ನು ಕಟ್ ಹೋಡೇದಿದ್ದರಿಂದ ನನ್ನ ಮಗ ಮತ್ತು ಸಂತೋಷ ಇಬ್ಬರು ವಾಹನದಿಂದ ಕೆಳಗೆ ಬಿದ್ದು ಇಬ್ಬರಿಗೆ ಸಾದಾ ಮತ್ತು ಭಾರಿ ರಕ್ತ ಗಾಯವಾಗಿ ಭಾಗಣ್ಣ ಈತನಿಗೆ ಉಪಚಾರ ಕುರಿತು ಕಲಬುರಗಿಯ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಮಾರ್ಗ ಮಧ್ಯ ಕಲಬುರಗಿಯ ರಾಮ ಮಂದಿರದ ಹತ್ತಿರ ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ ಸಂಗಮ್ಮ ಗಂಡ ಹಣಮಂತ ನೂಲಿನ್ ಸಾ: ಕೊಳಕೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮ ಹತ್ಯೆ ಮಾಡಿಕೊಂಡ ಪ್ರಕರಣಗಳು :
ಜೇವರ್ಗಿ ಠಾಣೆ : ನನ್ನ ಗಂಡ ರೇವಣಸಿದ್ದ @ ಸಿದ್ದಪ್ಪ ತಂದೆ ಮಲ್ಲೇಶಪ್ಪ ಹಿರೆಕುರುಬರ್ ರವರು ಜೇವರಗಿ ಪಟ್ಟಣದ ಷಣ್ಮುಖ ಶಿವಯೋಗಿ ಮಠಕ್ಕೆ ಸಂಭಂದಿಸಿದ ಹೊಲವನ್ನು ಕಳೇದ ಮೂರು ವರ್ಷಗಳಿಂದ ಕಟಗುತ್ತಿಗೆ ಅಂತ ಉಳುಮೆ ಮಾಡುತ್ತಿದ್ದನು. ಈ ವರ್ಷ ಆ ಹೋಲದಲ್ಲಿ ಹತ್ತಿ ಮತ್ತು ತೊಗರಿ ಬಿತ್ತಿದ್ದು 5.00.000/- ರೂಪಾಯಿ ಬೇರೆಯವರಲ್ಲಿ ಸಾಲ ಮಾಡಿ ಬೇಳಗಳಿಗೆ ಹಾಕಲು ಗೊಬ್ಬರ ಮತ್ತು ಕೀಟ ನಾಶಕ ಔಷಧಗಳನ್ನು ಖರಿದಿಸಿ ಬೆಳೆಗಳಿಗೆ ಹಾಕಿದ್ದು ಈ ವರ್ಷ ಸರಿಯಾಗಿ ಮಳೆ-ಬೆಳೆ ಆಗದೆ ತೊಗರಿ ಮತ್ತು ಹತ್ತಿ ಒಣಗುತ್ತಿರುವದರಿಂದ  ಸಾಲವನ್ನು ಹೇಗೆ ತಿರಿಸುವದು ಅಂತ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದು ನಿನ್ನೆ ದಿನಾಂಕ 25.10.2015 ರಂದು ರಾತ್ರಿ 10:30 ಗಂಟೆಗೆ ಮನೆಯಲ್ಲಿ ಬೆಳೆಗಳಿಗೆ ಹೊಡೆಯುವ ಕ್ರಿಮಿನಾಶಕ ಔಷಧ ಸೇವನೆ ಮಾಡಿದ್ದು ಅವನಿಗೆ ಉಪಚಾರ ಕುರಿತು ಕಲಬುರಗಿಯ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಉಪಚಾರ ಫಲಕಾರಿಯಾಗದೆ ಇಂದು ದಿನಾಂಕ26.10.2015ರಂದು ಬೆಳಗ್ಗೆ05:30 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ ಶಾಂತಮ್ಮ ಗಂಡ ರೇವಣಸಿದ್ದ @ ಸಿದ್ದಪ್ಪ ಹಿರೆಕುರುಬ ಸಾ : ಕನಕದಾಸ ಚೌಕ್ ಜೇವರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆಳಂದ ಠಾಣೆ : ಶ್ರೀಮತಿ.ಸುರೇಖಾ ಗಂಡ ಸಿದ್ದಾರಾಮ ತಡಕಲ ಸಾ:ಖಜೂರಿ ತಾ: ಆಳಂದ ರವರ ಗಂಡ ಸಿದ್ದರಾಮ ಇವರು ನನ್ನ ಅತ್ತೆಯಾದ ಮುಕ್ತಾಬಾಯಿ ಇವಳು ನಮ್ಮ ಹತ್ತಿರ ಇದ್ದು ಅವಳ ಹೆಸರಿನಲ್ಲಿ ಸರ್ವೆ.ನಂ:355 ರಲ್ಲಿ 6:00 ಎಕರೆ ಜಮೀನು ಇದ್ದು ಅದರ ಮೇಲೆ ನನ್ನ ಗಂಡನು ಹೊಲದಲ್ಲಿ ಪೈಪಲೈನ್ ಕೆಲಸಕ್ಕೆಂದು ಡಿ.ಸಿ.ಸಿ ಬ್ಯಾಂಕ ಗುಲಬರ್ಗಾದಿಂದ 3,51,000=00 ರೂ ಹಾಗೂ ಸಹಕಾರಿ ಪತ್ತಿನ ಸಂಘ ಖಜೂರಿದಲ್ಲಿ 50,000=00 ರೂ ಸಾಲ ಪಡೆದಿದ್ದು ಹಾಗೂ ಇತರೆ ಹೊಲದ ಕೆಲಸಕ್ಕೆಂದು ಕೈಗಡವಾಗಿ ಸಾಲ ಪಡೆದಿದ್ದು ದಿನಾಲೂ ಈ ಹಣ ಹೇಗೆ ತೀರಿಸಬೇಕೆಂದು ವಿಚಾರಿಸುತ್ತಾ ಒಬ್ಬಂಟಿಗನಾಗಿ ಕೂಡುತ್ತಿದ್ದನು ಈ ಬಾರಿ ಮಳೆ ಅಭಾವದಿಂದ ಹೊಲದಲ್ಲಿ ಯಾವ ಬೆಳೆ ಇರುವುದಿಲ್ಲಾ ಹೇಗೆ ತೀರಿಸಬೇಕು ಅಂತಾ ವಿಚಾರಿಸುತ್ತಿದ್ದಾಗ ನಾನು ಮತ್ತು ನನ್ನ ಅತ್ತೆ ಇಬ್ಬರೂ ಕೂಡಿ ಆಗ್ಗಾಗ ಹೇಗಾದರೂ ಮಾಡಿ ತೀರಿಸಿದರಾಯ್ತ ಅಂತಾ ಸಮಾಧಾನ ಮಾತುಗಳು ಹೇಳುತಾ ಬಂದಿರುತ್ತೇವೆ. ದಿನಾಂಕ: 26/10/2015 ರಂದು ಬೇಳಗಿನ ಜಾವ 05 ಗಂಟೆ ಸುಮಾರಿಗೆ ಎಂದಿನಂತೆ ಹೊಲಕ್ಕೆ ಹೋಗುತ್ತೆನೆ ಅಂತಾ ನನ್ನ ಗಂಡ ಮನೆಯಿಂದ ಹೇಳಿ ಹೋಗಿರುತ್ತಾನೆ. ನಂತರ 06 ಗಂಟೆ ಸುಮಾರಿಗೆ ನಮ್ಮ ಪಕ್ಕದ ಹೊಲದ ಸಿದ್ರಾಮ ತಂದೆ ಗುರುಬಸಪ್ಪಾ ಘಂಟೆ ಹಾಗೂ ಬಸವರಾಜ ತಂದೆ ಮೈಲಾರೆಪ್ಪ ತಡಕಲ್ ಇವರು ತಮ್ಮ ಹೊಲಕ್ಕೆ ಹೋಗುವಾಗ ನನ್ನ ಗಂಡನು ನಮ್ಮ ಹೊಲದ ಬೇವಿನ ಮರಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದಾಗ ನಾವು ಗ್ರಾಮದಿಂದ ಬಂದು ನೋಡಲು ವಿಷಯ ನಿಜ ಇದ್ದು ನನ್ನ ಗಂಡನು ಮನೆಯಿಂದ ಇಂದು ಬೆಳಗ್ಗೆ 05:00 ಗಂಟೆಗೆ ಬಂದು ಹೊಲದಲ್ಲಿ ಯಾರು ಇಲ್ಲದ್ದನ್ನು ಗಮನಿಸಿ 05:00 ಗಂಟೆಯಿಂದ 06:00 ಗಂಟೆಯ ಮಧ್ಯದ ಅವಧಿಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :

ನಿಂಬರ್ಗಾ ಠಾಣೆ : ಶ್ರೀ ಅಶೋಕ ತಂದೆ ಶ್ರೀಮಂತರಾವ ಪಾಟೀಲ ಸಾ|| ಯಳಸಂಗಿ, ತಾ|| ಆಳಂದ ಇವರು ಯಳಸಂಗಿ ಗ್ರಾಮದ ನಮ್ಮ ಮನೆಯ ಸ್ವಂತ ಜಾಗೇಯಲ್ಲಿ ನಾನಾಗೌಡ ತಂದೆ ಅಣ್ಣಪ್ಪಗೌಡ ಪಾಟೀಲ ಇತನು ತನ್ನ ದನ ಕರಗಳನ್ನು ಕಟ್ಟುವದು, ತನ್ನ ಕಟ್ಟಿಗೆಗಳನ್ನು ಹಾಕುವದು ಮಾಡುತ್ತಾ ಬಂದಿರುತ್ತಾನೆ, ಇದರ ಬಗ್ಗೆ ನಾವು ಆತನಿಗೆ ಈ ಹಿಂದೆ ಎಷ್ಟೊ ಬಾರಿ ಹೇಳಿದರೂ ಸಹ ತನ್ನ ಕಾಯಕ ಮುಂದುವರೆಸಿರುತ್ತಾನೆ. ದಿನಾಂಕ 24/10/2015 ರಂದು ಬೆಳಿಗ್ಗೆ 1100 ಗಂಟೆಗೆ ನಮ್ಮ ಜಾಗೇಯಲ್ಲಿ ನಾನು ಮತ್ತು ನನ್ನ ಅಣ್ಣನಾದ ಅಪ್ಪಾರಾವ ಪಾಟೀಲ ಇಬ್ಬರೂ ಸೇರಿ ಕಲ್ಲು ಹಾಕುತ್ತಿರುವಾಗ ನಾನಾಗೌಡ ತಂದೆ ಅಣ್ಣಪ್ಪಗೌಡ ಪಾಟೀಲ ಇತನು ನನಗೆ ತಡೆದು ಏ ರಂಡಿ ಮಕ್ಕಳೆ ನಿಮ್ಮ ಜಾಗಾ ಇಲ್ಲೇಕೆ ಬರತ್ತಾದ ಅಂತ ಬೈದು ಕೈಯಿಂದ ಬೆನ್ನ ಮೇಲೆ ಹೊಡೆದನು, ಬಿಡಿಸಲು ಬಂದ ನನ್ನ ಅಣ್ಣನಾದ ಅಪ್ಪಾರಾವ ಇವರಿಗೆ ಎದೆಯ ಮೇಲಿನ ಅಂಗಿ ಹಿಡಿದು ಜಗ್ಗಾಡಿ ಕೈಯಿಂದ ಬೆನ್ನ ಮೇಲೆ ಹೊಡೆದು ಇನ್ನ ಮೇಲೆ ಊರಲ್ಲಿ ನೀವು ಹೇಗೆ ಜೀವನ ಮಾಡತ್ತೀರಿ ನೋಡತ್ತೀನಿ ಮಕ್ಕಳ್ಯಾ ಅಂತ ಜೀವ ಭಯಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.