POLICE BHAVAN KALABURAGI

POLICE BHAVAN KALABURAGI

28 June 2016

Kalaburagi District Reported Crimes.

ಅಪಘಾತ ಪ್ರಕರಣ :
ಅಫಜಪೂರ ಠಾಣೆ : ದಿನಾಂಕ 28-06-2016 ರಂದು ಬೆಳಿಗ್ಗೆ 11:30 ಗಂಟೆ ಸುಮಾರಿಗೆ ನನ್ನ ಗಂಡನು ಮನೆಯಿಂದ ಅಫಜಲಪೂರಕ್ಕೆ ಹೋಗಿ ವಡಾಪಾವ ವ್ಯಾಪಾರಕ್ಕೆ ಬೇಕಾದ ಬ್ರೇಡಗಳನ್ನು ತಗೆದುಕೊಂಡು ಬರುತ್ತೇನೆ ಅಂತಾ ಹೇಳಿ ನಮ್ಮ ಹೀರೊ ಹೊಂಡಾ ಸ್ಪೆಂಡರ ಮೋಟರ ಸೈಕಲ ನಂ ಎಮ್.ಹೆಚ್-13 ಎವಾಯ್-4171 ನೇದ್ದರ ಮೇಲೆ ಅಫಜಲಪೂರಕ್ಕೆ ಹೋಗಿರುತ್ತಾರೆ, ಮದ್ಯಾಹ್ನ 1:45 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮೂರಿನ ಮಲ್ಲಿಕಾರ್ಜುನ ತಂದೆ ಹಣಮಂತ್ರಾಯ ಗೊಬ್ಬುರ ಇವರು ನನಗೆ ಪೋನ ಮಾಡಿ ನಿನ್ನ ಗಂಡನಿಗೆ ಅಫಜಲಪೂರ – ಕಲಬುರಗಿ ರಸ್ತೆಗೆ ಅಬ್ದುಲ ರಹೀಮ ಆಲಮೇಲ್ ರವರ ಹೊಲದ ಹತ್ತಿರ ರೋಡಿನ ಮೇಲೆ ಟ್ಯಾಕ್ಟರ ನಂ ಕೆಎ-32 ಟಿ-3512 ನೇದ್ದಕ್ಕೆ ಮದ್ಯಾಹ್ನ 1.30 ಗಂಟೆ ಸುಮಾರಿಗೆ ಅಫಘಾತ ಸಂಭವಿಸಿದ್ದು ಕಾಶೀನಾಥನಿಗೆ ಹಣೆಗೆ ಭಾರಿ ರಕ್ತ ಗಾಯವಾಗಿದ್ದರಿಂದ ಅವನನ್ನು ಅಫಜಲಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತಿದ್ದೇವೆ ಅಂತ ತಿಳಿಸಿದರು. ಕೂಡಲೇ ನಾನು ಮತ್ತು ನನ್ನ ನಾದಿನಿ ಸುನಿತಾ ಭೋಸ್ಲೆ ಹಾಗು  ಅವರ ಮಕ್ಕಳಾದ ಪ್ರಕಾಶ ಭೋಸ್ಲೆ, ಆಕಾಶ ಭೋಸ್ಲೆ ಅವರೇಲ್ಲರು ಅಫಜಲಪೂರ ಸರಕಾರಿ ಆಸ್ಪತ್ರೆಗೆ ಬಂದಿರುತ್ತೇವೆ. ವೈದ್ಯರು ನನ್ನ ಗಂಡನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರಿಂದ ನಾವೇಲ್ಲರು ನನ್ನ ಗಂಡನನ್ನು 108 ವಾಹನದಲ್ಲಿ ಹಾಕಿಕೊಂಡು ಕಲಬುರಗಿಗೆ ಹೊರಡಿದಾಗ ಮದ್ಯಾಹ್ನ 2.15 ಗಂಟೆ ಸುಮಾರಿಗೆ ನೀರಾವರಿ ಆಫೀಸ್ ಹತ್ತಿರ ಮಾರ್ಗ ಮದ್ಯದಲ್ಲಿ ನನ್ನ ಗಂಡನು ಮೃತಪಟ್ಟಿರುತ್ತಾನೆ. ಅಂತಾ ಶ್ರೀಮತಿ ಸಂಗೀತಾ ಗಂಡ ಕಾಶಿನಾಥ  ಮೋರೆ ಸಾ : ಮಲ್ಲಾಬಾದ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ದಿನಾಂಕ: 26/06/2016 ರಂದು ರಾತ್ರಿ 8-30 ಗಂಟೆ ಸುಮಾರಿಗೆ ಮೃತ ಶಂಕರ್‌ ಹಾಗೂ ಅವನ ಹೆಂಡತಿ ಶಿವಮ್ಮಾ ಇಬ್ಬರೂ ಕೂಡಿ ಮಾಹಾಗಾಂವ ಇಂದ ಅವರಾಧ ಗ್ರಾಮಕ್ಕೆ ಬಂದು ಮರಳಿ ಮಹಾಗಾಂವ ಗ್ರಾಮಕ್ಕೆ ಹೋಗುವ ಕುರಿತು ಅವರಾಧ (ಬಿ) ಗ್ರಾಮದ ಬಸ್‌ ಸ್ಟಾಂಡ್‌ ಹತ್ತಿರ ಬಸ್ಸಿಗಾಗಿ ಕಾಯುತ್ತಾ ನಿಂತಿರುವಾಗ ಅಧೇ ವೇಳೆಗೆ ಹುಮನಾಬಾಧ ರೋಡ ಕಡೆಯಿಂದ ಮೋಟರ್ ಸೈಕಲ್‌ ನಂ ಕೆಎ 32 ಇಜೆ 3195 ನೇದ್ದರ ಚಾಲಕನು ಅತೀವೆಗ ಮತ್ತು ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ಮೊದಲು ಶಿವಮ್ಮಾ ಇವಳಿಗೆ ಅಪಘಾತಪಡಿಸಿ ಅದೇ ವೇಗದಲ್ಲಿ ಶಂಕರ್‌ ಈತನಿಗೂ ಅಪಘಾತಪಡಿಸಿದ್ದರಿಂದ ಶಂಕರ್‌ ಈತನಿಗೆ ಅಪಘಾತಪಡಿಸಿ ಮೋ.ಸೈ ಅಲ್ಲಿಯೇ ಬಿಟ್ಟು ಓಡಿಹೋಗಿದ್ದು ಇದರಿಂದ ಫಿರ್ಯದಿ ಶಂಕರ್‌ ಹಾಗೂ ಶಿವಮ್ಮಾ ಇಬ್ಬರಿಗೆ ಭಾರಿ ರಕ್ತಗಾಯಮತ್ತು ಗುಪ್ತಗಾಯಗಳಾಗಿದ್ದು ಅವರಿಬ್ಬರಿಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆ ಮಾಡಿದ್ದು ಶಂಕರ್ ಈತನು ದಿನಾಂಕ: 26/06/2016 ರಿಂದ ದಿನಾಂಕ: 28/06/2016 ರವರೆಗೆ ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ರಸ್ತೆ ಅಪಘಾತದಲ್ಲಿ ಆದ ಗಾಯಗಳ ಉಪಚಾರ ಪಡೆಯುತ್ತಾ ಉಪಚಾರದಲ್ಲಿ ಗುಣಮುಖವಾಗದೇ ಇಂದು ಬೆಳಿಗ್ಗೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ವರದಕ್ಷಣೆ ಕಿರುಕಳ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಸಾಲೇಹಾಖೈರ್ ಗಂಡ ಮಹಮ್ಮದ ಅಸ್ಪಾಕರ್ ಪರವೇಜ್ ಸಾ:ಮನೆ ನಂ 5-993/78 ನ್ಯೂ ರೆಹಮಾನ ಕಾಲೋನಿ ಕಲಬುರಗಿ ರವರಿಗೆ 1 ವರ್ಷ 2 ತಿಂಗಳು ಹಿಂದೆ ಕಲಬುರಗಿಯ ಜಮ್ ಜಮ್ ಕಾಲೋನಿಯ ಅಬ್ದುಲ್ ರಹೀಮ್ ಎಂಬುವವರ ಮಗನಾದ ಮಹಮ್ಮದ ಅಸ್ಪಾಕ್ ಪರವೇಜ್ ಎಂಬುವವರೊಂದಿಗೆ ನಿಶ್ಚಿತಾರ್ಥ ಮಾಡಿ ನಿಶ್ಚಿತಾರ್ಥ ಕಾಲಕ್ಕೆ ವರ ಮತ್ತು ಆತನ ಸಂಬಂದಿಕರು ವರನಿಗೆ 2 ಲಕ್ಷ ರೂಪಾಯಿ ಮತ್ತು 4 ತೋಲಿ ಬಂಗಾರ ಕೋಡಬೇಕೆಂದು (ಡಿಮ್ಯಾಂಡ್) ಮಾಡಲಾಗಿತ್ತು ಅದರಂತೆ ನನ್ನ ತಂದೆ ತಾಯಿ ಮತ್ತು ನಮ್ಮ ಸಂಬಂಧಿಕರು ಮತ್ತು ನನ್ನ ಗಂಡ ಮತ್ತು ಆತನ ತಂದೆ ತಾಯಿಯವರನ್ನು ನಮ್ಮ ªÀÄನೆಗೆ ಕರೆದು ಮದುವೆಗೆ ಮುಂಚೆ 2 ಲಕ್ಷ ರೂಪಾಯಿ ಹಾಗು 4 ತೋಲಿ ಬಂಗಾರ ಕೋಡಲಾಗಿತ್ತು. ನಂತರ ಕಲಬುರಗಿ ಮೀಲನ್ ಪಂಕ್ಷನ್ ಹಾಲನಲ್ಲಿ ನಮ್ಮಿಬ್ಬರ ಮದುವೆಯಾಗಿದ್ದು ಮದುವೆ ದಿನಂದಂದು ಮನೆಯ (ಸುರಗಿ) ಮುಂಚ, ಗಾದಿ, ಅಲಮಾರಿ, ಹ್ಯಾಂಡ್ಯಾ ಬ್ಯಾಂಡ್ಯಾ ಗಳನ್ನು ನಮ್ಮ ಮದುವೆ ಸಂಪ್ರದಾಯದಂತೆ ಕೋಡಲಾಗಿತ್ತು. ಮದುವೆ ಹೋಸದಲ್ಲಿ ನಾನು ಗಂಡನ ಮನೆಗೆ ಹೋದೆ ನಂತರ ನನ್ನ ಗಂಡ ನನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿದ್ದನು. ಸುಮಾರು 6 ತಿಂಗಳ ಕಳೆದ ನಂತರ ನನ್ನ ಅತ್ತೆ ಜರೀನಾ ಬೇಗಂ ಮತ್ತು ನಾದಿನಿ ನಾಜಿಯಾಫಾತೀಮಾ ಇವರು ನನಗೆ ನೀನು ಸರಿಯಾಗಿ ಅಡಿಗೆ ಮಾಡುವುದಿಲ್ಲಾ ನೀನು ನಮ್ಮ ಮನೆಯವರಿಗೆ ಸರಿಯಾಗಿ ಹೊಂದಿಕೊಂಡಿರುವುದಿಲ್ಲಾ ಅಂತಾ ಬೈಯ್ಯುತ್ತಿದ್ದಾಗ ನಾನು ನನ್ನ ಗಂಡ ಮತ್ತು ಮಾವ ಅಬ್ದುಲ್ ರಹೀಮ್ ಇವರಿಗೆ ನನಗೆ ಅತ್ತೆ ಮತ್ತು ನಾದಿನಿ ತೊಂದರೆ ಕೊಡುತ್ತಿದ್ದ ಬಗ್ಗೆ ತಿಳಿಸಿದಾಗ ಅವರು ಸಹಾ ಅವರಿಗೆ ಹೊಂದಿಕೊಂಡು ಹೋಗು ನಿನಗೆ ಸರಿಯಾಗಿ ಕೆಲಸ ಮಾಡಲು ಬರುವುದಿಲ್ಲಾ ನೀನು ಸರಿಯಾಗಿ ಇರುವುದಿಲ್ಲಾ ಅಂತಾ ಬೈಯ್ಯಲು ಸುರು ಮಾಡಿದರು. ನಂತರ 5 ತಿಂಗಳ ಹಿಂದೆ ನನ್ನ ಗಂಡ ಮತ್ತು ಮಾವ ಹಾಗು ಅತ್ತೆ ನಾದಿನಿ ಕೂಡಿಕೊಂಡು ನೀನು ವರದಕ್ಷಣೆ ಕಡಿಮೆ ತಂದಿರುವಿ. ಈಗ ನಮಗೇ 1 ಲಕ್ಷ ರೂಪಾಯಿ ಹಣ ಅವಶ್ಯಕತೆ ಇದೆ ನೀನು ನಿನ್ನ ತವರು ಮನೆಯಿಂದ ತರಿಸಿಕೊಡುವಂತೆ ಹೇಳಿದಾಗ ನಾನು ಅವರಿಗೆ ನನಗೆ ಕೋಡಬೇಕಾದ 2 ಲಕ್ಷ ರೂಪಾಯಿ ಮತ್ತು 4 ತೋಲಿ ಬಂಗಾರ ಕೊಟ್ಟಿದ್ದು ಇರುತ್ತದೆ. ಸದ್ಯ ನನ್ನ ತವರು ಮನೆಯವರು ಹಣ ಕೊಡುವುದು ಆಗುವುದಿಲ್ಲಾ ಅಂತಾ ಅಂದಿದ್ದಕ್ಕೆ ನನ್ನ ಮಾವ ಅಬ್ದುಲ್ ರಹೀಮ್ ಇತನು ಮಾರೋ ಸಾಲಿಕೋ ಹಮಾರೆಕು ಉಲ್ಟಾ ಜವಾಬ್ ದೇತಿ ಅಂದಾಗ ನನ್ನ ಗಂಡ ಕೈಯಿಂದ ನನ್ನ ಎಡ ಕಪಾಳಕ್ಕೆ ಹೊಡೆದಾಗ ನನ್ನ ಅತ್ತೆ ಜರೀನಾಬೇಗಂ ಮತ್ತು ನಾದಿನಿ ನಾಜಿಯಾಫಾತಿಮಾ ಇವರು ನನ್ನ ಕೂದಲು ಹಿಡಿದು ಎಳೆದಾಡಿ ಬೆನ್ನಿನ ಮೇಲೆ ಹೊಡೆದು ದೈಹಿಕ ಮತ್ತು ಮಾನಸಿಕವಾಗಿ ತೊಂಡರೆ ಕೊಟ್ಟಾಗ ನಾನು ಈ ವಿಷಯವನ್ನು ನನ್ನ ಅತವರು ಮನೆಗೆ ಹೇಳಿ ಕಳುಹಿಸಿದಾಗ ನನ್ನ ತಾಯಿಯವರು ಅಬ್ದುಲ್ ರಹೀಮ್ ಶಿಕ್ಷಕರು ಪಾಯನಗಲ್ಲಿ ಮತ್ತು ಮಹ್ಮದ ಮುನೀರ ಅಹ್ಮದ ಸಾ: ಯಾದುಲ್ಲಾ ಕಾಲನಿ ಕಲಬುರಗಿ, ಮೋಶಿನ ತಂದೆ ಇಬ್ರಾಹಿಂಸಾಬ ಹಾಗು ತನವೀರ ತಂದೆ ಅಬ್ದುಲ್ ರಶೀದ ರವರನ್ನು ನನ್ನ ಗಂಡನ ಮನೆಗೆ ಕರೆದುಕೊಂಡು ಬಂದು ನನ್ನ ಗಂಡ ಮತ್ತು ಅವರ ಮನೆಯವರಿಗೆ ತಿಳುವಳಿಕೆ ನೀಡಿ ನನಗೆ ತೊಂದರೆ ಕೋಡಬೇಡಿರಿ ಅಂತಾ ತಿಳಿಸಿ ಹೊರಟು ಹೋದರು. ನಂತರ ನನ್ನ ಗಂಡ ಮತ್ತು ಅತ್ತೆ ಮಾವ, ನಾದಿನಿ ಎಲ್ಲರೂ ಕೂಡಿ ನನಗೆ ನೀನು ನಮ್ಮ ಮನೆಯ ವಿಷಯವನ್ನು ತವರು ಮನೆಗೆ ಹೇಳುತ್ತಿ ಅಂತಾ ನನಗೆ ಅಂದಿನಿಂದ ಮತಷ್ಟು ತೊಂದರೆ ಕೊಡುತ್ತಾ ಬಂದಿದ್ದು ಅಲ್ಲದೇ ದಿನಾಂಕ:-19/06/2016 ರಂದು ಮುಂಜಾನೆ 10:00 ಗಂಟೆಗೆ ಮೆನಯಲ್ಲಿ ನನ್ನ ಗಂಡ ಮಹಮ್ಮದ ಅಸ್ಪಾಕ್ ಪರವೇಜ್, ಮತ್ತು ಅತ್ತೆ ಜರೀನಾಬೇಗಂ, ಮಾವ ಅಬ್ದುಲ್ ರಹಿಮಾನ್ ಎಲ್ಲರೂ ಕೂಡಿಕೊಂಡು ನನಗೆ ತು 1 ಲಾಕ್ ರೂಪಾಯಿ ಲಾಕೇ ಮೇರಾ ಘರಕು ಆ ನಹಿತೋ ತುಮಕೋ ಜಾನಸೇ ಮಾರಕೆ ಪೆಕತು ಅಂತಾ ನನ್ನ ಗಂಡ ಮತ್ತು ಮಾವ ಕೈಯಿಂದ ಹೊಡೆದು ನನ್ನ ಅತ್ತೆ ಮತ್ತು ನಾದಿನಿ ಇವರು ಬೇಜದೋ ಸಾಲಿಕೋ ದುಸರಾ ಶಾದಿ ಕರಾಲೆಂಗೆ ಅಂತಾ ನನಗೆ ಕೂದಲು ಹಿಡಿದು ಎಳೆದು ಮನೆಯಿಂದ ಹೊರಗೆ ಹಾಕಿರುತ್ತಾರೆ . ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದವರ ಬಂಧನ :
ರಾಘವೇಂದ್ರರ ನಗರ ಠಾಣೆ : ದಿನಾಂಕ 27-06-2016 :ರಂದು ಗಂಗಾನಗರ ಬಡಾವಣೆಯಲ್ಲಿರುವ ಸಾರ್ವಜನಿಕ ಶೌಚಾಲಯದ ಹಿಂದೆ ಖುಲ್ಲಾ ಜಾಗೆಯಲ್ಲಿ ಇಬ್ಬರೂ ಯುವಕರೂ  ಅನಧಿಕೃತವಾಗಿ ಮದ್ಯಾಪಾನ ಇಟ್ಟುಕೊಂಡು ಯಾವುದೆ ಪರವಾನಿಗೆ ಇಲ್ಲದೆ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಶ್ರೀ ಡಬ್ಲೂ.ಹೆಚ್‌‌.ಕೊತ್ವಾಲ್‌ ಪಿ.ಎಸ್‌‌.ಐ ರಾಘವೇಂದ್ರ ನಗರ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ದಾಳಿ ಮಾಡಿ ಹೀಡಿದು ಅವರ ಹೆಸರು ವಿಳಾಸ ವಿಚಾರಿಸಲು ಅವರು ತಮ್ಮ ತಮ್ಮ  ಹೆಸರು 1)ಬಾಬುರಾವ ತಂದೆ ಚಂದ್ರಶಾ ಡಿಗ್ಗಿ ಸಾ:ಚೌಡೇಶ್ವರ ಕಾಲೋನಿ ಕಲಬುರಗಿ 2) ಶರಣಪ್ಪಾ ತಂದೆ ಗುಂಡಪ್ಪಾ ಕೂಡಿ ಸಾ:ಗಂಗಾನಗರ ಕಲಬುರಗಿ ಅಂತಾ ತಿಳಿಸಿದನು. ಸದರಿಯವರಿಂದ ಒಟ್ಟು ಅ.ಕಿ.1284/-ರೂ ಬೆಲೆಬಾಳುವ ಮಧ್ಯದ ಪಾಕೇಟಗಳು ಹಾಗೂ ನಗದು ಹಣ 600/-ರೂ  ಗಳನ್ನು ಜಪ್ತ ಮಾಡಿಕೊಂಡು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.