ಅಪಘಾತ ಪ್ರಕರಣಗಳು :
ಆಳಂದ ಠಾಣೆ : ದಿನಾಂಕ
25/04/2015 ರಂದು ಶ್ರೀ ಉಮೇಶ ತಂದೆ ನರಸಪ್ಪಾ
ಕುಂಬಾರ ಸಾ; ಕೂಲಕುಂದಾ
ತಾ:ಸೇಡಂ ಜಿ:ಕಲಬುರಗಿ ಮತ್ತು ನನ್ನ ಅಣ್ಣಾ ಶ್ರೀಧರ ಇನ್ನೊಬ್ಬ ಅಣ್ಣ ರವಿಕುಮಾರ ನಮ್ಮ ತಾಯಿ
ಮಲ್ಲಮ್ಮಾ ಹಾಗೂ ನಮ್ಮ ಸಂಬಂಧಿ ಶಂಕರ ಕೂಡಿಕೊಂಡು ಪುನಾಕ್ಕೆ ಹೋಗಿ ಹುಡಗಿ ನೋಡಿಕೊಂಡು ಮರಳಿ ಬರುವಾಗ
ನಮ್ಮ ಅಣ್ಣಾ ಶ್ರೀಧರನು ವಾಹನ ಚಲಾಯಿಸುತ್ತಿದ್ದು ಆಳಂದ-ಉಮರ್ಗಾ ರೋಡಿನ ಮುಖಾಂತರ ಖಜೂರಿ ದಾಟಿ
ಬಂಗರಗಾ ಪಾಟಿ ½ ಕಿ.ಮೀ ಅಂತರದಲ್ಲಿ ಇರುವಾಗ ದಿನಾಂಕ 27/04/2015 ರಂದು
ಬೇಳಗ್ಗಿನ 04:00 ಗಂಟೆಗೆ ನಮ್ಮ ಕಾರಿನ ಎದುರಿನಿಂದ ಯಾವುದೋ ಒಂದು ದೊಡ್ಡ ವಾಹನದ ಲೈಟಿನ ಬೆಳಕು
ನಮ್ಮ ಕಾರಿನ ಮೇಲೆ ಬಿದ್ದಾಗ ಶ್ರೀಧರನು ಆಗ ಕಾರನು ಅತೀವೇಗದಿಂದ ಚಲಾಯಿಸುತ್ತಿದ್ದರಿಂದ ತನ್ನ
ನಿಯಂತ್ರಣ ತಪ್ಪಿ ಒಮ್ಮಲೆ ರೋಡಿನ ಎಡಕ್ಕೆ ಇರುವ ಮರಕ್ಕೆ ಡಿಕ್ಕಿ ಪಡಿಸಿದ ಪರಿಣಾಮವಾಗಿ
ಕಾರಿನಲ್ಲಿದ್ದ ನನಗೆ ಮೂಗಿನ ಮೇಲೆ ಬಲಗೈ ಮೇಲೆ
ಗುಪ್ತಗಾಯವಾಗಿದ್ದು. ರವಿಕುಮಾರನಿಗೆ ತಲೆಗೆ ಭಾರಿ ರಕ್ತಗಾಯ & ಬಾಯಿ, ಮೂಗಿನ ಮೇಲೆ ಗುಪ್ತಗಾಯ, ನನ್ನ ತಾಯಿಯ ಎರಡು ಕೈ
ಮತ್ತು ಕಾಲುಗಳು ಮುರಿದಂತೆ ಆಗಿದ್ದು ಮೈತುಂಬ
ಅಲಲ್ಲಿ ತರಚಿದ ಗಾಯವಾಗಿ ಬೇಹೊಷ ಆಗಿರುತ್ತಾಳೆ. ನಮ್ಮ ಸಂಬಂಧಿ ಶಂಕರನಿಗೆ ಮುಖದ ಮೇಲೆ ಬಲಗೈ
ಹತ್ತಿರ ಭಾರಿ ಗುಪ್ತಗಾಯ ಎರಡು ಕಾಲುಗಳಿಗೆ ಒಳಪೆಟ್ಟಾಗಿ ಕಾಲು ಮುರಿದಂತೆಯಾಗಿದ್ದು ಮತ್ತು ವಾಹನ
ಚಲಾಯಿಸುತ್ತಿದ್ದ ನಮ್ಮ ಅಣ್ಣ ಶ್ರೀಧರನ ಎಡಗಾಲಿಗೆ ಗುಪ್ತಗಾಯ ಎದೆಗೆ ಬೆನ್ನಿಗೆ ಅಲಲ್ಲಿ ತರಚಿದ
ಗಾಯಗಳಾಗಿರುತ್ತವೆ. ದಿನಾಂಕ 29/04/2015 ರಂದು ಬೆಳಿಗ್ಗೆ 5:15 ಗಂಟೆಗೆ ವಾತ್ಲಲ್ಯ ಆಸ್ಪತ್ರೆ ಕಲಬುರಗಿಯಲ್ಲಿ ಉಪಚಾರ ಫಲಕಾರಿಯಾಗದೆ ತನಗಾದ ರಸ್ತೆ ಅಪಘಾತದಲ್ಲಿ ಆದ
ಗಾಯದಿಂದ ಗಾಯಾಳು ಮಲ್ಲಮ್ಮಾ ಗಂಡ ನರಸಪ್ಪಾ ಕುಂಬಾರ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಆಳಂದ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.
ಸಂಚಾರಿ ಠಾಣೆ : ಶ್ರೀ ಬಸಯ್ಯಾ ತಂದೆ ಶರಣಯ್ಯಾ ಸ್ವಾಮಿ ಸಾಃ ಗಂಜ ಕಾಲೂನಿ,
ಗಾಂಧಿ
ನಗರ ಕಲಬುರಗಿ, ರವರು ಕೆಲಸ ಮುಗಿಸಿಕೊಂಡು
ಗಾಂಧಿನಗರದಲ್ಲಿರುವ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ನಗರೇಶ್ವರ ಸ್ಕೂಲ ಎದರುಗಡೆ
ರೋಡಿ ಮೇಲೆ ಮೋಟಾರ ಸೈಕಲ ನಂ. ಕೆ.ಎ 32 ಇ.ಸಿ 0605 ನೇದ್ದರ ಚಾಲಕನು ತನ್ನ ಮೋಟಾರ ಸೈಕಲನ್ನು
ಗಂಜ ಬಸ್ತ ನಿಲ್ದಾಣ ಕಡೆಯಿಂದ ಅತಿವೇಗ ಮತ್ತು ಅಲಕ್ಸತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು
ರೋಡ ದಾಟುತ್ತಿದ್ದ ಫಿರ್ಯಾಧಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿ ಮೋಟಾರ ಸೈಕಲ ಸವರಾನು ಸಹ ಕೆಳಗೆ
ಬಿದ್ದಿದ್ದು. ಸದರ ಅಪಘಾತದಿಂದ ಫಿರ್ಯಾದಿಗೆ ತಲೆಗೆ ಗುಪ್ತಪೆಟ್ಟು ಮತ್ತು ಬಲಕಿವಿಗೆ
ರಕ್ತಗಾಯವಾಗಿ ರಕ್ತ ಸ್ರಾವವಾಗಿದ್ದು ಅಪಘಾತ ಪಡಿಸಿದ ಚಾಲಕನು ತನ್ನ ಮೋಟಾರ ಸೈಕಲ ಅಲ್ಲಿಯೇ
ಬಿಟ್ಟಿ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
No comments:
Post a Comment