POLICE BHAVAN KALABURAGI

POLICE BHAVAN KALABURAGI

19 January 2014

Gulbarga Dist Reported Crimes

ಅಪಘಾತ ಪ್ರಕರಣ:
ಕಮಲಾಪೂರ ಠಾಣೆ:
ದಿನಾಂಕ 17-01-2014 ರಂದು ಸಾಯಂಕಾಲ4-30 ಗಂಟೆ ಸುಮಾರಿಗೆ ರೇವಣಸಿದ್ದಪ್ಪ ತಂದೆ ವೀರಶೇಟ್ಟಿ ಗುರಾಗೋಳ ಸಾ; ಕಮಲಾಪೂರ ಇವರು  ಅಣಕಲ್ಲ ತಾಂಡದಿಂದ ನೇರವಾಗಿ ಕಮಲಾಪೂರಕ್ಕೆ ಹೋಗಿಅಲ್ಲಿಂದ ಸ್ನೇಹಿತ ರಮಾನಾಥ ತಂದೆ ಬಂಡೆಪ್ಪಾ ಬಾಚಗುಂಡಿ ಸಾಕಮಲಾಪೂರ ಇವರೊಂದಿಗೆ ಆತನ ಟಿ.ವಿ.ಎಸ್. ಮೋಟಾರ್ ಸೈಕಲ್ ಮೇಲೆ ಕುಳಿತುಕೊಂಡು ಗುಲಬರ್ಗಾ –ಹುಮನಾಬಾದ ಎನ್.ಹೆಚ್-218 ರಸ್ತೆಯ ನಾವದಗಿ ಸೇತುವೆ ಹತ್ತಿರ ಇರುವ ಹೊಲಕ್ಕೆ ಹೋಗಿ ಮರಳಿ ಕಮಲಾಪೂರಕ್ಕೆ ಬರುವಾಗ ಕಂಠೆಪ್ಪಾ ಸೂಗೂರ ಮಾಸ್ಟರ ಇವರ ಹೊಲದ ಮುಂದೆ ರಸ್ತೆಯ ಪಕ್ಕದಲ್ಲಿ ಮೋಟಾರ ಸೈಕಲ್ ಹಚ್ಚಿ ಮಾತ್ರ ವಿಸರ್ಜನೆ ಮಾಡಿ ನಾವಿಬ್ಬರು ರಸ್ತೆಯ ಪಕ್ಕದಲ್ಲಿ ಮಾತನಾಡುತ್ತಾ ನಿಂತುಕೊಂಡಿದ್ದಾಗ ಗುಲಬರ್ಗಾ ಕಡೆಯಿಂದ ಬರುತ್ತಿದ್ದ  ಟಂ.ಟಂನ್ನು ಅತಿ ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದುರಸ್ತೆಯ ರಸ್ತೆ ಬದಿಗೆ ನಿಂತುಕೊಂಡಿದ್ದ ನಮಗೆ ಅಪಘಾತಪಡಿಸಿದ್ದು ರೇವಣಸಿದ್ದಪ್ಪರವರಿಗೆ ಗುಪ್ತಗಾಯಗಳಾಗಿದ್ದು  ರಮಾನಾಥನಿಗೆ ಸಹ ಗುಪ್ತಗಾಯವಾಗಿದ್ದು ಅಪಘಾತ ಪಡಿಸಿದ ಟಂ.ಟಂ. ವಾಹನ ನಂಬರ ನೋಡಲಾಗಿ  ಕೆಎ-39-8646 ಇದ್ದು, ಅದರ ಚಾಲಕನ ಹೆಸರು ವಿಚಾರಿಸಲಾಗಿ ಮಡೆಪ್ಪಾತಂದೆ ಮಾಣಿಕಪ್ಪಾ  ಡಾಂಗೆ ಎಂದು ತಿಳಿದು ಬಂದಿದ್ದು ಅಪಘಾತ ಪಡಿಸಿದ ಟಂ.ಟಂ ವಾಹನ ನಂ. ಕೆಎ-39-8646 ನೇದ್ದರ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಎಮ್.ಬಿ ನಗರ ಠಾಣೆ :

ದಿನಾಂಕ 18-01-14 ರಂದು ತವೇರಾ ಜೀಪ ನಂ ಕೆ.ಎ 14 ಎಮ್ 7178 ನೆದ್ದರಲ್ಲಿ ಹೈದ್ರಾಬಾದ್ ನಿಂದ ಗುಲಬರ್ಗಾಕ್ಕೆ ಹೋಗುತ್ತಿದ್ದಾಗ ಸೇಡಂ ಗುಲಬರ್ಗಾ ರೊಡ ನಲ್ಲಿನ ಹುಡಾ ಕೆ ಗ್ರಾಮದ ಗೇಟ ಸಮೀಪ ಸದರಿ ಟವೇರಾ ವಾಹನದ ಚಾಲಕ ಸೈಯದ್ ಅನ್ವರ ಈತನು ತನ್ನ ವಾಹನವನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ರಸ್ತೆ ಬದಿಯಲ್ಲಿ ನಿಂತಿದ್ದ ಟ್ರ್ಯಾಕ್ಟರ್ ನಂ ಕೆ.ಎ32 ಟಿ 9517 ನೇದ್ದಕ್ಕೆ ಅಪಘಾತ ಪಡಿಸಿದಾಗ ಜಿಪ್ ನಲ್ಲಿದ್ದ ಆಲಂಗೀರ ಸ್ಥಳದಲ್ಲಿಯೆ ಮೃತಪಟ್ಟಿದ್ದು,  ಜೀಪನಲ್ಲಿದ್ದ ಉಳಿದವರಿಗೆ ಭಾರಿ ಗಾಯಗಳಾಗಿದ್ದು ಸದರಿ ಆರೋಪಿತನ ವಿರುಧ್ಧ ಕಾನೂನು ಕ್ರಮ ಕೈಕೊಳ್ಳಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.