POLICE BHAVAN KALABURAGI

POLICE BHAVAN KALABURAGI

02 November 2014

Gulbarga District Reported Crimes

ಹಲ್ಲೆ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಮೋಹನ ತಂದೆ ಬಸವಣಪ್ಪಾ ಢೋಲೆ ಸಾಃ ಡಿಪೋ ನಂ. 3, ವಿಭಾಗ ನಂ. 3, ಎನ್.ಈ.ಕೆ.ಎಸ್.ಆರ್.ಟಿ.ಸಿ ಗುಲಬರ್ಗಾ ಇವರು ದಿನಾಂಕಃ 27/10/2014 ರಂದು ಸುಪರ ಮಾರ್ಕೆಟದಿಂದ ಪಾಳಾ ಗ್ರಾಮದ ಮಾರ್ಗದಲ್ಲಿ ಬಸ್ ನಂ. ಎಫ್ 1389 ರಲ್ಲಿ ಕಾರ್ಯ ನಿರ್ವಹಿಸುತ್ತಿದ್ದೆ. ಅಂದು ಸುಪರ ಮಾರ್ಕೆಟದಿಂದ ಪಾಳಾ ಗ್ರಾಮದ ಮಾರ್ಗದಲ್ಲಿ ಹೋಗುವಾಗ ಸದರಿ ನಮ್ಮ ವಾಹನ ಸರಡಗಿ ದಾಟಿ ಅರ್ದ ಕಿ.ಮೀ ದಾಟಿದ ಮೇಲೆ ಇನ್ನೂ 03 ಕಿ.ಮೀ ಇರುವಾಗ 1) ಶ್ರೀ ರಾಘವೇಂದ್ರ ಎ.ಟಿ.ಐ ಹಾಗು 2) ಹಣಮಂತ ಎ.ಟಿ.ಐ ತನಿಖಾಧಿಕಾರಿಗಳು ಬಂದು ನಮ್ಮ ಬಸ್ ತಡೆದು ಕೂಡಲೇ ಬಸ್ಸಿನಲ್ಲಿ ಹತ್ತಿ ನನ್ನ ಹತ್ತಿರ ಇರುವ ಟಿಕೆಟ್ ವಿತರಣೆ ಮಶೀನ್ ನೀಡುವಂತೆ ಕೇಳಿದರು. ಆಗ ನಾನು ಅವರಿಗೆ ಸದರಿ ಮಶೀನ್ ಕೊಟ್ಟೆ ಇನ್ನೂ ಟಿಕೆಟ್ ಕೊಡುತ್ತಿದ್ದೇನೆ ಅಂದರೂ ಕೂಡ ಸದರಿ ಅಧಿಕಾರಿಗಳು ಕೇಳದೇ ಮಶಿನ್ ನನ್ನ ಹತ್ತಿರ ತೆಗೆದುಕೊಂಡರು. ಆಗ ಸಮಯ ಅಂದಜು 01 ಗಂಟೆಯಾಗಿತ್ತು. ನೀನು ಟಿಕೆಟ್ ಇನ್ನೂ ವಿತರಣೆ ಮಾಡಿರುವುದಿಲ್ಲ ಎಂದು ಹೇಳಿ ನಿನಗೆ ಮೆಮೋ ನೀಡುತ್ತೇವೆಂದು ಹೇಳಿದರು. ಆಗ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದರೂ ಅವರು ಕೇಳದೇ ಪಾಳಾ ಗ್ರಾಮದವರೆಗೆ ಬಂದರು. ಅಲ್ಲಿಯೇ ಸುಮಾರು 01 ಗಂಟೆಯವರೆಗೆ ನಮ್ಮ ಅವರ ಮಧ್ಯೆ ವಾದ ವಿವಾದ ನಡೆಯಿತು. ಆವಾಗ ಗ್ರಾಮದ ನಾಗರೀಕರು ಸಮಕ್ಷಮದಲ್ಲಿ ಇದ್ದ ಸ್ಥಿತಿ ಮೆಮೋ ನೀಡುತ್ತೇವೆಂದು ಹೇಳಿ ಒಂದು ಮೆಮೋ ಸುಳ್ಳು ಬರೆದು ಕೊಟ್ಟರು. ಅದಕ್ಕೆ ನಾನು ಒಪ್ಪುವುದಿಲ್ಲವೆಂದು ಸಹಿ ಮಾಡಿರುತ್ತೇನೆ. ನಂತರ ನಾನು ಸಾರ್ವಜನಿಕರು ಬಸ್ ತಡವಾಗಿದೆ ನಡೆರಿ ಎಂದು ಒತ್ತಾಯ ಮಾಡುತ್ತಿರುವುದರಿಂದ ಸದರಿ ಬಸ್ಸನ್ನು ಗುಲಬರ್ಗಾಕ್ಕೆ ಬರುವಾಗ ಸದರಿ ರಾಘವೇಂದ್ರ ಎ.ಟಿ.ಐ ಸಾಹೇಬರು ಹಾಗು ಹಣಮಂತ ಎ.ಟಿ.ಐ ಸಾಹೇಬರು ಅವರ ಕಾರ್ ಡ್ರೈವರ ಪುನಃ ನಮ್ಮ ಬಸ್ ಸರಡಗಿ ಕ್ರಾಸ್ ಹತ್ತಿರ ನಿಲ್ಲಿಸಿ ನೀನು ಹಳೆ ನಿರ್ವಾಹಕಕನಾಗಿದ್ದು ನಿನಗೆ ಅನ್ಯಾಯವಾಗುತ್ತದೆ ನಿನಗೆ ಇನ್ನೊಂದು ಮೆಮೋ ಬರೆದುಕೊಡುತ್ತೇವೆ ಈಗ ಬರೆದು ಕೊಟ್ಟ ಮೊಮೊ ಕೊಡಿ ಎಂದು ನನ್ನಿಂದ ವಾಪಸ್ಸು ಪಡೆದುಕೊಂಡು, ನಂತರ ನೀನು ಗುಲಬರ್ಗಾಕ್ಕೆ ಬನ್ನಿರಿ ಎಂದು ಅಲ್ಲಿಯೇ ಮೆಮೊ ಬರೆದುಕೊಡುತ್ತೇವೆ. ಈಗ ಪ್ಯಾಸಿಂಜರಗೆ ತಡವಾಗುತ್ತದೆ ನಡೆ ಎಂದು ಹೇಳಿದ್ದರಿಂದ ನಾನು ಖರ್ಗೆ ಪೆಟ್ರೋಲ್ ಪಂಪ್ ಹತ್ತಿರ ಬಂದು ಮಾನ್ಯರು ನನಗೆ ಮೆಮೊ ನೀಡಲು ಕೋರಿದೆ. ಆಗ ಸದರಿಯವರು ನನಗೆ ನಾನು ಯಾವುದೇ ತಪ್ಪು ಮಾಡಿದಿದ್ದಾಗ್ಯೂ ಪುನಃ ಹೆಚ್ಚಿನ ಟಿಕೆಟ್ ಹೊಡೆಯಲಾಗಿದೆ ಎಂದು ಸುಳ್ಳು ಮೆಮೊ ನೀಡಿದರು. ಆಗ ನಾನು ತಾವು ಇದ್ದ ಸ್ಥಿತಿ ಬರೆಯಬೇಕು ಒಂದು ವೇಳೆ ಹೆಚ್ಚಿಗೆ ಬರೆದರೆ ಅನ್ಯಾಯವಾಗು ವುದೆಂದು ಅಂದಾಗ ಮಗನೆ ನಾವು ಹೇಳಿದಹಾಗೆ  ಕೇಳಬೇಕೆಂದು ನನಗೆ ಹೆದರಿಸಿದರು. ನಾನು ಅವರಿಗೆ ಹೆದರದೇ ಇದ್ದಾಗ ಮಾತಿಗೆ ಮಾತು ಬೆಳೆದು ಸದರಿ ಇಬ್ಬರೂ ಎ.ಟಿ.ಐ ಹಾಗು ಅವರ ಕಾರ್ ಚಾಲಕರು ಸೇರಿ ನನಗೆ ಬಸ್ಸಿನಿಂದ ಅಂಗಿ ಹಿಡಿದು ಎಳೆದಾಡಿ  ಮಗನೆ ಸಹಿ ಮಾಡು ಎಂದು ನನಗೆ ಸಿಕ್ಕಾಪಟ್ಟೆ ಹೊಡೆ ಬಡೆ ಮಾಡಿದ್ದು ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ನಾನು ಸಹಿ ಮಾಡುವುದಿಲ್ಲ ಎಂದಿದಕ್ಕೆ ಸದರಿಯವರು ನನಗೆ ಎಳೆದಾಡಿ ಹೊಡೆ ಬಡೆ ಮಾಡಿ ಸಹಿ ಮಾಡಿಕೊಂಡಿದ್ದು ನೀನು ಹೇಗೆ ನೌಕರಿ ಮಾಡುತ್ತಿ ಮಗನೇ ಎಂದು ನನಗೆ ಸದರಿಯವರು ಜೀವಕ್ಕೆ ಭಯ ಹಾಕಿದ್ದಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುರಿಗಳ ಕತ್ತು ಕೊಯಿದು ಸಾಯಿಸಿದ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ : ಶ್ರೀ. ಶರಣಪ್ಪ ತಂದೆ ಸಂಗಪ್ಪ ದಂಡಗುಂಡ ವಯ|| 45, ಸಾ|| ನೃಪತುಂಗ ಕಾಲೋನಿ ಹತ್ತಿರ ಇರುವ ಅಶೋಕ ಹೊನ್ನಳಿ ರವರ ಹೊಲದಲ್ಲಿ ತಾ||ಜಿ|| ಕಲಬುರ್ಗಿ ಇವರಿಗೆ 5 ಜನ ಮಕ್ಕಳಿದ್ದು ಮಗಳಾದ ಅಂಬಿಕಾ ಇವಳೊಂದಿಗೆ ಶಕ್ತಿ ನಗರದಲ್ಲಿ ವಾಸವಾಗಿರುವ ರವಿ ತಂದೆ ಚೋಕ್ಲು ರಾಠೋಡ ಈತನು ಪ್ರೀತಿಸುತ್ತಿದ್ದು ಈ ಬಗ್ಗೆ ಅವರ ತಂದೆ-ತಾಯಿಗೆ ಕರೆಯಿಸಿ ಇನ್ನೊಮ್ಮೆ ನಮ್ಮ ಮಗಳ ತಂಟೆಗೆ ಬಾರದಂತೆ ಬುದ್ದಿವಾದ ಹೇಳಿ ಕಳುಹಿಸಿದ್ದು ದಿನಾಂಕ: 31/10/2014 ರಂದು ರಾತ್ರಿ 9:00 ಗಂಟೆಗೆ ನನ್ನ ಕುರಿಗಳನ್ನು ಹಾಗೂ ಪಕ್ಕದ ಮನೆಯ ಆಶಪ್ಪ ತಂದೆ ಸಾಯಿಬಣ್ಣ ದೊಡ್ಡಮನಿ, ಇವರ ಕುರಿಗಳನ್ನು ಕೂಡಿಸಿ ರಾತ್ರಿ ಶೆಡ್ಡಿನಲ್ಲಿ ಹಾಕಿ ನಾನು ಮನೆಯಲ್ಲಿ ಮಲಗಿಕೊಂಡಿದ್ದು.  ದಿನಾಂಕ: 01/11/2014 ರಂದು 12:30 ಎ.ಎಮ್ ಕ್ಕೆ ಸುಮಾರಿಗೆ ಕುರಿಗಳು ಚೀರಾಡುವ ಸಪ್ಪಳ ಕೇಳಿ ನಾನು ಮತ್ತು ಆಶಪ್ಪ ಎದ್ದು ಹೊರಗೆ ಬಂದು ಬ್ಯಾಟರಿ ಹಾಕಿ ನೋಡಲಾಗಿ ರವಿ ತಂದೆ ಚೋಕ್ಲು ಮತ್ತು ಆತನ ಗೆಳೆಯ ಗುಂಡು ಇಬ್ಬರು ನಾವು ಕುರಿಗಳು ಹಾಕಿರುವ ಶೆಡ್ಡನಲ್ಲಿ ನಿಂತಿದ್ದು ನಾವು ಹಿಡಿಯಲು ಹೋದರೆ ಓಡಿ ಹೋಗಿದ್ದು, ಶೆಡ್ಡಿನಲ್ಲಿ ಹೋಗಿ ನೋಡಲಾಗಿ ಶೆಡ್ಡನಲ್ಲಿ ಹಾಕಿರುವ 19 ಕುರಿ ಮರಿಗಳ ಕುತ್ತಿಗೆ ಕೊಯ್ದು ಸಾಯಿಸಿ ಬಿಟ್ಟಿದ್ದರು. ರವಿ ಈತನು ನನ್ನ ಮಗಳಿಗೆ ಪ್ರೀತಿಸಿದ್ದರಿಂದ ಅವನಿಗೆ ಬುದ್ದಿವಾದ ಹೇಳಿದ್ದಕ್ಕೆ ಅದೇ ವೈಷ್ಯಮ್ಯವಿಟ್ಟುಕೊಂಡು ರಾತ್ರಿ ವೇಳೆಯಲ್ಲಿ ಶೆಡ್ಡದಲ್ಲಿ ಹಾಕಿರುವ 19 ಕುರಿ ಮರಿಗಳನ್ನು ಚಾಕುವಿನಿಂದ ಕತ್ತು ಕೊಯ್ದು ಸಾಯಿಸಿದ್ದು ಅಂದಾಜು 50,000/- ರೂ. ಹಾನಿ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಜೀವನ ಬಸವರಾಜ ಐ.ಎಸ್.ಎಸ್ ಅಧೀಕಾರಿ ಅಸಿಸ್ಟೆಂಟ ಕಮಿಷನರ್ ನಗಾಂವ ಆಸ್ಸಾಂ ರಾಜ್ಯ ಹಾ;ವ: ಮ.ನಂ. 1711/73 ಸರಸ್ವತಿ ನಗರ ದಾವಣಗೇರೆ ಇವರು ದಿನಾಂಕ 31/10/2014 ರಂದು ಹೈದ್ರಾಬಾದ ಪೊಲೀಸ ಅಕಾಡಮಿಯಲ್ಲಿ ಗೆಳೆಯರೊಂದಿಗೆ ಭೇಟ್ಟಿಯಾಗಿ ನನ್ನ ಸ್ವಗ್ರಾಮ ದಾವಣಗೇರೆ ಹೊಗಲು  ಗುಲಬರ್ಗಾ ಬಸ ಸ್ಟ್ಯಾಂಡಕ್ಕೆ ಬಂದು ಇಳಿದು, ರಾತ್ರಿ 9 ಗಂಟೆ ಸುಮಾರಿಗೆ  ಸ್ಲೀಪರ ಕೊಚ ಬಸ್‌ನಲ್ಲಿ ನನ್ನ ಲಗೇಜ ಬ್ಯಾಗ ಹಾಗು  ಹೆಚ್‌ಪಿ ಮಿಡಿಯಾ ಸೆಂಟರ ಲ್ಯಾಪಟಾಪ ಮತ್ತು  ಐ-ಪ್ಯಾಡ ಮಿನಿ ಸಿಮ್‌ ನಂ. 08135024475 ಹಾಗು ಹಾರ್ಡ ಡಿಸ್ಕವುಳ್ಳ ಬ್ಯಾಗನ್ನು  ಬಸ್ಸಿನ ಸೀಟಿನ ಮೇಲೆ ಇಟ್ಟಿದ್ದು ಕಂಡಕ್ಟರ ಹತ್ತಿರ ಟಿಕೇಟ ತೆಗೆದುಕೊಳ್ಳುತ್ತಿರುವಾಗ  2 ನಿಮಿಷಯದಲ್ಲಿ  ಯಾರೋ ಕಳ್ಳರು  ಲ್ಯಾಪಟಾಪ ಮತ್ತು ಐ-ಪ್ಯಾಡ ಹಾಗು ಹಾರ್ಡ ಡಿಸ್ಕವುಳ್ಳ ಬ್ಯಾಗನ್ನು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ. ಅದರ ಮೌಲ್ಯ  1 ಲಕ್ಷ ರೂಪಾಯಿ  ಇರುತ್ತದೆ.  ಐ-ಪ್ಯಾಡಿನ  ಜಿ.ಪಿ.ಎಸ್‌ ಲೋಕೇಶನ ಪರಿಶೀಲಿಸಿದಾಗ ರಾತ್ರಿ 10 ಗಂಟೆ ಸುಮಾರಿಗೆ ಜಿಲಾನಾಬಾದ  ಗೊಚರಿಸಿರುತ್ತದೆ.  ನನ್ನ ಹೆಚ್‌ಪಿ ಮಿಡಿಯಾ ಸೆಂಟರ ಲ್ಯಾಪಟಾಪ ಮತ್ತು  ಐ-ಪ್ಯಾಡ ಮಿನಿ ಹಾಗು ಹಾರ್ಡ ಡಿಸ್ಕನಲ್ಲಿ ಜಿಲ್ಲಾ ಆಡಳಿತಕ್ಕೆ ಸಂಬಂಧಪಟ್ಟ ದೈನಂದಿನ ಡಾಟಾ ಹಾಗೂ ಲಾಲಬಹಾದ್ದೂರ ಶಾಸ್ತ್ರಿ ಐಎಎಸ್ ಅಕ್ಯಾಡಮಿಗೆ ಸಂಬಂಧಪಟ್ಟ ಸಂಪೂರ್ಣ ಡಾಟಾ ಇರುತ್ತದೆ. ಆದ್ದರಿಂದ ಕಳುವಾದ ಲ್ಯಾಪಟಾಪ ಮತ್ತು ಐ-ಪ್ಯಾಡ ಬ್ಯಾಗನ್ನು ಪತ್ತೆ ಹಚ್ಚಿಕೊಡಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.