POLICE BHAVAN KALABURAGI

POLICE BHAVAN KALABURAGI

12 July 2016

Kalaburagi District Reported Crimes

ಮಟಕಾ ಜೂಜುಕೊರರ ಬಂಧನ :
ಫರತಾಬಾದ ಠಾಣೆ : ದಿನಾಂಕ: 11/07/2016 ರಂದು ಪಿರೋಜಾಬಾದ ಗ್ರಾಮದಲ್ಲಿ ನೀರಿನ ಟ್ಯಾಂಕ ಹತ್ತಿರ ಮಟಕಾ ಬರೆದು ಕೊಳ್ಳುತ್ತಿದ್ದ  ಬಗ್ಗೆ ಬಾತ್ಮಿ ಬಂದ ಮೇರೆಗೆ ಪಿ.ಎಸ್.. ಫರತಾಬಾದ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಒಬ್ಬನನ್ನು ಹಿಡಿದು ವಿಚಾರಿಸಲು ಅಶೋಕ ತಂದೆ ಸೈಬಣ್ಣ ಪರೀಟ ಸಾ:ಪಿರೋಜಾಬಾದ ಅಂತಾ ತಿಳಿಸಿದ್ದು ಸದರಿಯವನಿಂದ ಜುಜಾಟಕ್ಕೆ ಬಳಸಿದ ಒಂದು ಮಟಕಾ ಚೀಟಿ, ಒಂದು ಬಾಲ್ ಪೆನ್ನ & ನಗದು ಹಣ 3500/- ರೂಪಾಯಿ ಗಳನ್ನು ಜಪ್ತಿಪಡಿಸಿಕೊಂಡು ಸದರಿಯವನೊಂದಿಗೆ ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಫರತಾಬಾದ ಠಾಣೆ : ದಿನಾಂಕ: 11/07/2016 ರಂದು ಗೆ ನದಿ ಸಿನ್ನೂರ ಗ್ರಾಮದಲ್ಲಿ ಚನ್ನಬಸಪ್ಪ ಗೊಬ್ಬುರ ಇವರ ಹೊಟೇಲ  ಹತ್ತಿರ ಕಟ್ಟೆಯ ಸಾರ್ವ ಜನಿಕ ಸ್ಥಳದಲ್ಲಿ ಮಟಕಾ ಬರೆದು ಕೊಳ್ಳುತ್ತಿದ್ದ ಬಗ್ಗೆ ಬಾತ್ಮಿ ಬಂದ ಮೇರೆಗೆ ಪಿ.ಎಸ್.. ಫರತಾಬಾದ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಒಬ್ಬನನ್ನು ಹಿಡಿದು ವಿಚಾರಿಸಲು  ಅನ್ವರಮಿಯ್ಯಾ ತಂದೆ ಶಹಾಬೋದ್ದಿನ ಹಸರಗುಂಡಗಿ ಸಾ: ನದಿ ಸಿನ್ನೂರ  ಅಂತಾ ತಿಳಿಸಿದ್ದು ಸದರಿಯವನಿಂದ ಜುಜಾಟಕ್ಕೆ ಬಳಸಿದ ಒಂದು ಮಟಕಾ ಚೀಟಿ, ಒಂದು ಬಾಲ್ ಪೆನ್ನ & ನಗದು ಹಣ 4750/- ರೂಪಾಯಿಗಳನ್ನು ಜಪ್ತಿಪಡಿಸಿಕೊಂಡು ಸದರಿಯವನೊಂದಿಗೆ ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.. 
ಫರತಾಬಾದ ಠಾಣೆ : ದಿನಾಂಕ: 11/07/2016 ರಂದು ಫರಹತಾಬಾದ ಗ್ರಾಮದ ಅಗಸಿಯ ಹತ್ತಿರ ಕಟ್ಟೆಯ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಬರೆದುಕೊಳ್ಳುತ್ತಿದ್ದ  ಬಗ್ಗೆ ಬಾತ್ಮಿ ಬಂದ ಮೇರೆಗೆ ಪಿ.ಎಸ್.. ಫರತಾಬಾದ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಒಬ್ಬನನ್ನು ಹಿಡಿದು ವಿಚಾರಿಸಲು  ಸದಾಶಿವ ತಂದೆ ಕಲ್ಲಪ್ಪಾ ಮಮ್ಮಣಿ ಸಾ: ಫರಹತಾಬಾದ ಅಂತಾ ತಿಳಿಸಿದ್ದು ಸದರಿಯವನಿಂದ ಜುಜಾಟಕ್ಕೆ ಬಳಸಿದ ಒಂದು ಮಟಕಾ ಚೀಟಿ, ಒಂದು ಬಾಲ್ ಪೆನ್ನ & ನಗದು ಹಣ 945/- ರೂಪಾಯಿಗಳನ್ನು ಜಪ್ತಿಪಡಿಸಿಕೊಂಡು ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.. 
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಶಂಕ್ರಯ್ಯಾ ತಂದೆ ಸಿದ್ದರಾಮಯ್ಯಾ ಹಿರೇಮಠ  ಸಾ : ಸಮತಾ ಕಾಲೂನಿ ಕಲಬುರಗಿ ರವರು ದಿನಾಂಕ 11-7-2016 ರಂದು ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಶ್ರೀ ಶರಣಬಸವೇಶ್ವರ ಗುಡಿಗೆ ದರ್ಶನ ಕುರಿತು ಹೊಗುತ್ತಿರುವಾಗ ಬ್ರಹ್ಮಪೂರ ಬಡಾವಣೆಯ ಮುಗಳನಾಗಾಂವ ಮಠದ ಮುಂದೆ ಶಿವಶರಣಯ್ಯಾ  ಮಠಪತಿ. ಶಿವಪುತ್ರಯ್ಯಾ ಮಠಪತಿ  ವೀರುಪಾಕ್ಞಯ್ಯಾ ಮಠಪತಿ ಇವರು ನನಗೆ ತಡೆದು ಶಿವಶರಣಯ್ಯಾ ಮಠಪತಿ ಇವನು ಏ ಶಂಕ್ರಪ್ಪಾ ನಿನ್ನ  ತಮ್ಮ ವಿರೇಶ ಇವನು ನನ್ನ ತಮ್ಮನಾದ ಶಿಪುತ್ರಯ್ಯಾ ಇತನ ಜೊತೆ ವಿನಾಕಾರಣ ಜಗಳ ತೆಗೆದು ಕೈಯಿಂದ ಹೊಡೆ ಬಡೆ ಮಾಡಿರುತ್ತಾನೆ ಅವನು ಎಲ್ಲ ಇದ್ದಾನೆ ಅಂತ ಕೇಳಿದಾಗ ನನ್ನ ತಮ್ಮ ವಿರೇಶ ಇವರು ಲಗ್ನಕ್ಕೆ ಹೊಗಿರುತ್ತಾನೆ ಮನೆಯಲ್ಲಿ ಇರುವದಿಲ್ಲಾ ಅಂತ ಹೇಳಿದಾಗ ನೀನು ಅವನಿಗೆ ಕರೆಯಿಸಿಬೆಕು ಅಂತ ಶಿವಶರಣಯ್ಯಾ ಮಠಪತಿ ಇವನು ಕೈಯಿಂದ ನನ್ನ ಬೆನ್ನಿನ ಮೇಲೆ ಹೊಡೆ ಬಡೆ ಮಾಡಿ ಗುಪ್ತಗಾಯ ಮಾಡಿರುತ್ತಾನೆ ಶಿವಪುತ್ರಯ್ಯಾ ಇತನು ಕಾಲಿನಿಂದ ಹೊಟ್ಟೆಯ  ಮೇಲೆ ಒದ್ದಿರುತ್ತಾನೆ.ವೀರುಪಾಕ್ಷಯ್ಯಾ ಇವನು ಏ ರಂಡಿ ಮಗನೆ ಭೊಷಡಿ ಮಗನೆ ನಿಮ್ಮದು ಬಹಳದಾದಾಗಿರಿ ನಡೆದಿದೆ ಸುಳೆ ಮಕ್ಕಳೆ ಅಂತ ಕೈಯಿಂದಿ ಹೊಟ್ಟೆಯ ಹೊಡೆ ಬಡೆ ಮಾಡಿರುತ್ತಾನೆ ವೀರುಪಾಕ್ಷಯ್ಯನ ಇವನ ಮಗ ಜಗು ಇತನು ಬಂದವನೆ ಹೊಡೆಯಿರಿ ಈ ಮಗನಿಗೆ ಖಲಾಸ ಮಾಡಿರಿ ಅಂತ ಜಿವದ ಭಯ ಹಾಕಿ ಒಂದು ಫರ್ಸಿ ಕಲ್ಲಿನಿಂದ ನನ್ನ ಟೊಂಕದ ಮೇಲೆ ಹೊಡೆದು ಗುಪ್ತಗಾಯ ಮಾಡಿರುತ್ತಾನೆ ಮತ್ತು ಶಿವಶರಣಯ್ಯಾ ಇತನು ಕೈಯಿಂದ ನನ್ನ ಬಾಯಿ ಮೆಲೆ ಹೊಡೆದಿದ್ದರಿಂದ ನನ್ನ ಮೇಲಿನ ತುಟಿ ಒಡೆದು ರಕ್ತಗಾಯ ಆಗಿರುತ್ತದೆ. ಮತ್ತು ನೀಲಮ್ಮ  ಶರಣಮ್ಮಾ ಇವರು ಬಂದವರೆ ನನಗೆ ಕೈಯಿಂದ ಬೆನ್ನಿನ ಮೆಲೆ ಹೊಡೆಬಡೆ ಮಾಡಿರುತ್ತಾರೆ ಸಿದ್ದು ತಂದೆ ವೀರುಪಾಕ್ಷಯ್ಯಾ ಬಂದವನೆ ಒಂದು ಬಡಿಗೆಯಿಂದ ನನ್ನ ಎರಡು ತೊಡೆಯ ಜಹೊಡೆದು ಗುಪ್ತಗಾಯ ಮಾಡಿರುತ್ತಾನೆ. ಆಗ ನನ್ನ ಹೆಚ್.ಟಿ ಸಿ ಮೊಬಾಯಿ ಫೊನ ಬಿದ್ದಿದ್ದು ಸದರಿ ಸಿದ್ದು ಇತನು ತೆಗದು ಕೊಂಡಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನಾಥ ಹೆಣ್ಣುಮಗಳ ಶವ ಪತ್ತೆ :
ಮಾಹಾಗಾಂವ ಠಾಣೆ : ಶ್ರೀ ಗಿರೇಪ್ಪಾ ತಂದೆ ಬಸಲಿಂಗಪ್ಪಾ ಬಸವಣ ಸಾ: ಕುರಿಕೋಟಾ ತಾ:ಜಿ: ಕಲಬುರಗಿ ರವರು ದಿನಾಂಕ: 11/07/2016 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ನಾನು, ಹಾಗು ನಮ್ಮೂರಿನ ರಮೇಶ ತಂದೆ ಗುಂಡಪ್ಪಾ ಸಾಹು ಇಬ್ಬರು ಕೂಡಿಕೊಂಡು ಕೆಲಸವಿದ್ದ ಪ್ರಯುಕ್ತ ರಮೇಶ ಸಾಹು ರವರ ಮೋ.ಸೈಕಲ ಮೇಲೆ ಕಲಬುರಗಿಗೆ ಹೊರಟಿದ್ದು ನಮ್ಮೂರಿನ ಸೇತುವೆ ಮೇಲೆ ಹೋಗುತ್ತಿರುವಾಗ ಸೇತುವೆಯ ಎಡಬದಿ ನೀರಿನಲ್ಲಿ ಬೋರಲಾಗಿ ಒಂದು ಹೆಣ್ಣು ಮಗಳ ಶವ ತೆಲಾಡುತ್ತಿರುವುದನ್ನು ನೋಡಿ, ನೀರಿನ ಹತ್ತಿರ ಹೋಗಿ ನೋಡಲಾಗಿ, ಒಂದು ಹೆಣ್ಣು ಮಗಳ ಶವ ಬೋರಲಾಗಿ ಬಿದ್ದು ತೆಲಾಡುತ್ತಿದ್ದು. ಅದನ್ನು ಖಚಿತ ಪಡಿಸಿಕೊಂಡು ನಮಗೆ ಪರಿಚಯದವರಾದ ಮಂಜುನಾಥ ಬಾಳಿ ಮತ್ತು ಸುರೇಶ ಮುಗಳಿ ಇವರನ್ನು ಕರೆಯಿಸಿಕೊಂಡು ಅವರ ಸಹಾಯದಿಂದ ಶವವನ್ನು ನೀರಿನಿಂದ ಹೊರಗೆ ತೆಗೆದು ನೋಡಲಾಗಿ, ಆಕೆಯ ವಯಸ್ಸು ಅಂದಾಜು 60 ರಿಂದ 65 ವರ್ಷ, ಸಾಧಾರಣ ಮೈಕಟ್ಟು, ನೀಟಾದ ಮೂಗು, ಅಂದಾಜು 5`2ಎತ್ತರ, ಬಿಳಿಯ ಮೈ ಬಣ್ಣ ಹೊಂದಿದ್ದು. ಬಲಗಾಲಿನ ಪಾದದ ಕಿರುಬೆರಳಿಗೆ, ಕಣ್ಣು, ಮೂಗು ಹಾಗು ಕಿವಿಗೆ ಜಲಚರ ಪ್ರಾಣಿಗಳು ತಿಂದಂತೆ ಆಗಿದ್ದು ಕಂಡು ಬಂದಿದ್ದು. ಮೃತಳ ಹೆಸರು ವಿಳಾಸ ಗೊತ್ತಾಗಿರುವುದಿಲ್ಲಾ. ಮೃತಳು ಯಾವುದೋ ವಿಷಯದ ಸಂಬಂಧ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ನಿನ್ನೆ ದಿನಾಂಕ: 10/07/2016 ರಂದು ರಾತ್ರಿ ವೇಳೆಯಲ್ಲಿ ಮೃತಪಟ್ಟಿರಬಹುದು. ಅವಳ ಸಾವಿನ ಬಗ್ಗೆ ಸಂಶಯವಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.