ಹಲ್ಲೆ ಪ್ರಕರಣ:
ರೋಜಾ ಠಾಣೆ: ದಿನಾಂಕ:26/01/2012 ರಂದು ನಮ್ಮ ಕಾಲೇಜಿನಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಫರಾನಾ ಕಾಲೇಜಿನಲ್ಲಿ ಸಾಯಂಕಾಲ 4 ಗಂಟೆ ಸುಮಾರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದರಿಂದ ಫರಾನಾ ಕಾಲೇಜಿಗೆ ಬಂದಿದ್ದು ಸ್ವಲ್ಪ ಹೊತ್ತು ಕಾರ್ಯಕ್ರಮಗಳು ನೋಡಿ ಕಾಲೇಜಿನ ಮುಂದೆ ಹೊರಗಡೆ ಬಂದಾಗ ಅಲ್ಲಿ ಜೈನ್ ಬಿಜಾಪುರಿ ಮತ್ತು ಅವನ ಜೊತೆಗೆ ಇನ್ನೊಬ್ಬ ಹುಡುಗ ಅವಾಚ್ಯವಾಗಿ ಬೈದು ಕರೆದು ನನಗೆ ನೀನು 10,000/-ರೂಪಾಯಿಗಳು ಕೊಡುವಂತೆ ಕೇಳಿದರು ಆಗ ನಾನು ನಾನು ಯಾಕೆ ನಿಮಗೆ ಹಣ ಕೊಡಬೇಕು ಅಂತಾ ಕೇಳಿದಕ್ಕೆ ಜೈನ ಬಿಜಾಪುರಿ ಇತನು ಬೆಲ್ಟ ತೆಗೆದು ನನಗೆ ಹೊಡೆಯಲು ಪ್ರಾರಂಭಿಸಿದನು, ಅವನ ಜೋತೆಗೆ ಇದ್ದ ಅವನ ಗೆಳೆಯ ಅವನು ಸಹ ಕೈ ಮುಷ್ಟಿ ಮಾಡಿ ಹೊಟ್ಟೆಯಲ್ಲಿ ಬೆನ್ನಿನಲ್ಲಿ ಹೊಡೆದನು. ಅವನ ಹೆಸರು ನನಗೆ ಗೊತ್ತಿಲ್ಲ, ನೋಡಿದರೆ ಗುರ್ತಿಸುತ್ತೇನೆ. ಅವರಿಬ್ಬರೂ ನನಗೆ ಟವೇರಾ ಗಾಡಿ ನಂ: ಕೆಎ-34-ಎಮ್.ಡಿ-2007 ಪರ್ಪಲ್ ಕಲರ್ ಗಾಡಿಯಲ್ಲಿ ಒತ್ತಾಯ ಪೂರ್ವಕವಾಗಿ ಗಾಡಿಯಲ್ಲಿ ಕೂಡಿಸಿಕೊಂಡು ಸೋನಿಯಾ ಗಾಂಧಿ ಕಾಲೋನಿಯ ಹತ್ತಿರ ಖುಲ್ಲಾ ಬಯಲು ಜಾಗೆಯ ಹತ್ತಿರ ಹೊಸದಾಗಿ ಕಟ್ಟುತ್ತಿರುವ ಕಟ್ಟಡ ಕೋಣೆಯಲ್ಲಿ ಕರೆದುಕೊಂಡು ಹೋಗಿ ಅಲ್ಲಿ ಕೂಡಿ ಹಾಕಿ ಅಲ್ಲಿಯೂ ಸಹ ನನಗೆ ಜೈನ ಬಿಜಾಪುರಿ ಇತನು ಬೇಲ್ಟದಿಂದ ಹೊಡೆದಿದ್ದರಿಂದ ರಕ್ತ ಕಂದುಗಟ್ಟಿದ್ದು ಅಲ್ಲದೆ ಕೂದಲನ್ನು ಹಿಡಿದು ಗೋಡೆಗೆ ಹೊಡೆದಿದ್ದರಿಂದ ಹಿಂದಲೆಯಲ್ಲಿ ಭೂಗುಟಿ ಬಂದು ರಕ್ತ ಕಂದು ಗಟ್ಟಿರುತ್ತದೆ. ಅಲ್ಲದೆ 2 ಗಲ್ಲಗಳಿಗೆ ಹೊಡೆದಿದ್ದು ಬಾವು ಬಂದಿರುತ್ತದೆ.ಅಲ್ಲಿ ನನಗೆ ಸುಮಾರು 2 ಗಂಟೆಗಳ ಕಾಲ ಆ ಮನೆಯಲ್ಲಿಯೆ ಕೂಡಿ ಹಾಕಿ ತಮ್ಮ ಹತ್ತಿರ ಇದ್ದ ಟಾವೇಲದಿಂದ ನನ್ನ ಕುತ್ತಿಗೆಗೆ ಒತ್ತಿ ಹಿಡಿದು ಕೊಲೆ ಮಾಡಲು ಪ್ರಯತ್ನಿಸಿದ್ದು ಹಾಗೂ ಹೀಗೂ ಅವರು ನನ್ನ ಕುತ್ತಿಗೆಗೆ ಹಾಕಿರುವ ಟಾವೇಲನ್ನು ಕೈಗಳಿಂದ ಹಿಡಿದು ಜೊಗ್ಗಿಕೊಂಡು ಸತ್ತವನಂತೆ ಒಮ್ಮೆಲೆ ಬಿದ್ದಿದ್ದು ಆಗ ಅವರು ನಾನು ಸತ್ತಿರುತ್ತೇನೆಂದು ಭಾವಿಸಿ ನನ್ನ ಕುತ್ತಿಗೆಗೆ ಹಾಕಿದ ಟವೇಲ ಬಿಚ್ಚಿದ್ದು ಅಷ್ಟರಲ್ಲಿ ಅಲ್ಲಿ ಇನ್ನೋಬ್ಬ ಇಮ್ತಿಯಾಜ ಬಿಜಾಪುರಿಯವರು ಅಲ್ಲಿಗೆ ಬಂದು ಏ ಸಾಲೆಕೊ ಖತಂಕರೋ ಅಂತಾ ಹೇಳುತ್ತಿರುವ ವಿಷಯ ನಾನು ಬಿದ್ದಲ್ಲೆ ನೋಡಿ ಕೇಳಿಸಿಕೊಂಡಿದ್ದು ನನಗೆ ಇವರು ಕೊಲೆ ಮಾಡಿ ಬಿಡುತ್ತಾರೆಂದು ತಿಳಿದು ನನ್ನ ಜೀವದ ಹಂಗು ತೊರೆದು ಅಲ್ಲಿಂದ ತಪ್ಪಿಸಿಕೊಂಡು ಓಡಿ ಬಂದು ರಾತ್ರಿ 8 ಪಿ ಎಮ ಕ್ಕೆ ಮನೆಯಲ್ಲಿ ವಿಷಯ ತಿಳಿಸಿದ್ದು ನಮ್ಮ ತಂದೆ ಸುಲೇಮಾನ ಇವರು ನನಗೆ ಆದ ಗಾಯವನ್ನು ಕಂಡು ಉಪಚಾರಕ್ಕಾಗಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ ಅಂತಾ ಶ್ರೀ ಮಹ್ಮದ ಅಮನ ತಂದೆ ಮಹ್ಮದ ಸುಲೇಮಾನ ಪಟೇಲ್ ಸಾ||ಮ.ನಂ:5-993/61/ಎಂ ಮಹಿಬೂಬ ನಗರ ರಿಂಗ ರೋಡ ಗುಲ್ಬರ್ಗಾ ರವರು ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ರೋಜಾ ಠಾಣೆ ಗುನ್ನೆ ನಂ:08/2012 ಕಲಂ: 323,324,342,363,109,504,506,307 ಸಂ:34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.