POLICE BHAVAN KALABURAGI

POLICE BHAVAN KALABURAGI

04 June 2011

GULBARGA DISTRICT PRESS NOTE

ಪತ್ರಿಕಾ ಪ್ರಕಟಣೆ

ಗುಲಬರ್ಗಾ ಜಿಲ್ಲೆಯ ಮಹಾ ಸಾರ್ವಜನಿಕರಲ್ಲಿ, ಈ ಮೂಲಕ ತಿಳುವಳಿಕೆ ನೀಡುವುದೇನೆಂದರೆ, ಗುರುಟೀಕ್ ಇನ್ ವೆಸ್ಟ್ ಮೆಂಟ್ (ಮೈಸೂರು) ಸಂಸ್ಥೆಯವರು ಸಾರ್ವಜನಿಕರಿಂದ ಠೇವಣಿಗಳನ್ನು ಸಂಗ್ರಹಿಸಿಕೊಂಡು ವಂಚನೆ ಮಾಡುತ್ತಿರುವ ಬಗ್ಗೆ ತಿಳಿದು ಬಂದಿದ್ದು, ಕಾರಣ ಗುಲಬರ್ಗಾ ಜಿಲ್ಲೆಯಲ್ಲಿ ಇಂತಹ ಗುರುಟೀಕ್ ಇನ್‌ವೆಸ್ಟ್ ಮೆಂಟ್ ಸಂಸ್ಥೆಯಲ್ಲಿ ಯಾರಾದರೂ ಠೇವಣಿ ಸಂಗ್ರಹ ಮಾಡಿಕೊಳ್ಳುತ್ತಿದ್ದಲ್ಲಿ ಕೂಡಲೇ ಜಿಲ್ಲಾ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವುದಲ್ಲದೇ ಇಂತಹ ಸಂಸ್ಥೆಯಲ್ಲಿ ಹೂಡಿಕೆದಾರರು ಠೇವಣಿ ಹೂಡಬಾರದು ಮತ್ತು ವಂಚನೆಗೊಳಗಾಗಬಾರದು ಅಂತಾ ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು:

1. ಜಿಲ್ಲಾ ಪೊಲೀಸ್ ಕಛೇರಿ ಸಂ: 08472-263602

2. ಮೋಬೈಲ್ ಸಂ: 9480803501

GULBARGA DISTRICT REPORTED CRIMES

ಬಲತ್ಕಾರ ಪ್ರಕರಣ ;
ಚಿತ್ತಾಪೂರ ಠಾಣೆ ;
ಶ್ರೀಮತಿ ಗೌರಮ್ಮ ಹೆಬ್ಬಾಳ ಸಾ| ಶಹಾಬಾದ ಹಾವ|| ದಿಗ್ಗಾಂವ ರವರ ಮಗಳಾದ ಕುಮಾರಿ ಜಗದೇವಿ ಇವಳು ನಮ್ಮ ಮನೆಯಿಂದ ಅವರ ಅಣ್ಣನ ಮನೆಗೆ ಹೋಗುತ್ತಿರುವಾಗ ಶಿವಕುಮಾರ ನಂಜುಂಡಿ ಈತನು ಜಗದೇವಿ ಇವಳನ್ನು ದಿನಾಂಕ 02-06-2011 ರಂದು ರಾತ್ರಿ 9 ಗಂಟೆಯ ಸುಮಾರಿಗೆ ಜಬರದಸ್ತಿಯಿಂದ ರಟ್ಟೆ ಹಿಡಿದು ಮನೆಯ ಹಿಂದೆ ಕತ್ತಲಲ್ಲಿ ಎಳೆದುಕೊಂಡು ಹೋಗಿ ಬಲತ್ಕಾರ ಸಂಬೋಗ ಮಾಡಿದ್ದು ತಾನು ವಿಚಾರಿಸಲು ಶಿವಕುಮಾರನ ಮನೆಗೆ ಹೋದಾಗ, ಶಿವಕುಮಾರನ ಕಾಕಾ ಶಿವರಾಯ ನಂಜುಂಡಿ ರವರು ನಮ್ಮ ಮಗ ಗಂಡಸು ಇರುತ್ತಾನೆ. ಬೇಕಾದ್ದು ಮಾಡುತ್ತಾನೆ. ನೀನು ಮಗಳಿಗೆ ಹೇಳಬೆಕು ಅಂತ ಬೆದರಿಸಿ ಶಿವಕುಮಾರನಿಗೆ ಪ್ರಚೋದನೆ ನಿಡಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿತ್ತಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣಗಳು ;
ದೇವಲ ಗಾಣಗಾಪೂರ ಠಾಣೆ ;
ಮಲಂಗ್‌ ತಂದೆ ಕರೀಂಸಾಬ ಮಕಂದಾರ ಸಾ: ದೇವಲಗಾಣಗಾಪುರ ಇವರಿಗು ಮತ್ತು ಹುಸೇನ ತಾಂಬೋಳಿ, ದಸ್ತಗೀರ ಮುಸ್ತಾಕ ಅಲಿ ಬಾಯಿ ಮಾತಿನ ತಕರಾರು ಆಗಿದ್ದು, ದಿನಾಂಕ 03-06-2011 ರಂದು ಸಾಯಂಕಾಲ ತಮ್ಮ ಸಂಬದಿಕರಾದ ಹುಸೇನ ತಾಂಬಳೋ ಇವರ ಹೋಟೆಲದಲ್ಲಿದ್ದಾಗ ನರಸು ವಡಗೇರಿ ಇತನು ರಾಕೆಶ ವಡಗೇರಿ ಕರೆರಯುತಿದ್ದಾನೆ ಅಂತಾ ಕರೆದುಕೊಂಡು ಹೋಗಿ ದೇವಲಗಾಣಗಾಪುರ ಗ್ರಾಮದ ಮಲ್ಲು ಜಮದಾರ ಇವರ ಮನೆಯ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ರಾಕೆಶ ವಡಗೆರಿ, ದತ್ತು ಹೇರ್‌, ಹಸನ ಚೌದರಿ, ದಸ್ತಗಿರ ಮುಸ್ತಾಕ ಅಲಿ, ಅಭಿ ಇಂಡಿ, ನರಸು ವಡಗೆರಿ ಇವರೆಲ್ಲರೂ ಕೂಡಿಕೊಂಡು ನಮ್ಮ, ಹುಡುಗ ದಸ್ತಗೀರ ಮುಸ್ತಾಕ ಅಲಿಗೆ ಧಮಕಿ ಕೊಡುತ್ತಿಯಾ ಅಂತಾ ಅಂದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ, ಕಟ್ಟಿಗೆಯಿಂದ, ಬೆಲ್ಟಿನಿಂದ ಹೊಡೆದು ರಕ್ತ ಗಾಯ , ಗುಪ್ತಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲ ಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಟೇಷನ ಬಜಾರ ಠಾಣೆ ;ಶ್ರೀಮತಿ ರುಕ್ಕಮ್ಮ ಗಂಡ ಶಂಕ್ರೆಪ್ಪ ದೊಡಮನಿ ಸಾ|| ಶರಣಸಿರಸಗಿ ತಾ||ಜಿ|| ಗುಲಬರ್ಗಾ ಇವರು ತನ್ನ ಮಗಳಾದ ಹೇಮಾವತಿ ಇವಳಿಗೆ ಮಾತನಾಡಿಸಲು ಇಂದಿರಾನಗರಕ್ಕೆ ಬಂದಿದ್ದು ತನ್ನ ಮಗಳಾದ ಹೇಮಾವತಿ ಮನೆಯಲ್ಲಿ ಇರಲಿಲ್ಲಾ ಅವಳ ಮಗಳಾದ ಸ್ವಪ್ನಾ ಇವಳು ಚಹಾ ಕುಡಿಯಲು ಕೊಟ್ಟಿದ್ದು, ಚಹಾ ಕುಡಿಯುತ್ತಿರುವಾಗ ಅಳಿಯನ ತಮ್ಮನಾದ ಗೌತಮ ಇತನು ಬಂದವನೆ ಎ ರಂಡಿ ನಮ್ಮ ಮನೆಗೆ ಬರಲು ನಿನಗೆ ನಾಚಿಕೆಯಾಗುವದಿಲ್ಲವೇನು ಅಂತ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮತ್ತು ಕಲ್ಲಿನಿಂದ ಹೊಡೆದು ರಕ್ತಗಾಯಗೋಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಢಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅನಧೀಕೃತ ಗ್ಯಾಸ ಸಿಲೇಂಡರಗಳ ಮಾರಾಟಗಾರ ಬಂಧನ ;

ರೋಜಾ ಠಾಣೆ ;ದಿನಾಂಕ:03-06-2011 ರಂದು ಬೆಳಿಗ್ಗೆ ಪಾಚಾಪೂರ ಬಡಾವಣೆಯಲ್ಲಿರುವ ಮುಸ್ತಫಾ ಎಂಬುವವನು ತನ್ನ ಮನೆಯಲ್ಲಿರುವ ಒಂದು ಕೋಣೆಯಲ್ಲಿ ಅನಧೀಕೃತವಾಗಿ ಲೈಸೆನ್ಸ್ ವಗೈರೆ ಇಲ್ಲದೇ ಗ್ಯಾಸ್ ಸಿಲೆಂಡರ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ವ್ಯಾಪಾರ ಮಾಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಮಾನ್ಯ ಎಸ್.ಪಿ ಸಾಹೇಬ ಗುಲಬರ್ಗಾ, ಅಪರ ಎಸ್.ಪಿ ಸಾಹೇಬ ಗುಲಬರ್ಗಾ ಮತ್ತು ಪ್ರೋಬೆಶನರಿ ಐಪಿಎಸ್ ರವಿ ರವರ ಮಾರ್ಗದರ್ಶನದಲ್ಲಿ ಪೊಲೀಸ್ ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ಸ್ಥಳಕ್ಕೆ ಹೋಗಿ ನೋಡಿ ದಾಳಿಮಾಡಿ ಮನೆಯಲ್ಲಿದ್ದ 20 ಸಣ್ಣ ಗ್ಯಾಸ್ ಸಿಲೆಂಡರ್ ಗಳು 15 ದೊಡ್ಡ ಗ್ಯಾಸ ಸಿಲೆಂಡರ್ ಗಳು ಹೀಗೆ ಒಟ್ಟು 35 ಗ್ಯಾಸ್ ಸಿಲೆಂಡರ ಗಳನ್ನು ಜಪ್ತಿ ಮಾಡಿಕೊಂಡು ಸದರ ಆರೋಪಿತನ ವಿರುದ್ಧ ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಲುಗೆ ಪ್ರಕರಣಗಳು ;
ಅಶೋಕ ನಗರ ಠಾಣೆ ;
ಶ್ರೀ. ರಾಜಶೇಖರ ತಂದೆ ಶಿವಲಿಂಗಪ್ಪಾ ಪೊಲೀಲ ಪಾಟೀಲ ಸಾ: ಸಿತನೂರ ಹಾ.ವ: ಮನೆ ನಂ. ಇಎಸ್‌ಡಬ್ಲು-99 2ನೇ ಹಂತ ಆದರ್ಶ ನಗರ ಕಾಲೋನಿ ಗುಲಬರ್ಗಾ ರವರ ದಿನಾಂಕ 02-06-2011 ರಂದು ರಾತ್ರಿ 9:45 ಗಂಟೆ ಸುಮರಿಗೆ ಸಿತನೂರದಿಂದ ಮರಳಿ ಮನೆಗೆ ಹೊಗುವ ಕುರಿತು ಕೇಂದ್ರ ಬಸ ನಿಲ್ದಾಣದ ಹತ್ತಿರ ಬಸ್ಸಿನಿಂದ ಇಳಿದು ಭಜಿ ತಿನ್ನಲು ಹೊದಾಗ ಅಲ್ಲಿ 4 ಜನ ಅಪರಿಚಿತ ವ್ಯಕ್ತಿಗಳು ನನ್ನ ಹತ್ತಿರ ಬಂದು 100 ರೂಪಾಯಿ ಚಿಲ್ಲರೆ ಹಣ ಕೊಡಲು ಕೇಳಿದ್ದು, ಆಗ ನಾನು ಹಣ ಇಲ್ಲ ಅಂತಾ ಹೇಳಿದಕ್ಕೆ ಅವಾಚ್ಯವಾಗಿ ಬೈದಿದ್ದು ಆಗ ನಾನು ಒಂದು ಏಟು ಹೊಡೆದಿದಕ್ಕೆ 4 ಜನರು ಕೂಡಿಕೊಂಡು ಜಬರದಸ್ತಿಯಿಂದ ಜಿ.ಡಿ.ಎ ಲೇಔಟ ಕತ್ತಲೆ ಜಾಗೆಯಲ್ಲಿ ಒಯ್ದು ಸಿಕ್ಕಪಟ್ಟೆ ಮುಖಕ್ಕೆ, ಬಾಯಿ ಮೇಲೆ ಕಣ್ಣಿನ ಮೇಲೆ ಹೊಡೆದಿದ್ದರಿಂದ ಮತ್ತು ಹಲ್ಲಿನಿಂದ ಕಿವಿ ಕಚ್ಚಿದ್ದರಿಂದ ನನ್ನ ಬಾಯಿಯಲ್ಲಿಯ 4-5 ಹಲ್ಲುಗಳು ಮುರಿದು ಬಿದ್ದಿದ್ದು, ಕಿವಿ ಕತ್ತಿರಿಸಿದ್ದು, ಕಣ್ಣಿಗೆ, ಮುಖಕ್ಕೆ ಭಾರಿ ರಕ್ತಗಾಯಗಗೊಳಿಸಿ ನನ್ನ ಹತ್ತಿರ ಇದ್ದ 5000/- ರೂಪಾಯಿ ಹಣ ಮತ್ತು ಒಂದು ನೊಕಿಯಾ ಮೊಬೈಲ ಕಿಸಿದುಕೊಂಡು ಹೊಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಟೇಷನ ಬಜಾರ ಠಾಣೆ ;ಶ್ರೀ ಅಂತ್ಯಪ್ಪ ತಂದೆ ಬಾಬುರಾವ ಸುರ್ಯವಂಶಿ ಸಾ|| ಅವರಾದ(ಬಿ) ಹಾ.ವ ಜೆ.ಪಿ ನಗರ ಬೆಂಗಳೂರ ರಾತ್ರಿ 7.30 ಗಂಟೆಗೆ ರೈಲ್ವೆ ಸ್ಟೇಷನದಿಂದ ಆಟೋ ನಂ ಕೆ.ಎ 32 6132 ನೇದ್ದರಲ್ಲಿ ಶಿವಾಜಿ ಖಾನಾವಳಿಗೆ ಊಟ ಮಾಡಲು ಬಂದು ಮರಳಿ ರೈಲ್ವೆ ಸ್ಟೇಷನಕ್ಕೆ ಅದೆ ಆಟೋದಲ್ಲಿ ಹೋಗುವಾಗ ಚಾಲಕನು ಆಟೋಗೆ ಪೇಟ್ರೊಲ ಹಾಕಿಕೊಂಡು ಹೋಗೊಣಾ ಅಂತಾ ಹೇಳಿ ಸಿದ್ದಿಪಾಶಾ ದರ್ಗಾದ ಹತ್ತಿರ ಒಬ್ಬನಿಗೆ ಕೂಡಿಸಿಕೊಂಡು ನಂತರ ಬಸವೇಶ್ವರ ಆಸ್ಪತ್ರೆ ಹತ್ತಿರ ಒಬ್ಬನಿಗೆ ಕೂಡಿಸಿಕೊಂಡು ಎಮ್.ಬಿ ನಗರ ಪೊಲೀಸ ಠಾಣೆ ಹತ್ತಿರ ಸಂದಿಯಲ್ಲಿ ಕರೆದುಕೊಂಡು ಒಯ್ದು ಕೈಯಿಂದ ಮತ್ತು ಬಡಿಗೆಯಿಂದ ಹೊಡೆದು. ಬಾಯಿಯಿಂದ ಕಚ್ಚಿ 1 ಬಂಗಾರದ ಲಾಕೇಟ್ ನಗದು ಹಣ 6,000/-ರೂ, ಒಂದು ಚೈನಾ ಸೆಟ್ ಮೋಬೈಲ್ ದೊಚಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದ್ವೀಚಕ್ರ ವಾಹನ ಕಳವು ಪ್ರಕರಣ ;
ಅಶೋಕ ನಗರ ಠಾಣೆ ;ಶ್ರೀ ನಾಗೇಂದ್ರ ತಂದೆ ಶ್ರೀಮಂತರಾವ ಭೀಮಳ್ಳಿ ಸಾ; ಮನೆ ನಂ 11-356 ಧನಗರ ಗಲ್ಲಿ ಬ್ರಹ್ಮಪೂರ ಗುಲಬರ್ಗಾ ರವರು ದಿನಾಂಕ 14-07-2010 ರಂದು ರಾತ್ರಿ ಎಸ್ ಕೆ ಯಾತ್ರಿಕ ನಿವಾಸದ ಎಡುರುಕಾಂಪ್ಲೇಕ್ಸದ ಮುಂದಿನ ರೋಡಿನ ಮೇಲೆ ತನ್ನ ಹೋರೋ ಹೊಂಡಾ ಸ್ಪ್ಲ್ಯಾಂಡರ ಪ್ಲಸ ಗಾಡಿ ನಂ ಕೆಎ-32 ಕ್ಯೂ 6555 ನೇದ್ದನ್ನು ನಿಲ್ಲಿಸಿ ಹೋಗಿ ಬರುವಷ್ಟರಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣಗಳು ;

ಆಳಂದ ಠಾಣೆ ;ಶ್ರೀಮತಿ ಗಂಗುಬಾಯಿ ಗಂಡ ಹಣಮಂತ ಮಡಿವಾಳ ಸಾ; ಕ್ಯತನಾಳ ತಾ; ಶಾಹಾಪುರ ಜಿ; ಯಾದಗೀರ ಮತ್ತು ಗಂಡನಾದ ಹಣಮಂತ ಮಕ್ಕಳಾದ ನಿಂಗಾರೆಡ್ಡಿ, ಮಲಿಕ ಹಾಗು ಸಂಬಂಧಿಕರಾದ ದೇವಿಂದ್ರಮ್ಮ ಮತ್ತು ಅವಳ ಮಗ ನಾಗರಾಜ ಕುಡಿಕೊಂಡು ಹೊಟ್ಟೆಪಾಡಿಗಾಗಿ ಪೂನಾಕ್ಕೆ ಹೋಗುಲು ಗುಲಬರ್ಗಾದಿಂದ ಲಾರಿ ನಂ ಎಂಎಚ್-12 ಎಫ್ ಝಡ್ 8759 ನೇದ್ರಲ್ಲಿ ಕುಳಿತು ಪೂನಾಕ್ಕೆ ಹೋಗುತ್ತಿರುವಾಗ ದಿನಾಂಕ 04-06-2011 ರಂದು 12-30 ಎಎಮ್ ಸುಮಾರಿಗೆ ಲಾರಿ ಚಾಲಕನಾದ ಗಣೇಶ ತಂದೆ ವಿಶ್ವನಾಥ ಮುಟಕುಲೆ ಸಾ; ಪಡಸಾಳಿ ಜಿ:ಸೊಲ್ಲಾಪೂರ ಇವನು ಸಾವಳೆಶ್ವರ ಕ್ರಸ ಹತ್ತಿರ ತನ್ನ ಲಾರಿಯನ್ನುಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡುಬಂದು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಆಗದೆ ಪಲ್ಟಿ ಮಾಡಿದ್ದು ಲಾರಿಯಲ್ಲಿ ಇದ್ದ ಸಿಮೇಂಟ ಚೀಲಗಳ ಅಡಿಯಲ್ಲಿ ನನ್ನ ಗಂಡನಾದ ಹಣಮಂತ ಮತ್ತು ಮಗ ನಿಂಗಾರೆಡ್ಡಿ ಸಿಲುಕಿ ಉಸಿರುಗಟ್ಟಿ ಸ್ಥಳದಲ್ಲಿ ಮೃತಪಟ್ಟಿದ್ದು ಉಳಿದವರಿಗೆ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೆವೂರ ಠಾಣೆ ;ದಿನಾಂಕ 03-06-2011 ರಂದು ಶ್ರೀ ಶಿವಪುತ್ರ ತಂದೆ ಮಾಳಪ್ಪಾ ಆತನೂರ ಸಾ; ಸ್ಟೇಷನ ಗಾಣಗಾಪೂರ
ಮತ್ತು ಹೆಂಡತಿಯಾದ ಅಂಜನಾದೇವಿ ಕುಡಿಕೊಂಡು ಸೀಮಿ ಹೋಲದಲ್ಲಿರುವ ಲಕ್ಷ್ಮೀ ದೇವಸ್ಥಾನಕ್ಕೆ ಕಾಯಿ ಕರ್ಪುರ ಮಾಡುವ ಸಲುವಾಗಿ ಹೊಲಕ್ಕೆ ಬಂದಿದ್ದು ನಾವೆಲ್ಲರು ಮಾತನಾಡುತ್ತಾ ಲಕ್ಷ್ಮೀ ಗುಡಿಯ ಹತ್ತಿರ ಕುಳಿತಿದ್ದು 6 ಗಂಟೆಯ ಸುಮಾರಿಗೆ ಗುಡೂರ ತಾಂಡಾದ ಕಡೆಯಿಂದ ದೇವಸ್ಥನಕ್ಕೆ ಬರುವ ಕಚ್ಚಾ ರೋಡಿನಿಂದ ಒಂದು ಕಮಾಂಡರ ಜೀಪ ಚಾಲಕನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಮುಂದೆ ಕುಳಿತ ನನ್ನ ಹೆಂಡತಿಯಾದ ಅಂಜನಾದೇವಿಗೆ ಅಪಘಾತ ಪಡಿಸಿ ಒಡಿ ಹೋಗಿದ್ದು ನನ್ನ ಹೆಂಡಿತಿಗೆ ಭಾರಿ ಗಾಯಗಳಾಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.