POLICE BHAVAN KALABURAGI

POLICE BHAVAN KALABURAGI

07 January 2015

Kalaburagi District Reported Crimes

ಮಟಕಾ ಜುಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ: 06/01/15 ರಂದು ಸಾಯಂಕಾಲ ರಾಘವೇಂದ್ರ ನಗರ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಬರುವ ಜೆ.ಆರ್‌.ನಗರ ಬಡಾವಣೆಯಲ್ಲಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟ ನಡೆಸುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಶ್ರೀ ಸಿದ್ದಪ್ಪಾ ಎ.ಎಸ್‌.ಐ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಇಬ್ಬರು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಅವರ ಹೆಸರು ವಿಚಾರಿಸಲು 1) ಬಸವರಾಜ @ ಬಸ್ಸು ತಂದೆ ಸೂರ್ಯಕಾಂತ ಬಿರಾದಾರ ಸಾ:ಗಾಂಧಿನಗರ ಅಳಂದ ರಸ್ತೆ ಕಲಬುರಗಿ 2) ಚಂದ್ರಶೇಖರ ತಂದೆ ಶರಣಬಸಪ್ಪಾ ಮುಗಳಿ ಸಾ:ಶೇಖರೋಜಾ ಗುರುಬಸವ ನಗರ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವರಿಂದ ಮಟಕಾ ಜುಜಾಟಕ್ಕೆ ಬಳಸಿದ ನಗದು ಹಣ 12,400/-, ಎರಡು ಮೊಬೈಲ ಪೋನಗಳು, ಎರಡು ಮೋಟಾರ ಸೈಕಲ್ ಮತ್ತು ಮಟಕಾ ಚೀಟಿಗಳು ಮತ್ತು ಬಾಲ ಪೆನ್ನಗಳನ್ನು ಜಪ್ತಿಮಾಡಿಕೊಂಡು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಬೆದರಿಕೆ ಹಾಕಿದ ಪ್ರಕರಣ :
ರಾಘವೇಂದ್ರ ನಗರ ಠಾಣೆ : ದಿನಾಂಕ: 06.01.2015 ರಂದು ಸಾಯಂಕಾಲ ಶ್ರೀ ಶ್ರೀಕಾಂತ ತಂದೆ ರಮೇಶ ರೆಡ್ಡಿ ಸಾ:ಫೀಟ್ ಕಿಂಗ್ ಜೀಮ್, ಸಿರ್ದ್ಧಾಥ ಪ್ಲಾಜಾ ಶಟ್ಟಿ ಕಾಂಪ್ಲೇಕ್ಸ್ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಒಂದು ದೂರು ಸಲ್ಲಿಸಿದ್ದು ಅದರಲ್ಲಿ ಕಲಬುರಗಿ ನಗರದ ಸಂಗಮ ಟಾಕೀಜ ಹತ್ತಿರದ ರೌಡಿ ಶೀಟರ್ ಸತೀಶ @ ಮಾರ್ಕೆಟ ಸತೀಶ ಇವರು ಜೈಲಿನಲ್ಲಿ ಕುಳಿತು ಮೊಬೈಲ ಮುಖಾಂತರ ನನ್ನನ್ನು ಹಣ ನೀಡುವಂತೆ ಬೇದರಿಕೆ ಕರೆಯನ್ನು ಹಾಕುತ್ತಿದ್ದಾನೆ ಜೊತೆಗೆ ಅವನ ಸಹಚರನಾದ ಸಚಿನ ಮೆಹತರಗಲ್ಲಿ, ರೋಹಿತ ಮಹೆತರಗಲ್ಲಿ, ಅಪ್ಪುಶಹಾ ಸಂಗಮ ಟಾಕೀಜ ಹತ್ತಿರ ಗುರುದತ್ತ ಖಾನಾವಳಿ, ಗೋಪಾಲ ಸತೀಶನ ತಮ್ಮ, ರಶೀದಶೇಖರ @ ಶೇಖುಅಜೀಮ ಹಾಗೂ ಇನ್ನಿತರ 8 ಜನ ಗುಂಪುಗಳು ಕೊಲೆ, ರಾಬರಿ ಹಾಗೂ ಸುಲೀಗೆ ಪ್ರಕರಣಗಳಲ್ಲಿ ಜೈಲಿಗೆ ಹೊಗಿ ಬಂದ ಸಮಾಜ ಘಾತುಕ ಗುಂಪುಗಳು ಇದ್ದು ಮಾರ್ಕೆಟ ಸತೀಶ ಇತನು ಹಪ್ತಾ ವಸೂಲಿ, ಸರಗಳ್ಳತನ, ಅಮಾಯಕ ಜನರಿಗೆ ಹೊಡೆಬಡೆ ಮಾಡುವದು, ಕಾಲೇಜ ಹುಡುಗರಿಗೆ ಹೆದರಿಸುವದು ಇವರ ನಿತ್ಯದ ಕಾಯಕವಾಗಿರುತ್ತದೆ ಸದರ ಮಾರ್ಕೆಟ ಸತೀಶ ಸುಮಾರು 2 ತಿಂಗಳಿಂದ ನನಗೆ ಜೈಲಿನಲ್ಲಿ ಕುಳಿತು ತನ್ನ ಮೊಬೈಲ್ ನಂಬರಗಳಾದ 1) 7760144126  2) 99016614384 3) 7259531863 4) 8495917612 ನಂಬರಗಳಿಂದ  ಈ ಎರಡು ತಿಂಗಳಿಂದ ಬೆದರಿಕೆ ಕರೆಗಳು ಹಾಕಿ ಆತನ ಸಹಚರರನ್ನು ನನ್ನ ಜಿಮ್ ಗೆ ಕಳುಹಿಸಿ ಒಂದು ಸಲ 60 ಸಾವಿರ ರೂಪಾಯಿ ಇನ್ನೊಂದು ಸಲ 2 ಲಕ್ಷ ರೂಪಾಯಿ ಕೊಡಬೇಕು ಅಂತಾ ಬೇದರಿಕೆ ಕರೆಮಾಡಿ ನನ್ನಿಂದ ಹಣವನ್ನು ವಸೂಲಿ ಮಾಡಿರುತ್ತಾರೆ ಮತ್ತು ಈ ವಿಷಯ ಎಲ್ಲದರು ತಿಳಿಸಿದರೆ ನನ್ನನ್ನು ಕೈಕಾಲು ಕತ್ತರಿಸಿ ರೈಲ್ವೆ ಪಟ್ರಿ ಮೇಲೆ ಹಾಕುತ್ತೆವೆ ಹಾಗೂ ನಿಮ್ಮ ಮನೆ ಮಂದಿ ಕೂಡಿ ಖಲಾಸ ಮಾಡುತ್ತೆವೆ. ನಮ್ಮ ಮಾತು ಕೇಳದೆ ಹೊದರೆ ಸುಲ್ತಾನಪೂರ ಹಣಮಂತನನ್ನು ಕೊಲೆ ಮಾಡಿದ ಹಾಗೆ ನಿನ್ನನು ಕೊಲೆ ಮಾಡುವದಾಗಿ ನನ್ನನ್ನು ಬೆದರಿಕೆ ಹಾಕಿ ಹಣವನ್ನು ಪಡೆದುಕೊಂಡಿರುತ್ತಾರೆ ಅಲ್ಲದೆ ದಿನಾಂಕ: 03.01.2015 ರಂದು ಆಪರಿಚಿತ ಮೋಬೈಲ್ ನಂಬರ ದಿಂದ ಜೈಲಿನಲ್ಲಿರುವ ಸತೀಶ ಇತನು ನನ್ನ ಮೋಬೈಲ್ ಸಂಖ್ಯೆ 8050702249 ಈ ನಂಬರಿಗೆ ಕಾಲು ಮಾಡಿ ನನಗೆ ಪುನಾ:  5 ಲಕ್ಷ ರೂಪಾಯಿ ಕೊಡಬೇಕು ನನ್ನ ಸಹಚರ ಬರುತ್ತಾರೆ  ಅವರ ಕೈಯಲ್ಲಿ ಕೊಡಬೇಕು ಇಲ್ಲದಿದ್ದರೆ ನಿನ್ನ ಜೀವ ತೆಗೆಯುತ್ತೆನೆ ಅಂತಾ ಬೆದರಿಕೆ ಹಾಕಿದ್ದು ನಾನು ಗಾಬರಿಯಲ್ಲಿ ಮೋಬೈಲ್ ನಂಬರ ನಮೂದಿಸಿಕೊಂಡಿರುವದಿಲ್ಲ. ದಿನಾಂಕ;05.01.2015 ರಂದು ಸಾಯಂಕಾಲ 07.55 ಗಂಟೆಯಿಮದ 08.10 ಗಂಟೆ ತನಕ ನನ್ನಗೆ ನನ್ನ ಮೋಬೈಲ ನಂಬರ ಇದಕ್ಕೆ ಸಚಿನ ಮೆಹತರಗಲ್ಲಿ ಇತನು ಮೊಬೈಲ ನಂ 7760905830 ನಿಂದ ಕಾಲ ಮಾಡಿ ನನ್ನಗೆ ಜೀವ ಭಯ ಹಾಕಿ ಸತೀಶನ ಹೇಳಿರುವ ಕೆಲಸ ಮಾಡಿದೊ ಅಥವಾ ಇಲ್ಲ ನಿನ್ನನ್ನು ಎತ್ತಿ ಹಾಕಿಕೊಂಡು ನನ್ನನ್ನು ಮತ್ತು ನಿಮ್ಮ ತಮ್ಮನಾದ ಕೃಷ್ಣಾ ರೆಡ್ಡಿ ಇವರನ್ನು ಖಲಾಸ ಮಾಡುತ್ತೆನೆ ಅಂತಾ ಬೆದರಿಕೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :

ಅಫಜಲಪೂರ ಠಾಣೆ : ದಿನಾಂಕ 06-01-2015 ರಂದು ಬಸವರಾಜ ಮತ್ತು ಅವನ ಜೋತೆಗೆ ಸೋಮಯ್ಯ ಹಿರೇಮಠ ಇವರು ಮೋ./ಸೈ ನಂ ಕೆಎ-28 ಇಬಿ-4415 ಬಜಾಜ ಡಿಸ್ಕವರ ನೇದ್ದರ ಮೇಲೆ ಕುಮಸಗಿಯಿಂದ ಇಟಗಾ  ಗ್ರಾಮದ ಜಾತ್ರೆಗೆ ಬಂದು, ಜಾತ್ರೆ ಮುಗಿಸಿಕೊಂಡು ಮರಳಿ ಇಟಗಾದಿಂದ ಅಫಜಲಪೂರ ಮಾರ್ಗವಾಗಿ ಕುಮಸಗಿ ಗ್ರಾಮಕ್ಕೆ ಹೋಗುತ್ತಿದ್ದಾಗ ಅಫಜಲಪೂರದ ಕೋರ್ಟ ದಾಟಿ ಮುಂದೆ ಸುಮಾರು ಅರ್ದ ಕಿ ಮೀ ಅಂತರದಲ್ಲಿ ರೋಡಿನ ಮೇಲೆ ಏಡ ಭಾಗದ ದಂಡೆಯಲ್ಲಿ ನಮ್ಮ ಮೋ/ಸೈ ನಿಲ್ಲಿಸಿ ಇಬ್ಬರು ಮೂತ್ರ ವಿಸರ್ಜನೆ ಮಾಡುತ್ತಿದ್ದಾಗ ಅದೆ ಸಮಯಕ್ಕೆ ಸೋನ್ನ ಗ್ರಾಮದ ಕಡೆಯಿಂದ ಅಫಜಲಪೂರ ಕಡೆಗೆ ಬರುತ್ತಿದ್ದ ಕಬ್ಬು ತುಂಬಿದ ಟ್ಯಾಕ್ಟರ ನೇದ್ದರ ಚಾಲಕ ಸದರಿ ಟ್ಯಾಕ್ಟರನ್ನು ಅಡ್ಡಾದಿಡ್ಡಿಯಾಗಿ ಅತೀವೇಗವಾಗಿ ಮತ್ತು ನಿಸ್ಕಾಳಜಿಯಿಂದ ನಡೆಸಿಕೊಂಡು ಬಂದು ಒಮ್ಮೆಲೆ ನಾವು ಮೋ/ಸೈ ದೊಂದಿಗೆ ನಿಂತಿದ್ದ ಸ್ಥಳದಲ್ಲಿ ತನ್ನ ಟ್ಯಾಕ್ಟರನ್ನು ಕಟ್ ಹೊಡೆದರಿಂದ ಸದರಿ ಟ್ಯಾಕ್ಟರನ ಹಿಂದಿನ ಕಬ್ಬು ತುಂಬಿದ ಟ್ರೈಲಿಯ ಕೊಂಡಿ ಮುರಿದು ಟ್ರೈಲಿ ಪಲ್ಟಿಯಾಗಿ ಟ್ರೈಲಿಯಲ್ಲಿದ್ದ ಕಬ್ಬುಗಳು ನಮ್ಮ ಮೇಲೆ ಹಾಗೂ ನಮ್ಮ ಮೋ/ಸೈ ಮೇಲೆ ಬಿದ್ದವುಸದರಿ ಟ್ಯಾಕ್ಟರ ನಂ  ನೋಡಲು ಕೆಎ-32 ಟಿಎ-4478 ಅಂತಾ ಇದ್ದು ಸ್ವರಾಜ ಕಂಪನಿಯದು ಇರುತ್ತದೆ, ಈ ಅಪಘಾತದಿಂದ ಬಸವರಾಜನಿಗೆ ಏಡಗಣ್ಣಿನ ಮೇಲೆ ಬಾರಿ ರಕ್ತಗಾಯ, ಹಾಗೂ ಮರ್ಮಾಂಗದ ಬೀಜಗಳು ಹೊರಗೆ ಬಂದಂತೆ ಕಾಣಿಸುತ್ತಿತ್ತು ಮತ್ತು ಏಡಕಾಲಿನ ಹಿಂಬಡಿಗೆ ರಕ್ತಗಾಯವಾಗಿದ್ದು  ಮೈಕೈಗೆ ತರಚಿದ ಗಾಯವಾಗಿ ಮಾತನಾಡದೆ ಮಲಗಿದ್ದನು, ಹಾಗೂ ನಮ್ಮ ಮಾವನ ಜೋತೆಗೆ ಬಂದಿದ್ದ ಸೋಮಯ್ಯ ಮಠಪತಿ ಈತನಿಗೆ ನೋಡಲು ಆತನ ತುಟಿಗಳು ಒಡೆದು ಬಾಯಿಯಿಂದ ರಕ್ತ ಬರುತ್ತಿತ್ತು, ಹಾಗೂ ಏದೆಗೆ, ಏಡಗೈಗೆ ಗುಪ್ತಗಾಯವಾಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.