POLICE BHAVAN KALABURAGI

POLICE BHAVAN KALABURAGI

11 August 2011

GULBARGA DIST REPORTED CRIMES

ಅಪಘಾತ ಪ್ರಕರಣ ಒಂದು ಸಾವು :
ಶಹಾಬಾದ ನಗರ ಠಾಣೆ:
ಶ್ರೀ ವಿಜಯಕುಮಾರ ತಂದೆ ಪಾಂಡು ರಾಠೋಡ ಉ: ಡ್ರೈವರ ಕೆಲಸ ಸಾ: ಕಾಳನೂರ ರವರು ನಾನು ನಿನ್ನೆ ದಿನಾಂಕ 10/08/2011 ರಂದು ಸಾಯಕಾಂಲ ಸುಮಾರಿಗೆ ನನ್ನ ಲಾರಿ ನಂ: ಸಿಜಿ/12 , ಜೆಡಸಿ 2026 ನೇದ್ದನ್ನು ವಾಡಿಯಿಂದ ಕಾಳನೂರಕ್ಕೆ ಚಲಾಯಿಸಿಕೊಂಡು ಬರುತ್ತಿರುವಾಗ ನನ್ನ ಮುಂದೆ ಟೀಪರ್ ನಂ: ಕೆ.ಎ-32/3125 ನೇದ್ದರ ಚಾಲಕ ಕೀಶನ ತಂದೆ ಗಂಗು ರಾಠೋಡ ಸಾ: ಕಾಳನೂರ ಇತನು ತನ್ನ ಟಿಪ್ಪರನ್ನು ಅತೀವೇಗ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಒಮ್ಮೇಲೆ ಎಡಗಡೆ ಕಟ್ ಮಾಡಿದ್ದರಿಂದ ಟಿಪರ ಎಡಗಡೆ ಪಲ್ಟಿಯಾಗಿ ಬಿದ್ದು ಅದರಲ್ಲಿ ಕುಳಿತ ಗುಂಡುರಾವ ತಂದೆ ಬಸವಣಪ್ಪಾ ಮತ್ತು ಗೀರಿಧರ ತಂದೆ ಬಸವರಾಜ ಸಾ|| ನಂದೂರ ರವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಚಾಲಕ ಕೀಶನ ಗೆ ಮುಖಕ್ಕೆ ಭಾರಿ ರಕ್ತಗಾಯವಾಗಿದ್ದು ಮತ್ತು ಎದೆಗೆ ಭಾರಿ ಒಳಪೆಟ್ಟಾಗಿ ಉಪಚಾರ ಕುರಿತು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿರುವಾಗ ಮಾರ್ಗ ಮಧ್ಯದಲ್ಲಿ ಕೀಶನ ಇತನು ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DISTRICT REPORTED CRIMES

ಕಿರುಕುಳ ಪ್ರಕರಣ :

ರೇವೂರ ಠಾಣೆ: ಶಾರದಾಬಾಯಿ ಗಂಡ ಭೀಮು ರಾಠೋಡ ಸಾ:ನಿಲೂರ ತಾಂಡಾ ತಾ:ಅಫಜಲಪೂರ ರವರು ನಾನು ಅಂಗನವಾಡಿ ಶಾಲೆಗೆ ಹೋಗುತ್ತೇನೆ ಅಂತ ಹೇಳಿದಾಗ ಗಂಡನಾದ ಭೀಮು ಇತನು ನೀನು ಅಂಗನವಾಡಿ ಶಾಲೆಗೆ ಹೊಗಬೇಡಾ ನನ್ನ ಜೋತೆ ಮುಂಬೈಗೆ ಬಾ ನೀನು ಅಂಗನವಾಡಿ ಕೆಲಸಕ್ಕೆ ಹೋದರೆ ನಿನಗೆ ಸುಮ್ಮನೆ ಬಿಡುವದಿಲ್ಲ ಅಂತಾ ಬೇದರಿಕೆ ಹಾಕಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಮಟಕಾ ಪ್ರಕರಣ :
ಬ್ರಹ್ಮಪೂರ ಠಾಣೆ
:  ದಿನಾಂಕ: 11/08/2011 ರಂದು ಮದ್ಯಾಹ್ನ ಠಾಣೆಯಲ್ಲಿದ್ದಾಗ ಬಾತ್ಮಿ ಬಂದಿದ್ದೆನೆಂದರೆ ಜಗತ ಸರ್ಕಲ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಮೋಸ ಮಾಡಿ ಅವರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೆರೆಗೆ ಪಂಚರ ಸಮಕ್ಷಮ ಪಿ.ಎಸ.ಐ ಮತ್ತು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹೆಸರು ವಿಳಾಸ ವಿಚಾರಿಸಲು ತಿಮ್ಮಯ್ಯ ತಂದೆ ಶಿವಪ್ಪ ಮೇಠಿ, ಸಾ|| ನಾಗನಟಗಿ ತಾ|| ಶಹಾಪೂರ, ಹಾ||ವ|| ಜೇವರ್ಗಿ ಕಾಲೋನಿ ಗುಲಬರ್ಗಾ ಅಂತಾ ಹೇಳಿದ್ದು, ಅವನ ಹತ್ತಿರ ನಗದು ಹಣ 3000/-, ಮಟಕಾ ಚೀಟಿ, ಜಪ್ತಿ ಮಾಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 

GULBARGA DIST REPORTED CRIMES

ಅಪಘಾತ ಪ್ರಕರಣ :

ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ : ಶ್ರೀಮತಿ  ಪದ್ಮಿನಿಬಾಯಿ ಗಂಡ ಬಾಬು ಸಕಾಡಾ   ಬಾಪು ನಗರ   ಗುಲಬರ್ಗಾ ರವರು ನಾನು ಎಸ್.ಟಿ.ಬಿ.ಟಿ.ಕ್ರಾಸ್ ಹತ್ತಿರ ಇರುವ ಗಚ್ಚಿನ ಮನೆ ಆಸ್ಪತ್ರೆಯ ರೋಡಿನ ಮೇಲೆ ನಡೆದುಕೊಂಡು ಹೊರಟಾಗ ಸೈಯದ ಅನಸ ಈತನು ತನ್ನ ಮೋಟಾರ ಸೈಕಲ್ ನಂ;ಕೆಎ 32 ವಾಯ 5720 ನೆದ್ದನ್ನು ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತಮಾಡಿ ಗಾಯಗೊಳಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆ ಕಾಣೆಯಾದ ಪ್ರಕರಣ :

ಶಹಾಬಾದ ನಗರ ಪೊಲೀಸ ಠಾಣೆ: ಮಹೇಬೂಬಮೀಯಾ @ ಮುನ್ನಾಮೀಯಾ ತಂದೆ ಅಬ್ದುಲನಬಿಸಾಬ ಸಾ:ಇಂದಿರಾ ನಗರ ನಂ.2 ಶಹಾಬಾದ ರವರು ಇಂದು ನನ್ನ ಮಗಳಾದ ಸಲ್ಮಾಸುಲ್ತಾನ ವ:22 ವರ್ಷ ಸಾ: ಇಂದಿರಾ ನಗರ ನಂ:2 ಶಹಾಬಾದ ಇವಳಿಗೆ ಶಹಾಬಾದದ ಮೊಹ್ಮದ ಮೇರಾಜ ತಂದೆ ಸರದಾರ ಅಹ್ಮದ ಇವರಿಗೆ ಕೊಟ್ಟು ಮದುವೆ ಮಾಡಿದ್ದು ಅದೆ. ಸದರಿ ನನ್ನ ಮಗಳು ತನ್ನ ಗಂಡನ ಮನೆಯಲ್ಲಿ ಚೆನ್ನಾಗಿದ್ದು ದಿನಾಂಕ:8/8/2011 ರಂದು ಸಾಯಂಕಾಲ್ ಸುಮಾರಿಗೆ ಮಗಳು ಯಾರಿಗೆ ಹೇಳದೇ ಕೇಳದೆ ಹೋಗಿರುತ್ತಾಳೆ. ನಾನು ಮತ್ತು ನನ್ನ ಅಳಿಯ ಎಲ್ಲರೂ ಕೂಡಿ ನಮ್ಮ ಸಂಬಂಧಿಕರ ಊರುಗಳಿಗೆ ಹೋಗಿ ವಿಚಾರಿಸಲು ಯಾವದೇ ಸುಳಿವು ಸಿಕ್ಕಿರುವದಿಲ್ಲ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಲ್ಮಾಸುಲ್ತಾನ ಇವಳು
ಕ್ರಿಮಕಲರ್ ಶೇಟ್ ಶಲವಾರ ಬಟ್ಟೆಗಳು ದರಿಸಿದ್ದು ಕೆಂಪು ಬಣ್ಣದು. 5 ಪೀಟು ಇರುತ್ತಾಳೆ. ತೆಳ್ಳನೇಯ ಮೈಕಟ್ಟು ಇರುತ್ತದೆ. ಹಾಗು ಸದ್ಯ ಇವಳು 7 ತಿಂಗಳ ಗರ್ಭಿಣಿ ಇರುತ್ತಾಳೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಕಮಲಾಪೂರ ಪೊಲೀಸ :
ಉದ್ದವ ತಂದೆ ಸುಗ್ರೀವ್ ಜಂಗೇವಾಡ ವ:19 ವರ್ಷ ಜಾ:ಕೋಲಿ ಉ;ಲಾರಿ ನಂ:ಎಂ.ಹೆಚ್ :24- ಎಫ್.-9015 ನೇದ್ದರ ಕ್ಲೀನರ್ ಸಾ;ವಳಸಂಗಿ ತಾ; ಅಹೆಮದಪೂರ ಜಿ: ಲಾತೂರ ( ಮಹಾರಾಷ್ಟ್ರ) ರವರು ನಾನು ಕ್ಲೀನರ್ ಮತ್ತು ಭಾಲಾಝಿ ಲಾರಿ ಚಾಲಕ ಕೂಡಿಕೊಂಡು ಲಾರಿ ನಂ: ಎಂ.ಹೆಚ್.-24-ಎಫ್-9015 ನೇದ್ದರಲ್ಲಿ ಬೆಳಗಾಂವದಲ್ಲಿ ಫ್ಲಾವರ್ ಗೋಬಿ ಚೀಲಗಳನ್ನು ಲೋಡ ಮಾಡಿಕೊಂಡು ಮಹಾರಾಷ್ಟ್ರದ ಚಂದ್ರಾಪೂರಕ್ಕೆ ತೆಗೆದುಕೊಂಡು ಹೋಗಲು ಗುಲಬರ್ಗಾ- ಹುಮನಾಬಾದ ಎನ್.ಹೆಚ್-218 ರಸ್ತೆಯ ಮುಖಾಂತರ ಕಮಲಾಪೂರ ಮಾರ್ಗವಾಗಿ ಚಿಂದಿ ಬಸವಣ್ಣನ ಗುಡಿಯ ದಾಟಿ ಹೊಡ್ಡಿನಲ್ಲಿ ಬೆಳಗಿನ ಜಾವ ಸುಮಾರಿಗೆ ನಮ್ಮ ಲಾರಿ ಏರ್ ಲಾಕ್ ಆಗಿದ್ದರಿಂದ ನಮ್ಮ ಲಾರಿ ಚಾಲಕನು ಲಾರಿಯನ್ನು ರೋಡಿನಲ್ಲಿ ಇಂಡಿಕೇಟರ್ ಹಾಕದೇ ನಿಲ್ಲಿಸಿ ನಾವಿಬ್ಬರೂ ಲಾರಿಯಿಂದ ಕೆಳಗೆ ಇಳಿದು ನೋಡುತ್ತಿದ್ದಾಗ ಗುಲಬರ್ಗಾ ಕಡೆಯಿಂದ ಒಬ್ಬ ಕಾರ್ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ಅಡ್ಡಾದಿಡ್ಡಿಯಾಗಿ ತನ್ನ ಕಾರನ್ನು ಚಲಾಯಿಸಿಕೊಂಡು ಬಂದು ರಸ್ತೆಯಲ್ಲಿ ಏರ್ ಲಾಕ್ ಆಗಿ ನಿಂತಿದ್ದ ನಮ್ಮ ಲಾರಿಯ ಹಿಂದಿನ ಭಾಗಕ್ಕೆ ಬಂದು ಡಿಕ್ಕಿ ಹೊಡೆದು ಅಪಘಾತ ಪಡಿಸಿದನು. ಕಾರ ಚಾಲಕನ ಹೆಸರು ಗುಮ್ಮಡಿ ರಾಮಣ್ಣರಾವ ತಂದೆ ಗುಮ್ಮಡಿ ಜಗನಮೋಹನರಾವ ಉ: ಉತ್ತಮ ಪ್ರಾಜೇಕ್ಟ್ದಲ್ಲಿ ಎಂಜೀನಿಯರ್ ಕೆಲಸ ಸಾ; ಪ್ಲಾಟ್ ನಂ: 582, ವಿವೇಕಾನಂದ ನಗರ ,ಕೆ.ಪಿ.ಹಚ್.ಬಿ ಕಾಲೂನಿ ಹತ್ತಿರ, ಕುಕುಟಪಲ್ಲಿ ಗ್ರಾಮ ಕುಕುಟಪಲ್ಲಿ ಮಂಡಲ, ಹೈದ್ರಾಬಾದ, ಜಿ: ರಂಗಾರೆಡ್ಡಿ ( ಆಂದ್ರಪ್ರದೇಶ) ಅಂತಾ ತಿಳಿಸಿದ್ದು, ಆತನ ಕಾರ್ ನಂ: ಎ.ಪಿ.-28- ಸಿ.ಎ. 5899 ನೇದ್ದು ಇದ್ದು ಅದರ ಮುಂದಿನ ಭಾಗ ಸಂಪೂರ್ಣ ಜಖಂಗೊಂಡಿದ್ದು, ನಮ್ಮ ಲಾರಿಯ ಹಿಂದಿನ ಭಾಗ ಜಖಂಗೊಂಡಿತ್ತು. ಸದರಿ ಕಾರ್ ಚಾಲಕನಿಗೆ ಮೈ ಕೈ ಗಳಿಗೆ ತರಚಿದ ಸಣ್ಣಪುಟ್ಟ ಗಾಯಗಳಾಗಿದ್ದವು, ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಕಮಲಾಪೂರ ಪೊಲೀಸ :
ಉಮೇಶ ತಂದೆ ಶರಣಪ್ಪ ಗ್ರೋವರ್ ವ; 23 ವರ್ಷ ಜಾ;ದಲಿತ ಉ;ವಿಧ್ಯಾರ್ಥಿ ಸಾ; ಭೂಂಯ್ಯಾರ ತಾ;ಜಿ; ಗುಲಬರ್ಗಾ ರವರು ನಾನು ಮತ್ತು ನನ್ನ ಕಾಕಾನ ಮಗನಾದ ಕಮಲೇಶ ಇಬ್ಬರು ಕಾಲೇಜಿನ ಎದುರಗಡೆ ಎನ್.,ಹೆಚ್, 218 ಮುಖ್ಯ ರಸ್ತೆಯ ಹನುಮಾನ ದೇವಸ್ಥಾನದ ಹತ್ತಿರ ಮಾತನಾಡುತ್ತಾ ನಿಂತುಕೊಂಡಿದ್ದಾಗ ಕಮಲೇಶ ಈತನು ನೀರು ಕುಡಿದು ಬರುತ್ತೇನೆ  ಅಂತಾ ತನ್ನ ಸೈಕಲ ತೆಗೆದುಕೊಂಡು ರಸ್ತೆ ದಾಟುತ್ತಿದ್ದಾಗ ಹುಮನಾಬಾದ ಕಡೆಯಿಂದ ಲಾರಿ ನಂ: ಕೆ.ಎ. 11 - 4883 ನೇದ್ದರ ಚಾಲಕ  ಅಕ್ಬರ ಅಲಿ ತಂದೆ ಫಕ್ರೋದ್ದೀನ್ ಸಾ; ಅರಸಿಕೇರಾ ಜಿ: ಹಾಸನ ಈತನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಕಮಲೇಶ ಈತನ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು, ಈ ಅಪಘಾತದಲ್ಲಿ ಕಮಲೇಶ ಈತನಿಗೆ ತೆಲೆಗೆ ಭಾರಿ ಗುಪ್ತಗಾಯವಾಗಿ ತೆಲೆಯಿಂದ ಮತ್ತು ಕಿವಿಯಿಂದ ರಕ್ತ ಬರುತ್ತಿದ್ದು, ಕಮಲೇಶನಿಗೆ ಇತನಿಗೆ ಉಪಚಾರ ಕುರಿತು 108 ಅಂಬುಲೇನ್ಸ್ ಕರೆಯಿಸಿ ಗುಲಬರ್ಗಾ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿರುತ್ತನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   

ಗೃಹಿಣೆಗೆ ಕಿರುಕುಳ ಪ್ರಕರಣ:

ಸ್ಟೇಷನ ಬಜಾರ ಠಾಣೆ: ಶ್ರೀಮತಿ ರೇಣುಕಾ ಗಂಡ ಪ್ರಕಾಶ ಸುತಾರ ಸಾ|| ಪೊಲೀಸ ಕ್ವಾರ್ಟರ್ಸ ಗುಲಬರ್ಗಾ ರವರು ನನಗೆ ಮದುವೆಯಾಗಿ 7 ವರ್ಷ ಆಗಿದ್ದು ನನ್ನ ಗಂಡ ಅಶೊಕ ಸುತ್ತಾರ ಇತನು 7 ವರ್ಷದಿಂದ ಕುಡಿದು ಬಂದು ಅಮಲಿನಲ್ಲಿ ಹಣ ಕೊಡು ಅಂತಾ ಮಾನಸಿಕ ದೈಹಿಕ ಹಿಂಸೆ ಮಾಡುತ್ತಾ ಅವಾಚ್ಯ ಶಬ್ದಗಳಿಂದ ಬೈದು ಹೊಡೆಬಡೆ ಮಾಡುತ್ತಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.