ಪ್ಯಾಕ್ಟರಿಯಲ್ಲಿ ಕೆಲಸ ಮಾಡುವ ಕೆಲಸಗಾರ ಸಾವು:
ನಿಂಬರ್ಗಾ ಪೊಲೀಸ ಠಾಣೆ.ಶ್ರೀ ಮಹ್ಮದ ಹಬೀಬ ತಂದೆ ಅಬ್ದುಲ ಹಮೀದ ಸೈಫಿ ವ|| 23 ವರ್ಷ, ಉ|| ಮೆಕ್ಯಾನಿಕಲ ಫಿಟರ, ಜಾ|| ಮುಸ್ಲಿಂ,
ಸಾ||
ಧನಿಯಾನ , ತಾ|| ಬುಡಾನ,
ಜಿ||
ಮುಜಾಫರ ಜಗರ,ರಾಜ್ಯ
|| ಉತ್ತರ ಪ್ರದೇಶ ನಾನು ಹಾಗೂ ಅವರ ಚಿಕ್ಕಪ್ಪನ ಮಗನಾದ ಸಲ್ಮಾನ ತಂದೆ ನಫೀಜ
ಸೈಫಿ ಇವರು ಸುಮಾರು 20 ದಿವಸಗಳಿಂದ ಎನ.ಎಸ.ಎಲ ಸುಗರ ಪ್ಯಾಕ್ಟರಿಯಲ್ಲಿ ಎಸ್.ಎ ಇಂಜನಿಯರಿಂಗ
ರವರು ಗುತ್ತಿಗೆ ತೆಗೆದುಕೊಂಡಿರುವ ಕ್ಯಾರಿಯರನ ಕೆಲಸದಲ್ಲಿ ತೊಡಗಿದಾಗ ದಿನಾಂಕ04/05/2012 ರಂದು 1930 ಗಂಟೆ ಸುಮಾರಿಗೆ ಕ್ಯಾರಿಯರನ ಬೆಲ್ಟ
ಬದಲಾಯಿಸುತ್ತಿರುವಾಗ ಕೆಳಗೆ ಬಿದ್ದು, ಈ ಘಟನೆಯು
ಎಸ್.ಎ ಇಂಜನಿಯರಿನ ಮಾಲೀಕರಾದ ಇಲಿಯಾಸ ಸೈಫಿ , ಸೈಟ ಇಂಚಾರ್ಜ ಆದ ಇಮ್ರಾನ ಖಾನ ಸೈಫಿ
ಮತ್ತು ಸುಪರವೈಸರ ಆದ ಮಹ್ಮದ ಮೈನೊದ್ದಿನ ಖಾನ ಸಾಬ ಇವರುಗಳ ನಿರ್ಲಕ್ಷತನದಿಂದ ಜರುಗಿದ್ದು ಆಳಂದ
ಸರ್ಕಾರಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಾ ಮೃತಪಟ್ಟಿರುತ್ತಾನೆ. ಅಂತ ದೂರು ಸಲ್ಲಿಸಿದ
ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 33/2012 ಕಲಂ 287,
304(ಎ), 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ಅಪಹರಣ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ:ಶ್ರೀ
ಶಂಕರ ತಂದೆ ಶರಣಪ್ಪ ಕಿಲೇದಮನಿ ಸಾ || ಇಜೇರಿ ರವರು
ನನ್ನ ತಂಗಿಯಾದ ಮಲ್ಲಮ್ಮ ವಯ|| 16 ವರ್ಷ ಇವಳನ್ನು ನಮ್ಮ ಓಣಿಯ ಶಿವಪ್ಪ ತಂದೆ
ಹಣಮಂತ ಇತನು ದಿನಾಂಕ 17-03-2012 ರಂದು ರಾತ್ರಿ 00-30 ಗಂಟೆಗೆ ನಮ್ಮ
ಮನೆಯ ಅಂಗಳದಲ್ಲಿ ಮಲಗಿಕೊಂಡ ನನ್ನ ತಂಗಿಗೆ ಬಲವಂತವಾಗಿ ಮೋಟರ ಸೈಕಲ ಮೇಲೆ ಅಪಹರಿಸಿಕೊಂಡು
ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:63/12 ಕಲಂ 366 (ಎ) ಐ;.ಪಿ.ಸಿ ಅಡಿಯಲ್ಲಿ ಗುನ್ನೆ
ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆ ಪ್ರಕರಣ:
ಅಶೋಕ
ನಗರ ಪೊಲೀಸ್ ಠಾಣೆ: ಶ್ರೀ ಮಾಣಿಕಪ್ಪ
ತಂದೆ ಈರಪ್ಪ ಮರಕುಂದಿ ಸಾ: ಕಾಡವಾರ ತಾ:ಜಿ:ಬೀದರ ರವರು ನನ್ನ ಮಗಳಾದ ಶೋಭಾವತಿ ಇವಳಿಗೆ ನಮ್ಮ ಸಂಬಂಧಿಕ
ವಿಜಯಕುಮಾರ ಇವರೊಂದಿಗೆ ಮದುವೆ ಮಾಡಿಕೊಟ್ಟಿದ್ದು ಅಳಿಯ ವಿಜಯಕುಮಾರ ಬುದ್ದಿಮಾಂಧ್ಯ ಇರುವದರಿಂದ ಅವಳು ಗಂಡನನ್ನು ಬಿಟ್ಟು ತವರು ಮನೆಯಲ್ಲಿ ಇರುತಿದ್ದಳು. ರಾಜಕುಮಾರ ತಂದೆ
ಮಾಣಿಕಪ್ಪ ಪಾತರಪಳ್ಳಿ ಇತನು ಬೀದರದಲ್ಲಿ ಅಂಗವಿಕಲ ಸಂಘದ ಅಧ್ಯಕ್ಷನಾಗಿದ್ದು, ನನ್ನ ಮಗಳು ಶೋಭಾವತಿಗೆ
ನೌಕರಿ ಕೊಡಿಸುವದಾಗಿ ಗುಲಬರ್ಗಾಕ್ಕೆ ಕರೆ ತಂದು ಇಬ್ಬರೂ ಗಂಡ ಹೆಂಡತಿ ಇದ್ದಿವಿ ಅಂತಾ ಸುಳ್ಳು
ಹೇಳಿ ಬಾಡಿಗೆ ಮನೆ ಮಾಡಿಕೊಂಡಿರುತ್ತಾರೆ, ಈಗ 2-3 ದಿವಸಗಳಿಂದ ಅವಳೊಂದಿಗೆ ಜಗಳ ಮಾಡುತ್ತ ದಿನಾಂಕ:04/05/12 ರಂದು ರಾತ್ರಿ 8-9 ಗಂಟೆ ಸುಮಾರಿಗೆ ಬಂಗಾರ ಗಿರಿವಿ
ಇಟಿದ್ದ ವಿಷಯದ ಬಗ್ಗೆ ಜಗಳ ಮಾಡಿಕೊಂಡು ವಿದ್ಯಾನಗರದಲ್ಲಿರುವ ಬಾಡಿಗೆ ರೂಂನಲ್ಲಿ ಶೋಭಾವತಿ ಇವಳ
ಮೈಮೇಲೆ ಸಿಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರುತ್ತಾನೆ. ಬೆಂಕಿ ಹಚ್ಚುವಾಗ ಆತನ ಕೈಗು
ಸಹ ಸುಟ್ಟ ಗಾಯಗಳಾಗಿವೆ ಅಂತಾ ಮನೆ ಮಾಲಿಕ ಹೇಳಿದರಿಂದ ವಿಷಯ ಗೊತ್ತಾಗಿರುತ್ತದೆ. ರಾಜಕುಮಾರ ಈತನಿಗೆ ಸತೀಶ ಅರ್ಜುನ ಬರೂರ ಎನ್ನೂವವರು
ಸಹಾಯ ಮಾಡಿದ್ದು ಈ ಕೋಲೆಯಲ್ಲಿ ಅವರ ಕೈವಾಡವು ಇರುತ್ತದೆ ಅಂತಾ ದೂರು ಸಲ್ಲಿಸಿದ ಸಾರಾಂಶದ
ಮೇಲಿಂದ ಠಾಣೆ ಗುನ್ನೆ ನಂ:34/2012 ಕಲಂ:302,109 ಸಂ:34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಕೊಂಡಿರುತ್ತಾರೆ.