POLICE BHAVAN KALABURAGI

POLICE BHAVAN KALABURAGI

24 June 2018

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 23-06-2018 ರಂದು  ಮಾಶಾಳ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾಶಾಳ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು, ಬಸ್ ನಿಲ್ದಾಣದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಮಡೇಪ್ಪ ತಂದೆ ಕಲ್ಲಪ್ಪ ಕುಂಬಾರ ಸಾ|| ಮಾಶಾಳ ಗ್ರಾಮ ತಾ||ಅಫಜಲಪೂರ ಅಂತಾ ತಿಳಿಸಿದನು  ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1110/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ  ವಶಕ್ಕೆ ಪಡೆದು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅನಧೀಕೃತ ಮಧ್ಯ ಮಾರಾಟ ಮಾಡುತ್ತಿದ್ದವರ ಬಂಧನ :
ಫರತಾಬಾದ ಠಾಣೆ : ದಿನಾಂಕ 23/06/2018 ರಂದು ಸೀರನೂರ ಗ್ರಾಮದ ಶರಣಬಸವೇಶ್ವರ ಗುಡಿಯ ಹತ್ತಿರ ಮಹಾದೇವಪ್ಪಾ ತಂದೆ ನಾಗಯ್ಯ ಗುತ್ತೆದಾರ  ಸಾಃ ಸೀರನೂರ ಗ್ರಾಮದವನು  ಯಾವುದೇ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಶ್ರೀ ವಾಹಿದ ಕೊತ್ವಾಲ್ ಪಿ.ಎಸ್.ಐ ಫರಹತಾಬಾದ ಪೊಲೀಸ ಠಾಣೆ ಹಾಗು ಸಿಬ್ಬಂದಿ  ದಾಳಿ ಮಾಡಿ ಆರೋಪಿತನಿಂದ 21 ಓರಿಜನ್ಲ್ ಚೌಯ್ಸ ವಿಸ್ಕಿ ಪೌಚಗಳು ಮತ್ತು ನಗದು ಹಣ 330/-ರೂ ಹೀಗೆ ಒಟ್ಟು 1569/-ರೂ ಬೆಲೆಬಾಳುವವನ್ನು ಜಪ್ತಿ ಪಡಿಸಿ ಕೊಂಡು ಆರೋಪಿತನೊಂದಿಗೆ ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಫರತಾಶಬಾದ ಠಾಣೆ : ದಿನಾಂಕ 23/06/2018 ರಂದು ಸೀರನೂರ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಅಶೋಕ ತಂದೆ ಯಲ್ಲಪ್ಪ ವಡ್ಡರ ಸಾಃ ಸೀರನೂರ  ಗ್ರಾಮದವನು  ಯಾವುದೇ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಶ್ರೀ ನಾಗಬೂಷಣ ಎ.ಎಸ್.ಐ ಫರಹತಾಬಾದ ಪೊಲೀಸ ಠಾಣೆ ರವರು ಹಾಗು ಸಿಬ್ಬಂದಿ ಪಂಚರ ಸಮಕ್ಷಮ ದಲ್ಲಿ ದಾಳಿ ಮಾಡಿ ಆರೋಪಿತನಿಂದ 22 ಓರಿಜನ್ಲ್ ಚೌಯ್ಸ ವಿಸ್ಕಿ ಪೌಚಗಳು ಮತ್ತು ನಗದು ಹಣ 220/-ರೂ ಹೀಗೆ ಒಟ್ಟು 1518/-ರೂ ಬೆಲೆಬಾಳುವವನ್ನು ಜಪ್ತಿ ಪಡಿಸಿ ಕೊಂಡು ಆರೋಪಿತನೊಂದಿಗೆ ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.   
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ ಜಪ್ತಿ :
ಫರತಾಬಾದ ಠಾಣೆ : ದಿನಾಂಕ 23/6/2018 ರಂದು ಸರಡಗಿ(ಬಿ) ಖಣಿ ಹತ್ತಿರ ಟಿಪ್ಪರ ನಂ ಕೆಎ-01ಸಿ-9129 ನೇದ್ದರ ಚಾಲಕ & ಮಾಲಿಕ ಯಾವುದೇ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಅಕ್ರಮ ವಾಗಿ ಮರಳು ಕಳ್ಳತನ ಮಾಡಿ ಕೊಂಡು ಬಂದು ಮಾರಾಟ ಕ್ಕಾಗಿ ಸಾಗಾಣಿಕೆ ಮಾಡುತ್ತಿದ್ದಾಗ ಶ್ರೀ ವಾಹಿದ ಕೊತ್ವಾಲ್ ಪಿ.ಎಸ್.ಐ ಫರಹತಾಬಾದ ಪೊಲೀಸ ಠಾಣೆ ಹಾಗು ಸಿಬ್ಬಂದಿ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಮರಳು ತುಂಬಿದ ಟಿಪ್ಪರ ನಂ ಕೆಎ-01ಸಿ-9129 ನೆದ್ದನ್ನು ಜಪ್ತಿಪಡಿಸಿ ಕೊಂಡು ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : 2018 ರ ಹೊಸ ವರ್ಷದ ವರ್ಷಾಚರಣೆಯಲ್ಲಿ ನನ್ನ ಹಿರಿಯ ಮಗನಾದ ರಾಜಾನೊಂದಿಗೆ ನನ್ನ ಗಂಡನ ಅಣ್ಣ ತಮ್ಮಕಿಯವರಾದ ರಸೀದ ತಂದೆ ಅಲ್ಲಾವುದ್ದಿನ್ ಮುಜಾವರ ಮತ್ತು ಇನ್ನು ಕೆಲವು ಜನರು ಹುಡುಗರು ಸೇರಿ ನನ್ನ ಮಗನೊಂದಿಗೆ ಜಗಳ ಮಾಡಿ ಒಬ್ಬರಿಗೋಬ್ಬರು ಹೊಡೆದಾಡಿಕೊಂಡಿರುತ್ತಾರೆ. ಅಂದಿನಿಂದ ಸದರಿ ರಸೀದ ಮತ್ತು ಅವನ ಕಡೆಯುವರು ನಮ್ಮ ಮೇಲೆ ದ್ವೇಷ ಸಾದಿಸುತ್ತಿರುತ್ತಾರೆ. ಈಗ ಕೆಲವು ದಿನಗಳ ಹಿಂದೆ ಸದರಿ ನಮ್ಮೊಂದಿಗೆ ದ್ವೇಷ ಮಾಡುತ್ತಿದ್ದ ರಸೀದ ಮುಜಾವರ ಈತನಿಗೆ ಯಾವನೊ ಒಬ್ಬ ಹುಡುಗ ಮಾಶಾಳ ಬಸ್ ನಿಲ್ದಾಣದಲ್ಲಿ ಜಗಳ ತಗೆದು ಹೊಡೆಯುತ್ತಿದ್ದಾಗ ನಾನು ನನ್ನ ಕೆಲಸ ಮೇಲೆ ಬಸ್ ನಿಲ್ದಾಣದ ಹತ್ತಿರದಿಂದ ಹಾಯ್ದು ನಮ್ಮ ಮನೆಗೆ ಹೋಗಿರುತ್ತೇನೆ. ದಿನಾಂಕ 22-06-2018 ರಂದು ರಾತ್ರಿ ನಾನು ಮತ್ತು ನನ್ನ ಗಂಡನಾದ ಮದರಸಾಬ ಹಾಗೂ ಮಕ್ಕಳಾದ 1) ರಾಜಾ ವಯ|| 21 ವರ್ಷ 2) ಕರೀಸ್ಮಾ ವಯ|| 17 ವರ್ಷ 3) ಹಸೀನಾ ವಯ|| 15 ವರ್ಷ ಎಲ್ಲರೂ ನಮ್ಮ ಮನೆಯ ಮುಂದೆ ಕುಳಿತಿದ್ದಾಗ, 1) ರಸೀದ ತಂದೆ ಅಲ್ಲಾವುದ್ದಿನ್ ಮುಜಾವರ 2) ಇಲಾಯಿ ತಂದೆ ಬಂದಗಿ ಮುಜಾವರ 3) ಮೌಲಾ ತಂದೆ ಬುಡ್ಡೇಸಾ ನಿಗಾವನ್ 4) ಸೈಫನ್ ತಂದೆ ಇಮಾಮಸಾಬ ಮುಜಾವರ 5) ಮುಬಾರಕ್ ತಂದೆ ಬುಡ್ಡೆಸಾ ಮುಜಾವರ 6) ಹುಸೇನ ತಂದೆ ಅಬ್ಬಾಸಲಿ ಮುಜಾವರ 7) ರಜಿಯಾ ಗಂಡ ಸೈಪನ ಮುಜಾವರ ಹಾಗೂ ರಸೀದನ ಹೆಂಡತಿ ಮತ್ತು ಇನ್ನು ಕೆಲವು ಜನರು ಕೂಡಿ ಉರ್ದು ಬಾಷೆಯಲ್ಲಿ ಬೈಯುತ್ತಾ ನಮ್ಮ ಹತ್ತಿರ ಬಂದು ನನಗೆ ರಸೀದನು ಇದೆ ರಂಡಿ ನನಗೆ ಹೊಡೆಸಿದ್ದಾಳೆ ಎಂದು ಎಲ್ಲರೂ ಕೂಡಿ ನನ್ನ ಸೀರೆ ಜಗ್ಗಿ ನನಗೆ ಕೈಯಿಂದ ಹೊಡೆಯುತ್ತಿದ್ದರು. ಆಗ ನನ್ನ ಗಂಡ ಮಕ್ಕಳುಬಿಡಿಸಲು ಬಂದಾಗ ನನ್ನ ಗಂಡ ರಸೀದನು ಅಲ್ಲೆ ಬಿದ್ದ ಒಂದು ಬಡಿಗೆಯಿಂದ ಹೊಡೆದಿರುತ್ತಾನೆ. ಉಳಿದವರು ನನ್ನ ಮಕ್ಕಳಿಗೆ ಕೈಯಿಂದ ಹೊಡೆದಿರುತ್ತಾರೆ. ಸದರಿಯವರು ಹೊಡೆದರಿಂದ ನನಗೆ ಬಲ ಗದ್ದಕ್ಕೆ, ತಲೆಗೆ, ಬೆನ್ನಿಗೆ, ಸೊಂಟಕ್ಕೆ ಕಂದುಗಾಯಗಳು ಹಾಗೂ ಮೈ ಕೈಗೆ ಒಳಪೆಟ್ಟುಗಳು ಆಗಿರುತ್ತವೆ. ನನ್ನ ಮಗಳಾದ ಹಸೀನಾ ಇವಳಿಗೆ ಎಡಕಣ್ಣಿಗೆ ಗುಪ್ತಗಾಯವಾಗಿ ಕಣ್ಣಲ್ಲಿ ರಕ್ತ ಬಂದಂತೆ ಆಗಿರುತ್ತದೆ. ಹಾಗೂ ಕುತ್ತಿಗೆಯ ಕೆಳಗೆ ಚೂರಿದ ಗಾಯ ಮತ್ತು ಮೈ ಕೈಗೆ ಒಳಪೆಟ್ಟುಗಳು ಆಗಿರುತ್ತವೆ. ಕರೀಸ್ಮಾ ಇವಳಿಗೆ ತಲೆಗೆ ಒಳಪೆಟ್ಟಾಗಿ ಮೈ ಮೇಲಿನ ಬಟ್ಟೆ ಹರೀದಿರುತ್ತಾರೆ. ರಾಜಾ ಈತನಿಗೆ ತಲೆಗೆ ಒಳಪೆಟ್ಟು ಆಗಿರುತ್ತದೆ. ನನ್ನ ಗಂಡ ಮದರಸಾಬನಿಗೆ ಎದೆಗೆ ಮತ್ತು ತಲೆಗೆ ಒಳಪೆಟ್ಟುಗಳು ಆಗಿರುತ್ತವೆ. ಸದರಿಯವರು ನಮಗೆ ಹೊಡೆಯುತ್ತಿದ್ದಾಗ ಅಲ್ಲೆ ಇದ್ದ ನಮ್ಮ ಓಣಿಯ ಜನರೂ ಕೂಡಿ ನಮಗೆ ಹೊಡೆಯುವುದನ್ನು ಬಿಡಿಸಿರುತ್ತಾರೆ. ಆಗ ಸದರಿಯವರು ಮಕ್ಕಳ್ಯಾ ನೀವು ಊರ ಬಿಟ್ಟೆ ಹೋಗಬೆಕು ಇಲ್ಲಾಂದ್ರ ನಿಮಗ ಜೀವ ಸಹಿತ ಬಿಡುವುದಿಲ್ಲ ಅಂತ ಜೀವ ಬೆದರಿಕೆ ಹಾಕಿ ಹೊಗಿರುತ್ತಾರೆ. ಅಂತಾ ಶ್ರೀಮತಿ ಗಂಡ ಮದರಸಾಬ ಮುಜಾವರ ಸಾ|| ಮಾಶಾಳ ರವರು  ಸಲ್ಲಿಸದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಅಂಬಾರಾಯ ತಂದೆ ಶರಣಪ್ಪ ಕೊಡ್ಲಿ ಸಾ|| ಸೊಂತ ತಾ||ಜಿ|| ಕಲಬುರಗಿ ಇವರು ಸುಮಾರು 5 ವರ್ಷಗಳ ಹಿಂದೆ ನನ್ನ ಮಗಳಾದ ರಾಣಿ ಇವಳಿಗೆ ಹಾಗರಗಾ ಗ್ರಾಮದ ಶ್ರೀ ಮಲ್ಲಿಕಾರ್ಜುನ  ಸೊಂತ ಇವರಿಗೆ ಕೊಟ್ಟು ಲಗ್ನ ಮಾಡಿದ್ದು ಇಬ್ಬರು ಗಂಡ ಹೆಂಡತಿ ಹೊಟ್ಟೆಪಾಡಿಗಾಗಿ ಮುಂಬೈಯಿಗೆ ಹೊಗಿದ್ದು ಮುಂಬೈಗೆ ಹೊಗುವ ಮೊದಲು ಅವರ ಹತ್ತಿರ ಇದ್ದ ಬಂಗಾರದ ಸಾಮಾನುಗಳು ನಾವು ಬರುವ ವರೆಗೆ ನಿಮ್ಮ ಹತ್ತಿರ ಇಟ್ಟಿಕೊಳ್ಳಿ ಅಂತ ನಮಗೆ ಕೊಟ್ಟಿದ್ದು ಇರುತ್ತದೆ. ಅವರ ಬಂಗಾರ ಸಾಮಾನುಗಳು ಮತ್ತು ನಮಗೆ ಸಂಭಂದಿಸಿದ ಬಂಗಾರದ ಸಾಮಾನುಗಳು ಹಾಗು ನಗದು ಹಣ ನಮ್ಮ ಮನೆಯ ಟಿವಿ ಕೊಣೆ ಮತ್ತು ದೇವರ ಕೊಣೆಯ ಸಂದುಕುಗಳಲ್ಲಿ ಇಟ್ಟಿದ್ದು ಇರುತ್ತದೆ. ನಿನ್ನೆ ದಿನಾಂಕ 20/06/2018 ರಂದು ರಾತ್ರಿ ನಾನು ನನ್ನ ಹೆಂಡತಿ ಶ್ರೀದೇವಿ ಮತ್ತು ಮಗ ಗುಂಡಪ್ಪ ಮೂವರು ಊಟ ಮಾಡಿ ನಮ್ಮ ಎಲ್ಲಾ ಕೊಣೆಗಳು ಕೀಲಿ ಹಾಕಿ ಎಂದಿನಂತೆ ನಮ್ಮ ಮನೆಯ ಛೇತ್ತಿನ ಮೇಲೆ ಮಲಗಿ ಕೊಳ್ಳಲು ಹೊಗಿ ಮಲಗಿ ಕೊಂಡು ನಾನು ಎಂದಿನಂತೆ ಇಂದು ದಿನಾಂಕ 21/08/2018 ರಂದು ಬೆಳಗ್ಗೆ 06.00 ಎ.ಎಂ ಗಂಟೆಗೆ ಎದ್ದು ಮನೆಯ ಕೀಲಿ ತೆರೆಯಲು ಬಂದಾಗ ನಮ್ಮ ಮನೆಯ ದೇವರ ಕೊಣೆಯ ಮತ್ತು ಟಿ.ವಿ. ಕೊಣೆಯ ಕೀಲಿಗಳು ಮುರಿದಿದ್ದು ನೊಡಿ ನಾನು ಗಾಭರಿಯಾಗಿ ನನ್ನ ಹೆಂಡತಿ ಮತ್ತು ಮಗನಿಗೆ ಎಬ್ಬಿಸಿ ಮೂವರು ಕೂಡಿ ನಮ್ಮ ಮನೆಯ ಟಿ.ವಿ. ಕೊಣೆ ಒಳಗಡೆ ಹೊಗಿ ನೊಡಲಾಗಿ ನಾವು ಭಾಟಿ ಮೇಲೆ ಇಟ್ಟ ಸಂದುಕು ಕೆಳಗೆ ಬಿದ್ದಿದ್ದು ಅದರಲ್ಲಿಟ್ಟ ನನ್ನ ಮಗಳಿಗೆ ಸೇರಿದ 1) 3.5 ತೊಲೆ, ತಾಳಿ ಚೈನ್  ಅ.ಕಿ.ರೂ. 70,000/-, 2) 1 ತೊಲೆ ನಕ್ಲೆಸ್ ಅ.ಕಿ.ರೂ. 20,000/-, 3) 5 ಮಾಸಿ ಕಿವಿಯಲ್ಲಿನ ಜುಮಕಿ ಅ.ಕಿ.ರೂ. 10,000/-, 4) 5 ಮಾಸಿ ಲಾಕೇಟ ಚೈನ್ ಅ.ಕಿ.ರೂ. 10,000/-, 5) 5 ಮಾಸಿ ಸುತ್ತುಂಗರ ಅ.ಕಿ.ರೂ. 10,000/-, ಮತ್ತು ನಮಗೆ ಸೇರಿದ 6) ನಗದು ಹಣ 27,000/- ರೂ, ಟಿವಿ ಎದುರಿಗೆ ಇಟ್ಟ 7) ಒಂದು ಸ್ಯಾಮಸಂಗ್ ಮೊಬೈಲ್ ಅ.ಕಿ.ರೂ. 2000/-ರೂ ಅದರಲ್ಲಿ 7090789162 ಇದ್ದು  ಒಟ್ಟು 6 ತೊಲೆ ಬಂಗಾರದ ಸಾಮನು ಅ.ಕಿ.ರೂ 1,20,000/- ನಗದು ಹಣ 27,000/- ರೂ, ಸ್ಯಾಮಸಂಗ್ ಮೊಬೈಲ್ ಅ.ಕಿ.ರೂ 2,000/- ಮತ್ತು ದೇವರ ಕೊಣೆಯಲ್ಲಿ ಹೊಗಿ ನೊಡಲಾಗಿ ಸಂದುಕಿನ ಕೀಲಿ ಮುರಿದು ಅದರಲ್ಲಿದ 3,000/- ರೂಪಾಯಿ ಕಳ್ಳತನ ಮಾಡಿದ್ದು ಹೀಗೆ ಒಟ್ಟು 6 ತೊಲೆ ಬಂಗಾರದ ಸಾಮಾನು ಅ.ಕಿ.ರೂ 1,20,000/- ಮತ್ತು ನಗದು ಹಣ 30,000/- ರೂ ಹಾಗೂ ಸ್ಯಾಮಸಂಗ್ ಮೊಬೈಲ್ ಹೀಗೆ ಎಲ್ಲಾ ಸೇರಿ ಒಟ್ಟು 1,52,000/- ಕಿಮ್ಮತಿನ ಬಂಗಾರದ ಸಾಮಾನುಗಳು, ನಗದು ಹಣ ಮತ್ತು ಮೊಬೈಲ್ ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಮನೆಯ ಕೀಲಿ ಮುರಿದು ಒಳಗೆ ನುಗ್ಗಿ  ಸಂದುಕುಗಳ ಕೀಲಿ ಮುರಿದು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.