POLICE BHAVAN KALABURAGI

POLICE BHAVAN KALABURAGI

28 November 2016

KALABURAGI DISTRICT REPORTED CRIME

ಹಲ್ಲೆ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ :- ದಿನಾಂಕ 27/11/2016 ರಂದು ಶ್ರೀಮತಿ ಫಾಕಿಜಾ ಬೇಗಂ ಗಂಡ ಅಲಿಮುರ್ತುಜಾ ಮುಲ್ಲಾ ಸಾ:ಟಾಕಳಿ ಇವರು ಠಾಣೆಗೆ ಹಾಜರಾಗಿ ತನ್ನ ಗಂಡನ ಹೆಸರಿಗೆ 13.5 ಎಕರೆ ಜಮೀನು ಇದ್ದು ಗಂಡ ಅಲಿಮುರ್ತುಜಾರವರು  ಎರಡು ತಿಂಗಳ ಹಿಂದೆ ಮೃತಪಟ್ಟಿದ್ದು  ನನ್ನ ಗಂಡನ ಅಣ್ಣ ತಮ್ಮಂದಿರಾದ 1)ಮೀಟ್ಟುಸಾಬ ತಂದೆ ಮಹಿಬೂಬಸಾಬ ಮುಲ್ಲಾ 2) ಶಮಿಶೊದ್ದೀನ ತಂದೆ ಮಹಿಬೂಬಸಾಬ ಮುಲ್ಲಾ 3) ಅಬ್ದುಲಗನಿ ತಂದೆ ಮಹಿಬೂಬಸಾಬ ಮುಲ್ಲಾ ಹಾಗು ನಮ್ಮ ಅತ್ತೆಯಾದ 4)ರಾಬನಬೀ ಗಂಡ ಮಹಿಬೂಬಸಾಬ ಮುಲ್ಲಾ  ಇವರು ನನ್ನ ಗಂಡ ಹೆಸರಿನಲಿದ್ದ ಹೊಲದಲ್ಲಿ ತಮಗೊ ಪಾಲು ಬೇಕೆಂದು ನನ್ನ ಸಂಗಡ ಜಗಳ ಮಾಡುತ್ತಾ ಬಂದಿದ್ದು. ದಿನಾಂಕ 25/11/2016 ರಂದು ಬೆಳಿಗ್ಗೆ ನಾನು ಅಫಜಲಪೂರ ತಹಸೀಲ ಕಾರ್ಯಾಲಯ ಕ್ಕೆ ಬಂದು  ನನ್ನ ಗಂಡನ ಹೆಸರಿನಲಿದ್ದ ಹೊಲ ನನ್ನ ಹೆಸರಿಗೆ ಮಾಡಿಕೊಳ್ಳುವ ಕೆಲಸ ಮುಗಿಸಿಕೊಂಡು ಸಾಯಂಕಾಲ ಮರಳಿ  ಊರಿಗೆ ಹೋಗುವ ಸಲುವಾಗಿ ಅಫಜಲಪೂರದ ತಹಸಿಲ ಕಾರ್ಯಾಲಯದ ಮುಂದೆ ಬರುತಿದ್ದಾಗ ನನ್ನ ಗಂಡನ ಅಣ್ಣತಮ್ಮಂದಿರಾದ 1)ಮೀಟ್ಟುಸಾಬ ತಂದೆ ಮಹಿಬೂಬಸಾಬ ಮುಲ್ಲಾ 2) ಶಮಿಶೊದ್ದೀನ ತಂದೆ ಮಹಿಬೂಬಸಾಬ ಮುಲ್ಲಾ 3) ಅಬ್ದುಲಗನಿ ತಂದೆ ಮಹಿಬೂಬಸಾಬ ಮುಲ್ಲಾ ಹಾಗು ನಮ್ಮ ಅತ್ತೆಯಾದ 4)ರಾಬನಬೀ ಗಂಡ ಮಹಿಬೂಬಸಾಬ ಮುಲ್ಲಾ ಇವರು ಎದುರಿಗೆ ಬಂದು ನನಗೆ  ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ  ಹೊಲದಲ್ಲಿ ನಮಗೂ ಪಾಲ ಬರುತ್ತೆ ನಿನಗ ಖಲಾಸ ಮಾಡ್ತಿವಿ ಅನ್ನುತ್ತಾ ಮಿಟ್ಟುಸಾಬ , ಶಮಿಶೋದ್ದೀನ, ಅಬ್ದುಲಗನಿ ಇವರು ನನ್ನ ತೆಲೆ ಕೂದಲು ಹಿಡಿದು ಎಳೆದಾಡಿ ಕೇಳಗೆ ಕೆಡವಿ ತಮ್ಮ ಕಾಲಿನಿಂದ ನನ್ನ ಹೊಟ್ಟೆಗೆ ತಲೆಗೆ ಒದ್ದಿದ್ದು, ನಂತರ ಅಲ್ಲಿಯ ಜನ ಬಿಡಿಸಿರುತ್ತಾರೆ. ಸದರಿಯವರು ನನ್ನ ಹೊಟ್ಟೆಗೆ ತಲೆಗೆ ಒದ್ದಿದ್ದರಿಂದ ಒಳಪೆಟ್ಟಾಗಿದ್ದು.  ನನ್ನ ಗಂಡನ ಅಣ್ಣತಮ್ಮಂದಿರಾದ 1)ಮೀಟ್ಟುಸಾಬ ತಂದೆ ಮಹಿಬೂಬಸಾಬ ಮುಲ್ಲಾ 2) ಶಮಿಶೊದ್ದೀನ ತಂದೆ ಮಹಿಬೂಬಸಾಬ ಮುಲ್ಲಾ 3) ಅಬ್ದುಲಗನಿ ತಂದೆ ಮಹಿಬೂಬಸಾಬ ಮುಲ್ಲಾ ಹಾಗು ನಮ್ಮ ಅತ್ತೆಯಾದ 4)ರಾಬನಬೀ ಗಂಡ ಮಹಿಬೂಬಸಾಬ ಮುಲ್ಲಾ ಇವರು ನನ್ನ ಗಂಡನ ಆಸ್ತಿಯಲ್ಲಿ ಪಾಲ ಬೇಕೆಂದು ನನ್ನೊಂದಿಗೆ ಜಗಳ ತಗೆದು ನನಗೆ ತಡೆದು ನಿಲ್ಲಿಸಿ ಕುದಲು ಹಿಡಿದು ಜಗ್ಗಿ ಕಾಲಿನಿಂದ ಒದ್ದು ಅವಮಾನ ಮಾಡಿ ಜೀವ ಬೇದರಿಕೆ ಹಾಕಿದವರ ಮೇಲೆ ಕಾನೂನಿನ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಕ್ರಮ ಮರಳು ಸಾಗಾಟ ಪ್ರಕರಣ :
ಶಹಾಬಾದ ಪೊಲೀಸ್ ಠಾಣೆ: ದಿನಾಂಕಃ27.11.2016 ರಂದು ಪಿ.ಐ ಶಹಾಬಾದ ರವರು ಠಾಣೆಯ ಸಿಬ್ಬಂದಿ ಮತ್ತು ಪಂಚರೊಂದಿಗೆ ಹೊನಗುಂಟಾ ಗ್ರಾಮದ ಕಾಗಿಣಾ ನದಿ ಹತ್ತಿರ ದಾಳಿ ಮಾಡಿ ಅಕ್ರಮವಾಗಿ ಮರಳು ತುಂಬಿಕೊಂಡು ಸಾಗಾಟ ಮಾಡುತ್ತಿದ್ದ ಟಿಪ್ಪರ  ನಂ ಎಮ್.ಹೆಚ್.-06 ಎಕ್ಯೂ-546,  ಟಿಪ್ಪರ್ ಲಾರಿ ನಂಬರ್ - ಕೆ ಎ 32 ಸಿ 4533 , ಟಿಪ್ಪರ ನಂಬರ ಕೆ.ಎ. 32 ಸಿ 3331 ನೇದ್ದರಲ್ಲಿದ್ದ ಮರಳನ್ನು ಜಪ್ತಿ ಮಾಡಿ ಲಾರಿ  ಚಾಲಕ ಮತ್ತು ಮಾಲೀಕರ ಮೇಲೆ ಶಹಾಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ನೆಲೋಗಿ ಪೊಲೀಸ್ ಠಾಣೆ :    ದಿನಾಂಕ: 27/11/2016 ರಂದು ಶ್ರೀಮತಿ ಗಾಯತ್ರಿ ಗಂ. ಈರಬಸಪ್ಪ ಪತ್ತಾರ ಸಾ:ನೆಲೋಗಿ ಇವರು ಠಾಣೆಗೆ ಹಾಜರಾಗಿ ನ್ನ ಗಂಡ ಈರಬಸಪ್ಪ ಈತನು ಸೋನ್ನ ಆಸ್ಪತ್ರೆಯಲ್ಲಿ ಪಶು ವೈದ್ಯಾಧಿಕಾರಿ ಅಂತ ಕೆಲಸ ಮಾಡುತ್ತಿದ್ದು ಇಂದು ದಿನಾಂಕ: 27/11/2016 ರಂದು ಮುಂಜಾನೆ 10:00 ಗಂಟೆ ಸುಮಾರಿಗೆ ಮನೆಯಿಂದ ಅವರು ಕೆಲಸ ಮಾಡುತ್ತಿದ್ದ ಸೊನ್ನ ಗ್ರಾಮಕ್ಕೆ ಹೋಗಿ ನಂತರ ಜೇವರ್ಗಿ ಆಸ್ಪತ್ರೆಗೆ ಹೋಗಿ ಔಷಧ ತಗೆದುಕೊಂಡು ಜೇವರ್ಗಿ ಕಡೆಯಿಂದ ತನ್ನ ಸೈಕಲ ಮೋಟರ ನಂ: ಕೆಎ 32-ಎಸ್-4196 ಮೇಲೆ ಬರುತ್ತಿದ್ದಾಗ ಹರವಾಳ ಕ್ರಾಸ ಹತ್ತಿರ ಸಿಂದಗಿ ಕಡೆಯಿಂದ ಬರುತ್ತಿದ್ದ ಲಾರಿ ನಂ ಕೆಎ 32- ಸಿ-5260 ನೇದ್ದರ ಚಾಲಕನು ತನ್ನ ಲಾರಿವನ್ನು ಅತೀ ವೇಗ ಹಾಗೂ ನಿಷ್ಕಾಳಜೀತನದಿಂದ ನಡೆಸಿಕೊಂಡು ಬಂದು ನನ್ನ ಗಂಡನ ಸೈಕಲ ಮೋಟರಕ್ಕೆ ಅಪಘಾತ ಪಡಿಸಿದ್ದರಿಂದ ನನ್ನ ಗಂಡನ  ತಲೆಯ ಹಿಂಬಾಗಕ್ಕೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೆ ಮಥಪಟ್ಟಿದ್ದು ಸದರಿ ಲಾರಿ ಚಾಲಕನ ಮೇಲೆ ಕಾನೂನಿನ ಕ್ರಮ ಜರಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:

ಜೇವರ್ಗಿ ಪೊಲೀಸ್ ಠಾಣೆ: ದಿನಾಂಕ 27.11.2016 ರಂದು ಶ್ರೀ ಅಬ್ದುಲ ರಜಾಕ ತಂದೆ ಲಾಲಅಹ್ಮದಿನ್ ಗಾಣಿಗೆರ ಸಾ: ಕಟ್ಟಿಸಂಗಾವಿ ಬೀಮಾ ಬ್ರಡ್ಜ ಠಾಣೆಗೆ ಹಾಜರಾಗಿ. ದಿ: 21.11.16 ರಂದು ಮದ್ಯಾಹ್ನ ನಾನು ಮತ್ತು ನನ್ನ ಮಗ ರಹಿಮಾನ ಇಬ್ಬರು ಹೊಟೆಲದಲ್ಲಿ ಕೆಲಸ ಮಾಡುತ್ತಿರುವಾಗ. ನನ್ನ ಮಗ ರಹಿಮಾನನು ಕಿರಾಣಿ ಸಾಮಾನುಗಳು ತೆಗೆದುಕೊಂಡು ಬರುವ ಕುರಿತು ನಮ್ಮ ಮೋಟಾರ ಸೈಕಲ ನಂ ಕೆಎ-32-ಇ.ಎಮ್-3990 ನೇದ್ದರ ಆತನ ಸ್ನೇಹಿತ ನಾಗರಾಜನ ನೊಂದಿಗೆ ಮೇಲೆ ಜೇವರ್ಗಿಗೆ ಹೋಗುವಾಗ ನಾಗರಾಜನು ಮೋ.ಸೈಕಲ್ ಚಲಾಯಿಸುತ್ತಾ  ಮಹ್ಮದಿಯ ದಾರೂಲಮ ಶಾಲೆ ಹತ್ತಿರ ಮೋ.ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಯತ್ತಾ ಒಮ್ಮಲೇ ಕಟ್ ಹೊಡೆದಾಗ ನನ್ನ ಮಗ ಮೋಟಾರ ಸೈಕಲ್ ಮೇಲಿಂದ ಕೆಳಗೆ ಬಿದ್ದು ಎಡಗಾಲ ಮತ್ತು ಬಲಗಾಲ ಮೊಳಕಾಲ ಕೆಳಗೆ ಭಾರಿ ರಕ್ತಗಾಯವಾಗಿ, ಬಲಗೈ ರಟ್ಟಿ ಹತ್ತಿರ ಭಾರಿ ರಕ್ತಗಾಯವಾಗಿ ಅಲ್ಲಲ್ಲಿ ತರಚಿದ ಗಾಯವಾಗಿದ್ದು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ ಈಗ ನನ್ನ ಮಗನು ಸ್ವಲ್ಪ ಚೇತರಿಸಿಕೊಂಡಿದ್ದು ಈಗ ನಾನು ತಡವಾಗಿ ಇಂದು ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು. ಮೇಲೆ ನಮೂದಿಸಿದ ನಾಗರಾಜನು ಮೊಟಾರ ಸೈಕಲ ನಂ ಕೆಎ-32-ಇ.ಎಮ್-3990 ನೇದ್ದರ ಹಿಂದೆ ನನ್ನ ಮಗನಿಗೆ ಕೂಡಿಸಿಕೊಂಡು ಮೊಟಾರ ಸೈಕಲ ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ಒಮ್ಮಲೇ ಕಟ್ಟು ಹೊಡೆದುದಕ್ಕೆ ಈ ಘಟನೆ ಸಂಬವಿಸಿದ್ದು ಅವನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.