POLICE BHAVAN KALABURAGI

POLICE BHAVAN KALABURAGI

30 November 2015

Kalaburagi District Reported Crimes

ಕೊಲೆ ಪ್ರಕರಣ :
ನೆಲೋಗಿ ಠಾಣೆ : ಶ್ರೀಮತಿ. ಬಾಗಮ್ಮ ಗಂಡ ಬಾಗಪ್ಪ ನಾಯ್ಕಡಿ ಸಾ : ಹಂಚನಾಳ ರವರಿಗೆಇಬ್ಬರೂ ಗಂಡು ಮಕ್ಕಳು ಒಬ್ಬಳು ಹೆಣ್ಣು ಮಗಳು ಇರುತ್ತಾರೆ. ಹಿರಿಯ ಮಗ ಪ್ರಕಾಶ ಎರಡನೆಯ ಮಗ ಸೋಮಶೇಖರ ಮಗಳು ಮಾಣಿಕಮ್ಮ ಅಂತ ಇರುತ್ತಾಳೆ ಮುಂಜಾನೆ 10 ಗಂಟೆಗೆ ನಾನು ಸೋಮಶೇಖರ ನಮ್ಮ ಹೊಲಕ್ಕೆ ಹೊಗಿದೆವು ಮದ್ಯಾಹ್ನ 1:00 ಗಂಟೆಗೆ ನನ್ನ ಮಗ ಪ್ರಕಾಶ ಈತನು ತನ್ನ ಸೈಕಲ ಮೋಟರ ನಂ: KA32-EG-6212 ನೇದ್ದರ ಮೇಲೆ ನಮ್ಮ ಹತ್ತಿರ ಹೊಲಕ್ಕೆ ಬಂದು KEBಯಲ್ಲಿ ಆದ ನೌಕರಿ ಬಗ್ಗೆ ಇಂಟರನೇಟದಲ್ಲಿ ಜೇರಟಗಿಗೆ ಹೋಗಿ ನೋಡಿ ಬರುತ್ತೇನೆ ಅಂತ ಹೇಳಿ ಹೋದನು ನಾನು ಸೋಮಶೇಖರ ಹೊಲದಲ್ಲಿ ನೀರು ಬಿಡುತ್ತಿದ್ದೇವು ಸಾಯಂಕಾಲ 6;00 ಪಿ.ಎಂ ಸುಮಾರಿಗೆ ನಾವು ಮನೆಗೆ ಬಂದೇವು ಆ ನಂತರ 7:00 ಪಿ.ಎಂ ಸುಮಾರಿಗೆ ಯಾರೋ ಫೊನ ಮಾಡಿ ಹೇಳಿದರು ನಿನ್ನ ಮಗ ಪ್ರಕಾಶನು ಬಳ್ಳೊಂಡಗಿ ದಾಟಿ ಬಾಸಂಗಿ ಸಾಹುಕಾರ ಹೊಲದ ಹತ್ತಿರ ರೋಡಿನ ಮೇಲೆ ಸತ್ತು ಬಿದ್ದಿದ್ದಾನೆ ಎಕ್ಸಿಡೆಂಟ ಆಗಿದೆ ಅಥವಾ ಯಾರೋ ಕೊಲೆ ಮಾಡಿರುತ್ತಾರೆ ಗೋತ್ತಿಲ್ಲಾ ಅಂತ ಹೇಳಿದಾಗ ನಾನು ನನ್ನ ಮಗ ಸೋಮಶೇಖರ ಮಗಳು ಮಾಣಿಕಮ್ಮ ಹಾಗೂ ಊರಿನ ಜನರು ಕೂಡಿ ಅಲ್ಲಿಗೆ ಬಂದು ನೋಡಲಾಗಿ ಬಾಂಸಗಿ ಸಾಹುಕಾರ ಹೋಲದ ಹತ್ತಿರ ರೋಡಿನ ಮೇಲೆ ನನ್ನ ಮಗ ಸತ್ತು ಬಿದ್ದಿದ್ದ. ಅವನ ಎಡಗಡೆ ಎದಿಯ ಮೇಲೆ ಚಾಕುವಿನಿಂದ ಚುಚ್ಚಿದಂತೆ ಬಾರಿಗಾಯ ವಾಗಿದ್ದು ಸೈಕಲ ಮೋಟಾರ ಸ್ವಲ್ಪು ದೂರದಲ್ಲಿ ಬಿದ್ದಿದ್ದು ಸೈಕಲ ಮೋಟರ ಎಕ್ಸಿಡೆಂಟ ಆದಂತೆ ಸಾಕ್ಷಿ ನಾಷ ಮಾಡಲು ಯಾರೋ ನನ್ನ ಮಗನನ್ನು 6-30 ಪಿ.ಎಂ ದಿಂದ 6-45 ಪಿ.ಎಂದ ಅವಧಿಯಲ್ಲಿ ನನ್ನ ಮಗನನ್ನು ಕೊಲೆ ಮಾಡಿ ರೋಡಿನ ಮೇಲೆ ಹೆಣವನ್ನು ಹಾಕಿ ಸೈಕಲ ಮೋಟಾರ ಸ್ವಲ್ಪ ದೂರದಲ್ಲಿ ಕೆಡವಿ ಹೋಗಿದ್ದು ನನ್ನ ಮಗನನ್ನು ಯಾರೋ ದುಸ್ಕರ್ಮಿಗಳು ಕೊಲೆ ಮಾಡಿ ಹಾದಿಯಲ್ಲಿ ಹೆಣವನ್ನು ಹಾಕಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಜೇವರ್ಗಿ ಠಾಣೆ : ಶ್ರೀಮತಿ ಜರೀನಾ ಗಂಡ   ಸ್ಮಾಯಿಲ್ ಸಾಬ ಖಾದ್ರಿ  ಸಾ: ಹರನೂರ ತಾ:ಜೆವರ್ಗಿ ಜಿ: ಕಲಬುರಗಿ ಹಾ:ವ: ಖಾಜಾ ಕಾಲೋನಿ ಜೇವರ್ಗಿ  ಇವರನ್ನು 6 ವರ್ಷಗಳ ಹಿಂದೆ ಹರನೂರ ಗ್ರಾಮದ ಇಸ್ಮಾಯಿಲ್ ಸಾಬ ತಂದೆ ಅಲ್ಲಾವುದ್ದಿನ್ ಸಾಬ ಖಾದ್ರಿ ಇವರ ಜೊತೆ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ಮದುವೆ ಕಾಲಕ್ಕೆ ನನ್ನ ಗಂಡನಿಗೆ ವರದಕ್ಷಿಣೆ ರೂಪದಲ್ಲಿ 25 ಸಾವಿರ ರೂಪಾಯಿ ನಗದು ಹಣ 3 ತೊಲೆ ಬಂಗಾರ ಮತ್ತು ಗೃಹ ಬಳಕೆಯ ಸಾಮಾನುಗಳು ಕೊಟ್ಟಿದ್ದು ಇರುತ್ತದೆ. ನನಗೆ ಒಂದು ಹೆಣ್ಣು ಒಂದು ಗಂಡು ಮಕ್ಕಳು ಇರುತ್ತಾರೆ. ಮದುವೆ ಆದಾಗಿನಿಂದ ನನ್ನ ಗಂಡ ಇಸ್ಮಾಯಿಲ್ ಸಾಬ ಇತನು ನನಗೆ ನಿನ್ನ ತವರು ಮನೆಯಿಂದ 2 ಲಕ್ಷ ರೂಪಾಯಿ ಮತ್ತು 2 ತೊಲೆ ಬಂಗಾರ ತರುವಂತೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ಕೊಡುತ್ತಾ ಬಂದಿರುತ್ತಾನೆ. ಮತ್ತು ನನ್ನ ನಾದಿನಿ ಫರೀದಾಬೇಗಂ ಗಂಡ ಖಾಜಾ ಹುಸೇನ ಅತ್ತೆಯಾದ ಸೋಫನಬಿ ಗಂಡ ಅಲ್ಲಾವುದ್ದೀನ ಮಾವ ಅಲ್ಲಾವುದ್ದೀನ ನೆಗೆಣಿ ನಸೀಮಾ ಇವರು ಕೂಡ ಇಸ್ಮಾಯಿಲ್ ಹೇಳಿದ ಹಾಗೆ 2 ಲಕ್ಷ ರೂಪಾಯಿ  2 ತೊಲೆ ಬಂಗಾರ ತೆಗೆದುಕೊಂಡು ಬಂದರೆ ಮಾತ್ರ ನಮ್ಮ ಮನೆಯಲ್ಲಿ ನಿಗೆ ಜಾಗವಿದೆ ಇಲ್ಲವಾದರೆ ನಿನಗೆ ರಂಡಿ ಜೀವ ಸಹಿತ ಉಳಿಸುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ. ನನ್ನ ಗಂಡ ನನಗೆ ಗೊತ್ತಿಲ್ಲದ ಹಾಗೆ ಮತ್ತೊಂದು ಮದುವೆ ಕೂಡ ಮಾಡಿಕೊಂಡಿರುತ್ತಾನೆ.  ದಿನಾಂಕ 26-07-2015 ರಂದು 11 ಗಂಟೆಯ ಸುಮಾರಿಗೆ ನಾನು ನನ್ನ ಎರಡು ಮಕ್ಕಳು ಹಾಗೂ ನನ್ನ ತಂದೆಯಾದ ಸಿಕಂದರ ಕೂಡಿ ನನ್ನ ಗಂಡನ ಮನೆಯಾದ ಹರನೂರ ಗ್ರಾಮಕ್ಕೆ ಹೋದಾಗ ಆಗ ಮೇಲೆ ನಮೂದಿಸಿದವರರೆಲ್ಲರೂ ಕೂಡಿ ರಂಡಿ ನೀನು ನಮ್ಮ ಮನೆಗೆ ಏಕೆ ಬಂದಿದ್ದಿ ನಮ್ಮ ವಿರುದ್ದ ಪೊಲೀಸ ಠಾಣೆಯಲ್ಲಿ ದೂರು ಸಲ್ಲಿಸಿರುತ್ತಿ ಒಂದು ವೇಳೆ ನೀನು ನಮ್ಮ ಮನೆಯಲ್ಲಿ ಇರಬೇಕಾದರೆ 2 ಲಕ್ಷ ರೂಪಾಯಿ 2 ತೊಲೆ ಬಂಗಾರ ತಂದರೆ ನಿನಗೆ ನಮ್ಮ ಇಟ್ಟುಕೊಳ್ಳುತ್ತೇವೆ. ಇಲ್ಲವಾದರೆ ನಿನಗೆ ಖಲಾಸ ಮಾಡುತ್ತೇವೆ ಅಂತಾ ಬೈದು ಮನೆಯಿಂದ ಹೊರಗೆ ಹಾಕಿರುತ್ತಾರೆ. ನಾನು ಗಂಡನ ಜೊತೆಗೆ ಜೀವನ ಮಾಡಬೇಕು ಅಂತಾ ಅವರು ಕೊಟ್ಟ ಹಿಂಸೆಯನ್ನು ಸಹಿಸಿಕೊಂಡು ಬಂದಿರುತ್ತೇನೆ ಇಷ್ಟು ದಿವಸ ಕಳೆದರು ಕೂಡ ಅವರು ನನ್ನೊಂದಿಗೆ ಜೀವನ ಮಾಡಲು ಸಿದ್ದವಿಲ್ಲ ಆದ್ದರಿಂದ ನನಗೆ ಮದುವೆ ಆದಾಗಿನಿಂದ ತವರು ಮನೆಯಿಂದ  ವರದಕ್ಷಿಣೆ ಹಣ ಬಂಗಾರ ತೆಗೆದುಕೊಂಡು ಬಾ ಅಂತಾ ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ  ಟಿಪ್ಪರ ವಶ :
ಅಫಜಲಪೂರ ಠಾಣೆ : ದಿನಾಂಕ 29-11-2015 ರಂದು ಗುಡ್ಡೆವಾಡಿ ಗ್ರಾಮದ ಭೀಮಾನದಿಯಿಂದ ಅಕ್ರಮವಾಗಿ ಕಳ್ಳತನದಿಂದ ಟಿಪ್ಪರದಲ್ಲಿ ಮರಳು ತುಂಬಿಕೊಂಡು ಅಫಜಲಪೂರ ಕಡೆಗೆ ಬರುತಿದ್ದಾನೆ. ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಕೋಳ್ಳೂರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಒಂದು ಟಿಪ್ಪರ ಬರುತ್ತಿದ್ದು ನೋಡಿ ಸದರಿ ಟಿಪ್ಪರನ್ನು ನಿಲ್ಲಿಸಲು ಕೈ ಸೂಚನೆ ಕೊಟ್ಟಾಗ, ಸದರಿ ಟಿಪ್ಪರ ಚಾಲಕ ನಮ್ಮನ್ನು ನೋಡಿ ಟಿಪ್ಪರ ನಿಲ್ಲಿಸಿ ಕತ್ತಲಲ್ಲಿ ಓಡಿ ಹೊದನು. ನಂತರ ಸದರಿ ಟಿಪ್ಪರನ್ನು  ಪಂಚರ ಸಮಕ್ಷಮ ಚಕ್ಕ ಮಾಡಲು, ಟಾಟಾ ಕಂಪನಿಯ  ಟಿಪ್ಪರ ಇದ್ದು ಅದರ ನಂ ಕೆಎ-32 ಸಿ-2770 ಅಂತ ಇದ್ದು, ಸದರಿ ಟಿಪ್ಪರದಲ್ಲಿ ಮರಳು ತುಂಬಿದ್ದು ಇದ್ದಿತ್ತು. ಸದರಿ ಮರಳಿನ ಅಂದಾಜು ಕಿಮ್ಮತ್ತು 5,000/- ರೂ ಆಗಬಹುದು. ಸದರಿ ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬಿದ ಟಿಪ್ಪರನ್ನು ಪಂಚರ ಸಮಕ್ಷಮ ವಶಕ್ಕೆ ತೆಗೆದುಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.