POLICE BHAVAN KALABURAGI

POLICE BHAVAN KALABURAGI

01 December 2013

Gulbarga District Reported Crimes

ಅಪಘಾತ ಪ್ರಕರಣಗಳು :
ಮಾಹಾಗಾಂವ ಠಾಣೆ : ಶ್ರೀ ಶಿವಪ್ಪ ತಂ ಮಲ್ಲಪ್ಪ ರಾಜೋಳ  ಸಾ|| ಕೋಡ್ಲಾ ತಾ|| ಸೇಡಂ ಜಿ|| ಗುಲಬರ್ಗಾ ರವರು ದಿನಾಂಕ: 29-11-13 ರಂದು ಸಾಯಂಕಾಲ 5.15 ಗಂಟೆಯ  ಸುಮಾರಿಗೆ  ಹೀರೊ ಹೊಂಡಾ ನಂ ಕೆ.ಎ-37-ಕ್ಯೂ-9952 ನೇದ್ದರ ಮೇಲೆ ಬಬಲಾದ ಐಕೆ ಗ್ರಾಮದಿಂದ ಅಂಕಲಗಿ ಮಾರ್ಗವಾಗಿ ಗುಲಬರ್ಗಾಕ್ಕೆ ಹೋಗುವಾಗ ಕಗ್ಗನಮಡ್ಡಿ ಕ್ರಾಸ ದಾಟಿ ಮುಂದೆ ಒಂದು ಕ್ರೂಸರ ಹೋಗುತ್ತಿದ್ದು ಹಿಂದೆ ಹೋಗುವಾಗ ಒಮ್ಮಲೆ ಕ್ರೂಸರ ಚಾಲಕನು ತನ್ನ ಕ್ರೂಸರನ್ನು ಸದರಿ ವಾಹನ ನಿಲ್ಲಿಸಿದ್ದಾಗ ತನ್ನ ಮೋಟಾರ ಸೈಕಲನ್ನು ಬಾಜು ಮಾಡಿಕೊಂಡು ಮುಂದೆ ಹೋಗಬೇಕೆ ನ್ನುವಸ್ಟರಲ್ಲಿ ಎದುರುಗಡೆಯಿಂದ ಕೆ,ಎಸ್,ಅರ್,ಟಿ,ಸಿ, ಬಸ್ಸ ನಂ ಕೆ,ಎ, 38 ಎಫ್,697 ಚಾಲಕ ಇತನು ತನ್ನ ಬಸ್ಸನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದವನೆ ಡಿಕ್ಕಿ ಹೋಡೆದ ಪ್ರಯುಕ್ತ ತನಗೆ ಮೋಳಕಾಲದಿಂದ ಪಾದದವರೆಗೆ ಭಾರಿ ರಕ್ತಗಾಯವಾಗಿದ್ದು ಬಲಗೈ ನಡುಬೆರಳಿಗೆ ಹಾಗೂ ಇತರೆ ಕಡೆ ಭಾರಿಗಾಯಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : ಶ್ರೀ ಪ್ರಭುಲಿಂಗ ತಂದೆ ದಯಾನಂದ ಬೀರಾದಾರ ಸಾ|| ಕಲಕೊಟಗಿ ಹಾ||ವ|| ಮಹಾಗಾಂವ ತಾ||ಜಿ|| ಗುಲಬರ್ಗಾ  ರವರು ದಿನಾಂಕ 29-11-2013 ರಂದು ಬೆಳಮಗಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ತನಗೆ ಹಾಗೂ ಆಳಂದ ವಲಯದ ಬಿ.ಆರ್.ಪಿ ಕಲ್ಯಾಣರಾವ ಇಬ್ಬರಿಗೂ ಮುಖ್ಯ ಅತಿಥಿಯಾಗಿ ಕರೆಯಿಸಿದ್ದರಿಂದ ಬೆಳಿಗ್ಗೆ 10:30 ಗಂಟೆಗೆ ತನ್ನ ಮೋಟಾರ ಸೈಕಲ್ ನಂ: ಕೆ.ಎ-32-ಆರ್-404 ನೇದ್ದರ ಮೇಲೆ 10:30 ಎ.ಎಮ್ ಕ್ಕೆ ಮಹಾಗಾಂವ ದಿಂದ ಹೊರಟ್ಟಿದ್ದು ಮೋಟಾರ ಸೈಕಲ್ ತಾನೆ ಚಲಾಯಿಸುತ್ತಿದ್ದು ಕಲ್ಯಾಣರಾವ ಹಿಂದೆ ಕುಳಿತ್ತಿದ್ದು ಮಹಾಗಾಂವ ತಾಂಡಾದ ಸೀಮಾಂತರದ ಗುಡ್ಡದ ಹತ್ತಿರ ರೋಡಿನ ಎಡಗಡೆಯಿಂದ ಮೋಟಾರ ಸೈಕಲ್ ಸಾಹುಕಾಶವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದಾಗ 10:45 ಎ.ಎಮ ಕ್ಕೆ ಎದುರುಗಡೆಯಿಂದ ಟಾಟಾ ಇಂಡಿಕಾ ಕಾರ ನಂ: ಎಮ್,.ಹೆಚ್-06-ಎಮ್-8270 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ನನಗೆಭಾರಿರಕ್ತಗಾಯಗಳಾಗಿ ಕಾಲು ಮತ್ತು ಕೈ ಮುರಿದಿರುತ್ತದೆ. ಎದೆಯ ಎಡಭಾಗಕ್ಕೆ ಭಾರಿಒಳಪೆಟ್ಟಾಗಿರುತ್ತದೆ ಹಾಗೂ ಕಲ್ಯಾಣರಾವ ಇತನಿಗೆ ಭಾರಿರಕ್ತಗಾಯಗಳಾಗಿರುತ್ತವೆ ಅಪಘಾತ ಪಡಿಸಿದ ಕಾರ ಅಲ್ಲೆ ನಿಂತಿದ್ದು ಅದರ ಚಾಲಕನಿಗೆ ಹೆಸರು ವಿಳಾಸ ವಿಚಾರಿಸಿದಾಗ ಆತ ಹೆಸರು ಹೇಳದೆ ಕಾರು ತೆಗೆದುಕೊಂಡು ಓಡಿಹೋಗಿರುತ್ತಾನೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ :  ದಿನಾಂಕ 30-11-2013 ರಂದು  2.30 ಎ,ಎಮ್,ಕ್ಕೆ ಎಮ್,ಡಿ, ಮೀನಿರ ಪಾಶ ತಂ ಇಮಾಮಸಾಬ  ಸಾ|| ಬಸವಕಲ್ಯಾಣ  ಈತನು ತನ್ನ ವಶದಲ್ಲಿದ್ದ ಲಾರಿ ನಂ ಕೆ,ಎ, 39 -7160  ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ  ಲಾರಿ ಪಲ್ಟಿ ಹೊಡೆಯಿಸಿ ಲುಕ್ಷಾನ ಮಾಡಿರುತ್ತಾನೆ ಅಂತಾ ಶ್ರೀ ಶೌಕತಅಲಿ ತಂ ಮಿಯಾಜಾನಿ ಸೌದಾಘರ ಸಾ||ಬಜಾರ ಗಲ್ಲಿ ಮನ್ನಾಎಖೇಳ್ಳಿ ತಾ|| ಹುಮನಾಬಾದ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಂಗಾವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಶಾಹಾಬಾದ ನಗರ ಠಾಣೆ : ದಿನಾಂಕ 30-11-2013 ರಂದು 1-15 ಪಿಎಮ್ ಕ್ಕೆ ಶ್ರೀ ಮಲ್ಲಿಕಾರ್ಜುನ ತಂದೆ ಶಿವಣ್ಣಾ ಕಿರಣಗಿ ಸಾ: ಅಶೋಕ ನಗರ ಶಹಾಬಾದ ರವರ ತಂದೆಯಾದ ಶಿವಣ್ಣಾ ಕಿರವಣಿ ಇವರು ಮನೆಯಿಂದ ಹೊನಗುಂಟಾ ಕ್ರಾಸ ಕಡೆಗೆ ನಡೆದುಕೊಂಡು ರೋಡಿನ ಪಕ್ಕದಲ್ಲಿ ಹೋಗುತ್ತಿದ್ದಾಗ ಜೇವರ್ಗಿ ಕ್ರಾಸದಿಂದ ಹೊನಗುಂಟಾ ಕ್ರಾಸ ಕಡೆಗೆ ಟ್ಯಾಕ್ಟರ್ ನಂ: ಕೆ.ಎ-32/ಟಿ.ಎ-2056/57 ನೇದ್ದರ ಚಾಲಕನು ತನ್ನ ಟ್ಯಾಕ್ಟರನ್ನು ಅತೀವೇಗ ಮತ್ತು ನಿಷ್ಕಾಳಜಿತದಿಂದ ಚಲಾಯಿಸಿಕೊಂಡು ಬಂದು ನಮ್ಮ  ತಂದೆಗೆ ಹಿಂದಿನಿಂದ ಡಿಕ್ಕಿ ಹೊಡೆದು ಟ್ಯಾಕರ ಚಾಲಕನು ತನ್ನ ಟ್ಯಾಕರನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಇದರಿಂದ ನಮ್ಮ ತಂದೆಗೆ ಬಲಗಡೆ ಹಣೆಗೆ , ಬಲಗ ಮೊಳಕಾಲಿಗೆ, ಬಲಗಡೆ ಮುಖಕ್ಕೆ , ಬಲ ಭುಜಕ್ಕೆ ರಕ್ತಗಾಯ ಮತ್ತು ಒಳಪೆಟ್ಟಾಗಿದ್ದು ಮತ್ತು ಬಲಗೈ ಬೆರಳಿಗೆ ರಕ್ತಗಾಯವಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಮಾಹಾಗಾಂವ ಠಾಣೆ : ದಿನಾಂಕ 30-11-2013 ರಂದು ಬೆಳಗ್ಗೆ 11.00 ಗಂಟೆಯ ಸೂಮಾರಿಗೆ ಕಲ್ಲಿನ ವಿಷಯದ ಸಂಬಂದ ಸುವರ್ಣ ಗಂ ಸೂರ್ಯಕಾಂತ ಸುಂಕೆನವರ , ಸೂರ್ಯಕಾಂತ ತಂ ಕೋಬಣ್ಣ ಸುಂಕೆನವರ ಪರಮೇಶ್ವರ ತಂ ಸೂರ್ಯಕಾಂತ ಸುಂಕೆನವರ , ಇವರೆಲ್ಲರೂ ಕೂಡಿ ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ ಕೈಯಿಂದ ಹೋಡೆಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೇದರಿಕೆ ಹಾಕಿ ತಲೆಯ ಮೇಲಿನ ಕೂದಲು ಹಿಡಿದು ಎಳದಾಡಿ ಹೊಡೆ ಬಡೆ ಮಾಡಿರುತ್ತಾರೆ ಅಂತಾ ಕು: ಕಸ್ತೂರಿಬಾಯಿ ತಂ ಗುರುಪಾದಯ್ಯ ಸ್ವಾಮಿ ಸಾ|| ಕುರಿಕೋಟ ತಾ||ಜಿ|| ಗುಲಬರ್ಗಾ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.