POLICE BHAVAN KALABURAGI

POLICE BHAVAN KALABURAGI

25 March 2013

GULBARGA DISTRICT REPORTED CRIMES


ಕೊಲೆಗೆ ಪ್ರಯತ್ನ:
ಚಿಂಚೋಳಿ ಪೊಲೀಸ್ ಠಾಣೆ:ಶ್ರೀ,ಸಂತೋಷ ತಂದೆ ತಿಪ್ಪಯ್ಯಾ ಕಲಾಲ ಸಾ|| ಚಿಮ್ಮಾಯಿದಲಾಯಿ ತಾ|| ಚಿಂಚೋಳಿ ರವರು ನಾನು 2011 ನೇ ಸಾಲಿನಲ್ಲಿ ಶಿವರಾಯ ಕೋಟಗಿ ಮತ್ತು ಅವನ ಮಕ್ಕಳ ಮೇಲೆ ಪ್ರಕರಣ ದಾಖಲಿಸಿದ್ದರಿಂದ ಸಧ್ಯನ್ಯಾಯಾಲಯದವಿಚಾರಣೆಯಲ್ಲಿದ್ದು ಅದನ್ನು ವಾಪಸು ಪಡೆದುಕೊ ಅಂತಾ ಶಿವರಾಯ ಕೋಟಗಿ ಅವನ ಹೆಂಡತಿ ಮಕ್ಕಳು ಕೇಳಿದ್ದು, ಅದಕ್ಕೆ ನಾನು ಕೊಟ್ಟ ದೂರನ್ನು ವಾಪಸು ತಗೆದುಕೊಳ್ಳುವುದಿಲ್ಲಾ ಅಂತಾ ಹೇಳಿದಕ್ಕೆ ದಿನಾಂಕ:24-03-2013 ರಂದು ರಾತ್ರಿ 7-30 ಗಂಟೆಗೆ ಸುಮಾರಿಗೆ ಶಿವರಾಯ ಕೊಟಗಿ ರವರ ಮನೆಯ ಮುಂದೆ ನಡೆದುಕೊಂಡು ಬರುತ್ತಿದ್ದಾಗ ಶಿವರಾಯ ಕೋಟಗಿ, ಅವನ ಹೆಂಡತಿಯಾದ ಕಲ್ಲಮ್ಮ, ಅವನ ಮಕ್ಕಳಾದ ಬಸವರಾಜ ಮತ್ತು ತುಕರಾಮ ನಾಲ್ಕು ಜನರು ಕೂಡಿಕೊಂಡು ಬಂದು ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿ  ನನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಗುಪ್ತಾಂಗಕ್ಕೆ ಹೊಡೆದು ಗಾಯಗೊಳಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:58/2013 ಕಲಂ, 341, 323, 324, 504, 506, 307 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆಗೆ ಪ್ರಯತ್ನ:
ಶಹಾಬಾದ ನಗರ ಪೊಲೀಸ್ ಠಾಣೆ:ಶ್ರೀಮತಿ ಸುಶೀಲಾ ಗಂಡ ಮಹೇಶಕುಮಾರ ಗಾಯಕವಾಡ ಸಾ:ಮನೆ.ನಂ.45 ರೈಲ್ವೆ ಕ್ವಾಟ್ರಾಸ್ ಶಹಾಬಾದ ರವರು ನಮ್ಮ ಬಾಜು ಮನೆಯವನಾದ ಬಾಲು ತಂದೆ ರಾಜು ಸಾಲುವಾ ಇತನು ಕಳೆದ ಮೂರು ತಿಂಗಳಿಂದ ನನ್ನ ಮನೆಯ ಮೇಲೆ ಕಲ್ಲುಗಳನ್ನು ಎಸೆಯುತ್ತಿದ್ದು ನಾನು ಮತ್ತು ನನ್ನ ಗಂಡ ಕೇಳಲು ಹೋದರೆ ಗಲಾಟೆ ಮಾಡುತ್ತಿದ್ದು, ದಿನಾಂಕ:24/03/2013 ರಂದು ರಾತ್ರಿ 8.45 ಗಂಟೆಯ ಸುಮಾರಿಗೆ ಮನೆಯ ಮೇಲೆ ಕಲ್ಲುಗಳು ಬಿಳುತ್ತಿದ್ದುದ್ದು ನೋಡಿ ಹೊರಗೆ ಬಂದು ನೋಡಿ ಬಾಲು ಮತ್ತು ಆತನ ಹೆಂಡತಿಗೆ ಯಾಕೆ ನಮ್ಮ ಮನೆಯ ಮೇಲೆ ಕಲ್ಲುಗಳನ್ನು ಹಾಕುತ್ತಿದ್ದಿಯಾ ಅಂತಾ ಕೇಳಿದ್ದಕ್ಕೆ ಆವರು ಅವಾಚ್ಯ ಶಬ್ದಗಳಿಂದ ಬೈದು ಬಾಲು ಇತನು ತನ್ನಲ್ಲಿರುವ ಚಾಕುವಿನಿಂದ ನನ್ನ ಗಂಡನ ಮುಖಕ್ಕೆ, ಎಡಗಾಲ ಮೊಳಕಾಲಿಗೆ ಹೊಡೆದು ರಕ್ತಗಾಯ ಮಾಡಿರುತ್ತಾನೆ ಅಂತಾ ಶ್ರೀಮತಿ ಸುಶೀಲಾ ಗಂಡ ಮಹೇಶಕುಮಾರ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 43/2013 ಕಲಂ, 323,504,506,354,307 ಸಂ:34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.