POLICE BHAVAN KALABURAGI

POLICE BHAVAN KALABURAGI

25 September 2017

KALABURAGI DISTRICT REPORTED CRIMES

ಆಕ್ರಮವಾಗಿ ಸಂಗ್ರಹಿಸಿದ್ದ  ಮರಳು ಜಪ್ತಿ :.
ಶಾಹಾಬಾದ ನಗರ ಠಾಣೆ : ದಿನಾಂಕ: 24.09.2017 ರಂದು ಮುತ್ತಗಾ ಸೀಮಾಂತರದ ಕಾಗಿಣಾ ನದಿಯಿಂದ ಮರಳು ಜಗ್ಗಿ ದಾಸ್ತಾನು ಮಾಡಿ ಕಳ್ಳತನದಿಂದ ಸಾಗಾಟ ಮಾಡಲು ಸಿದ್ದತೆ ಮಾಡುತ್ತಿದ್ದಾರೆಂದು ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಕಲ್ಯಾಣಿ ಎಎಸ್‌ಐ ಶಹಾಬಾದ ನಗರ ಠಾಣೆ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಳಳಕ್ಕೆ  ಹೋದಾಗ ಅನಸುಬಾಯಿ ಇವರ ಹೊಲದ ಹತ್ತಿರ ನದಿಯ ದಂಡೆಯಲ್ಲಿ  ನಾಲ್ಕು ಜನರು ನದಿಯಲ್ಲಿಯ ಮರಳು ಕಬ್ಬಣದ ಬಕೇಟಗಳಿಗೆ ಹಗ್ಗದ ಸಹಾಯದಿಂದ ಜಗ್ಗುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿಮಾಡಿದಾಗ ಮೂರು  ಜನರು ಮತ್ತು ಒಬ್ಬ ಮಹಿಳೆ ಓಡಿ ಹೋದರು. ಸ್ಥಳಕ್ಕೆ ಹೋಗಿ ಪಂಚರ ಸಮಕ್ಷಮ ಪರಿಶೀಲಿಸಿ ನೋಡಲು ಮೂರು ಕಬ್ಬಿಣದ ಬಕೇಟಗಳು ಅದಕ್ಕೆ  ಹಗ್ಗ ಜೋಡಿಸಿದ್ದು ಇವುಗಳ ಸಹಾಯದಿಂದ ನದಿಯಿಂದ ಮರಳು ದಾಸ್ತಾನು ಮಾಡಿದ್ದು ಇವುಗಳೆಲ್ಲವುಗಳ ಅ.ಕಿ  - 5000 ರೂ  & ಸ್ಥಳದಲ್ಲಿ ಅಂದಾಜು ಎರಡು ಬ್ರಾಸ್ ಮರಳು ಅ ಕಿ 2000 ರೂ ನೇದ್ದವುಗಳನ್ನು  ಜಪ್ತಿಮಾಡಿಕೊಂಡು ನಂತರ ಓಡಿ ಹೋದವರ ಬಗ್ಗೆ ವಿಚಾರಿಸಲಾಗಿ ತಿಳದು ಬಂದಿದ್ದೇನೆಂದರೆ. ಮುತ್ತಗಾ  ಗ್ರಾಮದ 1] ಸೂರ್ಯಾಕಾಂತ ತಂದೆ ಬಸವರಾಜ ಮಳ್ಳಿ 2] ಶರಣಗೌಡ ತಂದೆ ಬಸವರಾಜ ಮಾಲಿಪಾಟೀಲ 3] ಶಿವಯೋಗಿ ಕಡಬೂರ 4] ಅನಸುಬಾಯಿ ಅಂತಾ ಗೊತ್ತಾಗಿ  ಶಾಹಾಬಾದ ನಗರ ಠಾಣೆಗೆ ಬಂದು ಸದರಿಯವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಶಾಹಾಬಾದ ನಗರ ಠಾಣೆ : ದಿನಾಂಕ: 24/09/2017 ರಂದು ಶಹಾಬಾದದ ರಾಮಾ ಮೊಹಲ್ಲಾದ ಸರಕಾರಿ ಶಾಲೆಯ ಅವಾರಣದಲ್ಲಿ ಇಸ್ಪೀಟ ಜೂಜಾಟ ನಡೆದಿದೆ ಅಂತಾ ಬಾತ್ತಿ ಮೇರೆಗೆ  ಶ್ರೀ ಕಲ್ಯಾಣಿ ಎಎಸ್‌ಐ ಶಹಾಬಾದ ನಗರ ಠಾಣೆ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಳಳಕ್ಕೆ ಹೋಗಿ ಮರೆಯಲ್ಲಿ ನಿಂತು ಇಸ್ಪೀಟ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಿ  1) ಮಹ್ಮದ ಗೌಸ 2) ಮಹ್ಮದ ಮಾಜೀದ 3) ಜಾವೀದ ಪಟೇಲ 4) ಇಲಿಯಾಸ ಪಾಶಾ  5) ಮಹೆಬೂಬ 6) ಸದ್ದಾಂ ಹುಸೇನ ಸಾ: ರಾಮಾ ಮೊಹಲ್ಲಾ ಶಹಾಬಾದ  ಇವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಇಸ್ಪೀಟ ಜೂಜಾಟಕ್ಕೆ ಬಳಸಿದ ನಗದು ಹಣ 7020-00 ರೂ ಹಾಗೂ 52 ಇಸ್ಪೇಟ ಎಲೆಗಳನ್ನು  ವಶಪಡಿಸಿಕೊಂಡು ಸದರಿಯವರೊಂದಿಗೆ ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅತ್ಯಾಚಾರ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ. 24-9-2017 ರಂದು ನನ್ನ ಗಂಡ ಆರೀಫ್ ಶೇಟ ಇವರ ಪ್ಲ್ಯಾಸ್ಟೀಕ್ ಕಂಪನಿಯಲ್ಲಿ ಕೆಲಸಕ್ಕೆ ಹೋಗಿದ್ದು ಮದ್ಯಾನ ನನ್ನ ಮಗಳಿಗೆ ನನ್ನ ಗಂಡನಿಗೆ ಊಟಕೊಟ್ಟು ಬರುವದಕ್ಕಾಗಿ ಕಳುಹಿಸಿಕೊಟ್ಟಿದ್ದು,ಸ್ವಲ್ಪ ಸಮಯದ ನಂತರ ಸದರಿ ಆರೀಫ ಶೇಠ ಕಂಪನಿ ಎದರುಗಡೆ  ಜನರು ನೆರೆದಿದ್ದರು ಆಗ ನಾನು ಓಡುತ್ತಾ ಹೋಗಿ ನೋಡಲು ನನ್ನ ಮಗಳು ಅಳುತಿದ್ದಳು ಆಗ ಅವಳಿಗೆ ವಿಚಾರಿಸಲು  ಮದ್ಯಾನ ತಂದೆಯ ಊಟ ಒಳಗಡೆ ಇಡಲು ಹೋದಾಗ  ನನ್ನ ತಂದೆ ಕಂಪನಿಯ ಹೊರಗಡೆ ಮೂತ್ರ ವಿಸರ್ಜನೆಗೆ ಹೋಗಿದ್ದರು, ಆಗ ಒಳಗಡೆ ಕೆಲಸ ಮಾಡುತಿದ್ದ   ಗಣಪತಿ ತಂದೆ ತುಕರಾಮ ಮೇತ್ರೆ ಇತನು ಸದರಿ ಪ್ಲ್ಯಾಸ್ಟಿಕ ಕಂಪನಿಯಲ್ಲಿ ಒಳಗೆ ಮೂಲೆಯಲ್ಲಿ ನನಗೆ ಜಬರದಸ್ತಿಯಿಂದ ಎತ್ತಿಕೊಂಡು ಹೋಗಿ ನನಗೆ ಒತ್ತಿ ಹಿಡಿದುಕೊಂಡು, ಬಾಯಿ ಒತ್ತಿ ಹಿಡಿದು ಮುದ್ದಾಡುತ್ತಾ, ಎಳೆದಾಡಿ ನನ್ನ ಮೈಮೇಲಿನ ಬಟ್ಟೆಗಳನ್ನು ಬಿಚ್ಚಿ ಜಬರದಸ್ತಿಯಿಂದ ನನಗೆ ಜಬರಸಂಭೋಗ ಮಾಡುವಾಗ ನಾನು ಜೋರಾಗಿ ಚೀರಾಡುವಾಗ ಅಷ್ಟರಲ್ಲಿ ಪಕ್ಕೆದ ಕಂಪನಿಯಲ್ಲಿದ್ದ ಒಬ್ಬ ಹುಡುಗ ಹಾಗೂ ನನ್ನ ಗಂಡ ನಮ್ಮ ಮಾಲಿಕ ಆರೀಫ್ ಶೇಠ ಓಡುತ್ತಾ ಬರುವಷ್ಟರಲ್ಲಿ ಬಿಟ್ಟಿರುತ್ತಾನೆ ಅಂತಾ ಅಳುತ್ತಾ ಹೇಳಿರುತ್ತಾಳೆ ಅಂತಾ ಶ್ರೀಮತಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.