POLICE BHAVAN KALABURAGI

POLICE BHAVAN KALABURAGI

31 January 2012

GULBARGA DIST REPORTED CRIMES

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ
:
ಶ್ರೀ ಶಿವಶಂಕರ ತಂದೆ ಬಸವಂತರಾಯ
ಸಾ:ಮನೆ ನಂ 11-/823 ಬಸವ ನಗರ ಗುಲಬರ್ಗಾರವರು ನನ್ನ ಮಗ ಗೌತಮ ಇತನು ದಿನಾಂಕ 31-01-2012 ರಂದು 9-40 ಗಂಟೆಗೆ ಮಗನಾದ ಗೌತಮ ಇತನು ಶಾಂತಿ ನಗರದಲಿದ್ದ ಚಾಣುಕ್ಯ ಶಾಲೆ ಎದುರು ರೋಡಿನ ಬಾಜು ನಿಂತಿರುವಾಗ ಆಟೋರಿಕ್ಷಾ ನಂ ಕೆಎ-32 1869 ನೇದ್ದರ ಚಾಲಕ ಶಾಂತಿ ನಗರ ಕ್ರಾಸ್ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನನ್ನ ಮಗನಿಗೆ ಡಿಕ್ಕಿ ಪಡಿಸಿ ಅಪಘಾತಮಾಡಿ ಗಾಯಾಗೋಳಿಸಿ ತನ್ನ ಆಟೋರಿಕ್ಷಾ ಸಮೇತ ಹೊರಟು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 16/2012 ಕಲಂ: 279,337 ಐ.ಪಿ.ಸಿ ಸಂ 187 ಐ.ದಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:
ಶ್ರೀಶೈಲ ತಂದೆ ಅಂದಪ್ಪ ಕೊಳಸೂರೆ ಸಾ:ಕಿಣ್ಣಿಅಬ್ಬಾಸ್ ರವರು ನಾನು ದಿನಾಂಕ: 26/01/2012 ರಂದು ರಾತ್ರಿ 8:30 ಗಂಟೆಗೆ ವಾಗ್ದಾರಿ ಆಳಂದ ರಸ್ತೆಯ ಕಲ್ಯಾಣ ಗುಡ್ಡದ ಹತ್ತಿರ ತಿರುವಿನಲ್ಲಿ ಲಾರಿ ನಂಬರ ಎಮ್.ಡಬ್ಲೂ.ಟಿ 8245 ನೇದ್ದರ ಚಾಲಕನು ನನಗೆ ಮತ್ತು ನನ್ನ ಚಿಕ್ಕಮ್ಮ ನಿಂಬ್ಬೆವ್ವ ಇವಳಿಗೆ ಹಾಗು ಪಂಡರಿಗೆ ರಕ್ತ ಗಾಯ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 01/2012 ಕಲಂ 279,337,338, ಐಪಿಸಿ ಸಂಗಡ 187 ಐ,ಎಮ್,ವಿ ಆಕ್ಷ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಆಳಂದ ಪೊಲೀಸ ಠಾಣೆ:
ಹಲ್ಲೆ ಪ್ರಕರಣ:
ಇಬ್ರಾಹಿಂ ತಂದೆ ರಹಿಮಾನ ಸಾಬ ಭಾಗವಾನ ಸಾ:ಖಾನಬೌಡಿ ಆಳಂದ ರವರು ನಾನು ದಿನಾಂಕ 30/01/2012 ರಂದು 3.30 ಗಂಟೆಗೆ ನಾನು ಉಮರ್ಗಾ ರೋಡಿನಲ್ಲಿ ಇರುವ [ದುದನಿ] ಕಸ್ತೂರಿ ಬಾರ ಹತ್ತಿರ ನಾಗೇಂದ್ರ ಬಿರಾದಾರ ರವರ ಪಾನ ಅಂಗಡಿ ಹೋಗಿ 2 ರೂ ನಾಣ್ಯ ಕೊಟ್ಟು ಬೀಡಿಕೊಡು ಅಂತಾ ಹೇಳಿದೆನು, ನಾಗೇಂದ್ರಪ್ಪನು 2 ಬೀಡಿಗಳನ್ನು ಕೊಟ್ಟನ್ನು ಅದಕ್ಕೆ ನಾನು 2 ರೂ ಗೆ 4 ಬೀಡಿಗಳು ಬರುತ್ತವೆ ಅಂತಾ ಹೇಳಿದಕ್ಕೆ ನಾಗೇಂದ್ರನು ನೀನು ಒಂದೆ ರೂಪಾಯಿಯನ್ನು ಕೊಟ್ಟಿದಿ 2 ರೂ ನಾಣ್ಯ ಕೊಟ್ಟಿರುವದಿಲ್ಲ ಅಂತಾ ಜಗಳಕ್ಕೆ ಬಿದ್ದು ಕೈ ಮುಷ್ಠಿಮಾಡಿ ನನ್ನ ಹೊಟ್ಟಗೆ ಅಲ್ಲಲ್ಲಿ ಹೊಡೆದನು , ಮತ್ತು ಅಟೋ ಮೋಬೈಲ ಅಂಗಡಿಯವನಾದ ಸಿದ್ದು ಗೌಡ ಇತನು ಸಹ ಬಂದವನೆ ಕಲ್ಲಿನಿಂದ ಮತ್ತು ರಾಡಿನಿಂದ ಹೊಡೆದನು ಇನ್ನೂ ಇನ್ನೂ ಇಬ್ಬರು ಸಹ ಹೊಡೆದಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನ: 22/2012 ಕಲಂ 324.323.504.ಸಂ.34 IPC ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಜಾತಿ ನಿಂದನೆ ಪ್ರಕರಣ:
ಮುದೋಳ ಠಾಣೆ:
ಶ್ರೀ ಲಕ್ಷಮಪ್ಪಾ ತಂದೆ ಮಲ್ಲಪ್ಪಾ ಹರಿಜನ ಸಾ|| ಕೊಂತನಪಲ್ಲಿಗ್ರಾಮ ರವರು ನಾನು ಲಕ್ಷಯ್ಯ ವಡ್ಡರ ಹುಡಾ ಇವರ ಹೊಲ ನಮ್ಮೂರ ಗೇಟ ಹತ್ತಿರ ಇರುತ್ತದೆ. ನಾನು ಇವರ ಹೊಲದಲ್ಲಿ ಆಳು ಮಗನಾಗಿ ದುಡಿಯುತ್ತಿರುತ್ತೆನೆ , ಲಕ್ಷ್ಮಯ್ಯ ಇವರ ಹೊಲದಲ್ಲಿ ನೀರಿನ ಪೈಪ ಯಾರೋ ಮುರಿದಿದ್ದರು ಇದರಿಂದ ನಾನು ಯಾರು ಪೈಪ ಮುರಿದಿದ್ದಾರೆ ಅಂತಾ ಬೈದ್ದದರಿಂದ ಹೊಲದ ಪಕ್ಕದ ಹತ್ತಿರ ಹೊಲ ಇರುವ ರವಿ ಗಾಣಗಾಪೂರ ಹಾಗು ಆತನ ತಮ್ಮಂದಿರಾದ ಶಿವು, ಗಣಪತಿ, ಮತ್ತು ನಾಗಪ್ಪಾ ಇವರು ನನ್ನನ್ನು ಅವಾಚ್ಯವಾಗಿ ಬೈದು ಜಾತಿ ನಿಂದನೆ ಮಾಡಿ ಹೊಡೆ ಬಡೆ ಮಾಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 10/2012 ಕಲಂ, 341, 323, 504, ಸಂಗಡ 34 ಐಪಿಸಿ ಮತ್ತು 3(1) (10) ಎಸ.ಸಿ ಮತ್ತು ಎಸ.ಟಿ ಆಕ್ಟ ಪ್ರಕಾರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ

GULBARGA DIST REPORTED CRIME

ವಾಯು ಮಾಲಿನ್ಯ ಕಲುಷಿತಗೊಳಿಸುತ್ತಿರುವ ಬಗ್ಗೆ :
ಗುಲಬರ್ಗಾ ಗ್ರಾಮೀಣ ಠಾಣೆ
:
ಶ್ರೀ ಜಟ್ಟೆಪ್ಪ ತಂದೆ ನಾಗಪ್ಪ ಜಾನಕರ ಉ: ಹಿರಿಯ ನಿರ್ಮಲ್ಯ ನಿರೀಕ್ಷಕರು ಮಾಹಾ ನಗರ ಪಾಲಿಕೆ ಗುಲಬರ್ಗಾರವರು ನಾನು ದಿನಾಂಕ 31-01-12 ರಂದು ರಾತ್ರಿ 9-00 ಗಂಟೆ ಸುಮಾರಿಗೆ ಪರೀಶಿಲನೆ ಮಾಡಲು ಉಸ್ಮಾನಮಿಯ್ಯಾ ತಂದೆ ಖಾಸೀಮ ಅಲಿ ಸಾ||ಚಾಂದಬೀಬಿ ಬಿ.ಎಡ್. ಕಾಲೇಜ ಹತ್ತಿರ ಬುಲಂದ ಪರವೇಜ ಕಾಲನಿ ಗುಲಬರ್ಗಾ, ಮಹ್ಮದ ಜಾಕೀರ ಅಬ್ದುಲ ಸತ್ತಾರ ಸಾ||ಇಸ್ಲಾಂಬಾದ ಕಾಲನಿ ಗುಲಬರ್ಗಾ, ಮಹ್ಮದ ರಜಾಕ ತಂದೆ ಉಸ್ಮಾನಮಿಯ್ಯಾ ಸಾ: ಚಾಂದಬೀಬಿ ಬಿ.ಎಡ್. ಕಾಲೇಜ ಹತ್ತಿರ ಬುಲಂದ ಪರವೇಜ ಕಾಲನಿ ಗುಲಬರ್ಗಾ ಅಹ್ಮದ ಪಾಶಾ ತಂದೆ ಬಾಬುಮಿಯ್ಯಾ ಸಾ||ಇಸ್ಲಾಂಬಾದ ಕಾಲನಿ ಗುಲಬರ್ಗಾ ಇವರು ಗುಲಬರ್ಗಾ ಮಾಹಾ ನಗರ ಪಾಲಿಕೆಯವರಿಂದ ಪರವಾನಿಗೆ ಪಡೆದುಕೊಳ್ಳದೇ ಮಿಲ್ಲತ ನಗರ ಬಡಾವಣೆಯ ಲತೀಫ ತಂದೆ ಅಬ್ದುಲ ರಜಾಕ ಇವರಿಗೆ ಸೇರಿದ ಸ್ಥಳದಲ್ಲಿ ರಾತ್ರಿ ಸಮಯದಲ್ಲಿ ಅನಧಿಕೃತವಾಗಿ ಪ್ರಾಣಿಗಳ ಕೊಳೆತು ಮಾಂಸ (ಕರಳು) ಮತ್ತು ಚರ್ಬಿ ಸಂಗ್ರಹಿಸಿದ್ದು, ಇದರಿಂದ ಸುತ್ತ ಮುತ್ತಲಿನ ಸಂಪೂರ್ಣ ಪ್ರದೇಶ ದುವಾರ್ಸನೆಯಿಂದ ಕುಲಸಿತಗೊಂಡು ಸಾರ್ವಜನಿಕರ ಆರೋಗ್ಯ ಹಾನಿ ಉಂಟಾಗುವ ಅಥವಾ ರೋಗ ಹರಡುವದು ಮತ್ತು ವಾಯು ಮಾಲಿನ್ಯ ಕಲುಷಿತಗೊಳಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 30/2012 ಕಲಂ ಕಲಂ 269, 278, 290, 336 ಸಂ.149 ಐಪಿಸಿ ಮತ್ತು ಕರ್ನಾಟಕ ಕಾರ್ಪೋರೇಶನ ಎಕ್ಟ ಕಲಂ 387 ಮತ್ತು ಎನ್ವವಾರಮೆಂಟ್ ಪ್ರೊಟೆಕ್ಷನ ಎಕ್ಟ 1986 ಕಲಂ 7,8, 15 ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.