POLICE BHAVAN KALABURAGI

POLICE BHAVAN KALABURAGI

13 January 2014

Gulbarga District Reported Crimes

ಮಹಿಳಾ ಪೊಲೀಸ ಠಾಣೆ:
ಫಿರ್ಯಾದಿದಾರರಾದ ಶ್ರೀಮತಿ ಬ್ರೀಜಿತ ನೀತಾ ಗಂಡ ಪ್ರವೀಣ ಎಂಡ್ರೀಸ್ ಲೊಂದೆ ವಯ 26 ವರ್ಷ ಮನೆಕೆಲಸ ಸಾ;ಮೇಥೊಡಿಸ್ಟ ಇವರು ಠಾಣೆಗೆ ಹಾಜರಾಗಿ ಲಿಖಿತ ಪಿರ್ಯಾದಿ ಸಲ್ಲಿಸಿದ ಸಾರಾಂಶವೆನೆಂದರೆ ಮಿರಜನ್ ಪ್ರವೀಣಕುಮಾರ ಎಂಡ್ರೀಸ್  ಲೊಂದೆ ಇತನ ಜೊತೆಗೆ ತಮ್ಮ ತಂದೆ ತಾಯಿಯವರು ಸಂಪ್ರದಾಯದಂತೆ ಮದುವೆ ಮಾಡಿದ್ದು ಮದುವೆ ಕಾಲಕ್ಕೆ ವರನಿಗೆ ವರದಕ್ಷಿಣೆ ಅಂತಾ 10 ತೊಲೆ ಬಂಗಾರ 50 ಸಾವಿರ ರೂಪಾಯಿ ನಗದು ಹಣ ಮತ್ತು ಸುಮಾರು 3 ಲ್ಷ ರೂಪಾಯಿ ಗೃಹ ಬಳಕೆಯ ಸಾಮಾನುಗಳು ಕೊಟ್ಟಿದ್ದು ಇರುತ್ತದೆ. ನನ್ನ ಗಂಡನ ಮನೆಯಲ್ಲಿ ಗಂಡ ಪ್ರವೀಣಕುಮಾರ ಎಂಡ್ರೀಸ್ ಲೊಂದೆ ಅತ್ತೆ ಕಮಲ್,ನಾದಿನಿ ರೂಪಾಲಿ ಮೈದುನರಾದ ಆಶೀಶ್  ಪ್ರಶಾಂತ ಸಾ: ಎಲ್ಲರೂ ಬಂಗಲೋ ನಿಪ್ಪಾಣಿಕರ್ ಕಾಲೋನಿ ಮಿರಜ್ ಇವರೆಲ್ಲರೂ ಕೂಡಿ ಇನ್ನ ತವರು ಮನೆಯಿಂದ ಇನ್ನು 5 ತೊಲೆ ಬಂಗಾರ 50 ಸಾವಿರ ರೂಪಾಯಿಗಳು ತಂದು ಕೊಡಲು ಮಾನಸಿಕ ದೈಹಿಕ ಕಿರುಕುಳ ಕೊಡಲು ಪ್ರಾರಂಬಿಸಿದರು. ವಿನಾಕಾರಣ ನನ್ನೊಂದಿಗೆ ಹೊಡೆಬಡೆ ಮಾಡುವುದು ಅವಾಚ್ಯ ಶಬ್ದಗಳಿಂದ ಬೈಯ್ಯುವುದು ಮಾಢುತ್ತಿದ್ದರು. ಈ ವಿಷಯವನ್ನು ನಾನು ನಮ್ಮ ತಂದೆತಾಯಿಯವರಿಗೆ ತಿಳಿಸಿದಾಗ ನಮ್ಮ ತಂದೆ 5 ತೊಲೆ ಬಂಗಾರ ಮತ್ತು 50 ಸಾವಿರ ರೂಪಾಯಿ ತಂದು ಕೊಟ್ಟರು. ಮದುವೆಯಾದ 2 ವಾರದ ನಂತರ ನನ್ನ ಗಂಡನಾದ ಪ್ರವೀಣ ಲೊಂದೆಯವರು ಲಂಡನಿನ ಸ್ಕ್ಟಾಟ ಲ್ಯಾಂಡನಲ್ಲಿ ಉದ್ಯೋಗಕ್ಕಾಗಿ ಹೋಗುವುದಕ್ಕಾಗಿ ಹೇಳಿದರು. ನನ್ನ ಗಂಡನು ಸ್ಕ್ಟಾಟ್ ಲ್ಯಾಂಡನಿಂದ ಫೋನ್ ಕರೆ ಮಾಡಿದಾಗಲೆಲ್ಲ ಅತ್ತೆ, ನಾದನಿ ಹಾಗೂ ಮೈದುನರೇ ಮಾತನ್ನಾಡುತ್ತಿದ್ದರು. ನನ್ನನ್ನು ನನ್ನ ಗಂಡನ್ನೊಂದಿಗೆ ಮಾತನ್ನಾಡಲು ಕೊಡುತ್ತಿರಲಿಲ್ಲ.    ನನ್ನ ಅತ್ತೆ, ನಾದಿನಿ ಹಾಗೂ ಮೈದುನರ ಕಿರುಕುಳ ತಾಳಲಾರದೇ ನನ್ನ ತಂದೆ ತಾಯಿಯವರು ಫೋನ್ ಮೂಲಕ ತಿಳಿಸಿದ್ದರಿಂದ ನನ್ನ ತಂದೆ ತಾಯಿಯವರು ಮಿರಜಕೆ   ಬಂದು ಗಂಡನ ತಾಯಿ, ತಂಗಿ, ಅಣ್ಣಂದಿರರಿಗೆ ನನಗೆ ಕಿರುಕುಳ ಕೊಡಬೇಡಿ ಎಂದು ಹೇಳಿದ್ದಕ್ಕೆ ನನ್ನ ತಂದೆ ತಾಯಿಗಳಿಗೂ ಕೂಡ ಅವಾಚ್ಯ ಶಬ್ದಗಳಿಂದ ಬೈದು ನನ್ನ ಮಗ ಲಂಡನನಲ್ಲಿ ಕೆಲಸ  ಮಾಡುತ್ತಿದ್ದಾನೆ. ಕೈ ತುಂಬ ಸಂಬಳ ಪಡೆಯುತ್ತಿದ್ದಾನೆ. ನಿನ್ನ ಮಗಳು ಸುಖವಾಗಿ ಇರಬೇಕಾದರೆ ಹಾಗೂ ನನ್ನ ಮಗನ ಹತ್ತಿರ ಕಳುಹಿಸಬೇಕೆಂದರೆ ಇನ್ನೂ 3 ಲಕ್ಷ ರೂಪಾಯಿ ತಂದು ಕೊಡಿ ಇಲ್ಲಾ ಅಂದರೆ ನಿಮ್ಮ ಮಗಳನ್ನು ಕರೆದುಕೊಂಡು ಹೋಗಿ ಎಂದು ಬೈದು ನನ್ನನ್ನು ಎಲ್ಲರೂ ಸೇರಿ ಹೊಡೆದು ನನ್ನ ತಂದೆ ತಾಯಿಯವರೊಂದಿಗೆ ಮನೆಯಿಂದ ಹೊರ ಹಾಕಿದರು. ನನ್ನ ಅತ್ತೆ ಕಮಲ್ ಮೈದುನರಾದ ಆಶೀಸ್ ಮತ್ತು ಪ್ರಶಾಂತ ಬಂದುದ್ದೇ ನನ್ನ ತಾಯಿ ಮೇಲೆ ಜಗಳಕ್ಕೆ ಬಿದ್ದು ಹೊಡೆ ಬಡೆ ಮಾಡಿ  ನನ್ನ ಮೈದುನರು ನನ್ನ ತಾಯಿಗೆ ಕೈಯಿಂದ ಬೆನ್ನಿನ ಮೇಲೆ ಮತ್ತು ಬೂಟು ಕಾಲಿನಿಂದ ಒದೆಯುತ್ತಿದ್ದರು. ಅದೇ ಸಮಯಕ್ಕೆ ನಾನು ಹೋಗಿ ನನ್ನ ತಾಯಿಯನ್ನು ಬಿಡಿಸಲು ಹೋದಾಗ ನನ್ನನ್ನು ಹೊಡೆ ಬಡೆ ಮಾಡಿದರು. ಅಷ್ಟರಲ್ಲಿ ಅಕ್ಕ ಪಕ್ಕದವರಾದ ಶ್ರೀ ರುಜೀನ್ ಮಲ್ಲಪ್ಪ ಮತ್ತು ಶ್ರೀ ಜಗದೀಶ ಪಿ. ನಾಡರ್ ಅವರು ಬಂದು ಬಿಡಿಸಿದರು ನಂತರ ನಾನು ನಮ್ಮ ತಂದೆ ತಾಯಿ ಹಿರಿಯರೆಲ್ಲರಿಗೂ ವಿಚಾರಿಸಿ ಬಂದು ಫಿರ್ಯಾದಿ ಸಲ್ಲಿಸುತ್ತಿದ್ದೇನೆ. ಅಂತಾ ನೀಡಿದ ಲಿಖಿತ ಫಿರ್ಯಾದಿ ಮೇಲಿಂದ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು
                                                                                                                   

ಸೇಡಂ ಪೊಲೀಸ್ ಠಾಣೆ:

ಸೇಡಂ ಸರಕಾರಿ ಆಸ್ಪತ್ರೆಯಿಂದ ಆರ್.ಟಿ.ಎ ಎಮ್.ಎಲ್.ಸಿ ತಿಳಿಸಿದ ಮೇರೆಗೆ ನಾನು ಆಸ್ಪತ್ರೆಗೆ ಹೋಗಿ ಗಾಯಾಳು ಫಿರ್ಯಾದಿ, ಪುಂಡಾರೆಡ್ಡಿ ತಂದೆ ಕಾಶಿನಾಥರೆಡ್ಡಿ ಭೂತಪೂರ ವಯ:31 ವರ್ಷ, ಒಕ್ಕಲುತನ, ಸಾ:ಹಾಬಾಳ(ಟಿ) ಗ್ರಾಮ, ಇವರ ಹೇಳಿಕೆ ಪಡೆದುಕೊಂಡಿದ್ದು ಅದರ ಸಾರಂಶವೇನೆಂದರೆ,  ನಮ್ಮೂರಿಂದ ಮೋಟಾರು ಸೈಕಲ್ ನಂ-KA32-V-4906 ನೇದ್ದರ ಮೇಲೆ ನಾನು ಮತ್ತು ನನ್ನ ಹೆಂಡತಿಯಾದ ನಿರ್ಮಲಾ ಹಾಗೂ ನನ್ನ ಮಗಳಾದ ಸುರೇಖಾ ಮೂರು ಜನರು ಕುಳಿತು ಸೇಡಂಕ್ಕೆ ಬರುತ್ತಿರುವಾಗ ಬಿಬ್ಬಳ್ಳಿ ಕ್ರಾಸ್ ಹತ್ತಿರ ಬಂದಾಗ ಎದುರುಗಡೆಯಿಂದ ಟಂ-ಟಂ ಚಾಲಕನು ತನ್ನ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ನಮ್ಮ ವಾಹನಕ್ಕೆ ಡಿಕ್ಕಿ ಪಡೆಯಿಸಿದರಿಂದ ನಾವು ಮೂರು ಜನರು ಮೋಟಾರು ಸೈಕಲನಿಂದ ಕೆಳಗೆ ಬಿದ್ದೇವು ನನಗೆ ತಲೆಯ ಹಿಂಭಾಗಕ್ಕೆ ತಲೆಗೆ ರಕ್ತಗಾಯವಾಗಿರುತ್ತದೆ. ಎದೆಗೆ ಗುಪ್ತಗಾಯವಾಗಿರುತ್ತದೆ. ನನ್ನ ಮಗಳು ಸುರೇಖಾ ಇವಳಿಗೆ ಬಲಗಣ್ಣಿನ ಹತ್ತಿರ ಬಲಗಲ್ಲಕ್ಕೆ ತರಚಿದ ಗಾಯವಾಗಿರುತ್ತದೆ. ನನ್ನ ಹೆಂಡತಿ ನಿರ್ಮಲಾ ಇವಳಿಗೆ ತಲೆಗೆ ಭಾರಿ ಗುಪ್ತಗಾಯವಾಗಿ ಎರಡೂ ಕೈಕಾಲುಗಳಿಗೆ, ಭಾರಿ ಗುಪ್ತ ಪೆಟ್ಟಾಗಿರುತ್ತದೆ. ಈ ಘಟನೆ ಜರುಗಿದಾಗ ಟಂ-ಟಂ ಚಾಲಕ ಇದನ್ನು ನೋಡಿ ತನ್ನ ವಾಹನ ಅಲ್ಲಿಯೇ ಬಿಟ್ಟು ಓಡಿಹೋಗಿರುತ್ತಾನೆ. ಟಂ-ಟಂ ವಾಹನದ ನಂಬರ್ ನೋಡಲಾಗಿ KA32-C-0871  ನೇದ್ದು ಇದ್ದು ಅದೇ ಸಮಯಕ್ಕೆ ನಮ್ಮ ಗ್ರಾಮದ ಕಮ್ಮಣ್ಣ ದೇಸಾಯಿ, ಉಮೇಶ ನಿರಂಜಿ ಇವರು ಮೋಟಾರು ಸೈಕಲ್ ಮೇಲೆ ಬಂದು ನಮಗೆ ನೋಡಿ ಓಡಿ ಹೋದ ಚಾಲಕನನ್ನು ನೋಡಿದ್ದು, ಚಾಲಕನ ಹೆಸರು ಹಣಮಂತರಾಯ ಪಾಟೀಲ್ ಇರುತ್ತದೆ. ನಾವು ಬೇರೆ ಯಾವುದೊ ಜೀಪಿನಲ್ಲಿ ಬಂದು ಆಸ್ಪತ್ರೆಗೆ ಸೇರಿಕೆಯಾಗಿರುತ್ತೇವೆ, ಕಾರಣ ಸದರಿ ಟಂ-ಟಂ ಚಾಲಕನ ವಿರುದ್ಧ  ಕಾನೂನು ಕ್ರಮ ಜರುಗಿಸುವಂತೆ ವಿನಂತಿಸಿಕೊಂಡ ಮೇರೆಗೆ, ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.ನಂತರ ಫಿರ್ಯಾದಿ ಪುಂಡಾರೆಡ್ಡಿ ತಂದೆ ಕಾಶಿನಾಥರೆಡ್ಡಿ ಭೂತಪೂರ ವಯ:31 ವರ್ಷ, ಉ:ಒಕ್ಕಲುತನ, ಸಾ:ಹಾಬಾಳ(ಟಿ) ಗ್ರಾಮ, ತಾ:ಸೇಡಂ ಇವರು ಠಾಣೆಗೆ ಹಾಜರಾಗಿ ಪುರವಣಿ ಹೇಳಿಕೆ ನೀಡಿದ್ದೇನೆಂದರೆ, ತನ್ನ ಹೆಂಡತಿ ನಿರ್ಮಲಾ ಇವಳಿಗೆ ಹೆಚ್ಚಿನ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಗುಲಬರ್ಗಾಕ್ಕೆ ತೆಗೆದುಕೊಂಡು ಹೋಗುವಾಗ ಮಾರ್ಗಮಧ್ಯೆದಲ್ಲಿ  ಮೃತಪಟ್ಟಿರುತ್ತಾಳೆ ಅಂತ ಮರಳಿ  ಸೇಡಂ ಸರಕಾರಿ ಆಸ್ಪತ್ರೆಗೆ ಬಂದಿದ್ದು ಇರುತ್ತದೆ. ಅಂತ ವಗೈರೆ ಕೊಟ್ಟ ಪುರವಣಿಕೆ ಹೇಳಿಕೆ ಸಾರಂಶದ ಮೇಲಿಂದ ಸದರಿ ಪ್ರಕರಣದಲ್ಲಿ ಕಲಂ-304(ಎ) ಐಪಿಸಿ ಅಳವಡಿಸಿಕೊಂಡಿದ್ದು. ಕಾರಣ ಸದರಿ ಪ್ರಕರಣವು ಘೋರ ಸ್ವರೂಪದ್ದಾಗಿದ್ದರಿಂದ ಶೀಘ್ರ ವರದಿ ತಯಾರಿಸಿ ಮಾನ್ಯರವರಲ್ಲಿ ಈ-ಮೇಲ್ ಮುಖಾಂತರ ನಿವೇದಿಸಿಕೊಂಡಿದ್ದು ಇರುತ್ತದೆ.


 ಮಳಖೇಡ ಪೊಲೀಸ ಠಾಣೆ:
ಫಿರ್ಯಾದಿದಾರಳು ತನ್ನ ಗಂಡನೊಮದಿಗೆ ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ಬರೆಯಿಸಿದ್ದು ಸಾರಾಂಶವೆನೆಂಧರೆ ಫಿರ್ಯಾದಿದಾರಳು ಸುಮಾರಿಗೆ ತನ್ನ ಹೋಲಕ್ಕೆ ಹೋಗುತ್ತಿದ್ದಾಗ ತನ್ನ ಊರಿನವನೆ    ಆದ ಲಾಲಪ್ಪ ಸಾ|| ತೊಟ್ನಳ್ಳಿ ಈತನು ತನ್ನ ಮೊಟಾರು ಸೈಕಲ್ ನಂ ಕೆ.ಎ-32 ಎಕ್ಸ್ 5899 ನೆದ್ದನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಹಿಂದುಗಡೆಯಿಂದ ಡಿಕ್ಕಿ ಪಡಿಸಿ ಟೊಂಕಕ್ಕೆ ಮತ್ತು ಬಲಕಪಾಳಕ್ಕೆ ಗುಪ್ತ ಪೆಟ್ಟು, ಬಲಗೈ ಮೋಳಕೈಗೆ ತರಚಿದ ಗಾಯ, ಬಲಗಾಲಿನ ಹೆಬ್ಬರಳು ಒಡೆದು ರಕ್ತ ಗಾಯ ಪಡಿಸಿದ್ದು, ಮತ್ತು ಸದರಿ ವಾಹನ ಚಾಲಕನು ತನ್ನ ವಾಹನವನ್ನು ಡಿಕ್ಕಿ ಪಡಿಸಿ ನಿಲ್ಲಿಸದೆ ನಡೆಸಿಕೊಂಡು ಹೋಗಿದ್ದು  ನಂತರ ನನ್ನ ಗಂಡನಿಗೆ ವಿಷಯವನ್ನು ತಿಳಿಸಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡು  ತಡವಾಗಿ ಠಾಣೆಗೆ ಬಂದು ಫಿರ್ಯಾದಿ ನೀಡಿದ್ದು ಸದರಿ ಆರೋಪಿತನ ವಿರುಧ್ಧ ಕಾನೂನು ಕ್ರಮ ಕೈಕೊಳ್ಳಬೇಕು”  ಅಂತ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.

ಮುಧೋಳ ಪೊಲೀಸ್ ಠಾಣೆ:
ಫಿರ್ಯಾದಿದಾರರಾದ   ರಾಜೇಂದ್ರ  ತಂದೆ ಲಕ್ಷ್ಮಣರಾವ  ತೊಗಳ ವ|| 37 ವರ್ಷ ಸಾ|| ಗೊಪನಪಲ್ಲಿ (ಬಿ) ಗ್ರಾಮತಾ|| ಸೇಡಂ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ಸಲ್ಲಿಸಿದ್ದೇನೆಂದರೆ ರಾತ್ರಿ 7:20 ಗಂಟೆ ಸುಮಾರಿಗೆ ನಾನು  ಮನೆಯಲ್ಲಿದ್ದಾಗ  ನಮ್ಮ ಅಕ್ಕ ಪಕ್ಕದ ಮನೆಯವರು ನಮ್ಮ ಅಣ್ಣನಾದ ರಾಮಚಂದ್ರ ತಂದೆ ಲಕ್ಷ್ಮಣರಾವ ಹಾಗೂ  ಇನ್ನೊಬ್ಬ  ವ್ಯಕ್ತಿ ಇಬ್ಬರೂ ಕೂಡಿ ನ ಮ್ಮ  ಅಣ್ಣನ   ಮೊಟಾರ ಸೈಕಲ  ನಂ.  ಎಪಿ-28 ಎಕೆ-0642 ನೇದ್ದರ ಮೇಲೆ  ಕುಳಿತು  ಖಂಡೇರಾಯನಪಲ್ಲಿ  ಯಿಂದ ಗೊಪನಪಲ್ಲಿ (ಬಿ)  ಗ್ರಾಮದ  ಕಡೆಗೆ  ಬರುವ ಅಂದಾಜು 1 ಕಿ ಮಿ ಅಂತರ  ರಸ್ತೆಯಲ್ಲಿ  ಬರುತ್ತಿದ್ದಾಗ ರಸ್ತೆ ಅಪಘಾತವಾಗಿ ಇಬ್ಬರಿಗೂ ಗಾಯಗಳಾಗಿರುತ್ತವೆ ಅಂತಾ ಮಾತಾಡುತ್ತಾ ಇರುವುದನ್ನು  ಕೇಳಿ ನಾನು ಹಾಗೂ  ಶಿವರಾಮುಲು ತಂದೆ ತುಳಜಯ್ಯ, ಅನೀಲ ತಂದೆ ಶಾಮುಲು ಇವರು ಕುಡಿ ಸದರಿ ಸ್ಥಳಕ್ಕೆ ಹೋಗಿ  ನೊಡಲು  ಖಂಡೇರಾಯನಪಲ್ಲಿ ಕಡೆಗೆ ಒಂದು ಎತ್ತಿನ ಗಾಡಿಯು ಬರುತ್ತಿದ್ದು ಇದಕ್ಕೆ ನಮ್ಮ ಅಣ್ಣನ ಹಿರೊ ಹೊಂಡಾ ಮೊಟಾರ ಸೈಕಲ ಡಿಕ್ಕಿ ಹೊಡೆದು ಸ್ಥಳದಲ್ಲಿ ಬಿದಿದ್ದು ಮತ್ತು ನಮ್ಮ ಅಣ್ಣನಾದ ರಾಮಚಂದ್ರ ಈತನಿಗೆ ಎಡಗೈ ಮೊಣಕೈ ಹತ್ತಿರ ರಕ್ತಗಾಯವಾಗಿದ್ದು ಹಾಗೂ ಹೊಟ್ಟೆಗೆ ಭಾರಿ ಪೆಟ್ಟಾಗಿ ರಕ್ತಗಾಯವಾಗಿದ್ದು ಮತ್ತು ಈತನ ಈ ಮೊದಲೆ ಕಟ್ಟಾಗಿರುವ ಬಲಗೈಗೆ ಪೆಟ್ಟಾಗಿ ರಕ್ತಗಾಯವಾಗಿತ್ತು ಹಾಗೂ ಸ್ಥಳದಲ್ಲಿ ಸುಸ್ತಾಗಿ ಬಿದಿದ್ದನು ಹಾಗೂ ಈತನ ಪಕ್ಕದಲ್ಲಿ ಆಶಪ್ಪ ಎನ್ನುವ ವ್ಯಕ್ತಿಯು ಗಾಯವಾಗಿ ಬಿದಿದ್ದು, ಈತನ ಬಲಭಾಗದ ಎದೆಗೆ ರಕ್ತಗಾಯವಾಗಿದ್ದು ಹಾಗೂ ಆಶಪ್ಪ ಈತನಿಗೆ ಈ ಘಟನೆ ಬಗ್ಗೆ ವಿಚಾರಿಸಲು ಹೇಳಿದ್ದೇನೆಂದರೆ ನಾನು ಹಾಗೂ ರಾಮಚಂದ್ರ ಇವರು ಕೂಡಿ ಹಿರೊ ಹೊಂಡಾ ಮೊಟಾರ ಸೈಕಲ ನಂ. ಎಪಿ-28 ಎಕೆ-0642 ನೇದ್ದರ ಮೇಲೆ ಕುಳಿತು ಖಂಡೇರಾಯನಪಲ್ಲಿ  ಯಿಂದ ಮುಧೋಳ ಕಡೆಗೆ ಹೊರಟಿದ್ದು ಖಂಡೇರಾಯನಪಲ್ಲಿಯಿಂದ ಗೊಪನಪಲ್ಲಿ ಕಡೆಗೆ ಬರುವ ಅಂದಾಜು 1 ಕೀ ಮಿ ಅಂತರದ ರಸ್ತೆಯಲ್ಲಿ ಬರುತ್ತಿದ್ದಾಗ ಸದರಿ ಮೊಟಾರ ಸೈಕಲ ನಡೆಸುತ್ತಿದ್ದ ರಾಮಚಂದ್ರ ಈತನು ಮೊಟಾರ ಸೈಕಲನ್ನು ಅತೀ ವೇಗ ಹಾಗೂ ನಿಸ್ಕಾಳಜಿತನದಿಂದ ನಡೆಸಿ ಎದುರುಗಡೆ ಬರುತ್ತಿದ್ದ ಎತ್ತಿನ ಬಂಡಿಗೆ ಡಿಕ್ಕಿ ಹೊಡೆದಾಗ ನಾವು ಮೊಟಾರ ಸೈಕಲ ಮೇಲಿಂದ ಕೆಳಗೆ ಬಿದ್ದಾಗ ನಮ್ಮಿಬ್ಬರಿಗೆ ಈ ರೀತಿ ಗಾಯಗಳಾಗಿರುತ್ತವೆ ಅಂತಾ ಹೇಳಿದನು. ಆಗ ನಾವು ಒಂದು ಅಂಬ್ಯುಲೇನ್ಸ ಗಾಡಿಯನ್ನುತಂದು ಅದರಲ್ಲಿ ಹಾಕಿಕೊಂಡು ಮೊದಲು ಗುಲಬರ್ಗಾದ ಮೇಡಿಕೇರ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದೇವು.ನಂತರ ನಮ್ಮ ಅಣ್ಣನಾದ ರಾಮಚಂದ್ರ ಈತನಿಗೆ ಹೆಚ್ಚಿನ ಉಪಚಾರ ಕುರಿತು ಹೈದರಾಬಾದದಲ್ಲಿರುವ ಉಸ್ಮಾನಿಯ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಸದರಿಯವನು ಉಪಚಾರ ಪಡೆಯುತ್ತಾ ಮೃತಪಟ್ಟಿರುತ್ತಾನೆ.ಸದರಿಯವನ ಮೇಲೆ ಕಾನೂನು ಪ್ರಕಾರ ಕ್ರಮ ಜರೂಗಿಸಬೇಕು ಎಂದು ಸಲ್ಲಿಸಿದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಮುಧೋಳ ಠಾಣೆ ಪ್ರಕರಣವನ್ನು ಧಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಅಂತಾ.


PÀªÀįÁ¥ÀÆgÀ ¥ÉưøÀ oÁuÉ:

ನಾನು ನಮ್ಮ ಮನೆಯ ಅಂಗಳದ ಮತ್ತು ನಮ್ಮ ದನಕಟ್ಟುವ ಜಾಗದ ಕಸ ಹೊಡೆಯುತ್ತಿದ್ದಾಗ  ನನ್ನ ತಮ್ಮ ಹಣಮಂತರಾಯನ ಹೆಂಡತಿ ಸರುಬಾಯಿ ಇವಳು ನನ್ನನ್ನು ನೋಡಿ  ಇಲ್ಲಿ  ಕಸ  ಹಾಕಬೇಡವೆಂದರೂ ಕೇಳುತ್ತಿಲ್ಲ  ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಿದ್ದಾಗ ನಾನು ಅವಳ ಮನೆಯ ಮುಂದೆ ಹೋಗಿ ನಿಂತು ನಾವುನಮ್ಮ  ಕಸವನ್ನು ನಮ್ಮ ತಿಪ್ಪಿಯಲ್ಲಿಯೇ  ಗುಂಡಿ ಮಾಡಿ ಹಾಕುತ್ತಿದ್ದೇವೆ, ನೀವೇ ಬೇಕಾಬಿಟ್ಟು  ಕಸ ಹಾಕುತ್ತಿದ್ದೀರಿ , ಮೊದಲು ನಿಮ್ಮ ಮನೆಯ ಕಸವನ್ನು  ಒಂದು ಕಡೆ ತಿಪ್ಪಿಗುಂಡಿ ಮಾಡಿ ಹಾಕೀರಿ ಅಂತಾ ಹೇಳಿ  ಮತ್ತೆ ನನ್ನ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದಾಗ ಸರುಬಾಯಿ ಇವಳು ಜೋರಾಗಿ ಕಿರುಚುಕೊಳ್ಳುತ್ತಾ ಮಗನೇ ನೀವು ನಮಗೆ ಬರಬೇಕಾದ ಪಾಲ ಕೊಡುತ್ತಿಲ್ಲ ಮತ್ತು  ಈಗ ನಮಗೆ ಎದುರುಮಾತನಾಡುತ್ತೀ  ಅಂತಾ ಚೀರಾಡುತ್ತಿದ್ದಾಗ ನನ್ನ ತಮ್ಮ ಹಣಮಂತರಾಯ ಮತ್ತು ಅವನ ಮಗಳಾದ ಪ್ರೀತಿ ಬಂದವರೇ ನನಗೆ ಅಡ್ಡಗಟ್ಟಿ ನಿಲ್ಲಿಸಿ ಅವರಲ್ಲಿ ನನ್ನ ತಮ್ಮ ಹಣಮಂತರಾಯ ಈತನು ನನ್ನ ಹೆಂಡತಿಗೆ ಬೈಯ್ಯುತ್ತೀ ಅಂತಾ ಅವಾಚ್ಯಶಬ್ದಗಳಿಂದ ಬೈಯ್ಯುತ್ತಾ  ನನ್ನೊಂದಿಗೆ ತೆಕ್ಕಿಮಸ್ತಿ ಮಾಡುತ್ತಾ ನನ್ನ ಎರಡೂ ಕೈಗಳನ್ನು  ಹಿಂದಕ್ಕೆ ಜೋರಾಗಿ ಹಿಡಿದುಕೊಂಡಿದ್ದು, ಅಷ್ಟರಲ್ಲಿ ಸರೂಬಾಯಿ ಇವಳು ಅಲ್ಲಿಯೇ ಅಂಗಳದಲ್ಲಿದ್ದ ಕೊಡಲಿಯನ್ನು ತೆಗೆದುಕೊಂಡು ಬಂದವಳೇ  ನನ್ನ ಎಡ ಭುಜದ ಹತ್ತಿರ , ಎಡಗಡೆ ಕುತ್ತಿಗೆಗೆ ಹೊಡೆದುರಕ್ತಗಾಯ ಪಡಿಸಿದ್ದು, ಆಗ ನಾನು ನನ್ನ ತಮ್ಮನಿಂದ ಬಿಡಿಸಿಕೊಂಡು ನನ್ನ ಮನೆಯಕಡೆಗೆ ಹೋಗುತ್ತಿದ್ದಾಗ  ಮತ್ತೇ  ಸರೂಬಾಯಿ ಇವಳು ತನ್ನ ಕೈಯಲ್ಲಿದ್ದ ಕೊಡಲಿಯಿಂದ  ನನ್ನ ತೆಲೆಗೆ ಹೊಡೆದು ರಕ್ತಗಾಯ ಪಡಿಸಿದಳು, ಅಷ್ಟರಲ್ಲಿ  ಪ್ರೀತಿ ಇವಳು ಅಲ್ಲಿಯೇ ಬಿದ್ದಿದ್ದ ಬಡಿಗೆಯಿಂದ ನನ್ನಎಡಗಡೆ ಭುಜದ ಹಿಂದುಗಡೆ ಹೊಡೆದು ಗುಪ್ತಗಾಯ ಪಡಿಸಿದಳು. ಆಗ ಅಲ್ಲಿಯೇ ಅಂಗಳದಲ್ಲಿದ್ದ ನನ್ನ  ಹೆಂಡತಿ ಮಂಗಲಾಬಾಯಿ ಇವಳು   ಜಗಳ ಬಿಡಿಸಲು ಬಂದರೆ ಅವಳಿಗೆ ಸರುಬಾಯಿ ಇವಳು ಅಡ್ಡಗಟ್ಟಿ ನಿಲ್ಲಿಸಿ ಅವಾಚ್ಯಬೈಯ್ದಾಡಿ ತೆಲೆ ಕೂದಲು ಹಿಡಿದು ಎಳೆದಾಡುತ್ತಿದ್ದಾಗ ಅಲ್ಲಿಯೇ ರಸ್ತೆಯ ಮೇಲೆ ಜಗಳ ನೋಡುತ್ತಾ ನಿಂತಿದ್ದ ನಮ್ಮೂರ ರೇವಣಸಿದ್ದಪ್ಪ ತಂದೆ ಶಿವರಾಯ  ಬಿಜಾಪೂರೆ ಇವರು ಬಂದು ಜಗಳ ಬಿಡಿಸಿ ಕಳುಹಿಸಿರುತ್ತಾರೆ.  ನನ್ನ  ತಮ್ಮ ಹಣಮಂತರಾಯ  ಈತನು  ಹೋಗುವಾಗ  ಇವತ್ತು  ನೀನು  ಬದುಕಿದ್ದೀಯಾ , ಇಲ್ಲದಿದ್ದರೇ  ನಿನ್ನನ್ನು  ಜೀವ ಸಹಿತ  ಬಿಡುತ್ತಿರಲಿಲ್ಲ  ಅಂತಾ ಜೀವದ  ಬೆದರಿಕೆ ಹಾಕುತ್ತಾ ಹೋಗಿರುತ್ತಾನೆ.  ನಂತರ ನಾವು ನಮ್ಮ  ಹಿರಿಯರಿಗೆ ವಿಚಾರಿಸಿ ಉಪಚಾರ ಕುರಿತು  ಗುಲಬರ್ಗಾದ ಬಸವೇಶ್ವರಆಸ್ಪತ್ರೆಗೆ ಬಂದು ಸೇರಿಕೆಯಾಗಿದ್ದು, ಸದ್ಯ  ಉಪಚಾರ ಪಡೆಯುತ್ತಿರುತ್ತೇವೆ. ನನ್ನ ಹೆಂಡತಿಗೆ ಆಸ್ಪತ್ರೆಗೆ ತೋರಿಸುವಂತಹ ಗಾಯಗಳು ಆಗಿಲ್ಲವಾದ್ದರಿಂದ  ಅವಳು  ಆಸ್ಪತ್ರೆಗೆ ತೋರಿಸಿಕೊಂಡಿರುವುದಿಲ್ಲ. ಕಾರಣ ನನಗೆಅಕ್ರಮವಾಗಿ  ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ  ಬೈಯ್ದು ಕೊಡಲಿಯಿಂದ ಮತ್ತು ಬಡಿಗೆಯಿಂದ  ಹೊಡೆದು  ರಕ್ತಗಾಯ  ಮತ್ತು  ಗುಪ್ತಗಾಯ ಪಡಿಸಿ  ಜೀವದ ಬೆದರಿಕೆ ಹಾಕಿದವರ  ವಿರುದ್ದ ಕಾನೂನು ಕ್ರಮ ಜರುಗಿಸಬೇಕು  ಅಂತಾ  ಹೇಳಿ ಬರೆಯಿಸಿದ  ಹೇಳಿಕೆ ಮೇಲಿಂದ ಗುನ್ನೆ ದಾಖಲಿಸಿಕೊಂಡು  ತನಿಖೆ ಕೈಕೊಂಡೆನು.