POLICE BHAVAN KALABURAGI

POLICE BHAVAN KALABURAGI

20 April 2014

Gulbarga District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ದೇವಲಗಾಣಗಾಪೂರ ಠಾಣೆ : ದಿನಾಂಕ: 19-04-2014 ರಂದು ತೆಲ್ಲೂರ ಗ್ರಾಮದ ನಿಂಗರಾಯ ದೇವರ ಗುಡಿಯ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ದೈವದ ಜೂಜಾಟ ಆಡುತ್ತಿದ್ದ ಬಗ್ಗೆ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಗಾಣಗಾಪೂರ, ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ್.ಪಿ ಸಾಹೇಬರು ಆಳಂದ ಮತ್ತು ಮಾನ್ಯ ಸಿಪಿಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಹಿಡಿದುಕೊಂಡು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1. ಕರೇಪ್ಪಾ ತಂದೆ ಯಲಗೂರೆಪ್ಪಾ ಪೂಜಾರಿ 2. ಕಾಶೀನಾಥ ತಂದೆ ಬಸಣ್ಣ ಪೂಜಾರಿ 3. ನಿಂಗಪ್ಪ ತಂದೆ ಶರಣಪ್ಪ ತಳವಾರ 4. ದವಲಪ್ಪ ತಂದೆ ನಬಿಸಾಬ ನಾಯ್ಕೋಡಿ 5. ನಂದು ತಂದೆ ಶರಣಪ್ಪ ಕಲಶೆಟ್ಟಿ 6. ಶಾಂತಪ್ಪ ತಂದೆ ನಿಂಗಪ್ಪ ಧರಿಗೊಂಡ ಸಾ: ಎಲ್ಲರೂ ತೆಲ್ಲೂರ  ರವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ  52 ಎಲೆ ಎಸ್ಟೇಟ ಎಲೆಗಳನ್ನು ಮತ್ತು ನಗದು ಹಣ  2640-00 ರೂ ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಠಾಣೆಗೆ ಬಂದು ದೇವಲಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ: 19-04-2014  ರಂದು 2-00 ಪಿಎಮ್ ದಿಂದ 2-30 ಪಿಎಂ ಮಧ್ಯದ ಸುಮಾರಿಗೆ ಮೃತ ಅಮೃತ ತಂದೆ ಹಣಮಂತರಾಯ ಸನಗುಂದಿ  ಈತನು ತನ್ನ ಹೊಂಡಾ ಆಕ್ಟೀವಾ ಮೋಟರ್‌ ಸೈಕಲ್‌ ನಂ ಕೆಎ 32 ಇಎಫ್ 4491 ನೇದ್ದರ ಮೇಲೆ ಕೆಲಸ ಮುಗಿಸಿಕೊಂಡು ಆಳಂದ ಕಡೆಯಿಂದ ಗುಲ್ಬರ್ಗಾ ಕಡೆಗೆ ಬರುವಾಗ  ಸುಂಟನೂರ ಕ್ರಾಸ ಹತ್ತಿರ ಯಾವುದೋ ಒಂದು ಲಾರಿ  ಚಾಲಕ ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದವನೆ ಕೆಎ 32 ಇಎಫ್ 4491 ಹೊಂಡಾ ಆಕ್ಟೀವಾ ಮೆಲೆ ಹೊರಟಿದ್ದ  ಮೃತ ಅಮೃತ  ಈತನ ಮೋಟರ್‌ ಸೈಕಲ್‌ಗೆ ಡಿಕ್ಕಿ ಹೊಡೆದು ತನ್ನ ಲಾರಿಯನ್ನು ನಿಲ್ಲಿಸದೇ ಓಡಿಸಿಕೊಂಡು  ಹೋಗಿದ್ದು ಸದರಿ ಅಪಘಾತದಿಂದ  ಅಮೃತನಿಗೆ ನಡು ಹಣೆಗೆ ರಕ್ತಗಾಯ ತಲೆಗೆ ಗುಪ್ತಗಾಯ ಗದ್ದಕ್ಕೆ ತರಚಿದ ರಕ್ತಗಾಯ ಎಡತುಟಿಗೆ ತರಚಿದ ರಕ್ತಗಾಗಯ ಬಲಭುಜಕ್ಕೆ ಬಲಗೈಗೆ ಎಡಗಾಲ ಮೋಳಕಾಲ ಕೆಳಗೆ ಎಡ ಎದೆಗೆ ಬಲ ಎದೆಗೆ ರಕ್ತಗಾಯ ಹಾಗೂ ತರಚಿದ ಗಾಯಗಳಾಗಿ ಮೂಗಿನಿಂದ ಮತ್ತು ಬಲಕಿವಿಯಿಂದ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ²æà ರಾಜೇಂದ್ರ ತಂದೆ ಹಣಮಂತರಾಯ ಸನಗುಂದಿ  ಸಾ: ಹಿತ್ತಲಶಿರೂರ ತಾ: ಆಳಂದ ಜಿ: ಗುಲ್ಬರ್ಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಹಣಮಂತ ತಂದೆ ರೇವಣಸಿದ್ದಪ್ಪ ರೊಡಗಿ  ಸಾ: ಹೆಚ್.ಕೆ.ಇ ಸುಸೈಟಿ ಕ್ವಾಟರ್ಸ ಎಮ್.ಎಸ್.ಐ ಕಾಲೇಜ ಹತ್ತಿರ ಗುಲಬರ್ಗಾ ರವರು  ದಿನಾಂಕ: 19/04/2014 ರಂದು ಸಾಯಂಕಾಲ 5=00 ಗಂಟೆಯ ಸುಮಾರಿಗೆ ತನ್ನ ಮನೆಯಿಂದ ಬ್ಯಾಂಕ ಕಾಲೋನಿ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ ರಾಜಾಪೂರ ಕಡೆಯಿಂದ ಒಂದು ಕಪ್ಪು ಬಣ್ಣದ ಹಿರೋ ಸ್ಪೆಲೆಂಡರ ಮೋ/ಸೈಕಲ್ ರ ಸವಾರನು ತನ್ನ ಮೋ/ಸೈಕಲ್ ನ್ನು ಅತಿವೇಗವಾಗಿ ಮತ್ತು ಅಲಕ್ಷತನ ದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತಮಾಡಿ ಭಾರಿ ಗಾಯಗೋಳಿಸಿ ತನ್ನ ಮೋ/ಸೈಕಲ್ ಸಮೇತ ಸವಾರನು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ 
ಸಂಚಾರಿ ಠಾಣೆ : ಇಂದು ದಿನಾಂಕ 19-04-2014 ರಂದು ಬೆಳಗ್ಗೆ 05-45 ಗಂಟೆಗೆ ಸಿ.ಟಿ ಬಸ್ ನಿಲ್ದಾಣ ಹತ್ತಿರ ಇರುವ ಹೋಟೆಲ ಹೆರಟೆಜ್ ಇನ್ ಎದರುಗಡೆ ರೋಡಿನ ಮೇಲೆ ಆರೋಪಿತನು ತನ್ನ ಟಿಪ್ಪರ ಲಾರಿ ನಂ. ಕೆಎ. 35 6821 ನೇದ್ದನ್ನು ಎಸ್.ಬಿ ಟೆಂಪಲ್ ರೋಡ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಮದನ ಟಾಕೀಜ ಕಡೆಯಿಂದ ಫಿರ್ಯಾದಿ ಚಲಾಯಿಸಿಕೊಂಡು ಬರುತ್ತಿದ್ದ ಕೆ.ಎಸ್. ಆರ್.ಟಿ.ಸಿ  ಬಸ್ ನಂ. ಕೆ.ಎ 32 ಎಪ್. 1799 ನೇದ್ದಕ್ಕೆ ಎದರುಗಡೆಯಿಂದ ಡಿಕ್ಕಿ ಪಡಿಸಿ ಅಪಘಾತ ಮಾಡಿ ತನ್ನ ಟಿಪ್ಪರ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀ ಹಸನ ಶೇಖ ತಂದೆ ರುಕ್ಕಮೋದ್ದಿನ ಶೇಖ ಸಾ: ಗಾಲಿಬ ಕಾಲೋನಿ, ಎಂ.ಎಸ್.ಕೆ ಮಿಲ್ ಗುಲಬರ್ಗಾ ಇವರು ದಿನಾಂಕ 19-04-2014 ರಂದು ಸಾಯಂಕಾಲ 05-30  ಗಂಟೆಗೆ ನನ್ನ ಗೆಳೆಯನಾದ ಶಕೀಬ ಇವನ ಮನೆಗೆ ಹೋಗಿ ಬರುವಾಗ ಸನಾ ಸ್ಕೂಲ್ ಹತ್ತಿರ ನಡೆದುಕೊಂಡು ರೋಡಿನ ಮೇಲೆ ನಡೆದುಕೊಂಡು ಬರುತ್ತಿದ್ದಾಗ ಹಿಂದಿನಿಂದ ವಸಿಂ ತನ್ನ ಆಟೋರಿಕ್ಷವನ್ನು ಅತೀವೇಗ ದಿಂದ ನಡೆಸಿಕೊಂಡು ಬಂದು ಒಮ್ಮೆಲೆ ಕಟ್ ಹೊಡೆದನು ಅದಕ್ಕೆ ನಾನು ಜರಾ ದೇಕ್ ಕೇ ಚಲಾರೇ ಅಂತಾ ಅಂದೆನು ಅಷ್ಟಕ್ಕೆ ಅವನು ಆಟೋ ನಿಲ್ಲಿಸಿ ಆಟೋನಿಂದ ಕಳೆಗೆ ಇಳಿದು ಬೋಸಡಿಕೆ ಮೇರೆಕೊ ಆಟೋ ಚಲನಾ ಸಿಕಾತಾ ತೂ ರಸ್ತೆ ಪೇ ಸೀದಾ ಚಲನೆ ಕಾ ಸೀಕ್ ಅಂತಾ ಕೈಯಿಂದ ಕಪಾಳದ ಮೇಲೆ, ಮತ್ತು ಬೆನ್ನನ ಮೇಲೆ ಹೊಡೆದನು ಅಲ್ಲಿಯೆ ಇದ್ದ ಅವನ ಅಣ್ಣ ತಮ್ಮಂದಿರಾದ  ಸಮಿರ ಎಂಬುವನು ಕ್ಯೂರೆ ಮಾದರ ಚೋದ  ಅಂತಾ ಕೈಯಿಂದ ಕಪಾಳ ಮೇಲೆ, ಬೆನ್ನಿನ ಮೇಲೆ ಹೊಡೆದನು, ಹಾಶಮ್  ಎಂಬುವನು ಕೈಮುಷ್ಠಿ ಮಾಡಿ  ಬಲಗಣ್ಣಿನ ಕೆಳಗಡೆ ಹೊಡೆದನು ಅಜರ ಎಂಬತನು ರಾಡಿನಿಂದ ಬಲಕಾಲಿನ ಮೇಲೆ ಮತ್ತು ಬೆನ್ನಿನ ಮೇಲೆ ಹೊಡೆದು ರಕ್ತಗಾಯ ಮಾಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂಬರ್ಗಾ ಠಾಣೆ : ಶ್ರೀ ಪ್ರಕಾಶ ತಂದೆ ಮಾಹಾಂತಪ್ಪ ಕಲ್ಲೂರ ಸಾ: ಹಡಲಗಿ ಇವರು ತನ್ನ ತಂದೆಯವರಾದ ಮಾಹಾಂತಪ್ಪ ಕಲ್ಲೂರ ಇವರು ಸುಮಾರು 15 ವರ್ಷಗಳಹಿಂದೆ ಶಿವಪ್ಪ ಪರೀಟ ಎಂಬುವವನ 6-ಎಕರೆ ಜಮೀನು ಖರಿದಿಸಿದ್ದು ಅದರಲ್ಲಿ 3-ಎಕರೆ ಜಮೀನು ರಜಿಷ್ಟರ ಆಗಿದ್ದು ಉಳಿದ 3-ಎಕರೆ ಜಮೀನು ರಜಿಷ್ಟರ ಆಗಿರುವುದಿಲ್ಲಾ ರಜಿಷ್ಟರ ಆಗದ ಜಮೀನನ್ನು ಆರೋಪಿತನು ಸಾಗುವಳಿ ಮಾಡುವ ಉದ್ದೇಶದಿಂದ ದಿನಾಂಕ 19-04-2014 ರಂದು 1730 ಗಂಟೆಗೆ ಫೀರ್ಯಾದಿ ಹಾಗೂ ಆತನ ಕಾಕಾತಮ್ಮಎಲ್ಲರೂ ತಮ್ಮ ಸ್ವಂತ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ 1. ಆನಂದ ತಂದೆ ಲಗಮಣ್ಣ ಅತ್ತೆ 2. ರವಿ ತಂದೆ ಲಗಮಣ್ಣ ಅತ್ತೆ 3. ರಾಮಣ್ಣ ತಂದೆ ಲಗಮಣ್ಣ ಅತ್ತೆ ಇವರು ತೋಟದಲ್ಲಿ ಅಕ್ರಮ ಪ್ರವೇಶ ಮಾಡಿ ಫೀರ್ಯಾದಿಗೆ ಕಲ್ಲಿನಿಂದ ತಲೆಗೆಫೀರ್ಯಾದಿಯ ಕಾಕನಿಗೆ ಎದೆಯ ಮೇಲಿನ ಅಂಗಿ ಹಿಡೆದು ಎಳೆದಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.