POLICE BHAVAN KALABURAGI

POLICE BHAVAN KALABURAGI

13 July 2015

Kalaburagi District Reported Crimes

ಆಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದವನ ಬಂಧನ :
ಜೇವರ್ಗಿ ಠಾಣೆ : ದಿನಾಂಕ 12-072015 ರಂದು ಬಣಮಗಿ ಗ್ರಾಮದ ನೀರಿನ ಟ್ಯಾಂಕ್ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದ ಬಗ್ಗೆ ಬಾತ್ಮಿ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಣಮಗಿ ಗ್ರಾಮದ ನೀರಿನ ಟ್ಯಾಂಕ್ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಸಾರ್ವಜನಿಕ ರಸ್ತೆಯ ಮೇಲೆ ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದದನ್ನು  ಖಚಿತ ಪಡಿಸಿಕೊಂಡು ಅವನ ಮೇಲೆ ಸಿಬ್ಬಂದಿ ಜನರ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಿ ಅವನಿಂದ ಒಟ್ಟು  4800/- ರೂ ಕಿಮ್ಮತ್ತಿ ಮಧ್ಯ ತುಂಬಿದ ಬಾಟಲಿಗಳಿರುವ ಎರಡು ರಟ್ಟಿನ ಬಾಕ್ಷ್‌ ಜಪ್ತಿ ಮಾಡಿಕೊಂಡು ಆರೋಪಿ ಕರಣಪ್ಪ ತಂದೆ ವೀರಣ್ಣ ಅಂಗಡಿ ಸಾ|| ಆಂದೋಲಾ ಇತನನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಜೇವರ್ಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 03-07-2014 ರಂದು ಶ್ರೀ ಬಸವರಾಜಯ್ಯ ತಂದೆ ಶಿವಶರಣಯ್ಯ ಸ್ಥಾವರಮಠ್ ಸಾ : ಬಿರಾಳ ಬಿ  ರವರು ತಮ್ಮ ಮನೆಯ ಪಕ್ಕದಲ್ಲಿ ಹಾಕಿದ್ದ ಕಲ್ಲುಗಳನ್ನು ಶಿವಪುತ್ರಪ್ಪ ತಂದೆ ಕರಣಪ್ಪ ಆಂದೋಲಾ ತೆಗೆದುಕೊಂಡು ತನ್ನ ಮನೆಯ ಕಡೆಗೆ ಹೋಗುತ್ತಿದ್ದಾಗ ಫಿರ್ಯಾದಿಯ ತಾಯಿ ಇವಳು ಕಲ್ಲುಗಳು ನಮ್ಮವು ಇದ್ದು ಏಕೆ ತೆಗೆದುಕೊಂಡು ಹೋಗುತ್ತಿದ್ದಿ ಅಂತ ಅವನ ಮುಂದೆ ಹೋಗಿ ಕೇಳಿದಾಗ ಆರೋಪಿತನು ಫಿರ್ಯಾದಿಯ ತಾಯಿಗೆ ಕೂದಲು ಹೀಡಿದು ಎಳೆದಾಡಿ ನೂಕಿಸಿಕೊಟ್ಟಾಗ ಅವಳು ಕಲ್ಲಿನ ಮೇಲೆ ಬಿದ್ದು ಬಲಗಾಲಿನ ತೊಡೆಗೆ ಗುಪ್ತಗಾಯ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ತಯ ಮಾಡಿಕೊಳ್ಳಲು ಪ್ರಚೋದನೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ನಾಗಮ್ಮಾ ಗಂಡ ಶ್ರೀಮಂತ ಕೆರಮಗಿ ಸಾ:ಅಷ್ಟಗಾ ತಾ:ಜಿ:ಕಲಬುರಗಿ ಇವರ ಗಂಡನಾದ ಶ್ರೀಮಂತನಿಗೆ ಅರ್ಜುನ ಆಲಗೂಡ, ಶ್ತೀಮಂತ ಅಂಬೋಡಿ, ರಾಜಕುಮಾರ ಬೆನಕನಳ್ಳಿ ಇವರುಗಳು ಕೈಗಡಾ ಮತ್ತು ಸಾಲದಂತೆ ಹಣ ಕೊಟ್ಟು ಸದರಿಯವರು ದಿನಾಲು ತಮ್ಮ ಹಣ ಮರಳಿ ಕೊಡು ಅಂತಾ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದರಿಂದ ಅವರ ತಾಪತಾಳಲಾರದೇ ದಿನಾಂಕ:-10/07/2015 ರಂದು ಬೆಳಿಗ್ಗೆ 09:30 ಗಂಟೆಯಿಂದ 11:30 ಗಂಟೆಯ ಮದ್ಯದ ಅವದಿಯಲ್ಲಿ ಕಲ್ಲಹಂಗರಗಾ-ಅಷ್ಟಗಾ ಗ್ರಾಮದ ಸಿಮಾಂತರ ಶರಣಬಸಪ್ಪ ಮತ್ತು ಅಂಬಾರಾಯ ಇವರ ಹೋಲದ ಮದ್ಯದ ನಾಲಿಯಲ್ಲಿ ಇದ್ದ ಬೇವಿನ ಗಿಡಕ್ಕೆ    ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ  ಸಲ್ಲಿಸದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸೇಡಂ ಠಾಣೆ : ಶ್ರೀ. ಮಂಜುನಾಥ ತಂದೆ ಯಮನೂರಪ್ಪ ಜಂತಕಲ್ ಸಾ:ಹೊಸಕೇರಿ. ತಾ:ಗಂಗಾವತಿ, ಜಿಲ್ಲಾ:ಕೊಪ್ಪಳ. ಅಳಿಯ, ಮುರಳಿಧರ ತಂದೆ ಯಲ್ಲಪ್ಪ ಗೊರಬಾಳ ಮಳಖೇಡದ ರಾಜಶ್ರೀ ಸಿಮೆಂಟ್ ಕಂಪನಿಯಲ್ಲಿ ಇಂಜಿನಿಯರ್ ಅಂತ ಕೆಲಸ ಮಾಡಿಕೊಂಡಿದ್ದ. ದಿನಾಂಕ 12-07-2015 ರಂದು ರಾಜಶ್ರೀ ಸಿಮೆಂಟ್ ಕಂಪನಿಯಲ್ಲಿ ನನ್ನ ಅಳಿಯನೊಂದಿಗೆ ಕೆಲಸ ಮಾಡುವ ರಾಹುಲ್ ಇವರು ಫೋನ ಮಾಡಿ ನನಗೆ ತಿಳಿಸಿದ್ದೇನೆಂದರೆ, ನಿಮ್ಮ ಅಳಿಯ ಮುರಳಿಧರ ಹಾಗೂ ಆತನ ಗೆಳೆಯ ಶ್ರವಣಕುಮಾರ ಇಬ್ಬರೂ ಕೂಡಿ ಮೋಟಾರು ಸೈಕಲ್ ನಂ-KA-32-EE-3943 ನೇದ್ದರ ಮೇಲೆ ಸೇಡಂಕ್ಕೆ ಹೋಗಿ ಮರಳಿ ಮಳಖೇಡಕ್ಕೆ ರಾಜ್ಯ ಹೆದ್ದಾರಿ-10 ರ ಮೇಲೆ ಬರುವಾಗ, ಶೆಟ್ಟಿ ಹೂಡಾ ಗ್ರಾಮದ ಹತ್ತಿರ ಇರುವ ದಾನಮ್ಮ ಗುಡಿಯ ಹತ್ತಿರ ಮುಖ್ಯ ರಸ್ತೆಯ ಮೇಲೆ ಅಪಘಾತವಾಗಿ, ಭಾರಿ ರಕ್ತಗಾಯದಿಂದ ಅವರಿಬ್ಬರೂ ಸ್ಥಳದಲ್ಲಿಯೆ ಮರಣಹೊಂದಿರುತ್ತಾರೆ.ಅಂತ ತಿಳಿಸಿದಾಗ ನಾನು   ಇಂದು ಸೇಡಂ ಸರಕಾರಿ ಆಸ್ಪತ್ರೆ ಬಂದು ನೋಡಲು ನನ್ನ ಅಳಿಯನ ಶವ ಗುರುತಿಸಿದ್ದು ಅವನಿಗೆ ಬಲಹಣೆಗೆ, ಕಣ್ಣಿನ ಕೆಳಗೆ, ರಕ್ತಗಾಯ ಹಾಗೂ ತಲೆಯ ಹಿಂದೆ, ಬಲಕಪಗಂಡಕ್ಕೆ ಭಾರಿ ರಕ್ತಗಾಯ ಹಾಗೂ  ಬಲಗಾಳ ಮೊಳಕಾಲಿಗೆ ಭಾರಿ ರಕ್ತಗಾಯವಾಗಿ ಮುರಿದಿದ್ದು ಇರುತ್ತದೆ. ಮೃತ ಶ್ರವಣಕುಮಾರ ತಂದೆ ಬಸವರಾಜ ಹೂಗಾರ ಇತನಿಗೆ ನೋಡಲು ಬಲಗಾಲ ತೊಡೆಗೆ ಭಾರಿ ರಕ್ತಗಾಯವಾಗಿ ಮೂಳೆ ಮುರಿದಂತೆ ಕಾಣುತ್ತದೆ ಮತ್ತು ಬಾಯಿಗೆ ರಕ್ತಗಾಯವಾಗಿ ಹಲ್ಲು ಮುರಿದಂತೆ ಕಾಣುತ್ತದೆ ಮತ್ತು ತಲೆಯ ಹಿಂದೆ ಭಾರಿ ರಕ್ತಗಾಯವಾಗಿ ಇಬ್ಬರು ಮೇತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ವಾಹನಗಳ ಜಪ್ತಿ  :
ಅಫಜಲಪೂರ ಠಾಣೆ : ದಿನಾಂಕ 12-07-2015 ರಂದು ಶಿವಪೂರ ಗ್ರಾಮ ಕಡೆಯಿಂದ ಒಂದು ಟಿಪ್ಪರ ಹಾಗೂ ಒಂದು ಟ್ರಾಕ್ಟರಗಳಲ್ಲಿ  ಮರಳು ತುಂಬಿ ಕೊಂಡು ಅಫಜಲಪೂರ ಕಡೆ ಹೊರಟಿರುತ್ತಾರೆ ಅಂತಾ ಬಾತ್ಮಿ ಬಂದ ಮೇರೆಗೆ ಶ್ರೀ ಚಂದ್ರಕಾಂತ ಸಿಹೆಚ್ ಸಿ-449 ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬನ್ನಟ್ಟಿ ಕ್ರಾಸ ಹತ್ತಿರ ಇದ್ದಾಗ ಎದುರು ಗಡಯಿಂದ ಒಂದು ಟಿಪ್ಪರ ಹಾಗೂ ಒಂದು ಟ್ರಾಕ್ಟರ ಮರಳು ತುಂಬಿಕೊಂಡು ಬರುತ್ತಿದ್ದವು, ಸದರಿ ಎರಡು ವಾಹನದ ಚಾಲಕರು ನಮ್ಮನ್ನು ನೋಡಿ ತಮ್ಮ ಟಿಪ್ಪರ ಹಾಗೂ ಟ್ರಾಕ್ಟರನ್ನು ಸ್ಥಲದಲ್ಲೆ ಬಿಟ್ಟು ಓಡಿ ಹೋದರು, ನಂತರ ನಾನು ಪಂಚರ ಸಮಕ್ಷಮ ಟಿಪ್ಪರ ಹಾಗೂ ಟ್ರಾಕ್ಟರ ಚಕ್ಕ ಮಾಡಲು ಸದರಿ ಅವುಗಳಲ್ಲಿ  ಮರಳು ಇತ್ತು, ಮತ್ತು ಸದರಿ ಟಿಪ್ಪರ ನಂ ನೋಡಲಾಗಿ ಕೆಎ-20 ಎಬಿ-9959 ಅಂತ ಇದ್ದು ಮತ್ತು  ಸ್ವರಾಜ ಕಂಪನಿಯ ಟ್ರ್ಯಾಕ್ಟರ ಚಸ್ಸಿ ನಂ WXCA40906089195 ಇಂಜಿನ ನಂ 43.3008/STA00398 ಅಂತಾ ಇದ್ದವು, ಸದರಿ ಟಿಪ್ಪರ ಹಾಗೂ ಟ್ರ್ಯಾಕ್ಟರದಲ್ಲಿದ್ದ ಮರಳಿನ ಅಂದಾಜ ಕಿಮ್ಮತ 8,000/- ರೂ ಆಗಬಹುದು, ನಂತರ ಸದರಿ ಮರಳನ್ನು ಅಕ್ರಮವಾಗಿ ಕಳ್ಳತನದಿಂದ ಸಾಗಿಸುತ್ತಿದ್ದ ಟಿಪ್ಪರ ಹಾಗೂ ಟ್ರ್ಯಾಕ್ಟರನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಠಾಣೆಗೆ ತಂದು ಪ್ರಕರಣ ದಾಖಲಿಸಲಾಗಿದೆ.