POLICE BHAVAN KALABURAGI

POLICE BHAVAN KALABURAGI

13 May 2014

Gulbarga District Reported Crimes

ಅಪಘಾತ ಪ್ರಕರಣ :
ಸಂಚಾರಿ ಠಾಣೆ : ಶ್ರೀ ನಾಗರೆಡ್ಡಿ ತಂದೆ ವಿಠಲರೆಡ್ಡಿ,  ಸಾಃ ಪ್ಲಾಟ ನಂ. 60 ಘಾಟಗೆ ಲೇಔಟ ಗುಲಬರ್ಗಾ  ರವರು ದಿನಾಂಕ 12-05-2014 ರಂದು 5-30 ಪಿ.ಎಮ್ ಕ್ಕೆ ಹುಮನಾಬಾದ ರೋಡಿಗೆ ಇರುವ ನೇಹರು ಗಂಜ ಪಬ್ಲಿಕ ಸ್ಕೂಲ ಎದರುಗಡೆ ರೋಡಿನ ಮೇಲೆ ತನ್ನ ಮೋಟಾರ ಸೈಕಲ ನಂ. ಕೆ.ಎ 32 ವೈ 8474 ನೇದ್ದನ್ನು ಗಂಜ ಬಸ್ ನಿಲ್ದಾಣ ಕಡೆಯಿಂದ ಸುಪರ ಮಾರ್ಕೆಟ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದಾಗ ಆರೋಪಿತನು ತನ್ನ ಗೂಡ್ಸ ಟಂ.ಟಂ ನಂ. ಕೆ.ಎ 32 ಎ 429 ನೇದ್ದನ್ನು ಎದರುಗಡೆಯಿಂದ  ರಾಂಗ ಸೈಡಿನಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಕೊಂಡು ಬಂದು ಮೋಟಾರ ಸೈಕಲಕ್ಕೆ ಎದರುಗಡೆಯಿಂದ ಡಿಕ್ಕಿ ಹೊಡೆದು ಅಪಘಾತ ಮಾಡಿ ಗಾಯಗೊಳಿಸಿ ತನ್ನ ವಾಹನ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಸುರೇಶ ಬಿಲ್ಲಾಡ ಸಾ|| ಘತ್ತರಗಾ ಇವರು ದಿನಾಂಕ 12-05-2014 ರಂದು ಬೆಳಿಗ್ಗೆ 07-30 ಗಂಟೆಗೆ ನಾನು ನಮ್ಮ ಗ್ರಾಮದ ಅಂಬೆಡ್ಕರ ಸರ್ಕಲ ಹತ್ತಿರ ಹೋಗುವಾಗ 1. ಶಿವಕಾಂತ ತಂದೆ ಭಿಮಶಾ ಸಿಂಗೆ 2. ಶಿವಪುತ್ರ ತಂದೆ ಸಿದ್ರಾಮ ಸಿಂಗೆ, 3. ರಮೇಶ ತಂದೆ ಸಿದ್ರಾಮ ಸಿಂಗೆ 4. ಬಾಬು ತಂದೆ ರಾವುತಪ್ಪ ಸಿಂಗೆ 5. ಅಂಬಾರಾಯ ತಂದೆ ಮಾಹಾದೇವಪ್ಪ ಸಿಂಗೆ 6. ಸಿದ್ದಾರಾಮ ತಂದೆ ಶ್ರೀಶೈಲ ಸಿಂಗೆ ಸಾ|| ಘತ್ತರಗಾ ಗ್ರಾಮ ಇವರು ನನ್ನ ಹತ್ತಿರ ಬಂದು ಏನೊ ಮಗನೆ  ಸೂರಿ, ನಿಮ್ಮ ಅಣ್ಣ ಚಂದ್ಯಾ ಎಲ್ಲ್ಯಾನ, ನಿನ್ನೆ ನಮ್ಮ ಹುಡುಗಗ ಹೋಡೆದು ಈಗ ಎಲ್ಲಿ ಹೋಗ್ಯಾನ ಅಂತಾ ಎಲ್ಲರು ಬಾಯಿಗೆ ಬಂದಂತೆ ಬೈಯುತ್ತಾ ಕೈಯಿಂದ ಹೊಡೆಯ ಹತ್ತಿದರು, ಶಿವಪುತ್ರ ಸಿಂಗೆ ಈತನು ಈ ಮಗನಿಗಿ ಕಲಾಸ ಮಾಡ್ರೊ ಅಂತಾ ಅಂದು ಅಲ್ಲಿಯೆ ಬಿದ್ದ ಒಂದು ಬಡಿಗೆ ತಗೆದುಕೊಂಡು, ಬಡಿಗೆಯಿಂದ ನನ್ನ ತಲೆಯ ಮೇಲೆ ಹೊಡೆದನು. ಆಗ ನಾನು ಕೇಳಗೆ ಬಿದ್ದಿದ್ದು ಉಳಿದವರು ಎಲ್ಲರೂ ಕೂಡಿಕೊಂಡು ನನಗೆ ಕೈಯಿಂದ ನನ್ನ ಮೈ ಕೈಗೆ ಹೊಡೆದು, ಕಾಲಿನಿಂದ ಒದ್ದಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಅಫಜಲಪೂರ ಠಾಣೆ : ದಿನಾಂಕ 11-05-2014 ರಂದು ನಮ್ಮ ಗ್ರಾಮದಲ್ಲಿ ಭಾಗಮ್ಮಾಯಿ ಗುಡಿಯ ಮುಂದೆ, ನಮ್ಮ ಸಮಜಾದ ಸುರೇಶ ತಂದೆ ಶರಣಪ್ಪ ಭಟ್ಟರಕಿ ಇವರ ಮದುವೆ ಇರುತ್ತದೆ. ಸದರಿ ಮದುವೆಗೆ ನನ್ನ ಮಗನಾದ ಮಹೇಶ ಇವನು ಸಹ ಹೋಗಿದ್ದು. ನಂತರ ಮದ್ಯಾಹ್ನ 3;30 ಗಂಟೆಗೆ ನನ್ನ ಮಗ ಮಹೇಶ ಇವನು ಅಳುತ್ತಾ ಮನೆಗೆ ಬಂದು ಹೇಳಿದ್ದೇನೆಂದರೆ, ಮದುವೆಯಲ್ಲಿ ನಾನು ನಮ್ಮ ಓಣಿಯ ನಿಂಗಪ್ಪ ತಂದೆ ಸಿದ್ದಪ್ಪ ಬಿಲ್ಲಾಡ ಈತನಿಗೆ ಮಿಂಚು ಹಚ್ಚುತ್ತಿದ್ದಾಗ. ಆಸಮಯದಲ್ಲಿ ನಮ್ಮ ಓಣಿಯ ಚಂದಪ್ಪ ತಂದೆ ಶಿವಶರಣಪ್ಪ ಬಿಲ್ಲಾಡ ಇವನು ನನಗೆ ಏ ಭೋಸಡಿ ಮಗನಾ ಆ ಮುದಕಗ ಯಾಕ ಕಾಡತಿಲೇ ಅಂತಾ ಅಂದನು ಆಗ ನಾನು ಸುಮ್ಮಿದ್ದು ಮತ್ತೆ ಮಿಂಚು ಹಚ್ಚಲು ಹೋದೆನು. ಆಗ ಸದರಿ ಚಂದಪ್ಪ ಇವನು ಬಂದು ನನಗೆ ಕಪಾಳ ಮೇಲೆ ಹೊಡೆದನು ನನಗ್ಯಾಕ ಹೊಡಿತಿ ಅಂತಾ ಕೇಳಿದ್ದಕ್ಕೆ ಎದರ ಮಾತಾಡತಿ ಏನಲೇ ಬೋಸಡಿಕೆ ಅಂತಾ ಅಂದು ತನ್ನ ಕೈಯಿಂದ ನನ್ನ ಹೊಟ್ಟೆಯ ಮೇಲೆ ಗುದ್ದಿದ್ದನು. ಆಗ ಅಲ್ಲೆ ಇದ್ದ ಸುರೇಶ ತಂದೆ ಶಿವಶರಣಪ್ಪ ಬಿಲ್ಲಾಡ, ಮಲ್ಲಿಕಾರ್ಜುನ ತಂದೆ ಶಿವಶರಣಪ್ಪ ಬಿಲ್ಲಾಡ, ಅವ್ವಣ್ಣ ತಂದೆ ಶಿವಶರಣಪ್ಪ ಬಿಲ್ಲಾಡ, ಶಿವಶರಣಪ್ಪ ತಂದೆ ನಿಂಗಪ್ಪ ಬಿಲ್ಲಾಡ ರವರು ಬಂದು ಅವರಲ್ಲಿ ಸುರೇಶ ಇವನು ತನ್ನ ಕೈಯಿಂದ ನನ್ನ ಬೆನ್ನಿನ ಮೇಲೆ ಹೊಡೆದನು, ಮಲ್ಲಿಕಾರ್ಜುನ ಇವನು ಅಲ್ಲೆ ಇದ್ದ ಒಂದು ಕಲ್ಲಿನಿಂದ ನನ್ನ ಟೊಂಕದ ಮೇಲೆ ಹೊಡೆದನು, ಅವ್ವಣ್ಣ ಇವನು ನನಗೆ ನೆಲಕ್ಕೆ ಕೆಡವಿ ತನ್ನ ಕಾಲಿನಿಂದ ಒದ್ದನು, ಆಗ ಶಿವಶರಣಪ್ಪ ಇವನು ಈ ಮಗನಿಗಿ ಹೊಡೆದು ಖಲಾಸ ಮಾಡರಿ ಅಂತಾ ಅನ್ನುತ್ತಾ ತನ್ನ ಕಾಲಿನಿಂದ ನನ್ನ ಬೆನ್ನಿನ ಮೇಲೆ ಒದ್ದಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀಮತಿ ಸಂಗೀತಾ ಗಂಡ ವೈಜನಾಥ ಗೇವಾರೆ ಸಾಃ ರೇವಣಸಿದ್ದೇಶ್ವರ ಕಾಲೋನಿ ಕೆ.ಕೆ ನಗರ ಗುಲಬರ್ಗಾ ಇವರ ಗಂಡನಾದ ವೈಜನಾಥ ಇತನು ನಿನ್ನೆ ದಿನಾಂಕಃ 10-05-2014  ರಂದು 11:00 ಪಿ.ಎಂ. ಸುಮಾರಿಗೆ ಭಜರಂಗ ಟ್ರಾನ್ಸಪೋರ್ಟದಿಂದ ಲಾರಿ ನಂ. ಕೆ.ಎ 32 ಎ 8535 ನೇದ್ದರಲ್ಲಿ ಸಿಮೆಂಟ್ ಲೋಡ್ ಮಾಡಿಕೊಂಡು ಮರಳಿ ಗುಲಬರ್ಗಾ ಕ್ಕೆ ಬರುತ್ತಿರುವಾಗ ಸೇಡಂ ರಿಂಗ್ ರೋಡಿನ ಖರ್ಗೆ ಪೆಟ್ರೋಲ್ ಪಂಪ್ ಹತ್ತಿರ ಮೋಟಾರ ಸೈಕಲ ನಂ. TP / KA 32 TV 9635 ನೇದ್ದಕ್ಕೆ ಡಿಕ್ಕಿ ಮಾಡಿದ್ದರಿಂದ ಸದರಿ ಮೋಟಾರ ಸೈಕಲ ಸವಾರರಾದ ಇಮ್ತಿಯಾಜ್ ಹಾಗು ಮಹಿಮೂದ ಶರೀಫ್ ಇವರುಗಳು ಕೈ ಮುಷ್ಠಿ ಮಾಡಿ ಹೊಟ್ಟೆಗೆ, ಪಕ್ಕೆಯ ಹತ್ತಿರ ಹೊಡೆದು ಗುಪ್ತ ಪೆಟ್ಟು ಮಾಡಿದ ಬಗ್ಗೆ ಈ ಮೊದಲು ಪ್ರಕರಣ ದಾಖಲಾಗಿದ್ದು   ವೈಜನಾಥ ಇತನು ಕುಡಿದ ಅಮಲಿನಲ್ಲಿ ಲಾರಿಯನ್ನು ಅಡ್ಡಾದಿಡ್ಡಿಯಾಗಿ ನಡೆಸಿಕೊಂಡು ಮೋಟಾರ ಸೈಕಲ ಸವಾರರಿಗೆ ಡಿಕ್ಕಿ ಪಡಿಸಿದ್ದರಿಂದ ಸದರಿ ಮೋಟಾರ ಸೈಕಲ ಸವಾರರು ಆಕ್ರೋಶಗೊಂಡು ಸದರಿಯವನಿಗೆ ಹೊಡೆ ಬಡೆ ಮಾಡಿದ್ದು ಈ ಬಗ್ಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿರುವಾಗ ವೈಜನಾಥ ಇತನು ಗುಣಮುಖ ಹೊಂದದೇ ದಿನಾಂಕಃ 11-05-2014  ರಂದು ರಂದು 07:45 ಪಿ.ಎಂ. ಕ್ಕೆ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಡುಗಿ ಕಾಣೆಯಾದ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಗೌಸಪಟೇಲ ತಂದೆ ದಾದುಪಟೇಲ ಮಾಲಿಬಿರಾದಾರ ಸಾ:ಭೂಂಯ್ಯಾರ ಗ್ರಾಮ ತಾ;ಜಿ: ಗುಲಬರ್ಗಾ ಇವರ ತಂಗಿಯಾದ ಕುಮಾರಿ ಲಾಲಬೀ ತಂದೆ ದಾದು ಪಟೇಲ  ವ: 26  ವರ್ಷ ದಿನಾಂಕ:07-05-2014 ರಂದು ಮಧ್ಯಾಹ್ನ  12-00 ಗಂಟೆ ಸುಮಾರಿ  ಗ್ರಾಮದಲ್ಲಿರುವ  ಪ್ಯಾರೀಬಿ  ಗಂಡ  ಅಪ್ಸರಪಟೇಲ  ಇವರ  ಮನೆಗೆ  ಹೋಗಿ  ಬರುತ್ತೇನೆ  ಅಂತಾ  ಹೇಳಿ ಹೋದವಳು  ಇಲ್ಲಿಯವರೆಗೆ  ಮನೆಗೆ  ಮರಳೀ  ಬಂದಿರುವುದಿಲ್ಲ .ಎಲ್ಲಾ  ಕಡೆಗೆ  ಹುಡುಕಾಡಲಾಗಿ   ಪತ್ತೆ  ಹತ್ತಿರುವುದಿಲ್ಲ.  ಕಾರಣ  ಕಾಣೆಯಾದ ನನ್ನ  ತಂಗಿ ಲಾಲಬೀ  ಇವಳನ್ನು  ಪತ್ತೆ  ಹಚ್ಚಿ ಕೊಡಬೇಕು   ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.