POLICE BHAVAN KALABURAGI

POLICE BHAVAN KALABURAGI

24 September 2017

KALABURAGI DISTRICT REPORTED CRIMES

ಸುಲಿಗೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಯೂಸುಫ ಪಟೇಲ ತಂದೆ ಖಾಜಾ ಪಟೇಲ ಸಾ:ಮೀಜಬಾನಗರ ಎಂ.ಎಸ್‌.ಕೆ ಮೀಲ್ಕಲಬುರಗಿ ದಿನಾಂಕ:13-09-2017 ರಂದು ರಾಘವೇಂದ್ರ ನಗರ ಪೊಲೀಸ ಠಾಣೆಯಲ್ಲಿ ಗುನ್ನೆ ನಂ.189/17 ಕಲಂ:379 ಐಪಿಸಿ ಮತ್ತು 21 (1) ಎಮ್ಎಮ್‌‌ಆರ್‌‌ಡಿ ಕಾಯ್ದೆ 1957 ಪ್ರಕಾರ ಪ್ರಕರಣ ದಾಖಲಾಗಿದ್ದು ನಂತರ ಅರ್ಜಿದಾರನು ಮೇಲಾಧಿಕಾರಿಗಳಿಗೆ ಭೇಟಿ ಮಾಡಿ ಅರ್ಜಿ ನೀಡಿದ್ದು ಅದನ್ನು ಪರಿಶೀಲಿಸಲಾಗಿ ಅರ್ಜಿಯ ಜೊತೆ ಸಲ್ಲಿಸಿದ ಮೊಬೈಲ್ನಲ್ಲಿ ಮಾತನಾಡಿದ ಆಡಿಯೋ ಸಿಡಿ ಪರಿಶೀಲಿಸಲಾಗಿ ಕನಕರೆಡ್ಡಿ ಈತನು ಮೇಲಿಂದ ಮೇಲೆ ಅರ್ಜಿದಾರನಿಗೆ 15 ಸಾವಿರ ರೂ ಹಣದ ಕುರಿತು ಭೇಟಿಯಾಗಬೇಕು ಅಂತಾ ತಿಳಿಸಿದ್ದು ಅದರಂತೆ ಅರ್ಜಿದಾರನು ಹೆಚ್ಚುವರಿಯಾಗಿ ದಿನಾಂಕ 06-09-2017 ರಂದು 10 ಸಾವಿರ ರೂ ಹಣ ನೀಡಿರುವುದಾಗಿ ಮತ್ತು ಇನ್ನೂ 5 ಸಾವಿರ ರೂ ಕೊಡಲು ಬೇಡಿಕೆ ಇಟ್ಟಿದ್ದು ಅದನ್ನು ಕೊಡದೇ ಇದ್ದಾಗ ದಿನಾಂಕ:13-09-2017 ರಂದು ಅರ್ಜಿದಾರನ ಉಸುಕಿನ ಟಿಪ್ಪರ ಕನಕರೆಡ್ಡಿ ಈತನು ಹಿಡಿದು ಹೆಚ್ಚುವರಿಯಾಗಿ 25 ಸಾವಿರ ರೂ ಬೇಡಿಕೆ ಇಟ್ಟಿದ್ದು ಅದನ್ನು ಕೊಡದೇ ಇದ್ದಾಗ ಎಸಿಬಿ ದಾಳಿಯಿಂದಾಗಿ ಅಮಾನತ್ತು ಹೊಂದಿದ್ದ ಕನಕರೆಡ್ಡಿ ಹೆಚ್ಸಿ-262 ಈತನು ಹಣದ ಬಗ್ಗೆ ಬೇಡಿಕೆ ಇಟ್ಟಿರುತ್ತಾನೆ. ಮೇಲಿನ ಎಲ್ಲಾ ಘಟನೆ ಪರಿಶೀಲಿಸಿ  ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಆಳಂದ ಠಾಣೆ : ಶ್ರೀ ಲಕ್ಷ್ಮಣ ತಂದೆ ಶಿವನಿಂಗಪ್ಪ ಮಾಂಗ ಸಾ: ತಡಕಲ ತಾ:ಆಳಂದ ರವರು ದಿನಾಂಕ 13-09-2017 ರಂದು ಶರಣು ಚಿಮ್ಮನ ಇವರ ಹೊಟೇಲದಲ್ಲಿ ಊಟ ಮಾಡಲು ಹೊದಾಗ ಹೊಟೇಲದಲ್ಲಿ 1) ಶರಣು ಚಿಮ್ಮನ 2) ದೇವಪ್ಪ ತಂದೆ ರೇವಣಪ್ಪಾ ಚಿಮ್ಮನ 3) ಕಾಶಪ್ಪ ತಂದೆ ರೇವಣಪ್ಪಾ ಚಿಮ್ಮನ ಇವರು ಇದ್ದು ಅವರು ನನಗೆ ಊಟ ಕೊಡಲುವುದಿಲ್ಲಾ ಅಂತಾ ನನ್ನೊಂದಿಗೆ ತಕರಾರು ಮಾಡಿ ಹೊಟೇಲದಿಂದ ಹೊರಹಾಕಿರುತ್ತಾರೆ. ನಂತರ ಅದೆ ದಿವಸ ರಾತ್ರಿ ನನ್ನ ಮನೆಯ ಮೇಲೆ ಅವರು ಕಲ್ಲು ಹೊಡೆದು ಅವಾಚ್ಯವಾಗಿ ಬೈದಿರುತ್ತಾರೆ. ನಂತರ ದಿನಾಂಕ 14/09/2017 ರಂದು ಬೆಳಿಗ್ಗೆ 8:00 ಗಂಟೆಗೆ ನಾನು ನಮ್ಮ ಮನೆಯ ಮೆಲೆ ಏಕೆ ಕಲ್ಲು ಹೊಡೆದಿದ್ದಿರಿ ಎಂದು ಕೇಳಿದಾಗ ದೇವಪ್ಪ ಚಿಮ್ಮನ ಇತನು ರಂಡಿ ಮಗನೇ ಮಾದಿಗ ಸೂಳೆ ಮಗನೇ ನಾವು ಇನ್ನು ಕಲ್ಲು ಹೊಡೆಯುತ್ತೇವೆ ಏನು ಸೆಂಟಾ ಕಿತ್ತಕೊತ್ತಿ ಅಂತಾ ಅವಾಚ್ಯವಾಗಿ ಬೈಯುವಾಗ ಕಾಶಪ್ಪ ಚಿಮ್ಮನ ಹಾಗು ಶರಣು ಚಿಮ್ಮನ ಬಂದು ನನಗೆ ಕೈಹಿಡಿದು ಎಳೆದಾಡಿ ಜೊಲಾಜೊಲಿ ಮಾಡಿ ಕೈಯಿಂದ ಎದೆಯ ಮೆಲೆ ಮತ್ತು ಬೆನ್ನಿನ ಮೇಲೆ ಕೈಯಿಂದ ಗುತ್ತಿರುತ್ತಾರೆ ಆಗ ನಮ್ಮ ಗ್ರಾಮದ ರಾಣಪ್ಪ ತಂದೆ ನಾಗಪ್ಪ ಮಾಂಗ ಹಾಗು ಯಶ್ವಂತ ಇವರು ಬಂದು ಜಗಳ ಬಿಡಿಸುವಾಗ ಮಗನೇ ಇವತ್ತು ಉಳಿದಿದಿ ಇನ್ನೊಮ್ಮೆ ನೀನು ನಮ್ಮ ಹೊಟೇಲ ಕಡೆಗೆ ಬಂದರೆ ನಿನಗೆ ಖಲಾಷ ಮಾಡಿಯೇ ಬಿಡುತ್ತೇವೆ ಅಂತಾ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.