POLICE BHAVAN KALABURAGI

POLICE BHAVAN KALABURAGI

22 April 2014

Gulbarga District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಅಫಜಲಪೂರ ಠಾಣೆ : ದಿನಾಂಕ  21-04-2014 ರಂದು ಘತ್ತರಗಾ ಗ್ರಾಮದ ಅಂಬೀಗರ ಚೌಡಯ್ಯ ವೃತ್ತದ ಹತ್ತಿರ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಮಟ್ಕಾ ಬರೆದುಕೊಳ್ಳುತ್ತಿದ್ದಾನೆ ಅಂತ ಬಾತ್ಮಿ ಬಂದ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ಘತ್ತರಗಾ ಗ್ರಾಮದ ಅಂಬೀಗರ ಚೌಡಯ್ಯ ವೃತ್ತದ ಹತ್ತಿರ ಹೋಗಿ ನೋಡಲಾಗಿ ಸದರಿ ಬಾತ್ಮಿಯನ್ನು ಖಚಿತ ಪಡಿಸಿಕೊಂಡು ಸದರಿ ಆರೋಪಿಯನ್ನು ಹಿಡಿದು ವಿಚಾರಿಸಲಾಗಿ ತನ್ನ ಹೆಸರು ಚಂದುಗೌಡ ತಂದೆ ಹಣಮಂತಯ್ಯಗೌಡ ಮಾಲಿ ಪಾಟೀಲ್ ಸಾ: ಘತ್ತರಗಾ ಅಂತ ತಿಳಿಸಿದ್ದು ಸದರಿಯನ ವಶದಲ್ಲಿದ್ದ 670/-ರೂಮಟ್ಕಾ ಚೀಟಿ ಮತ್ತು ಒಂದು ಬಾಲ ಪೇನ್ ನ್ನು ಪಂಚರ ಸಮಕ್ಷಮ ವಶಪಡಿಸಿಕೊಂಡು  ಸದರಿಯವನೊಂದಿಗೆ ಠಾಣೆಗೆ ಬಂದು ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಜಗದೀಶ ತಂದೆ ಕಲ್ಯಾಣರಾವ ಮದರಿ  ಸಾ: ಭೂಸನೂರ ಹಾ:ವ ಶಾಹಾಬಜಾರ ಗುಲಬರ್ಗಾ ಇವರು ತಮ್ಮ ಹೊಲದ ಕೆಲಸದ ಸಂಬಂಧ ಊರಿಗೆ ಬಂದಿದ್ದು ರಾತ್ರಿ 9-30 ಗಂಟೆಗೆ ಭೂಸನೂರ ಪ್ಯಾಕ್ಟರಿ ಕ್ರಾಸ್ ಹತ್ತಿರ ಖಾನಾವಳಿಯಲ್ಲಿ ಊಟ ಕಟ್ಟಿಕೊಳ್ಳುವಾಗ 1. ವಿಠ್ಠಲ ತಂದೆ ಕಲ್ಯಾಣಿ ಬೇಡಿ 2. ಚನ್ನಪ್ಪ ತಂದೆ ಲಕ್ಷ್ಮಣ್ಣ ಕೋಗನೂರ ಸಾ: ಇಬ್ಬರು ಕೋರಳ್ಳಿ ತಾ: ಆಳಂದ ಇವರು  ಬಂದು ಈ ಹಿಂದೆ ಮೋಟಾರ ಸೈಕಲ್ ಸೈಡ ಕೊಡುವ ಸಂಬಂದ ಆರೋಪಿತರಿಗೂ ಮತ್ತು ಫಿರ್ಯಾದಿ  ಜೋತೆ ಬಾಯಿ ಮಾತಿನ ತಕರಾರು ಮಾಡಿಕೊಂಡಿ ವಿಷಯದಲ್ಲಿ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮತ್ತು ರಾಡಿ ನಿಂದ ಬುಜಕ್ಕೆಹೊಟ್ಟೆಗೆ ಮತ್ತು ಎಡಗಾಲು ಕಪ್ಪಗಂಡಿಯ ಹತ್ತಿರ ಹೊಡೆದು ಭಾರಿ ಗುಪ್ತಗಾಯ ಮತ್ತು ಸಾದಾ ಗುಪ್ತಗಾಯ ಪಡೆಸಿ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಮಾಹಾಗಾಂವ ಠಾಣೆ : ದಿನಾಂಕ 20-04-2014 ರಂದು ಶ್ರೀ ಬಸವರಾಜ ತಂ ನಾಗಪ್ಪ ಭಾವಿಕಟ್ಟಿ ಸಾ :  ಮಡಕಿ  ಹಾ:ವ: ಕಾಕಡೆ ಚೌಕ  ಗುಲಬರ್ಗಾ ರವರು  ತನ್ನ ಮೋಟಾರ ಸೈಕಲ ನಂ ಕೆ,, 38 ಕೆ, 3204 ನೇದ್ದರ ಮೇಲೆ ತನ್ನ ತಾಯಿಗೆ ಗುಲಬರ್ಗಾ ದಿಂದ ಮಡಕಿಗೆ ಬಿಟ್ಟು ವಾಪಸ ಗುಲಬರ್ಗಾಕ್ಕೆ ಬರುವಾಗ ರಾತ್ರಿ 8 ಪಿ,ಎಮ್,ಸೂಮಾರಿಗೆ ಮಹಾಗಾಂವ ಸರಕಾರಿ ಆಸ್ಪತ್ರೆಯ ಹತ್ತಿರ ಇದ್ದ ಬ್ರಿಡ್ಜ ಹತ್ತಿರ   ಎದುರಗಡೆಯಿಂದ ಹಂಕ ಮೋಟಾರ ಸೈಕಲ ನಂ ಕೆ,, 26 ಕೆ, 8645 ನೇದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಕೊಂಡು ಬಂದು ತನ್ನ ಮೋಟಾರ ಸೈಕಲಗೆ ಡಿಕ್ಕಿ ಪಡಿಸಿದ್ದರಿಂದ ತನ್ನ ಬಲಗಾಲ ಪಾದದ ಮೇಲೆ ಭಾರಿ ರಕ್ತಗಾಯ ಮತ್ತು ಬಲಗೈಯ ತೋರು,ಮದ್ಯ ಹಾಗೂ ಉಂಗೂರ ಬರೆಳುಗಳಿಗೆ ರಕ್ತಗಾವಾಗಿರುತ್ತದೆ ಮೋಟಾರ ಸೈಕಲ ಚಾಲಕ ಸಹ ಕೆಳಗೆ ಬಿದ್ದುದ್ದು  ಆತನಿಗೆ ಗಾಯವಾಗಿರಬಹುದು ಅವನ ಹೆಸರು ಕಳಿದ್ದಾಗ ಆತನು ತನ್ನ ಮೋಟಾರ ಸೈಕಲ ಅಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಫರತಾಬಾದ ಠಾಣೆ : ಶ್ರೀಮತಿ ರೆಷ್ಮಾ @ ಸಾದಿಯಾ ಗಂಡ ಶೇಖ್‌ ಸಿಕಂದರ ಸಾ: ಕಿಲ್ಲಾ ಸಿಟಿ ಬಸ್‌ ನಿಲ್ದಾಣದ ಹತ್ತಿರ ಗುಲಬರ್ಗಾ ರವರ ತವರ ಮನೆಯಾದ ನದಿಶಿನ್ನೂರ ಗ್ರಾಮಕ್ಕೆ ತನ್ನ ತಂದೆಯಾದ ಮಹಿಬೂಬಸಾಬ ಇತನಿಗೆ ಮಾತನಾಡಿಸಿಕೊಂಡು ಬರಲು ಗುಲಬರ್ಗಾದ ರಾಮ ಮಂದಿರದಿಂದ  ಮದ್ಯಾನ್ಹ 12:15 ಗಂಟೆಯ ಸುಮಾರಿಗೆ ಜೇವರ್ಗಿ ಕಡೆಗೆ ಹೋಗುವ ಕ್ರೂಜರ್‌ ಜೀಪ ನಂ. ಕೆಎ 28-9573 ನೇದ್ದರಲ್ಲಿ ನಾನು ಮತ್ತು ನನ್ನ ಮಕ್ಕಳಾದ 4 ವರ್ಷದ ಅದಿಬಾ, 2 ವರ್ಷದ ಅಜ್ಞಾನ ಎಲ್ಲರೂ ಕೂಡಿಕೊಂಡು ಹೊರಟಿದ್ದು ಮದ್ಯಾನ್ಹ 1:15 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ನದಿಶಿನ್ನೂರ ಗ್ರಾಮದ ಕ್ರಾಸ್‌ ಹತ್ತಿರ ಸದರಿ ಕ್ರೂಜರ್‌ ಜೀಪನ್ನು ಚಾಲಕನು ರೋಡಿನ ಎಡಗಡೆಯಲ್ಲಿ ಪಕ್ಕಕ್ಕೆ ನಿಲ್ಲಿಸಿ ನಮಗೆ ಇಳಿಸುತ್ತಿದ್ದಂತೆ ನಮ್ಮ ಹಿಂದಗಡೆಯಲ್ಲಿ ಗುಲಬರ್ಗಾದ ಕಡೆಯಿಂದ ಒಬ್ಬ ಟಿಪ್ಪರ ಚಾಲಕನು ತನ್ನ ಟಿಪ್ಪರನ್ನು ಅತಿವೇಗ ಮತ್ತು ಆಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಕ್ರೂಜರ್‌ ಜೀಪಿಗೆ ಡಿಕ್ಕಿ ಬಡಿಸಿರುತ್ತಾನೆ. ಇದರಿಂದ ನನಗೆ ತಲೆಗೆ ರಕ್ತಗಾಯ, ಎಡಗಡೆ ಮುಂಡಿಗೆ ಮತ್ತು ಬೆನ್ನಿಗೆ ಒಳಪೆಟ್ಟಾಗಿರುತ್ತದೆ. ನನ್ನ ಮಕ್ಕಳಾದ ಅದಿಬಾ ಇವಳಿಗೆ ತಲೆಗೆ ರಕ್ತಗಾಯ, ಮತ್ತು ಅಜ್ಞಾನ ಇತನಿಗೆ ತುಟಿಗೆ ಕೈಗೆ ಅಲ್ಲಲ್ಲಿ ತರಚಿದ ಗಾಯಗಳಾಗಿರುತ್ತವೆ. ನಂತರ ಡಿಕ್ಕಿ ಪಡಿಸಿದ ಟಿಪ್ಪರ ನಂಬರ ನೋಡಲಾಗಿ ಕೆಎ 32 ಬಿ-6590 ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.