POLICE BHAVAN KALABURAGI

POLICE BHAVAN KALABURAGI

30 April 2015

Kalaburagi District Reported Crimes

ಅಪಘಾತ ಪ್ರಕರಣಗಳು :
ಆಳಂದ ಠಾಣೆ : ದಿನಾಂಕ 25/04/2015 ರಂದು ಶ್ರೀ ಉಮೇಶ ತಂದೆ ನರಸಪ್ಪಾ ಕುಂಬಾರ ಸಾ;  ಕೂಲಕುಂದಾ ತಾ:ಸೇಡಂ ಜಿ:ಕಲಬುರಗಿ ಮತ್ತು ನನ್ನ ಅಣ್ಣಾ ಶ್ರೀಧರ ಇನ್ನೊಬ್ಬ ಅಣ್ಣ ರವಿಕುಮಾರ ನಮ್ಮ ತಾಯಿ ಮಲ್ಲಮ್ಮಾ ಹಾಗೂ ನಮ್ಮ ಸಂಬಂಧಿ ಶಂಕರ ಕೂಡಿಕೊಂಡು ಪುನಾಕ್ಕೆ ಹೋಗಿ ಹುಡಗಿ ನೋಡಿಕೊಂಡು ಮರಳಿ ಬರುವಾಗ ನಮ್ಮ ಅಣ್ಣಾ ಶ್ರೀಧರನು ವಾಹನ ಚಲಾಯಿಸುತ್ತಿದ್ದು ಆಳಂದ-ಉಮರ್ಗಾ ರೋಡಿನ ಮುಖಾಂತರ ಖಜೂರಿ ದಾಟಿ ಬಂಗರಗಾ ಪಾಟಿ ½ ಕಿ.ಮೀ ಅಂತರದಲ್ಲಿ ಇರುವಾಗ ದಿನಾಂಕ 27/04/2015 ರಂದು ಬೇಳಗ್ಗಿನ 04:00 ಗಂಟೆಗೆ ನಮ್ಮ ಕಾರಿನ ಎದುರಿನಿಂದ ಯಾವುದೋ ಒಂದು ದೊಡ್ಡ ವಾಹನದ ಲೈಟಿನ ಬೆಳಕು ನಮ್ಮ ಕಾರಿನ ಮೇಲೆ ಬಿದ್ದಾಗ ಶ್ರೀಧರನು ಆಗ ಕಾರನು ಅತೀವೇಗದಿಂದ ಚಲಾಯಿಸುತ್ತಿದ್ದರಿಂದ ತನ್ನ ನಿಯಂತ್ರಣ ತಪ್ಪಿ ಒಮ್ಮಲೆ ರೋಡಿನ ಎಡಕ್ಕೆ ಇರುವ ಮರಕ್ಕೆ ಡಿಕ್ಕಿ ಪಡಿಸಿದ ಪರಿಣಾಮವಾಗಿ ಕಾರಿನಲ್ಲಿದ್ದ  ನನಗೆ ಮೂಗಿನ ಮೇಲೆ ಬಲಗೈ ಮೇಲೆ ಗುಪ್ತಗಾಯವಾಗಿದ್ದು. ರವಿಕುಮಾರನಿಗೆ ತಲೆಗೆ ಭಾರಿ ರಕ್ತಗಾಯ &  ಬಾಯಿ, ಮೂಗಿನ ಮೇಲೆ ಗುಪ್ತಗಾಯ, ನನ್ನ ತಾಯಿಯ ಎರಡು ಕೈ ಮತ್ತು  ಕಾಲುಗಳು ಮುರಿದಂತೆ ಆಗಿದ್ದು ಮೈತುಂಬ ಅಲಲ್ಲಿ ತರಚಿದ ಗಾಯವಾಗಿ ಬೇಹೊಷ ಆಗಿರುತ್ತಾಳೆ. ನಮ್ಮ ಸಂಬಂಧಿ ಶಂಕರನಿಗೆ ಮುಖದ ಮೇಲೆ ಬಲಗೈ ಹತ್ತಿರ ಭಾರಿ ಗುಪ್ತಗಾಯ ಎರಡು ಕಾಲುಗಳಿಗೆ ಒಳಪೆಟ್ಟಾಗಿ ಕಾಲು ಮುರಿದಂತೆಯಾಗಿದ್ದು ಮತ್ತು ವಾಹನ ಚಲಾಯಿಸುತ್ತಿದ್ದ ನಮ್ಮ ಅಣ್ಣ ಶ್ರೀಧರನ ಎಡಗಾಲಿಗೆ ಗುಪ್ತಗಾಯ ಎದೆಗೆ ಬೆನ್ನಿಗೆ ಅಲಲ್ಲಿ ತರಚಿದ ಗಾಯಗಳಾಗಿರುತ್ತವೆ. ದಿನಾಂಕ 29/04/2015 ರಂದು ಬೆಳಿಗ್ಗೆ 5:15 ಗಂಟೆಗೆ ವಾತ್ಲಲ್ಯ  ಆಸ್ಪತ್ರೆ ಕಲಬುರಗಿಯಲ್ಲಿ  ಉಪಚಾರ ಫಲಕಾರಿಯಾಗದೆ ತನಗಾದ ರಸ್ತೆ ಅಪಘಾತದಲ್ಲಿ ಆದ ಗಾಯದಿಂದ ಗಾಯಾಳು ಮಲ್ಲಮ್ಮಾ ಗಂಡ ನರಸಪ್ಪಾ ಕುಂಬಾರ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.
ಸಂಚಾರಿ ಠಾಣೆ : ಶ್ರೀ ಬಸಯ್ಯಾ ತಂದೆ ಶರಣಯ್ಯಾ ಸ್ವಾಮಿ ಸಾಃ ಗಂಜ ಕಾಲೂನಿ, ಗಾಂಧಿ ನಗರ ಕಲಬುರಗಿ, ರವರು ಕೆಲಸ ಮುಗಿಸಿಕೊಂಡು ಗಾಂಧಿನಗರದಲ್ಲಿರುವ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ನಗರೇಶ್ವರ ಸ್ಕೂಲ ಎದರುಗಡೆ ರೋಡಿ ಮೇಲೆ ಮೋಟಾರ ಸೈಕಲ ನಂ. ಕೆ.ಎ 32 ಇ.ಸಿ 0605 ನೇದ್ದರ ಚಾಲಕನು ತನ್ನ ಮೋಟಾರ ಸೈಕಲನ್ನು ಗಂಜ ಬಸ್ತ ನಿಲ್ದಾಣ ಕಡೆಯಿಂದ ಅತಿವೇಗ ಮತ್ತು ಅಲಕ್ಸತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ರೋಡ ದಾಟುತ್ತಿದ್ದ ಫಿರ್ಯಾಧಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿ ಮೋಟಾರ ಸೈಕಲ ಸವರಾನು ಸಹ ಕೆಳಗೆ ಬಿದ್ದಿದ್ದು. ಸದರ ಅಪಘಾತದಿಂದ ಫಿರ್ಯಾದಿಗೆ ತಲೆಗೆ ಗುಪ್ತಪೆಟ್ಟು ಮತ್ತು ಬಲಕಿವಿಗೆ ರಕ್ತಗಾಯವಾಗಿ ರಕ್ತ ಸ್ರಾವವಾಗಿದ್ದು ಅಪಘಾತ ಪಡಿಸಿದ ಚಾಲಕನು ತನ್ನ ಮೋಟಾರ ಸೈಕಲ ಅಲ್ಲಿಯೇ ಬಿಟ್ಟಿ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

29 April 2015

KALABURAGI DISTRICT REPORTED CRIMES

ಹಲ್ಲೆ ಮಾಡಿ ತಾಳಿ ಮತ್ತು ಲಾಕೇಟಸರ ಕಿತ್ತುಕೊಂಡು ಹೋದ ಪ್ರಕರಣ :
ಚೌಕ ಠಾಣೆ : ಕುಃ ರಿಹಾನಾ ತಂ ಮಹೇಬೂಬ ಪಟೇಲ ಸಾಃ ವಿಜಯ ನಗರ ಕಾಲೋನಿ ಕಲಬುರಗಿ ದಿನಾಂಕ 28.04.2015 ರಂದು ಮನೆಯ ಪಕ್ಕದಲ್ಲಿ ಆರೋಪಿ ಅಜ್ಜಿ ಫಿರ್ಯಾದಿಯ ಮನೆಯ ಮುಂದೆ ಬಂದು ಸಂಡಾಸಕ್ಕೆ ಕುಳಿತಿದ್ದು, ಆಗ ಫಿರ್ಯಾದಿದಾರಳು ಇಲ್ಲಿ ಸಂಡಾಸ ಕೂಡಬೇಡಿರಿ ಹೊಲಸು ಆಗುತ್ತದೆ ಅಂತ ಹೇಳಿದಾಗ ಸದರಿ ಅಜ್ಜಿ ಫಿರ್ಯಾದಿದಾರಳಿಗೆ ರಂಡಿ ಬೊಸಡಿ ಅಂತ ಅವಾಚ್ಯ ಶಬ್ದಗಳಿಂದ ಬೈದಿದ್ದು, ಮದ್ಯಾಹ್ನ 3 ಗಂಟೆಯ ಸುಮಾರಿಗೆ ಆರೋಪಿ ಪ್ರಕಾಶ ಮತ್ತು ಆತನ ಮನೆಯ 4 ಜನ ಸದಸ್ಯರು ಮತ್ತು ಅಜ್ಜಿ ಹಾಗೂ ಅವಳ ಮನೆಯ 4 ಜನ ಸದಸ್ಯರು ಹಾಗೂ ಇನ್ನೂ ಇತರರು ಕೂಡಿಕೊಂಡು ಫಿರ್ಯಾದಿ ಮನೆಗೆ ಬಂದು ಫಿರ್ಯಾಧಿಗೆ, ಫಿರ್ಯಾದಿ ತಾಯಿ, ಫಿರ್ಯಾದಿಯ ಅಕ್ಕ ತಂಗಿಯರಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದು, ಅಲ್ಲದೆ ಫಿರ್ಯಾದಿಯ ತಾಯಿ ಕೊರಳಲ್ಲಿದ್ದ 2-1/2 ತೊಲೆ ಬಂಗಾರದ ತಾಳಿಸರ, ಫಿರ್ಯಾದಿ ತಂಗಿಯಾದ ರೋಹಿನಾ ಇವಳ ಕೊರಳಲ್ಲಿದ್ದ ಒಂದು ತೊಲೆ ಬಂಗಾರದ ಚೈನ ಆರೋಪಿತರು ಕಿತ್ತುಕೊಂಡು ಹೋರುತ್ತಾರೆ ಅಂತಾಶ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಪ್ರಕರಣ :
ಸೇಡಂ ಠಾಣೆ : ಶ್ರೀಮತಿ. ರತ್ನಮ ಗಂಡ ಭೀಮಪ್ಪಾ ಹರಿಜನ ಸಾ|| ಕನ್ನಾಳ  ತಾ|| ಲಿಂಗಸೂರ ಜಿ|| ರಾಯಚೂರ ಇವರ ಗಂಡನಾದ  ಭೀಮಪ್ಪಾ ತಂದೆ ದುರ್ಗಪ್ಪ ಹರಿಜನ್ ಸಾ: ಕನ್ನಾಳ ತಾ: ಲಿಂಗಸೂಗೂರು ಜ: ರಾಯಚೂರ ಇವರು ಬೆಂಗಳೂರದಲ್ಲಿ ಕೆಲಸಕ್ಕೆ ಹೋಗಿದ್ದು ಅಲ್ಲಿಯೇ ಕೆಲಸ ಮಾಡುತ್ತಿದ್ದನು. ಪ್ರತಿ ತಿಂಗಳ ನಮ್ಮೂರ ಪಿಗ್ಮಿ ಕಲೆಷನ್ ಮಾಡುವರಾದ ಅಂಬ್ರೆಷ ಕುಷ್ಠಗೇರ ಇವರ ಖಾತೆಗೆ ಯಾವಾಗದರು 1000 ರಿಂದ 1500/-ರೂಪಾಯಿ ಅವರ ಖಾತೆಗೆ ಜಮಾಯಿಸಿ ನನಗೆ ಕೊಡಲು ತಿಳಿಸಿದ್ದರಿಂದ ಸದರಿ ಅಂಬ್ರೆಷ ಇತನು ಆ ಹಣವನ್ನು ಬ್ಯಾಂಕ್ ನಿಂದ ತೆಗೆದುಕೊಂಡು ಬಂದು ನನಗೆ ಕೊಡುತ್ತಿದ್ದನು. ಆ ಹಣದಿಂದ ಅಲ್ಲದೆ ನಾನು ಹೊಲದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರ ಹಣದಿಂದ ನನ್ನ ಮತ್ತು ನನ್ನ ಎರಡು ಮಕ್ಕಳ ಉಪಜೀವನ ನಡೆಸಿದ್ದು  ದಿನಾಂಕ:  27-04-2015 ರಂದು ಸಾಯಾಂಕಾಲ 4-00 ಗಂಟೆ ಸುಮಾರಿಗೆ ನಮ್ಮ ಮನೆಗೆ ಹಣ ತಂದು ಕೊಡುತಿದ್ದ ಪಿಗ್ಮಿ ಕಲೆಕ್ಷನ ಮಾಡುವ ಅಂಬ್ರೀಷ ಇತನು ಬೇರೆ ಊರಿನಿಂದ ನಮ್ಮ ಊರಿಗೆ ಪೋನ್ ಮಾಡಿ ಸದರಿ ಪೋನ್ ನನಗೆ ಕೊಡುವಂತೆ ತಿಳಿಸಿ ನನಗೆ ತಿಳಿಸಿದ್ದೇನಂದರೆ, ನಿನ್ನ ಯಜಮಾನರಿಗೆ ಏನೋ ತೊಂದರೆ ಆಗಿದೆ ಅಂತ ಪೋನ್ ಬಂದಿದೆ ಅವರಿಗೆ ಪೋನಿನಲ್ಲಿ ಮಾತನ್ನಾಡಿರಿ ಅಂತ ತಿಳಿಸಿದಾಗ ನಾನು ಸದರಿಯವರ ಪೋನಿಂದಲೆ ಕರೆ ಮಾಡಿ ತಿಳಿದುಕೊಳ್ಳಲಾಗಿ ಗೊತ್ತಾಗಿದೇನಂದರೆ ನನ್ನ ಗಂಡನಾದ ಭೀಮಪ್ಪ ತಂದೆ ದುರ್ಗಪ್ಪ ಹರಿಜನ ಸಾ: ಕನ್ನಾಳ ತಾ: ಲಿಂಗಸೂಗೂರು ಜ: ರಾಯಚೂರ ಇವರಿಗೆ ಯಾರೋ ದುಷ್ಕರ್ಮಿಗಳು ಯಾವುದೋ ದ್ವೇಷದಿಂದ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ನಾಮವಾರ ಗ್ರಾಮದ ಕ್ರಾಸ್ ದಿಂದ 1 ಕೀ.ಮಿ ಅಂತರದಲ್ಲಿ ಒಂದು ದೊಡ್ಡ ಗಾತ್ರದ ಕಲ್ಲನ್ನು ತಲೆಯ ಮೇಲೆ ಹಾಕಿ, ತಲೆಗೆ ಭಾರಿ ರಕ್ತ ಗಾಯಪಡಿಸಿ ಕೊಲೆ ಮಾಡಿ ಹೋಗಿರುತ್ತಾರೆ ಅಂತ ತಿಳಿಸಿದ್ದರಿಂದ, ನಾನು ಮತ್ತು ನನ್ನ ಸಂಭಂದಿಕರೊಂದಿಗೆ ಕೂಡಿಕೊಂಡು ಸೇಡಂ ಸರಕಾರಿ ಆಸ್ಪತ್ರೆಗೆ ಇಂದು ದಿನಾಂಕ: 28-04-2015 ರಂದು ಬೆಳಿಗ್ಗೆ 07-30 ಗಂಟೆಗೆ ಬಂದಿದ್ದು, ಬಂದ ನಂತರ ನನ್ನ ಗಂಡ ಶವವನ್ನು ನಾವೇಲ್ಲರೂ ನೋಡಿ ಗುರುತಿಸಿದ್ದು ಅವನಿಗೆ ತಲೆಗೆ ಭಾರಿ ರಕ್ತಗಾಯವಾಗಿದ್ದು ನಿಜವಿರುತ್ತದೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

28 April 2015

Kalaburagi District Reported Crimes

ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ: ದಿನಾಂಕ: 27/4/2015 ರಂದು ವಿನೋದ ತಂದೆ ಜಗನ್ನಾಥ ಹೂಗಾರನು ತನ್ನ ಹೋಂಡಾ ಶೈನ್ ಮೋ.ಸೈ ನಂ ಕೆಎ 32 ಇಸಿ 4539 ನೇದ್ದರ ಮೇಲೆ  ನಾಗೇಶ ತಂದೆ ಸೈಬಣ್ಣ ಪೂಜಾರಿ ಈತನೊಂದಿಗೆ ಹೋಗುತ್ತಿರುವಾಗ ವಿನೋದ ತಂದೆ ಜಗನ್ನಾನು ಮೋ.ಸೈ ಅನ್ನು ಅತೀ ವೇಗ ಮತ್ತು ನಿಷ್ಕಾಳಿಜಿತನದಿಂದ ಚಲಾಯಿಸಿ ಪಟ್ಟಣ ಗ್ರಾಮದಿಂದ ಸ್ವಲ್ಪ ಮುಂದೆ ಇರುವ ಗ್ಯಾರೇಜ್ ಹತ್ತಿರ ರಸ್ತೆ ಮೇಲೆ ನಿಂತಿದ್ದ ಟ್ರಾಕ್ಟರ್ ನಂ ಕೆಎ 32 ಟಿಎ 7393 ನೇದ್ದಕ್ಕೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಮೋ.ಸೈ ನೊಂದಿಗೆ ಕೆಳಗೆ ಬಿದ್ದಾಗ ಹಣೆಗೆ ಮೂಗಿಗೆ, ಭಾಯಿಗೆ ಭಾರಿ ರಕ್ತಗಾಯವಾಗಿ ಮೂಗಿನಿಂದ ಬಾಯಿಯಿಂದ ರಕ್ತಸ್ರಾವವಾಗಿ ವಿನೋದ ಸ್ಥಳದಲ್ಲೆ ಮೃತ ಪಟ್ಟಿದ್ದು ಇರುತ್ತದೆ. ಅಂತಾ ನೀಡಿದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ .
ಸೇಡಂ ಪೊಲೀಸ್ ಠಾಣೆ:ದಿನಾಂಕ: 27-05-2015 ರಂದು ಶ್ರೀಮತಿ ಮನಿಲಾ ಗಂಡ ವೆಂಕಟೇಶ ಸಾ: ಮುಧೋಳ ಇವರು ಠಾಣಾಗೆ ಹಾಜರಾಗಿ ದಿನಾಂಕ: 26-04-15 ರಂದು ಸಾಯಾಂಕಾಲ ನನ್ನ ಗಂಡ ವೆಂಕಟೇಶನು ಮುಧೋಳದಲ್ಲಿರುವ  ತನ್ನ ತಾಯಿ ಹತ್ತಿರ ಹೋಗಿ ಬರುವುದಾಗಿ ಮೋಟಾರು ಸೈಕಲ್ ನಂ ಕೆಎ-32-ಇಇ-5235 ನ್ನೇದ್ದನ್ನು ನಡೆಸಿಕೊಂಡು ಮುಧೋಳಕ್ಕೆ ಹೋಗಿದ್ದು . ರಾತ್ರಿ ಮರಳಿ ಸೇಡಂಕ್ಕೆ ಬರುತ್ತಿರುವಾಗ ಅವರಿಗೆ ಯಾವುದೋ ವಾಹನ ಡಿಕ್ಕಿ ಹೊಡೆದುಕೊಂಡು ಹೋಗಿದ್ದು ಅವರಿಗೆ ಭಾರಿ ರಕ್ತ ಗಾಯ  ತರಚಿದ ಗಾಯವಾಗಿದ್ದು ಅವರನ್ನು ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ತಂದು ನಂತರ ಆಸ್ಪತ್ರೆಯಿಂದ ಹೆಚ್ಚಿನ ಉಪಚಾರ ಕುರಿತು ಗುಲಬರ್ಗಾ ಆಸ್ಪತ್ರೆಗೆ 108 ಅಂಬುಲೆನಸ್ ನಲ್ಲಿ ಹೋಗುತ್ತಿದ್ದಾಗ ಗುಲಬರ್ಗಾದ ಸಮೀಪ ಹೋದಾಗ ನನ್ನ ಗಂಡನು ಮೃತಪಟ್ಟಿರುತ್ತಾನೆ ಅಪಘತಪಡಿಸಿದ ವಾಹನ ಮತ್ತು ಚಾಲಕನನ್ನು ಪತ್ತೆ ಮಾಡಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು  ಅಂತ ಕೊಟ್ಟ ಅರ್ಜಿ ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಜೇವರ್ಗಿ ಪೊಲೀಸ ಠಾಣೆ: ಶ್ರೀ  ವಿಧ್ಯಾಸಾಗರ ತಂದೆ ಸಿದ್ದಯ್ಯ ಹಿರೇಮಠ ಠಾಣೆಗೆ ಹಾಜರಾಗಿ ದಿನಾಂಕ 27.04.2015 ರಂದು ಬೇಳಗ್ಗೆ 05:00 ಗಂಟೆಗೆ ಜೇವರ್ಗಿ ಶಹಾಪುರ ರಾಜ್ಯ ಹೆದ್ದಾರಿಯ ಮೇಲೆ ಚಿಗರಳ್ಳಿ ಕ್ರಾಸ್ ಸಮೀಪ ಹುಂಡೈ ಸೆಂಟ್ರೋ ಕಾರ್ ನಂ ಕೆ.32ಎಮ್3008 ನೇದ್ದರ ಚಾಲಕನು ತನ್ನ ಕಾರ್ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬರುತ್ತಿದ್ದಾಗ ರೋಡಿನಲ್ಲಿ ಅಡ್ಡಲಾಗಿ ಬರುತ್ತಿದ್ದ ನಾಯಿಗೆ ಕಟ್ ಹೋಡೆಯಲು ಹೋಗಿ ರೋಡಿನ ಬಲ ಸೈಡಿನಲ್ಲಿ ಕಾರ್ ಅನ್ನುಪಲ್ಟಿ ಮಾಡಿ ಕಾರ್ಅನ್ನು ಜಖಂ ಗೊಳಿಸಿರುತ್ತಾನೆ ಕಾರಣ ಸದರಿ ಕಾರ್ಚಾಲಕನ ವಿರುಧ್ಧ ಕಾನೂನು ಕ್ರಮ ಕೈಕೊಳ್ಳಬೇಕು  ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕಿರುಕುಳ ಪ್ರಕರಣ
ಮಹಿಳಾ ಪೊಲೀಸ ಠಾಣೆ:ದಿನಾಂಕ 27-04-2015 ರಂದು ಬಸವೇಶ್ವರ ಆಸ್ಪತ್ರೆ ಕಲಬುರಗಿಯಲ್ಲಿ ಉಪಚಾರ ಪಡೆಯುತ್ತಿದ್ದ ವಿಜಯಲಕ್ಷ್ಮೀ ಗಂಡ ರಾಮಚಂದ್ರ ಆಲಗೂಡ ವಯಾ:35 ವರ್ಷ ಜಾ:ಲಿಂಗಾಯತ ಸಾ:ಸಂತೋಷ ಕಾಲೋನಿ ಕಲಬುರಗಿ ಇವರು ತಮ್ಮ ಹೇಲಿಕೆ ಸಲ್ಲಿಸಿದ್ದೇನೆಂದರೆ ಸುಮಾರು 16 ವರ್ಷಗಳ ಹಿಂದೆ ನನ್ನ ಸೋದರ ಮಾವ ರಾಮಚಂದ್ರ ಇತನೊಂದಿಗೆ ಮದುವೆಯಾಗಿದ್ದು. ಒಂದು ಗಂಡು, ಒಂದು ಹೆಣ್ಣು ಮಗಳಿದ್ದು. ನಾನು ದುಡಿದ ಹಣವನ್ನು ತನಗೆ ಕುಡಿಯಲು ಕೊಡು ಅಂತಾ ದಿನಾಲೂ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡುತ್ತಿದ್ದನು. ನಾನು ಹಿಂಸೆಯನ್ನು ತಾಳಲಾರದೇ ನನ್ನ ತವರು ಮನೆಯಾದ ಸಂತೋಷ ಕಾಲೋನಿಯಲ್ಲಿ ಹೋಗಿ ಉಳಿದುಕೊಂಡಿದ್ದು. ದಿನಾಂಕ 27-04-2015 ರಂದು ನಾನು ಮಹಾ ನಗರ ಪಾಲಿಕೆಗೆ ಹೋಗಿದ್ದಾಗ, ನನ್ನ ಗಂಡ ಬಂದವನೇ ಅವಾಚ್ಯ ಶಬ್ದಗಳಿಂದ ಬೈಯ್ದು ನನಗೆ ಹಣ ಕೊಡು ಅಂದರೆ ಕೊಡುತ್ತಿಲ್ಲ ಇವತ್ತು ನಿನಗೆ ಖಲಾಸ ಮಾಡಿ ಬಿಡುತ್ತೇನೆ ಅಂತಾ ಅಂದುತನ್ನ  ಹತ್ತಿರವಿದ್ದ ಚಾಕುವಿನಿಂದ ನನ್ನ ಕುತ್ತಿಗೆಗೆ ಚುಚ್ಚಿದ್ದು  ನನ್ನ ಗಂಡನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದ ಮಹಿಳ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಆಕಸ್ನಿಕ ಗುಂಡು ತಗುಲಿ ವ್ಯಕ್ತಿ ಸಾವು:
ಅಪಜಲಪೂರ ಠಾಣೆ: ದಿನಾಂಕ 27/04/2015 ರಂದು ಶ್ರೀ ಬಸಣ್ಣ ದೇಸಾಯಿ ಸಾ: ಬೋಸಗಾ ತಾ: ಅಫಜಲಪೂರ ಇವರು ಠಾಣೆಗೆ ಹಾಜರಾಗಿ ಇಂದು ದಿನಾಂಕ 27-04-2015 ರಂದು ನಮ್ಮೂರಲ್ಲಿ, ಹೊನ್ನಲಿಂಗೇಶ್ವರ ದೇವರ ಜಾತ್ರೆ ಇದ್ದು, ಜಾತ್ರೆಗೆ ನಾನು ಮತ್ತು ನನ್ನ ಮಗ ಗಿರಿಮಲ್ಲ ಹಾಗು ನಮ್ಮೂರಿನ ರುದ್ರುಗೌಡ ಪಾಟೀಲ, ತುಕಾರಾಮ ಮಾಶಾಳ, ರಾಜು ಬಿರಾದಾರ, ನಿಂಗಪ್ಪಾ ಕಲ್ಲೂರ, ಮಲ್ಲಿಕಾರ್ಜುನ ಸುತಾರ ಹಾಗು ಇನ್ನಿತರರು ಸೇರಿಕೊಂಡು ಹೊನ್ನ ಲಿಂಗೇಶ್ವರ ದೇವರ ಗುಡಿಯ ಮುಂದೆ ಅಗ್ಗಿ ಕುಣಿ ಹತ್ತಿರ ಇದ್ದಾಗ ಮದ್ಯಾಹ್ನ 1;30 ಗಂಟೆ ಸುಮಾರಿಗೆ ನಮ್ಮೂರ ಶಂಕರಗೌಡ ತಂದೆ ಸಾಹೆಬಗೌಡ ಪಾಟೀಲನು ತನ್ನ ಅಣ್ಣನಾದ ಸಿದ್ದನಗೌಡ ತಂದೆ ಸಾಹೇಬಗೌಡ ಪಾಟೀಲನ ಡಿ.ಬಿ.ಬಿ.ಎಲ್ (ಜೋಡಬಾರ) ಬಂದುಕನ್ನು ತೆಗೆದುಕೊಂಡು ಬಂದು ಗುಡಿಯ ಮುಂದೆ ಅಗ್ಗಿ ಕುಣಿಯ ಹತ್ತಿರ ನಿಂತು ಗಾಳಿಯಲ್ಲಿ ಗುಂಡು ಹಾರಿಸುವ ಸಲುವಾಗಿ ತನ್ನ ಕೈಯಲ್ಲಿದ್ದ ಬಂದುಕನ್ನು ಮೇಲೆ ಮಾಡಿ ಗುಂಡು ಹಾರಿಸಿದಾಗ ಗುಂಡು ಹಾರಲಿಲ್ಲಾ, ನಂತರ ಬಂದುಕನ್ನು ಸ್ವಲ್ಪ ಕೆಳಗೆ ಮಾಡಿ ಅದರ ಬೋರನ್ನು ಒತ್ತಿ ಸರಿ ಪಡಿಸಿದಾಗ ಆಕಸ್ಮಿಕವಾಗಿ ಟ್ರಿಗರಗೆ ಕೈತಾಗಿ ಗುಂಡು ಹಾರಿದ್ದು, ಸದರಿ ಗುಂಡು ಪಕ್ಕದಲ್ಲಿ ನಿಂತಿದ್ದ ನನ್ನ ಮಗ ಗಿರಿಮಲ್ಲನ ತಲೆಗೆ ತಾಗಿದ್ದರಿಂದ ಭಾರಿ ರಕ್ತಗಾಯ ಹೊಂದಿ ಅವನು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ಶಂಕರಗೌಡ ತಂದೆ ಸಾಹೇಬಗೌಡ ಪಾಟೀಲನು ಯಾವುದೆ ತರಹದ ಅಧೀಕೃತ ಲೈಸನ್ಸ್ ವಗೈರೆ ಇಲ್ಲದೆ, ಬಂದೂಕು ತರಬೇತಿ ಹೊಂದದೆ ಜನರ ಮದ್ಯ ನಿಂತುಕೊಂಡು ಗುಂಡು ಹಾರಿಸಿದರೆ ಯಾರಿಗಾದರು ತಗಲಿ ಸಾಯಬಹುದು ಅಂತಾ ತಿಳುವಳಿಕೆ ಇದ್ದರು ಕೂಡ, ಅದರಂತೆ ಸಿದ್ದನಗೌಡ ಪಾಟೀಲ ಇವನು ತನ್ನ ಹೆಸರಲ್ಲೆ ಇದ್ದ ಬಂದೂಕನ್ನು ಸುರಕ್ಷಿತವಾಗಿ ಇಟ್ಟುಕೊಳ್ಳದೆ ಅನವಶ್ಯಕವಾಗಿ ತನ್ನ ಸಹೋದರ ಶಂಕರಗೌಡನ ಕೈಯಲ್ಲಿ ಕೊಟ್ಟು, ರೀತಿ ಆಕಸ್ಮಿಕ ಬಂದೂಕಿನ ಟ್ರಿಗರ್ ಒತ್ತಿದ್ದರಿಂದ ಬಂದೂಕಿನಿಂದ ಹಾರಿದ ಗುಂಡು ಪಕ್ಕದಲ್ಲಿ ನಿಂತಿದ್ದ ನನ್ನ ಮಗ ಗಿರಿಮಲ್ಲನ ತಲೆಗೆ ತಗಲಿ ಭಾರಿ ರಕ್ತಗಾಯ ಹೊಂದಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ, ಕಾರಣ ಮಾನ್ಯ ರವರು ಶಂಕರಗೌಡ ಪಾಟೀಲ ಮತ್ತು ಸಿದ್ದನಗೌಡ ಪಾಟೀಲ ಇವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.