POLICE BHAVAN KALABURAGI

POLICE BHAVAN KALABURAGI

02 April 2014

Gulbarga District Reported Crimes

ಅಪಘಾತ ಪ್ರಕರಣ :
ರಟಕಲ ಠಾಣೆ : ಶ್ರೀ ಭೀಮಶ್ಯಾ ತಂದೆ ಮೊಗಲಪ್ಪ ಕುರಬರ ಸಾ ಓಗಿಪೂರ ಮಂಡಲ ತಾಂಡೂರ ಜಿ : ರಂಗಾರೆಡ್ಡಿ  ರವರ ಮಗನಾದ  ದಶರಥ ಇತನು ನನ್ನ ಮಕ್ಕಳ ಹತ್ತಿರ ಹಾಗೂ ರಟಕಲ ರೇವಣಸಿದ್ದೇಶ್ವರ ದೇವಾಲಯಕ್ಕೆ ಹೋಗಿ ಬರುತ್ತೇನೆ ಅಂತ ಹೇಳಿ ಬಂದವನು ಮರಳಿ ತನ್ನ ದ್ವಿಚಕ್ರ ವಾಹನ ನಂ ಎಪಿ.09 ಕೆ. 9952 ನೇದ್ದರ ಮೇಲೆ ಬರುವಾಗ ಎದುರಿನಿಂದ ಬಂದ ಬಸ್ ನಂ ಕೆ.ಎ. 32 ಎಪ್ 1941 ನೇದ್ದರ ಚಾಲಕ ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಎದರುಗಡೆಯಿಂದ ಬರುತ್ತಿದ್ದ ನನ್ನ ಮಗನಿಗೆ ಡಿಕ್ಕಿಪಡಿಸಿದರಿಂದ ನನ್ನ ಮಗ ಸ್ಥಳದಲ್ಲಿ ಸತ್ತಿದ್ದು ಸದರಿಯ ವನ ಸಾವಿಗೆ ಬಸ್ ಚಾಲಕನ ಅತೀವೇಗ ಮತ್ತು ನಿಷ್ಕಾಳಜಿತನದ ಚಾಲನೆಯೆ ಕಾರಣವಾಗಿರುತ್ತದೆ.  ಅಂತ ಸಲ್ಲಿಸಿದ ದೂರು ಸಾರಂಶದ ಮೇಲಿಂದ ರಟಕಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ದ್ವೀಚಕ್ರ ವಾಹನ ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಲಕ್ಷ್ಮಿಕಾಂತ ತಂದೆ ಶಂಕರಾವ ಪಾಟೀಲ  ಸಾ: ಬಿದ್ದಾಪೂರ ಕಾಲೊನಿ ಗುಲಬರ್ಗಾ ಇವರು ದಿನಾಂಕ: 19-03-2014 ರಂದು ರಾತ್ರಿ 10:30 ಗಂಟೆ ಸುಮಾರಿಗೆ ನನ್ನ ದ್ವಿಚಕ್ರವಾಹನ ಸ್ಪ್ಲೆಂಡರ ಪ್ಲಸ್ ನಂ: ಕೆಎ-37 ಕ್ಯೂ- 5992 ಸಿಲ್ವರ ಕಲರ ಚೆಸ್ಸಿ ನಂ: MBLHA10EJ9HA05309  ಇಂಜಿನ ನಂ:HA10EA8HM07742 ಅ.ಕಿ. 20,000/- ರೂ ಕಿಮ್ಮತ್ತಿನ ದ್ದು ಗಾಡಿಯಲ್ಲಿ ಪೆಟ್ರೋಲ್ ಆಗಿದ್ದರಿಂದ ಶಕ್ತಿನಗರ  ಬಡಾವಣೇಯ ಹನುಮಾನ ಗುಡಿಯ ಹತ್ತಿರ ದ್ವೀಚಕ್ರ ವಾಹನ ನಿಲ್ಲಿಸಿ ನಮ್ಮ ಸಂಬಂಧಿಕರಾದ ಅಣ್ಣಾರಾವ ಕುಂಬಾರ ರವರ ಮನೆಗೆ ಹೋಗಿ ಬರುವಷ್ಟರಲ್ಲಿ ಗಾಡಿಯು ಸ್ಥಳದಲ್ಲಿ ಕಾಣಲಿಲ್ಲ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತರಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು :
ನಿಂಬರ್ಗಾ ಠಾಣೆ : ಶ್ರೀ ಭೀಮಶಾ ತಂದೆ ಕರೇಪ್ಪ ಮರಗಮ್ಮ ಕೋಳಿ ಸಾಸಲಗರ ಹಾ:ವ ನಿಂಬರ್ಗಾ ಇವರು ದಿನಾಂಕ 01-04-2014 ರಂದು 1230 ಗಂಟೆಗೆ ನಾನು ಆಳಂದ ದಿಂದ ನಿಂಬರ್ಗಾಕ್ಕೆ ಬರುವಾಗ ಭೂಸನೂರ ಪ್ಯಾಕ್ಟರಿ ಪೆಟ್ರೋಲ್ ಪಂಪ ಹತ್ತಿರ ರಸ್ತೆಯ ಮೇಲೆ ನಿಂಬರ್ಗಾ ಕಡೆಯಿಂದ 1.ಗುಂಡಪ್ಪ ತಂದೆ ತಮ್ಮಣ್ಣ ಮರಗಮ್ಮ ಕೋಳಿ 2. ಯಲ್ಲಪ್ಪ ತಂದೆ ತಮ್ಮಣ್ಣ ಮರಗಮ್ಮ ಕೋಳಿ 3. ರಮೇಶ ತಂದೆ ತಮ್ಮಣ್ಣ ಮರಗಮ್ಮ ಕೋಳಿ 4. ಬಸಪ್ಪ ತಂದೆ ತಮ್ಮಣ್ಣ ಮರಗಮ್ಮ ಕೋಳಿ ರವರು ತಮ್ಮ ಮೋಟಾರ ಸೈಕಲ್ ಮೇಲೆ ಫೀರ್ಯಾದಿಯು ಸಾಕಿದ ಹಂದಿಗಳನ್ನು ಬೇರೆ ಕಡೆ ಬಿಡಲು ಅಂತಾ ಒಯುತ್ತಿರುವಾಗ ತಡೆದು ವಿಚಾರಿಸಿದ್ದಕ್ಕೆ ಆರೋಪಿತರು ಫೀರ್ಯಾದಿಗೆ ಅವಾಚ್ಯ ಶಬ್ದಗಳಿಂದ  ಬೈದು ಕೈಯಿಂದ ಮತ್ತು ಕಲ್ಲಿನಿಂದ ಹೊಡೆ ಬಡೆ ಮಾಡಿ ರಕ್ತಗಾಯ ಹಾಗೂ ಗುಪ್ತ ಗಾಯ ಪಡಿಸಿ ಜೀವದ ಭಯ  ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಶಂಕರ ತಂದೆ ನಾಮು ಚವ್ಹಾಣ ಸಾಃ ಲಕ್ಷ್ಮಿ  ನಾರಾಯಣ  ನಗರ  ಗುಲಬರ್ಗಾ   ದಿನಾಂಕ 31/03/2014  ರಂದು  ರಾತ್ರಿ1 0:30 ಗಂಟೆಗೆ ತನ್ನ ಮಗನಾದ ಆಕಾಶ ಈತನು ತಾನು ಕೆಲಸ ಮಾಡುವ  ಜೆ.ಡಿ.  ಕಂಪನಿಯ ಸಾಫ್ಟವೇರ ಇರುವ ಡೇಲ್  ಕಂಪನಿಯ ಲ್ಯಾಪಟಾಪ್ನಂ. E6430 I 7 ಅನ್ನು ಮೇಲಿನ ಮನೆಯಲ್ಲಿಟ್ಡು ಕೀಲಿ  ಹಾಕದೆ  ಕೆಳಗಿನ  ಮನೆಯಲ್ಲಿ ಬಂದು ಮಲಗಿದ್ದು ಇಂದು ದಿನಾಂಕ 01-04-2014  ರಂದು 08:00ಗಂಟೆಗೆ ನೋಡಲಾಗಿ  ಯಾರೋ ಕಳ್ಳರು  ಸದರಿ  ಲ್ಯಾಪಟಾಪ್ನ್ನು ಕಳ್ಳತನ  ಮಾಡಿಕೊಂಡು  ಹೋಗಿದ್ದು ಅದರ ಕಿಮ್ಮತ್ತು 1,10,000/- ರೂ ಆಗಬಹುದು  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.