POLICE BHAVAN KALABURAGI

POLICE BHAVAN KALABURAGI

03 January 2017

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 02-01-2017 ರಂದು ಅಫಜಲಪೂರ ಪಟ್ಟಣದ ಹನುಮಾನ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಶ್ರೀ ಸಿದರಾಯ ಭೋಸಗಿ ಪಿ.ಎಸ್.ಐ. ಅಫಜಲಪೂರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಹನುಮಾನ ಗುಡಿಯ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಹನುಮಾನ ಗುಡಿಯ  ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಭೀಮಶ್ಯಾ ತಂದೆ ಹಸನಪ್ಪ ಆರೇಕರ ಸಾ || ಜೈ ಭೀಮ ನಗರ ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1390/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ಹಾಗೂ ಒಂದು ಸಮಸಂಗ ಕಂಪನಿಯ ಕಪ್ಪು ಬಣ್ಣದ ಸಾದಾ ಮೋಬೈಲ ಪೋನ್ ಅಕಿ-100/- ರೂ ಸದರಿಯವುಗಳನ್ನು ಪಂಚರ ಸಮಕ್ಷಮ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 02-01-2017 ರಂದು ಅಫಜಲಪೂರ ಪಟ್ಟಣದ ಬಸವೇಶ್ವರ ಸರ್ಕಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದ  ಬಗ್ಗೆ ಬಾತ್ಮಿ ಬಂದ ಮೇರೆಗೆ . ಶ್ರೀ ಸಿದರಾಯ ಭೋಸಗಿ ಪಿ.ಎಸ್.ಐ. ಅಫಜಲಪೂರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಮಲ್ಲಿಕಾರ್ಜುನ ತಂದೆ ವಿಠ್ಠಲ ಕಾಮಗೊಂಡ ಸಾ|| ಎಮ್.ಜಿ ನಗರ ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 2120/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ದೊರೆತವು, ಹಾಗೂ ಒಂದು ನೋಕಿಯಾ ಕಂಪನಿಯ ಸಾದಾ ಮೋಬೈಲ ಪೋನ್ ಅಕಿ-100/- ರೂ ಸದರಿಯವುಗಳನ್ನು ಪಂಚರ ಸಮಕ್ಷಮ ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಶಿವಾನಂದ ತಂದೆ ಅಂಬಣ್ಣ ಲೆಂಗಟಿ ಸಾ|| ಕೈಲಾಸ ನಗರ ಕಲಬುರಗಿ ಇವರು ದಿನಾಂಕ: 30-12-2016 ರಂದು ಬೆಳಗ್ಗೆ ತಮ್ಮ ಮನೆಗೆ ಬೀಗ ಹಾಕಿ ತಾನು ತನ್ನ ಕುಟುಂಬದೊಂದಿಗೆ ಹೈದರಾಬಾದಿಗೆ ಹೋಗಿದ್ದು  ದಿನಾಂಕ: 31-12-2016 ಬೆಳಗ್ಗೆ 07-00 ಗಂಟೆಯ ಸುಮಾರಿಗೆ ನಮ್ಮ ಮನೆಯ ಪಕ್ಕದವರಾದ ಶ್ರೀ ಶಂಕರ ಇವರು ನನಗೆ ಫೋನ್ ಮಾಡಿ ತಿಳಿಸಿದ್ದೆನೆಂದರೆ. ನಿಮ್ಮ ಮನೆಯ ಬೀಗ ಯಾರೋ ಮುರಿದಿದ್ದು ಇರುತ್ತದೆ ಅಂತಾ ಹೇಳಿದಾಗ ನಾನು ಅದೆ ದಿವಸ ಬೆಳಗ್ಗೆ ನಮ್ಮ ಮನೆಗೆ ಬಂದು ನೋಡಲು ನಮ್ಮ ಮನೆಯ ಬೀಗ ಮುರಿದಿದ್ದು ಮನೆಯ ಒಳಗೆ ಹೋಗಿ ನೋಡಲು ಬೆಡ್‌ರೂಮಿನ ಅಲಮಾರಿ ತೆರೆದಿದ್ದು ಅದರಲ್ಲಿದ್ದ 10 ಗ್ರಾಂ ಬಂಗಾರದ ಲಾಕೀಟ್ ಅದರ ಅಂ.ಕಿ: 24600/-ರೂ ಬೇಲೆಬಾಳುವುದು ಅದರಲ್ಲಿ ಇರಲಿಲ್ಲ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಪತ್ತೆ ಹಚ್ಚಿ ಕೋಡಬೆಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅ ಸ್ವಾಭಾವಿಕ ಸಾವು ಪ್ರಕರಣ :
ಬ್ರಹ್ಮಪೂರ ಠಾಣೆ : ಶ್ರೀ. ಭೀಮಾಶಂಕರ ಸಿಪಿಸಿ-677 ಬ್ರಹ್ಮಪೂರ ಪೊಲೀಸ ಠಾಣೆ ರವರು ದಿನಾಂಕ:02/01/2017 ರಂದು ನಾನು ಜಿಲ್ಲಾ ಸರಕಾರಿ ಆಸ್ಪತ್ರೆ ಉಕ್ಕಡದಲ್ಲಿ ಕರ್ತವ್ಯದ ಮೇಲೆ ಇದ್ದಾಗ ಸುಮಾರು 40 ವರ್ಷದ ಅಪರಿಚಿತ ಗಂಡಸು ವ್ಯಕ್ತಿ ಉಪಚಾರ ಪಡೆಯುತ್ತಾ ಇಂದು ಬೆಳಿಗ್ಗೆ 9:30 ಗಂಟೆಗೆ ಮರಣ ಹೊಂದಿದ್ದು ಈ ಕುರಿತು ಡೆತ್ ಎಂ.ಎಲ್.ಸಿ ಯನ್ನು ಬೆಳಿಗ್ಗೆ 10:15 ಗಂಟೆಗೆ ಪಡೆದುಕೊಂಡಿದ್ದು ನಂತರ ಆಸ್ಪತ್ರೆಯ ದಾಖಲಾತಿಗಳು ನೋಡಿ ಪರಿಶೀಲಿಸಿದ್ದು ಸದರಿ ಮೃತನು ದಿನಾಂಕ:29/12/2016 ರಂದು ಕಲಬುರಗಿ ನಗರದ ಸ್ಟೇಷನ ರಸ್ತೆ ಹಳೆ ಸರಕಾರಿ ಆಸ್ಪತ್ರೆ ಎದುರುಗಡೆ ಸುಸ್ತಾಗಿ ಬಿದ್ದಿದ್ದು ಯಾರೋ ಸಾರ್ವಜನಿಕರು ನೋಡಿ ಅವನನ್ನು ಉಪಚಾರದ ಸಲುವಾಗಿ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಮೃತ ವ್ಯಕ್ತಿ ಭೀಕ್ಷುಕನಾಗಿದ್ದು ಅವನ ಹೆಸರು ವಿಳಾಸ ತಿಳಿದು ಬಂದಿಲ್ಲ. ಆದರೆ ಯಾವುದೋ ಕಾಯಿಲೆಯಿಂದ ಬಳಲುತ್ತಿರುವ ಬಗ್ಗೆ ಅವನ ದೇಹ ಸ್ಥಿತಿ ನೋಡಿದರೆ ಕಂಡು ಬರುತ್ತದೆ. ಆಸ್ಪತ್ರೆ ಹತ್ತಿರ ಅನ್ನಪೂರ್ಣ ಕ್ರಾಸ್ ಕುಳಗೇರಿ ಕ್ರಾಸ್ ಜಗತ ಸರ್ಕಲ್ ತಿರುಗಾಡಿ ಮೃತ ವ್ಯಕ್ತಿಯ ಬಗ್ಗೆ ವಿಚಾರಿಸಿ ಮಾಹಿತಿ ಕಲೆ ಹಾಕಲು ಪ್ರಯತ್ನಸಿದ್ದೆ ಯಾವುದೆ ಮಾಹಿತಿ ಸಿಕ್ಕಿರುವದಿಲ್ಲ. ಮೃತ ವ್ಯಕ್ತಿಯ ಹೆಸರು ವಿಳಾಸ ಸದ್ಯ ತಿಳಿದು ಬಂದಿರುವದಿಲ್ಲ. ಸದರಿಯವನ ಮೃತ ಶವವು ಜಿಲ್ಲಾ ಸರಕಾರಿ ಆಸ್ಪತ್ರೆಯ ಶವಾಗಾರ ಕೋಣೆಯಲ್ಲಿ ಇಡಲಾಗಿದೆ. ಸದರಿಯವನು 40-45 ವರ್ಷ ವಯಸ್ಸಿನವನು ತೆಳ್ಳನೆಯ ಮೈಕಟ್ಟು ಉದ್ದನೆಯ ಮುಖ ಬಣ್ಣ ಸಾದಾಕಪ್ಪು ತಲೆಯಲ್ಲಿ ಕಪ್ಪು ಉದ್ದನೆಯ ಕೂದಲು ಮತ್ತು ದಾಡಿ ಇರುತ್ತದೆ. ಮೈಮೇಲೆ ಬಿಳಿ ಕೆಂಪು ಗೆರೆಉಳ್ಳ ಶರ್ಟ, ಕೆಂಪು ಬಣ್ಣದ ಬನಿಯಾನ, ಹಸಿರು ಬಣ್ಣದ ಬಿಳಿ ಗೆರೆಉಳ್ಳ ಶರ್ಟ, ಬೂದಿ ನಾಶಿ ಬಣ್ಣದ ಪ್ಯಾಂಟ, ಇದ್ದು ಎತ್ತರ ಅಂದಾಜು 5-4 ಇರುತ್ತದೆ. ಮೃತ ವ್ಯಕ್ತಿಯ ಹೆಸರು ವಿಳಾಸ ತಿಳಿದು ಬಂದಿರುವದಿಲ್ಲ. ಮತ್ತು ಅವನ ಸಂಬಂಧಿಕರು ಯಾರು ಎಂಬುವದು ತಿಳಿದು ಬಂದಿರುವದಿಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹಮ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.