POLICE BHAVAN KALABURAGI

POLICE BHAVAN KALABURAGI

04 July 2012

GULBARGA DIST REPORTED CRIME

ಹೆಣ್ಣು ಮಗಳು ಕಾಣೆಯಾದ ಪ್ರಕರಣ:
ಗ್ರಾಮಿಣ ಪೊಲೀಸ್  ಠಾಣೆ: ಶ್ರೀ ಮಹಾಂತೇಶ ತಂದೆ ಈರಣ್ಣಾ ಹೀರಾಪುರ ವಯಾ:35 ವರ್ಷ ಜಾ:ಲಿಂಗಾಯತ ಉ:ಟೇಲರ ಕೆಲಸ ಸಾ:ಲಂಗರ ಹನುಮಾನ ಗುಡಿಯ ಹತ್ತಿರ ಗುಲಬರ್ಗಾ  ರವರು ನನ್ನ ಹೆಂಡತಿಯಾದ ಅಂಬಿಕಾ ವಯಾ:32 ವರ್ಷ ಇವಳು ದಿನಾಲು ಗೌಂಡಿ ಕೆಲಸ ಹೋಗುತ್ತಿದ್ದು ದಿನಾಂಕ:-27/06/2012 ರಂದು ಮುಂಜಾನೆ 9:00 ಗಂಟೆಗೆ ಮನೆಯಿಂದ ಕೆಲಸಕ್ಕೆಂದು ಹೋಗುತ್ತೇನೆ ಅಂತಾ ಹೇಳಿ ಹೋದವಳು ಇಲ್ಲಿಯವರೆಗೆ ಮನೆಗೆ ಬಂದಿರುವುದಿಲ್ಲಾ. ನಾವು ಎಲ್ಲಾ ಕಡೆ ಹುಡಿಕಾಡಿದೂ ಪತ್ತೆಯಾಗಿರುವದಿಲ್ಲ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ  ನಂ.221/2012 ಕಲಂ ಹೆಣ್ಣು ಮಗಳು ಕಾಣೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.ಕಾಣೆಯಾದ ಹೆಣ್ಣು ಮಗಳು ಚಹರೆ ಪಟ್ಟಿ ಈ ರೀತಿ ಇರುತ್ತದೆ. ಎತ್ತರ 5 ಪೀಟ 4 ಇಂಚು, ಗುಂಡು ಮುಖ, ಸಾದಾ ಕಪ್ಪು ಬಣ್ಣ, ಸಧ್ರಡ ಮೈಕಟ್ಟು, ಕನ್ನಡ ಹಿಂದಿ ಮರಾಠಿ ಭಾಷೆ ಮಾತನಾಡುತ್ತಾಳೆ ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಕಂಟ್ರೊರ್ಳ ರೂಮ್ ದೂರವಾಣಿ ನಂ: 08472-263604/ ಅಥವಾ 08472-263631  ನೇದ್ದಕ್ಕೆ ಸಂಪರ್ಕಿಸಲು ಕೋರಲಾಗಿದೆ. 

GULBARGA DIST REPORTED CRIMES


ಸುಲಿಗೆ ಪ್ರಯತ್ನ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ: ಶ್ರೀ.ಶಫಿ ತಂದೆ ಫರೀದಸಾಬ ಸಿಂದನಕೇರಾ ವ|| 31 ವರ್ಷ ಸಾ|| ಕಟಕ ಚಿಂಚೋಳಿ ತಾ|| ಭಾಲ್ಕಿ ಜಿ|| ಬೀದರ್ ರವರು ನಾನು ಮಧ್ಯರಾತ್ರಿ 2-00 ಗಂಟೆಯ ಸುಮಾರಿಗೆ  ಕ್ರೂಸರ್ ನಂಬರ ಕೆಎ-14-9303 ನೇದ್ದರಲ್ಲಿ ಸಂಜೆವಾಣಿ ಪ್ರೀಂಟಿಗ್ ಪ್ರೇಸ್ ನಲ್ಲಿ ಪ್ರೀಟ ಆದ ಉದಯವಾಣಿ ಪತ್ರಿಕೆಗಳ ಬಂಡಲಗಳು ವಾಹನದಲ್ಲಿ ಹಾಕಿಕೊಂಡು ಚಿತ್ತಾಪೂರ, ಸೇಡಂ ಚಿಂಚೋಳಿ ಪಟ್ಟಣಗಳಿಗೆ ವಿತರಣೆ ಮಾಡಲು ಹೋಗುವಾಗ ಅನ್ನಪೂರ್ಣ ಆಸ್ಪತ್ರೆ ಮುಂದುಗಡೆ ಹೋಗುವಾಗ  ನನ್ನ ವಾಹನದ ಜಾಯಿಂಟ ರಬ್ಬರ ಕಡಿದಿರುವದರಿಂದ ನಾನು ವಾಹನ ನಿಲ್ಲಿಸಿ ನೋಡುತ್ತಿದ್ದಾಗ ಸರಕಾರಿ ಆಸ್ಪತ್ರೆ ಕಡೆಯಿಂದ ಮೋಟಾರ ಸೈಕಲ್ ನಂಬರ ಕೆಎ-32.ವೈ-1289ನೇದ್ದರ ಮೇಲೆ ಮೂರು ಜನರು ಬಂದು ನನಗೆ ಎನು ಆಗಿದೆ ಅಂತಾ ಕೇಳಿ ಅವರಲ್ಲಿ ಒಬ್ಬನು ನನ್ನ ಹಿಡಿದುಕೊಂಡನು ಉಳಿದ ಎರಡು ಜನರು ನನಗೆ ಮುಖದ ಮೇಲೆ ಮತ್ತು ಬಲ ಬುಜದ ಮೇಲೆ ಹೊಡೆದು ಅದರಲ್ಲಿ ಒಬ್ಬನು ನನ್ನ ಮೋಬಾಯಿಲ್ ಮತ್ತು ಇನ್ನೋಬ್ಬನು ನನ್ನ ಹತ್ತಿರ ಹಣ ಕಸಿದುಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 85/2012 ಕಲಂ: 394 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ಶ್ರೀಮತಿ ಶೋಭಾ ಗಂಡ ಸಿದ್ದಾರಾಮ ಘೊಡಕೆ, ವಯ: 24  ವರ್ಷ, ಜಾತಿ: ಕುರುಬ  ಉ: ಹೊಲ ಮನೆ ಕೆಲಸ  ಸಾ: ನಾಗಲೇಗಾಂವ ಹಾ:ವ: ಕೇರೊಳ್ಳಿ. ರವರು ನಾನು ಸಿದ್ದರಾಮ ತಂದೆ ನಾಮದೇವ ಘೋಡಕೆ ಇವರೊಂದಿಗೆ ದಿನಾಂಕ 24/05/2010 ರಂದು ಹಿರಿಯರ ಸಮ್ಮುಖದಲ್ಲಿ ಮದುವೆ ಮದುವೆ ಮಾಡಿರುತ್ತಾರೆ. ಮದುವೆ ಕಾಲಕ್ಕೆ ಗಂಡನ ಮನೆಯವರಿಗೆ ವರದಕ್ಷಿಣೆ ರೂಪದಲ್ಲಿ 3 ತೊಲಿ ಬಂಗಾರ 41,000/- ರೂಪಾಯಿ, ಇನ್ನಿತರ ಸಾಮಾನುಗಳು ಕೊಟ್ಟು ಮದುವೆ ಮಾಡಿರುತ್ತಾರೆ. ಮದುವೆಯಾದ 3 ತಿಂಗಳ ನಂತರ ಗಂಡ ಅತ್ತೆ ಮಾವ ಮತ್ತು ಗಂಡನ ಸೋದರ ಮಾವ ನವರು ಕೂಡಿಕೊಂಡು ತವರು ಮನೆಯಿಂದ 50,000/- ತರುವಂತೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿರುತ್ತಾರೆ.. ನನ್ನ ತವರು ಮನೆಯಿಂದ 50,000/- ರೂಪಾಯಿಗಳು ನನ್ನ ತಂದೆ ತಾಯಿವರು ತಂದು ಕೊಟ್ಟಿರುತ್ತಾರೆ ಹೇರಿಗಿಗೆ ಅಂತಾ ತವರು ಮನೆಗೆ ಬಂದಿದ್ದು ಒಂದು ಹೆಣ್ಣು ಮಗು ಕುಡಾ ಜನಿಸಿರುತ್ತದೆ. ಗಂಡನ ಮನೆಯವರು ನನಗೆ ಅಥವಾ ನನ್ನ ಮಗುವಿಗೆ ನೋಡುವದಕ್ಕೆ ಬಂದಿರುವದಿಲ್ಲ ಇದ್ದರಿಂದ ನನ್ನ ತಂದೆಯವರ ಜೋತೆ ನನ್ನ ಗಂಡನ ಮನೆಗೆ ಬಂದಾಗ ನನ್ನ ಗಂಡ, ಅತ್ತೆಮಾವ ಮತ್ತು ಗಂಡನ ಸೋದರಮಾವ ರವರೆಲ್ಲರೂ ಕೂಡಿಕೊಂಡು ನನಗೆ ಹೊಡೆ ಮಾಡಿರುತ್ತಾರೆ ಮತ್ತು ನನ್ನ ತಂದೆಯವರಿಗೆ ಶಾಂತಲಿಂಗಪ್ಪಾ ಮಾಸ್ತರ ಇತನು ಎದೆ ಮೇಲಿನ ಅಂಗಿ ಹಿಡಿದು ನೂಕಿಸಿ ಕೊಟ್ಟಿರುತ್ತಾನೆ. ನನಗೆ ವರದಿಕ್ಷಿಣೆ ತರುವಂತೆ ಹೊಡೆ ಮಾಡಿದವರ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 33/2012 ಕಲಂ 498 [ಎ] 323, 504, 506, ಸಂಗಡ 34 ಐ.ಪಿ.ಸಿ. ಮತ್ತು 3 & 4 ಡಿ.ಪಿ. ಆಕ್ಟ್  ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.