POLICE BHAVAN KALABURAGI

POLICE BHAVAN KALABURAGI

17 March 2016

Kalaburgi District Press Note

:: ಪತ್ರಿಕಾ ಪ್ರಕಟಣೆ ::
ಆರ್.ಎಸ್.ಐ ಹುದ್ದೆಗಳ ನೇಮಕಾತಿ ಕುರಿತು ಸಿಇಟಿ ಪರೀಕ್ಷೆಯನ್ನು ದಿನಾಂಕ: 20-03-2016 ರಂದು ಬೆಳಿಗ್ಗೆ 10-00 ಗಂಟೆಯಿಂದ 11-30 ಗಂಟೆಯವರೆಗೆ ಮತ್ತು 02-00 ಗಂಟೆಯಿಂದ 3-30 ಗಂಟೆಯವರೆಗೆ ಕಲಬುರಗಿ ನಗರದ ಈ ಕೆಳಗಿನ (02) ಪರೀಕ್ಷಾ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಯಲಿರುತ್ತದೆ.
1.  ರೇಷ್ಮಿ ಕಾಲೇಜು, ಸರಸ್ವತಿಪೂರ, ಜಿಯುಜಿ ಹಿಂದುಗಡೆ ಕೂಸನೂರ ರಸ್ತೆ, ಕಲಬುರಗಿ.
2. ಪೊಲೀಸ್ ತರಬೇತಿ ಕಾಲೇಜು, ನಾಗನಹಳ್ಳಿ, ಕಲಬುರಗಿ.
            ಆರ್.ಎಸ್.ಐ. ಹುದ್ದೆಯ ನೇಮಕಾತಿಗೆ ಸಂಬಂಧಿಸಿದಂತೆ, ಇಟಿ/ಪಿಎಸ್ಟಿ ಪರೀಕ್ಷೆಯಲ್ಲಿ ಅರ್ಹ ಹೊಂದಿದ ಕಲಬುರಗಿ ಜಿಲ್ಲೆಯಲ್ಲಿ 1200 ಅರ್ಹ ಅಭ್ಯರ್ಥಿಗಳ ಲಿಖಿತ ಪರೀಕ್ಷೆಯನ್ನು ಮೇಲಿನ ಪರೀಕ್ಷಾ ಕೇಂದ್ರಗಳಲ್ಲಿ ಕೈಕೊಳ್ಳಲಾಗುತ್ತಿದ್ದು, ಅಭ್ಯರ್ಥಿಗಳು ಪರೀಕ್ಷೆಯ ಮುನ್ನ ಗುರುತಿನ ಚೀಟಿ, ಹಾಗೂ ಇಂಟರನೆಟ್ ಸೆಂಟರಗಳಿಂದ ಕರೆ ಪತ್ರವನ್ನು ತೆಗೆದುಕೊಂಡು ಪರೀಕ್ಷೆಗೆ ಹಾಜರಾಗುವುದು.  ಪರೀಕ್ಷೆಗೆ ಕರೆ ಪತ್ರ, ಗುರುತಿನ ಚೀಟಿ, ಮತ್ತು ಪೆನ್ ಇವುಗಳನ್ನು ಹೊರತುಪಡಿಸಿ ಇನ್ನಾವುದೇ ಪೇಪರ್, ಮೊಬೈಲ್, ಲ್ಯಾಪಟಾಪ್, ಕ್ಯಾಲಕುಲೇಟರ್ ಇವುಗಳನ್ನು ಪರೀಕ್ಷಾ ಕೇಂದ್ರದಲ್ಲಿ ನಿರ್ಬಂಧಿಸಲಾಗಿದೆ.
                                     
                                                                             ಸಹಿ/-
                                                                     ಪೊಲೀಸ ಅಧೀಕ್ಷಕರು
                                                                            ಕಲಬುರಗಿ

Kalaburagi District Reported Crimes

ಅಪಹರಣ ಪ್ರಕರಣ :
ಮಹಿಳಾ ಠಾಣೆ : ಶ್ರೀ ನರಸಿಂಗ ತಂದೆ ಕಾಶಪ್ಪ ವಾಡೇಕರ್ ಸಾ:ಬಸವ ನಗರ ಎಮ್.ಎಸ್.ಕೆ ಮಿಲ್ ರೋಡ ಕಲಬುರಗಿ ಇವರು ಮಗಳಾದ, ಶೃತಿ ವಯಾ:17 ವರ್ಷ ಇವಳು ದಿಶಾ ಕಾಲೇಜಿನಲ್ಲಿ ಪಿ.ಯು.ಸಿ ಪ್ರಥಮ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ದಿನಾಂಕ 15-03-2016 ರಂದು ಬೆಳಿಗ್ಗೆ 8-30 ಗಂಟೆಯ ಸುಮಾರಿಗೆ ಮನೆಯಿಂದ ಕಾಲೇಜಿಗೆ ಹೋಗುತ್ತೇನೆಂದು ಹೇಳಿ ಹೋದವಳು ಪುನಃ ಮನೆಗೆ ಬರದೇ ಇದ್ದಾಗ ನಾವು ಸಾಯಂಕಾಲ ಅವಳ ಕಾಲೇಜಿಗೆ ಹೋಗಿ ಅವಳ ಸ್ನೇಹಿತರಿಗೆ ಹಾಗೂ ನಮ್ಮ ಸಂಬಂಧಿಕರಲ್ಲಿ ಹುಡುಕಾಡಿದೆವು. ನಂತರ ಇಂದು ದಿನಾಂಕ 16-03-2016 ಬೆಳಿಗ್ಗೆ 7-42 ಗಂಟೆಗೆ ಅನೀಲ @ ಅನ್ಯಾ ತಂದೆ ಶಂಕರ ಚಿಗನೂರ ಇತನು ನನ್ನ ಮೊಬಾಯಿಲ್ ನಂ:9663416159 ಕ್ಕೆ ಆತನ ಮೊಬಾಯಿಲ್ ನಂ:7719989124 ನೇದ್ದರಿಂದ ಕರೆ ಮಾಡಿ ನಿನ್ನ ಮಗಳನ್ನು ನಾನು ಕಿಡ್ನಾಪ ಮಾಡಿಕೊಂಡು ಬಂದಿದ್ದು, ಬೆಂಗಳೂರಿನಲ್ಲಿದ್ದೇವೆ ಏನು ಮಾಡಿಕೋತಿ ಮಾಡಿಕೋ ಎಂದು ಫೋನ ಸ್ವೀಚ್ಛ ಆಫ್ ಮಾಡಿರುತ್ತಾನೆ. ಇದರಿಂದ ನಮಗೆ ತುಂಬಾ ಭಯವಾಗಿದ್ದು, ನನ್ನ ಮಗಳಾದ ಶೃತಿ ಇವಳಿಗೆ ಅಪಹರಿಸಿಕೊಂಡು ಹೋದ ಅನೀಲ @ ಅನ್ಯಾ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣಗಳು :
ಜೇವರಗಿ ಠಾಣೆ : ದಿನಾಂಕ 15.03.2016 ರಂದು 23:30 ಗಂಟೆಯಿಂದ ದಿ 16.03.2016 ರಂದು 05:೦೦ ಗಂಟೆಯ ಮಧ್ಯದ ಅವಧೀಯಲ್ಲಿ ಯಾರೋ ಅಪರಿಚಿತ ಕಳ್ಳರು ನಮ್ಮ ಮನೆಯ ಬಾಗೀಲ ಕೀಲಿ ಮುರಿದು ಒಳಗೆ ಪ್ರವೇಶ ಮಾಡಿ ಮನೆಯ ಅಲಮಾರಿಯ ಬಾಗಿಲು ತೆಗೆದು ಅದರಲ್ಲಿಟ್ಟಿದ್ದ 24.500/- ರೂ ಕಿಮ್ಮತ್ತಿನ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದ್ದು ಕಾರಣ ಸದರಿ ಕಳ್ಳರನ್ನು ಹಾಗು ಕಳುವಾದ ವಸ್ತುಗಳನ್ನು  ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀ ಸೈದಪ್ಪ ತಂದೆ ನಾಗಪ್ಪ ಕ್ಯಾಸಪ್ಪಳ್ಳಿ ಸಾ|| ಇಜೇರಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಡ್ರಾಮಿ ಠಾಣೆ : ದಿನಾಂಕ 15-03-2016 ರಂದು ರಾತ್ರಿ 10;00 ಗಂಟೆಯಿಂದ ದಿನಾಂಕ 16-03-2016 ರಂದು ಬೆಳಿಗ್ಗೆ 07;00 ಗಂಟೆ ಮದ್ಯದಲ್ಲಿ ಯಾರೋ ಕಳ್ಳರು ನಮ್ಮ ಶಾಲೆಯ ಗಣಕಯಂತ್ರ ಕೋಣೆಯ ಕೊಂಡಿಯನ್ನು ಕಟ್ ಮಾಡಿ ಕೋಣೆಯಲ್ಲಿದ್ದ 08 ಟೂಬಲರ್ ಬ್ಯಾಟ್ರಿಗಳು ಅ;ಕಿ; 8,000/- ರೂ ನೇದ್ದವುಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ಬ್ಯಾಟ್ರಿಗಳು ಪತ್ತೆಮಾಡಿ ಆರೋಪಿತರ ಮೇಲೆ ಕಾನೂನು ರೀತಿ ಕ್ರಮ ಕೈಗೋಳ್ಳಬೇಕು ಅಂತಾ ಶ್ರೀ ಬಸಯ್ಯ ತಂದೆ ಸೋಮಶೇಖರಯ್ಯ ಸಾಲಿ ಉ; ಮುಖ್ಯೆ ಗುರುಗಳು ಬಿಳವಾರ ಸರಕಾರಿ ಪ್ರೌಡ ಶಾಲೆ  ರವರು  ಸಲ್ಲಿಸಿದ  ದೂರು ಸಾರಾಂಶದ ಮೇಲಿಂದ  ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಿಸಿಕೊಂಡು ಹೋಗಿ ಅತ್ಯಾಚಾರ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ದಸ್ತಯ್ಯ ತಂದೆ ಸಿದ್ಧಯ್ಯಾ ಗುತ್ತೆದಾರ ಸಾ: ಪ್ಲಾಟ ನಂ. 118 ಆಳಂದ ಚೆಕ್ಕ ಪೋಸ್ಟ ರಾಮತೀರ್ಥ ನಗರ ಆಳಂದ ರಸ್ತೆ ಕಲಬುರಗಿ ಇವರ ಮಗಳಾದ ಕುಮಾರಿ ಇವಳು  ದಿನಾಂಕ 06-11-13 ರಂದು ಬೆಳಿಗ್ಗೆ 10-30 ಗಂಟೆ ಸುಮಾರಿಗ ಮನೆಯಿಂದ ಶಾಲೆಗೆ ಹೋದವಳು ಇಲ್ಲಿಯವರೆಗೆ ನನ್ನ ಮಗಳು ಮನೆಗೆ ಬಂದಿರುವುದಿಲ್ಲಾ. ನನ್ನ ಮಗಳ ಪತ್ತೆ ಕುರಿತು  ನಮ್ಮ ಸಂಬಂಧಿಕರ ಊರಾದ, ಚಿತ್ತಾಪೂರ, ಕಾಳಗಿ, ತಾಂಡೂರ, ಸೇಡಂ. ಮದ್ದರಕಿ ಹೂವಿನಹಡಗಿಲ, ಬಳ್ಳಾರಿ, ಪೂನಾ, ಬೆಂಗಳೂರ ಮತ್ತು  ಇತರೆ ಕಡೆಗಳಲ್ಲಿ ಹುಡುಕಾಡಿದರೂ ನನ್ನ ಮಗಳು ಸಿಕ್ಕಿರುವುದಿಲ್ಲಾ. ನಮ್ಮ ಓಣಿಯಲ್ಲಿ ವಾಸವಾಗಿರುವ 1)ರಮೇಶ ತಂದೆ ಬಂಡೆಪ್ಪ 2)ರಾಜು ತಂದೆ ಅಣ್ಣೆಪ್ಪ ವಡ್ಡರ 3)ಸುನೀಲ ತಂದೆ ನಾರಾಯಣ ಈ ಮೂರು ಜನರು ದಿನಾಂಕ 06-11-13 ರಿಂದ ನಮ್ಮ ಓಣಿಯಲ್ಲಿ ಕಾಣಿಸುತ್ತಿಲ್ಲಾ. ಈ ಮೂರು ಜನರು ನನ್ನ ಮಗಳಿಗೆ  ಅಪಹರಣ ಮಾಡಿಕೊಂಡು ಹೋಗಿರುತ್ತಾರೆ ನನ್ನ ಮರ್ಯಾದೆ ಹಾಳಾಗುತ್ತದೆ ಎಂದು ತಿಳಿದು ಇಲ್ಲಿಯವರೆಗೆ ಹುಡುಕಾಡಿದ್ದು  ಆದರೂ ನನ್ನ ಮಗಳು ಪತ್ತೆಯಗಿರುವುದಿಲ್ಲಾ.  ಅಂತಾ ಸಲ್ಲಿಸಿದ್ದರ ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು   ಈ ಫ್ರಕರಣದಲ್ಲಿ ಅಪಹರಣಕ್ಕೆ ಒಳಗಾದ ಕುಮಾರಿಮತ್ತು ಆರೋಪಿ ರಮೇಶ ತಂದೆ ಬಂಡೆಪ್ಪ ತಳವಾರ ಇಬ್ಬರು  ಪೂನಾ ಪಟ್ಟಣದ ವಡ್ಡರ ವಾಡಿ ಏರಿಯಾದಲ್ಲಿ ಇದ್ದಾರೆ ಎಂಬ ಖಚಿತ ಬಾತ್ಮಿ ಮೇರೆಗೆ ದಿನಾಂಕ 15-03-16 ರಂದು ರಾತ್ರಿ ಸಮಯದಲ್ಲಿ  ಕುಮಾರಿ ಮತ್ತು ಆರೋಪಿ ರಮೇಶ ತಂದೆ ಬಂಡೆಪ್ಪ ತಳವಾರ ಇವರಿಬ್ಬರನ್ನು ನಾನು ಮತ್ತು ಸಿಬ್ಬಂದಿಯವರಾದ ಸಿಪಿಸಿ 1215, 479, ಮಪಿಸಿ 744 ರವರ ಸಹಾಯದಿಂದ ವಶಕ್ಕೆ ತೆಗೆದುಕೊಂಡು ಇಂದು ದಿನಾಂಕ 16-03-16 ರಂದು ಮಧ್ಯಾಹ್ನ 04-00 ಗಂಟೆಗೆ ಠಾಣೆಗೆ ಬಂದು ಅಪಹರಣಕ್ಕೆ ಒಳಗಾದ ಕುಮಾರಿ ತಂದೆ ದಸ್ತಯ್ಯ ಗುತ್ತೆದಾರ ಸಾ: ಪ್ಲಾಟ ನಂ. 118 ಆಳಂದ ಚೆಕ್ಕ ಪೋಸ್ಟ ರಾಮ ತೀರ್ಥ ನಗರ ಆಳಂದ ರಸ್ತೆ ಕಲಬುರಗಿ ಇವಳ ಹೇಳಿಕೆ ಪಡೆದುಕೊಂಡು, ಅಸಲು  ಹೇಳಿಕೆ  ಹಾಜರಪಡಿಸುವಂತೆ ನಮ್ಮ ಠಾಣೆಯ ಶ್ರೀಮತಿ ಭಾರತಿಬಾಯಿ ಮ.ಎ.ಎಸ್.ಐ. ರವರು ಎದುರುಗಡೆ ಕುಮಾರಿಕುಮಾರಿ ಇವಳು ಹೇಳಿಕೆ ಕೊಟ್ಟಿದ್ದರ ಸಾರಾಂಶವೆನೆಂದೆರೆ, ದಿನಾಂಕ  06-11-13 ರಂದು ಬೆಳಿಗ್ಗೆ 10-30 ಗಂಟೆ ಸುಮಾರಿಗೆ  ಮನೆಯಿಂದ ಶಾಲೆಗೆ ಹೋಗಬೇಕೆಂದು  ಹೊರಟಾಗ ನಮ್ಮ ಮನೆ ಹತಿರ ರಮೇಶ ಇತನು ಬಂದು ನನಗೆ ಮದುವೆ ಮಾಡಿಕೊಳ್ಳುತ್ತೇನೆ ಓಡಿ ಹೋಗೋಣಾ ನಡಿ ಅಂತಾ ಪುಸಲಾಯಿಸುತ್ತಿರುವಾಗ ನಾನು ಬರುವುದಿಲ್ಲಾ ಅಂತಾ ಹೇಳಿದ್ದಕ್ಕೆ ಆತನು ನನಗೆ ನೀನು ನನ್ನ ಜೊತೆ ಬರದೇ ಇದ್ದಲ್ಲಿ ನಿಮ್ಮ ತಂದೆ, ತಾಯಿ ಮತ್ತು ತಮ್ಮಂದಿರರನ್ನು ಜೀವಂತ ಬಿಡುವುದಿಲ್ಲಾ ಮತ್ತು ನಿಮ್ಮ ಮನೆಯ ಮಾನ ಮಾರ್ಯಾದೆ ತೆಗೆಯುತ್ತೇನೆ. ಎಂದು ಹೆದರಿಸಿ, ನನಗೆ ಮನೆಯ ಎದುರುನಿಂದ ಒತ್ತಾಯಪೂರ್ವಕವಾಗಿ ಕಲಬುರಗಿ ಕೇಂದ್ರ ಬಸನಿಲ್ದಾಣಕ್ಕೆ ಕರೆದುಕೊಂಡು ಹೋಗಿ ಅಲ್ಲಿಂದ ಬಳ್ಳಾರಿಗೆ ಹೋಗಿದ್ದು. ಬಳ್ಳಾರಿ ಬಸಸ್ಟ್ಯಾಂಡಲ್ಲಿ ರಮೇಶನ ಗೆಳೆಯರಾದ ನಮ್ಮ ಬಡಾವಣೆಯ ರಾಜು ತಂದೆ ಅಣ್ಣೆಪ್ಪ ವಡ್ಡರ ಮತ್ತು  ಸುನೀಲ ತಂದೆ ನಾರಾಯಣ ಇವರು ಸಿಗಲು ಇವರಿಬ್ಬರು ರಮೇಶನಿಗೆ ನಿನಗೆ ಮದುವೆ ಮಾಡಿಕೊಳ್ಳಲು ನಾವು ಸಹಾಯ ಮಾಡುತ್ತೇವೆ ಎಂದು ಹೇಳಿ ನಮ್ಮಿಬ್ಬರನ್ನು ತಮ್ಮ ಜೊತೆಯಲ್ಲಿ ಮಾಹಾರಾಷ್ಟ್ರ ರಾಜ್ಯದ ಪೂನಾಕ್ಕೆ ಕರೆದುಕೊಂಡು ಪೂನಾದ  ವಡ್ಡರವಾಡಿ ಏರಿಯಾದಲ್ಲಿ ರಮೇಶನ ಗೆಳೆಯರಾದ ರಾಜು ತಂದೆ ಅಣ್ಣೆಪ್ಪ ವಡ್ಡರ ಮತ್ತು ಸುನೀಲ ಇವರು  ರಮೇಶನಿಗೆ ಒಂದು ರೂಮು ಬಾಡಿಗೆ ಹಿಡಿದು ಕೊಟ್ಟಿದ್ದು ಸದರಿ ರೂಮಿನಲ್ಲಿ ನಾವಿಬ್ಬರೂ ವಾಸವಾಗಿದ್ದೇವು. 2-3 ದಿವಸಗಳ ನಂತರ ರಾಜು ಮತ್ತು ಸುನೀಲ ಇವರಿಬ್ಬರ ಸಹಾಯದಿಂದ ರಮೇಶ ಇತನು  ನನಗೆ ಪೂನಾ ವಡ್ಡರ ವಾಡಿ ಏರಿಯಾದ ಹತ್ತಿರ ಇರುವ ಛತ್ರಸಿಂಗ್ ಏರಿಯಾದಲ್ಲಿರುವ ಅಂಬಾಭಾಯಿ ಗುಡಿಯಲ್ಲಿ ಹಿಂದು ಸಂಪ್ರದಾಯದಂತೆ  ನನಗೆ ತಾಳಿ ಕಟ್ಟಿ ಮದುವೆಯಾದನು. ಆಗ್ಗಾಗೆ ರಾಜು ಮತ್ತು ಸುನೀಲ ಇವರಿಬ್ಬರು ರಮೇಶನಿಗೆ ಹಣ ಸಹಾಯ ಮಾಡುತ್ತಿದ್ದರು. ಮದುವೆಯಾದ ರಾತ್ರಿ ಸಮಯದಲ್ಲಿ ನನ್ನೊಂದಿಗೆ ದೈಹಿಕ ಸಂಪರ್ಕ ಮಾಡಲು ಬಂದಾಗ ಅವನಿಗೆ ಸಧ್ಯ ಬೇಡವೆಂದರೂ ನನ್ನೊಂದಿಗೆ ಜಬರದಸ್ತಿಯಿಂದ ಹಠ ಸಂಭೋಗ ಮಾಡಿ ಅತ್ಯಾಚಾರ ವೆಸೆಗಿರುತ್ತಾನೆ. ಮುಂದೆ ಹಾಗೇ ಮಾಡಲು ಬಂದಾಗ ರಮೇಶನಿಗೆ ನಾವು ಪ್ರಾಪ್ತ ವಯಸ್ಕರಾದ ನಂತರ ಎಲ್ಲಾ ಹಿರಿಯ ಸಮಕ್ಷಮದಲ್ಲಿ ಲಗ್ನವಾದ ನಂತರ ದೈಹಿಕ ಸಂಪರ್ಕ ಮುಂದುವರೆಸೋಣಾ ಅಂತಾ ಹೇಳಿದರೂ ಕೂಡಾ ಜಬರದಸ್ತಿಯಿಂದ ಸತತವಾಗಿ ಹಗಲು ಮತ್ತು ರಾತ್ರಿ ಎನ್ನದೆ ನನಗೆ ಬಲತ್ಕಾರ ಮಾಡುತ್ತಾ ಬಂದಿರುತ್ತಾನೆ. ಈಗ ಸಧ್ಯ ನಾನು 6 ತಿಂಗಳ ಗರ್ಬಿಣಿ ಇರುತ್ತೇನೆ. ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.