POLICE BHAVAN KALABURAGI

POLICE BHAVAN KALABURAGI

09 December 2016

Kalaburagi District Reported Crimes

ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ನರೋಣಾ ಠಾಣೆ : ಶ್ರೀ ಶಿವಶಣಪ್ಪ ತಂದೆ ಶಾಂತಪ್ಪ ಸನಾದಿ ಸಾ: ಬೆಳಮಗಿ ಇವರು ತಂದೆತಾಯಿಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳು ಇದ್ದು ಅವಳ ಮದುವೆ ಮಾಡಿಕೊಟ್ಟಿದ್ದು ಗಂಡನ ಮನೆಯಲ್ಲಿ ಇರುತ್ತಾಳೆ ಗಂಡು ಮಕ್ಕಳಲ್ಲಿ ನಾನೆ ಹಿರಿಯವನಾಗಿದ್ದು ನಾನು ನನ್ನ ಹೆಂಡತಿ ಮಕ್ಕಳೊಂದಿಗೆ ನಮ್ಮೂರಿನಲ್ಲಿ ಇರುತ್ತೇನೆ ನನ್ನ ತಂದೆ 2005 ರಲ್ಲಿ ಮೃತಪಟ್ಟಿದ್ದು ನಮ್ಮ ತಾಯಿ ನನ್ನೊಂದಿಗೆ ಇರುತ್ತಾಳೆ, ನನ್ನ ತಮ್ಮನಾದ ಶಿವಕುಮಾರ ಇವನು ತನ್ನ ಪರಿವಾರದೊಂದಿಗೆ ಪೂನಾದಲ್ಲಿ ವಾಸವಾಗಿರುತ್ತಾನೆ, ನಮ್ಮ ತಂದೆಯಾದವರು ಜಿವಂತವಿದ್ದಾಗ ಬೆಳಮಗಿ ಗ್ರಾಮದ ಸರ್ವೆ ನಂ. 213(ಅ) ದಲ್ಲಿಯ ಸರಕಾರಿ ಗೈರಾಣ ಜಮೀನು 2 ಎಕರೆ ಸರಕಾರವು ನಮ್ಮ ತಂದೆಗೆ ಮಂಜುರುಮಾಡಿದ್ದು ನಮ್ಮ ತಂದೆಯವರು ಆ ಜಮೀನನ್ನು ಉಳಿಮೆ ಮಾಡುತ್ತಾ ಬಂದಿದ್ದು ನಮ್ಮ ತಂದೆ ಮರಣದ ನಂತರ ಸದರಿ ಜಮೀನು ನನ್ನ ತಾಯಿಯಾದ ಗುಜಬಾಯಿ ಇವರ ಹೆಸರಿನಲ್ಲಿ ಇರುತ್ತದೆ, ಸದ್ಯ ಆ ಜಮೀನನ್ನು ನಾನೆ ಉಳಿಮೆ ಮಾಡಿಕೊಂಡು ಬಂದಿದ್ದೇನೆ ನಮ್ಮ ಜಮೀನಿಗೆ ಹೊಂದಿ ನಮ್ಮ ಗ್ರಾಮದ ಅಣ್ಣಪ್ಪ ತಂದೆ ಹಣಮಂತರಾಯ ಸುರಪ್ಪಗೋಳ ಇವರ ಜಮೀನಿದ್ದು ಸದರಿ ಅಣ್ಣಪ್ಪ ಸುರಪ್ಪಗೋಳ ಮತ್ತು ಆತನ ಮಗನಾದ ಈರಣ್ಣ ಸುರಪ್ಪಗೋಳ ಇವರುಗಳು ನಮ್ಮ ಹೊಲದ ಬಾಂದಾರಿಯನ್ನು ಒತ್ತುವರಿ ಮಾಡುತ್ತ ಬಿತ್ತನೆ ಮಾಡುತ್ತಿದ್ದರಿಂದ ನಾನು ಅವರಿಗೆ ಈ ರೀತಿ ಒತ್ತುವರಿ ಮಾಡುವದು ಸರಿಯಲ್ಲವೆಂದು ಹೇಳಿದರು ಸಹಾ  ಕೂಡಾ ನಮ್ಮ ಹೊಲವನ್ನು ಒತ್ತುವರಿ ಮಾಡಿ ತೊಗರಿ ಬಿತ್ತನೆ ಮಾಡಿರುತ್ತಾರೆ, ಈಗ ತೊಗರಿ ಬೆಳೆಯು ಕಟಾವು ಮಾಡುವ ಹಂತಕ್ಕೆ ಬಂದಿದ್ದರಿಂದ ಬೇಗನೆ ಕಟಾವು ಮಾಡಿ ರಾಶಿ ಮಾಡಿಕೊಳ್ಲುವಂತೆ ಹೇಳಿದ್ದು ಅದಕ್ಕೆ ಅವನು ನನ್ನೊಂದಿಗೆ ಆಗಾಗ ತಕರಾರು ಮಾಡುತ್ತ ಬಂದಿರುತ್ತಾರೆ ಅಲ್ಲದೆ ಅದೇ ವಿಷಯವಾಗಿ ನನ್ನ ಮೇಲೆ ದ್ವೇಷ ಸಾದಿಸಿಕೊಂಡು ದಿನಾಂಕ:- 06/12/2016 ರಂದು ರಾತ್ರಿ 10:30 ಸುಮಾರಿಗೆ ನಾನು ತಿರುಗಾಡುತ್ತಾ ನಮ್ಮ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಕಡೆಗೆ ಹೋದಾಗ ಹುಣಸಿ ಮರದ ಕೆಳಗೆ ನಮ್ಮ ಗ್ರಾಮದ ಲಿಂಗಾಯತ ಜಾತಿಯವರಾದ ಈರಣ್ಣ ತಂದೆ ಅಣ್ಣಪ್ಪ ಸುರಪ್ಪಗೋಳ ಹಾಗೂ ಅವರ ತಂದೆಯಾದ ಅಣ್ಣಪ್ಪ ತಂದೆ ಹಣಮಂತರಾಯ ಸುರಪ್ಪಗೋಳ ಇವರಿಬ್ಬರು ನನ್ನನ್ನು ತಡೆದು ನಿಲ್ಲಿಸಿ ಏ ಹೊಲೆಯ ಜಾತಿ ಸುಳೇ ಮಗನೆ ನಾವು ನಿಮ್ಮ ಹೊಲದಲ್ಲಿ ಒತ್ತುವರಿ ಮಾಡಿಲ್ಲ ಎಂದು ಎಷ್ಟು ಬಾರಿ ಹೇಳಿದರು ಸಹಾ ಕೇಳದೆ ಪ್ರತಿ ವರ್ಷ ನಾವು ಬಿತ್ತುವಾಗ ರಾಶಿಮಾಡುವಾಗ ಒತ್ತುವರಿ ಮಾಡಿದಿರಂತ ನಮ್ಮೊಂದಿಗೆ ತಕರಾರು ಮಾಡುತ್ತಿದ್ದಿರಾ ಮಗನೇ ಎಂದು ಜಾತಿ ಎತ್ತಿ ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ಜಾತಿ ನಿಂದನೆ ಮಾಡುತ್ತಿರುವಾಗ ನಾನು ಅವರಿಗೆ ನೀವು ಈ ರೀತಿ ಜಾತಿ ನಿಂದನೆ ಮಾಡುವುದು ಸರಿಯಲ್ಲ ಎಂದು ಹೇಳುತ್ತಿರುವಾಗ ಅವರಿಬ್ಬರು ಸೇರಿ ಮಗನೇ ಇವತ್ತು ಒಬ್ಬನೆ ಸರಿಯಾಗಿ ಸಿಕ್ಕಿದಿಯಾ ಇವತ್ತು ಏನೆಯಾಗಲಿ ನಿನಗೆ ಕೊಲೆ ಮಾಡಿಯೇ ಬಿಡುತ್ತೇವೆಂದು ಚಿರಾಡುತ್ತಾ ಈರಣ್ಣನು ತನ್ನ ಕೈಯಲ್ಲಿದ್ದ ಕೊಡಲಿಯಿಂದ ನನ್ನ ಎಡಗಾಲು ಮೊಳಕಾಲು ಕೆಳಭಾಗಕ್ಕೆ ಹೊಡೆದಿದ್ದರಿಂದ ಭಾರಿ ರಕ್ತ ಗಾಯವಾಗಿ ನಾನು ನೆಲಕ್ಕೆ ಬಿದ್ದಾಗ ಅಣ್ಣಪ್ಪನು ಅದೇ ಕೊಡಲಿ ಕಾವಿನಿಂದ ನನ್ನ ಎಡಗಾಲು ಮೊಳಕಾಲು ಕೆಳಭಾಗಕ್ಕೆ ಹೊಡೆದಿದ್ದರಿಂದ ಒಳಪೆಟ್ಟಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಹಣಮಂತರಾವ ತಂದೆ ಶಂಕರರಾವ ಬಿರಾದಾರ ಸಾ: ಮೇಳಕುಂದಾ (ಬಿ) ತಾ: ಜಿ: ಕಲಬುರಗಿ ರವರು ದಿನಾಂಕ : 07/12/16 ರಂದು 8 ಪಿಎಮಕ್ಕೆ ಗುಟಖಾ ತರಲು ಮಲ್ಲಣ್ಣಾ ಹೋಡೆದ ಕಿರಾಣಿ ಅಂಗಡಿಗೆ ಹೊಗಿ ಮರಳಿ ಮನೆಗೆ ಬರುವಾಗ 1) ಶರಣಬಸು ಗುಂಡಗುರ್ತಿ 2) ಹಣಮಂತರಾಯ ಗುಂಡಗುರ್ತಿ ಸಾ: ಇಬ್ಬರೂ ಮೇಳಕುಂದಾ (ಬಿ)  ರವರು ವಿನಾ ಕಾರಣ ಫಿರ್ಯಾದಿಯೊಂದಿಗೆ ಜಗಳ ತೆಗೆದು ಅವನ ಬುಜಕ್ಕೆ  ಡಿಕ್ಕಿ ಹೊಡೆದು  ಜಗಳ ತೆಗೆದು ಕಲ್ಲಿನಿಂದ ಹೊಡೆಬಡೆ ಮಾಡಿ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.