POLICE BHAVAN KALABURAGI

POLICE BHAVAN KALABURAGI

30 June 2012

GULBARGA DIST REPORTED CRIMES


ಹಲ್ಲೆ ಪ್ರಕರಣ:
ದೇವಲ ಗಾಣಗಾಪೂರ ಠಾಣೆ: ಶ್ರೀ ರಾಜು ತಂದೆ ಗೋವಿಂದಪ್ಪ ಜಾ: ಡೋರ ಸಾ|| ಗೊಬ್ಬೂರ [ಬಿ] ರವರು ಮಾನ್ಯ 2 ನೇ ಅಪರ ಸತ್ರ ನ್ಯಾಯಾಲಯದಿಂದ  ಖಾಸಗಿ ದೂರು ಸಂಖ್ಯೆ: 04/2012 ನೇದ್ದರ ಸಾರಾಂಶವೇನೆಂದರೆ, ಶ್ರೀ ರಾಜು ಇವರು ಗೊಬ್ಬೂರ[ಬಿ] ಗ್ರಾಮದ ಸರ್ವೆ ನಂ. 176 ನೇದ್ದರ ವಾರಸುದಾರನಿದ್ದು, ಈ ಬಗ್ಗೆ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆದಿದ್ದು ದಿನಾಂಕ:23-03-2012 ರಂದು ಮುಂಜಾನೆ 11-30 ಗಂಟೆ ಸುಮಾರಿಗೆ ಚಂದಪ್ಫಾ ತಂದೆ ನಾಗಪ್ಪಾ, ಬಸವರಾಜ ತಂದೆ ಶಾಂತಪ್ಪಾ, ಶಿವಾನಂದ ಮಾನಕರ, ಮಹಿಬೂಬ ಅವರಳ್ಳಿ ರವರು ಪ್ರದೀಪ ತಂದೆ ಶಿವಾನಂದ, ಪ್ರಶಾಂತ ತಂದೆ ಶಿವಾನಂದ ಎಲ್ಲರೂ ಸಾ|| ಗೊಬ್ಬುರ (ಬಿ) ರವರು ಹೊಲದಲ್ಲಿ ಹಾಕಿದ ಜೋಪಡಿ ಕಿತ್ತಿ ಹಾಕಿ ನನಗೆ ಮತ್ತು ನನ್ನ ತಮ್ಮನಿಗೂ ಅವಾಚ್ಯ ವಾಗಿ ಬೈದು ಹೊಡೆ ಮಾಡಿ ಗಾಯಗೊಳಿಸಿರುವ ಬಗ್ಗೆ ಮಾನ್ಯ ನ್ಯಾಯಾಲಯದಿಂದ ಇಂದು ದಿನಾಂಕ:30-06-2012 ರಂದು ಬೆಳಿಗ್ಗೆ 10-00 ಗಂಟೆಗೆ ಖಾಸಗಿ ದೂರು ವಸೂಲಾಗಿದ್ದರ ಮೇರೆಗೆ ಠಾಣೆ ಗುನ್ನೆ ನಂಬರ :75/2012 ಕಲಂ.323,324,504,506, ಸಂ. 149 ಐಪಿಸಿ ಮತ್ತು 3 (1)(10) ಎಸ್.ಸಿ/ಎಸ್.ಟಿ ಪಿ.ಎ ಆಕ್ಟ 1989 ನೇದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.                                                                                                                                                                              
ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ಚಂದ್ರಕಾಂತ ತಂದೆ ನಾಗಪ್ಪ ಹಾದಿಮನಿ ವ|| 40 ಸಾ|| ಬೋರಾಬಾಯಿ ನಗರ ಬ್ರಹ್ಮಪೂರ ಗುಲಬರ್ಗಾ ರವರು ನನ್ನ ಚಿಕ್ಕಪ್ಪನ ಮಗನಾದ ಅಶೋಕನ ಮದುವೆ ಮಾಡಿ ಮದು ಮಕ್ಕಳ ಮೆರವಣಿಗೆ ಹಮ್ಮಿಕೊಂಡಿರುವಾಗ ರಾತ್ರಿ 11 ಗಂಟೆಯ ಸುಮಾರಿಗೆ ರೋಡಿನ ಮೇಲೆ ಹೋಗಿ ಬರುವ ವಾಹನಗಳಿಗೆ ಹಾಗು ಸಾರ್ವಜನಿಕರಿಗೆ ಅಡಚಣೆಯಾಗುತ್ತಿದೆ ಹೀಗೆ ಮಾಡುವದು ಸರಿಯಲ್ಲ ಅಂತ ನಾನು ಬುದ್ಧಿಮಾತು ಹೇಳಿದ್ದು, ಅದಕ್ಕೆ ಅನಿಲ ತಂದೆ ರಾಣಪ್ಪ ಈತನು ತನ್ನ ಜೊತೆಯಲ್ಲಿ ಇನ್ನೂ ಮೂರು ಜನರೊಂದಿಗೆ ಬಂದವನೇ ನನಗೆ  ಅವಾಚ್ಯ ಶಬ್ದಗಳಿಂದ ಬೈಯುತ್ತಾ ತನ್ನ ಕೈಯಲ್ಲಿದ್ದ ತಲವಾರದಿಂದ ಹೊಡೆಯಲು ಬಂದಾಗ,ನಾನು ಕೈಮುಂದೆ ಮಾಡಲು ಆ ಏಟು ಬಲಗೈ ಹಸ್ತದ ಮೇಲೆ ಬಿದ್ದು ಭಾರಿ ರಕ್ತಗಾಯವಾಗಿರುತ್ತದೆ. ಇನ್ನುಳಿದ ಮೂರು ಜನರು ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 46/2012 ಕಲಂ 341, 323, 324, 504 ಸಂಗಡ 34 ಐಪಿಸಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIME

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ರಹೇಮಾನ ಪಟೇಲ ತಂದೆ ಬಾಬಾ  ಸಾ:ಅಂಕಲಗಾ ತಾ||ಜೇವರ್ಗಿ ಹಾ|\ವ|| ಸನಾ ಸ್ಕೂಲ ಹತ್ತಿರ ಎಕ್ಬಾಲ ಕಾಲೋನಿ   ಎಮ್.ಎಸ್.ಕೆ.ಮಿಲ್ ಗುಲಬರ್ಗಾರವರು ನಾನು ಮತ್ತು ನನ್ನ ಹೆಂಡತಿಯ ತಮ್ಮನಾದ ಮಹಿಬೂಬ ಪಟೇಲ್ ಇತನು ದಿನಾಂಕ: 29-06-2012 ರಂದು ಇಬ್ಬರು ಕೂಡಿಕೊಂಡು ಉದನೂರ ಗ್ರಾಮದಲ್ಲಿ ಕೂಲಿ ಕೆಲಸಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಬಂದು ಉದನೂರ ಕ್ರಾಸ್ ಹೊಸ್ ಜೇವರ್ಗಿ ರೋಡ್ ಮಾಯಾ ವೈನ ಶಾಪ ಸಮೀಪ ಚಹಾ ಕುಡಿದು, ನಾನು ನನ್ನ ಮನೆಗೆ ಹೋಗಲು ಅಟೋರಿಕ್ಷಾ ಕಾಯುತ್ತಾ ನಿಂತಿದ್ದೆನು. ಮಹಿಬೂಬ ಪಟೇಲ ಇತನು ಸಹ ತನ್ನ ಮನೆಗೆ ಹೋಗುವ ಸಲುವಾಗಿ ಮಾಯಾ ವೈನ ಶಾಪ ಸಮೀಪದ ರೋಡ್ ದಾಟುತ್ತಿರುವಾಗ ರಾಷ್ಟ್ರಪತಿ ಸರ್ಕಲ್ ಕಡೆಯಿಂದ ಯಾವದೋ ಒಂದು ಅಟೋರಿಕ್ಷಾ ಚಾಲಕನು ತನ್ನ ಅಟೋವನ್ನು  ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು  ಬಂದು ಮಹಿಬೂಬ ಪಟೇಲ ಇತನಿಗೆ ಡಿಕ್ಕಿ ಪಡಿಸಿ ಅಟೋ ಸಮೇತ ಓಡಿ ಹೋದನು. ಮಹಿಬೂಬ ಪಟೇಲ ಇತನಿಗೆ ನೋಡಲಾಗಿ ಎಡಗಡೆ ಮೂಗಿಗೆ, ಮತ್ತು ಮೂಗಿನ ಪಕ್ಕದಲ್ಲಿ ಭಾರಿ ರಕ್ತಗಾಯ ಎಡಗೈ ಮುಂಗೈಗೆ ಎಡಗಾಲು ಹಿಮ್ಮಡಿ ಹತ್ತಿರ ತರಚಿದ ಗಾಯಹೊಂದಿದ್ದನು. ಇತನನ್ನು ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ 108 ಅಂಬುಲೆನ್ಸ ವಾಹನದಲ್ಲಿ ಕರೆದುಕೊಂಡು ಬರುತ್ತಿರುವಾಗ ದಾರಿ ಮಧ್ಯದಲ್ಲಿ ಮೃತ ಪಟ್ಟಿರುತ್ತಾನೆ . ಡಿಕ್ಕಿ ಪಡಿಸಿದ ಅಟೋ ಚಾಲಕನ ವಿರುದ್ದು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 69/2012 ಕಲಂ 279, 304 (ಎ) ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.