POLICE BHAVAN KALABURAGI

POLICE BHAVAN KALABURAGI

02 August 2014

Gulbarga District Reported Crimes

ಕಳ್ಳರ ಬಂದನ :
ಸ್ಟೇಷನ ಬಜಾರ ಠಾಣೆ : ಗುಲಬರ್ಗಾ ನಗರದ ವಕೀಲರ ಕಾಲೋನಿಯ ಲಿಂಗರಾಜ ವಕೀಲರ ಮನೆ ಹಾಗು ಮಿನಿ ವಿಧಾನ ಸೌದದ ಎದುರಗಡೆಯ ಮಹ್ಮದ ಹಖಿಂ ರವರ ಹಿಂದುಸ್ತಾನಿ ಎಂಟರಪ್ರೇಸಸ್‌ ನಲ್ಲಿ ಕಳ್ಳತನವಾಗಿದ್ದು  ಸ್ಟೇಷನ ಬಜಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು . ಮಾನ್ಯ ಎಸ್ ಪಿ ಸಾಹೇಬರು,  ಡಿ ಎಸ್ ಪಿ ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಸ್ಟೇಷನ ಬಜಾರ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟರ ಬಿ ಬಿ ಭಜಂತ್ರಿ, ಹಾಗು ಸಿಬ್ಬಂದಿಯವರು ಕಾರ್ಯಾಚರಣೆ  ನಡೆಸಿ ರೇಲ್ವೆ ಸ್ಟೇಷನ ಹತ್ತಿರ ದಾಳಿ ಮಾಡಿ ಆರೋಪಿತರಾದ 1) ಅಂಬುಬಾಯಿ ಗಂಡ ಚರಣದಾಸ ಉಪದ್ಯಾ 2) ರಾಣಿ ತಂದೆ ಚರಣದಾಸ ಉಪದ್ಯಾ ಸಾ : ಇಬ್ಬರು ಬಾಪು ನಗರ ಗುಲಬರ್ಗಾ ಇವರನ್ನು  ದಿನಾಂಕ; 02/08/2014 ರಂದು ಬೆಳಗಿನ ಜಾವ ಬಂದಿಸಿ ಬಂದಿತರಿಂದ ಸುಮಾರು 80.000 ರೂಪಾಯಿ ಕಿಮ್ಮತ್ತಿನ ಬಂಗಾರದ ಒಡೆವೆಗಳು ಹಾಗು ಸೆನಿಟರಿವೇರ ಸಾಮಾನುಗಳು ಜಪ್ತಿ ಮಾಡಿಕೊಂಡಿಕೊಂಡಿರುತ್ತಾರೆ.
ಇಸ್ಪೀಟ್ ಜೂಜಾಟದಲ್ಲಿ ತೊಡಗಿರುವ ಸರಕಾರಿ ನೌಕರರ ಬಂಧನ :
ಬ್ರಹ್ಮಪೂರ ಠಾಣೆ : ಗುಲಬರ್ಗಾ ನಗರದ ಸರ್ವೋದಯ ಕಾಲೊನಿಯಲ್ಲಿ ಇರುವ ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘದ ರಿಕ್ರೇಯಶನ್ ಕ್ಲಬ್ ಪಿ.ಡಬ್ಲೂ.ಡಿ. ವಸತಿ ಗೃಹ ನಂ. ಡಿ - 21 ರಲ್ಲಿ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ್ ಎಂಬ ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತವಾದ ಬಾತ್ಮಿ ಬಂದ ಪ್ರಕಾರ ಶ್ರೀ.ಸಂತೋಷ ಬಾಬು.ಕೆ. ಐ.ಪಿ.ಎಸ್. ಎ.ಎಸ್.ಪಿ. ಗ್ರಾಮಿಣ ಉಪ-ವಿಭಾಗ ಗುಲಬರ್ಗಾ ಮತ್ತು ಶ್ರೀ.ಮಹಾನಿಂಗ ನಂದಗಾವಿ ಡಿ.ಎಸ್.ಪಿ.(ಎ) ಉಪ ವಿಭಾಗ ಗುಲಬರ್ಗಾ ರವರ ನೇತ್ರತ್ವದಲ್ಲಿ ಶ್ರೀ.ಕೆ.ಎಂ.ಸತೀಶ ಪೊಲೀಸ ಇನ್ಸಪೆಕ್ಟರ್ ಬ್ರಹ್ಮಪೂರ ಪೊಲೀಸ್ ಠಾಣೆ ಗುಲಬರ್ಗಾ ಶ್ರೀ.ಯು.ಶರಣಪ್ಪ ಸಿ.ಪಿ.ಐ.ಎಂ.ಬಿ.ನಗರ ವೃತ್ತ ಗುಲಬರ್ಗಾ ಶ್ರೀ.ವಿನಾಯಕ ಪಿ.ಎಸ್.ಐ (ಕಾ&ಸು) ಬ್ರಹ್ಮಪೂರ ಪೊಲೀಸ್ ಠಾಣೆ, ಶ್ರೀ.ಹುಸೇನ್ ಭಾಷಾ ಪಿ.ಎಸ್.ಐ.ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಗುಲಬರ್ಗಾ ಮತ್ತು ಸಿಬ್ಬಂದಿ ವರ್ಗದವರು ದಾಳಿ ಮಾಡಿ ಕರ್ನಾಟಕ  ರಾಜ್ಯ ಸರಕಾರಿ ನೌಕರ ಸಂಘದ ರಿಕ್ರೇಯಶನ್ ಕ್ಲಬ್ದ ಜಂಟಿ ಕಾರ್ಯದರ್ಶಿಯಾದ  ಸತೀಶ ಸೇರಿದಂತೆ 45 ಜನರನ್ನು ಬಂಧಸಿ ಅವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 1.16.000/- ರೂ, 64 ಮೋಟಾರ ಸೈಕಲ್ಗಳು, 34 ಮೋಬಾಯಿಲ್ ಪೋನಗಳು ವಶಕ್ಕೆ ತೆಗೆದುಕೊಂಡಿದ್ದು, ಈ ವಿಷಯದ ಕುರಿತು ಮಾನ್ಯ ಎಸ್.ಪಿ.ಸಾಹೇಬ ಗುಲಬರ್ಗಾ ರವರು ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.
ರೋಜಾ ಠಾಣೆ : ದಿನಾಂಕ: 01-08-2014 ರಂದು ಸಾಯಂಕಾಲ ಗುಲಬರ್ಗಾ ನಗರದ  ಮಿಜಗುರಿ ಹತ್ತಿರ ಇರುವ ಕೆ.ಬಿ.ಎನ್. ರೆಸಿಡೆಂಟ್ ಲಾಡ್ಜ ಹಿಂದುಗಡೆ ಇರುವ ಖುಲ್ಲಾ ಬಯಲು ಜಾಗೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೆಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ದೈವಲೀಲೆಯ ಜೂಜಾಟದಲ್ಲಿ ತೊಡಗಿರುವ ಬಗ್ಗೆ ಖಚಿತ ಬಾತ್ಮಿ ಬಂದಿ ಮೇರೆಗೆ ಶ್ರೀ ಎಂ. ನಾರಾಯಣಪ್ಪ ಪಿ.ಐ  ರೋಜಾ ಠಾಣೆ  ರವರು ಮೇಲಾಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದು ಅಲ್ಲದೆ ಮಾನ್ಯ ಡಿ.ಎಸ್.ಪಿ ಸಾಹೇಬ ;ಬಿ; ಉಪವಿಭಾಗ ವರಿಗೆ ಠಾಣೆಗೆ ಬರಮಾಡಿಕೊಂಡು ಅವರು ಮತ್ತು ಅವರ ಸಿಬ್ಬಂದಿಯವರಾದ 1] ಆಸಿಫ ಮಿಯ್ಯಾಂ ಪಿಸಿ-535 2] ಯಲಗುರೇಶ ಪಿಸಿ-296 3] ಗಂಗಾಧರ ಪಿಸಿ-432 4] ಮಹ್ಮದ ರಫಿಯೊದ್ದೀನ ಪಿಸಿ-370 5] ದೇವಿಂದ್ರಪ್ಪ ಪಿಸಿ-182 6] ರಾಮು ಪವಾರ   ನಂತರ ನಮ್ಮ ಠಾಣೆಯ ಪಿ.ಎಸ್.ಐ (ಅವಿ) ಶ್ರೀ ನಿಂಗಪ್ಪ ಪೂಜೇರಿ ಹಾಗೂ  ಸಿಬ್ಬಂದಿ ಜನರಾದ ಪಿಸಿ-645 ಮದರಸಾಬ, ಹೆಚ್,ಸಿ-305 ರಾಜಶೇಖರ ಪಿಸಿ-1134 ಅಬ್ದುಲರಹಮಾನ ಮತ್ತು ಪಂಚರೊಂದಿಗೆ  ಬಾತ್ಮಿ ಬಂದ ಸ್ಥಳವಾದ ಮಿಜಗುರಿ ಹತ್ತಿರ ಇರುವ ಕೆ.ಬಿ.ಎನ್. ರೆಸಿಡೆಂಟ್ ಲಾಡ್ಜ ಹಿಂದುಗಡೆ ಇರುವ ಖುಲ್ಲಾ ಬಯಲು ಜಾಗೆಯಲ್ಲಿ  ಕಂಪೌಂಡ ಗೋಡೆಯ ಹತ್ತಿರ ಮರೆಯಲ್ಲಿ ನಿಂತು ನೋಡಲಾಗಿ ಮಿಜಗುರಿ ಹತ್ತಿರ ಇರುವ ಕೆ.ಬಿ.ಎನ್. ರೆಸಿಡೆಂಟ್ ಲಾಡ್ಜ ಹಿಂದುಗಡೆ ಇರುವ ಖುಲ್ಲಾ ಬಯಲು ಜಾಗೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ದಾಳಿಮಾಡಿ ಒಟ್ಟು 17 ಜನ ಇಸ್ಪೀಟ ಜೂಜಾಟ ಆಡುತ್ತಿದ್ದ ಜೂಜುಕೋರರಿಗೆ ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲು 1] ಆದಿಲ್ ತಂದೆ ಅಜೀಜ  ಸಾ:  ನೀರಿನ ಟಾಕಿ ಹತ್ತಿರ  ಮಹಿಬೂಬ ನಗರ ಕಾಲೋನಿ ಗುಲಬರ್ಗಾ  2] ಪ್ರಧಾನಿ ತಂದೆ ಸಿದ್ದಪ್ಪ ಕೆಂಭಾವಿ ಸಾ: ಮಹಾಲಕ್ಷ್ಮೀ ನಿವಾಸ ಹಳೆ ಜೇವರ್ಗಿ ರೋಡ ಗಣೇಶ ನಗರ ಗುಲಬರ್ಗಾ 3] ಏಜು ಪಟೇಲ ತಂದೆ ಮೈಬೂಬಸಾಬ ಸಾ: ಇಸ್ಲಾಮಾಬಾದ ಕಾಲನಿ {ಕಪನೂರ} ಗುಲಬರ್ಗಾ 4] ಫಾರೂಕ ತಂದೆ ಸೈಯ್ಯದಸಾಬ ಸಾ: ಮಿಜಗುರಿ ಗುಲಬರ್ಗಾ 5] ಜಲೀಲ ತಂದೆ ಸಲೀಮ ಸಾ: ದಂಡೋತಿ ತಾ: ಚಿತ್ತಾಪುರ ಜಿ: ಗುಲಬರ್ಗಾ 6] ರವಿ ತಂದೆ ಚನ್ನಪ್ಪ ಮಮ್ಮಾ ಸಾ: ಬಡಾ ರೋಜಾ ಗುಲಬರ್ಗಾ 7] ಬಸವರಾಜ ತಂದೆ ಶಿವಣ್ಣಪ್ಪ ಬಂಗರಗಿ ಸಾ: ನ್ಯೊ ರಾಘವೇಂದ್ರ ಕಾಲೋನಿ ಗುಲಬರ್ಗಾ 8] ಮಹ್ಮದ ಇಸಾಕ ತಂದೆ ಮಹ್ಮದ ಯುಸುಫ ಸಾ: ಮೊದಲನೇ ಕ್ರಾಸ ಆದರ್ಶ ನಗರ ಗುಲಬರ್ಗಾ 9] ಶಾಂತಯ್ಯ ತಂದೆ ಚನ್ನಯ್ಯ ಹೆಮುಡಾ ಸಾ:ಮುಕರಂಬಿ ತಾ: ಚಿಂಚೋಳಿ ಜಿ; ಗುಲಬರ್ಗಾ 10] ವಿಲಾಸ ತಂದೆ ಸಂಗಪ್ಪ ಹರಸೂರ ಸಾ; ಮಹಾಲಕ್ಷ್ಮೀ ಲೇಔಟ ಗುಲಬರ್ಗಾ 11] ಪ್ರವೀಣ ತಂದೆ ಸುಬ್ಬಣ್ಣ ಹೊಸಮನಿ ಸಾ; ಬೆಳಮಗಿ ಹಾ; ವ: ಮ್.ಜಿ ರೋಡ ಬಸವೇಶ್ವರ ಕಾಲೋನಿ ಗುಲಬರ್ಗಾ 12] ರೇವಣಸಿದ್ದಪ್ಪ ತಂದೆ ಬಾಬುರಾವ ಸಲಗರ ಸಾ : ಶಾಹಾಬಜಾರ ಕೋಣಿನ ದೊಡ್ಡಿ ಗುಲಬರ್ಗಾ 13] ಮಹ್ಮದ ಬಾಬಾ ತಂದೆ ಮಹಿಬೂಬ ಅಲಿ ಸಾ; ಖಮರ ಕಾಲೋನಿ ಗುಲಬರ್ಗಾ 14] ವಿಶಾಲ ತಂದೆ ಗುರುಲಿಂಗಪ್ಪ ಸಾ; ಮಕ್ತಂಪುರ ಗುಲಬರ್ಗಾ 15] ವಿರೇಂದ್ರ ತಂದೆ ನೀಲಕಂಠರಾವ್ ಸಾ: ಸ್ವಸ್ತಿಕ ನಗರ ಗುಲಬರ್ಗಾ 16] ಗೋಪಾಲ ತಂದೆ ಸಂಗಾರೆಡ್ಡಿ ತುಮಕುಂಟಾ ಸಾ; ಶಾಸ್ತ್ರಿ ನಗರ ಕೊಠಾರಿ ಭವನ ಗುಲಬರ್ಗಾ 17) ಸಂಗಪ್ಪಾ ತಂದೆ ಚನಬಸಪ್ಪ ಪಾಟೀಲ ಸಾ: ಮನೆ ನಂ: 2-370 ಜಗತ ಗುಲಬರ್ಗಾ ಇವರಿಂದ ಒಟ್ಟು ನಗದು ಹಣ 1,65,190/-ರೂಪಾಯಿ ಅಲ್ಲದೇ ಮತ್ತು ಜೂಜಾಟಕ್ಕೆ ಉಪಯೋಗಿಸಿದ 52 ಇಸ್ಪಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ಮರಳಿ ಸದರಿಯವರೊಂದಿಗೆ ರೋಜಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ದೇಸಿ ಸರಾಯಿ ಮಾರಾಟ ಮಾಡುತ್ತಿದ್ದವರ ಬಂಧನ :
ಮಾದನ ಹಿಪ್ಪರಗಾ ಠಾಣೆ : ದಿನಾಂಕ 02-08-2014 ರಂದು ಮಾದನ ಹಿಪ್ಪರಗಾ ಠಾಣಾ ಹದ್ದಿಯಲ್ಲಿ ಬರುವ ನಿಂಬಾಳ ಗ್ರಾಮದಲ್ಲಿ ಅನಧಿಕೃತ ದೇಸಿ ಸಾರಾಯಿ ಮಾರಾಟ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಶ್ರೀ. ಡಿ. ಬಿ ಕಟ್ಟಿಮನಿ ಪಿ.ಎಸ್.ಐ ಮಾದನ ಹಿಪ್ಪರಗಾ ಠಾಣೆ  ಹಾಗು ಪಂಚರು ಮತ್ತು ಸಿಬ್ಬಂದಿಯೊಂದಿಗೆ 09;30 ಗಂಟೆಗೆ ನಿಂಬಾಳ ಗ್ರಾಮಕ್ಕೆ ಹೋಗಿ ನಿಂಬಾಳ ಗ್ರಾಮದ ಬಸ್ಸ ನಿಲ್ದಾಣದ ಹತ್ತೀರ ಆರೋಪಿತನ ಹೊಟೇಲದಲ್ಲಿ ಅನಧಿಕೃತ ಸಾರಾಯಿ ಮಹಾರಾಷ್ಟ್ರದಿಂದು ತಂದು ಮಾರಾಟ ಮಾಡುತ್ತಿದ್ದ ಅದು ಭಟ್ಟಿ ಸಾರಾಯಿಯಂತೆ ಕಂಡುಬಂದಿದ್ದರಿಂದ ಖಚಿತಪಡಿಸಿಕೊಂಡು ದಾಳಿ ಮಾಡಿ 1] ಹಣಮಂತ ತಂದೆ ಚಂದ್ರಶಾ ಲೆಂಡೆ 2] ಶಾಂತಲಿಂಗ ತಂದೆ ಹಣಮಂತ ಲೆಂಡೆ ಸಾ: ಇಬ್ಬರು ನಿಂಬಾಳ ಇವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡಿ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ದೇಸಿ ದಾರು ಸಂತ್ರಾ ಅನ್ನುವ ಹೇಸರಿನ 180 ಎಂ,ಎಲ್, ನ ಗಾಜಿನ 36 ಬಾಟಲಿಗಳು ಅಂದಾಜು ಕಿಮ್ಮತ್ತು 1188/- ರೂಪಾಯಿಗಳ ಕಿಮ್ಮತ್ತಿನ ಮುದ್ದೆಮಾಲುನ್ನು ಜಪ್ತಿಪಡಿಸಿಕೊಂಡು ಮರಳಿ ಮಾದನಹಿಪ್ಪರಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಸುರೇಶ ತಂದೆ ಮಾರುತಿರಾವ ಕುಲಕರ್ಣಿ ಸಾ: ಪ್ಲಾಟ ನಂ. 1-867/30 ಬಿ ಸಾಯಿ ನಿವಾಸ ವೆಂಕಟೇಶ ನಗರ ಗುಲಬರ್ಗಾ ರವರು ತಮ್ಮ ದಿನನಿತ್ಯದ ಕೆಲಸಕ್ಕಾಗಿ ಹಿರೋ ಹೊಂಡಾ ಸ್ಲೇಂಡರ ಪ್ಲಸ್ ನಂ. ಕೆ.ಎ-39 ಎಚ್- 1972  ಚಸ್ಸಿ ನಂ. 05C16C24710 ಇಂಜನ ನಂ. 05C15M25059 ಅ.ಕಿ. 22,000/- ರೂ ಇದ್ದು ಇದರ ಕಾಗದ ಪತ್ರಗಳು ನನ್ನ ಹೆಸರಿನಲ್ಲಿವೆ ದಿನಾಂಕ 04/05/2014 ರಂದು 11 ಎ.ಎಂ.ಕ್ಕೆ ಬಸ್ ನಿಲ್ದಾಣ ಗುಲಬರ್ಗಾದಲ್ಲಿ ನನ್ನ ಕೆಲಸ ಇರುವುದ್ದರಿಂದ ಮೋಟಾರ ಸೈಕಲ್ ಮೇಲೆ ಬಂದಿದ್ದು ಮೋಟಾರ ಸೈಕಲ್ ಕೇಂದ್ರ ಬಸ್ ನಿಲ್ದಾಣದ ಒಳಗಡೆ ನಿಲ್ಲಿಸಿ ಹೋಗಿ ಬರುವಷ್ಠರಲ್ಲಿ ನನ್ನ ಮೋಟಾರ ಸೈಕಲ್ ಕಾಣಲಿಲ್ಲಾ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಕೊಲೆ ಪ್ರಕರಣ :
ಕಾಳಗಿ ಠಾಣೆ : ಅರಣಕಲ ಗ್ರಾಮದ ಸಿಮಾಂತರದಲ್ಲಿ ಹಣಮಂತರಾವ ಕಲ್ಲಾ ಇವರ ಮತ್ತು ಸಿದ್ದಪ್ಪ ಕಲ್ಲಾ ಇವರ ಹೋಲದ ನಡುವಿನ ಬಾಂದಾರಿಯ ವಿಷಯದಲ್ಲಿ 2-3 ವರ್ಷಗಳಿಂದ ತಕರಾರು ಇದ್ದು ಈ ವಿಷಯದಲ್ಲಿ 15 ದಿವಸಗಳ ಹಿಂದೆ ನಮ್ಮ ತಂದೆ ಹಾಗೂ ದೊಡ್ಡಪ್ಪನ ಮಗನಾದ ಶಶಿಕಾಂತ ಕಲ್ಲಾ ಇವರು ಶಿವಕುಮಾರ ಬ್ಯಾಲಹಳ್ಳಿ ಇವರ ಹತ್ತಿರ ಹೋಗಿ ಸಿದ್ದಪ್ಪನ ಬಗ್ಗೆ ತಿಳಿಸಿದ್ದು ಶಿವಕುಮಾರ ಬ್ಯಾಲಹಳ್ಳಿ ಇವರು ಸಿದ್ದಪ್ಪನಿಗೆ ಕರೆಯಿಸಿ ತಿಳುವಳಿಕೆ ನೀಡಿದ್ದು ಇರುತ್ತದೆ. ಆದರೂ ದಿನಾಂಕ 01-08-14 ರಂದು 7-00 ಎ.ಎಂ ಸುಮಾರಿಗೆ ಅರವಿಬ್ಬರ ನಮ್ಮಿಬ್ಬರ ಹೋಲದ ನಡುವಿನ ಬಾಂದಾರಿಯನ್ನು ಕೆದರುತ್ತಿದ್ದಾಗ ಹಣಮಂತರಾವ. ಶಶಿಕಾಂತ ಕಲ್ಲಾ ಮತ್ತು ಶಿವಮಕುಮಾರ ಬ್ಯಾಲಹಳ್ಳಿ ಕೂಡಿ ನಮ್ಮ ಹೋಲಕ್ಕೆ ಹೋಗಿ ಸಿದ್ದಪ್ಪನಿಗೆ ಬಾಂದರಿ ಕೆದರುವುದು ಸರಿಯಲ್ಲ ನಿನಗೆ ಅನುಮಾನ ಇದ್ದರೆ ಅಳತೆ ಮಾಡಿಸಿಕೊ ಅಂತಾ ಹೇಳಿದ್ದೆವು. ಅದಕ್ಕೆ ಸಿದ್ದಪ್ಪ ನಾನ್ಯಾಕೆ ಮಾಡಿಸಿಕೊಳ್ಳಲಿ ನೀವೆ ಮಾಡಿಸಿ ಕೊಡಿರಿ ಅಂತಾ ಹೇಳಿ ಬಾಂದಾರಿ ಕೆದರ ಹತ್ತಿದ್ದನು ಆಗ ಅವರು ಕಾಂಪ್ಲೆಂಟ ಕೊಟ್ಟು ಬರುತ್ತೆವೆ ಅಂತಾ ಹೇಳಿ ರೇವಗ್ಗಿ ಪೊಲೀಸ ಠಾಣೆಗೆ ನಮ್ಮ ಪ್ಯಾಷನ ಪ್ರೋ ಸೈಕಲ ಮೋಟರ ನಂ ಕೆ.ಎ 32 ಯು-5021 ನೇದ್ದರ ಮೇಲೆ ಹೋಗಿ ಇಬ್ಬರು ಮರಳಿ ರೇವಗ್ಗಿಯಿಂದ ಅರಣಕಲಗೆ ಬರುತ್ತಿದ್ದಾಗ ಆರೋಪಿತರು ಗ್ರಾಮದ ಸಮೀಪ  ಬೆಡಗು ಮತ್ತು ಕಲ್ಲಿನಿಂದ ತಲೆಗೆ ಹೊಡೆದು ಭಾರಿ ಗಾಯ ಪಡಿಸಿದ್ದರಿಂದ ಹಣಮಂತರಾವನು ಸ್ಥಳದಲ್ಲೆ ಮೃತ ಪಟ್ಟು ಶಶಿಕಾಂತನು ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದು ಇರುತ್ತದೆ ಅಂತಾ ಶ್ರೀ ಸಿದ್ದಣ್ಣ ತಂದೆ ಹಣಮಂತರಾವ ಕಲ್ಲಾ ಸಾ: ಅರಣಕಲ ತಾ:ಚಿತ್ತಾಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಾಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಆಳಂದ ಠಾಣೆ : ದಿನಾಂಕ:30-07-2014 ರಂದು ರಾತ್ರಿ 10 ಗಂಟೆಗೆ ಶ್ರೀ ಮಹ್ಮದ ನಿಜಾಮೊದ್ದಿನ್ ತಂದೆ ಸಲಾವುದ್ದಿನ್ ಯಾದಗಿರಿ ಸಾ:ಆಳಂದ ಇವರ ಹೊ ಸರ್ವೆ ನಂ 619/1 ರ ಜಮೀನಿಗೆ ಹತ್ತಿ ಬಂದಾರಿಯ ಇರುವ ಬೇವಿನ ಗೀಡಕ್ಕೆ  ಯಾರೋ ಒಬ್ಬ ಅಪರಿಚಿತ ಗಂಡಸು ಊರಲು ಬಿದ್ದು ಹೆಣ ಜೋತಾಡುತ್ತಿದ್ದು ನೋಡಲಾಗಿ ಸುಮಾರು 30-35 ವರ್ಷದ ಅಪರಿಚಿತ ಗಂಡಸು ಸತ್ತಿದ್ದು ಹೆಣವು ಕೊಳೆತು ಸೋರುತ್ತಿದ್ದು  ನೋಡಿದರೆ ಗುರುತು ಸಿಗುವಂತೆ ಇರುವುದಿಲ್ಲಾ . ಸದರಿ ಘಟನೆಯು ದಿನಾಂಕ 25,26/07/2014 ಮದ್ಯದ ಅವದಿಯಲ್ಲಿ ಆಗಿರಬಹುದು  ಹೆಸರು, ವಿಳಾಸ ಮತ್ತು ವಾರಸುದಾರರ ಬಗ್ಗೆ ತಿಳಿದು ಬಂದಿರುವುದಿಲ್ಲ. ಈತನ ಮರಣದಲ್ಲಿ ಸಂಶಯ ಇರುತ್ತದೆ ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ಮಂಜುಳ ಗಂಡ ಶರಣಪ್ಪ ದಿನಾಂಕ: 01/08/2014 ರಂದು ಸಾಯಂಕಾಲ 5=40 ಗಂಟೆಗೆ ಫಿರ್ಯಾದಿಯು ತನ್ನ ಗಂಡನು ಚಲಾಯಿಸುತ್ತಿರುವ ಮೋ/ಸೈಕಲ್ ನಂ: ಕೆಎ 32 ಜೆ 3450 ನೆದ್ದರ  ಮೇಲೆ ಹಿಂದುಗಡೆ ಕುಳಿತು ಲಾಲಗೇರಿ ಕ್ರಾಸ್ ದಿಂದ ಶಾಹಾ ಬಜಾರ ನಾಕಾ ಕಡೆಗೆ ಹೋಗುತ್ತಿದ್ದಾಗ ಅಗ್ನಿ ಶಾಮಕ ಠಾಣಾ ಎದುರಿನ ರೋಡ ಮೇಲೆ ಹಿಂದಿನಿಂದ ಕಾರ ನಂ: ಕೆಎ 32 ಎನ್ ಅಥವಾ ಎಮ್ 3801 ನೆದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಮೋ/ಸೈಕಲ್ ಹಿಂದೆ ಕುಳಿತಿದ ಫಿರ್ಯಾದಿಗೆ ಸಾದಾಗಾಯಗೊಳಿಸಿ ಕಾರ ಸಮೇತ ಚಾಲಕ ಓಡಿ ಹೋಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ನರೋಣಾ ಠಾಣೆ : ಶ್ರೀಮತಿ ದೂರನಾಗಮ್ಮ ಗಂಡ ರಾಜಕುಮಾರ ದುರ್ಗೆ ಮು:ಅಂಬಲಗಾ ತಾ:ಆಳಂದ ಇವರನ್ನು ದಿನಾಂಕ 20/05/2009 ರಂದು ನಮ್ಮ ಗ್ರಾಮದ ರಾಜಕುಮಾರ ತಂದೆ ಚಂದ್ರಕಾಂತ ದುರ್ಗೆ ಇವರೊಂದಿಗೆ ಸಾಂಪ್ರಾದಾಯಕವಾಗಿ ಮದುವೆ ಮಾಡಿಕೊಟ್ಟಿರುತ್ತಾರೆ.  ನನಗೆ ಈಗ ಒಬ್ಬ ಗಂಡು ಮತ್ತು ಒಬ್ಬಳು ಹೆಣ್ಣು ಮಗಳಿರುತ್ತಾಳೆ ನಮ್ಮ ತಂದೆ ತಾಯಿಗೆ ಕೇವಲ 3 ಜನ ಹೆಣ್ಣು ಮಕ್ಕಳು ಮಾತ್ರ ಇದ್ದು 3 ಜನರಲ್ಲಿ ಹಿರಿಯ ಅಕ್ಕಳಾದ ಸುನೀತಾ ಇವರು ಸುಮಾರು 7 ವರ್ಷಗಳ ಹಿಂದೆ ಮೃತ ಪಟ್ಟಿರುತ್ತಾಳೆ  ಅಲ್ಲದೆ ನಮ್ಮ ತಂದೆಯು ಸಹ ಮೃತ ಪಟ್ಟಿರುತ್ತಾರೆ ನನ್ನ ಮದುವೆಯದ ಸುಮಾರು 2-3 ವರ್ಷಗಳವರೆಗೆ ನನಗೆ ನನ್ನ ಗಂಡ ಹಾಗೂ ಅತ್ತೆ ಮಾವಂದಿರರು ನನ್ನನ್ನು ಚನ್ನಾಗಿ ನೋಡಿಕೊಂಡು ಇತ್ತಿತಲಾಗಿ ಸುಮಾರು 2 ವರ್ಷ ಗಳಿಂದ ನನ್ನ ಗಂಡ ರಾಜಕುಮಾರ ಮಾವನಾದ ಚಂದ್ರಕಾಂತ ಹಾಗೂ ಅತ್ತೆಯಾದ ಸರಸ್ವತಿ ಇವರುಗಳೂ ಸೇರಿ ನನ್ನ ತಂದೆ ತಾಯಿಯ ಆಸ್ತಿಯನ್ನು ನನ್ನ ಗಂಡನ ಹೆಸರಿಗೆ ನೊಂದಾಯಿಸಬೇಕು ಮತ್ತು ತವರು ಮನೆಯಿಂದ ಬಂಗಾರ ಮತ್ತು ಹಣ ತೆಗೆದುಕೊಂಡು ಬಾ ಎಂದು ನನ್ನನ್ನು ಪೀಡಿಸುತ್ತಾ ಮಾನಸಿಕವಾಗಿ ತೊಂದರೆ ಕೊಡುತ್ತಾ ಬಂದಿದ್ದು ದಿನಾಂಕ 31/07/2014 ರಂದು ಸಂಜೆ 6-00 ಗಂಟೆಗೆ ಸುಮಾರಿಗೆ ನಾನು ನನ್ನ ತಾಯಿಯದ ರಾಚಮ್ಮ ಗಂಡ ಕಲ್ಲಪ್ಪಾ ಗುತ್ತಿ ಹಾಗೂ ಅಕ್ಕಳಾದ ಅನೀತಾ ಗಂಡ ಶೆಶಿಕಾಂತ ಜಮಖಂಡೆ ಮೂರು ಜನ ಕೂಡಿ ಮನೆಯಮುಂದೆ ಮಾತನಾಡುತ್ತಾ ಕುಳಿತ್ತಿರುವಾಗ ನನ್ನ ಗಂಡ ರಾಜಕುಮಾರ ಮಾವನಾದ ಚಂದ್ರಕಾಂತ ದುರ್ಗೆ ಹಾಗು ಅತ್ತೆಯಾದ ಸರಸ್ವತಿ ಇವರುಗಳು ಕೂಡಿಕೊಂಡು ನಮ್ಮ ಮನೆಯ ಮುಂದೆ ಬಂದು ನನಗೆ ಏ ಬೋಸಡಿ ಹಾದರಕ್ಕೆ ಹುಟ್ಟಿದವಳು ನಾವು ತವರು ಮನೆಯಿಂದ ಹುಂಡಾ/ ಬಂಗಾರ ತೆಎದುಕೊಂಡು ಬಾ ಎಂದರೆ ನೀನು ತರದೆ ಇಲ್ಲೆ ಇದ್ದಿಯಾ ಅಂತಾ ಅವಾಚ್ಯ ಶಬ್ದಗಳಿಂದ ಬೈದು ನನಗೆ ನನ್ನ ತಾಯಿಗೆ ಹಾಗು ನಮ್ಮ ಅಕ್ಕಳಿಗೆ ಕೈಯಿಂದ ಕಲ್ಲಿನಿಂದ ಹೊಡೆ ಬಡೆ ಮಾಡಿ ರಕ್ತಗಾಯ ಗುಪ್ಪಗಾಯ ಪಡಿಸಿರುತ್ತಾರೆ ಅಂತಾ ಶ್ರೀಮತಿ ನಾಗಮ್ಮ ಗಂಡ ರಾಜಕುಮಾರ ದುರ್ಗೆ ಸಾ: ಅಂಬಲಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅವಮಾನ ಮಾಡಿದ ಪ್ರಕರಣ
ಅಫಜಲಪೂರ ಠಾಣೆ : ದಿನಾಂಕ 03-02-2014 ರಂದು 5.30 ಪಿಎಮ್ ಕ್ಕೆ ಗೌರ(ಕೆ) ಗ್ರಾಮದ ಹೊಲ ಸರ್ವೇ ನಂ 140 ನೇದ್ದರ ಹೊಲದ ವಿಷಯದ ಸಂಬಂಧ  ಸಂದಿಯಾ ಸುತ್ತಾನ ಎಕ್ಸ ಚೀಫ ಎನಕ್ಯೂಯರಿ ಆಫೀಸರ ಬೆಂಗಳೂರ ಸಂಗಡ 12 ಜನರು  ಕುಡಿಕೊಂಡು ಸರಕಾರಕ್ಕೆ ಸುಳ್ಳು ಮಾಹಿತಿ ಸಲ್ಲಿಸಿ  ಶ್ರೀ ಶಾಹಾನಾಜ ಬೇಗಂ ಗಂಡ ಖಾಜಾ ಮೈನೊದ್ದೀನ ಇವರಿಗೆ ಅವಮಾನ ಮಾಡಿದ ಬಗ್ಗೆ ದೂರು ಸಲ್ಲಿಸಿದ ಸದರಿ ದುರಿನ ಸಾರಂಶದ ಮೇಲಿಂದ  ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಸಂತೋಷ ತಂದೆ ವೀರಣ್ಣ ಮಾನ್ವಿಕರ್ ಸಾ : ಹೆರೂರ್ (ಕೆ) ತಾಃ ಚಿತಾಪೂರ್ ಸಾಃ ಸಂತೋಷ್ ಮಲಕರ್ ಮನೆ ಗುಬ್ಬಿ ಕಾಲೋನಿ, ಹನುಮಾನ್ ಮಂದಿರ್ ಹಿಂದುಗಡೆ ಗುಲಬರ್ಗಾ ಇವರು ದಿನಾಂಕಃ 01-08-2014 ರಂದು ಸಾಯಂಕಾಲ 07.00 ಪಿ.ಎಂ. ಕ್ಕೆ ತನ್ನ ಮನೆಯಿಂದ ನಡೆದುಕೊಂಡು ಹನುಮಾನ ಮಂದಿರ ಪಕ್ಕದ ರಸ್ತೆಯ ಮೇಲೆ ಹೋಗುತ್ತಿರುವಾಗ, ಫಿರ್ಯದಿದಾರನನ್ನು ನೋಡಿ ಕಾಯುತ್ತಾ ನಿಂತ ತನ್ನ ಹೆಂಡತಿ ಶೈಲಜಾ, ಅತ್ತೆಯಾದ ಭಾರತೀಬಾಯಿ, ಹಾಗೂ ಭಾರತೀಬಾಯಿ ಇವರ ಮಕ್ಕಳಾದ ಶರಣಪ್ಪ, ಮಲ್ಲಿನಾಥ ಇವರೆಲ್ಲರು ಕೂಡಿ ಬಂದವರೆ ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು, ಬೆಲ್ಟಿನಿಂದ ತಲೆಗೆ ಹಾಗೂ ಮುಖಕ್ಕೆ ಹೊಡೆದಿದ್ದರಿಂದ ತಲೆಗೆ ರಕ್ತಗಾಯವಾಗಿದ್ದು, ಮುಖದ ಮೇಲೆ ಗುಪ್ತ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.