ಅಪಹರಣ
ಪ್ರಕರಣ :
ಗ್ರಾಮೀಣ
ಠಾಣೆ :
ಶ್ರೀ ರಾಜಕುಮಾರ ತಂದೆ ಅಂಗನು ಸಾ:ಸಿರಸಾ ದೋಗೋಳಿ ತಾ:ಮಾಂದುಗಳ ಜಿಲ್ಲಾ ಜಾಲೋನ ಹಾ:ವ: ಬಂದೇನವಾಜ ಮಜೀದ ಹತ್ತಿರ ಮಿಲ್ಲತ ನಗರ ಗುಲಬರ್ಗಾ
ರವರ ಹೆಂಡತಿ ಗುಡ್ಡಿದೇವಿ ಇವಳು ದಿನಾಂಕ 10-09-13 ರಂದು ಮಧ್ಯಾಹ್ನ 2-30 ಗಂಟೆ ಸುಮಾರಿಗೆ ಮನೆಯಲ್ಲಿ ಊಟ ಮಾಡುತ್ತಿದ್ದು, ಮಗಳು ಮೋಹಿನಿ ಬಟ್ಟೆ ತೊಳೆಯುತ್ತೇನೆ
ಎಂದು ಸಾಬೂನು ತೆಗೆದುಕೊಂಡು ಮನೆ ಗೇಟ ಎದುರು ಬಟ್ಟೆ ತೊಳೆಯುತ್ತಿದ್ದಳು ಸ್ವಲ್ಪ ಸಮಯದ
ನಂತರ ಮಗಳು ಮೋಹಿನಿ ಇವಳಿಗೆ ನೋಡಲಾಗಿ ಕಾಣಲಿಲ್ಲಾ. ಅಕ್ಕ ಪಕ್ಕದ ಜನರಿಗೆ ವಿಚಾರಿಸಲೂ ಅವಳ ಬಗ್ಗೆ ಯಾವುದೇ ಪತ್ತೆ ಸುಳಿವು ಸಿಗಲಿಲ್ಲಾ. ಅವಳ ಪತ್ತೆ ಕುರಿತು ಇಲ್ಲಿಯವರೆಗೆ ಗುಲಬರ್ಗಾ ನಗರದಲ್ಲಿ ಮತ್ತು ಇತರೇ
ಕಡೆ ಹುಡುಕಾಡಲೂ ಸಿಕ್ಕಿರುವುದಿಲ್ಲಾ. ಇಂದು ನಮಗೆ ಗೊತ್ತಾಗಿದ್ದೆನೆಂದೆರೆ, ನಮ್ಮ ಮನೆಯ ಪಕ್ಕದಲ್ಲಿ
ವಾಸವಾಗಿರುವ ಸಿರಾಜೋದ್ದಿನ ತಂದೆ ಇಸ್ಮಾಯಿಲಸಾಬ ಭೋಸಗಾ
ಸಾ: ಮಿಲ್ಲತ ನಗರ ಗುಲಬರ್ಗಾ ಈತನು ನನ್ನ ಮಗಳಿಗೆ ಅಪಹರಣ ಮಾಡಿಕೊಂಡು ಹೋಗಿರುತ್ತಾನೆ ಎಂದು ಗೊತ್ತಾಗಿರುತ್ತದೆ.
ಸಿರಾಜೋದ್ದಿನ ಈತನು ಅಂದಿನಿಂದ ಓಣಿಯಲ್ಲಿ ಕಾಣಿಸುತ್ತಿಲ್ಲಾ.
ಕಾರಣ ನನ್ನ ಮಗಳಿಗೆ ಅಪಹರಿಸಿಕೊಂಡು ಹೋದ ಸಿರಾಜೊದ್ದಿನ ತಂದೆ ಇಸ್ಮಾಯಿಲ ಭೋಸಗಾ ಈತನ ಮೇಲೆ ಕಾನೂನು
ಕ್ರಮ ಜರುಗಿಸಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಅಪಘಾತ ಪ್ರಕರಣಗಳು
:
ಶಾಹಾಬಾದ ನಗರ
ಠಾಣೆ : ಶ್ರೀ ನಾಗಣ್ ತಂದೆ ಸಪ್ಪಣ್ಣಾ ಧರ್ಮಾಪೂರ ಸಾ: ಸಂಜಯಗಾಂಧಿ ನಗರ ದುಭೈ ಕಾಲೋನಿ ಗುಲ್ಬರ್ಗಾ ಇವರ ಮಗ ಪ್ರಭುಲಿಂಗ ಇತನು ದಿನಾಂಕ: 24-09-2013 ರಂದು 407
ವಾಹನ ನಂ: ಕೆಎ-28-3983 ನೇದ್ದರಲ್ಲಿ ಸರ್ಕಾರಿ
ಮದ್ಯವನ್ನು ನಂದೂರದ ಕೆ.ಎಸ್.ಬಿ.ಸಿ.ಎಲ್. ಕಂಪನಿಯ ಮದ್ಯವನ್ನು ಹಾಕಿಕೊಂಡು ಶಹಾಬಾದದ ಸರೋಜಾ
ವೈನ್ಸ್ ಮತ್ತು ಸರೋಜಾ ಬಾರಗಳಿಗೆ ವಾಹನದಲ್ಲಿ ಹಾಕಿಕೊಂಡು ಬರುತ್ತಿದ್ಧಾಗ ಶಹಾಬಾದದ
ಜೆ.ಪಿ.ಕಂಪನಿಯ ಡಾ:: ಜಗಜೀವನ ರಾಮ ಕ್ರಾಸ ಹತ್ತಿರ ಬರುತ್ತಿದ್ದಾಗ ಜೆ.ಪಿ.ಕಂಪನಿಯ ಕೊಬೊಲ್ಕೊ ಕಂಪನಿಯ ಕ್ರೇನ್ ಚಾಲಕನು
ತನ್ನ ಕ್ರೇನನ್ನು ನಿಷ್ಕಾಳಜಿತನದಿಂದ ಚಲಾಯಿಸುತ್ತಿರುವಾಗ ಸದರಿ ಕ್ರೇನ್ ಮುರಿದು ಪಿರ್ಯಾದಿ ಮಗ ಚಲಾಯಿಸುತ್ತಿದ್ದ 407 ವಾಹನದ ಮೇಲೆ ಬಿದ್ದಿದ್ದರಿಂದ ಸದರಿ 407 ವಾಹನದಲ್ಲಿ ಪಿರ್ಯಾದಿಯ ಮಗ ಪ್ರಭುಲಿಂಗ ಇತನು ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮತ್ತು ಸದರಿ
407 ವಾಹನದ ಕ್ಲೀನರನಾದ
ಚಂದ್ರಕಾಂತ ಇತನಿಗೆ ಎರಡು ಕಾಲುಗಳೀಗೆ ಬಾರಿ ರಕ್ತಗಾಯವಾಗಿದ್ದು ನಂತರ ಹೆಚ್ಚಿನ ಉಪಚಾರ ಕುರಿತು
ಗುಲ್ಬರ್ಗಾ ಕ್ಕೆ ಜೆ,ಪಿ, ಕಂಪನಿಯ ಅಂಬುಲೇನ್ಸ್ ದಲ್ಲಿ ಹಾಕಿಕೊಂಡು ಹೋಗಿರುತ್ತಾರೆ. ಸದರಿ ಕ್ರೇನ್ ಚಾಲಕನು
ನಿಷ್ಕಾಳಜಿತನದಿಂದ ಚಲಾಯಿಸಿ ನನ್ನ ಮಗನ ಸಾವಿಗೆ ಕಾರಣವಾಗಿರುತ್ತಾನೆ. ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಂಚೋಳಿ
ಠಾಣೆ : ಶ್ರೀ ಸುರೇಂದ್ರನಾಥ
ತಂಧೆ ಅನಂತಕುಮಾರ ಬೇಳಮಕರ ಸಾ: ಪೊಲಕಪಳ್ಳಿ ತಾ: ಚಿಂಚೋಳಿ
ಇವರ ಹಿರಿಯ
ಅಣ್ಣನಾದ ರಮೇಶ ತಂದೆ ಅನಂತಕುಮಾರ
ಬೆಳಮಕರ ಇವರು ದಿನಾಂಕ
24-09-2013 ರಂದು ತಮ್ಮ ಪೊಲಕಪಳ್ಳಿ
ಗ್ರಾಮದ ನಮ್ಮ ಸಮಾಜದ ಕಮೀಟಿ ಹಾಲಿನಲ್ಲಿ
ಮಾತಾಡುತ್ತಾ ಕುಳಿತವನು ಮೂತ್ರ ವಿಸರ್ಜನೆಗೆಂದು ನಮ್ಮ ಗ್ರಾದ ಬಸ ನಿಲ್ದಣದಿಂದ ಮುಂದೆ ತಾಂಡೂರು
ಕಡೆಗೆ ಹೋಗುವ ಮುಖ್ಯ ರಸ್ತೆಯ ಎಡಬದಿಯಲ್ಲಿಯೇ ನಡೆದುಕೊಂಡು
ಹೋಗುತ್ತಿದ್ದಾಗ ನಮ್ಮೂರ ಬಸ್ಸ ನಿಲ್ದಣದ ಹತ್ತಿರ ಯಾವೋನೋ ಒಬ್ಬ ತನ್ನ
ಲಾರಿಯನ್ನು ಅಡ್ಡ ದಿಡ್ಡಿಯಾಗಿ ಅತೀ ವೇಗ, ನಿಷ್ಕಾಳಿಜಿತನದಿಂದ ಹಾಗೂ ಮನುಷ್ಯ ಜೀವಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಸದರ
ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿಸದ್ದ ನನ್ನ ಅಣ್ಣ ರಮೇಶ ಬೇಳಮಕರ್ ಇವರಿಗೆ
ಹಿಂದಿನಿಂಧ ಡಿಕ್ಕಿ ಪಡಿಸಿ ಸದರ ಲಾರಿಯನ್ನು ಸ್ಥಳದಲ್ಲಯೇ ಬಿಟ್ಟು ಚಾಲಕ ಓಡಿಹೋಗಿದ್ದು ಇರುತ್ತದೆ. ಸದರ ಅಪಘಾತ ಘಟನೆಯಿಂದ
ನನ್ನ ಅಣ್ಣನ ತಲೆಗೆ ,ಎದೆಗೆ , ಬಾರಿ ಪ್ರಮಾಣದ ಪೆಟ್ಟಾಗಿದ್ದು ಸದರ ಅಪಘಾತ
ಪಡಿಸಿದ ಲಾರಿಯನ್ನು ನೋಡಲಾಗಿ ಅದರ ನಂ ಕೆ ಎ 39 4459 ಇರುತ್ತದೆ. ಸದರ ಅಪಘಾತ ಘಟನೆಯಿಂದಾಗಿ ತಲೆ, ಎದೆಗೆ ಜೋರಾಗಿ ಪೆಟ್ಟಾಗಿದ್ದರಿಂದ
ನನ್ನ ಅಣ್ಣನ ಕಿವಿಯಿಂದ ರಕ್ತ ಬರುತ್ತಿದ್ದು ಇದರಿಂದ ಮತ್ತಷ್ಟು ಗಾಬರಿಯಾದ ನಾನು 108 ಅಂಬ್ಯುಲೆನ್ಸ ವಾಹನಕ್ಕೆ
ಕರೆಮಾಡಿ ಸ್ಥಳಕ್ಕೆ ಕರೆಯಿಸಿಕೊಂಡು ಸದರ ನನ್ನ ಅಣ್ಣನಿಗೆ ಅಂಬ್ಯುಲೆನ್ಸ ವಾಹನದಲ್ಲಿ ಎತ್ತಿಹಾಕಿಕೊಂಡು ಉಪಚಾರ ಕುರಿತು ಸರಕಾರಿ ಆಸ್ಪತ್ರೆ
ಚಿಂಛೊಳಿಗೆ ತಂಧು ಸೆರಿಕೆಮಾಡಿರುತ್ತೆನೆ. ಸದರ ಆಸ್ಪತ್ರೆಯಲ್ಲಿ ವೈಧ್ಯರು
ನನ್ನ ಅಣ್ಣನಿಗೆ ಪ್ರಥಮ ಚಿಕಿತ್ಸೆ ನೀಡಿದ್ದು ನಂತರ ಹೆಚ್ಚಿನ ಉಪಚಾರಕ್ಕಾಗಿ ಸರಕಾರಿ ಅಂಬ್ಯುಲೆನ್ಸನಲ್ಲಿಯೇ ಗುಲ್ಬರ್ಗಾಕ್ಕೆ ಒಯ್ಯುತ್ತಿರುವಾಗ ಮಾರ್ಗ
ಮದ್ಯದಲ್ಲಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ನೆಲೋಗಿ ಠಾಣೆ : ಶ್ರೀ
ಕರೆಪ್ಪ ತಂದೆ ಜಕ್ಕಪ್ಪ ಬಮ್ಮನಳ್ಳಿ ಸಾ: ಕಲ್ಲಹಂಗರಗಾ
ರವರ ತಮ್ಮ ಸಾಯಿಬಣ್ಣ ತಂದೆ ಜಕ್ಕಪ್ಪ ಬಮ್ಮನಳ್ಳಿ ಇವನು ಸಂಜೆ 07.30 ಸಮಯಕ್ಕೆ ತಮ್ಮ ಮನೆ ಕಲ್ಲಹಂಗರಗಾದಿಂದ
ಹೆಂಡತಿ ಊರು ಗೌನಳ್ಳಿಗೆ ಹೋಗುತ್ತೇನೆಂದು ನಮ್ಮ ಮನೆಯಲ್ಲಿ ಇರುವ ಬೈಕ್ ನಂ ಕೆಎ-24 ಹೆಚ್-5859 ರಲ್ಲಿ
ಹೊರಟನು. ದಿನಾಂಕ: 23-09-2013 ರಂದು ರಾತ್ರಿ 08.00 ಗಂಟೆಗೆ ನಮ್ಮ ಊರಿನ ಗಿರೆಪ್ಪ ಗೌಡರು ನನಗೆ
ಫೋನ ಮಾಡಿ ನಮ್ಮ ಕಂಕರ ಮಶೀನ ದಾಟಿ ಶಿವಪ್ಪ ಹೆರೂರ ಇವರ ಹೊಲದ ಹತ್ತೀರ ನಿಮ್ಮ ತಮ್ಮ ಸಾಯಿಬಣ್ಣ ಹೊರಟಿದ್ದ
ಬೈಕಗೆ ಜೇವರಗಿ ಕಡೆಯಿಂದ ಟ್ರಾಕ್ಟರ್ ಒಂದನ್ನು ಸದರ ಚಾಲಕನು ಅತೀ ಹಾಗೂ ನಿಷ್ಕಾಳಜಿತನದಿಂದ ನಡೆಯಿಸಿಕೊಂಡು
ಬಂದು ಢಿಕ್ಕಿ ಮಾಡಿದ್ದರಿಂದ ನಿಮ್ಮ ತಮ್ಮನಿಗೆ ತಲೆಗೆ ಭಾರೀ ಗಾಯವಾಗಿದ್ದರಿಂದ ಸ್ಥಳದಲ್ಲಿಯ
ಮೃತಪಟ್ಟಿರುತ್ತಾನೆ ಅಂತಾ ಹೇಳಿದಾಗ ನಾನು ನಮ್ಮ ತಾಯಿ-ತಂದೆ
ತಮ್ಮ ನೊಂದಿಗೆ ಬಂದು ನೋಡಲಾಗಿ ತಲೆಗೆ, ಬಲಗಾಲು ಮತ್ತು ಬಲಗೈಗೆ ಭಾರೀ ಗಾಯವಾಗಿ ತಲೆಯ ಮೆದಳು ಹೊರ
ಬಂದು ಸತ್ತು ಹೋಗಿದ್ದನು. ನನ್ನ ತಮ್ಮನಿಗೆ ಢಿಕ್ಕಿ ಹೊಡೆದ ಟ್ರಾಕ್ಟರ್ ಸೊನ್ನ ಕ್ರಾಸನಲ್ಲಿ ಪೈಪು
ಮಾಡುವವರಿಗೆ ಸೇರಿದ್ದು ಎಂದು ಗೊತ್ತಾಗಿ ಅಲ್ಲಿಗೆ ಹೋಗಿ ನಾನು ನೋಡಲಾಗಿ ಟ್ರಾಕ್ಟರ್ ನಂ ಕೆಎ-32
ಟಿಎ-3148 ಟ್ರೈಲಿ ನಂ ಕೆಎ-32 ಟಿ-3274 ಇರುತ್ತದೆ. ಗಾಡಿಯನ್ನು ಸೊನ್ನ ಕ್ರಾಸನಲ್ಲಿರುವ ಸಿಮೆಂಟ್
ಪೈಪು ಮಾಡುವ ಜಾಗದಲ್ಲಿ ನಿಲ್ಲಿಸಿ ಓಡಿ ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಪ್ರಕರಣ :
ಚಿಂಚೋಳಿ
ಠಾಣೆ : ಶ್ರೀಮತಿ ಶಾಂತಾಬಾಯಿ
ಗಂಡ ಮೋಗಲಪ್ಪಾ ಫತ್ತೇಪುರ ಸಾ:ಐನ್ನೋಳ್ಳಿ ತಾ:ಚಿಂಚೋಳಿ ಇವರ ಎರಡನೆಯವಳಾದ ಶ್ರೀದೇವಿ ಎಂಬುವವಳು ತನ್ನೂರಿನ ಶೇಖರ ತಂದೆ
ಮಾಣಿಕಪ್ಪಾ ಮುತ್ತಂಗಿ ಎಂಬುವವನೋಂದಿಗೆ ಕೇಳದ ವರ್ಷ ನವೆಂಬರ ತಿಂಗಳಲ್ಲಿ ಪ್ರೀತಿಸಿ ವಿವಾಹ
ಆಗಿರುತ್ತಾಳೆ .ವಿವಾಹದ ನಂತರ ತನ್ನ ಅಳಿಯನು ತನ್ನ ಮಗಳಿಗೆ ಹೊಸಾ ಊರ ಭವಾನಿ ನಗರ ಚಿಂಚೋಳಿಯಲ್ಲಿ
ಒಂದು ಕಿರಾಯಿ ಮನೆ ಮಾಡಿಕೋಂಡು ಸುಮಾರು ಮೂರು ತಿಂಗಳುಗಳ ವರೆಗೆ ಸಹ ಬಾಳ್ವೆಯನ್ನು
ಮಾಡಿರುತ್ತಾನೆ.ತದನಂತರ ತನ್ನ ಮಗಳಿಗೆ ಬಿಟ್ಟು ಹೋಗಿದ್ದು ಕಳೆದ 5-6 ದಿವಸಗಳ ಹಿಂದಷ್ಟೆ ಮರಳಿ
ಐನ್ನೊಳ್ಳಿ ಗ್ರಾಮದಲ್ಲಿರುವ ತನ್ನ ಮನೆಗೆ ಬಂದಿದ್ದು, ವಿಷಯ ತಿಳಿದ ತಾನು ಅವರ ಮನೆಗೆ ಹೋಗಿ ಬುದ್ದಿವಾದ ಹೇಳಿ ಬಂದಿದ್ದು ದಿನಾಂಕ 22.09.2013 ರಂದು ಸಾಯಂಕಾಲ 04.00 ಗಂಟೆಗೆ
ತಾನು ಮತ್ತು ತನ್ನ ಮಗನಾದ ಬಸವರಾಜ ಇಬ್ಬರು ತಮ್ಮ
ಮನೆಯ ಹತ್ತಿರ ಇದ್ದಾಗ ತಮ್ಮೂರಿನ ಶೇಖರ ತಂದೆ ಮಾಣಿಕಪ್ಪ, ಸುರೇಶ ತಂದೆ ಮಾಣಿಕಪ್ಪಾ,ಪ್ರಕಾಶ
ತಂದೆ ಮಾಣಿಕಪ್ಪಾ,ಅನೂಸೂಯಾ ಗಂಡ ಮಾಣಿಕಪ್ಪಾ,ಬಸಮ್ಮ ಗಂಡ ನರಸಪ್ಪಾಎಂಬ 5 ಜನ ಕೂಡಿಕೊಂಡು ಅಕ್ರಮ ಕೂಟ ರಚಿಸಿಕೊಂಡು ಬಂದು ಹರಿಜನ ವಾಡಾದಲ್ಲಿರುವ ಡಾ:ಅಂಬೇಡ್ಕರ ಸರ್ಕಲ ಹತ್ತಿರ ಸಾರ್ವಜನಿಕ ರಸ್ತೆಯ
ಮೇಲೆ ನಿಂತು ಜಾತಿ ಎತ್ತಿ ಬೈದು ಹೊಡೆ ಬಡೆ
ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಕಳವು ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಸತೀಶ ತಂದೆ ಭಾಸ್ಕರ ವೈದ್ಯ ಸಾ:ಇಂಡಿಯನ್ ಆಯಿಲ್ ಪೆಟ್ರೋಲ ಬಂಕ ಹತ್ತಿರ ಶಾಂತನಗರ ಬಂಕೂರ ಇವರು
ದಿನಾಂಕ:
24-09-2013 ರಂದು ನಾನು ನನ್ನ ಕೆಲಸ ಮುಗಿಸಿಕೊಂಡು ಮನೆಗೆ ಹೋದಾಗ ಮನೆಗೆ ಹಾಕಿದ ಬೀಗ ಮುರಿದಿದ್ದು, ನೋಡಿ ಗಾಬರಿಯಾಗಿ ಒಳಗೆ ಹೋಗಿ ನೋಡಲಾಗಿ ಬೆಡರೂಮ್ ಕೋಣೆಯಲ್ಲಿದ್ದ ಅಲೆಮಾರಿ ತೆರೆದಿದ್ದು ಅಲೆಮಾರಿಯಲ್ಲಿದ್ದ 62 ಗ್ರಾಂ ಬಂಗಾರದ ಆಭರಣಗಳು ಅ.ಕಿ. 1.80.000/-
ರೂ. ಕಿಮ್ಮತ್ತಿನವುಗಳು ಅಲೆಮಾರಿಯಲ್ಲಿಟ್ಟಿದ್ದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ನಂತರ ನನ್ನ ಹೆಂಡತಿಗೆ ಫೋನ ಮಾಡಿ ವಿಷಯ ತಿಳಿಸಿದೇನು. ಸದರಿ ಘಟನೆಯು ಇಂದು ದಿನಾಂಕ: 24/09/2013 ರಂದು 10.15 ಎಎಮ್
ದಿಂದ
2.10 ಪಿಎಮ್ ದ ಮದ್ಯದ ಅವಧಿಯಲ್ಲಿ ಆಗಿರಬಹುದು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟ ನಿರತ ವ್ಯಕ್ತಿಯ ಬಂಧನ :
ಕಮಲಾಪೂರ ಠಾಣೆ : ದಿನಾಂಕ 24-09-2013
ರಂದು ಕಮಲಾಪೂರ ಗ್ರಾಮದ ಜೀವಣಗಿ ಕ್ರಾಸನಲ್ಲಿ ಒಬ್ಬ ವೈಕ್ತಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ
ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರನ್ನು
ಬರಮಾಡಿಕೊಂಡು ಸಿಬ್ಬಂದಿಯವರೊಂದಿಗೆ ಮುಕ್ರಾಮ ದಾಬಾದ ಹತ್ತಿರ ಗಿಡದ ಮರೆಯಲ್ಲಿ ನಿಂತು ನೋಡಲಾಗಿ
ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಯಾವುದೋ ಚೀಟಿ ಸಾರ್ವಜನಿಕರಿಗೆ
ಕೊಡುತ್ತಿದ್ದು ಹೊಗಿ ಬರುವ ಸಾರ್ವಜನಿಕರಿಗೆ 1 ರೂ ಗೆ 80 ರೂ ಕೊಡುತ್ತೆನೆ ಬನ್ನಿರಿ ಅಂತಾ
ಕರೆಯುತ್ತಿರುವುದನ್ನು ಖಚಿತ ಪಡಿಸಿಕೊಂಡು ಧಾಳಿ
ಮಾಡಿ ಸದರಿಯವನನ್ನು ಹಿಡಿದು ವಿಚಾರಿಸಲಾಗಿ ಅವನು ಪ್ರದಿಪ ತಂದೆ ನಾರಾಯಣರಾವ ಭಾಲ್ಕಿ @ ಉಪ್ಪಾರ
ಸಾ : ಕಮಲಾಪೂರ ಅಂತಾ ತಿಳಿಸಿದ್ದು ಸದರಿಯವನಿಂದ ನಗದು ಹಣ 352-00 ರೂ, ಒಂದು ಬಾಲಪೆನ್ನ ಒಂದು
ಮಟಕಾ ಚೋಟಿ ಜಪ್ತಿಪಡಿಸಿಕೊಂಡು ಸದರಿಯವನೊಂದಿಗೆ ಮರಳಿ ಠಾಣೆಗೆ ಬಂದು ಸದರಿಯವನ ವಿರುದ್ಧ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನಿರ್ಲಕ್ಷತನದಿಂದ ವಾಹನ ಚಲಾಯಿಸಿದ ಪ್ರಕರಣಳು :
ಕಮಲಾಪೂರ ಠಾಣೆ : ಪಿ.ಎಸ್.ಐ. ಕಮಲಾಪೂರ ರವರು ಗುಲಬರ್ಗಾ-ಹುಮನಾಬಾದ ರಾಷ್ಟ್ರೀಯ ಹೆದ್ದಾರಿ -218 ರ ಮೇಲೆ ಚಿಂದಿ ಬಸವಣ್ಣ ಗುಡಿಯ
ಹತ್ತಿರ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ಒಬ್ಬ ಕ್ರೂಜರ್ ಜೀಪ್ ಚಾಲಕನು ತನ್ನ ಕ್ರೂಜರ್
ಜೀಪಿನಲ್ಲಿ ಮತ್ತು ಜೀಪಿನ ಮೇಲೆ ಪ್ರಯಾಣಿಕರನ್ನು ಪ್ರಯಾಣಿಕರ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ
ಜೀಪಿನ ಪರ್ಮಿಟಗಿಂತ ಹೆಚ್ಚಿಗೆ ಪ್ರಯಾಣಿಕರನ್ನು ಕೂಡಿಸಿಕೊಂಡು ಅತಿವೇಗ ಮತ್ತು ಅಲಕ್ಷತನದಿಂದ
ಚಲಾಯಿಸುತ್ತಾ ಮುಂದೆ ಹೋಗುತ್ತಿದ್ದ ವಾಹನಗಳಿಗೆ ಕಟ್ ಹೊಡೆಯುತ್ತಾ ಅತಿವೇಗ ಮತ್ತು ಅಲಕ್ಷತನದಿಂದ
ಚಲಾಯಿಸಿಕೊಂಡು ಹೋಗುತ್ತಿದ್ದಾಗ ನಾನು ಮತ್ತು ನನ್ನೊಂದಿಗಿದ್ದ ನಮ್ಮ ಪೊಲೀಸ್ ಸಿಬ್ಬಂದಿ ಜನರು
ಸದರಿ ಕ್ರೂಜರ್ ಜೀಪನ್ನು ನಿಲ್ಲಿಸುವಂತೆ ಕೈ ಸನ್ನೆ ಮಾಡಿದರೂ ಕೂಡಾ ಅದನ್ನು ನಿರ್ಲಕ್ಷಿಸಿ
ಹಾಗೆಯೇ ತನ್ನ ಕ್ರೂಜರ್ ಜೀಪನ್ನು ನಿಲ್ಲಿಸದೇ
ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗುತ್ತಿದ್ದಾಗ ನಾನು ಮತ್ತು ನಮ್ಮ ಸಿಬ್ಬಂದಿ
ಜನರು ಕೂಡಿ ಸದರಿ ಕ್ರೂಜರ್ ಜೀಪನ್ನು ಓವರ ಟೇಕ್ ಮಾಡಿ ಕಮಲಾಪೂರದ ಓಕಳಿ ಕ್ರಾಸ್ ಹತ್ತಿರ ಕ್ರೂಜರ್ ಜೀಪನ್ನು ಅದರ ಚಾಲಕನ್ನು
ಹಿಡಿದು ಕ್ರೂಜರ್ ಜೀಪಿನಿಂದ ಕೆಳಗೆ ಇಳಿಸಿ ಆತನ ಹೆಸರು ಮತ್ತು ವಿಳಾಸದ ಬಗ್ಗೆ ವಿಚಾರಿಸಲಾಗಿ
ಆತನು ತನ್ನ ಹೆಸರು ಗಂಗಾಧರ ತಂದೆ ಬಸವಣ್ಣಯ್ಯ ಮಠ ಉ; ಚಾಲಕ ಸಾ;ನಾವದಗಿ ತಾ;ಜಿ;ಗುಲಬರ್ಗಾ ಅಂತಾ
ತಿಳಿಸಿದ್ದು, ಆತನ ಕ್ರೂಜರ್ ಜೀಪ್ ನೋಡಲಾಗಿ ಅದರ ನಂಬರ್ ನೋಡಲಾಗಿ ಕೆಎ-32-ಬಿ-9980ನೇದ್ದು ಇರುತ್ತದೆ. ನಂತರ ಕ್ರೂಜರ್ ಜೀಪ್ ಮತ್ತು ಅದರ
ಚಾಲಕನನ್ನು ಕಮಲಾಪೂರ ಪೊಲೀಸ್ ಠಾಣೆಗೆ ಕರೆತಂದು ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಮಲಾಪೂರ ಠಾಣೆ : ಪಿ.ಎಸ್.ಐ. ಕಮಲಾಪೂರ ರವರು ಓಕಳ್ಳಿ ಕ್ರಾಸ್
ಹತ್ತಿರ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ
ಗುಲಬರ್ಗಾ-ಹುಮನಾಬಾದ ರಾಷ್ಟ್ರೀಯ ಹೆದ್ದಾರಿ -218 ರ ಮೇಲೆ ಹತ್ತಿರ ಕ್ರೂಜರ್ ಜೀಪ್ ಚಾಲಕನು ತನ್ನ ಕ್ರೂಜರ್
ಜೀಪಿನಲ್ಲಿ ಮತ್ತು ಜೀಪಿನ ಮೇಲೆ ಪ್ರಯಾಣಿಕರನ್ನು ಪ್ರಯಾಣಿಕರ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ
ಜೀಪಿನ ಪರ್ಮಿಟಗಿಂತ ಹೆಚ್ಚಿಗೆ ಪ್ರಯಾಣಿಕರನ್ನು ಕೂಡಿಸಿಕೊಂಡು ಅತಿವೇಗ ಮತ್ತು ಅಲಕ್ಷತನದಿಂದ
ಚಲಾಯಿಸುತ್ತದ್ದಾಗ ನಾನು ಮತ್ತು ನನ್ನೊಂದಿಗಿದ್ದ
ನಮ್ಮ ಪೊಲೀಸ್ ಸಿಬ್ಬಂದಿ ಜನರು ಸದರಿ ಕ್ರೂಜರ್ ಜೀಪನ್ನು
ನಿಲ್ಲಿಸುವಂತೆ ಕೈ ಸನ್ನೆ ಮಾಡಿದರೂ ಕೂಡಾ ಅದನ್ನು ನಿರ್ಲಕ್ಷಿಸಿ ಹಾಗೆಯೇ ತನ್ನ
ಕ್ರೂಜರ್ ಜೀಪನ್ನು ನಿಲ್ಲಿಸದೇ ಅತಿವೇಗ
ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗುತ್ತಿದ್ದಾಗ ನಾನು ಮತ್ತು ನಮ್ಮ ಸಿಬ್ಬಂದಿ ಜನರು ಕೂಡಿ
ಸದರಿ ಕ್ರೂಜರ್ ಜೀಪನ್ನು ಓವರ ಟೇಕ್ ಮಾಡಿ
ಕಮಲಾಪೂರದ ಡಿ.ಎಮ್ ಕುಲಕರ್ಣಿ ಪೆಟ್ರೋಲ್ ಪಂಪ್ ಹತ್ತಿರ ಸದರಿ ಕ್ರೂಜರ್ ಜೀಪನ್ನು ಅದರ ಚಾಲಕನ್ನು
ಹಿಡಿದು ಕ್ರೂಜರ್ ಜೀಪಿನಿಂದ ಕೆಳಗೆ ಇಳಿಸಿ ಆತನ
ಹೆಸರು ಮತ್ತು ವಿಳಾಸದ ಬಗ್ಗೆ ವಿಚಾರಿಸಲಾಗಿ ಆತನು ತನ್ನ ಹೆಸರು ಕಾಳೇಶ್ವರ ತಂದೆ ವಿಜಯಕುಮಾರ
ಕಲ್ಮೂಡ ಉ; ಚಾಲಕ ಸಾ; ಗುಲಬರ್ಗಾ ಅಂತಾ ತಿಳಿಸಿದ್ದು, ಆತನ ಕ್ರೂಜರ್ ಜೀಪ್
ನೋಡಲಾಗಿ ಅದರ ನಂಬರ್ ನೋಡಲಾಗಿ ಕೆಎ-34, ಎಮ್-1984 ನೇದ್ದು ಇರುತ್ತದೆ. ನಂತರ ಸದರಿ ಕ್ರೂಜರ್ ಜೀಪ್ ಮತ್ತು ಅದರ
ಚಾಲಕನನ್ನು ಕಮಲಾಪೂರ ಪೊಲೀಸ್ ಠಾಣೆಗೆ ಕರೆತಂದು ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಮಲಾಪೂರ ಠಾಣೆ : ಪಿ.ಎಸ್.ಐ. ಕಮಲಾಪೂರ ರವರು ಮರಗುತ್ತಿ ಕ್ರಾಸ್
ಹತ್ತಿರ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ಗುಲಬರ್ಗಾ-ಹುಮನಾಬಾದ ರಾಷ್ಟ್ರೀಯ ಹೆದ್ದಾರಿ -218
ರ ಮೇಲೆ ಹತ್ತಿರ ಕ್ರೂಜರ್ ಜೀಪ್ ಚಾಲಕನು ತನ್ನ
ಕ್ರೂಜರ್ ಜೀಪಿನಲ್ಲಿ ಮತ್ತು ಜೀಪಿನ ಮೇಲೆ ಪ್ರಯಾಣಿಕರನ್ನು ಪ್ರಯಾಣಿಕರ ಜೀವಕ್ಕೆ ಅಪಾಯವಾಗುವ
ರೀತಿಯಲ್ಲಿ ಜೀಪಿನ ಪರ್ಮಿಟಗಿಂತ ಹೆಚ್ಚಿಗೆ ಪ್ರಯಾಣಿಕರನ್ನು ಕೂಡಿಸಿಕೊಂಡು ಅತಿವೇಗ ಮತ್ತು
ಅಲಕ್ಷತನದಿಂದ ಚಲಾಯಿಸುತ್ತದ್ದಾಗ ನಾನು ಮತ್ತು
ನನ್ನೊಂದಿಗಿದ್ದ ನಮ್ಮ ಪೊಲೀಸ್ ಸಿಬ್ಬಂದಿ ಜನರು ಸದರಿ ಕ್ರೂಜರ್ ಜೀಪನ್ನು ನಿಲ್ಲಿಸುವಂತೆ ಕೈ ಸನ್ನೆ ಮಾಡಿದರೂ ಕೂಡಾ ಅದನ್ನು
ನಿರ್ಲಕ್ಷಿಸಿ ಹಾಗೆಯೇ ತನ್ನ ಕ್ರೂಜರ್ ಜೀಪನ್ನು
ನಿಲ್ಲಿಸದೇ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗುತ್ತಿದ್ದಾಗ ನಾನು ಮತ್ತು
ನಮ್ಮ ಸಿಬ್ಬಂದಿ ಜನರು ಕೂಡಿ ಸದರಿ ಕ್ರೂಜರ್ ಜೀಪನ್ನು
ಓವರ ಟೇಕ್ ಮಾಡಿ ರಾಜನಾಳ ಕಾಸ್ರ ಹತ್ತಿರ ಸದರಿ ಕ್ರೂಜರ್ ಜೀಪನ್ನು ಅದರ ಚಾಲಕನ್ನು
ಹಿಡಿದು ಕ್ರೂಜರ್ ಜೀಪಿನಿಂದ ಕೆಳಗೆ ಇಳಿಸಿ ಆತನ
ಹೆಸರು ಮತ್ತು ವಿಳಾಸದ ಬಗ್ಗೆ ವಿಚಾರಿಸಲಾಗಿ ಆತನು ತನ್ನ ಹೆಸರು ರಾಜಕುಮಾರ ತಂದೆ ಪೀರಪ್ಪಾ
ಮಾಳಗೆ ಉ;ಚಾಲಕ ಸಾ;ವರನಾಳ ತಾ;ಗುಲಬರ್ಗಾ ಅಂತಾ ತಿಳಿಸಿದ್ದು, ಆತನ ಕ್ರೂಜರ್ ಜೀಪ್
ನೋಡಲಾಗಿ ಅದರ ನಂಬರ್ ನೋಡಲಾಗಿ ಕೆಎ-39-3708 ನೇದ್ದು ಇರುತ್ತದೆ. ನಂತರ ಸದರಿ ಕ್ರೂಜರ್ ಜೀಪ್ ಮತ್ತು ಅದರ
ಚಾಲಕನನ್ನು ಕಮಲಾಪೂರ ಪೊಲೀಸ್ ಠಾಣೆಗೆ ಕರೆತಂದು ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಸುನೀತಾ ಗಂಡ ಮಾರುತಿ ಕೇಶ್ವರ ಸಾ:ಕಿಣ್ಣಿ ಸಡಕ ಇವರು ಮನೆಯಲ್ಲಿದ್ದಾಗ ರವೀಂದ್ರ ಮೋಗಾ ಇವರ
ಮನೆಯ ಕಡೆಗೆ ಜಗಳಾಡುವ ಬಾಯಿ ಮಾತಿನ ಸಪ್ಪಳ ಕೇಳಿ ನಾನು ಅಲ್ಲಿಗೆ ಹೋಗಿ ನೋಡಲಾಗಿ ರವೀಂದ್ರ ಮೋಗಾ
ಮತ್ತು ಆತನ ಹೆಂಡತಿ ಲಲಿತಾಬಾಯಿ ಹಾಗೂ ಅವರ
ಮಕ್ಕಳಾದ ರೇಷ್ಮಾ ಮತ್ತು ಸುಷ್ಮಾ ಇವರುಗಳು ಕೂಡಿಕೊಂಡು ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಮಗ ಶಿವಕುಮಾರನಿಗೆ ಅವಾಚ್ಯ
ಶಬ್ದಗಳಿಂದ ಬೈದು ನನ್ನ ಮಗಳಾದ ರೇಷ್ಮಾಳಿಗೆ ನೀನು ವಿನಾಕಾರಣ ಮಾತನಾಡಿಸುತ್ತಿ ನೀನು ಅವಳ ತೆಲೆ
ಕೆಡಿಸುತ್ತಿ ಸೂಳೆ ಮಗನೆ “ ಅಂತ ಅವ್ಯಾಚ್ಚವಾಗಿ ಬೈಯುತ್ತಿದ್ದಾಗ ನನ್ನ ಮಗನು ರೇಷ್ಮಾಳು ತಾನಾಗಿಯೆ ಬಂದು
ನನ್ನೊಂದಿಗೆ ಮಾತನಾಡಿಸುತ್ತಾಳೆ ನಾನೇನು ಅವಳ ತೆಲೆ ಕೆಡಿಸುತ್ತಿಲ್ಲಾ ಅಂತ ಹೇಳುತ್ತಿದ್ದಾಗ
ನಮಗೆ ಎದುರು ಮಾತನಾಡುತ್ತಿ ಅಂತಾ ರವೀಂದ್ರ ಈತನು ನನ್ನ ಮಗನ ಎದೆಯ ಮೇಲಿನ ಅಂಗಿ ಹಿಡಿದು ತನ್ನ
ಕೈಯಿಂದ ಕಾಪಳಕ್ಕೆ ಹೊಡೆಯುತ್ತಿದ್ದಾಗ ನಾನು ಅಲ್ಲಿಗೆ ಹೋಗಿ ಯಾಕೆ ನನ್ನ ಮಗನಿಗೆ ಹೊಡೆಯುತ್ತಿರಿ
, ನಿಮ್ಮ ಮಗಳಿಗೆ ಹದ್ದು ಬಸ್ತಿನಲ್ಲಿ ಇಡಿ ಅಂತಾ ಹೇಳುತ್ತಿದ್ದಾಗ ಲಲಿತಾಬಾಯಿ ಇವಳು ಬಂದು ನನ್ನ
ತೆಲೆಯ ಮೇಲಿನ ಕೂದಲು ಹಿಡಿದು ಜಗ್ಗುತ್ತಾ ಮೋದಲು ಈ ರಂಡಿಗೆ ಹೊಡೆಯಿರಿ ಅಂತಾ ತನ್ನ ಕೈಯಿಂದ ನನ್ನ ಬೆನ್ನ
ಮೇಲೆ ಹೊಡೆದು ಗುಪ್ತಗಾಯ ಪಡಿಸಿದಳು ಆಗ ರವಿಂದ್ರ ಈತನು ಬಂದವನೇ ನನ್ನ ಸೀರೆ ಹಿಡಿದು ಎಳೆದಾಡಿ
ಅವಮಾನ ಪಡಿಸುತ್ತಾ ನನ್ನ ಹೊಟ್ಟೆಗೆ ತನ್ನ ಕಾಲಿನಿಂದ ಒದ್ದು ಜೋರಾಗಿ ನೆಲಕ್ಕೆ ನೂಕಿಸಿ ಕೊಟ್ಟು
ಗುಪ್ತಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.