POLICE BHAVAN KALABURAGI

POLICE BHAVAN KALABURAGI

13 March 2014

Gulbarga District Reported Crimes

ಆಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವರ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 12-03-2014  ರಂದು ನಿಂಬರ್ಗಾ ಗ್ರಾಮದ ಹತ್ತಿರ ಇರುವಾಗ 1115 ಗಂಟೆಯ ಸುಮಾರಿಗೆ ಭಟ್ಟರ್ಗಾ ಗ್ರಾಮದ ಬಸ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ  ಒಬ್ಬ ವ್ಯಕ್ತಿಯು ಅಕ್ರಮವಾಗಿ ಮಧ್ಯವನ್ನು ತನ್ನ ಸ್ವಾಧೀನದಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಿರುವ ಬಗ್ಗೆ ಬಾತ್ಮಿ ಮೇರೆಗೆ ಮಾನ್ಯ ಸಿಪಿಐ ಸಾಹೇಬ ಆಳಂದರವರ ನೇತೃತ್ವದಲ್ಲಿ ಪಿಎಸ್.ಐ ನಿಂಬರ್ಗಾ ಹಾಗು ಸಿಬ್ಬಂದಿಯವರು ಮತ್ತು ಪಂಚರೋದಿಗೆ  ಭಟ್ಟರ್ಗಾ ಗ್ರಾಮದ ಬಸ ನಿಲ್ದಾಣದ ಹತ್ತಿರ ಹೋಗಿ ನೋಡಲಾಗಿ ಒಬ್ಬ ವ್ಯಕ್ತಿಯು ಸಾರ್ವಜನಿಕ ರೋಡಿನ ಮೇಲೆ ತನ್ನ ಮುಂದೆ ಒಂದು ರಟ್ಟಿನ ಪುಟ್ಟದಲ್ಲಿ ಮಧ್ಯದ ಪಾಕೇಟಗಳನ್ನು ಅಕ್ರಮವಾಗಿ ಯಾವುದೆ ಲೈಸನ್ಸ ಇಲ್ಲದೆ ಸಂಗ್ರಹಿಸಿಟ್ಟುಕೊಂಡು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು ದಾಳಿ ಮಾಡಿ ಮಧ್ಯದ ಪಾಕೀಟಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಗೆ ಹಿಡಿದು ಹೆಸರು ವಿಚಾರಿಸಲು ಅವನು ತನ್ನ ಹೆಸರು ನಾಗಪ್ಪ ತಂದೆ ಗಣಪತಿ ಪೂಜಾರಿ ಸಾ|| ಭಟ್ಟರ್ಗಾ ಅಂತ ತಿಳಿಸಿದನು, ಅವನಿಗೆ ಈ ಮಧ್ಯದ ಮಾರಾಟದ ಬಗ್ಗೆ ಲೈಸನ್ಸ ವಗೈರೆ ಕೇಳಿದ್ದು ಆದರೆ ಆತನು ತನ್ನ ಹತ್ತಿರ ಯಾವುದೆ ಲೈಸನ್ಸ ವಗೈರೆ ಇರುವದಿಲ್ಲ ಅಂತ ತಿಳಿಸಿದನು, ಅವನ ಮುಂದೆ ಇದ್ದ ಮಧ್ಯದ ಪಾಕೀಟಗಳನ್ನು ಪರಿಶೀಲಿಸಲಾಗಿ  180 ಎಮ್.ಎಲ್. ನ 26 ಒರಿಜನಲ್ ಚೋಯಸ ಪಾಕೇಟಗಳು ಅ.ಕಿ. 1300/- ಮತ್ತು ನಗದು ಹಣ 220/- ರೂ ಹೀಗೆ ಒಟ್ಟು 1520/- ಋಉ ಮತ್ತು ಸದರಿಯನನ್ನು ವಶಕ್ಕೆ ತೆಗೆದುಕೊಂಡು ಮರಳಿ ಠಾಣೆಗೆ ಬಂದು ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಟಕಲ ಠಾಣೆ : ದಿನಾಂಕ 12.03.2014 ರಂದು ರಟಕಲ ಪೊಲೀಸ ಠಾಣೆಯ ಸರಹದ್ದಿನ ಪಂಗರಗಾ  ಗ್ರಾಮದಲ್ಲಿ ಯಾರೋ ಒಬ್ಬ ಅನದಿಕೃತವಾಗಿ ಕ್ವಾಟರ ಬಾಟಲಗಳು ಮಾರಾಟ ಮಾಡುತ್ತಿದ್ದಾನೆ ಅಂತ ಬಾತ್ಮಿ ಬಂದ ಮೇರೆಗೆ ನಾನು ಅಕ್ಕಮಹಾದೇವಿ ವಿ. ನೀಲೆ ಪಿ.ಎಸ್.ಐ ಸಂಗಡ ಸಿಬ್ಬಂದಿ ಜನರನ್ನು ಹಾಗು ಇಬ್ಬರು ಪಂಚರನ್ನು ಕರೆದು ಕೊಂಡು ಸದರಿ ಗ್ರಾಮಕ್ಕೆ ಹೋಗಿ ಬಾತ್ಮಿ ಇದ್ದ ಸ್ಥಳಕ್ಕೆ ಹೋಗಿ ನೋಡಲಾಗಿ ಒಬ್ಬ ವ್ಯಕ್ತಿ ಅನದಿಕೃತವಾಗಿ ಕ್ವಾಟರ ಬಾಟಲಗಳನ್ನು ಮಾರಾಟ ಮಾಡುತ್ತಿರುವುದನ್ನು ನೋಡಿ ಸಿಬ್ಬಂದಿ ಸಹಾಯದಿಂದ ದಾಳಿ ಮಾಡಿ ಚನ್ನಪ್ಪ ತಂದೆ ಗಿರೇಪ್ಪ ಜಜ್ಜಲೆ  ಸಾ||ಪಂಗರಗಾ ಹಿಡಿದು ಸದರಿಯವನಿಂದ ನಗದು ಹಣ100/- ರೂ ಹಾಗು ಯು.ಎಸ್ ವಿಸ್ಕಿ 180 ಎಂ.ಎಲ್ 48 ಬಾಟಲಗಳು, ಒಟ್ಟು ಅ.ಕಿ 2304/- ರೂ ನೇದ್ದನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡದ್ದು ಸದರಿಯವನೊಂದಿಗೆ ಠಾಣೆಗೆ ಬಂದು ರಟಕಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.