POLICE BHAVAN KALABURAGI

POLICE BHAVAN KALABURAGI

28 November 2012

GULBARGA DISTRICT REPORTED CRIMES


ದರೋಡೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ಶರಣಬಸಪ್ಪಾ ತಂದೆ ಅಪ್ಪಾರಾವ ಶೇರಿಕರ ಸಾ:ಲಕ್ಷ್ಮೀಗಂಜ ಶಹಾಬಾದ ರವರು ನಾನು ಮತ್ತು ಶಿವಕುಮಾರ ತಂದೆ ಬಾಬುರಾವ ಕೊರವಾರ ಕೂಡಿಕೊಂಡು ದಿನಾಂಕ:27/11/2012 ರಂದು ಮುಂಜಾನೆ ನನ್ನ ಮೋಟಾರ ಸೈಕಲ ಟಿವಿಎಸ್‌ ಎಕ್ಸಸ ನಂ.ಕೆಎ-32 ಡಬ್ಲೂ-4897 ನೇದ್ದರ ಮೇಲೆ ಅಫಜಲಪೂರಕ್ಕೆ ಹೋಗಿ ಮರಳಿ ಶಹಾಬಾದ ಕಡೆಗೆ ಮರತೂರ ಮಾರ್ಗವಾಗಿ ಮರತೂರ ಗ್ರಾಮದ ಹತ್ತಿರ ರಾತ್ರಿ ಅಂದಾಜು 9.30 ಪಿಎಂ ಸುಮಾರಿಗೆ ಬರುತ್ತಿರುವಾಗ ಹಿಂದುಗಡೆಯಿಂದ ಮೂರು ಜನರು ಮೋಟಾರ ಸೈಕಲ ಮೇಲೆ ಬಂದು ನಮಗೆ ಸೈಡು ಹೊಡೆದು ಮುಂದೆ ಹೋಗಿ ನಿಲ್ಲಿಸಿ,ಕಣ್ಣಿಗೆ ಕಾರಪುಡಿ ಎರಚಿ ಮಚ್ಚಿನಿಂದ ಹೊಡೆದು ಗುಪ್ತಗಾಯ ಮತ್ತು ರಕ್ತಗಾಯ ಪಡಿಸಿ ನನ್ನಲ್ಲಿದ್ದ ನಗದು ಹಣ 10,000/-ರೂ ಹಾಗೂ ಒಂದು ಸ್ಯಾಮಸಂಗ ಕಂಪನಿಯ ಮೊಬೈಲ  ಅ.ಕಿ.7000/-ರೂ ಹೀಗೆ ಒಟ್ಟು 17,000/-ರೂ ಕಿಮ್ಮತ್ತಿನೇದ್ದವುಗಳನ್ನು ಕಸಿದುಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 156/2012 ಕಲಂ, 394 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಬ್ರಹ್ಮಪೂರ ಪೊಲೀಸ ಠಾಣೆ:ಶ್ರೀ. ರಜನಿಕಾಂತ ತಂದೆ ಕಂಠೆಪ್ಪಾ ಸಾ|| ಕಪನೂರ ತಾ||ಜಿ|| ಗುಲಬರ್ಗಾ ರವರು ನಾನು ದಿನಾಂಕ:19/11/2012 ರಂದು 14-30 ಗಂಟೆಗೆ ಸರಾಫ ಬಜಾರ ಮೈಲಾಪೂರ ಬಂಗಾರದ ಅಂಗಡಿ ಹತ್ತಿರ ಹೀರೋ ಹೊಂಡಾ ಸ್ಪೇಲೆಂಡರ್ ಪ್ಲಸ್ ಸಿಲ್ವರ್ ಬಣ್ಣದ ಮೋಟರ ಸೈಕಲ ನಂ:ಕೆಎ 32 ಎಕ್ಸ್ 1119  ||ಕಿ|| 40,000/- ನೇದ್ದನ್ನು ನಿಲ್ಲಿಸಿ ಮಾರ್ಕೆಟ ಮಾಡಲು ಹೋಗಿ, ಮರಳಿ  ಬರುವಷ್ಟರಲ್ಲಿ ಯಾರೋ ಕಳ್ಳರು ನನ್ನ ಮೋಟರ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿದ್ದು ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವದಿಲ್ಲ. ಕಾರಣ ಯಾರೋ ಕಳ್ಳರು ನನ್ನ ಮೋಟರ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:124/2012 ಕಲಂ: 379 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIMES


ಹುಡಗ ಕಾಣೆಯಾದ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀಮತಿ,ಅಂಬವ್ವ ಗಂಡ ದಶರಥ ಸನಾಗರ ವ||40,ಸಾ|| ಬೋರಾಬಾಯಿ ನಗರ ಬ್ರಹ್ಮಪುರ ಗುಲಬರ್ಗಾ ರವರು ನನ್ನ  ಮಗನಾದ ಮಂಜುನಾಥ @ಕಾಕಿ ತಂದೆ ದಶರಥ ಸನಾಗರ್ ವ||10 ವರ್ಷ, ಇತನು ದಿನಾಂಕ 02-11-2012 ರಂದು ಮದ್ಯಾಹ್ನ 3-00 ಗಂಟೆಗೆ ಮನೆಯಿಂದ ಹೊರಗೆ ಹೋದವನು ಮರಳಿ ಮನೆಗೆ ಬಂದಿರುವದಿಲ್ಲ. ಎಲ್ಲಾ ಕಡೆಗು ಹುಡುಕಾಡಿದರು ಮಗ ಪತ್ತೆ ಆಗದೇ ಇರುವದರಿಂದ, ಕಾಣೆಯಾದ ತನ್ನ ಮಗನನ್ನು ಪತ್ತೆ ಹಚ್ಚಿ ಕೊಡಬೇಕು ಅಂತ ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:88/2012 ಕಲಂ ಹುಡುಗ ಕಾಣೆಯಾದ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ:ಶ್ರೀ. ಮಹ್ಮದ ಅಬ್ದುಲ ಖದೀರ ತಂದೆ ಮೊಹ್ಮದ ಅಬ್ದುಲ ಹಮೀದ ಸಾ|| ಮನೆ ನಂ: ಎಂ.ಐ.ಜಿ.10 ಆನಂದ ನಗರ ರಾಜಾಪೂರ ರೋಡ  ಗುಲಬರ್ಗಾ ರವರು ನಾನು ದಿನಾಂಕ:27/10/2012 ರಂದು 14-30 ಗಂಟೆಗೆ ಸುಪರ ಮಾರ್ಕೆಟ ಘಂಟೋಜಿ ಅಂಗಡಿ ಹತ್ತಿರ ನನ್ನ ಹೀರೋ ಹೊಂಡಾ ಸಿಡಿ 100 ಡಿಲಕ್ಸ್  ಕಪ್ಪು ಬಣ್ಣದ ಮೋಟರ ಸೈಕಲ ನಂ: ಕೆಎ 32 ಎಲ್4210 ||ಕಿ|| 30,000/- ನೇದ್ದನ್ನು ನಿಲ್ಲಿಸಿ ನಮಾಜ ಮುಗಿಸಿಕೊಂಡು ಬಂದು ನೋಡಲಾಗಿ ಯಾರೋ ಕಳ್ಳರು ನನ್ನ ಮೋಟರ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಯಾರೋ ಕಳ್ಳರು ನನ್ನ ಮೋಟರ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 123/2012 ಕಲಂ, 379 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:ದಿ:27-11-12 ಮದ್ಯಾಹ್ನ 2-45 ಗಂಟೆ ಸುಮಾರಿಗೆ ಸಾಗರ ದಾಬಾದ ಹಿಂದಿನ ಜಾಗದಲ್ಲಿ ವಿಠಲ ತಂದೆ ಘಾಳೆಪ್ಪ ರಂಗೋಜಿ ವ: 21 ಸಾ: ದೇಗಾಂವ ತಾ: ಆಳಂದ ಹಾ:ವ: ಸಾಗರ ಧಾಬಾ,ಮಹ್ಮದಅಲಿ ತಂದೆ ಅಬ್ದುಲ ರಶೀದ ಶೇಕ ವ: 24 ವರ್ಷ ಸಾ: ರಹೇಮತ ನಗರ ಗುಲಬರ್ಗಾ,ಬಾಬಾ ತಂದೆ ಮಲ್ಲಿಕಸಾಬ ಭಾಗವಾನ ವ: 36 ಸಾ: ಚಟ್ಟೆವಾಡಿ ರೋಜಾ ಗುಲಬರ್ಗಾ,ಮಹೇಶ ತಂದೆ ರುಕ್ಮಣ್ಣ ಚವ್ಹಾಣ ವ: 35 ವರ್ಷ  ಸಾ: ಮಕ್ತಂಪೂರ ಗುಲಬರ್ಗಾ,ಸೋಮನಾಥ ತಂದೆ ಬಾಬುರಾವ ಏವಲೇ ವ: 35 ಸಾ: ಆರ್‌ಎಸ್‌ ಕಾಲನಿ ಗುಲಬರ್ಗಾ,ನಾಶೀರ ತಂದೆ ಮಹೇಬೂಬಪಟೇಲ ವ: 36 ಸಾ: ಬುಲಂದ ಪರವೇಜ ಕಾಲನಿ ಗುಲಬರ್ಗಾ,ಸದ್ದಾಂ ತಂದೆ ಅಮಜಾದ  ಶೇಖ ವ: 20 ಸಾ: ರಹೇಮತ ನಗರ ಗುಲ್ಬರ್ಗಾ,ಸೈಬಣ್ಣ ತಂದೆ ಮಲ್ಲಪ್ಪ ತೋಟ್ನಳ್ಳಿ ಸಾ:ಹೊಸಳ್ಳಿ ತಾ:ಸೇಡಂ ಹಾ:ವ:ಸಾಗರದಾಬಾ ಗುಲ್ಬರ್ಗಾ,ದತ್ತಾತ್ರೇಯ  ತಂದೆ ಕಾಶೀನಾಥ ಪಾಟಳ ವ: 35 ವರ್ಷ ಸಾ: ಸ್ಟೇಷನ ಗಾಣಗಾಪೂರ,ಓಂ ಪ್ರಕಾಶ ತಂದೆ ರಾಮಚಂದ್ರಪ್ಪ ಬಿರಾದಾರ ವ: 27 ವರ್ಷ ಸಾ: ಶಿವಾಜಿನಗರ ಗುಲಬರ್ಗಾ  ರವರು  ದುಂಡಾಗಿ ಕುಳಿತುಕೊಂಡು ಅಂದರ ಬಾಹರ ಇಸ್ಪೀಟ ಜೂಜಾಟ ಆಡುತ್ತಿದ್ದಾಗ ಪಿ.ಎಸ.ಐ ಆನಂದರಾವ ಮತ್ತು ಸಿಬ್ಬಂದಿಯವರು ಮಾನ್ಯ ಡಿ.ಎಸ್.ಪಿ. (ಗ್ರಾ) ಉಪವಿಭಾಗ ಗುಲಬರ್ಗಾ ಮಾರ್ಗದರ್ಶನ ಮತ್ತು ಮಾನ್ಯ ಸಿಪಿಐ ಗ್ರಾಮೀಣ ವೃತ್ತ ಗುಲಬರ್ಗಾ ರವರ ನೇತ್ರತ್ವದಲ್ಲಿ ದಾಳಿ ಮಾಡಿ 10 ಜನರನ್ನು ವಶಕ್ಕೆ ತೆಗೆದುಕೊಂಡು ಜೂಜಾಟಕ್ಕೆ ಸಂಬಂಧಿ ಸಿದ ನಗದು ಹಣ 10,400/- ರೂ. ಮತ್ತು ಇಸ್ಪೀಟ ಎಲೆಗಳು ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನ ನಂ: ಗುನ್ನೆ ನಂ 390/12  ಕಲಂ 87 ಕೆ.ಪಿ.ಆಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀಮತಿ ಅಂಬುಬಾಯಿ ಗಂಡ  ಮಲ್ಲೇಶಪ್ಪಾ ಅಂಬಲಗಿ ವಯ;65 ವರ್ಷ ಉ: ಮನೆಗೆಲಸ ಸಾ: ಕಪನೂರ ತಾ: ಜಿ: ಗುಲಬರ್ಗಾರವರು ನಾನು ದಿನಾಂಕ:27/11/2012 ರಂದು ಹೊಲದಿಂದ ಮನೆಗೆ ರಸ್ತೆಯ ಪಕ್ಕದಿಂದ ನಡೆದುಕೊಂಡು ಬರುತ್ತಿರುವಾಗ ಸಾಯಂಕಾಲ 6:30 ಗಂಟೆಯ ಸುಮಾರಿಗೆ ಹುಮನಾಬಾದ ರಿಂಗ ರೋಡ ಕಡೆಯಿಂದ ಹಿಂದಿನಿಂದ ಯಾವುದೋ ಒಂದು ಮೋಟಾರ ಸೈಕಲ  ಸವಾರನು ನನಗೆ ಡಿಕ್ಕಿ ಹೊಡೆದು ಗಾಯಗೊಳಿಸಿ ತನ್ನ ಮೋಟಾರ ಸೈಕಲ್ಲನ್ನು ಹಾಗೇ ಒಡಿಸಿಕೊಂಡು ಓಡಿ ಹೋಗಿರುತ್ತಾನೆ ಅಂತಯಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:391/2012  ಕಲಂ 279 337 ಐಪಿಸಿ ಸಂಗಡ 187 ಐಎಂವಿ ಆಕ್ಟ್‌‌  ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀಮತಿ ಜಗದೇವಿ ಗಂಡ ಶರಣಪ್ಪ ಉಪ್ಪಾರ ವ: 30 ಉ: ಗೌಂಡಿಕೆಲಸ ಜಾ;ಲಿಂಗಾಯತ ಸಾ:ಮೋತಕಪಳ್ಳಿ ತಾ: ಚಿಂಚೋಳಿ ಹಾ: ವ: ಬೇಲೂರ (ಜೆ) ತಾ: ಜಿ: ಗುಲಬರ್ಗಾರವರು ನಾನು ನನ್ನ ಗಂಡ ದಿನಾಂಕ:27/11/2012 ರಂದು ಸಾಯಂಕಾಲ ಮೋಟಾರ ಸೈಕಲ ಮೇಲೆ ಕುಮಸಿ ಗ್ರಾಮದಿಂದ ಬೇಲೂರ (ಜೆ) ಗ್ರಾಮಕ್ಕೆ ನಮ್ಮ ಬಜಾಜ ಡಿಸ್ಕವರಿ ಮೋಟಾರ ಸೈಕಲ ನಂ:ಕೆಎ-32 ಇಎ-6238 ನೇದ್ದರ ಮೇಲೆ ಹೋರಟಿದ್ದು,ನನ್ನ  ಪತಿಯವರು ಅವರಾದ (ಬಿ) ಗ್ರಾಮ ದಾಟಿ ಸ್ವಾಮಿ ಸರ್ಮಥ ಆಶ್ರಮದ ಎದುರಿನ ರಸ್ತೆಯ ಮೇಲೆ ಅತಿವೇಗದಿಂದ ನಡೆಸುತ್ತಾ ಹೋರಟಾಗ ಎದರುನಿಂದ ಯಾವುದೋ ಭಾರಿ ವಾಹನ ಬರಲು ಅದರ ಲೈಟಿನ ಬೆಳಕು ಒಮ್ಮೇಲೆ ಮುಖದ ಮೇಲೆ ಬಿದಿದ್ದರಿಂದ ವೇಗದಲ್ಲಿ ಮೋಟಾರ ಸೈಕಲ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ನನಗೆ ಮತ್ತು ನನ್ನ ಗಂಡನಿಗೆ ತಲೆಗೆ ಹಣೆಗೆ ಅಲಲ್ಲಿ ರಕ್ತಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:392/12 ಕಲಂ 279,337 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.